Recent Posts

ಹಚ್ಚೇವು ಕನ್ನಡದ ದೀಪ - ೭ನೇ ತರಗತಿ ಸಿರಿ ಕನ್ನಡ ಪುಸ್ತಕದ ಪ್ರಶ್ನೋತ್ತರಗಳು


 ಹಚ್ಚೇವು ಕನ್ನಡದ ದೀಪ

ಅ).ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ .

1 . ಕನ್ನಡದ ಕಂಪನ್ನು ಸೂಸುವಲ್ಲಿ ಏನನ್ನು ಚಾಚುತ್ತೇವೆ ?
ಉತ್ತರ : ಕನ್ನಡದ ಕಂಪನ್ನು ಸೂಸುವಲ್ಲಿ ನಮ್ಮ ದೇಹವನ್ನು ಚಾಚುತ್ತೇವೆ .

2 . ಕಲ್ಪನೆಯ ಕಣ್ಣು ಹರಿವ ತನಕ ಯಾವ ದೀಪಗಳನ್ನು ಹಚ್ಚುತ್ತೇವೆ ?
ಉತ್ತರ : ಕಲ್ಪನೆಯ ಕಣ್ಣು ಹರಿವ ತನಕ ಸಾಲು  ದೀಪಗಳನ್ನು ಹಚ್ಚುತ್ತೇವೆ .
 
3 . ನಮ್ಮವರು ಗಳಿಸಿದ ಹೆಸರುಳಿಸಲು ಎಲ್ಲರೂ ಏನು ಮಾಡಬೇಕು?
ಉತ್ತರ : ನಮ್ಮವರು ಗಳಿಸಿದ ಹೆಸರುಳಿಸಲು ಕನ್ನಡಿಗರೆಲ್ಲರೂ ಒಂದುಗೂಡಿ ಕನ್ನಡ ಮಾತೆಯನ್ನು ಪೂಜಿಸಬೇಕು .
 
4 . ನಮ್ಮುಸಿರು ತೀಡುವ ನಾಡಿನಲ್ಲಿ ಯಾವ ಗೀತೆ ಹಾಡುತ್ತೇವೆ ?
ಉತ್ತರ :ನಮ್ಮುಸಿರು ತೀಡುವ ನಾಡಿನಲ್ಲಿ ಮಂಗಳದ ಗೀತೆಯನ್ನು ಹಾಡುತ್ತೇವೆ .
 
5 . ಕರುಳೆಂಬ ಕುಡಿಗೆ ಏನನ್ನು ಮುಡಿಸುತ್ತೇವೆ ?
ಉತ್ತರ : ಕರುಳೆಂಬ ಕುಡಿಗೆ ಮಿಂಚನ್ನು ಮುಡಿಸುತ್ತೇವೆ .
 
 ಆ . ಕೆಳಗಿನ ಪ್ರಶ್ನೆಗಳಿಗೆ ಎರಡು ಅಥವಾ ಮೂರ ವಾಕ್ಯದಲ್ಲಿ ಉತ್ತರಿಸಿರಿ .

1 . ಕನ್ನಡಿಗರು ಯಾವ ದೀಪವನ್ನು ಹಚ್ಚುತ್ತಾರೆ .
ಉತ್ತರ : ಕನ್ನಡಿಗರು ಕನ್ನಡದ ಶ್ರೀಮಂತಿಕೆಯನ್ನು ತೋರುವ ಒಲವನ್ನು ಬೆಳಗುವ ದೀಪವನ್ನು ಹಚ್ಚುತ್ತಾರೆ .
 
