Recent Posts

ನಮ್ಮ ಪರಿಸರ - ೧೦ ನೇ ತರಗತಿ ವಿಜ್ಞಾನ ಪುಸ್ತಕದ ಪ್ರಶ್ನೋತ್ತರಗಳು

 

 ಅಧ್ಯಾಯ-15
ನಮ್ಮ ಪರಿಸರ ವಿಜ್ಞಾನ ನೋಟ್ಸ್‌
 
 ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ

1. ಪೋಷಣಾ ಸ್ತರಗಳು ಎಂದರೇನು ? ಆಹಾರ ಸರಪಳಿಗೆ ಒಂದು ಉದಾಹರಣೆ ಕೊಡಿ ಮತ್ತು ಅದರಲ್ಲಿನ ವಿವಿಧಪೋಷಣಾಸ್ತರಗಳನ್ನು ಹೆಸರಿಸಿ

ಆಹಾರ ಸರಪಳಿಯ ಪ್ರತಿಯೊಂದು ಹಂತ ಅಥವಾ ಮಟ್ಟವನ್ನು ಪೋಷಣಾ ಸ್ತರಗಳು ಎನ್ನುವರು.
 

 
2.ಪರಿಸರ ವ್ಯವಸ್ಥೆಯಲ್ಲಿ ವಿಘಟಕಗಳ ಪಾತ್ರವೇನು?
ಬ್ಯಾಕ್ಟಿರಿಯಾ ಮತ್ತು ಶಿಲೀಂದ್ರಗಳಂತಹ ವಿಘಟಕ ಜೀವಿಗಳು ಸತ್ತ ಸಸ್ಯ /ಪ್ರಾಣಿ ದೇಹವನ್ನು ವಿಘಟಿಸುವ ಮೂಲಕ ತಮ್ಮ ಆಹಾರ ಪಡೆಯುತ್ತವೆ.ಸತ್ತ ಸಸ್ಯ/ಪ್ರಾಣಿಗಳ ದೇಹದಲ್ಲಿರುವ ಸಾವಯವ ವಸ್ತುಗಳನ್ನು ಸರಳ ನಿರವಯವ ವಸ್ತುಗಳಾಗಿ ವಿಘಟಿಸಿ ಪರಿಸರ ವ್ಯವಸ್ಥೆಗೆ ಅವುಗಳನ್ನು ಹಿಂದಿರುಗಿಸುತ್ತವೆ.ಉದಾ:ಇಂಗಾಲದ ಡೈ ಆಕ್ಸೆಡ್,ನೀರು,ಕೆಲವು ಪೋಷಕಾಂಶಗಳು,

3.ಕೆಲವು ವಸ್ತುಗಳು ಜೈವಿಕ ವಿಘಟನೀಯ ಮತ್ತು ಕೆಲವು ಜೈವಿಕವಿಘಟನೀಯವಲ್ಲ, ಏಕೆ ?
ಮಾನವ ನಿರ್ಮಿತ ವಸ್ತುಗಳಾದ ಪ್ಲಾಸ್ಟಿಕ್ ಗಾಜು ಇತ್ಯಾದಿಗಳು ಸೂಕ್ಷ್ಮಜೀವಿಗಳಿಂದ ವಿಘಟನೆಗೆ ಒಳಪಡುವುದಿಲ್ಲ.ಏಕೆಂದರೆ ಸೂಕ್ಷ್ಮಜೀವಿಗಳಲ್ಲಿ ಈ ವಸ್ತುಗಳನ್ನು ವಿಘಟಿಸುವ ಕಿಣ್ವಗಳು ಉತ್ಪತ್ತಿ ಆಗುವುದಿಲ್ಲ.ಇಂಥಹ ವಸ್ತುಗಳನ್ನು ಜೈವಿಕವಿಘಟನೆಗೆ ಒಳಗಾಗದ ವಸ್ತುಗಳು ಎನ್ನುವರು.ಆದರೆ ಪೇಪರ್,ಮರ,ತರಕಾರಿ ಸಿಪ್ಪೆಯಂಥಹ ಕೆಲವೊಂದು ವಸ್ತುಗಳನ್ನು ಸೂಕ್ಷ್ಮಜೀವಿಗಳು ತಮ್ಮಲ್ಲಿ ಉತ್ಪತ್ತಿಯಾಗುವ ಕಿಣ್ವಗಳ ಸಹಾಯದದಿಂದ ವಿಘಟಿಸುತ್ತವೆ. ಇಂತಹ ವಸ್ತುಗಳನ್ನು ಜೈವಿಕವಿಘಟನೆಗೆ ಒಳಪಡುವ ವಸ್ತುಗಳು

