Recent Posts

ಮಾನವನ ಕಣ್ಣು ಮತ್ತು ವರ್ಣಮಯ ಜಗತ್ತು - ೧೦ ನೇ ತರಗತಿ ವಿಜ್ಞಾನ ಪುಸ್ತಕದ ಪ್ರಶ್ನೋತ್ತರಗಳು



 ಅಧ್ಯಾಯ -11
ಮಾನವನ ಕಣ್ಣು ಮತ್ತು ವರ್ಣಮಯ ಜಗತ್ತು ವಿಜ್ಞಾನ ನೋಟ್ಸ್‌

1. ಕಣ್ಣಿನ ಹೊಂದಾಣಿಕೆ ಎಂದರೇನು ?
ಕಣ್ಣಿನ ಮಸೂರವು ತಂತುಗಳು,ಜೆಲ್ಲಿಯಂತಹ ವಸ್ತುಗಳಿಂದ ಕೂಡಿದೆ.ಇದರ ವಕ್ರತೆಯನ್ನು ಸಿಲಿಯರಿ ಸ್ನಾಯುಗಳಿಂದ ಸ್ವಲ್ಪಮಟ್ಟಿಗೆ ಮಾರ್ಪಡಿಸಬಹುದು, ಕಣ್ಣಿನ ಮಸೂರದ ವಕ್ರತೆಯ ಬದಲಾವಣೆಯಿಂದ ಅದರ ಸಂಗಮದೂರವನ್ನು ಬದಲಾಯಿಸಬಹುದು. ಸ್ನಾಯುಗಳು ವಿಶ್ರಾಂತಗೊಂಡಾಗ ಮಸೂರವು ತೆಳ್ಳಗಾಗುತ್ತದೆ ಮತ್ತು ಸಂಗಮದೂರ ಹೆಚ್ಚಾಗುತ್ತದೆ. ಇದರಿಂದ ದೂರದ ವಸ್ತುಗಳನ್ನು ಸ್ಪಷ್ಟವಾಗಿ ನೋಡಬಹುದು. ನೀವು ಕಣ್ಣಿನ ಹತ್ತಿರದ ವಸ್ತುಗಳನ್ನು ನೋಡುವಾಗ ಕಣ್ಣಿನ ಸೀಲಿಯರಿ ಸ್ನಾಯುಗಳು ಕುಗ್ಗುತ್ತವೆ. ಇದರಿಂದ ಕಣ್ಣಿನ ಮಸೂರದ ವಕ್ರತೆ ಹೆಚ್ಚಾಗುತ್ತದೆ. ಆಗ ಕಣ್ಣಿನ ಮಸೂರವು ದಪ್ಪವಾಗುತ್ತದೆ. ಅದರ ಪರಿಣಾಮವಾಗಿ ಕಣ್ಣಿನ ಸಂಗಮದೂರ ಕಡಿಮೆಯಾಗುತ್ತದೆ, ಮತ್ತು ಹತ್ತಿರದ ವಸ್ತುಗಳು ಸ್ಪಷ್ಟವಾಗಿ ಗೋಚರಿಸುತ್ತದೆ.ಈ ರೀತಿ ತನ್ನ ಮಸೂರದ ಸಂಗಮದೂರವನ್ನು ಹೊಂದಾಣಿಕೆ ಮಾಡುವ ಕಣ್ಣಿನ ಮಸೂರದ ಸಾಮರ್ಥ್ಯವನ್ನು ಕಣ್ಣಿನ ಹೊಂದಾಣಿಕೆ ಎನ್ನುವರು,

2. ಸಮೀಪ ದೃಷ್ಟಿಯುಳ್ಳ ಒಬ್ಬ ವ್ಯಕ್ತಿಯು 1.2 ಮೀ ಗಿಂತ ಹೆಚ್ಚಿನ ದೂರದಲ್ಲಿರುವ ವಸ್ತುವನ್ನು ಸ್ಪಷ್ಟವಾಗಿ ನೋಡಲು ಸಾಧ್ಯವಿಲ್ಲ, ಈ ವ್ಯಕ್ತಿಯು ದೃಷ್ಟಿ ಪುನರ್ ಸ್ಥಾಪಿಸಲು ಬಳಸುವ ಸರಿಪಡಿಸುವ ಮಸೂರ ಯಾವುದು ?
ಈ ವ್ಯಕ್ತಿಯು ಸಮೀಪದ ವಸ್ತುಗಳನ್ನು ಸ್ಪಷ್ಟವಾಗಿ ನೋಡುತ್ತಾನೆ ಆದರೆ 1.2 ಮೀ ಗಿಂತ ಹೆಚ್ಚಿನ ದೂರದಲ್ಲಿರುವ ವಸ್ತುವನ್ನು ಸ್ಪಷ್ಟವಾಗಿ ನೋಡಲು ಸಾಧ್ಯವಿಲ್ಲ .ವಸ್ತುವಿನ ಪ್ರತಿಬಿಂಬವು ರೆಟಿನಾದಲ್ಲಿ ಆಗದೆ 1.2 ಮೀ ಮುಂಭಾಗದಲ್ಲಿ ಉಂಟಾಗುವ ಕಾರಣ ಈ ರೀತಿ ಆಗುತ್ತದೆ.

