Recent Posts

ಹೂವಾದ ಹುಡುಗಿ - ೮ನೇ ತರಗತಿ ಸಿರಿ ಕನ್ನಡ ಪುಸ್ತಕದ ಪ್ರಶ್ನೋತ್ತರಗಳು

 
 
 5.ಹೂವಾದ ಹುಡುಗಿ          
                                                                               
  ಕೃತಿಕಾರರ ಪರಿಚಯ
 
 
ಎ.ಕೆ ರಾಮಾನುಜನ್ ಅವರು ಕವಿ, ಚಿಂತಕ, ಪ್ರಾಧ್ಯಾಪಕ, ಜಾನಪದತಜ್ಞ ಹೀಗೆ ವಿವಿದ ಪ್ರತಿಭೆಗಳ ಸಂಗಮವೆಂದು ಖ್ಯಾತರಾದವರು. ಇವರ ಪೂರ್ಣ ಹೆಸರು ಅತ್ತಿಪಟ್ ಕೃಷ್ಣಸ್ವಾಮಿ ರಾಮಾನುಜನ್. ಇವರು ಮಾರ್ಚ್ 16 – 1929 ರಲ್ಲಿ ಮೈಸೂರುನಲ್ಲಿ ಜನಿಸಿದರು. ಕನ್ನಡ ಹಾಗೂ ಇಂಗ್ಲೀಷ್ ಭಾಷೆಗಳಲ್ಲಿ ಮಹತ್ವದ ಕೊಡುಗೆ ನೀಡಿದ್ದಾರೆ. ಕನ್ನಡದಲ್ಲಿ ‘ಹೊಕ್ಕುಳಲ್ಲಿ ಹೂವಿಲ್ಲ ಮತ್ತು  ಇತರ ಕವಿತೆಗಳು’, ‘ಕುಂಟೋಬಿಲ್ಲೆ’, ‘ಮತ್ತೊಬ್ಬನ ಆತ್ಮ ಚರಿತ್ರೆ’ ಪ್ರಸಿದ್ಧ ಕೃತಿಗಳು. ಕನ್ನಡ ವಚನ ಸಾಹಿತ್ಯವನ್ನು ‘ಸ್ಪೀಕಿಂಗ್ ಆಫ್ ಶಿವ’ ಎಂದು ಅನುವಾದಿಸಿದ್ದಾರೆ. ಇವರ ಸಾಹಿತ್ಯದಲ್ಲಿನ ಸಾಧನೆಗೆ 1976 ರಲ್ಲಿ ಭಾರತ ಸರ್ಕಾರವು ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. 1983 ರಲ್ಲಿ ಪ್ರಸಿದ್ಧ ‘ಮ್ಯಾಕ್ಅರ್ಥರ್ ಫೆಲೋಷಿಪ್’ ಗೌರವ ಸಂದಿದೆ. ಪ್ರಸ್ತುತ ‘ಹೂವಾದ ಹುಡುಗಿ’ ಜನಪದ ಕಥೆಯನ್ನು ಶ್ರೀ ಎ. ಕೆ. ರಾಮಾನುಜನ್ ಅವರು ಸಂಪಾದಿಸಿರುವ ‘ಸಾಲು ಸಂಪಿಗೆ ನೆರಳು’ ಕೃತಿಯಿಂದ ಆಯ್ದು ನಿಗದಿಪಡಿಸಿದೆ

ಆಶಯ ಭಾವ

ಕೂಲಿಮಾಡಿ ತಮ್ಮನ್ನು ಸಾಕುತಿದ್ದ ತಾಯಿಯ ಕಷ್ಟವನ್ನು ನೋಡಿದ ಹೆಣ್ಣು ಮಗಳು ತಾಯಿಗೆ ನೆರವಾಗಲು ತಾನು ಹೂವಿನಗಿಡವಾಗಿ ಹೂಮಾರಿ ಹಣವನ್ನು ಸಂಗ್ರಹಿಸುವ, ಈ ಹೂವಿನ ರಹಸ್ಯವನ್ನು  ತಿಳಿದು  ಆಕೆಯನ್ನೇ ಮದುವೆಯಾಗುವ  ದೊರೆಮಗ.  ಹೂವಿನ  ಗಿಡವಾಗುವ ಹುಡುಗಿಯು  ತನ್ನ  ಗಂಡನ  ತಂಗಿಯಿಂದಲೇ  ಕಷ್ಟಕ್ಕೆ  ಸಿಲುಕಿ  ಯಾತನೆಯನ್ನನುಭವಿಸಿ, ಕೊನೆಗೆ ಎಲ್ಲಾ ತೊಂದರೆಗಳಿಂದ ಪಾರಾಗಿ ದಂಪತಿಗಳು ಒಂದಾಗುವ ಜನಪದ ಸೊಗಡಿನ ಕಥೆಯಿದು. ಇಲ್ಲಿ ಹೆಣ್ಣಿನ ಸಹನೆ, ದಾಂಪತ್ಯದ ಅನ್ಯೋನ್ಯತೆ, ಪ್ರೀತಿ, ಸಹಕಾರ ಮನೋಭಾವಗಳ ಮೌಲ್ಯವನ್ನು ತಿಳಿಸುವ ಆಶಯ ಇಲ್ಲಿದೆ.

ಪದಗಳ ಅರ್ಥ
ಐಸಿರಿ         –     ಐಶ್ವರ್ಯ,   ಸಂಪತ್ತು;
ಕೊಪ್ಪರಿಗೆ  –      ಕಡಾಯಿ ;
ಗುಮ್ಮಾಗಿ   –     ಸುಮ್ಮನೆ,   ಯಾರ ಬಳಿಯಲ್ಲಿ ಮಾತನಾಡದೇ;
ತಿಕ್ಕಲು       –       ಬುದ್ಧಿಭ್ರಮಣೆ  , ಹುಚ್ಚು ;
ಮೊಗೆ        –     ಬೊಗಸೆ ತುಂಬ;
ಯಥಾಸ್ಥಿತಿ  –   ಮೊದಲು ಇದ್ದ ರೀತಿ;
ದರ್ಸು        –     ವಸ್ತ್ರ , ಬಟ್ಟೆ;

ಅಭ್ಯಾಸ

ಅ. ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.
1. ಮುದುಕಿಯ ಕಿರಿಯ ಮಗಳು ಏಕೆ ಹೂವಿನ ಗಿಡವಾದಳು?
2.  ದೊರೆಯ ಹೆಂಡತಿ ಹೂವಿಗೆ ಎಷ್ಟು ಹಣ ಕೊಟ್ಟಳು?
3. ಹೂವಾಗುವ ಹುಡುಗಿಯ ವಿಚಾರವನ್ನು ದೊರೆಯ ಮಗ ಯಾರ ಬಳಿ ಹೇಳಿದ?
4. ದೊರೆಯ ಚಿಕ್ಕಮಗಳು ಗೆಳತಿಯರೊಂದಿಗೆ ಎಲ್ಲಿಗೆಹೋದಳು?
5. ಪಟ್ಟಣಕ್ಕೆ ಹಿಂದಿರುಗುವಾಗ ಅಕ್ಕ ತಮ್ಮನಿಗೆ ಏನು ಉಡುಗೊರೆ ನೀಡಿದಳು?

ಆ. ಕೊಟ್ಟಿರುವ ಪ್ರಶ್ನೆಗಳಿಗೆ ಮೂರು-ನಾಲ್ಕು ವಾಕ್ಯದಲ್ಲಿ ಉತ್ತರಿಸಿ.
1.  ಅರಮನೆಗೆ ಹೂವು ಎಲ್ಲಿಂದ ಬರುತ್ತದೆಂದು ದೊರೆಮಗ ಹೇಗೆ ಕಂಡು ಹಿಡಿದನು?
 2. ತಂಗಿ ಹೇಗೆ ಹೂವಿನ ಗಿಡವಾಗುತ್ತಿದ್ದಳು?
3.   ದೊರೆಯ ಮಗ ದೇಶಾಂತರ ಹೋಗಲು ಕಾರಣವೇನು?
4. ಅರ್ಧಂಬರ್ದ ದೇಹವಾಗಿದ್ದವಳು ಹೇಗೆ ರಾಣಿಯ ಅರಮನೆ ಸೇರಿದಳು?

