Recent Posts

 ಬಲಿಯನಿತ್ತೊಡೆ ಮುನಿವೆಂ - ೦೯ ನೇ ತರಗತಿ ಸಿರಿ ಕನ್ನಡ ಪುಸ್ತಕದ ಪ್ರಶ್ನೋತ್ತರಗಳು

 ಬಲಿಯನಿತ್ತೊಡೆ ಮುನಿವೆಂ

ಅ. ಬಿಟ್ಟಿರುವ ಜಾಗವನ್ನು ಸೂಕ್ತ ಪದದಿಂದ ತುಂಬಿ.

1. ಅಭಯರುಚಿಯ ಸಹೋದರಿಯ ಹೆಸರು ಅಭಯಮತಿ.

2. ಅಭಯರುಚಿ ಮತ್ತು ಅಭಯಮತಿಯರನ್ನು ಬಿಕ್ಷೆಗೆ ಬಂದಿದ್ದಾಗ ಸೆರೆಹಿಡಿದನು.

3. ಬಲಿಯನಿತ್ತೊಡೆ ಮುನಿವೆಂ ಪದ್ಯದ ಆಕಾರ ಯಶೋಧರಚರಿತೆ.

4. ಮಾರಿದತ್ತ ಕಲಿಯಂ ಮೂದಲಿಸುವಂತೆ ದೇವನಾದನು.

ಆ. ಕೊಟ್ಟಿರುವ ಪದಗಳಲ್ಲಿ ಆಯಾ ಗುಂಪಿಗೆ ಸೇರದ ಪದವನ್ನು ಆರಿಸಿ ಬರೆಯಿರಿ.
1. ರನ್ನ, ಜನ್ನ, ಹರಿಹರ, ಪೊನ್ನ
2. ನೃಪೇಂದ್ರ, ದೊರೆ, ನೃಪ, ನರಪತಿ
3. ಗುರುವಿಂದು, ಹಿಂಸೆಯೊಂದರೊಳ್, ಬರುತಿದೆ, ಪ್ರಜೆಯೆಲ್ಲಂ
4. ಅನಂತಪುರಾಣ, ಯಶೋಧರಚರಿತೆ, ವಿಕ್ರಮಾರ್ಜುನವಿಜಯ, ಅನುಭವಮುಕುರ
ಪ್ರೇರಣಾ 
 
ಅಭ್ಯಾಸ

ಅ. ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.

1. ಅಭಯರುಚಿಯ ಸಹೋದರಿಯ ಹೆಸರೇನು?
ಅಭಯರುಚಿಯ ಸಹೋದರಿಯ ಹೆಸರು ಅಭಯಮತಿ.

2. ಅಭಯರುಚಿ ಮತ್ತು ಅಭಯಮತಿಯರನ್ನು ಸೆರೆಹಿಡಿದುದು ಯಾವಾಗ?
ಅಭಯರುಚಿ ಮತ್ತು ಅಭಯಮತಿಯರನ್ನು ಸೆರೆಹಿಡಿದಿದ್ದು ಅವರು ಚರಿಗೆಗೆ (ಭಿಕ್ಷೆಟಾನೆಗೆ) ಬಂದಾಗ ಸೆರೆಹಿಡಿದರು.

3. ಕುಸುಮದತ್ತನ ತಂದೆಯ ಹೆಸರೇನು?
ಕುಸುಮದತ್ತನ ತಂದೆಯ ಹೆಸರು ಮಾರಿದತ್ತ.

4. ಮಾರಿದತ್ತ ಪಟ್ಟವನ್ನು ಯಾರಿಗೆ ಕಟ್ಟಿದನು?
ಮಾರಿದತ್ತ ಪಟ್ಟವನ್ನು ಕುಸುಮದತ್ತನಿಗೆ ಕಟ್ಟಿದನು.

ಆ. ಕೊಟ್ಟಿರುವ ಪ್ರಶ್ನೆಗಳಿಗೆ ಎರಡು ಮೂರು ವಾಕ್ಯಗಳಲ್ಲಿ ಉತ್ತರಿಸಿ.

1. ಅಭಯರುಚಿ ತಲ್ಲಣಗೊಳ್ಲಲು ಕಾರಣವೇನು?
ಗುರು ಸುದತ್ತಾಚಾರ್ಯರ ಆಜ್ಞೆಯ ಮೇರೆಗೆ ಅಭಯರುಚಿ ಮತ್ತು ಅಭಯಮತಿ ಭಿಕ್ಷೆಗೆ ಬಂದಿರುವಾಗ ಅವರನ್ನು ನರಬಲಿ ಕೊಡಲು ಹಿಡಿದು ತರಲಾಯಿತು. ಆಗ ನಿರ್ಭಿತನಾದ ಅಭಯರುಚಿ ರಾಜಪುರವೆಂಬ ಪಟ್ಟಣದ ಅರಸ ಮಾರಿದತ್ತನಿಗೆ ಒದಗಿ ಬರಬಹುದಾದ ಕೇಡನ್ನು ನೆನೆದು ಕರುಣೆಯಿಂದ ತಲ್ಲಣಗೊಂಡನು.