 
3, ಸಾಮಾನ್ಯ ದೃಷ್ಟಿಯುಳ್ಳವರಿಗೆ ಸಮೀಪ ಬಿಂದು ಮತ್ತು ದೂರ ಬಿಂದುಗಳಾವುವು ?
ಸಾಮಾನ್ಯ ದೃಷ್ಟಿಯುಳ್ಳವರಿಗೆ ಸಮೀಪ ಬಿಂದು 25 ಸೆ.ಮೀ ಆಗಿದೆ ಮತ್ತು ದೂರ ಬಿಂದು ಅನಂತದೂರ ಆಗಿದೆ.ಕಣ್ಣಿಗೆ ವಸ್ತುವು ಸ್ಪಷ್ಟವಾಗಿ ಹಾಗು ಒತ್ತಡರಹಿತವಾಗಿ ಕಾಣುವ ಕನಿಷ್ಟ ದೂರವನ್ನು ಸಮೀಪ ಬಿಂದು ಎನ್ನುವರು.ಕಣ್ಣು ಸ್ಪಷ್ಟವಾಗಿ ವೀಕ್ಷಿಸಲು ಸಾಧ್ಯವಾಗುವ ಅತೀ ಗರಿಷ್ಟ ದೂರವೇ ದೂರ ಬಿಂದು,


4. ಕೊನೆಯ ಬೆಂಚಿನಲ್ಲಿ ಕುಳಿತಿರುವ ಒಬ್ಬ ವಿದ್ಯಾರ್ಥಿಯು ಕಪ್ಪು ಹಲಗೆಯ ಬರಹವನ್ನು ಓದಲು ಕಷ್ಟಪಡುತ್ತಾನೆ. ಈ ಮಗುವು ಬಳಲುತ್ತಿರುವ ತೊಂದರೆ ಯಾವುದು ? ಅದನ್ನು ಹೇಗೆ ಸರಿಪಡಿಸಬಹುದು ?
ಕೊನೆಯ ಬೆಂಚಿನಲ್ಲಿ ಕುಳಿತಿರುವ ಒಬ್ಬ ವಿದ್ಯಾರ್ಥಿಯು ಕಪ್ಪು ಹಲಗೆಯ ಬರಹವನ್ನು ಓದಲು ಕಷ್ಟಪಡುತ್ತಾನೆ.ಇದು ಅವನು ದೂರದ ವಸ್ತುಗಳನ್ನು ಸ್ಪಷ್ಟವಾಗಿ ನೋಡಲು ಸಾಧ್ಯವಾಗುತ್ತಿಲ್ಲ ಎಂದು ಸೂಚಿಸುತ್ತದೆ. ಅವನು ಸಮೀಪ ದೃಷ್ಟಿ ದೋಷದಿಂದ ಬಳಲುತ್ತಿದ್ದಾನೆ.ಇದನ್ನು ಸೂಕ್ತ ಸಾಮರ್ಥ್ಯದ ನಿಮ್ಮ ಮಸೂರದ ಅಳವಡಿಕೆಯಿಂದ ಈ ದೋಷವನ್ನು ಸರಿಪಡಿಸಬಹುದಾಗಿದೆ.

