ಪ್ರ.ಸಂ 1. ಖಾಲಿ ಬಿಟ್ಟಿರುವ ಸ್ಥಳಗಳನ್ನು ಸೂಕ್ತ ಪದಗಳಿಂದ ತುಂಬಿರಿ.
1. ನಿಂತ ನೀರಿನ ಮೇಲೆ ಸೀಮೆ ಎಣ್ಣೆಯನ್ನು ಅಥವಾ ಕ್ರಿಮಿನಾಶಕವನ್ನು ಹಾಕುವುದರಿಂದ ಸೊಳ್ಳೆಗಳ ಬೆಳವಣಿಗೆಯನ್ನು ತಪ್ಪಿಸಬಹುದು.
2. ಬಾವಿಗಳಲ್ಲಿ ತೆರೆದ ಬಾವಿ ಮತ್ತು ಕೊಳವೆ ಬಾವಿ ಎಂಬ ಎರಡು ವಿಧಗಳಿವೆ
3. ಬಹುಪಾಲು ಕೆರೆಗಳು ಮಳೆಯನ್ನು ಅವಲಂಬಿಸಿವೆ.
4. ಶುದ್ದವಾದ ನೀರು ಸಮುದಾಯಕ್ಕೆ ಬಹಳ ಅಗತ್ಯ..
ಪ್ರ.ಸಂ 2. ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿರಿ.
1. ತ್ಯಾಜ್ಯ ವಸ್ತುಗಳನ್ನು ಯಾರು ಉತ್ಪತ್ತಿ ಮಾಡುತ್ತಾರೆ ?
ಉತ್ತರ :- ಪ್ರತಿ ಸಮುದಾಯದ ಪ್ರತಿ ಮನೆ ಅಥವಾ ಕಟ್ಟಡದಲ್ಲಿ ವಾಸಿಸುವವರು ವಿವಿಧ ರೀತಿಯ ತ್ಯಾಜ್ಯ ವಸ್ತುಗಳನ್ನು ಉತ್ಪತ್ತಿ ಮಾಡುತ್ತಾರೆ.
2. ತ್ಯಾಜ್ಯ ವಸ್ತುಗಳಲ್ಲಿರುವ ಗುಂಪುಗಳು ಯಾವುವು ತಿಳಿಸಿ.
ಉತ್ತರ :- ತ್ಯಾಜ್ಯ ವಸ್ತುಗಳಲ್ಲಿರುವ ಗುಂಪುಗಳು ;-
1. ದ್ರವ ತ್ಯಾಜ್ಯ ವಸ್ತುಗಳು
2. ಘನ ತ್ಯಾಜ್ಯ ವಸ್ತುಗಳು
3. ದ್ರವ ತ್ಯಾಜ್ಯ ಪದಾರ್ಥಗಳ ವಿಲೇವಾರಿ ಹೇಗೆ ಮಾಡಬೇಕು ?
ಉತ್ತರ :- ಮನೆಯ ಸುತ್ತಮುತ್ತ, ಬೀದಿಗಳಲ್ಲಿ, ಚರಂಡಿಯಲ್ಲಿ, ಬೋರ್ವೆಲ್, ಬಾವಿ ಇವುಗಳ ಸುತ್ತ ನಿಂತ ನೀರು ಸೊಳ್ಳೆಗಳು ಬೆಳವಣಿಗೆಯನ್ನು ಹೊಂದಲು ಅವಕಾಶ ಮಾಡಿಕೊಡುತ್ತವೆ. ಆದುದರಿಂದ ನೀರು ನಿಲ್ಲದಂತೆ ಸೂಕ್ತ ರೀತಿಯಲ್ಲಿ ದ್ರವ ಪದಾರ್ಥಗಳನ್ನು ವಿಲೇವಾರಿ ಮಾಡಬೇಕು. ನಿಂತ ನೀರಿನ ಮೇಲೆ ಸೀಮೆಎಣ್ಣೆಯನ್ನು ಅಥವಾ ಕ್ರಿಮಿನಾಶಕವನ್ನು ಹಾಕುವುದರಿಂದ ಸೊಳ್ಳೆಗಳ ಬೆಳವಣಿಗೆಯನ್ನು ತಪ್ಪಿಸಬಹುದು. ಮನೆಯಲ್ಲಿನ ದ್ರವ ತ್ಯಾಜ್ಯ ವಸ್ತುಗಳು ಒಳ ಚರಂಡಿಗೆ ಹರಿದು ಹೋಗುವಂತೆ ವ್ಯವಸ್ಥೆ ಮಾಡುವುದು.