2. ಮಾರಿದತ್ತನು ಏಕೆ ಉದ್ವಿಗ್ನನಾದನು?
ಮಾರಿಮನೆಯ ದೃಶ್ಯವನ್ನು ಕಂಡು ಸ್ವಲ್ಪವೂ ಭಯಗೊಳ್ಳದೆ ಅಭಯರುಚಿಯು ಮಾರಿದತ್ತನನ್ನು ಕುರಿತು ” ಇಷ್ಟೊಂದು ಜೀವಿಗಳ ಕೊಂದಿರುವೆ ನರಕದೊಳಗೆ ಇದಕ್ಕೆ ನಿವಾರಣೆ ದೊರೆಯುವುದು” ಎಂದು ಅಲ್ಲಿ ನೆರೆದ ಜನತೆಯ ಮುಂದೆಸಾರಿ ಹೇಳಿದನು. ಈ ಮಾತನ್ನು ಕೇಳಿದ ಮಾರಿದತ್ತನು ಉದ್ವಿಗ್ನನಾದನು.

3. ಚಂಡಮಾರಿ ಜನರನ್ನು ಕುರಿತು ಹೇಳಿದ್ದು ಏನು?
ಚಂಡಮಾರಿಯೂ (ದೇವತೆ) ಜಾತ್ರೆಗೆ ಬಂದು ಸೇರಿದ್ದ ಜನತೆಯನ್ನು ಕುರಿತು, ನನ್ನ ಪೂಜೆಯನ್ನು ಜಲ, ಗಂಧ, ಹೂಮಾಲೆ, ಅಕ್ಕಿ, ಧೂಪ, ದೀಪ, ಹವಿಸ್ಸು ಮತ್ತು ತಾಂಬೂಲ ಸಮೂಹಗಳಿಂದ ಪೂಜಿಸಲು ತಿಳಿಸುತ್ತಾ ಜೀವಜಾತದಿಂದ ಬಲಿಯನ್ನು ಕೊಟ್ಟರೆ ತಾನು ಮುನಿಯುವುದಾಗಿ (ಕೋಪಿಸಿಕೊಳ್ಳುವುದಾಗಿ) ಹೇಳಿತು.

4. ಜೀವಿಗಳನ್ನು ಬಲಿ ಕೊಡುವುದರಿಂದ ಆಗುವ ಪರಿಣಾಮವೇನು?
ಹಿಂಸೆ ಮಾನವನ್ನು ರಾಕ್ಷಸನನ್ನಾಗಿ ಮಾಡುತ್ತದೆ, ಜೀವಿಗಳನ್ನು ಬಲಿಕೊಡವುದು ಇರಲಿ, ಜೀವಿಗಳನ್ನು ಕೊಡುವುದಾಗಿ ಸಂಕಲ್ಪಿಸುವುದೂ ಘೋರಪಾಪ. ಹೀಗಿರುವಾಗ ಜೀವಿಗಳ ಬಲಿಕೊಡುವ ಘೋರಪಾಪ ಜನ್ಮ ಜನ್ಮಾಂತರ ಕಾಡುತ್ತದೆ. ಈ ಘೋರಪಾಪದ ಪರಿಹಾರವನ್ನು ನರಕದಲೇ ಅನುಭವಿಸಬೇಕಾಗುತ್ತದೆ. ಇವು ಜೀವಬಲಿ ಕೊಡುವುದರಿಂದ ಆಗುವ ಪರಿಣಾಮಗಳು.

ಇ. ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು/ಹತ್ತು ವಾಕ್ಯಗಳಲ್ಲಿ ಉತ್ತರಿಸಿ.