ಅಭ್ಯಾಸದ ಪ್ರಶೋತ್ತರಗಳು
 
1.ಮಾನವನ ಕಣ್ಣು ತನ್ನ ಕಣ್ಣಿನ ಮಸೂರದ ಸಂಗಮದೂರವನ್ನು ವಿವಿಧ ದೂರಗಳಲ್ಲಿರುವ ವಸ್ತುಗಳು ಕಾಣುವಂತೆ ಸರಿಹೊಂದಿಸಲು ಕಾರಣ
b) ಕಣ್ಣಿನ ಹೊಂದಾಣಿಕೆ

2. ಮಾನವನ ಕಣ್ಣು ವಸ್ತುವಿನ ಪ್ರತಿಬಿಂಬವನ್ನುಂಟು ಮಾಡುವ ಭಾಗ
d) ರೆಟಿನಾ

3. ಸಾಮಾನ್ಯ ದೃಷ್ಟಿ ಹೊಂದಿರುವ ಯುವ ವಯಸ್ಕರಿಗೆ ಕಣ್ಣಿನ ಕನಿಷ್ಟ ದೃಷ್ಟಿ ದೂರ
c) 25. ಸೆಂ. ಮೀ

4. ಕಣ್ಣಿನ ಮಸೂರದ ಸಂಗಮದೂರದ ಬದಲಾವಣೆಯಾಗುವ ಕ್ರಿಯೆಗೆ ಕಾರಣ
c) ಸೀಲಿಯರಿ ತಂತುಗಳು

5. ಒಬ್ಬ ವ್ಯಕ್ತಿಯು ದೂರದೃಷ್ಟಿ ಸರಿಪಡಿಸಲು – 5.5 ಡಯಾಸ್ಟರ್ ಸಾಮರ್ಥ್ಯ ಮಸೂರದ ಅವಶ್ಯಕತೆ ಇದೆ.ಅತ್ಯಂತ ಸಮೀಪದೃಷ್ಟಿ, ಸರಿಪಡಿಸಲು + 1.5 ಡಯಾಸ್ಟರ್ ಸಾಮರ್ಥ್ಯದ ಮಸೂರದ ಅವಶ್ಯಕತೆ ಇದೆ . ಹಾಗಾದರೆ ಯಾವ ಸಂಗಮದೂರವುಳ್ಳ ಮಸೂರವು ಈ ಕೆಳಗಿನ ದೋಷಗಳನ್ನು ಸರಿಪಡಿಸಲು ಬೇಕಾಗಿದೆ? ಅ) ದೂರ ದೃಷ್ಟಿ ಮತ್ತು ಆ) ಸಮೀಪ ದೃಷ್ಟಿ,
 

 
6. ಸಮೀಪ ದೃಷ್ಟಿಯ ದೂರ ಬಿಂದುವು ಕಣ್ಣಿನ ಮುಂದಿನಿಂದ 80 ಸೆ. ಮೀ ಆಗಿದೆ. ಯಾವ ಸ್ವಭಾವದ ಮತ್ತು ಯಾವ ಸಾಮರ್ಥ್ಯದ ಮಸೂರದಿಂದ ಈ ದೋಷ ಸರಿಪಡಿಸಬಹುದು.?
ವಸ್ತು ದೂರ u = ಅನಂತ ದೂರ =
ಪ್ರತಿಬಿಂಬ ದೂರ V = = 80 cm

 
 
 
7. ದೂರ ದೃಷ್ಟಿಯನ್ನು ಪರಿಹಾರ ಮಾಡುವ ರೇಖಾ ಚಿತ್ರ ಬರೆಯಿರಿ ದೂರದೃಷ್ಟಿಯುಳ್ಳ ಕಣ್ಣಿನ ಸಮೀಪ ಬಿಂದು 1 ಮೀ. ಈ ದೋಷ ಪರಿಹರಿಸಲು ಬೇಕಾದ ಮಸೂರದ ಸಾಮರ್ಥ್ಯ ಎಷ್ಟು ? ಸಾಮಾನ್ಯ ಕಣ್ಣಿನ ಕನಿಷ್ಟ ದೃಷ್ಟಿದೂರ 25 ಸೆಂ.ಮೀ ಎಂದು ಭಾವಿಸಿ


 

 
8. ಸಾಮಾನ್ಯ ಕಣ್ಣುಗಳಿಂದ 25 ಸೆ.ಮೀ ಗಿಂತ ಹತ್ತಿರದಲ್ಲಿ ವಸ್ತುಗಳನ್ನು ಸ್ಪಷ್ಟವಾಗಿ ನೋಡಲು ಏಕೆ ಸಾಧ್ಯವಿಲ್ಲ ?
ಸಾಮಾನ್ಯ ಕಣ್ಣುಗಳಿಂದ 25 ಸೆ.ಮೀ ಗಿಂತ ಹತ್ತಿರದಲ್ಲಿ ವಸ್ತುಗಳನ್ನು ಸ್ಪಷ್ಟವಾಗಿ ನೋಡಲು ಸಾಧ್ಯವಿಲ್ಲ ಏಕೆಂದರೆ ಕಣ್ಣಿನ ಸೀಲಿಯರಿ ಸ್ನಾಯುಗಳು ಹಿಗ್ಗುವುದಿಲ್ಲ, 25ಸೆ.ಮೀ ಗಿಂತ ಹತ್ತಿರದಲ್ಲಿ ವಸ್ತುಗಳನ್ನು ನೋಡುವಾಗ ಅವು ಮಸುಕಾಗಿ ಕಾಣುತ್ತವೆ ಮತ್ತು ಕಣ್ಣಿಗೆ ಒತ್ತಡವನ್ನು ಉಂಟುಮಾಡುತ್ತವೆ.