ಇ. ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯದಲ್ಲಿ ಉತ್ತರಿಸಿ.
1.  ದೊರೆಯ ಕಿರಿಯ ಮಗಳು ತನ್ನ ಅತ್ತಿಗೆಗೆ ಮಾಡಿದ ದ್ರೋಹವೇನು?
2. ದೊರೆಯ ಮಗ ತನ್ನ ಹೆಂಡತಿಯನ್ನು ಹೇಗೆ ಪುನಃ ಪಡೆದನು?

ಈ. ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ.

1. ಅಕ್ಕಯ್ಯ ಅಮ್ಮನಿಗೆ ಹೇಳಬೇಡ ಮುಚ್ಚಿಡು
2.  ಈ ಸಂಪತ್ತಿಗೇಕೆ ನನ್ನ ಮದುವೆ ಆದಿರಿ?
 3.  ಯಾರಾದರೂ ಅನ್ನ ನೀರು ಕೊಟ್ಟರೆ ಜೀವ ಉಳಿಸಿಕೋ
4. ಅವಳನ್ನು ನೋಡಿದರೆ ನಿಮ್ಮ ತಮ್ಮನ ಹೆಂಡತಿಯಂತೆ ಕಾಣ್ತಾಳೆ,

ಉ. ಖಾಲಿಬಿಟ್ಟ ಜಾಗವನ್ನು ಸೂಕ್ತ ಪದಗಳಿಂದ ತುಂಬಿರಿ.
1. ನೋಡಕ್ಕಯ್ಯ ನಾನಿಲ್ಲಿ ________ ಧ್ಯಾನಮಾಡಿ ಕುತುಕೋತಿನಿ.
2. ಅವರು ಮಾತಾಡಲೇ ಇಲ್ಲವಲ್ಲ, ಮತ್ತೇಕೆ _________ ಯಾದರು.
3.  ನರಮನುಷ್ಯರು _____________ ಆಗೋದುಂಟೆ ?
4. ದಿನವಹಿ ಮೈಮೇಲಿನ ಗಾಯಗಳಿಗೆ _________ ಹಾಕಿ ವಾಸಿಮಾಡಿದರು.

 
ಸೈದ್ಧಾಂತಿಕ ಭಾಷಾಭ್ಯಾಸ
ನಾಮವಾಚಕಗಳ ಪರಿಚಯಾತ್ಮಕ ವಿವರ
 
ನಾಮವಾಚಕಗಳು : ನಾಮವಾಚಕ ಪ್ರಕೃತಿಗಳನ್ನು ವಸ್ತುವಾಚಕ, ಗುಣವಾಚಕ, ಸಂಖ್ಯಾವಾಚಕ, ಸಂಖ್ಯೇಯವಾಚಕ, ಭಾವನಾಮ, ಪರಿಮಾಣವಾಚಕ, ದಿಗ್ವಾಚಕ, ಸರ್ವನಾಮ ಎಂಬುದಾಗಿ ಅನೇಕ ಗುಂಪುಗಳಾಗಿ ವಿಂಗಡಿಸಬಹುದು.
ವಸ್ತುವಾಚಕ  : ವಸ್ತುಗಳ ಹೆಸರನ್ನು ಹೇಳುವ ಪದಗಳೇ ವಸ್ತುವಾಚಕಗಳು. ವಸ್ತುಗಳನ್ನು ಚೇತನ (ಚೇತನವುಳ್ಳ), ಅಚೇತನ (ಚೇತನವಿಲ್ಲದ್ದು)   ಎಂದು ವಿಭಾಗಿಸಲಾಗಿದೆ.
ಉದಾ    : ಮನುಷ್ಯ, ಪ್ರಾಣಿ, ಪಕ್ಷಿ ಇವು ಚೇತನವುಳ್ಳವು.     ನೆಲ, ಜಲ, ಹಣ್ಣು, ಕಾಯಿ, ಮನೆ, ಬೆಟ್ಟ ಇವು ಚೇತನವಿಲ್ಲದವು.
ಇಂತಹ ವಸ್ತುವಾಚಕಗಳನ್ನು ರೂಢನಾಮ, ಅಂಕಿತನಾಮ, ಅನ್ವರ್ಥನಾಮಗಳೆಂದು ಮೂರು ವಿಭಾಗ ಮಾಡಲಾಗಿದೆ.
ರೂಢನಾಮ : ರೂಢಿಯಿಂದ ಬಂದಿರುವ ನದಿ, ಪರ್ವತ, ಮನುಷ್ಯ, ಹೆಂಗಸು, ಮರ, ದೇಶ ಮುಂತಾದ ಪದಗಳು ರೂಢನಾಮಗಳು.  
ಅಂಕಿತನಾಮ : ವ್ಯವಹಾರಕ್ಕಾಗಿ ಅಥವಾ ಗುರುತಿಸಲು ಇಟ್ಟ ಹೆಸರುಗಳಾದ  ಕಾವೇರಿ, ನಕುಲ, ಹಿಮಾಲಯ, ಶಂಕರ, ಬೇವು ಬೆಂಗಳೂರು, ಮುಂತಾದ ಹೆಸರುಗಳೇಅಂಕಿತನಾಮಗಳು.
ಅನ್ವರ್ಥನಾಮ : ಅರ್ಥಕ್ಕೆ ಅನುಗುಣವಾಗಿ ರಚನೆಯಾದ ವ್ಯಾಪಾರಿ, ವಿದ್ವಾಂಸ, ರೋಗಿ ಮುಂತಾದ ಪದಗಳೇ ಅನ್ವರ್ಥನಾಮಗಳು.
ಗುಣವಾಚಕ : ವಸ್ತುಗಳ ಗುಣ, ರೀತಿ, ಸ್ವಭಾವಗಳನ್ನು ಹೇಳುವ ವಿಶೇಷಣಗಳೇ  