1. ಅಭಯರುಚಿ ಮಾರಿದತ್ತನನ್ನು ಭೇಟಿಯಾದ ಸಂದರ್ಭವನ್ನು ವಿವರಿಸಿ.
ಚಂಡಮಾರಿ ದೇವಿಗೆ ನರಬಲಿ ಕೊಡುವುದಕ್ಕಾಗಿ ಮಾನವರನ್ನು ಹಿಡಿದು ತರುವಂತೆ ಮಾರಿದತ್ತ, ತರಾಳ ಚಂಡಕರ್ಮನಿಗೆ ಆಜ್ಞಾಪಿಸಿದ. ಅವನು ಆ ಪುರಕ್ಕೆ ಬಂದು ಭಿಕ್ಷೆಗೆ ಹೊರಟಿದ್ದ ಎಳೆಯ ವಯಸ್ಸಿನ ಸಹೋದರ ಸಹೋದರಿಯರಾದ ಅಭಯರುಚಿ ಮತ್ತು ಅಭಯಮತಿಯರನ್ನು ಹಿಡಿದು ತಂದು ಮಾರಿದತ್ತನಿಗೆ ಒಪ್ಪಿಸುವನು. ಮಾರಿಯ ಮನೆಯ ಭಯಂಕರ ದೃಶ್ಯದಿಂದ ಆ ಮಕ್ಕಳು ಸ್ವಲ್ಪವೂ ವಿಚಲಿತರಾಗಲಿಲ್ಲ. ಆ ಭಯಾನಕ ವಾತಾವರಣದಲ್ಲಿ ಅತ್ಯಂತ ಕ್ರೂರನಾದ ಮಾರಿದತ್ತನನ್ನು ನೋಡಿದ ಅಭಯರುಚಿ ಕುಮಾರನು ತಾನು ಅಭಯರುಚಿ, ಈಕೆ ನನ್ನ ಸಹೋದರಿ ಅಭಯಮತಿ ಎಂದು ನಿರ್ಭಿತನಾಗಿ ನುಡಿದನು. ಹಾಗು ನಮಗೆ ನೀವು ಕೊಡುವ ಬಲಿಯ ಹಿಂಸೆಯ ಬಗೆಗೆ ಸ್ವಲ್ಪವೂ ಭಯವಿಲ್ಲ.
ಆದರೆ ನಿಮಗೆ ತಟ್ಟಬಹುದಾದ ಜೀವಿತಾವಧಿಯ ನರಕದ ಬಗ್ಗೆ ಆಲೋಚಿಸಿದಾಗ ಮನಸ್ಸು ಕರುಣೆಯಿಂದ ತಲ್ಲಣಗೊಳ್ಳುತ್ತದೆ. ಎಂದು ನುಡಿದನು. ಅವರ ಧೈರ್ಯ ಸ್ಥೈರ್ಯ ಕಂಡು ಬೆಕ್ಕಸಬೆರಗಾದ ಮಾರಿದತ್ತ ಅವರನ್ನು ಬಲಿ ಕೊಡದೆ ಅವರ ವೃತ್ತಾಂತವನ್ನು ತಿಳಿಯ ಬಯಸಿದ. ಇದು ಅಭಯರುಚಿ ಮಾರಿದತ್ತನ್ನು ಭೇಟಿಯಾದ ಸಂದರ್ಭ.

2. ಅಭಯರುಚಿಯ ಮಾತುಗಳು ಮಾರಿದತ್ತನ ಮೇಲೆ ಬೀರಿದ ಪರಿಣಾಮವನ್ನು ತಿಳಿಸಿ.
ಸಂಕಲ್ಪ ಹಿಂಸೆಯ ಮಾತ್ರಕ್ಕೆ ನಾನು ಹಲವು ಜನ್ಮಗಳ ಭವಾವಳಿಯಲ್ಲಿ ಸಾಗಿ ಬರಬೇಕಾಯಿತು. ಘೋರ ಹಿಂಸಾಚಾರಗಳನ್ನು ಮಾಡುತ್ತಿರುವ ಮಾರಿದತ್ತ ನೀನು ನಿಸ್ಸಂಶಯವಾಗಿ ಈ ಪಾಪಗಳ ಪರಿಹಾರವನ್ನು ನರಕದಲ್ಲೇ ನಿವಾರಣೆ ಹೊಂದಬೇಕು. ಎಂಬ ಅಭಯರುಚಿಯ ಮಾತನ್ನು ಕೇಳಿದ ಮಾರಿದತ್ತನು ತುಂಬಾ ಬೆರಗಾಗಿ ಉದ್ವೇಗಕ್ಕೆ ಒಳಗಾದನು. ಮಾರಿದತ್ತನಲ್ಲಿ ಅಗಾಧವಾದ ಪರಿವರ್ತನೆ ಕಂಡು ಬರುತ್ತಿತ್ತು . ಮಾರಿಯ ಬಲಿಗಾಗಿ ಬಂಧಿಸಿಟ್ಟಿದ್ದ ಜೀವರಾಶಿಗಳನ್ನೆಲ್ಲ ಬಂಧನದಿಂದ ಬಿಡಿಸುವನು. ಜನತೆಯ ಸಂತೋಷವನ್ನು ತನ್ನ ಅನುಜ ನಂದನರ ಮಾತುಗಳನ್ನು ಮಾರಿದತ್ತನು ಆಲಿಸುವನು. ಮಂಗಳ ಸ್ನಾನ ಮಾಡುವಂತೆ ದಡದಡನೆ ಕಣ್ಣೀರು ಸುರಿಸಿದನು. ಸೋದರ ಶಿಶುಗಳಿಬ್ಬರನ್ನು ಸೆಳೆದಪ್ಪಿಕೊಂಡು ಬೆಚ್ಚನೆಯ ಪ್ರೀತಿ ನೀಡಿದನು. ಅಭಯರುಚಿಯ ಮಾತುಗಳು ಮಾರಿದತ್ತನ ಮೇಲೆ ಬೀರಿದ ಪರಿಣಾಮವಾಗಿ, ಇದುವವರೆಗೆ ತಾನು ಮಾಡಿದ ತಪ್ಪಿನ ಅರಿವಾಗಿ ಮಾರಿದತ್ತನು ಜೀನಾ ದೀಕ್ಷೆಯನ್ನು ಕೈಗೊಂಡನು.

