Recent Posts

ಮಳೆ ಬರಲಿ - ೦೮ ನೇ ತರಗತಿ ತಿಳಿ ಕನ್ನಡ ಪುಸ್ತಕದ ಪ್ರಶ್ನೋತ್ತರಗಳು


ಮಳೆ ಬರಲಿ

 ಕೃತಿಕಾರರ ಪರಿಚಯ :

 
 - ಸವಿತಾ ನಾಗಭೂಷಣ
?  ಶ್ರೀಮತಿ ಸವಿತಾ ನಾಗಭೂಷಣ ಅವರು 1961 ರಲ್ಲಿ ಚಿಕ್ಕಮಗಳೂರಿನಲ್ಲಿ ಜನಿಸಿದರು.  
?  ಇವರು ಚಂದ್ರನನ್ನು ಕರೆಯಿರಿ ಭೂಮಿಗೆ, ಹೊಳೆ ಮಗಳು, ಆಕಾಶ ಮಲ್ಲಿಗೆ, ಜಾತ್ರೆಯಲ್ಲಿ ಶಿವ, ದರುಶನ,  ಕಾಡು ಲಿಲ್ಲಿ ಹೂಗಳು, ಹಳ್ಳಿಯ ದಾರಿ  ಮುಂತಾದ ಕೃತಿಗಳನ್ನು ಬರೆದಿದ್ದಾರೆ.
?  ಶ್ರೀಯುತರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಾಗೂ ಡಿ. ಎಸ್. ಕರ್ಕಿ ಕಾವ್ಯ ಪ್ರಶಸ್ತಿಯೂ ಲಭಿಸಿದೆ.
?  ಪ್ರಸ್ತುತ ಮಳೆ ಬರಲಿ... ಕವನವನ್ನು ಚಂದ್ರನನ್ನು ಕರೆಯಿರಿ ಭೂಮಿಗೆ ಕವನ ಸಂಕಲನದಿಂದ ಆಯ್ದುಕೊಳ್ಳಲಾಗಿದೆ.                             
ಅಭ್ಯಾಸ

1. ಪದಗಳ ಅರ್ಥ ತಿಳಿಯಿರಿ :
ಕಂಬಳಿ - ಕುರಿಯ ತುಪ್ಪಟದಿಂದ ಮಾಡಿದ ಹೊದಿಕೆ.             
ಕಸಿದು (ಕ್ರಿ) - ಕಿತ್ತುಕೊಳ್ಳು; ಅಪಹರಿಸು.
ಕೊಳ್ಳ - ತಗ್ಗು; ಗುಣಿ.                                  
ಛಾವಣಿ - ಚಾವಣಿ(ಕ). ಮಾಳಿಗೆ.
ಬಯಲು - ವಿಸ್ತಾರವಾದ ಭೂಪ್ರದೇಶ.                       
ಬೆಂದ (ಕ್ರಿ) - ಸುಡು; ಕುದಿ; ಬಿಸಿ.
ಹಳ್ಳ - ತಗ್ಗು; ಗುಣಿ.
 
ಪ್ರಶ್ನೆಗಳು :

ಅ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.

1. ರೈತರಿಗೆ ಸುಖ ನಿದ್ದೆಗಳು ಯಾವಾಗ ಸಿಗುತ್ತವೆ?
ಮಳೆಯಿಂದ ರೈತರ ಬದುಕು ಹಸನಾದಾಗ ರೈತರಿಗೆ ಸುಖ ನಿದ್ದೆಗಳು ಸಿಗುತ್ತವೆ.

2. ಕೆರೆ ಹಳ್ಳ ಬಾವಿಗಳಿಗೆ ಬಾಯಾರಿಕೆ ಆಗುವುದು ಯಾವಾಗ?
ಕೆರೆ ಹಳ್ಳ ಬಾವಿಗಳಿಗೆ ಬಾಯಾರಿಕೆ ಆಗುವುದು ಮಳೆ ಬರದೇ ಇದ್ದಾಗ.

3. ನೊಂದ ಬಯಲುಗಳು, ಬೆಂದ ಬೆಟ್ಟಗಳು ತಂಪಾಗುವುದು ಯಾವಾಗ?
ನೊಂದ ಬಯಲುಗಳು, ಬೆಂದ ಬೆಟ್ಟಗಳು ತಂಪಾಗುವುದು ಮಳೆ ಬಂದಾಗ.

