ತೂಗಿ ತೂಗಿ ಮರಗಳೇ
ಕೃತಿಕಾರರ ಪರಿಚಯ :
- ಎನ್. ಎಸ್. ಲಕ್ಷ್ಮೀನಾರಾಯಣಭಟ್ಟ
? ಡಾ. ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ ಅವರು 1936 ರಲ್ಲಿ ಶಿವಮೊಗ್ಗದಲ್ಲಿ ಜನಿಸಿದರು. ಇವರು ನೈಶಿಲ ಭಟ್ಟಎಂಬ ಕಾವ್ಯನಾಮದಿಂದ ಪ್ರಸಿದ್ಧರಾಗಿದ್ದಾರೆ.
? ಇವರು ನಿನ್ನೆಗೆ ನನ್ನ ಹಾಡು, ವೃತ್ತ ಸುಳಿ, ಹೊಳೆ ಸಾಲಿನ ಮರ, ಬಾರೋ ವಸಂತ, ಭಾವಸಂಗಮ, ದೀಪಿಕಾ- ಮುಂತಾದ ಕೃತಿಗಳನ್ನು ರಚಿಸಿದ್ದಾರೆ.
? ಇವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ, ಕಾರಂತ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು ಲಭಿಸಿವೆ.
? ಪ್ರಸ್ತುತ ಕವನವನ್ನು ಅವರ ಸಮಗ್ರ ಕಾವ್ಯ ಸಂಪುಟ-2 ಕೃತಿಯಿಂದ ಆಯ್ದುಕೊಳ್ಳಲಾಗಿದೆ.
1. ಪದಗಳ ಅರ್ಥ ತಿಳಿಯಿರಿ :
ಇಳೆ - ಭೂಮಿ; ಧರೆ; ಪೃಥ್ವಿ.
ಇಳಿ (ಕ್ರಿ) - ಕೆಳಕ್ಕೆ ಬರು; ಬೀಳು.
ಋಷಿ - ತಪಸ್ವಿ; ಮುನಿ.
ಒಡಲು - ಶರೀರ; ಹೊಟ್ಟೆ.
ಓಲೆ - ಪತ್ರ
ಔದಾರ್ಯ - ಉದಾರತೆ; ಧಾರಾಳ ಗುಣ.
ಕರ - ಕೈ; ಹಸ್ತ.
ಕರುಣೆ - ದಯೆ
ಗಾನ - ಹಾಡು; ಸಂಗೀತ.
ತಮ - ಕತ್ತಲು
ತಳೆ (ಕ್ರಿ) - ಧರಿಸು
ತುಡಿ (ಕ್ರಿ). - ಮಿಡಿ; ಸ್ಪಂದಿಸು.
ನಾಲೆ - ಕಾಲುವೆ; ತೋಡು.
ನೆಲೆ - ಆಶ್ರಯ
ಮಧುರ - ಇಂಪಾದ
ವರ - ಅನುಗ್ರಹ
? ಇವರು ನಿನ್ನೆಗೆ ನನ್ನ ಹಾಡು, ವೃತ್ತ ಸುಳಿ, ಹೊಳೆ ಸಾಲಿನ ಮರ, ಬಾರೋ ವಸಂತ, ಭಾವಸಂಗಮ, ದೀಪಿಕಾ- ಮುಂತಾದ ಕೃತಿಗಳನ್ನು ರಚಿಸಿದ್ದಾರೆ.
? ಇವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ, ಕಾರಂತ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು ಲಭಿಸಿವೆ.
? ಪ್ರಸ್ತುತ ಕವನವನ್ನು ಅವರ ಸಮಗ್ರ ಕಾವ್ಯ ಸಂಪುಟ-2 ಕೃತಿಯಿಂದ ಆಯ್ದುಕೊಳ್ಳಲಾಗಿದೆ.
ಅಭ್ಯಾಸ
1. ಪದಗಳ ಅರ್ಥ ತಿಳಿಯಿರಿ :
ಇಳೆ - ಭೂಮಿ; ಧರೆ; ಪೃಥ್ವಿ.
ಇಳಿ (ಕ್ರಿ) - ಕೆಳಕ್ಕೆ ಬರು; ಬೀಳು.
ಋಷಿ - ತಪಸ್ವಿ; ಮುನಿ.
ಒಡಲು - ಶರೀರ; ಹೊಟ್ಟೆ.