3. ಮಾರಿದತ್ತನು ರಾಜ್ಯವನ್ನು ತ್ಯಜಿಸಲು ಕಾರಣವೇನು?
ನರಬಲಿ ಕೊಡುವುದಕ್ಕಾಗಿ ರಾಜಪುರಕ್ಕೆ ಭಿಕ್ಷೆಗೆ ಹೊರಟಿದ್ದ ಎಳೆಯ ವಯಸ್ಸಿನ ಸಹೋದರ ಸಹೋದರಿಯಾದ ಅಭಯರುಚಿ ಮತ್ತು ಅಭಯಮತಿಯರನ್ನು ಹಿಡಿದು ತಂದು ತರಾಳ ಚಂಡಕರ್ಮನು ಮಾರಿದತ್ತನಿಗೆ ಒಪ್ಪಿಸಿದನು. ಮಾರಿಯ ಮನೆಯ ಭಯಂಕರ ದೃಶ್ಯದಿಂದ ಆ ಮಕ್ಕಳು ಸ್ವಲ್ಪವೂ ವಿಚಲಿತರಾಗಲಿಲ್ಲ. ಆ ಭಯಾನಕ ವಾತಾವರಣದಲ್ಲಿ ಅತ್ಯಂತ ಕ್ರೂರನಾದ ಮಾರಿದತ್ತನನ್ನು ನೋಡಿದ ಅಭಯರುಚಿ ಕುಮಾರನು ತಾನು ಅಭಯರುಚಿ, ಈಕೆ ನನ್ನ ಸಹೋದರಿ ಅಭಯಮತಿ ಎಂದು ನಿರ್ಭಿತನಾಗಿ ನುಡಿದನು. ಹಾಗು ನಮಗೆ ನೀವು ಕೊಡುವ ಬಲಿಯ ಹಿಂಸೆಯ ಬಗೆಗೆ ಸ್ವಲ್ಪವೂ ಭಯವಿಲ್ಲ. ಆದರೆ ನಿಮಗೆ ತಟ್ಟಬಹುದಾದ ಜೀವಿತಾವಧಿಯ ನರಕದ ಬಗ್ಗೆ ಆಲೋಚಿಸಿದಾಗ ಮನಸ್ಸು ಕರುಣೆಯಿಂದ ತಲ್ಲಣಗೊಳ್ಳುತ್ತದೆ. ಎಂದು ನುಡಿದನು. ಹಿಂಸೆ ಮಾನವನನ್ನು ದಾನವನ್ನಾಗಿಸುತ್ತದೆ.
ಹಿಂಸೆಯನ್ನು ಮಾಡುವುದಿರಲಿ ಹಿಂಸೆಯನ್ನು ಸಂಕಲ್ಪಿಸುವುದು ಘೋರ ಪಾಪ ಇದು ಜನ್ನ ಜನ್ನಾಂತರಕ್ಕೂ ಕಾಡದೇ ಬಿಡದು. ಸಂಕಲ್ಪ ಹಿಂಸೆಯ ಮಾತ್ರಕ್ಕೆ ನಾವು ಹಲವು ಜನ್ಮಗಳ ಭವಾವಳಿಯಲ್ಲಿ ಸಾಗಿ ಬರಬೇಕಾಯಿತು. ನಿಸ್ಸಂಶಯವಾಗಿ ಮಾರಿದತ್ತ ನೀವು ಮಾಡಿರುವ ಪಾಪಗಳ ಪರಿಹಾರವನ್ನು ನರಕದಲ್ಲೇ ನಿವಾರಣೆ ಹೊಂದಬೇಕು. ಎಂಬ ಅಭಯರುಚಿಯ ಮಾತನ್ನು ಕೇಳಿದ ಮಾರಿದತ್ತನು ತುಂಬಾ ಬೆರಗಾದ ಮಾರಿದತ್ತ ಅವರನ್ನು ಬಲಿ ಕೊಡದೆ ಅವರ ವೃತ್ತಾಂತವನ್ನು ತಿಳಿಯ ಬಯಸಿದ. ಅಭಯರುಚಿಯು ತಮ್ಮ ಪೂರ್ವಕಥೆಯನ್ನು ನಿರೂಪಿಸಿದ. ಅಭಯರುಚಿಯ ವೃತ್ತಾಂತವನ್ನೆಲ್ಲ ತಿಳಿದ ಅರಸನ ಮನಸ್ಸು ಸಂಪೂರ್ಣವಾಗಿ ಬದಲಾಯಿತು. ಮತ್ತು ಚಂಡಮಾರಿ ದೇವತೆಯು ತನಗೆ ಹಿಂಸೆಸಲ್ಲದು ಬಲಿಯನಿತ್ತೊಡೆ ಮುನಿವೆಂ ಎಂದು ನುಡಿದಳು. ಹಾಗೂ ಅರಸನು ಅದು ಮಂಗಳ ಸ್ನಾನವೆಂದು ಅರಿಯುವನು. ಸೋದರ ಶಿಶಗಳನ್ನು ಬಿಗಿದಪ್ಪಿಕೊಂಡು ಮಡುಗಟ್ಟಿದ ತನ್ನ ದುಃಖ ಹೊರಹಾಕಿ, ಕುಸುಮದತ್ತನಿಗೆ ಪಟ್ಟವನ್ನು ಕಟ್ಟಿ ಮಾರಿದತ್ತನು ರಾಜ್ಯವನ್ನು ತ್ಯಜಿಸಿದನು.