ಗುಣವಾಚಕಗಳು.
 ಉದಾ  : ಒಳ್ಳೆಯ, ಕೆಟ್ಟ, ಹೊಸದು, ದೊಡ್ಡದು ಇತ್ಯಾದಿ ಪದಗಳು.
ಸಂಖ್ಯಾವಾಚಕ : ಸಂಖ್ಯೆಯನ್ನು ಸೂಚಿಸುವ ಪದಗಳೇ ಸಂಖ್ಯಾವಾಚಕಗಳು.
 ಉದಾ  : ಒಂದು, ಎರಡು, ಹತ್ತು, ನೂರೈದು, ಸಾವಿರ, ಲಕ್ಷ ಇತ್ಯಾದಿ.
ಸಂಖ್ಯೇಯವಾಚಕ  :  `ಮೂವರು  ಮಕ್ಕಳು,  `ನಾಲ್ಕನೆಯ  ತರಗತಿ,  `ಐವರು  ರಾಜಭಟರು, `ಇಪ್ಪತ್ತೆರಡನೆಯ  ತಾರೀಕು.  ಇಲ್ಲಿ  `ಮೂವರು,  `ನಾಲ್ಕನೆಯ,  `ಐವರು,  `ಇಪ್ಪತ್ತೆರಡನೆಯ ಪದಗಳು ಸಂಖ್ಯೆಯಿಂದ ಕೂಡಿರುವ ವಸ್ತುಗಳನ್ನು ಸೂಚಿಸುತ್ತವೆ. ಹೀಗೆ-ಸಂಖ್ಯೆಯಿಂದ  ಕೂಡಿರುವ  ವಸ್ತುಗಳನ್ನು  ಹೇಳುವ  ಪದಗಳೆಲ್ಲ  ಸಂಖ್ಯೇಯ  ವಾಚಕಗಳು  (ಎರಡನೆಯ, ನಾಲ್ಕನೆಯ, ಹತ್ತನೆಯ ಇತ್ಯಾದಿ) ಇವುಗಳನ್ನು ಇತ್ತೀಚೆಗೆ ಎರಡನೇ, ನಾಲ್ಕನೇ, ಹತ್ತನೇ ಎಂದೂ  ಸಹಾ ಕೆಲವರು ಬಳಸುತ್ತಿದ್ದಾರೆ.
ಭಾವನಾಮ : ವಸ್ತು ಮತ್ತು ಕ್ರಿಯೆಗಳ ಭಾವವನ್ನು ತಿಳಿಸುವ ಪದಗಳೇ ಭಾವನಾಮ.
 ಉದಾ  :   ಕೆಚ್ಚನೆಯದರ ಭಾವ - ಕೆಂಪು      
                     ಬಿಳಿದರ ಭಾವ      - ಬಿಳುಪು       
                       ಹಿರಿದರ ಭಾವ     - ಹಿರಿಮೆ       
                      ನೋಡುವುದರ ಭಾವ- ನೋಟ
ಪರಿಮಾಣವಾಚಕ : `ಅಷ್ಟು ದೊಡ್ಡ ಮರವನ್ನು ಹೇಗೆ ಕಡಿದರು? `ಇಷ್ಟು ಜನರು ಇಲ್ಲಿ ಸೇರಿ ಏನು ಮಾಡುತ್ತಾರೆ? `ತರಗತಿಯಲ್ಲಿ ಎಷ್ಟು ವಿದ್ಯಾರ್ಥಿಗಳಿದ್ದಾರೆ? - ಈ ವಾಕ್ಯಗಳಲ್ಲಿ `ಅಷ್ಟು  `ಇಷ್ಟು, `ಎಷ್ಟು ಎಂಬ ಪದಗಳಿವೆ. ಈ ಪದಗಳು ನಿರ್ದಿಷ್ಟ ಅಳತೆ, ಸಂಖ್ಯೆಗಳನ್ನು ಹೇಳುವುದಿಲ್ಲ. ಕೇವಲ ಪರಿಮಾಣ  ಅಥವಾ  ಗಾತ್ರವನ್ನು  ಸೂಚಿಸುತ್ತವೆ.  ಹೀಗೆ  -  ವಸ್ತುವಿನ  ಪರಿಮಾಣ, ಗಾತ್ರವನ್ನು ಹೇಳುವ `ಅಷ್ಟು, `ಇಷ್ಟು, `ಹಲವು, `ಕೆಲವು, `ಎನಿತು, `ಅನಿತು ಆಸು, ಈಸು, ಏಸು ಮುಂತಾದ ಪದಗಳೇ `ಪರಿಮಾಣವಾಚಕಗಳು.
ದಿಗ್ವಾಚಕ : ದಿಕ್ಕುಗಳನ್ನ ಸೂಚಿಸುವ ಪದಗಳೇ ದಿಗ್ವಾಚಕಗಳು.
ಉದಾ  : ಮೂಡಣ, ತೆಂಕಣ, ಪಡುವಣ, ಬಡಗಣ, ಪೂರ್ವ, ಪಶ್ಚಿಮ,  ಆಗ್ನೇಯ, ದಕ್ಷಿಣ, ಉತ್ತರ, ಈಶಾನ್ಯ, ಇತ್ಯಾದಿ.
ಸರ್ವನಾಮ :  ರಾಜಣ್ಣ  ಅಜ್ಜನ  ಮನೆಗೆ  ಹೊರಟನು.  ಅವನ  ತಮ್ಮ  ಕೃಷ್ಣನು  `ನಾನೂ ಬರುತ್ತೇನೆ  ಎಂದನು.  ತಂಗಿ ರಾಜೀವಿ  `ತಾನೂ  ಬರುವೆನೆಂದಳು.  ಆಗ  ರಾಜಣ್ಣ  `ನೀವು ಇಬ್ಬರೂ ಆದಷ್ಟು ಬೇಗ ತಯಾರಾಗಿರಿ ಎಂದನು. ಇಲ್ಲ್ಲಿ ಅವನ, ನಾನೂ, ತಾನೂ, ನೀವು ಎಂಬ ಪದಗಳು ಬೇರೆ ಬೇರೆ ನಾಮಪದಗಳ ಬದಲಿಗೆ ಪ್ರಯೋಗಿಸಲ್ಪಟ್ಟವು. ಹೀಗೆ –ನಾಮಪದಗಳ ಸ್ಥಾನದಲ್ಲಿ  ಬಂದು  ಅವುಗಳ  ಕಾರ್ಯವನ್ನು  ನಿರ್ವಹಿಸುವ  ಪದಗಳೇ  ಸರ್ವನಾಮಗಳು.  ಈ ಸರ್ವನಾಮಗಳನ್ನು ಪುರುಷಾರ್ಥಕ,  ಪ್ರಶ್ನಾರ್ಥಕ  ಮತ್ತು  ಆತ್ಮಾರ್ಥಕ  ಸರ್ವನಾಮಗಳೆಂದು ಮೂರು ವಿಧಗಳಾಗಿ ವಿಂಗಡಿಸಲಾಗಿದೆ.
ಪುರುಷಾರ್ಥಕ ಸರ್ವನಾಮ : ಇದನ್ನು ಮತ್ತೆ ಮೂರು ವಿಭಾಗ ಮಾಡಿದೆ.
 -  ಉತ್ತಮ ಪುರುಷ :  ನಾನು                ನಾವು  
-  ಮಧ್ಯಮ ಪುರುಷ :  ನೀನು                ನೀವು
 -  ಪ್ರಥಮ  ಪುರುಷ/ಅನ್ಯ  ಪರುಷ  :  ಅವನು
 -  ಇವನು  ಅವಳು  -  ಇವಳು ಅವರು
 - ಇವರು  ಅದು - ಅವು ಇದು - ಇವು
(ಇತ್ತೀಚೆಗೆ ಇವುಗಳನ್ನು ಪ್ರಥಮ, ದ್ವಿತೀಯ, ತೃತೀಯ ಪುರುಷಗಳೆಂದು ಹೇಳುವ ವಾಡಿಕೆ ಆರಂಭವಾಗಿದೆ.)
ಪ್ರಶ್ನಾರ್ಥಕ ಸರ್ವನಾಮ : ಯಾರು   ಯಾವುದು   ಏನು    ಯಾವನು    ಯಾವಳು
ಆತ್ಮಾರ್ಥಕ ಸರ್ವನಾಮ : ತಾನು   ತಾವು   ತನ್ನ   ತಮ್ಮ

ಅಭ್ಯಾಸ ಚಟುವಟಿಕೆ

ಅ. ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿ.
1.  ನಾಮಪ್ರಕೃತಿಗಳ ವಿಧಗಳಾವುವು?
2.    ಭಾವನಾಮ ಎಂದರೇನು?
3.  ಸರ್ವನಾಮ ಎಂದರೇನು? ವಿಧಗಳಾವುವು?
4.   ಪುರುಷಾರ್ಥಕ ಸರ್ವನಾಮಗಳಲ್ಲಿ ಎಷ್ಟು ವಿಧ?