ಓಲೆ - ಪತ್ರ
ಔದಾರ್ಯ - ಉದಾರತೆ; ಧಾರಾಳ ಗುಣ.
ಕರ - ಕೈ; ಹಸ್ತ.
ಕರುಣೆ - ದಯೆ
ಗಾನ - ಹಾಡು; ಸಂಗೀತ.
ತಮ - ಕತ್ತಲು
ತಳೆ (ಕ್ರಿ) - ಧರಿಸು
ತುಡಿ (ಕ್ರಿ). - ಮಿಡಿ; ಸ್ಪಂದಿಸು.
ನಾಲೆ - ಕಾಲುವೆ; ತೋಡು.
ನೆಲೆ - ಆಶ್ರಯ
ಮಧುರ - ಇಂಪಾದ
ವರ - ಅನುಗ್ರಹ
ಪ್ರಶ್ನೆಗಳು :
ಅ) ಕೆಳಗೆ ನೀಡಿರುವ ಅ ಪಟ್ಟಿಯನ್ನು ಬ ಪಟ್ಟಿಯೊಂದಿಗೆ ಹೊಂದಿಸಿ ಬರೆಯಿರಿ.
ಅ ಪಟ್ಟಿ ಬ ಪಟ್ಟಿ
1) ಮರ ಆ) ಹಸಿರು
2) ಹಕ್ಕಿ ಅ) ಗೂಡು
3) ಗಾನ ಈ) ಸ್ವರ
ಆ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.
1. ಕವಿ ಯಾವುದನ್ನು ಇಳೆಗೆ ಇಳಿದ ವರಗಳೆಂದು ಕರೆದಿದ್ದಾರೆ?
ಕವಿ ಮರಗಳನ್ನು ಇಳೆಗೆ ಇಳಿದ ವರಗಳೆಂದು ಕರೆದಿದ್ದಾರೆ.
2.ಮರಗಳು ಯಾರಿಗೆ ನೆಲೆ ನೀಡಿವೆ?
ಮರಗಳು ಸೋತು ಬಂದ ಹಕ್ಕಿ ಹಿಂಡಿಗೆ ನೆಲೆ ನೀಡಿವೆ
3.ಕವಿ ಮರಗಳಿಗೆ ಎಂತಹ ಮನಸ್ಸಿದೆ ಎಂದಿದ್ದಾರೆ?
ಕವಿ ಮರಗಳಿಗೆ ಋಷಿಸಮಾನ ಮನಸ್ಸಿದೆ ಎಂದಿದ್ದಾರೆ.
4. ಮರಗಳು ಔದಾರ್ಯದ ರೂಪದಲ್ಲಿ ನಮಗೇನು ನೀಡುತ್ತವೆ?
ಮರಗಳು ಔದಾರ್ಯದ ರೂಪದಲ್ಲಿ ನಮಗೆ ಹೂವು ಹಣ್ಣು ನೀಡುತ್ತವೆ.
5. ಮರ ಯಾವ ಮೌಲ್ಯಗಳನ್ನು ಸಂಕೇತಿಸುತ್ತದೆ?
ಮರ ಸತ್ಯ, ತ್ಯಾಗ, ಅಹಿಂಸೆಯ ಮೌಲ್ಯಗಳನ್ನು ಸಂಕೇತಿಸುತ್ತದೆ.
ಇ) ಕೆಳಗಿನ ಪ್ರಶ್ನೆಗಳಿಗೆ ಮೂರು-ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ.
1. ಮರಗಳು ಪ್ರಕೃತಿ ಬರೆದ ಓಲೆ ಎಂಬುದನ್ನು ಕವಿ ಹೇಗೆ ವರ್ಣಿಸಿದ್ದಾರೆ?
ಮರವು ಸದಾ ದುಡಿಯುತ್ತಾ, ಪ್ರೀತಿಯಿಂದ ಬಂದವರಿಗೆ ಆಶ್ರಯ ನೀಡುತ್ತಾ, ಹಸಿರಿನ ಮಾಲೆಯಂತೆ ಕಂಗೊಳಿಸುತ್ತಾ ಮನುಷ್ಯನಿಗೆ ಆಸರೆಯಾಗುತ್ತಿರುವುದನ್ನು ಕಂಡು ಪ್ರಕೃತಿಯೇ ಪ್ರೀತಿ, ನೀತಿಯೆಂಬ ಹಾಡನ್ನು ಓಲೆಯಲ್ಲಿ ಬರೆದಿದೆ ಎಂದು ಕವಿ ವರ್ಣಿಸಿದ್ದಾರೆ.