4. ಅಬಯರುಚಿ ಮತ್ತು ಮಾರಿದತ್ತರಲ್ಲಿ ಯಾರನ್ನು ಮೆಚ್ಚುವಿರಿ? ಏಕೆ?
ಮಾರಿಯ ಮನೆಯ ಭಯಂಕರ ದೃಶ್ಯದಿಂದ ಸ್ವಲ್ಪ ವಿಚಲಿತರಾಗದ ಹಾಗೂ ಹಿಂಸೆಯನ್ನು ಮಾಡುವುದಿರಲಿ ಹಿಂಸೆಯನ್ನು ಸಂಕಲ್ಪಿಸುವು ಘೋರಪಾಪ. ಎಂಬುವುದನ್ನು ಹೇಳಿದ ಅಭಯರುಚಿ ಎಂದರೆ ನನಗೆ ಮೆಚ್ಚುಗೆ ಏಕೆಂದರೆ, ಅಭಯರುಚಿಯ ಧೈರ್ಯ , ಸ್ಥೈರ್ಯ ಕಂಡು ಮಾರಿದತ್ತ ಅರಸನೇ ಬೆಕ್ಕಸ ಬೆರಗಾಗುತ್ತಾನೆ. ಅಭಯರುಚಿಯು ನಿರ್ಭಿತನಾಗಿ ಅರಸನೇ ನಿನಗೆ ಬರಬಹುದಾದ ಕೇಡನ್ನು ನೆನೆದು ಕರುಣೆಯಿಂದ ಮನಸ್ಸು ತಲ್ಲಣಿಸುತ್ತದೆ ಎಂದು ಹೇಳುವನು. ಹಾಗೆಯೇ ಮುಂದುವರಿಸಿ ತಾನು ಕೇವಲ ಸಂಕಲ್ಪ ಹಿಂಸೆಯಿಂದ ಹಲವು ಜನ್ಮಗಳಲ್ಲಿ ದುಃಖವುಂಡೆ, ನೀನು ಮಾಡುತ್ತಿರುವ ಕೃತ್ಯಗಳಿಂದ ನಿಸ್ಸಂಸಯವಾಗಿ ಇದರ ನಿವಾರಣೆ ನರಕದಲ್ಲಿಯೇ ಪಡೆಯಬೇಕು. ಎನ್ನುವಲ್ಲಿ ಅಭಯರುಚಿಯ ಮಾತು ತುಂಬಾ ಅನುಭವಿ ಮತ್ತು ಜ್ಞಾನಮಯವಾಗಿದೆ. ಅದಕ್ಕೆ ಪ್ರತಿಯಾಗಿ ಸ್ವತಃ ದೇವಿಯೇ ಬಲಿಯನಿತ್ತೊಡೆ ಮುನಿವೆಂ (ಬಲಿಯನ್ನು ಕೊಟ್ಟರೆ ಕೋಪಿಸಿಕೊಳ್ಳುವುದಾಗಿ) ಎಂದು ಹೇಳುವಲ್ಲಿ ಅಭಯರುಚಿಯ ಪಾತ್ರ ಮತ್ತಷ್ಟು ಪ್ರಬುದ್ಧವಾಗಿದೆ. ಹಾಗೂ ಅಭಯರುಚಿಯ ನುಡಿಯಿಂದ ಅರಸನ ಮನಸ್ಸು ಪರಿವರ್ತನೆಯಾಗಿ ಜೈನಧರ್ಮದ ಮೂಲ ತತ್ವ ಅಹಿಂಸೆ ಕೂಡ ಸಾಕಾರವಾಗುತ್ತದೆ.