ಪ್ರಾಯೋಗಿಕ ಭಾಷಾಭ್ಯಾಸ

1.  ಕೊಟ್ಟಿರುವ ಪದಗಳಲ್ಲಿ ರೂಢ, ಅನ್ವರ್ಥ ಮತ್ತು ಅಂಕಿತನಾಮಗಳನ್ನು ವಿಂಗಡಿಸಿ ಬರೆಯಿರಿ.
ಕಾಲ   ಕಾಳಿ   ದೇವಸ್ಥಾನ   ವ್ಯಾಪಾರಿ   ರಾಜ   ಅಡಗೂರು    
2.  ಕೊಟ್ಟಿರುವ ಪದಗಳಲ್ಲಿರುವ ಪ್ರಥಮ ಪುರುಷ, ಮಧ್ಯಮ ಪುರುಷ ಮತ್ತು ಉತ್ತಮ ಪುರುಷ ಪದಗಳನ್ನು ಆರಿಸಿ ಬರೆಯಿರಿ.   
ಇವನು   ನೀನು  ಅವರು   ನಾನು   ಅವಳು   ಇವಳು

ಚಟುವಟಿಕೆ
1.  ಕೊಟ್ಟಿರುವ ಪದಗಳನ್ನು ಸ್ವಂತ ವಾಕ್ಯಗಳಲ್ಲಿ ಬಳಸಿ.
ಧ್ಯಾನಮಾಡು  ಬಡವರು  ಸಂಪಾದನೆ  ಉಡುಗೊರೆ
2.  ಕೊಟ್ಟಿರುವ ವಾಕ್ಯಗಳನ್ನು ಗ್ರಾಂಥಿಕ ರೂಪದಲ್ಲಿ ಬರೆಯಿರಿ.
1. ನೀನು ಹೂ ತಕ್ಕೊಂಡು ಹೋಗಿ ಮಾರ್ಕೊಂಡು ಬಂದ್ಬಿಡೇ.
2. ದಾದೇರು ಗೋಗರೆದದ್ದಕ್ಕೆ ಒಪ್ಕತಾಳೆ.
3. ತಾಯಿ ಅಣ್ಣನ ಕೇಳ್ಕೊಂಡು ಕರ್ಕೊಂಡೋಗು ಅನ್ತಾಳೆ.

ಪೂರಕ ಓದು
1.  ಎ. ಕೆ. ರಾಮಾನುಜನ್ ರವರು ಸಂಪಾದಿಸಿರುವ ಸಾಲುಸಂಪಿಗೆ ಮರದ  ನೆರಳು ಜನಪದ ಕಥೆಗಳನ್ನು ಓದಿರಿ.
2.  ಡಾ. ಜೀ.ಶಂ.ಪರಮಶಿವಯ್ಯ ಅವರು ಸಂಗ್ರಹಿಸಿರುವ ಆಯ್ದ ಜನಪದ ಕಥೆಗಳನ್ನು ಓದಿರಿ.
3.  ಡಾ.  ಡಿ.ಕೆ.  ರಾಜೇಂದ್ರ  ಅವರು  ಸಂಪಾದಿಸಿರುವ  ಬೆದರುಗೊಂಬೆ  ಮತ್ತು  ಇತರ  ಜನಪದ ಕಥೆಗಳನ್ನು ಓದಿರಿ.             

ಅ. ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.

೧. ಮುದುಕಿಯ ಕಿರಿಯ ಮಗಳು ಏಕೆ ಹೂವಿನ  ಗಿಡವಾದಳು?
ಉತ್ತರ :
ಒಂದು ಊರಿನಲ್ಲಿ ಒಬ್ಬ ಮುದುಕಿ ಇದ್ದಳು. ಇವಳು ಕೂಲಿಮಾಡಿ ತನ್ನ ಇಬ್ಬರು ಹೆಣ್ಣು ಮಕ್ಕಳನ್ನು ಸಾಕುತ್ತಿದ್ದಳು. ಅಮ್ಮ ಕೂಲಿ ಮಾಡಿ ನಮ್ಮನ್ನು ಸಾಕುವುದು ಕಷ್ಟ ಆಗುತ್ತದೆ ಎಂದು ಮುದುಕಿಯ ಕಿರಿ ಮಗಳು ಹೂವಿನ ಗಿಡವಾದಳು.

೨. ದೊರೆಯ ಹೆಂಡತಿ ಹೂವಿಗೆ   ಎಷ್ಟು ಹಣ ಕೊಟ್ಟಳು?
ಉತ್ತರ :
ದೊರೆಯ ಹೆಂಡತಿ ಹೂವಿಗಾಗಿ ಒಂದು ಬೊಗಸೆ ತುಂಬ ಹಣಕೊಟ್ಟಳು.

೩. ಹೂವಾಗುವ ಹುಡುಗಿಡ ವಿಚಾರವನ್ನು ದೊರೆಯ ಮಗ ಯಾರ ಬಳಿ ಹೇಳಿದ?
ಉತ್ತರ :
ಹೂವಾಗುವ ಹುಡುಗಿಯ  ವಿಚಾರವನ್ನು ದೊರೆಯ ಮಗ ಮಂತ್ರಿಯ ಮಗ ಬಳಿ ಹೇಳಿದನು.

೪. ದೊರೆಯ ಚಿಕ್ಕಮಗಳು ಗೆಳತಿಯರೊಂದಿಗೆ ಎಲ್ಲಿಗೆ ಹೋದಳು?
ಉತ್ತರ :
ದೊರೆಯ ಚಿಕ್ಕಮಗಳು ಗೆಳತಿರೊಂದಿಗೆ ರೊಂದಿಗೆ ‘ಸುರಹೊನ್ನೆ’ ತೋಟಕ್ಕೆ ಹೋದರು.

೫. ಪಟ್ಟಣಕ್ಕೆ ಹಿಂದಿರುವಾಗ ಅಕ್ಕ ತಮ್ಮನಿಗೆ ಏನು ಉಡುಗೊರೆ ನೀಡಿದಳು?
ಉತ್ತರ :
ಪಟ್ಟಣಕ್ಕೆ ಹಿಂದಿರುಗುವಾಗ ಅಕ್ಕ ತಮ್ಮನಿಗೆ  ಬೇಕಾದಷ್ಟು  ಐಸಿರಿಯ ಉಡುಗೊರೆ ನೀಡಿದಳು.

ಆ. ಕೊಟ್ಟಿರುವ ಪ್ರಶ್ನೆಗಳಿಗೆ ಮೂರು-ನಾಲ್ಕು ವಾಕ್ಯದಲ್ಲಿ ಉತ್ತರಿಸಿ.

೧. ಅರಮನೆಗೆ ಹೂವು ಎಲ್ಲಿಂದ ಬರುತ್ತದೆಂದು ದೊರೆಮಗ ಹೇಗೆ ಕಂಡು ಹಿಡಿದನು?
ಉತ್ತರ :
ಪ್ರತಿ ದಿನ ಹೂವಾದ ಹುಡುಗಿಯ ಅಕ್ಕ ಅರಮನೆಗೆ ತಂದು ಕೊಡುತ್ತಿದ್ದ ಹೂವು ದೊರೆಮಗನ ಕಣ್ಣಿಗೆ ಬಿತ್ತು. ಒಳ್ಳೆ ಗಮಗಮ ಅನ್ನುತ್ತಿತ್ತು. ಇಂತಹ ಸೊಗಸಾದ ಹೂವನ್ನು ಅವನೆಂದೂ ನೋಡೇ ಇರಲಿಲ್ಲ. ಈ ಹೂವನ್ನು ಯಾರು ತಂದು ಕೊಡುತ್ತಾರೆ ಎಂದು ಯೋಚಿಸಿ ಆ ದೊಡ್ಡ ಹುಡುಗಿ ತಂದು ಕೊಡುವುದನ್ನು ನೋಡಿ ಅವಳನ್ನೇ ಹಿಂಬಾಲಿಸಿ ಹೋಗಿ ನೋಡಿದ. ಈ ಮನೆಯ ಸುತ್ತ ಮುತ್ತ ಹೂವಿನ ಗಿಡಗಳಿಲ್ಲದನ್ನು   ಗಮನಿಸಿ ಇಂಥ ಹೂವು ಇವರಿಗೆಲ್ಲಿಂದ ಬರುತ್ತವೆ ಎಂದು ಯೋಚನೆ ಮಾಡಿ ಅರಮನೆಗೆ ಬಂದ. ಮಾರನೆ ದಿನ ಸೂರ್ಯ ಹುಟ್ಟುವ ಮೊದಲೇ ಹೋಗಿ ಹುಡುಗಿಯರಿದ್ದ ಮನೆಯ ಮರದ ಮೇಲೆ ಕುಳಿತುಕೊಂಡ ಅಂದು ಸಹ ಹುಡುಗಿಯರು, ಆ ಮರದಡಿ ಸಾರಿಸಿ ಗುಡಿಸಿದರು. ತಂಗಿ ಯಥಾಪ್ರಕಾರ ಹೂವಿನ ಗಿಡವಾದಳು. ಅಕ್ಕ ಎಚ್ಚರಿಕೆಯಿಂದ ಹೂ ಬಿಡಿಸಿಕೊಂಡಳು. ಮತ್ತೇ ಮನುಷ್ಯನಾದಳು ಇದೆಲ್ಲವನ್ನುಮರದ ಮೇಲಿಂದ ರಾಜಕುಮಾರ ನೋಡಿದನು. ಈ ಹೂವು ಅರಮನೆಗೆ ಬರುವುದನ್ನು ಕಂಡು ಹಿಡಿದನು.