4.ದ್ರವ ತ್ಯಾಜ್ಯ ಪದಾರ್ಥಗಳಾವುವು ?
ಉತ್ತರ :- ಹರಿಯುವ ಕೊಚ್ಚೆ ನೀರು, ಡಿಟರ್ಜಂಟ್ಗಳು, ವಾಣಿಜ್ಯ ಮತ್ತು ವಾಸದ ಗೃಹ ಮೂಲಗಳಿಂದ ಅನೇಕ ವಿಧದ ಜೈವಿಕ ಮತ್ತುಅಜೈವಿಕ ಮಾಲಿನ್ಯಕಾರಕಗಳು ಮತ್ತು ನಗರ ವಲಯಗಳಿಂದ ಹರಿಯುವ ಕಲುಷಿತವಾದ ನೀರು ಇತ್ಯಾದಿ.
5. ಘನ ತ್ಯಾಜ್ಯ ಪದಾರ್ಥಗಳಾವುವು ?
ಉತ್ತರ :- ಘನ ತ್ಯಾಜ್ಯ ಪದಾರ್ಥಗಳು :- ಶೀಶೆಗಳು, ಸಸ್ಯ ಮೂಲದ ವಸ್ತು (ಸಿಪ್ಪೆ,ಸೊಪ್ಪು,ಕಾಂಡ), ಡಬ್ಬಗಳು,ಕಾಗದ, ಚಿಂದಿ ಮತ್ತು ಇತರೆ ಉರಿಯುವ ವಸ್ತುಗಳು.
6. ಘನ ತ್ಯಾಜ್ಯ ಪದಾರ್ಥಗಳ ವಲೇವಾರಿ ಹೇಗೆ ಮಾಡಬೇಕು ?
ಉತ್ತರ :- ಘನ ತ್ಯಾಜ್ಯ ಪದಾರ್ಥಗಳ ವಲೇವಾರಿ ಮಾಡುವ ವಿಧಾನ :-
7. ಒಳಚರಂಡಿಯ ನೀರು ಏನನ್ನು ಒಳಗೊಂಡಿದೆ ?
ಉತ್ತರ :-ಹರಿಯುವ ಕೊಚ್ಚೆ ನೀರು, ಡಿಟರ್ಜಂಟ್ಗಳು, ವಾಣಿಜ್ಯ ಮತ್ತು ವಾಸದ ಗೃಹ ಮೂಲಗಳಿಂದ ಅನೇಕ ವಿಧದ ಜೈವಿಕ ಮತ್ತು ಅಜೈವಿಕ ಮಾಲಿನ್ಯಕಾರಕಗಳುಇತ್ಯಾದಿಗಳನ್ನು ಒಳಚರಂಡಿಯ ನೀರು ಒಳಗೊಂಡಿರುತ್ತದೆ.
8. ಬಾವಿಯ ಸ್ವಚ್ಛತೆಯ ಬಗ್ಗೆ ತಿಳಿಸಿ.
ಉತ್ತರ :- ಬಾವಿಯ ಸ್ವಚ್ಛತೆ :-
1. ಬಾವಿಗಳಲ್ಲಿ ತೆರೆದ ಬಾವಿ ಮತ್ತು ಕೊಳವೆ ಬಾವಿ ಎಂದು ಎರಡು ವಿಧಗಳಿವೆ.
2. ಬಾವಿಗಳ ಸುತ್ತಮುತ್ತಲೂ ಕೈಗಾರಿಕೆಗಳು ಇಲ್ಲದಿರುವುದುಸೂಕ್ತ.
3. ಬಾವಿಯನ್ನು ಉಪಯೋಗಿಸದ ವೇಳೆಯಲ್ಲಿ ಅದರ ಬಾಯಿಯನ್ನು ಮರದ/ ಲೋಹದ ಹಲಗೆಯಿಂದ
ಮುಚ್ಚಿಡುವುದರಿಂದ ಕಸಕಡ್ಡಿ, ಧೂಳು, ಕೀಟಗಳು ನೀರಿನೊಳಗೆ ಬೀಳುವುದಿಲ್ಲ.