4. ಮಳೆ ಬಂದು ನಿಂತಾಗ ನೆಲ ಮುಗಿಲು ಹೇಗೆ ಕಾಣಬೇಕು?
ಮಳೆ ಬಂದು ನಿಂತಾಗ ನೆಲ ಮುಗಿಲು ಏಳು ಬಣ್ಣಗಳಲ್ಲಿ ನಕ್ಕಂತೆ ಕಾಣಬೇಕು.  

ಆ) ಕೆಳಗಿನ ಪ್ರಶ್ನೆಗಳಿಗೆ ಮೂರು-ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ.

1. ಮಳೆ ಯಾವ ಯಾವ ನಷ್ಟಗಳನ್ನು ಉಂಟುಮಾಡದಿರಲಿ ಎಂದು ಕವಯಿತ್ರಿ ಆಶಿಸಿದ್ದಾರೆ?
ಮಳೆಯೂ ಹಸಿರು ಹೊಲ, ಗದ್ದೆ, ರೈತರ ಸುಖನಿದ್ದೆ, ಹುಲ್ಲಿನ ಛಾವಣಿ, ಮಣ್ಣಿನ ಗೋಡೆಗಳ ನಷ್ಟಗಳನ್ನು ಉಂಟುಮಾಡದಿರಲಿ ಎಂದು ಕವಯಿತ್ರಿ ಆಶಿಸಿದ್ದಾರೆ.

2. ವಿಪರೀತ ಮಳೆಯಿಂದ ಯಾರ ಮನೆಗಳಿಗೆ ಹೆಚ್ಚು ಹಾನಿ ಉಂಟಾಗುತ್ತದೆ? ಏಕೆ?
ವಿಪರೀತ ಮಳೆಯಿಂದ ರೈತರ ಮನೆಗಳಿಗೆ ಹೆಚ್ಚು ಹಾನಿ ಉಂಟಾಗುತ್ತದೆ. ಏಕೆಂದರೆ ರೈತರ ಮನೆಯ ಗೋಡೆ ಮಣ್ಣಿನಿಂದ ಮಾಡಿರುತ್ತದೆ. ಛಾವಣಿ ಹುಲ್ಲಿನಿಂದ ಮಾಡಲ್ಪಟ್ಟಿರುತ್ತದೆ.

3. ಮಳೆಯಿಂದ ಯಾವ ಯಾವ ಸುಖಗಳು ಸಿಗಲಿ ಎಂದು ಕವಯಿತ್ರಿ ಆಶಿಸುತ್ತಾರೆ?
ಮಳೆಯಿಂದ ಇರಲೊಂದು ಮನೆ, ಹೊದೆಯಲು ಬೆಚ್ಚನೆಯ ಕಂಬಳಿ ಸಿಗಬೇಕು. ಕೆರೆ, ಕಟ್ಟೆ, ಬಾವಿ ತುಂಬಿರಬೇಕು. ಇಂತಹ ಸುಖಗಳು ಸಿಗಲಿ ಎಂದು ಕವಯಿತ್ರಿ ಆಶಿಸುತ್ತಾರೆ.

4. ನೊಂದು ಬೆಂದು ಬಾಯಾರಿದ ಪ್ರಕೃತಿಯ ಅಂಶಗಳಾವುವು?
ನೊಂದು ಬೆಂದು ಬಾಯಾರಿದ ಪ್ರಕೃತಿಯ ಅಂಶಗಳೆಂದರೆ ನೊಂದ ಬಯಲುಗಳು, ಬೆಂದ ಬೆಟ್ಟಗಳು, ಬಾಯಾರಿದ ಕೆರೆ, ಬಾವಿ, ಹಳ್ಳ, ಕೊಳ್ಳಗಳು ಎಂದು ತಿಳಿಸಿದ್ದಾರೆ.

ಇ) ಕೆಳಗಿನ ಪ್ರಶ್ನೆಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿರಿ.