೨. ತಂಗಿ ಹೇಗೆ ಹೂವಿನ ಗಿಡವಾಗುತ್ತಿದ್ದಳು?
ಉತ್ತರ :
ಹುಡುಗಿ ಹೂವಿನ ಗಿಡವಾಗುವ ಸ್ಥಳವನ್ನು ಮೊದಲು ಸಾರಿಸಿ, ಸ್ನಾನಮಾಡಿದ, ನಂತರ ತಂಗಿ ದೇವರ ಧ್ಯಾನ ಮಾಡುತ್ತಾ ಕುಳಿತುಳ್ಳುವಳು. ಅಕ್ಕ, ಅವಳ ಮೇಲೆ ಚಿಳ್ಉಗುರು ಸೋಕದ ಹಾಗೆ ಎರಡು ತಂಬಿಗೆ ನೀರನ್ನು ಸುರಿಯುವಳು. ಆಗ ತಂಗಿ ಘಮ ಘಮಿಸುವ ಹೂವಿನ ಗಿಡವಾಗುತ್ತಿದ್ದಳು. ಅಕ್ಕ, ಜೋಪಾನವಾಗಿ ಬೇಕಾದಷ್ಟು ಹೂ ಬಿಡಿಸಿದ ನಂತರ ಒಂದು ತಂದಿಗೆ ನೀರು ಸುರಿಯುವಳು. ಆಗ ತಂಗಿ ಮತ್ತೆ ಮನುಷ್ಯಳಾಗುತ್ತಿದ್ದಳು.ಹೀಗೆ ತಂಗಿ ಹೂವಿನ ಗಿಡವಾಗುತ್ತಿದ್ದಳು.

೩. ದೊರೆಯಮಗ ದೇಶಾಂತರ ಹೋಗಲು ಕಾರಣವೇನು?
ಉತ್ತರ : ದೊರೆ ಮಗಳು ತನ್ನ ಸ್ನೇಹಿತೆಯರಿಗೆಲ್ಲ, “ಸುರಹೊನ್ನೆ ತೋಟಕ್ಕೆ ಉಯ್ಯಾಲೆ ಆಡೋಕೆ ಹೋಗೋಣ; ನಮ್ಮ ಅತ್ತಿಗೆ ಹೂವಿನಗಿಡ ಆಗ್ತಾಳೆ ನೀವೆಲ್ಲರೂ ಬನ್ನಿ. ಗಮಗಮ ಅನ್ನೋ ಹೂವು ಬೇಕಾದಷ್ಟು ಕೊಡ್ತೀನಿ”. ಎಂದು ಹೇಳಿ ತನ್ನ ತಾಯಿ, ಅಣ್ಣನ್ನು ಒಪ್ಪಿಸಿ ಅತ್ತಿಗೆಯನ್ನು ಸುರೆಹೊನ್ನೆ ತೋಟಕ್ಕೆ ಕರೆದುಕೊಂಡು ಹೋಗಿ, ಹೂವಿನ ಗಿಡವಾಗಲು ಹೇಳಿ, ಅರ್ಧಂಬರ್ಧ ಮನುಷ್ಯಳಾಗಿದ್ದ ಅತಿಗ್ತೆಯನ್ನು ತೋಟದಲ್ಲಿ ಬಿಟ್ಟು ಅರಮನೆಗೆ ಬಂದು, ತನ್ನ ಅಣ್ಣನಿಗೆ ಸುಳ್ಳು ಹೇಳುತ್ತಾಳೆ. ಇತ್ತ ನಿಜವಾದ ಸಂಗತಿ ತಿಳಿದೇ ದೊರೆಮಗ ಬೇಜಾರಾಗಿ ಗೋಸಾಯಿ ದರ್ಸು ಹಾಕಿಕೊಂಡು ದೇಶಾಂತರ ಹೊರಟು ಹೋದನು.

೪. ಅರ್ಧಂಬರ್ದ ದೇಹವಾಗಿದ್ದವಳು ಹೇಗೆ ರಾಣಿಯ ಅರಮನೆ ಸೇರಿದಳು?
ಉತ್ತರ :
ಅರ್ಧಂಬರ್ದ ದೇಹವಾಗಿದ್ದ ಹೂವಿನ ಹುಡುಗಿ ಮಳೆಯ ನೀರಿನಲ್ಲಿ ತೇಲಿಕೊಂಡು ಮೋರಿಯಲ್ಲಿ ಬಿದ್ದಿದ್ದಳು. ಮಾರನೇ  ದಿನ ಅತ್ತ ಕಡೆಯಿಂದ ಅರಳೆ  ತುಂಬಿದ ಗಾಡಿಗಳು ಬರುತ್ತಿದ್ದವು. ಹ್ಞಾ……ಹ್ಞಾ… ಎಂದು ಕೊರಗುವ ಶಬ್ದ ಕೇಳಿ ಗಾಡಿಯವನೊಬ್ಬನು ನೋಡಿದನು. ಇಡೀ ದೇಹದಲ್ಲಿ ಮುಖ ಮಾತ್ರ ಚೆನ್ನಾಗಿತ್ತು. ಬಟ್ಟೆಯಿಲ್ಲ. ಅಯ್ಯೋ ಮನುಷ್ಯ ಕಣಪ್ಪ ಅಂತ ಹೇಳಿ ತನ್ನ ತಲೆ ವಸ್ತ್ರವನ್ನ  ಅದರ ಮೇಲೆ ಹಾಕಿ ಗಾಡಿಯಲ್ಲಿ ಕೂರಿಸಿಕೊಂಡು ಮುಂದೂರಿನ ಹಾಳು ಮಂಟಪದಲ್ಲಿ ಗಾಡಿ ನಿಲ್ಲಿಸಿ ಅವಳನ್ನು ಮಂಟಪದಲ್ಲಿಟ್ಟು ಯಾರಾದರೂ ಅನ್ನ, ನೀರು ಕೊಟ್ಟರೆ ಜೀವ ಉಳಿಸಿಕೋ ಅಂತ ಹೇಳಿ ಬಿಟ್ಟು ಹೋದನು. ಆ ಪಟ್ಟಣ ತನ್ನ ಗಂಡನ ಅಕ್ಕನ ಪಟ್ಟಣವಾಗಿತ್ತು. ಆದ್ದರಿಂದ ಆ ಪಟ್ಟಣದ ಗೌಡರು, ದಾದೇರು ರಾಣಗೆ  ಈ ವಿಷಯವನ್ನು ಹೇಳಿದರು. ಮೊದಲು ಒಪ್ಪದ ರಾಣಿ ನಂತರ ಒಪ್ಪಿದಳು. ಹೀಗಾಗಿ ಅರ್ಧಂಬರ್ದ ದೇಹವಾಗಿದ್ದ ಹುಡುಗಿ ರಾಣಿಯ ಅರಮನೆ ಸೇರಿದಳು.

ಇ. ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯದಲ್ಲಿ  ಉತ್ತರಿಸಿ.