2 . ಮರೆವನ್ನು ಮರೆತು , ಒಲವನ್ನು ಎರೆದು , ಹೇಗೆ ಕನ್ನಡದ ದೀಪ ಹಚ್ಚುತ್ತಾರೆ ?
ಉತ್ತರ : ಕನ್ನಡಿಗರೆಲ್ಲರೂ ಈ ನಾಡಿಗಾಗಿ ಶ್ರಮಿಸುತ್ತ ಕಹಿಯನ್ನು ಮರೆತು ವಿಶಾಲವಾದ ಮನಸ್ಸಿನಿಂದ ನಾಡಿಗಾಗಿ ಒಲವನ್ನು ಎರೆದು ಕನ್ನಡದ ದೀಪವನ್ನು ಹಚ್ಚಿ ಅದರ ಕಾಂತಿಯನ್ನು ಎಲ್ಲೆಡೆ ಬೆಳಗುತ್ತಾರೆ .

3 . ಕನ್ನಡ ಮಾತೆಯನ್ನು ಹೇಗೆ ಆದರಿಸುತ್ತಾರೆ ?
ಉತ್ತರ : ಕನ್ನಡಿಗರು ಗಳಿಸಿದ ಹೆಸರನ್ನು ಉಳಿಸಲು ಕನ್ನಡಿಗರೆಲ್ಲರೂ ನಾವೆಲ್ಲರೂ ಒಂದುಗೂಡಿ ಕನ್ನಡ ವಾತೆಯನ್ನು ಪೂಜಿಸುತ್ತ ಕೆಟ್ಟದ್ದನ್ನು ನಾಶಮಾಡುವ ಸಂಕಲ್ಪದಿಂದ ಮಂಗಳಗೀತೆಯನ್ನು ಹಾಡುತ್ತಾ ಕನ್ನಡದ ಕಾಂತಿಯನ್ನು ಬೆಳಗುವುದರ ಮೂಲಕ ಕನ್ನಡ ಮಾತೆಯನ್ನು ಆದರಿಸುತ್ತಾರೆ

ಇ . ಕೆಳಗಿನ ಸಾಲುಗಳಲ್ಲಿ ಖಾಲಿ ಬಿಟ್ಟಿರುವ ಸ್ಥಳಗಳನ್ನು ಸೂಕ್ತ ಪದಗಳಿಂದ ತುಂಬಿರಿ .
1.ಮೈಮರೆವೆಯಿಂದ ಕೂಡಿರುವ_____
2.ಹಚ್ಚಿರುವ ದೀಪದಲಿ ತಾಯರೂಪ _____
3.ನಮ್ಮೆದೆಯ ಮಿಡಿಯು ಮಾಡೇವು . ______
4.ಕರುಳೆಂಬ ಕುಡಿಗೆ ಮಿಂಚನೇ _________ .

ಉತ್ತರಗಳು
1.ಕೊಲೆಯ ಕೊಚ್ಚೇವು
2.ಅಚ್ಚಳಿಯದಂತೆ ತೋರೇವು
3.ಪೂಜೆ ಮಾಡೆವು
4.ಹಚ್ಚೇವು ಕನ್ನಡ ದೀಪ

ಈ . ‘ ಹಚ್ಚೇವು  ‘ ಎಂಬ ಪದಕ್ಕೆ ಸರಿಹೊಂದುವ , ಪದ್ಯದಲ್ಲಿ ಇರುವ ಪ್ರಾಸಪದಗಳನ್ನು ಬರೆಯಿರಿ .
ಹಚ್ಚೇವು
ಕೊಚ್ಚೇವು =ಚಾಚೇವು=ಕಚ್ಚೇವು , ಒಂದುಗೂಡೇವು ,
ಮರೆತೇವು =ತೆರೆದೇವು =ಎರದೇವು
ಬೀರೇವು=ತೋರೇವು=ತೂರೇವು
ಮಾಡೇವು =ಹಾಡೇವು =ತೊರೆದೇವು
ಕಡೆದೇವು=ಪಡೆದೇವು=ಕೊಡೇವು