1. ಮಳೆಯಿಂದ ಆಗುವ ಅನುಕೂಲ ಹಾಗೂ ಅನಾನುಕೂಲಗಳಾವುವು?
ಮಳೆಯಿಂದ ಆಗುವ ಅನುಕೂಲಗಳೆಂದರೆ, ಬತ್ತಿ ಹೋದ ಬಾವಿ, ಕೆರೆ, ಕಟ್ಟೆ ತುಂಬುತ್ತದೆ. ಮಳೆಯು ಸಕಾಲಕ್ಕೆ ಹಿತವಾಗಿ ಬಂದು ಕೆರೆ ಕಟ್ಟೆ ಬಾವಿಗಳು ತುಂಬಿದರೆ ರೈತರ ಬದುಕು ಹಸನಾಗುತ್ತದೆ. ಕೃಷಿ ಬೆಳೆ ಬೆಳೆಯಲು ಸಹಕಾರಿಯಾಗುತ್ತದೆ. ಭೂಮಿಯ ಅಂತರ್ಜಲದ ಮಟ್ಟ ಹೆಚ್ಚಾಗುತ್ತದೆ. ಭೂಮಿಯೂ ತಂಪಾಗುತ್ತದೆ. ಆ ಮುಖೇನ ನಾಡು ಸಮೃದ್ಧಿಯಿಂದ ನೆಮ್ಮದಿಯಿಂದ ಕೂಡಿರುತ್ತದೆ. ಮಳೆಯಿಂದ ಆಗುವ ಅನಾನುಕೂಲಗಳಾವುವೆಂದರೆ, ಜಲಪ್ರಳಯವಾಗುತ್ತದೆ. ಆಸ್ತಿ ಪಾಸ್ತಿ ನಾಶವಾಗುತ್ತದೆ. ಬೆಳೆದ ಬೆಳೆಗಳು ನಾಶವಾಗುತ್ತವೆ. ರೋಗರುಜಿನಗಳು ಹೆಚ್ಚಾಗುತ್ತವೆ. ಅಭಿವೃದ್ಧಿಗೆ ತೊಡಕಾಗುತ್ತದೆ.  

ಈ) ಸಂದರ್ಭದೊಡನೆ ವಿವರಿಸಿರಿ.

1. ರೈತರ ಸುಖ ನಿದ್ದೆಗಳನ್ನು ಕಸಿದುಕೊಳ್ಳದಿರಲಿ.
ಈ ವಾಕ್ಯವನ್ನು ಸವಿತಾ ನಾಗಭೂಷಣ ಅವರು ಬರೆದಿರುವ ಚಂದ್ರನನ್ನು ಕರೆಯಿರಿ ಭೂಮಿಗೆ  ಎಂಬ ಕೃತಿಯಿಂದ ಆಯ್ದ ಮಳೆ ಬರಲಿ  ಎಂಬ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.  ಈ ಮಾತನ್ನು ಕವಯಿತ್ರಿ ಹೇಳಿದ್ದಾರೆ. ಬರುವ ಮಳೆ ರೈತರ ಬಾಳನ್ನು ಹಸನುಗೊಳಿಸುವಂತಾಗಬೇಕು. ಅದರೆ ಅವರ ಸುಖನಿದ್ದೆಗಳನ್ನು ಕಸಿದುಕೊಳ್ಳದಿರಲಿ ಎಂದು ತಿಳಿಸುವ ಸಮಯದಲ್ಲಿ ಈ ಮೇಲಿನ ಮಾತು ಬಂದಿದೆ.

2. ಹೊದೆಯಲು ಬೆಚ್ಚನೆಯ ಕಂಬಳಿ ಎಲ್ಲರಿಗೂ ಸಿಗಲಿ.
ಈ ವಾಕ್ಯವನ್ನು ಸವಿತಾ ನಾಗಭೂಷಣ ಅವರು ಬರೆದಿರುವ ಚಂದ್ರನನ್ನು ಕರೆಯಿರಿ ಭೂಮಿಗೆ  ಎಂಬ ಕೃತಿಯಿಂದ ಆಯ್ದ ಮಳೆ ಬರಲಿ  ಎಂಬ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.  ಈ ಮಾತನ್ನು ಕವಯಿತ್ರಿ ಹೇಳಿದ್ದಾರೆ. ಬರುವ ಮಳೆ ಹರುಷವನ್ನು ಹೊತ್ತು ತರಲಿ ಇರಲೊಂದು ಪುಟ್ಟ ಮನೆ, ಹೊದೆಯಲು ಬೆಚ್ಚನೆಯ ಕಂಬಳಿ ಎಲ್ಲರಿಗೂ ಸಿಗಲಿ ಎಂದು ತಿಳಿಸುವ ಸಮಯದಲ್ಲಿ ಈ ಮೇಲಿನ ಮಾತು ಬಂದಿದೆ.