೧. ದೊರೆಯ ಕಿರಿಯ ಮಗಳು ತನ್ನ ಅತ್ತಿಗೆಗೆ ಮಾಡಿದ ದ್ರೋಹವೇನು?
ಉತ್ತರ :
ದೊರೆ ಮಗಳು ತನ್ನ ಸ್ನೇಹಿತೆಯರಿಗೆಲ್ಲ, “ಸುರಹೊನ್ನೆ ತೋಟಕ್ಕೆ ಉಯ್ಯಾಲೆ ಆಡೋಕೆ ಹೋಗೋಣ; ನಮ್ಮ ಅತ್ತಿಗೆ ಹೂವಿನಗಿಡ ಆಗ್ತಾಳೆ ನೀವೆಲ್ಲರೂ ಬನ್ನಿ. ಗಮಗಮ ಅನ್ನೋ ಹೂವು ಬೇಕಾದಷ್ಟು ಕೊಡ್ತೀನಿ”. ಎಂದು ಹೇಳಿ ತನ್ನ ತಾಯಿ, ಅಣ್ಣನ್ನು ಒಪ್ಪಿಸಿ ಅತ್ತಿಗೆಯನ್ನು ಸುರೆಹೊನ್ನೆ ತೋಟಕ್ಕೆ ಕರೆದುಕೊಂಡು ಹೋಗಿ, ಹೂವಿನ ಗಿಡವಾಗಲು ಹೇಳಿದಳು. “ಅಯ್ಯೋ ದೇವರೇ, ನಾನು ಮನುಷ್ಯಳು ದೇವರು ಅಲ್ಲ, ದೆವ್ವನು ಅಲ್ಲ. ನಾನು ಹೂವಿನ ಗಿಡವಾಗುವ ವಿಷಯ ನಿನಗೆ ಯಾರು ಹೇಳಿದರು” ಎಂದು ಗದರಿಸಿದಳು. ಆದರೂ ದೊರೆಯ ಕಿರಿಮಗಳು ಬಿಡದೇ ತನ್ನ ಅತ್ತಿಗೆಯನ್ನು ಹೂವಿನ ಗಿಡವಾಗಲು ಒಪ್ಪಿಸಿದಳು. ಆಗ ತನ್ನ ಮೇಲೆ ನೀರು ಹೇಗೆ ಸುರಿಯಬೇಕು. ಹೇಗೆ ಹೂ ಕೀಳಬೇಕು ಎಂಬುದನ್ನೆಲ್ಲ ಹೇಳಿಕೊಟ್ಟಳು. ಆದರೂ ಸರಿಯಾಗಿ ಕೇಳಿಸಿಕೊಳ್ಳದೆ ದೊರೆಯ ಮಗಳು ಹಾಗೂ ಗೆಳೆತಿಯರು ಅಡ್ಡ- ದಿಡ್ಡಿಯಾಗಿ ನೀರು ಸುರಿದು ಹೂವು ಕೀಳೋ ಸಂಭ್ರಮದಲ್ಲಿ ತೊಟ್ಟು, ಎಲೆ, ಸುಳಿ ಕಿತ್ತು, ರೆಂಬೆಯನ್ನೆಲ್ಲ ತರೆದು ಬಿಟ್ಟರು. ಅಷ್ಟರಲ್ಲಿ ಗುಡುಗು ಸಹಿತ ಮಳೆಗೆ ಹೆದರಿ ಅರ್ಧಂಬರ್ಧ ನೀರು ಸುರಿದು ಮನೆ ಕಡೆ ಓಡಿದರು. ಆಕೆ ಮನುಷ್ಯಳಾಗದೆ ಕೈಯಿಲ್ಲದ, ಕಾಲು ಇಲ್ಲದ ದೇಹವಾಗಿದ್ದಳು. ಮೈಯೆಲ್ಲ ಗಾಯವಾಗಿತ್ತು. ಮಳೆ ನೀರಿನಲ್ಲಿ ತೇಲಿಕೊಂಡು ಮೋರಿಗೆ ಬಿದ್ದಳು. ನಂತರ ಆಕೆ ಏನಾದಳೆಂದು ಕೂಡ ನೋಡದೆ ಅರಮನೆಗೆ ಹೊರಟು ಹೋದಳು.

೨. ದೊರೆಯ ಮಗ ತನ್ನ ಹೆಂಡತಿಯನ್ನು ಹೇಗೆ ಪುನಃ ಪಡೆದನು?

ಉತ್ತರ : ಹೂವಾದ ಹುಡುಗಿಯು  ಅರ್ಧಂಬರ್ಧ ಮನುಷ್ಯಳಾಗಿ ಮೋರಿಯಲ್ಲಿ ಬಿದ್ದಿರುತ್ತಾಳೆ. ಅರಳೆ ಗಾಡಿಯವರು ಅವಳನ್ನು ದೊರೆ ಮಗನ ದೊಡ್ಡಕ್ಕನ ಊರಿಗೆ ತಂದು ಬಿಟ್ಟು ಹೋಗುತ್ತಾರೆ. ಆ ಪಟ್ಟಣದದಾದೇರು ದಿನಲೂ ನೀರಿಗೆ ಬರುವಾಗ ಇವಳನ್ನು ನೋಡಿದ್ದಿರು. ಈ ವಿಚಾರವನ್ನು ರಾಣಿಗೆ ತಿಳಿಸುತ್ತಾರೆ. ರಾಣಿಗೆ ಅವಳ ಸೇವೆ ಮಾಡಲು ಮನಸ್ಸಿಲ್ಲದ್ದಿದ್ದರಿಂದ ತಾತ್ಸಾರ ಮಾಡುತ್ತಾಳೆ. ಕೂನೆಗೆ ಅವಳನ್ನು ತನ್ನಅರಮನೆಗೆ ಕರಸಿ, ಸ್ನಾನಮಾಡಿಸಿ, ಗಾಯಗಳಿಗೆ ಔಷಧಿ ಹಾಕಿಸಿ ಉಪಚಾರ ಮಾಡುತ್ತಾಳೆ.ಇತ್ತ ದೇಶಾಂತರ ಹೋಗಿದ್ದ ದೊರೆಮಗ ತನ್ನ ಅಕ್ಕನ ಪಟ್ಟಣದ ಬಾಗಿಲಿಗೆ ಬಂದು ಕುಳಿತುಕೊಂಡು ಇರುತ್ತಾನೆ. ನೀರಿಗೆ ಹೋಗಿ ಬರುತ್ತಿದ್ದ ದಾದೇರು ಇವನನ್ನು ನೋಡಿ ಅರಮನೆಗೆ ಬಂದು ರಾಣಿಯವರೇ ಯಾರೋ ನಿಮ್ಮ ತಮ್ಮ ಕುಳಿತಂಗ ಕಾಣುತ್ತೆ ಅಂತ ಗೋಗರೆದರು. ದುರಬೀನು ಹಾಕಿ ನೋಡಿ, ಕರೆಸಿ, ರಾಣಿ ಚೆನ್ನಾಗಿ ನೋಡಿದಳು. ನನ್ನ ತಮ್ಮನೇ ಇರಬೇಕೆಂದು ಕೊಂಡಳು. ಕೊಪ್ಪ-ಕೊಪ್ಪರಿಗೆ ಎಣ್ಣೆ ಕಾಯಿಸಿ ನೆತ್ತಿಗೆ ತಿಕ್ಕಿಸಿ,ಹಂಡೆ-ಹಂಡೆ ನೀರು ಹಾಕ್ಸಿ, ತನ್ನ ತಮ್ಮನೇ ವರತು ಬೇರಲ್ಲವೆಂದು ತಿಳಿದುಕೊಂಡಳು. ಅವನಿಗೆ ಎಷ್ಟು  ಉಪಚಾರ ಮಾಡಿದರು ಮಾತನಾಡಲೇ ಇಲ್ಲ. ಕೊನೆಗೆ ದಾಸಿಯರಿಗೆ ಅಲಂಕಾರ ಮಾಡಿ ಅವನ ಸೇವೆ ಮಾಡಿಸಿದರು ಉಪಯೋಗವಾಗಲಿಲ್ಲ. ಆಗ ಮಾರನೆಯ ದಿನ ರಾತ್ರಿದಾದೇರೆಲ್ಲ ಸೇರಿ ಅರಮನೆಯ ಮುಂದಿದ್ದ ಇವಳಿಗೆ ಶೃಂಗಾರಮಾಡಿ, ರಾಣಿಯಿಂದ ಅಪ್ಪಣೆ ಪಡೆದು ಇವನ ಮಂಚದ ಮೇಲೆ ಕೂರಿಸಿದರು. ರಾತ್ರಿಯೆಲ್ಲ ಇವನ ಕಾಲನ್ನು ಒತ್ತುತ್ತ, ಹೂ…..ಹೂ….. ಅಂತ ಕೊರಗುತ್ತಿತ್ತು. ಆಗ ಎದ್ದು ನೋಡಿದ, ಇವಳೇ ನನ್ನ ಹೆಂಡತಿ ಎಂದು  ತಿಳ್ಕೊಂಡ. ಅನಂತರ ಮಂತ್ರಿಸಿ ನೀರನ್ನು ಹಾಕಿ ಹೂವಿನ ಗಿಡ ಮಾಡಿ, ಮುರಿದು ರೆಂಬೆ
ಕೊಂಬೆಗಳನ್ನೆಲ್ಲ ಜೋಡಿಸಿ, ನಂತರ ನೀರು ಹಾಕಿದಾಗ ಹೂವಾದ ಹುಡುಗಿ ಮತ್ತೇ ಮನುಷ್ಯಳಾದದಳು . ಹೀಗೆ ದೊರೆಮಗ ತನ್ನ ಹೆಂಡತಿಯನ್ನು ಮತ್ತೇ ಪಡೆದನು