2. ಸಸಿಯೊಂದು ಮರವಾಗಿ ಬೆಳೆಯುವ ರೀತಿಯನ್ನು ಕವಿ ಹೇಗೆ ವರ್ಣಿಸಿದ್ದಾರೆ?
ಸಸಿ ಮಣ್ಣಿನ ಕತ್ತಲೆಯ ಸೀಳಿ ಹೊರಗೆ ಚಿಗುರೊಡೆಯುವಾಗಲೇ ಮೈತುಂಬ ಚಿಗುರನ್ನು ತುಂಬಿಕೊಂಡು ಕೊಂಬೆ ಕೊಂಬೆಗಳನ್ನು ಚಾಚುತ್ತಾ, ಎಲ್ಲರನ್ನೂ ಬನ್ನಿ ಬನ್ನಿ ಎಂದು ಸ್ವಾಗತಿಸುವಂತೆ ಮರವಾಗಿ ಬೆಳೆಯುತ್ತವೆ ಎಂದು ಕವಿ ವರ್ಣಿಸಿದ್ದಾರೆ.
3. ಮರಗಳು ಸತ್ಯ, ತ್ಯಾಗ, ಅಂಹಿಸೆಯ ಪ್ರತೀಕವಾಗಿವೆ ಹೇಗೆ?
ಮರಗಳು ಮಾನವರಿಗೆ ಪ್ರಯೋಜನ ನೀಡಿದರೂ, ಸ್ವಾರ್ಥ ಹೊಂದಿದ ಮನುಷ್ಯರು ಅವುಗಳನ್ನೇ ಕಡಿಯುವ ಸಾಹಸಕ್ಕೆ ಕೈ ಹಾಕುತ್ತಾರೆ. ಮರಗಳಿಗೆ ಕೊಡಲಿ ಪೆಟ್ಟು ಕೊಟ್ಟವರಿಗೂ ಕರುಣೆಯಿಂದ ಕಡಿದವರಿಗೆ ನೆರಳು, ಹೂವು, ಹಣ್ಣುಗಳನ್ನು ಕೊಡುವುದರಿಂದ ಮರಗಳು ಸತ್ಯ, ತ್ಯಾಗ, ಅಹಿಂಸೆಯ ಪ್ರತೀಕವಾಗಿದೆ.
ಈ) ಕೆಳಗಿನ ಪ್ರಶ್ನೆಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿರಿ.
1. ಪ್ರಕೃತಿಯಲ್ಲಿ ಮರಗಳು ನೀಡುವ ಸಂದೇಶವನ್ನು ಕವಿ ಯಾವ ರೀತಿ ವರ್ಣಿಸಿದ್ದಾರೆ?
ಮರವನ್ನು ಕಲ್ಪವೃಕ್ಷ ಎಂದು ಕರೆಯುತ್ತೇವೆ. ಮಾನವನ ಪಾಲಿಗೆ ಮರಗಳು ವರಗಳಾಗಿವೆ. ನಮಗೆ ಶುದ್ಧಗಾಳಿ, ನೆರಳು, ಹಣ್ಣು, ತಂಪು ನೀಡುತ್ತವೆ ನಿಜ, ಅದರ ಜೊತೆಗೆ ಮರವೊಂದು ನಮ್ಮ ಬದುಕಿಗೆ ನೀತಿ ಪಾಠವಾಗಿರುವುದನ್ನು ಕವಿ ಗುರುತಿಸಿದ್ದಾರೆ. ಮರಗಳಿಗೆ ಋಷಿ ಸಮಾನವಾದ ಮನಸ್ಸಿದೆ. ಅವು ಸತ್ಯ, ತ್ಯಾಗ, ಅಹಿಂಸೆಯ ನಿಲುವು ಎಂಬುದನ್ನು ಕವಿ ಬಣ್ಣಿಸಿದ್ದಾರೆ. ಮರದ ಬದುಕಿನಂತೆ ನಮ್ಮ ಬದುಕು ರೂಪಿತಗೊಳ್ಳಬೇಕು ಎಂಬುದು ಕವಿಯ ಸಂದೇಶವಾಗಿದೆ.