4. ಜೈವಿಕವಿಘಟನೀಯ ವಸ್ತುಗಳು ಪರಿಸರದ ಮೇಲೆ ಉಂಟುಮಾಡುವ ಯಾವುದಾದರೂ ಎರಡು ಪರಿಣಾಮಗಳನ್ನು ತಿಳಿಸಿ
ಅ) ಜೈವಿಕ ವಿಘಟನೆಗೆ ಒಳಪಡುವ ವಸ್ತುಗಳಾದ ತರಗೆಲೆ,ತರಕಾರಿ ಸಿಪ್ಪೆ, ಸಸ್ಯಭಾಗಗಳು ಇತ್ಯಾದಿಗಳಿಂದ ಉತ್ತಮ ಕಂಪೋಸ್ಟ್ ಗೊಬ್ಬರ ತಯಾರಿಸಿ ಮಣ್ಣಿನ ಫಲವತ್ತತೆ ಹೆಚ್ಚಿಸಬಹುದು.
ಆ) ಜೈವಿಕ ವಿಘಟನೆಗೆ ಒಳಪಡುವ ವಸ್ತುಗಳು ಸೂಕ್ಷ್ಮಜೀವಿಗಳಿಂದ ವಿಘಟನೆಗೆ ಒಳಪಟ್ಟಾಗ ತಮ್ಮಲ್ಲಿರುವ ಕಾರ್ಬನ್ ಅಂಶವನ್ನು ವಾತಾವರಣಕ್ಕೆ ಹಿಂದಿರುಗಿಸುತ್ತವೆ.

5. ಜೈವಿಕ ವಿಘಟನೀಯವಲ್ಲದ ವಸ್ತುಗಳು ಪರಿಸರದ ಮೇಲೆ ಉಂಟುಮಾಡುವ ಯಾವುದಾದರೂ ಎರಡು ಪರಿಣಾಮಗಳನ್ನು ತಿಳಿಸಿ.
ಅ) ಜೈವಿಕವಿಘಟನೀಯವಲ್ಲದ ವಸ್ತುಗಳು ನೀರು ಮತ್ತು ಮಣ್ಣಿನ ಮಾಲಿನ್ಯಕ್ಕೆ ಕಾರಣವಾಗುತ್ತವೆ.
ಆ) ಪ್ಲಾಸ್ಟಿಕ್ ನಂತಹ ವಸ್ತುಗಳನ್ನು ಕೆಲವೊಂದು ಪ್ರಾಣಿಗಳು ಆಕಸ್ಮಿಕವಾಗಿ ತಿಂದರೆ ಅವುಗಳ ದೇಹಕ್ಕೆ ತೊಂದರೆ ಆಗಬಹುದು ಮತ್ತು ಸಾವೂ ಕೂಡಾ ಸಂಭವಿಸಬಹುದು.