ಉ . ‘ ಬೀರೆವು ‘ ಎಂಬ ಪದದಂತೆ ಪದಮಧ್ಯದಲ್ಲಿ ‘ ರ ‘ ಅಕ್ಷರ ಬರುವ ಪದಗಳನ್ನು ಪಟ್ಟಿ ಮಾಡಿ. ತೊರೆದೇವು ತೂರೇವು ತೋರೇವು ಬೀರೇವು
ಬೀರೇವು -ತೂರೇವು -ತೊರೇವು

ಊ . ಕೈಗೆ ಕಾಲ್ ಮೂಳೆಯ ಜಡಿಯ
ಶಿಲುಬೆಗಿಕ್ಕಿ ಸಾಯೆ ಬಡಿಯ
ಅವರ ತಪ್ಪ ಕ್ಷಮಿಸುಯೆಂದು
 ಮೊರೆಯನಿಟ್ಟ ತಂದೆಗೆಂದು
ಕ್ರಿಸ್ತ ಸತ್ತು ಬದುಕಿದ
ಯುಗವೊಂದನು ತೊಡಗಿದ- ಕಯ್ಯಾರ ಕಿಞ್ಞಣ್ಣ ರೈ ( ಶತಮಾನದ ಗಾನ )

ಈ ಪದ್ಯದಲ್ಲಿ ಬರುವ ಪ್ರಾಸ ಪದಗಳನ್ನು ಪಟ್ಟಿ ಮಾಡಿ :
ಜಡಿಯೆ = ಬಡಿಯ
ಕ್ಷಮಿಸುಯೆಂದು = ತಂದೆಗೆಂದು
ಬದುಕಿದ = ತೊಡಗಿದ .
ಕೈಗೆ =ಕಾಲ್ಗೆ
 ಭಾಷಾಭ್ಯಾಸ

ಅ . ಕೆಳಗೆ ನೀಡಿರುವ ಪದ್ಯದ ಪ್ರಾಸಪದಗಳನ್ನು ಜೋಡಿಸಿ ಬರೆಯಿರಿ .
ದೀಪ  ಮರುಳು   ತೀಡು  ಹಾಡು
ಮನವ   ಹಚ್ಚು  ರೂಪ  ಕರುಳು ಪಡೆ
ಮನೆ ,ಇಡೀ ಗೂಡು ನಾಡು ಮರೆತೆವು
ನಾಡು ಗಡಿನಾಡು ಸಿಡಿ ಪ್ರೀತಿ ನೀತಿ
ಮನ ಕುಡಿ ಇರುಳು ಸೋಂಪು ನಡುನಡು
ಅಚ್ಚು ತೊಡೆ  ಮುಡಿ ಹಿಡಿ ಮರೆವು
ಮಿಡಿ ತೊರೆದೇವು ಕೆಚ್ಚು ಗಳಿಸು  ಕಂಪು

• ಗೂಡು = ನಾಡು
•ಪ್ರೀತಿ = ನೀತಿ ,ಭೀತಿ = ನೀತಿ
• ಮನ = ಮನೆ
•ತೊಡೆ = ಪಡೆ
•ಮುಡಿ = ಮಿಡಿ
• ಹಿಡಿ = ಸಿಡಿ
•ನಡುಗಾಡು = ಗಡಿನಾಡು
•ಮಿಡಿ = ಕುಡಿ
•ನೀಡು = ಹಾಡು
•ಕರುಳು = ಇರುಳು
•ಮರೆತೇವು = ತೊರೆದೇವು
•ಮನವ = ಮರೆವ
•ಕಂಪು = ಸೊಂಪು
•ಕೆಚ್ಚು = ಅಚ್ಚು
•ನಾಡು – ಹಾಡು