ಉ) ಸಂದರ್ಭದೊಡನೆ ವಿವರಿಸಿರಿ.
1. ಪ್ರಕೃತಿ ಬರೆದ ಓಲೆಯೇ
ಈ ವಾಕ್ಯವನ್ನು ಎನ್. ಎಸ್. ಲಕ್ಷ್ಮೀನಾರಾಯಣಭಟ್ಟ ಅವರು ಬರೆದಿರುವ ಸಮಗ್ರ ಕಾವ್ಯ ಸಂಪುಟ-2 ಎಂಬ ಕೃತಿಯಿಂದ ಆಯ್ದ ತೂಗಿ ತೂಗಿ ಮರಗಳೇ ಎಂಬ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ. ಈ ಮಾತನ್ನು ಕವಿ ಹೇಳಿದ್ದಾರೆ. ಮರವು ಸದಾ ದುಡಿಯುತ್ತಾ, ಪ್ರೀತಿಯಿಂದ ಬಂದವರಿಗೆ ಆಶ್ರಯ ನೀಡುತ್ತಾ, ಹಸಿರಿನ ಮಾಲೆಯಂತೆ ಕಂಗೊಳಿಸುತ್ತಾ ಮನುಷ್ಯನಿಗೆ ಆಸರೆಯಾಗುತ್ತಿರುವುದನ್ನು ಕಂಡು ಪ್ರಕೃತಿಯ ಈ ನೀತಿಯೆ ಪ್ರಕೃತಿ ಬರೆದ ಓಲೆ ಎಂದು ತಿಳಿಸುವಾಗ ಈ ಮೇಲಿನ ಮಾತು ಬಂದಿದೆ.
2. ಹೂವು ಹಣ್ಣು ಸುರಿವಿರಿ
ಈ ವಾಕ್ಯವನ್ನು ಎನ್. ಎಸ್. ಲಕ್ಷ್ಮೀನಾರಾಯಣಭಟ್ಟ ಅವರು ಬರೆದಿರುವ ಸಮಗ್ರ ಕಾವ್ಯ ಸಂಪುಟ-2 ಎಂಬ ಕೃತಿಯಿಂದ ಆಯ್ದ ತೂಗಿ ತೂಗಿ ಮರಗಳೇ ಎಂಬ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ. ಈ ಮಾತನ್ನು ಕವಿ ಹೇಳಿದ್ದಾರೆ. ಮರವು ಮಣ್ಣಿನಿಂದ ಹುಟ್ಟಿ ಬೆಳೆದು ಮೈತುಂಬ ಚಿಗುರನ್ನು ತುಂಬಿಕೊಂಡು ಕೊಂಬೆ ಕೊಂಬೆಗಳನ್ನು ಚಾಚುತ್ತಾ, ಎಲ್ಲರನ್ನೂ ಬನ್ನಿ ಬನ್ನಿ ಎಂದು ಸ್ವಾಗತಿಸುತ್ತಾ ಹೂವು ಹಣ್ಣು ಸುರಿಸುತ್ತವೆ ಎಂದು ತಿಳಿಸುವಾಗ ಈ ಮೇಲಿನ ಮಾತು ಬಂದಿದೆ.
3. ಸತ್ಯ ತ್ಯಾಗ ಅಹಿಂಸೆಯೇ ನಿತ್ಯವಾದ ನಿಲುವೇ!
ಈ ವಾಕ್ಯವನ್ನು ಎನ್. ಎಸ್. ಲಕ್ಷ್ಮೀನಾರಾಯಣಭಟ್ಟ ಅವರು ಬರೆದಿರುವ ಸಮಗ್ರ ಕಾವ್ಯ ಸಂಪುಟ-2 ಎಂಬ ಕೃತಿಯಿಂದ ಆಯ್ದ ತೂಗಿ ತೂಗಿ ಮರಗಳೇ ಎಂಬ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ. ಈ ಮಾತನ್ನು ಕವಿ ಹೇಳಿದ್ದಾರೆ. ಮರಗಳು ಮಾನವರಿಗೆ ಪ್ರಯೋಜನ ನೀಡಿದರೂ, ಸ್ವಾರ್ಥ ಹೊಂದಿದ ಮನುಷ್ಯರು ಅವುಗಳನ್ನೇ ಕಡಿಯುವ ಸಾಹಸಕ್ಕೆ ಕೈ ಹಾಕುತ್ತಾರೆ. ಮರಗಳಿಗೆ ಕೊಡಲಿ ಪೆಟ್ಟು ಕೊಟ್ಟವರಿಗೂ ಕರುಣೆಯಿಂದ ಕಡಿದವರಿಗೆ ನೆರಳು, ಹೂವು, ಹಣ್ಣುಗಳನ್ನು ಕೊಡುವುದರಿಂದ ಮರಗಳು ಸತ್ಯ, ತ್ಯಾಗ, ಅಹಿಂಸೆಯ ಪ್ರತೀಕವಾಗಿದೆ ಎಂದು ತಿಳಿಸುವ ಸಂದರ್ಭದಲ್ಲಿ ಈ ಮೇಲಿನ ಮಾತು ಬಂದಿದೆ.