6. ಓಝೋನ್ ಎಂದರೇನು ಮತ್ತು ಅದು ಪರಿಸರ ವ್ಯವಸ್ಥೆಯ ಮೇಲೆ ಹೇಗೆ ಪರಿಣಾಮವನ್ನು ಉಂಟುಮಾಡುತ್ತದೆ.?
ಓಝೋನ್ ಎನ್ನುವುದು ಆಕ್ಸಿಜನ್ ನ ಮೂರು ಪರಮಾಣುಗಳಿಂದ ರೂಪುಗೊಂಡ ಒಂದು ಅಣುವಾಗಿದೆ.ಸೂರ್ಯನಿಂದ ಬರುವ ನೇರಳಾತೀತ ಕಿರಣಗಳಿಂದ ಭೂಮಿಯ ಮೇಲೆಯನ್ನು ಈ ಅಣುವಿನ ಪದರ ರಕ್ಷಿಸುತ್ತದೆ. ಓಝೋನ್ ಎನ್ನುವುದು ವಾತಾವರಣದ ಉನ್ನತ ಸ್ಥರದಲ್ಲಿ ನೇರಳಾತೀತ ವಿಕಿರಣವು ಆಕ್ಸಿಜನ್ ಅಣುವಿನ ಜೊತೆ ವರ್ತಿಸಿ ಉಂಟಾದ ಒಂದು ಸಂಯುಕ್ತವಾಗಿದೆ.ಹೆಚ್ಚಿನ ತೀವ್ರತೆಯ ನೇರಳಾತೀತ ವಿಕಿರಣಗಳು ಕೆಲವು ಆಕ್ಸಿಜನ್ ಅಣುಗಳನ್ನು ಆಕ್ಸಿಜನ್ ಪರಮಾಣುಗಳಾಗಿ ವಿಭಜಿಸುತ್ತವೆ.ನಂತರ ಈ ಪರಮಾಣುಗಳು ಇತರ ಆಕ್ಸಿಜನ್ ಅಣುಗಳೊಂದಿಗೆ ಸೇರಿ ಈ ಕೆಳಗೆ ತೋರಿಸಿದಂತೆ ಓಝೋನ್ ಎನ್ನುವುದು ಆಕ್ಸಿಜನ್ ನ ಮೂರು ಪರಮಾಣುಗಳಿಂದ ರೂಪುಗೊಂಡ ಒಂದು ಅಣುವಾಗಿದೆ.
ಸೂರ್ಯನಿಂದ ಬರುವ ನೇರಳಾತೀತ ಕಿರಣಗಳಿಂದ ಭೂಮಿಯ ಮೇಲೆಯನ್ನು ಈ ಅಣುವಿನ ಪದರ ರಕ್ಷಿಸುತ್ತದೆ. ಓಝೋನ್ ಎನ್ನುವುದು ವಾತಾವರಣದ ಉನ್ನತ ಸ್ಥರದಲ್ಲಿ ನೇರಳಾತೀತ ವಿಕಿರಣವು ಆಕ್ಸಿಜನ್ ಅಣುವಿನ ಜೊತೆ ವರ್ತಿಸಿ ಉಂಟಾದ ಒಂದು ಸಂಯುಕ್ತವಾಗಿದೆ.ಹೆಚ್ಚಿನ ತೀವ್ರತೆಯ ನೇರಳಾತೀತ ವಿಕಿರಣಗಳು ಕೆಲವು ಆಕ್ಸಿಜನ್ ಅಣುಗಳನ್ನು ಆಕ್ಸಿಜನ್ ಪರಮಾಣುಗಳಾಗಿ ವಿಭಜಿಸುತ್ತವೆ.ನಂತರ ಈ ಪರಮಾಣುಗಳು ಇತರ ಆಕ್ಸಿಜನ್ ಅಣುಗಳೊಂದಿಗೆ ಸೇರಿ ಈ ಕೆಳಗೆ ತೋರಿಸಿದಂತೆ ಓಝೋನ್ ರೂಪುಗೊಳ್ಳುತ್ತದೆ.
 

ಓಝೋನ್ ಒಂದು ಪ್ರಾಣಾಂತಿಕ ವಿಷವಾಗಿದೆ.ಆದಾಗ್ಯೂ ವಾತಾವರಣದ ಉನ್ನತ ಸ್ಥರದಲ್ಲಿ ಇದು ಒಂದು ಅತ್ಯಗತ್ಯ ಕಾರ್ಯವನ್ನು ನಿರ್ವಹಿಸುತ್ತದೆ. ನೇರಳಾತೀತ ವಿಕಿರಣಗಳಿಂದ ಭೂಮಿಯನ್ನು ರಕ್ಷಿಸುತ್ತದೆ. ಈ ನೇರಳಾತೀತ ವಿಕಿರಣಗಳು ಜೀವಿಗಳಿಗೆ ಹೆಚ್ಚು ಹಾನಿಕರವಾಗಿದೆ.ಮಾನವರಲ್ಲಿ ಇದುಚರ್ಮದ ಕ್ಯಾನ್ಸರ್ ಉಂಟುಮಾಡುತ್ತದೆ. ಸಸ್ಯಪ್ಲವಕಗಳು ನೇರಳಾತೀತ ವಿಕಿರಣಗಳಿಂದಾಗಿ ನಾಶಹೊಂದಿ ವಾತಾವರಣದಲ್ಲಿನ ಇಂಗಾಲದ ಡೈ ಆಕ್ಸೆಡ್ ಪ್ರಮಾಣ ಹೆಚ್ಚಲು ಕಾರಣವಾಗಿ ಜಾಗತಿಕ ತಾಪಮಾನ ಏರಿಕೆಗೆ ಕಾರಣವಾಗುತ್ತದೆ.

