Recent Posts

ನಾನು ಪ್ರಾಸ ಬಿಟ್ಟ ಕತೆ - ೧೦ನೇ ತರಗತಿ ಸಿರಿ ಕನ್ನಡ ಪುಸ್ತಕದ ಪ್ರಶ್ನೋತ್ತರಗಳು


 ನಾನು ಪ್ರಾಸ ಬಿಟ್ಟ ಕತೆ

ಕೃತಿ ಕಾರರ ಪರಿಚಯ
ಮಂಜೇಶ್ವರ ಗೋವಿಂದ ಪೈ ( ೧೮೮೩ ಮಾರ್ಚ್ ೨೩ ೧೯೬೩ ಸೆಪ್ಟೆಂಬರ್ ೬)
ಮಂಜೇಶ್ವರ ಗೋವಿಂದ ಪೈ- ಕನ್ನಡದ ಪ್ರಪ್ರಥಮ ರಾಷ್ಟ್ರಕವಿಗಳು . ಇವರು ಹುಟ್ಟಿದ್ದು ಆಗ ಮದರಾಸು ಪ್ರಾಂತ್ಯಕ್ಕೆ ಸೇರಿದ್ದ ಕಾಸರಗೋಡು ಜಿಲ್ಲೆಯ ಮಂಜೇಶ್ವರದಲ್ಲಿ ರಾಜ್ಯಗಳ ಪುನರ್ವಿಂಗಡಣೆಯಾದಾಗ ತನ್ನೂರು ಕೇರಳಕ್ಕೆ ಹೋದುದನ್ನು ಕಂಡು ಹಳಹಳಿಸಿದ್ದ ಅಪ್ಪಟ ಕನ್ನಡಪ್ರೇಮಿ ಇವರು . ಶ್ರೀಮಂತ ಮನೆತನದಲ್ಲಿ ಹುಟ್ಟಿ , ಪ್ರಾಥಮಿಕ – ಪ್ರೌಢ ಶಾಲಾ ವಿದ್ಯಾಭ್ಯಾಸಗಳನ್ನು ಮಂಗಳೂರಿನಲ್ಲಿ ಮಾಡಿ ಪದವಿಶಿಕ್ಷಣಕ್ಕಾಗಿ ಮದರಾಸಿಗೆ ಹೋದರು .
ಡಾ . ಸರ್ವಪಲ್ಲಿ ರಾಧಾಕೃಷ್ಣನ್ , ಗೋವಿಂದ ಪೈಗಳ ಸಹಪಾಠಿಗಳು , ಪದವಿಯ ಕೊನೆಯ ವರ್ಷದಲ್ಲಿದ್ದಾಗ ತಂದೆಯವರು ತೀರಿಕೊಂಡದ್ದರಿಂದ ಪೈಗಳು ಊರಿಗೆ ವಾಪಸಾಗಬೇಕಾಯಿತು . ಅಂತಿಮ ವರ್ಷದ ಇಂಗ್ಲೀಷ್ ಪರೀಕ್ಷೆಯೊಂದು ಮುಗಿದಿತ್ತು ಅಷ್ಟೆ – ಆದರೆ ಅದರಲ್ಲಿ ಅತ್ಯಧಿಕ ಅಂಕಗಳನ್ನು ಪಡೆದವರೆಂದು ಗೋವಿಂದ ಪೈಗಳಿಗೆ ಚಿನ್ನದ ಪದಕದ ಬಹುಮಾನ ಸಿಕ್ಕಿತು .

ಅ ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರಿಸಿ

೧. ಪೈಗಳ ತಮ್ಮನ ನೂಲುಮದುವೆಯ ದಿನ ಅಂಗಳದ ಏನೇನು ಸಿದ್ಧತೆಗಳಾಗುತ್ತಿದ್ದವು ?
ಉತ್ತರ: ಪೈಗಳ ತಮ್ಮನ ನೂಲುಮದುವೆಯ ದಿನ ಚಪ್ಪರ ಹಾಕಿದ್ದರು. ಚಪ್ಪರದಲ್ಲಿ ಒಂದು ಕಡೆಯಲ್ಲಿ ಲಡ್ಡುಗೆಗಳನ್ನು ಕಟ್ಟುತ್ತಿದ್ದರು. ಮತ್ತೊಂದು ಕಡೆ ಮಂಡಿಗೆಗಳನ್ನು ಮಡಚುತ್ತಿದ್ದರು. ಬೇರೊಂದುಕಡೆ ಸೇವಿಗೆಯನ್ನು ಒತ್ತುತ್ತಿದ್ದರು. ಜೋಳದ ಗದ್ದೆಯಲ್ಲಿ ಗಿಳಿಗಳ ಕೋಲಾಹಲದಂತೆ ಚಪ್ಪರವೆಲ್ಲಾ ಗದ್ದಲ .

೨. ಹಾಡು ಕಿವಿಗೆ ಬಿದ್ದಾಗ ಪೈಗಳು ಏನು ಮಾಡಿದರು?
ಉತ್ತರ: ಚಪ್ಪರದ ಗದ್ದಲ ಮಧ್ಯೆ ಕುಗ್ಗಿದ ಕೊರಳಲ್ಲಿ ಹಾಡು ಕೇಳಿಸಿಕೊಂಡ ಪೈಗಳಿಗೆ ಏನಾಯಿತೋ ಏನು ತೋಚಿತೋ ದೇವರೇ ಬಲ್ಲ. ಮತ್ತೆ ಚಪ್ಪರದ ಗವುಜು ಅವರಿಗೆ ಕೇಳಿಸಲಿಲ್ಲ. ನೆಟ್ಟಗೆ ಹೋದವರು ಅಭ್ಯಾಸದ ಪುಸ್ತಕವನ್ನು ಹಿಡಿದರು. ಬರೆಯತೊಡಗಿದರು. ಏಕಾಂಕ ನಾಟಕ ಎನ್ನಬಹುದಾದ ನಾಡಕವನ್ನು ಇಳಿ ಹೊತ್ತಿನೊಳಗೆ ಬರೆದು ಮುಗಿಸಿದರು.