ಈ. ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ.

೧. “ಅಕ್ಕಯ್ಯ ಅಮ್ಮನಿಗೆ ಹೇಳಬೇಡ  ಮುಚ್ಚಿಡು”
ಆಯ್ಕೆ : ಪ್ರಸ್ತುತ ಈ ವಾಕ್ಯವನ್ನು “ಎ.ಕೆ.ರಾಮನುಜನ್” ಅವರು ರಚಿಸಿರುವ ಸಾಲು ಸಂಪಿಗೆ ನೆರಳು’ ಕೃತಿಯಿಂದ ಆಯ್ದು ‘ಹೂವಾದ ಹುಡುಗಿ” ಎಂಬ ಪಾಠದಿಂದ ಆರಿಸಲಾಗಿದೆ.
ಸಂದರ್ಭ : ಅಮ್ಮ ಕೂಲಿಮಾಡಿ ನಮ್ಮನ್ನು ಸಾಕುವುದನ್ನ ನೋಡಲಾಗದ ಹುಡುಗಿಯರು ತನ್ನ ತಾಯಿಗೆ ಸಹಾಯಮಾಡಲು ಹೂವಿನ ಗಿಡವಾಗಿ, ಅದರಲ್ಲಿರುವ ಹೂವುಗಳನ್ನು ಮಾರಿ ಹಣ ಸಂಪಾದನೆ ಮಾಡಬೇಕು ಎಂದು ನಿರ್ಧರಿಸುತ್ತಾರೆ. ಅದರಂತೆ ಮಾಡಿ ಅರಮನೆಗೆ ಹೋಗಿ ಹೂವು ಮಾರಿಕೊಂಡು ಹಣ ಸಂಪಾದನೆ ಮಾಡಿದ ಸಂದರ್ಭದಲ್ಲಿ ಈ ಮಾತನ್ನು ಹೂವಾದ ಹುಡುಗಿ ತನ್ನ ಅಕ್ಕನಿಗೆ ಹೇಳುತ್ತಲೇ .
ಸ್ವಾರಸ್ಯ: ಅಮ್ಮನಿಗೆ ತಿಳಿಯದ ಹಾಗೆ ಹೂ ಗಿಡವಾಗಿ, ಹೂ ಮಾರಿ ಹಣವನ್ನು ಕೊಟ್ಟಾಗ ತಾಯಿಗೆ ಅನುಮಾನ ಬಂದು ಹಣ ಎಲ್ಲಿಂದ ಬಂತು ಎಂದು ಕೇಳಿ ಬೈಯಬಹುದು. ಆದ್ದರಿಂದ ಮುಚ್ಚಿಡು ಎಂದು ಹೇಳುವ ಮಾತು ಸ್ವಾರಸ್ಯಕರವಾಗಿದೆ.
 
೨. “ಈ ಸಂಪತ್ತಿಗೇಕೆ ನನ್ನ ಮದುವೆ ಆದಿರಿ?”
ಆಯ್ಕೆ : ಪ್ರಸ್ತುತ ಈ ವಾಕ್ಯವನ್ನು “ಎ.ಕೆ.ರಾಮನುಜನ್” ಅವರು ರಚಿಸಿರುವ ‘ಸಾಲು ಸಂಪಿಗೆ ನೆರಳು’ ಕೃತಿಯಿಂದ ಆಯ್ದು ‘ಹೂವಾದ ಹುಡುಗಿ” ಎಂಬ ಪಾಠದಿಂದ ಆರಿಸಲಾಗಿದೆ.
ಸಂದರ್ಭ : ದೊರೆಮಗನು ಮೆಚ್ಚಿ ಹೂವಾದ ಹುಡುಯರನ್ನು ನ್ನು ಮದುಮೆಯಾದನು. ಅರಮನೆಯಲ್ಲಿ ಅವರಿಬ್ಬರನ್ನು ಏಕಾಂತದಲ್ಲಿ ಬಿಟ್ಟರು. ಇವನಿಷ್ಟಕ್ಕೆ ಇವನಿದ್ದಾನೆ ಅವಳಿಷ್ಟಕ್ಕೆ ಅವಳಿದ್ದಾಳೆ. ಅವರೇ ಮಾತನಾಡಲಿ ಅಂತ ಅವಳು. ಅವಳೇ ಮಾತಾಡಲಿ ಅಂತ ಅವನು. ಹೀಗೆ ಇಬ್ಬರೂ ಗುಮ್ಮಾಗಿ ಸುಮ್ಮನಿದ್ದರು. ಆ ಮೌನ ಮುರಿದ ಸಂದರ್ಭದಲ್ಲಿ ಹೂವಾದ ಹುಡುಗಿ ಈ ಮಾತನ್ನು ದೊರೆ ಮಗನಿಗೆ
ಕೇಳಿದಳು.
ಸ್ವಾರಸ್ಯ : ತನ್ನ ಜೊತೆ ಮಾತನಾಡಲು ಇಷ್ಟವಿಲ್ಲದಿದ್ದ ಮೇಲೆ ತನ್ನನ್ನು ಏಕೆ ಮದುವೆಯಾಗಬೇಕಿತ್ತು ಎಂಬುದಾಗಿ ನೇರ, ದಿಟ್ಟತನ, ಹುಸಿ ಮುನಿಸು ಸ್ವಾರಸ್ಯಕರವಾಗಿದೆ.