7. ತ್ಯಾಜ್ಯ ವಿಲೇವಾರಿಯನ್ನು ಕಡಿಮೆ ಮಾಡಲು ನೀವು ಹೇಗೆ ಸಹಾಯ ಮಾಡುವಿರಿ ? ಯಾವುದಾದರೂ ಎರಡು ವಿಧಾನ ತಿಳಿಸಿ.
ಅ) ಜೈವಿಕ ವಿಘಟನೆಯಾಗುವ ವಸ್ತುಗಳಿಗೆ ಹಸಿರು ಬಣ್ಣದ ಮತ್ತು ಜೈವಿಕ ವಿಘಟನೆಯಾಗದ ವಸ್ತುಗಳಿಗೆ ನೀಲಿ ಬಣ್ಣದ ಪ್ರತ್ಯೇಕ ಕಸದ ಬುಟ್ಟಿಗಳನ್ನು ಇಡುವುದು.
ಆ) ಪ್ಲಾಸ್ಟಿಕ್ ವಸ್ತುಗಳ ಬಳಕೆಯನ್ನು ಆದಷ್ಟು ಕಡಿಮೆ ಮಾಡುವುದು .

ಅಭ್ಯಾಸದ ಪ್ರಶ್ನೆಗಳಿಗೆ ಉತ್ತರಗಳು

1, ಈ ಕೆಳಗಿನವುಗಳಲ್ಲಿ ಯಾವ ಗುಂಪುಗಳು ಜೈವಿಕ ವಿಘಟನೆಗೆ ಒಳಗಾಗುವ ವಸ್ತುಗಳನ್ನು ಮಾತ್ರ ಒಳಗೊಂಡಿದೆ

a) ಹುಲ್ಲು,ಹೂವುಗಳು ಮತ್ತು ಚರ್ಮ

2.ಈ ಕೆಳಗಿನವುಗಳಲ್ಲಿ ಯಾವುದರಿಂದ ಒಂದು ಆಹಾರ ಸರಪಳಿಯನ್ನು ರಚಿಸಬಹುದು ?
b) ಹುಲ್ಲು,ಮೇಕೆ ಮತ್ತು ಮಾನವ

3.ಈ ಕೆಳಗಿನವುಗಳಲ್ಲಿ ಪರಿಸರಸ್ನೇಹಿ ಅಭ್ಯಾಸಗಳು ಯಾವುವು ?
d) ಮೇಲಿನ ಎಲ್ಲವೂ

4.ಒಂದು ವೇಳೆ ನಾವು ಒಂದು ಪೋಷಣಾಸ್ತರದಲ್ಲಿನ ಎಲ್ಲಾ ಜೀವಿಗಳನ್ನು ಕೊಂದರೆ ಏನಾಗುತ್ತದೆ ?
ಅನೇಕ ಪೋಷಣಾಸ್ತರಗಳು ಸೇರಿ ಒಂದು ಆಹಾರ ಸರಪಳಿ ರಚನೆಯಾಗುತ್ತದೆ. ಈ ಆಹಾರ ಸರಪಳಿಯಲ್ಲಿನ ಒಂದು ಪೋಷಣಾಸ್ತರ ನಾಶವಾದರೆ ಸರಪಳಿಯಲ್ಲಿನ ಉಳಿದ ಜೀವಿಗಳಿಗೆ ಹಾನಿಯಾಗುತ್ತದೆ. ಉದಾಹರಣೆಗೆ ಒಂದು ಪ್ರದೇಶದಲ್ಲಿನ ಸಸ್ಯಗಳು (ಉತ್ಪಾದಕಗಳು ) ನಾಶವಾದರೆ ಮುಂದಿನ ಸ್ತರವಾದ ಸಸ್ಯಾಹಾರಿ ಪ್ರಾಣಿಗಳಿಗೆ ಆಹಾರದ ಕೊರತೆಯುಂಟಾಗಿ ಅವು ನಾಶ ಹೊಂದುತ್ತವೆ. ಅದೇ ರೀತಿ ಮಾಂಸಾಹಾರಿ ಪ್ರಾಣಿಗಳು ಕೂಡಾ ಸಸ್ಯಾಹಾರಿಗಳ ಕೊರತೆಯಿಂದ ಆಹಾರ ಸಿಗದೆ ನಾಶಹೊಂದುತ್ತವೆ.