3. ಕೆರೆ ಬಾವಿ ಹಳ್ಳಕೊಳ್ಳಗಳಿಗೆ ಬರಲಿ ಮಳೆ.
ಈ ವಾಕ್ಯವನ್ನು ಸವಿತಾ ನಾಗಭೂಷಣ ಅವರು ಬರೆದಿರುವ ಚಂದ್ರನನ್ನು ಕರೆಯಿರಿ ಭೂಮಿಗೆ  ಎಂಬ ಕೃತಿಯಿಂದ ಆಯ್ದ ಮಳೆ ಬರಲಿ  ಎಂಬ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.  ಈ ಮಾತನ್ನು ಕವಯಿತ್ರಿ ಹೇಳಿದ್ದಾರೆ. ಮಳೆ ಬಾರದೇ ಹೋದರೆ ಭೂಮಿಯ ಮೇಲೆ ಜೀವಕಳೆ ನಾಶವಾಗುತ್ತದೆ. ಆದ್ದರಿಂದ ಕೆರೆ, ಬಾವಿ, ಹಳ್ಳಕೊಳ್ಳಗಳಿಗೆ ಮಳೆ ಬರಲಿ ಎಂದು ಆಶಿಸುವ ಸಂದರ್ಭದಲ್ಲಿ ಈ ಮೇಲಿನ ಮಾತು ಬಂದಿದೆ.

ಭಾಷಾಭ್ಯಾಸ :

ಅ) ಮೊದಲೆರಡು ಪದಗಳಿಗೆ ಸಂಬಂಧಿಸಿದಂತೆ ಮೂರನೆಯ ಪದಕ್ಕೆ ಸಂಬಂಧಿಸಿದ ಪದ ಬರೆಯಿರಿ.
1. ಹಳ್ಳಕೊಳ್ಳ : ಜೋಡುನುಡಿ :: ಧೋ : ಅನುಕರಣಾವ್ಯಯ
2. ಹಳ್ಳ : ತಗ್ಗು :: ಕಸಿದು : ಕಿತ್ತುಕೊಳ್ಳು
3. ಸಿಗು : ಸಿಗಲಿ :: ನಗು : ನಗಲಿ  

ಆ) ಕೆಳಗಿನ ಪದಗಳನ್ನು ಸ್ವಂತ ವಾಕ್ಯದಲ್ಲಿ ಬರೆಯಿರಿ.
1. ಸುಖನಿದ್ದೆ  : ಮಳೆ ಬರಲಿ ರೈತರಿಗೆ ಸುಖನಿದ್ದೆಗಳನ್ನು ಕಸಿದುಕೊಳ್ಳದಂತಿರಲಿ.
2. ಬಾಯಾರು : ನಮಗೆ ಆಯಾಸವಾದಾಗ ಬಾಯಾರಿಕೆಯಾಗುತ್ತದೆ.  
3. ಬೆಚ್ಚನೆ    : ಚಳಿಗಾಲದಲ್ಲಿ ಬೆಚ್ಚನೆಯ ಹೊದಿಕೆ ಬೇಕು.  

ಇ) ಕೆಳಗಿನ ಪದಗಳಿಗೆ ವಿರುದ್ಧಾರ್ಥಕಗಳನ್ನು ಬರೆಯಿರಿ.
ಮೇಲೆ - ಕೆಳಗೆ,   
ಬೀಳು - ಏಳು,   
ಸುಖ - ದುಃಖ,   
ಕೆಡವು - ಕಟ್ಟು.  

ಈ) ಕೆಳಗಿನ ಪದಗಳನ್ನು ಮಾದರಿಯಂತೆ ಬಿಡಿಸಿ ಬರೆಯಿರಿ.
ಮಾದರಿ : ಹಾಕದೆ + ಇರಲಿ = ಹಾಕದಿರಲಿ
1. ಇರಲೊಂದು = ಇರಲಿ + ಒಂದು
2. ಬಾಯಾರಿದ = ಬಾಯ + ಆರಿದ
3. ಕೊಳ್ಳದಿರಲಿ = ಕೊಳ್ಳದೆ + ಇರಲಿ     

 











 
You Might Like

Post a Comment

0 Comments