4. ಬಾವಿಯ ಸುತ್ತ ಎತ್ತರದ ಗೋಡೆ ಇರಬೇಕು.
5. ಸೀಮೆಂಟಿನಿಂದ ಸ್ವಲ್ಪ ಎತ್ತರದ ಮನೆ ನಿರ್ಮಿಸಿ, ಬಕೆಟ್ಟನ್ನು ಇಡಲು ಸ್ವಚ್ಛ ಜಾಗ ಮಾಡುವುದರಿಂದ ನೀರು ಮಲೀನವಾಗುವುದು ತಪ್ಪುತ್ತದೆ.
6. ಹೊರ ಚೆಲ್ಲಿದ ನೀರು ಹರಿದು ಹೋಗಿ ಬಾವಿಯ ಸುತ್ತಮುತ್ತಲಿನ ಜಾಗ ಒಣಗಿದಂತಿರಲು ವ್ಯವಸ್ಥೆ ಮಾಡುವುದರಿಂದ ಬಾವಿಯ ಸುತ್ತ ನೀರು ನಿಂತು ಅಲ್ಲಿ ಸೊಳ್ಳೆಗಳು ವೃದ್ದಿಯಾಗುವುದಿಲ್ಲ ಇತ್ಯಾದಿ.
9. ಕೆರೆಗಳ ಸ್ವಚ್ಛತೆಯ ಬಗ್ಗೆ ತಿಳಿಸಿ.
ಉತ್ತರ :- ಕೆರೆಗಳ ಸ್ವಚ್ಛತೆ :-
1. ಕೆರೆಯ ಸಂರಕ್ಷಣೆ, ಕೆರೆಗಳಲ್ಲಿ ಹೂಳು ತುಂಬಿಕೊಳ್ಳುವುದರಿಂದ ನೀರಿನ ಸಂಗ್ರಹಣಾ ಸಾಮಥ್ರ್ಯ ಕಡಿಮೆಯಾಗುತ್ತದೆ. ಆದ್ದರಿಂದ ಕೆರೆಗಳಲ್ಲಿ ಹೂಳೆತ್ತುವುದು ಅವಶ್ಯಕ.
2. ಬಹುಪಾಲು ಕೆರೆಗಳು ಮಳೆಯನ್ನು ಅವಲಂಬಿಸಿರುತ್ತವೆ. ಬೇಸಿಗೆಯಲ್ಲಿ ಬತ್ತಿ ಹೋಗುತ್ತವೆ.
3. ಕೆರೆಗಳಲ್ಲಿ ದನಕರುಗಳಿಗೆ ಸ್ನಾನ ಮಾಡಿಸಬಾರದು.
4. ಪಾತ್ರೆ ಮತ್ತು ಬಟ್ಟೆಗಳನ್ನು ತೊಳೆಯಬಾರದು.
5. ಕೆರೆಯ ಸುತ್ತಮುತ್ತ ಸ್ವಚ್ಛವಾಗಿರುವಂತೆ ನೋಡಿಕೊಳ್ಳಬೇಕು.
6. ಕೆರೆಗಳಲ್ಲಿ ಕಸವನ್ನು ಹಾಕಬಾರದು.
7. ಕೆರೆಯ ಸುತ್ತ ಕಟ್ಟೆಯನ್ನು ಕಟ್ಟುವುದರಿಂದ ನೀರು ಮಾಲಿನ್ಯವಾಗದಂತೆ ಮಕೆರೆ ಸ್ವಚ್ಛವಾಗಿರುವಂತೆ ನೋಡಿಕೊಳ್ಳಬಹುದು.
8. ತೆರೆದ ಚರಂಡಿಗಳಲ್ಲಿ ಹರಿಯುವ ಸಂಸ್ಕರಣೆಗೊಳಪಡಿಸದ ನೀರು ಸಮೀಪದ ಕೆರೆಗಳನ್ನು ಸೇರದಂತಿರಬೇಕು.
0 Comments