5. ಒಂದು ಪೋಷಣಾಸ್ತರದ ಎಲ್ಲಾ ಜೀವಿಗಳನ್ನು ತೆಗೆದುಹಾಕುವುದರ ಪರಿಣಾಮವು ವಿವಿಧ ಪೋಷಣಾಸ್ತರಗಳಲ್ಲಿ ವಿಭಿನ್ನವಾಗಿರುತ್ತದೆಯೇ ? ಯಾವುದೇ ಪೋಷಣಾ ಸ್ತರದ ಜೀವಿಗಳನ್ನು ಪರಿಸರ ವ್ಯವಸ್ಥೆಗೆ ಯಾವುದೇ ಹಾನಿಯಾಗದಂತೆ ತೆಗೆದು ಹಾಕಬಹುದೇ ?
ಹೌದು.ಒಂದು ಪೋಷಣಾ ಸ್ತರದ ಎಲ್ಲಾ ಜೀವಿಗಳನ್ನು ತೆಗೆದು ಹಾಕುವುದರ ಪರಿಣಾಮವು ವಿವಿಧ ಪೋಷಣಾ ಸ್ತರಗಳಲ್ಲಿ ವಿಭಿನ್ನವಾಗಿರುತ್ತದೆ.
ಆಹಾರ ಸರಪಳಿಯಲ್ಲಿ ಎಲ್ಲಾ ಉತ್ಪಾದಕ ಜೀವಿಗಳನ್ನು ತೆಗೆದು ಹಾಕಿದರೆ ಭಕ್ಷಕ ಜೀವಿಗಳು ನಾಶವಾಗುತ್ತವೆ. ಒಂದು ಪೋಷಣಾ ಸ್ತರದಲ್ಲಿ ಇರುವ ಎಲ್ಲಾ ಮಾಂಸಾಹಾರಿಗಳನ್ನು ತೆಗೆದು ಹಾಕಿದರೆ ಸಸ್ಯಹಾರಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತದೆ. ಮತ್ತು ಸಸ್ಯಾಹಾರಿಗಳು ಎಲ್ಲಾ ಹಸಿರು ಸಸ್ಯಗಳನ್ನು ತಿಂದು ಮುಗಿಸುತ್ತವೆ.
ಯಾವುದೇ ಪೋಷಣಾ ಸ್ತರದ ಜೀವಿಗಳನ್ನು ಪರಿಸರ ವ್ಯವಸ್ಥೆಗೆ ಹಾನಿಯಾಗದಂತೆ ತೆಗೆದು ಹಾಕಲು ಸಾಧ್ಯವಿಲ್ಲ.ಯಾವುದೇ ಪೋಷಣಾ ಸ್ತರದ ಜೀವಿಗಳನ್ನು ಜೀವಿಗಳನ್ನು ತೆಗೆದು ಹಾಕಲು ಪ್ರಯತ್ನಿಸಿದರೆ ಆ ಪೋಷಣಾ ಸ್ತರದ ಹಿಂದಿನ ಸ್ತರದ ಜೀವಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತದೆ. ಇದು ಪರಿಸರದ ಅಸಮತೋಲನಕ್ಕೆ ಕಾರಣವಾಗುತ್ತದೆ.ಆ ಪೋಷಣಾ ಸ್ತರದ ಮುಂದಿನ ಸ್ತರದ ಜೀವಿಗಳು ಆಹಾರದ ಕೊರತೆ ಅನುಭವಿಸಿ ಗಣನೀಯವಾಗಿ ನಾಶವಾಗುತ್ತ ಪರಿಸರದ ಅಸಮತೋಲನಕ್ಕೆ ಕಾರಣವಾಗುತ್ತದೆ.