ಭಾಷಾಭ್ಯಾಸ :
ಅ) ಮೊದಲೆರಡು ಪದಗಳಿಗಿರುವ ಸಂಬಂಧದಂತೆ ಮೂರನೆಯ ಪದಕ್ಕೆ ಸಂಬಂಧಿಸಿದ ಪದ ಬರೆಯಿರಿ.
1. ಇಳೆ : ಭೂಮಿ :: ಓಲೆ : ಪತ್ರ
2. ಸತ್ಯ : ಅಸತ್ಯ :: ಅಹಿಂಸೆ : ಹಿಂಸೆ
3. ಸ್ವರ : ಸರ :: ಹಕ್ಕಿ : ಪಕ್ಷಿ
4. ಮರ : ಮರಗಳು :: ಸ್ವರಗಳು : ಸ್ವರ
ಆ) ಕೆಳಗಿನ ಪದಗಳನ್ನು ಸ್ವಂತ ವಾಕ್ಯದಲ್ಲಿ ಬಳಸಿ ಬರೆಯಿರಿ.
1.ವರ : ಮರಗಳು ಇಳೆಗೆ ಇಳಿದ ವರಗಳಾಗಿವೆ.
2.ಮಧುರ : ಗಾನ ಮಧುರವಾಗಿರುತ್ತದೆ.
3.ನೆಲೆ : ಮರಗಳು ಪಕ್ಷಿಗಳಿಗೆ ನೆಲೆ ನೀಡಿವೆ.
4.ರೋಮಾಂಚನ : ನಾನು ಹಾವನ್ನು ನೋಡಿ ರೋಮಾಂಚನಗೊಂಡೆನು.
5.ಔದಾರ್ಯ : ಮರಗಳು ಔದಾರ್ಯದಿಂದ ನಮಗೆ ಹೂವುಹಣ್ಣು ನೀಡುತ್ತಿವೆ.
6.ಅಹಿಂಸೆ : ನಾವು ಅಹಿಂಸಾ ವಾದಿಗಳಾಗಬೇಕು.
ಇ) ಕೆಳಗಿನ ಪದಗಳಿಗೆ ವಿರುದ್ಧಾರ್ಥಕಗಳನ್ನು ಬರೆಯಿರಿ.
ವರ - ಶಾಪ,
ಸ್ವರ - ಅಪಸರ,
ಅಹಿಂಸೆ - ಹಿಂಸೆ,
ಪ್ರೀತಿ - ದ್ವೇಷ,
ನೆಲ - ಆಕಾಶ
ಈ) ಕೆಳಗಿನ ಪದಗಳಿಗೆ ತತ್ಸಮ-ತದ್ಭವಗಳನ್ನು ಬರೆಯಿರಿ.
ಋಷಿ - ರಿಸಿ,
ಆಕಾಶ - ಆಗಸ,
ನಿತ್ಯ - ನಿಚ್ಚ,
ಪಕ್ಷಿ - ಹಕ್ಕಿ,
ಸ್ವರ - ಸರ
ಉ) ಕೆಳಗೆ ನೀಡಿರುವ ಪದಗಳ ಉಚ್ಚಾರಣೆ ಹಾಗೂ ಅರ್ಥ ವ್ಯತ್ಯಾಸಗಳನ್ನು ಕೇಳಿ ತಿಳಿಯಿರಿ.
1. ಮರ - ವರ
2. ನಾಲೆ - ನೆಲೆ
3. ಕರ - ಕರೆ
4. ಇಳೆ - ಇಳಿ
0 Comments