ಆ . ಕೆಳಗೆ ನೀಡಿರುವ ಪದಗಳ ಅರ್ಥವ್ಯತ್ಯಾಸವನ್ನು ಗಮನಿಸಿ .
•ಹಚ್ಚು – ಹಚೇವು – ಹಚ್ಚುವುದಿಲ್ಲ ,
   ಹಚೇವು – ಹಚ್ಚುತೇವೆ .
•ಬೀರು – ಬೀರೇವು – ಬೀರುವುದಿಲ್ಲ
   ಬೀರೇವು –  ಬೀರುತೇವೆ
•ಮಾಡು – ಮಾಡೆವು – ಮಾಡುವುದಿಲ್ಲ .
 ಮಾಡೆವು- ಮಾಡುತ್ತೇವೆ

ಇ . ಇದೇ ರೀತಿಯಲ್ಲಿ ನೋಡು , ಹಾಡು , ನಿಲ್ಲು , ಮೆಚ್ಚು ಮೊದಲಾದ ಪದಗಳನ್ನು ಕೆಳಗಿನ ವಾಕ್ಯದಲ್ಲಿ ಬಳಸಿ ವಾಕ್ಯ ಪೂರ್ಣಗೊಳಿಸಿ .
•ನಾವು ಕನ್ನಡ ಚಲನ ಚಿತ್ರಗಳನ್ನು_________
•ನಾವು ಕನ್ನಡ ಗೀತೆಗಳನ್ನು ಹಾಡುತ್ತೇವೆ______
•ನಿಮಗಾಗಿ ನಾಳೆ ನಾವು ಕಾಯುತ್ತಾ
•ನಿಮ್ಮೆಲ್ಲ ಚಿತ್ರಗಳನ್ನು

ಉತ್ತರ :
•ನೋಡುತ್ತೇವೆ .
•ಹಾಡೇವು  
•ನಿಲ್ಲುತ್ತೇವೆ .  
•ಮೆಚ್ಚೇವು

ಈ . ಒಂದೇ ಪದವನನ್ನು ನಾಮಪದ ಮತ್ತು ಕ್ರಿಯಾಪದ ಅರ್ಥದಲ್ಲಿ ಮಾದರಿಯಂತೆ ಬಳಸಿ ವಾಕ್ಯ ರಚಿಸಿ .
ಮಾದರಿ : ಕಳೆ : ನಮ್ಮ ಶಾಲಾ ಕೈತೋಟದಲ್ಲಿ ತುಂಬಾ ಕಳೆ ಬೆಳೆದಿದೆ . ರಾಜು ಬೆಲೆ ಬಾಳುವ ಉಂಗುರವನ್ನು ಕಳೆದನು .
1.ಹಚ್ಚು : ರಾಜು ತರಕಾರಿ ಹಚ್ಚಿದ ನಂತರ ದೀಪ ಹಚ್ಚಿದನು
2.ಕುಡಿ  ನೀನು ನನ್ನ ಕರುಳಿನ ಕುಡಿ , ಬೇಗ ಹಾಲು ಕುಡಿ .
3.ಪಡೆ : ಅಶೋಕನು ಶತ್ರುಪಡೆಯೊಂದಿಗೆ ಕಾದಾಡಿ ಜಯವನ್ನು ಪಡೆದನು .

ಉ . ಮೊದಲೆರಡು ಪದಗಳ ಸಂಬಂಧ ಗ್ರಹಿಸಿ ಖಾಲಿ ಜಾಗದಲ್ಲಿ ಸೂಕ್ತ ಪದ ಭರ್ತಿಮಾಡಿ .
1.ಆಂಧ್ರಪ್ರದೇಶ : ಹೈದರಾಬಾದ್ : : ಕೇರಳ :
2.ಶತ್ರು : ಮಿತ್ರ : : ರಾತ್ರಿ :  
3.ಮಾತಾ : ತಾಯಿ : : ಪಿತಾ :
4.ದಾವಣಗೆರೆ : ನಡುನಾಡು : : ಬೆಳಗಾವಿ :
 
ಉತ್ತರ :
•ತಿರುವನಂತಪುರ
•ಹಗಲು
•ತಂದೆ
•ಗಡಿನಾಡು
You Might Like

Post a Comment

0 Comments