6. ಜೈವಿಕ ಸಂವರ್ಧನೆ ಎಂದರೇನು ? ಪರಿಸರ ವ್ಯವಸ್ಥೆಯ ವಿವಿಧ ಹಂತಗಳಲ್ಲಿ ಈ ವರ್ಧನೆಯ ಮಟ್ಟವು ವಿಭಿನ್ನವಾಗಿರುತ್ತದೆಯೇ?
ಹಾನಿಕಾರಕ ಅಥವಾ ಮಾಲಿನ್ಯಕಾರಕ ವಸ್ತುಗಳ ಸಾರತೆಯು ಆಹಾರ ಸರಪಳಿಯಲ್ಲಿ ಒಂದು ಪೋಷಣಾ ಸ್ತರದಿಂದ ಮತ್ತೊಂದು ಪೋಷಣಾ ಸ್ತರಕ್ಕೆ ಸಾಗುತ್ತಿದ್ದಂತೆ ಕ್ರಮೇಣ ಹೆಚ್ಚುತ್ತಾ ಹೋಗುವ ಪ್ರಕ್ರಿಯೆಗೆ ಜೈವಿಕ ಸಂವರ್ಧನೆ ಎನ್ನುವರು
ಪರಿಸರ ವ್ಯವಸ್ಥೆಯ ವಿವಿಧ ಹಂತಗಳಲ್ಲಿ ಜೈವಿಕ ಸಂವರ್ಧನೆ ಮಟ್ಟವು ವಿಭಿನ್ನವಾಗಿರುತ್ತದೆ. ಪೋಷಣಾಸ್ತರಗಳಲ್ಲಿ ಮುಂದುವರೆದಂತೆ ಜೈವಿಕ ಸಂವರ್ಧನೆ ಹೆಚ್ಚಾಗುತ್ತದೆ. ಉನ್ನತ ಮಟ್ಟದ ಜೀವಿಗಳಲ್ಲಿ ಗರಿಷ್ಟ ಮಟ್ಟದ ಜೈವಿಕ ಸಂವರ್ಧನೆ ಆಗುತ್ತದೆ.

7. ನಾವು ಉಚ್ಚಾಯಿಸುವ, ಜೈವಿಕ ವಿಘಟನೆಗೆ ಒಳಗಾಗದ ತ್ಯಾಜ್ಯಗಳಿಂದ ಉಂಟಾಗುವ ಸಮಸ್ಯೆಗಳು ಯಾವುವು ?
೧. ಜೈವಿಕ ವಿಘಟನೆಗೆ ಒಳಗಾಗದ ತ್ಯಾಜ್ಯಗಳಿಂದ ಮಣ್ಣು ಮತ್ತು ಜಲಮಾಲಿನ್ಯ ಉಂಟಾಗುತ್ತದೆ.
೨. ಪ್ಲಾಸ್ಟಿಕ್ ನಂತಹ ಜೈವಿಕ ವಿಘಟನೆಗೆ ಒಳಗಾಗದ ತ್ಯಾಜ್ಯಗಳ ಸಂಗ್ರಹದಿಂದ ಅಂತರ್ಜಲ ಮಟ್ಟ ಕುಸಿಯುತ್ತದೆ
೩.ಪರಿಸರದಲ್ಲಿ ದೀರ್ಘ ಕಾಲ ಉಳಿದು ಜೈವಿಕ ಸಂವರ್ಧನೆಗೆ ಕಾರಣವಾಗುತ್ತದೆ.
೪. ಮಣ್ಣಿನ ಫಲವತ್ತತೆಯನ್ನು ಕುಂಠಿತಗೊಳಿಸುತ್ತವೆ.

8. ಒಂದು ವೇಳೆ ನಾವು ಉತ್ಪಾದಿಸುವ ಎಲ್ಲಾ ತ್ಯಾಜ್ಯಗಳು ಜೈವಿಕ ವಿಘಟನೀಯವಾಗಿದ್ದರೆ ಇದು ಪರಿಸರದ ಮೇಲೆ ಯಾವುದೇ ಪರಿಣಾಮ ಉಂಟುಮಾಡುವುದಿಲ್ಲವೇ ?
ಜೈವಿಕ ವಿಘಟನೀಯ ವಸ್ತುಗಳು ವಿಘಟಕ ಜೀವಿಗಳಾದ ಬ್ಯಾಕ್ಟಿರಿಯಾ ಅಥವಾ ಇತರೆ ಕೊಳೆತಿನಿಗಳಿಂದ ವಿಘಟನೆಗೆ ಒಳಗಾಗುವಾಗ ಕೆಟ್ಟ ವಾಸನೆ ಉತ್ಪತ್ತಿಯಾಗುತ್ತದೆ ಮತ್ತು ಆ ಸ್ಥಳದಲ್ಲಿ ಇಲಿ ಹೆಗ್ಗಣ, ನೊಣ, ಕೀಟಗಳು ಉತ್ಪತ್ತಿಯಾಗಿ ರೋಗಗಳ ಹರಡುವಿಕೆಗೆ ಕಾರಣವಾಗುತ್ತದೆ.