9. ನಾವು ಕಣ್ಣಿನಿಂದ ವಸ್ತುವಿನ ದೂರವನ್ನು ಹೆಚ್ಚಿಸಿದಾಗ ಕಣ್ಣಿನಲ್ಲಿ ಅದರ ಪ್ರತಿಬಿಂಬ ದೂರ ಏನಾಗುತ್ತದೆ, ?
ಕಣ್ಣಿನ ಗಾತ್ರವು ಹೆಚ್ಚು ಅಥವಾ ಕಡಿಮೆ ಆಗದ ಕಾರಣ ಪ್ರತಿಬಿಂಬದ ದೂರದಲ್ಲಿ ಯಾವುದೇ ಬದಲಾವಣೆಆಗುವುದಿಲ್ಲ..ಅಂದರೆ ವಸ್ತುವಿನ ದೂರವು ಹೆಚ್ಚಾದಂತೆ ಕಣ್ಣಿನಲ್ಲಿ ಉಂಟಾಗುವ ಅದರ ಪ್ರತಿಬಿಂಬದ ದೂರದಲ್ಲಿ ಯಾವುದೇ ಬದಲಾವಣೆ ಉಂಟಾಗುವುದಿಲ್ಲ. ವಸ್ತುವಿನ ದೂರದಲ್ಲಿ ಉಂಟಾದ ಬದಲಾವಣೆಯನ್ನು ಕಣ್ಣಿನ ಮಸೂರವು ತನ್ನ ಸಂಗಮದೂರದಲ್ಲಿ ಬದಲಾವಣೆಯನ್ನು ಉಂಟು ಮಾಡುವ ಮೂಲಕ ಪ್ರತಿಬಿಂಬವು ಯಾವಾಗಲೂ ರೆಟಿನಾದ ಮೇಲೆಯೇ ಬೀಳುವ ಹಾಗೆ ಮಾಡುತ್ತದೆ.

10.ನಕ್ಷತ್ರಗಳು ಮಿನುಗುವುದೇಕೆ ?
ನಕ್ಷತ್ರಗಳು ತಮ್ಮ ಸ್ವಂತ ಬೆಳಕನ್ನು ಹೊರಸೂಸುತ್ತವೆ ಮತ್ತು ಮಿನುಗುತ್ತವೆ.ವಾಯುಮಂಡಲದಲ್ಲಿ ಬೆಳಕಿನ ವಕ್ರೀಭವನದಿಂದಾಗಿ ನಕ್ಷತ್ರ ಗಳು ಮಿನುಗುತ್ತವೆ ನಕ್ಷತ್ರಗಳು ನಮ್ಮಿಂದ ಬಹಳ ದೂರದಲ್ಲಿವೆ ಆದ್ದರಿಂದ ಅವುಗಳಿಂದ ಬರುವ ಬೆಳಕು ಅಂದಾಜು ಬಿಂದು ಗಾತ್ರದ ಬೆಳಕಿನ ಮೂಲಗಳಂತೆ ಕಾಣುತ್ತವೆ ನಕ್ಷತ್ರಗಳಿಂದ ಬರುವ ಬೆಳಕು ಭೂಮಿಯ ವಾಯುಮಂಡಲವನ್ನು ಪ್ರವೇಶಿಸಿದಾಗ ಭೂಮಿಯನ್ನು ತಲುಪುವ ಮುನ್ನ ಅದು ಸತತವಾಗಿ ವಕ್ರೀಭವನಕ್ಕೆ ಒಳಗಾಗುತ್ತದೆ. ವಾಯುಮಂಡಲದಿಂದ ವಕ್ರೀಭವಿಸಲ್ಪಟ್ಟ ನಕ್ಷತ್ರದ ಬೆಳಕು ನಮ್ಮ ಸಮೀಪಕ್ಕೆ ಬಂದಾಗ ಅದು ಹೆಚ್ಚು ಪ್ರಕಾಶಮಾನವಾಗಿರುತ್ತದೆ. ಆದ್ದರಿಂದ ನಕ್ಷತ್ರಗಳು ಮಿನುಗುತ್ತವೆ.