ಈ. ಕೊಟ್ಟಿರುವ ವಾಕ್ಯಗಳ ಸಂದರ್ಭೋಚಿತ ಸ್ವಾರಸ್ಯ ವಿವರವನ್ನು ಬರೆಯಿರಿ.

1. “ಕರುಣದಿಂದೆ ತಲ್ಲಣಿಸಿದಪೆಂ”
ಆಯ್ಕೆ: ಪ್ರಸ್ತುತ ಈ ವಾಕ್ಯವನ್ನು ತೆಕ್ಕುಂಜೆ ಗೋಪಾಲ ಕೃಷ್ಣಭಟ್ಟ ಅವರ ಸಂಪಾದನಾ ಗ್ರಂಥ ಜನ್ನಕವಿ ವಿರಚಿತ ಯಶೋಧರಚರಿತೆ ಕಾವ್ಯದಿಂದ ಆಯ್ದ ಬಲಿಯನಿತ್ತೊಡೆ ಮುನಿವೆಂ ಪದ್ಯ ಪಾಠದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ: ಮಾರಿಗೆ ನರಬಲಿ ಕೊಡುವುದಕ್ಕಾಗಿ ಅಭಯರುಚಿ ಮತ್ತು ಅಭಯಮತಿಯರನ್ನು ಚಂಡಕರ್ಮನೆಂಬ ತರಾಳನು ಹಿಡಿದು ತಂದು ಮಾರಿದತ್ತನಿಗೆ ಒಪ್ಪಿಸಿದ ಸಂದರ್ಭದಲ್ಲಿ ಮಾರಿಯ ಮನೆಯ ಭಯಾನಕತೆಯನ್ನು ಕಂಡು ಅಭಯರುಚಿಯು ಸ್ವಲ್ಪವು ವಿಚಲಿತನಾಗದೆ, ತಾನು ಕೇವಲ ಸಂಕಲ್ಪ ಹಿಂಸೆಯಿಂದ ಜನ್ಮ ಜನ್ಮಾಂತರಗಳಲ್ಲಿ ದುಃಖವುಂಡೆ, ನೀನು ಮಾಡಿರುವ ಕೇಡನ್ನು ಪರಿವೀಕ್ಷಿಸಿದಾಗ ತುಂಬಾ ಕರುಣೆಯಿಂದ ನನ್ನ ಮನಸ್ಸು ತಲ್ಲಣಿಸುತ್ತಿದೆ. (ಕರುಣದಿಂದೆ ತಲ್ಲಣಿಸಿದಪೆಂ) ಎಂದು ಅಭಯರುಚಿಯು ಮಾರಿದತ್ತನಿಗೆ ಹೇಳಿದನು.
ಸ್ವಾರಸ್ಯ: ಮಾರಿದತ್ತನು, ಅಭಯರುಚಿ ಮತ್ತು ಅಭಯಮತಿಯರನ್ನು ನರಬಲಿ ಕೊಡಲು ಸಿದ್ದತೆ ನಡೆಸಿದ್ದರೂ ಸಹ ಅಭಯರುಚಿಯು ಮಾರಿದತ್ತನ ಕೇಡನ್ನು ನೆನೆದು ಅವನಲ್ಲಿ ಕನಿಕರ ತೋರುವುದು ಇಲ್ಲಿ ಸ್ವಾರಸ್ಯಕರವಾಗಿ ವ್ಯಕ್ತವಾಗಿದೆ.