೩. “ಯಾರಾದರೂ ಅನ್ನ ನೀರು ಕೊಟ್ಟರೆ ಜೀವ ಉಳಿಸಿಕೋ”
ಆಯ್ಕೆ :
ಪ್ರಸ್ತುತ ಈ ವಾಕ್ಯವನ್ನು “ಎ.ಕೆ.ರಾಮನುಜನ್” ಅವರು ರಚಿಸಿರುವ  ‘ಸಾಲು ಸಂಪಿಗೆ ನೆರಳು’ ಕೃತಿಯಿಂದ ಆಯ್ದು ‘ಹೂವಾದ ಹುಡುಗಿ” ಎಂಬ ಪಾಠದಿಂದ ಆರಿಸಲಾಗಿದೆ.
ಸಂದರ್ಭ : ಹೂವಾದ ಹುಡುಗಿಯು  ಮೋರಿಯಲ್ಲಿ ನರಳುತ್ತಿರುವುದನ್ನು ನೋಡಿದ ಅರಳೆ ಗಾಡಿಯವನು ತನ್ನ ತಲೆಯ ಮೇಲಿದ್ದ ವಸ್ತçವನ್ನು ಕೊಟ್ಟು ಅವಳನ್ನು ತನ್ನ ಗಾಡಿಯಲ್ಲಿ ಕೂರಿಸಿಕೊಂಡು ಒಂದು ಊರಿನ ಮಂಟಪದಲ್ಲಿ ಬಿಟ್ಟ ಸಂದರ್ಭದಲ್ಲಿ ಅರಳೆ ಗಾಡಿಯವನು ಈ ಮಾತನ್ನು ಹೇಳುತ್ತಾನೆ.
ಸ್ವಾರಸ್ಯ : ಹೂವಾದ ಹುಡುಗಿ ಮಾಡಿದ ಪುಣ್ಯದ ಫಲವೇನೋ ಗಾಡಿಯವನು ಇವಳನ್ನು ಒಂದು ಪಟ್ಟಣದಲ್ಲಿ ಬಿಟ್ಟು ಹೋಗುತ್ತಾನೆ. ಗಾಡಿಯವನ ಪರೋಪಕಾರ ಗುಣವು ಸ್ವಾರಸ್ಯಕರವಾಗಿದೆ.

೪. “ಅವಳನ್ನು ನೋಡಿದರೆ ನಿಮ್ಮ ತಮ್ಮನ ಹೆಂಡತಿಯAತೆ ಕಾಣ್ತಾಳೆ,”
ಆಯ್ಕೆ : ಪ್ರಸ್ತುತ ಈ ವಾಕ್ಯವನ್ನು “ಎ.ಕೆ.ರಾಮನುಜನ್” ಅವರು ರಚಿಸಿರುವ  ‘ಸಾಲು ಸಂಪಿಗೆ ನೆರಳು’ ಕೃತಿಯಿಂದ ಆಯ್ದು ‘ಹೂವಾದ ಹುಡುಗಿ” ಎಂಬ ಪಾಠದಿಂದ ಆರಿಸಲಾಗಿದೆ.
ಸಂದರ್ಭ : ಹೂವಾದ ಹುಡುಗಿ  ಅರ್ಧ – ಬರ್ಧ ಮನುಷ್ಯಳಾಗಿ ಮೋರಿಯಲ್ಲಿ ಬಿದ್ದಿದ್ದಾಗ ಗಾಡಿಯವರ ಸಹಾಯದಿಂದ ದೊರೆಮಗನ ದೊಡ್ಡಕ್ಕಯ್ಯನವರ ಪಟ್ಟಣದಲ್ಲಿ ಬಂದು ಬಿದ್ದಿರುತ್ತಾಳೆ. ಇವಳನ್ನು ನೋಡಿದದಾದೇರು ತನ್ನ ರಾಣಿಯ ಬಳಿಗೆ ಹೋಗಿ ಈ ವಿಚಾರ ತಿಳಿಸುವ ಸಂದರ್ಭದಲ್ಲಿ ಈ ಮಾತು ಬಂದಿದೆ.
ಸ್ವಾರಸ್ಯ: ಅರ್ಧಂಬರ್ಧ ಮನುಷ್ಯಳಾಗಿದ್ದ ಹೂವಾದ ಹುಡುಯನ್ನು  ದಾದೋರಿ, ಹಾಗು ಗೌಡರು ರಾಣಿಯ ಬಳಿ ಬಂದು ಆ ಹುಡುಗಿ ನಿಮ್ಮ ತಮ್ಮನ ಹೆಂಡತಿಯಂತೆ  ಕಾಣುವಳು. ಅವರನ್ನು ಕರೆ ತಂದು ಉಪಚರಿಸೋಣವೇ ಎಂದು ಹೇಳುವ ಮಾತಿನಲ್ಲಿರುವ ಉಪಕಾರ ಗುಣ ಸ್ವಾರಸ್ಯಕರವಾಗಿದೆ.

ಉ. ಖಾಲಿಬಿಟ್ಟ ಜಾಗವನ್ನು ಸೂಕ್ತ ಪದಗಳಿಂದ ತುಂಬಿರಿ.
 ೧. ನೋಡಕ್ಕಯ್ಯ ನಾನಿಲ್ಲಿ ________ ಧ್ಯಾನಮಾಡಿ ಕುತುಕೋತಿನಿ.
೨. ಅವರು ಮಾತಾಡಲೇ ಇಲ್ಲವಲ್ಲ, ಮತ್ತೇಕೆ _________ ಯಾದರು.
೩. ನರಮನುಷ್ಯರು _____________ ಆಗೋದುಂಟೆ ?
೪. ದಿನವಹಿ ಮೈಮೇಲಿನ ಗಾಯಗಳಿಗೆ _________ ಹಾಕಿ ವಾಸಿಮಾಡಿದರು.
ಸರಿ ಉತ್ತರಗಳು.
೧. ದೇವರ
೨. ಮದುವೆ
೩. ಹೂವಿನಗಿಡ
೪. ಔಷದ
ಚಟುವಟಿಕೆ

ಕೊಟ್ಟಿರುವ ಪದಗಳನ್ನು ಸ್ವಂತ ವಾಕ್ಯಗಳಲ್ಲಿ ಬಳಸಿ.
೧. ಧ್ಯಾನಮಾಡು : ದಿನಕ್ಕೇ ಒಮ್ಮೆಯಾದರು ಧ್ಯಾನಮಾಡು.
೨. ಬಡವರು : ಜೀವನದಲ್ಲಿ ಎಷ್ಟೇ ಕಷ್ಟಗಳಿದ್ದರು ಸ್ವಾಭಿಮಾನದಿಂದ ಬದುಕುವವರೆ ಬಡವರು.
೩. ಸಂಪಾದನೆ : ಈ ಬದುಕಿನ ಗಾಡಿ ಸಾಗಬೇಕಾದರೆ ನಾವು ಸಂಪಾದನೆ ಮಾಡಲೇಬೇಕು.
೪. ಉಡುಗೊರೆ : ನನ್ನ ಸ್ನೇಹಿತನ ಹುಟ್ಟು ಹಬ್ಬಕ್ಕೆ ವಾಚ್ನ್ನು ಉಡುಗೊರೆಯಾಗಿ ಕೊಟ್ಟೆನು.
 
ಕೊಟ್ಟಿರುವ ವಾಕ್ಯಗಳನ್ನು ಗ್ರಾಂಥಿಕ ರೂಪದಲ್ಲಿ ಬರೆಯಿರಿ.
 
೧. ನೀನು ಹೂ ತಕ್ಕೊಂಡು ಹೋಗಿ ಮರ್ಕೊಂಡು ಬಂದ್ಬಿಡೇ.
ಉತ್ತರ : ನೀನು ಹೂವು ತೆಗೆದುಕೊಂಡು ಹೋಗಿ ಮಾರಿಕೊಂಡು ಬಂದು ಬಿಡೇ.
 
೨. ದಾದೇರು ಗೋಗರೆದದ್ದಕ್ಕೆ ಒಪ್ಕತಾಳೆ.
ಉತ್ತರ :
ದಾದೇರು ಗೋಗರೆದದ್ದಕ್ಕೆ ಒಪ್ಪಿಕೊಳ್ಳುತ್ತಾಳೆ.
 
೩. ತಾಯಿ ಅಣ್ಣನ ಕೇಳ್ಕೊಂಡು ರ್ಕೊಂಡೋಗು ಅನ್ತಾಳೆ.
ಉತ್ತರ :
ತಾಯಿ ಅಣ್ಣನನ್ನು ಕೇಳಿ ಕರೆದುಕೊಂಡು ಹೋಗು ಅನ್ನುತ್ತಾಳೆ..


You Might Like

Post a Comment

0 Comments