9. ಓರೋನ್ ಪದರಕ್ಕೆ ಉಂಟಾಗುವ ಹಾನಿಯು ಕಾಳಜಿಗೆ ಆರಣವಾಗಿದೆ ಏಕೆ? ಈ ಹಾನಿಯನ್ನು ಸೀಮಿತಗೊಳಿಸಲು ಯಾವ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ?
•    ಓರೋನ್ ಪದರಕ್ಕೆ ಉಂಟಾಗುವ ಹಾನಿಯಿಂದ ನೇರವಾಗಿ ಭೂಮಿಗೆ ತಲುಪುವ ನೇರಳಾತೀತ ವಿಕಿರಣಗಳಿಂದ ಮಾನವನಲ್ಲಿ `ಚರ್ಮದ ಕ್ಯಾನ್ಸರ್ ಉಂಟಾಗುತ್ತದೆ.
•    ಕಣ್ಣಿನ ಕ್ಯಾಟರಾಕ್ಟ್ ಕಾಯಿಲೆ ಬರುತ್ತದೆ. ಸಸ್ಯ ಮತ್ತು ಪ್ರಾಣಿಗಳ ಬೆಳವಣಿಗೆ ಮತ್ತು ಶಾರೀರಿಕ ಕ್ರಿಯೆಗಳ ಮೇಲೆ ತೀವ್ರ ಪರಿಣಾಮ ಬೀರುತ್ತದೆ.
•    ಕೃಷಿ ಬೆಳಗಳ ಇಳುವರಿ ಮೇಲೆ ಪರಿಣಾಮ ಬೀಳುತ್ತದೆ.
•    ಜಾಗತಿಕ ತಾಪಮಾನದ ಹೆಚ್ಚಳಕ್ಕೆ ಕಾರಣವಾಗುತ್ತದೆ.
1980 ರ ದಶಕದಲ್ಲಿ ಓರೋನ್ ಪ್ರಮಾಣವು ತೀವ್ರವಾಗಿ ಕುಸಿಯಲಾರಂಭಿಸಿತು.ಶೀತಲೀಕರಣ ಮತ್ತು ಅಗ್ನಿಶಾಮಕದಲ್ಲಿ ಬಳಸಲ್ಪಡುವ ಕ್ಲೋರೋ ಫ್ಲೋರೋ ಕಾರ್ಬನ್ ಗಳಂಥಹ ಸಂಶ್ಲೇಷಿತ ರಾಸಾಯನಿಕಗಳು ಈ ಕುಸಿತಕ್ಕೆ ಕಾರಣ ಎಂದುಕಂಡುಕೊಳ್ಳಲಾಗಿದೆ.
1987 ರಲ್ಲಿ ಸಂಯುಕ್ತ ರಾಷ್ಟ್ರಗಳ ಪರಿಸರ ಕಾರ್ಯಕ್ರಮ ಸಿಎಫ್ಸಿ ಗಳ ಉತ್ಪಾದನೆಯನ್ನು ಸ್ಥಗಿತಗೊಳಿಸುವಂಥ ಒಪ್ಪಂದ ಮಾಡಿಕೊಂಡಿತು.ಪ್ರಪಂಚದಾದ್ಯಂತ ಸಿಎಫ್ ಸಿ ಮುಕ್ತ ರೆಫ್ರಿಜರೇಟರ್ ಗಳನ್ನು ಎಲ್ಲಾ ಉತ್ಪಾದಕ ಕಂಪೆನೆಗಳು ತಯಾರಿಸುವುದು ಕಡ್ಡಾಯವಾಗಿದೆ.



You Might Like

Post a Comment

0 Comments