2. “ಬಲಿಯನಿತ್ತೊಡೆ ಮುನಿವೆಂ”
ಆಯ್ಕೆ: ಪ್ರಸ್ತುತ ಈ ವಾಕ್ಯವನ್ನು ತೆಕ್ಕುಂಜೆ ಗೋಪಾಲ ಕೃಷ್ಣಭಟ್ಟ ಅವರ ಸಂಪಾದನಾ ಗ್ರಂಥ ಜನ್ನಕವಿ ವಿರಚಿತ ಯಶೋಧರಚರಿತೆ ಕಾವ್ಯದಿಂದ ಆಯ್ದ ಬಲಿಯನಿತ್ತೊಡೆ ಮುನಿವೆಂ ಪದ್ಯ ಪಾಠದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ: ನಿರ್ಭಿತನಾದ ಅಭಯರುಚಿ ಕುಮಾರನು ತನ್ನನ್ನು ಸಹೋದರಿ ಸಮೇತನಾಗಿ ಪರಿಚಯಿಸಿಕೊಂಡು ತನ್ನ ವೃತ್ತಾಂತವನ್ನೆಲ್ಲ ಹೇಳುವನು. ಅರಸನ ಪ್ರವೃತ್ತಿಯಿಂದ ಅರಸನಿಗೆ ದೊರೆಯಬಹುದಾದ ಮೋಕ್ಷ ನರಕದಲ್ಲಿ ನಿವಾರಣೆ ಎಂದು ನುಡಿಯುವ ಸಂದರ್ಭದಲ್ಲಿ ಚಂಡಮಾರಿ ದೇವತೆಯ ಪ್ರತ್ಯಕ್ಷವಾಗಿ, ಮಕ್ಕಳನ್ನು ಬಂಧಿಸುವುದು ಮಹಾಪರಾದ, ಇನ್ನು ಮುಂದೆ ಪುರಜನರೆಲ್ಲ ಜಲ, ಗಂಧ, ಹೂಮಾಲೆ, , ಅಕ್ಕಿ, ಧೂಪ, ದೀಪ, ಹವಿಸ್ಸು ಮತ್ತು ತಾಂಬೂಲ ಸಮೂಹಗಳಿಂದ ಪೂಜಿಸಲಿ ಎಂದು ನುಡಿಯುವಲ್ಲಿ ಈ ಮೇಲಿನ ಮಾತನ್ನು ಚಂಡಮಾರಿ ದೇವಿಯು ಭಕ್ತರಿಗೆ ಹೇಳುವಳು.
ಸ್ವಾರಸ್ಯ: ಸ್ವತಃ ಚಂಡಮಾರಿಯದೇವಿಯೆ ಪ್ರತ್ಯಕ್ಷವಾಗಿ ನೆರೆದಿದ್ದ ಪುರಜನರನ್ನು ಉದ್ದೇಶಿಸಿ ಬಲಿಯನಿತ್ತೊಡೆ ಮುನಿವೆಂ (ಜೀವಬಲಿ ಕೊಟ್ಟರೆ ಕೋಪಿಸಿಕೊಳ್ಳುವುದಾಗಿ) ಹೇಳುವುದು ಸ್ವಾರಸ್ಯವಾಗಿದೆ.

3. “ನರಕದೊಳ್ ನಿವಾರಣೆವಡೆವಯ್”
ಆಯ್ಕೆ: ಪ್ರಸ್ತುತ ಈ ವಾಕ್ಯವನ್ನು ತೆಕ್ಕುಂಜೆ ಗೋಪಾಲ ಕೃಷ್ಣಭಟ್ಟ ಅವರ ಸಂಪಾದನಾ ಗ್ರಂಥ ಜನ್ನಕವಿ ವಿರಚಿತ ಯಶೋಧರಚರಿತೆ ಕಾವ್ಯದಿಂದ ಆಯ್ದ ಬಲಿಯನಿತ್ತೊಡೆ ಮುನಿವೆಂ ಪದ್ಯ ಪಾಠದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ: ಮಾರಿದತ್ತನು ನರಬಲಿ ಕೊಡಲೆಂದು ಅಭಯರುಚಿ ಮತ್ತು ಅಭಯಮತಿಯರನ್ನು ಹಿಡಿಸಿತರಿಸಿದ್ದನು. ಆಗ ಮಾರಿದತ್ತನ ಭಯಾನಕ ಹಿಂಸಾ ಕೃತ್ಯವನ್ನು ಕಂಡ ಅಭಯರುಚಿಯು, ಕೇವಲ ಸಂಕಲ್ಪ ಹಿಂಸೆಯಿಂದಲೇ ನಾವು ಹಲವು ಜನ್ಮಗಳ ಭವಗಳಲರ್ಲಿ ಕಳೆಯುವಂತಾಯಿತು. ಎಂದು ಹೇಳುವ ಸಂದರ್ಭದಲ್ಲಿ ಅಭಯರುಚಿಯು ಮಾರಿದತ್ತನಿಗೆ ನೀನು ಮಾಡುತ್ತಿರುವ ಪಾಪ ಕೃತ್ಯಗಳಿಗೆ ನರಕದೊಳ್ ನಿವಾರಣೆವಡೆವಯ್ ಎಂದು ಹೇಳುವನು.
ಸ್ವಾರಸ್ಯ: ಅಪರಾಧಕ್ಕೆ ಪರಿಹಾರವೆಂಬುದು ಇದ್ದೇ ಇರುತ್ತದೆ ಅದರೆ ಮಾರಿದತ್ತನದು ಮಹಾಅಪರಾಧ ಇದರ ನಿವಾರಣೆ ನರಕದಲ್ಲಿಯೇ ಸಾಧ್ಯವೆಂಬ ಮಾತು ಅತ್ಯಂತ ಸ್ವಾರಸ್ಯಮಯವಾಗಿ ಮೂಡಿ ಬಂದಿದೆ.