೩. ಪೈಗಳು ಬರೆದ ಮೊದಲ ಯಕ್ಷಗಾನ ಪ್ರಸಂಗದ ಹೆಸರೇನು ?
ಉತ್ತರ: ಪೈಗಳು ಬರೆದ ಮೊದಲ ಯಕ್ಷಗಾನ ಪ್ರಸಂಗದ ಹೆಸರು ಮಕರಾಷನ ಕಾಳಗ.

೪. ಬಾಸೆಲ್ ಮಿಶನ್ನವರು ಪ್ರಕಟಿಸಿದ್ದ ಯಾವ ಕೃತಿಗಳನ್ನು ಲೇಖಕರು ಓದಿಕೊಂಡರು ?
ಉತ್ತರ: ಮಂಗಳೂರಿನ ಬಾಸೆಲ್ ಮಿಶನ್ ರವರು ಶಬ್ದಮಣಿಗದರ್ಪಣದಿಂದಲೂ , ಛಂದೊಂಬುದಿಯಿಂದಲೂ 1889ರಲ್ಲಿ ಪ್ರಕಟಿಸಿದ ಹಳಗನ್ನಡ ವ್ಯಾಕರಣ ಸೂತ್ರಗಳು ಎಂಬ ಪುಸ್ತಕವನ್ನು , ಅದರಲ್ಲಿ ಮುಖ್ಯತಃ ಛಂದೋ ಲಕ್ಷಣ ಪ್ರಕರಣವನ್ನು, ಕನ್ನಡ ಜೈಮಿನಿ ಭಾರತ, ಗದುಗಿನ ಭಾರತ, ಶಬರಶಂಕರ ವಿಲಾಸವೇ, ಮೊದಲಾದ ಮಹಾಕಾವ್ಯಗಳನ್ನು ಲೇಖಕರು ಓದಿದರು.

೫. “ ಬಿಲ್ಲ ಹಬ್ಬ ” ವನ್ನು ರಚಿಸಿದ ಕವಿ ಯಾರು ?
ಉತ್ತರ: “ ಬಿಲ್ಲ ಹಬ್ಬ ” ವನ್ನು ರಚಿಸಿದವರು ತುಳುನಾಡಿನ ಸರ್ವಶ್ರೇಷ್ಠ ಯಕ್ಷಗಾನ ಕವಿಯಾದ ಮೂಲ್ಕಿಯ ವಾಸುದೇವ ಪ್ರಭುರವರು.

೬. ಮುದ್ದಣ ಕವಿ ಲೇಖಕರಿಗೆ ಏನೆಂದು ಸಲಹೆ ಕೊಟ್ಟರು ?
ಉತ್ತರ: ಲೇಖಕರು 1899ರಲ್ಲಿ ಶೇಕಸ್ಪಿಯರ್ “ಟೈಲ್ ನೈಟ್” ಎಂಬ ನಾಟಕದ ಮೊದಲನೆಯ ಅಂಕದಿಂದ ಕೆಲವು ನೋಟಗಳನ್ನು ವೃತ್ತ-ಕಂದಗಳಲ್ಲಿ ಭಾಷಾಂತರಗೊಳಿಸಿ, ಅವನ್ನು ಶ್ರೀ ನಂದಳಿಕೆ ಲಕ್ಷ್ಮೀ ನಾರಾಣಪ್ಪ ನವರಿಗೆ ಕಳಿಸಿ ಕೊಟ್ಟಾಗ ಅವರು ಮುಂದುವರಿಸಿ ಎಂದು ಹೇಳಿ ಕಳುಹಿಸಿದರು.

೭. ಪ್ರಾಸ ಬಿಡಬೇಕೆಂದು ನಿರ್ಧರಿಸಿದ ಬಳಿಕ ಪೈಗಳು ಯಾವ ಕೃತಿಯನ್ನು ಬರೆದರು ?
ಉತ್ತರ: ಪ್ರಾಸ ಬಿಡಬೇಕೆಂದು ನಿರ್ಧರಿಸಿದ ಬಳಿಕ ಲೇಖಕರು ರವೀಂದ್ರನಾಥ ಠಾಕೂರರ ಅಯೀ ಭುವನ ಮನೋಮೋಹಿನಿ ಎಂದು ಮೊದಲಾಗುವ ” ಭಾರತ ಲಕ್ಷ್ಮೀ ” ಎಂಬ ಬಂಗಾಳಿಗೀತವನ್ನು ಕನ್ನಡಿಸಿದರು. ರವೀಂದ್ರನಾಥ ಠಾಕೂರರ ಶಿಶು ಎಂಬ ಗ್ರಂಥದಲ್ಲಿಯ ವಿದಾಯ ಎಂಬ ಕವಿತೆಯನ್ನು, ಶೇಕ್ ಮುಹಮ್ಮದ್ ಇಕ್ಭಾಲರ ಹಿಂದೂಸ್ತಾನ ಹಮಾರ ಎಂಬ ಉರ್ದುಗೀತವನ್ನು ಕನ್ನಡಿಸಿದರು.
You Might Like

Post a Comment

0 Comments