11. ಗ್ರಹಗಳು ಏಕೆ ಮಿನುಗುವುದಿಲ್ಲ ಎಂದು ವಿವರಿಸಿ .
ಗ್ರಹಗಳು ಭೂಮಿಗೆ ಬಹು ಹತ್ತಿರದಲ್ಲಿವೆ ಮತ್ತು ವಿಸ್ತರಿಸಿದ ಬೆಳಕಿನ ಮೂಲಗಳಂತೆ ಕಾಣುತ್ತವೆ. ನಾವು ಒಂದು ಗ್ರಹವನ್ನು ಹಲವಾರು ಬಿಂದು ಗಾತ್ರದ ಬೆಳಕಿನ ಮೂಲಗಳ ಒಂದು ಸಂಗ್ರಹ ಎಂದು ಬಾವಿಸಿದರೆ ಒಟ್ಟು ಎಲ್ಲಾ ಬಿಂದುಗಳಿಂದ ನಮ್ಮ ಕಣ್ಣನ್ನು ತಲುಪುವ ಬೆಳಕಿನ ವ್ಯತ್ಯಾಸವು ಎಲ್ಲಾ ಬಿಂದುಗಳ ಬೆಳಕಿನ ಸರಾಸರಿ ಹತ್ತಿರವಾಗುತ್ತದೆ. ಇದರಿಂದಾಗಿ ಗ್ರಹಗಳ ಮಿನುಗುವಿಕೆ ಶೂನ್ಯವಾಗಿದೆ.

12. ಸೂರ್ಯನು ಮುಂಜಾನ ಕಂಪಾಗಿರಲು ಕಾರಣವೇನು ?
ಮುಂಜಾನೆಯ ಸಮಯದಲ್ಲಿ ಸೂರ್ಯನ ಕಿರಣಗಳು ನಮ್ಮನ್ನು ತಲುಪಲು ಭೂಮಿಯ ವಾಯುಮಂಡಲದಲ್ಲಿ ಬಹಳ ದೂರ ಕ್ರಮಿಸಬೇಕು.ಈ ಸಂದರ್ಭದಲ್ಲಿ ಕಡಿಮೆ ತರಂಗಾಂತರವಿರುವ ಬೆಳಕಿನ ಕಿರಣವು ಹೆಚ್ಚು ಚದುರುತ್ತದೆ ಮತ್ತು ಹೆಚ್ಚು ತರಂಗಾಂತರವಿರುವ ಬೆಳಕಿನ ಕಿರಣವು ನಮ್ಮನ್ನು ತಲುಪುತ್ತದೆ. ನೀಲಿ ಬಣ್ಣವು ಕಡಿಮೆ ತರಂಗಾಂತರವನ್ನು ಹೊಂದಿದೆ ಮತ್ತು ಕೆಂಪು ಬಣ್ಣವು ಅಧಿಕ ತರಂಗಾಂತರವನ್ನು ಹೊಂದಿದೆ. ಆದ್ದರಿಂದ ಮುಂಜಾನೆಯ ಸಮಯದಲ್ಲಿ ಸೂರ್ಯ ಕೆಂಪಾಗಿ ಕಾಣುತ್ತಾನೆ.

13. ಗಗನಯಾತ್ರಿಗೆ ಆಕಾಶವು ನೀಲಿಯಾಗಿ ಕಾಣದೆ ಕಪ್ಪಾಗಿ ಕಾಣಲು ಕಾರಣವೇನು ?
ಗಗನಯಾತ್ರೆಯು ಅತಿ ಎತ್ತರದಲ್ಲಿ ಹಾರುತ್ತಿರುವಾಗ ಆ ಎತ್ತರದಲ್ಲಿ ವಾಯುಮಂಡಲವಿರುವುದಿಲ್ಲ ಮತ್ತು ಬೆಳಕಿನ ಚದುರುವಿಕೆಯು ಉಂಟಾಗುವುದಿಲ್ಲ. ಬೆಳಕು ಚದುರದ ಕಾರಣ ಗಗನಯಾತ್ರಿಯ ಕಣ್ಣಿಗೆ ಯಾವುದೇ ಬೆಳಕು ಬೀಳುವುದಿಲ್ಲ ಮತ್ತು ಆಕಾಶವು ಕಪ್ಪಾಗಿ ಕಾಣುತ್ತದೆ.


You Might Like

Post a Comment

0 Comments