4. “ದೇವನೆ ಆದಂ”
ಆಯ್ಕೆ: ಪ್ರಸ್ತುತ ಈ ವಾಕ್ಯವನ್ನು ತೆಕ್ಕುಂಜೆ ಗೋಪಾಲ ಕೃಷ್ಣಭಟ್ಟ ಅವರ ಸಂಪಾದನಾ ಗ್ರಂಥ ಜನ್ನಕವಿ ವಿರಚಿತ ಯಶೋಧರಚರಿತೆ ಕಾವ್ಯದಿಂದ ಆಯ್ದ ಬಲಿಯನಿತ್ತೊಡೆ ಮುನಿವೆಂ ಪದ್ಯ ಪಾಠದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ: ಅಭಯರುಚಿ ಮತ್ತು ಅಭಯಮತಿಯರ ಜನ್ಮ ಜನ್ಮಾಂತರದ ವೃತ್ತಾಂತನೆಲ್ಲ ತಿಳಿದ ಅರಸನ ಮನಸ್ಸು ಸಂಪೂರ್ಣವಾಗಿ ಬದಲಾಯಿತು. ಹಾಗೂ ಚಂಡಮಾರಿ ದೇವತೆಯು ಸಹ ಹಿಂಸೆಸಲ್ಲದು ಬಲಿಯನಿತ್ತೊಡೆ ಮುನಿವೆಂ ಎಂದು ನುಡಿದಳು. ನಂತರ ಮಾರಿದತ್ತನು ಜೀನ ದೀಕ್ಷೆಯನ್ನು ಕೈಗೊಳ್ಳುವನು ಕೆಲಕಾಲ ಉಗ್ರ ತಪಸ್ಸು ಕೈಗೊಂಡನು. ನಂತರ ಮೂರನೆಯ ಸ್ವರ್ಗದಲ್ಲಿ ನೆಲೆಯೂರುವನು. ಮಾರಿದತ್ತನು ಕಲಿಯನ್ನೇ ಮೂದಲಿಸುವಂತೆ ಸ್ವಯಂ ದೇವನೇ ಆದನು ಎಂದು ಕವಿಯು ಈ ರೀತಿಯಾಗಿ ಹೇಳಿದ್ದಾರೆ.
ಸ್ವಾರಸ್ಯ: ಹಿಂಸಾಕೃತ್ಯಗಳನ್ನು ಮಾಡುತ್ತಿದ್ದ ಮಾರಿದತ್ತನ ಮನ ಪರಿವರ್ತನೆಗೊಂಡು ಉಗ್ರವಾದ ತಪಸ್ಸಿನಿಂದ ಕಲ್ಕಿಯನ್ನೇ ನಂಬುವಂತೆ ಸ್ವಯಂ ದೇವನಾದ ಎಂಬುದು ಸ್ವಾರಸ್ಯ ಪೂರ್ಣವಾಗಿ ವ್ಯಕ್ತವಾಗಿದೆ.

ಭಾಷಾ ಚಟುವಟಿಕೆ

ಅ. ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.

1. ಮಾತ್ರೆಗಳಲ್ಲಿ ಎಷ್ಟು ವಿಧ? ಅವು ಯಾವುವು?
ಮಾತ್ರೆಗಳಲ್ಲಿ 2 ವಿಧ. ಅವು ಲಘು ಮತ್ತು ಗುರು.

2. ಲಘು ಮತ್ತು ಗುರು ಎಂದರೇನು?
ಒಂದು ಮಾತ್ರಾ ಕಾಲದಲ್ಲಿ ಉಚ್ಛರಿಸಲ್ಪಡುವುದು ಲಘು.
ಒಂದಕ್ಕಿಂತ ಹೆಚ್ಚು ಅಂದರೆ ಎರಡು ಮಾತ್ರೆಗಳ ಕಾಲದಲ್ಲಿ ಉಚ್ಛರಿಸಲ್ಪಡುವುದು ಗುರು.

3. ಕಂದ ಪದ್ಯದ ಲಕ್ಷಣವನ್ನು ಬರೆಯಿರಿ.
ಕಂದ ಪದ್ಯದ ಲಕ್ಷಣಗಳು:
•    ನಾಲ್ಕು ಪಾದಗಳಿರಬೇಕು.
•    ಒಂದು ಮತ್ತು ಮೂರನೆಯ ಪಾದಗಳು ಪರಸ್ಪರ ಸಮನಾಗಿದ್ದು ನಾಲ್ಕು ಮಾತ್ರೆಯ ತಲಾ ಮೂರು ಮೂರು ಗಣಗಳಿರಬೇಕು.
•    ಎರಡು ಮತ್ತು ನಾಲ್ಕನೆಯ ಪಾದಗಳ ಪರಸ್ಪರ ಸಮನಾಗಿದ್ದು ನಾಲ್ಕು ಮಾತ್ರೆಗಳ ತಲಾ ಐದೈದು ಗಣಗಳಿರಬೇಕು.
•    ಪ್ರತಿ ಪಾದವೂ ಆದಿಪ್ರಾಸದಿಂದ ಕೂಡಿರಬೇಕು.


You Might Like

Post a Comment

0 Comments