Recent Posts

ರಾಸಾಯನಿಕ ಕ್ರಿಯೆಗಳು ಮತ್ತು ಸಮೀಕರಣಗಳು - ೧೦ ನೇ ತರಗತಿ ವಿಜ್ಞಾನ ಪುಸ್ತಕದ ಪ್ರಶ್ನೋತ್ತರಗಳು


 ಅಧ್ಯಾಯ -1
ರಾಸಾಯನಿಕ ಕ್ರಿಯೆಗಳು ಮತ್ತು ಸಮೀಕರಣಗಳು ವಿಜ್ಞಾನ ನೋಟ್ಸ್

ರಾಸಾಯನಿಕ ಕ್ರಿಯೆಗಳು ಮತ್ತು ಸಮೀಕರಣಗಳು ಪಾಠದ ಪ್ರಶ್ನೆಗಳು


1) ಮೆಗ್ನೀಸಿಯಂ ಪಟ್ಟಿಯನ್ನು ಗಾಳಯಲ್ಲಿ ಉರಿಸುವ ಮೊದಲು ಸ್ವಚ್ಛಗೊಳಿಸಬೇಕು ಏಕೆ?
ಮೆಗ್ನಿಸಿಯಂ ಗಾಳಿಯ ಜೊತೆ ವರ್ತಿಸಿ ಆಕ್ಸೆಡ್ ಪದರ ಉಂಟುಮಾಡುತ್ತದೆ . ಇದನ್ನು ಹೋಗಲಾಡಿಸಿ ವೇಗವಾಗಿ ಉರಿಯಲು .

2) ಈ ಕೆಳಗಿನ ರಾಸಾಯನಿಕ ಕ್ರಿಯೆಗಳಿಗೆ ಸರಿದೂಗಿಸಿದ ಸಮೀಕರಣ ಬರೆಯಿರಿ.
i ) H₂ + Cl₂ → 2 HCI
ii ) 3BaCl2 + Al2 ( SO4 )3 →3BaSO4 + 2AICI3 ,
iii ) 2Na + H20→ 2NaOH

3.ಈ ಕೆಳಗಿನ ಕ್ರಿಯೆಗಳಿಗೆ ಭೌತಸ್ಥಿತಿಗಳ ಸಂಕೇತಗಳೊಂದಿಗೆ ಸರಿದೂಗಿಸಿದ ಸಮೀಕರಣ ಬರೆಯಿರಿ.
i ) ಕ್ಯಾಲ್ಸಿಯಂ ಆಕ್ಸೆಡ್ CaO
ii ) CaO + H₂O → Ca ( OH )2
ಅಭ್ಯಾಸದ ಪ್ರಶ್ನೆಗಳಿಗೆ ಉತ್ತರಗಳು

1) ಈ ಕೆಳಗಿನ ಕ್ರಿಯೆಯ ಕುರಿತ ಹೇಳಿಕೆಗಳಲ್ಲಿ ಯಾವುವು ತಪ್ಪಾಗಿವೆ?
i ) a and b

2) Fe2 O3 + 2Al → Al2 O3 + 2Fe
ಮೇಲಿನ ಕ್ರಿಯೆಯು ಯಾವುದಕ್ಕೆ ಉದಾಹರಣೆ
d ) ಸ್ಥಾನಪಲ್ಲಟ ಕ್ರಿಯೆ ,

3. ಕಬ್ಬಿಣದ ಚೂರುಗಳಿಗೆ ಸಾರರಿಕ್ತ ಹೈಡ್ರೋಕ್ಲೋರಿಕ್ ಆಮ್ಲವನ್ನು ಸೇರಿಸಿದಾಗ ಏನಾಗುತ್ತದೆ?
a ) ಹೈಡೋಜನ್ ಅನಿಲ ಮತ್ತು ಕಬ್ಬಿಣದ ಕ್ಲೋರೈಡ್ ಉಂಟಾಗುತ್ತದೆ .

4) ಸರಿದೂಗಿಸಿದ ರಾಸಾಯನಿಕ ಸಮೀಕರಣ ಎಂದರೇನು? ರಾಸಾಯನಿಕ ಸಮೀಕರಣಗಳನ್ನು ಏಕೆ ಸರಿದೂಗಿಸಬೇಕು.?
ಪ್ರತಿವರ್ತಕ ಮತ್ತು ಉತ್ಪನ್ನಗಳಲ್ಲಿರುವ ಧಾತು / ಸಂಯುಕ್ತಗಳ ರಾಶಿ ಮತ್ತು ಆವೇಶ ಸಮನಾಗಿರುವ ಸಮೀಕರಣವೇ ಸರಿದೂಗಿಸಿದ ರಾಸಾಯನಿಕ ಸಮೀಕರಣ ,
ರಾಶಿ ಸಂರಕ್ಷಣಾ ನಿಯಮದ ಪ್ರಕಾರ ರಾಸಾಯನಿಕ ಕ್ರಿಯೆಯ ಉತ್ಪನ್ನಗಳಲ್ಲಿರುವ ಧಾತುಗಳ ಒಟ್ಟು ರಾಶಿಯು ಪ್ರತಿವರ್ತಕಗಳಲ್ಲಿರುವ ಧಾತುಗಳ ಒಟ್ಟು ರಾಶಿಗೆ ಸಮನಾಗಿರಬೇಕು.ಆದ್ದರಿಂದ ರಾಸಾಯನಿಕ ಸಮೀಕರಣವನ್ನು ಸರಿದೂಗಿಸಬೇಕು .

5) ಈ ಕೆಳಗಿನ ಹೇಳಿಕೆಯನ್ನು ರಾಸಾಯನಿಕ ಸಮೀಕರಣಗಳ ರೂಪಕ್ಕೆ ಪರಿವರ್ತಿಸಿ ನಂತರ ಅವುಗಳನ್ನು ಸರಿದೂಗಿಸಿ.

a) 3H2+N2 →2NH3
b) 2H2S + 3O2 →2H2O+2SO2
c) 3Bacl2 + Al2(SO4)3→2AlCl3 + 3BaaSO4
d) 2K+2H2O→2KOH+H2

6) ಈ ಕೆಳಗಿನ ರಾಸಾಯನಿಕ ಸಮೀಕರಣಗಳನ್ನು ಸರಿದೂಗಿಸಿ. 

a ) 2HNO3 + 2Ca ( OH3 )2 → 2Ca(NO3)2+2H2O
b ) 6NaOH + 3H₂SO4 →3Na2SO4+6H2O
c ) NaCl + AgNO3 →AgCl+ NaNo3
d ) BaCl₂ + H₂SO4 →BaSO4+2HCI

7) ಈ ಕೆಳಗಿನ ಕ್ರಿಯೆಗಳಿಗೆ ಸರಿದೂಗಿಸಿದ ಸಮೀಕರಣ ಬರೆಯಿರಿ
a ) 2Ca ( OH )2 + 2CO2 →2CaCO3+2H2O
b ) Zn + 2 AgNO3 →Zn(NO3)2+2Ag
c ) 2Al + 3CuCl₂ →2AlCl3+3Cu
d ) BaCl₂ + K₂SO4 →BaSO4+2KCI

8) ಈ ಕೆಳಗಿನವುಗಳಿಗೆ ಸರಿದೂಗಿಸಿದ ರಾಸಾಯನಿಕ ಸಮೀಕರಣ ಬರೆಯಿರಿ ಮತ್ತು ಪ್ರತಿಯೊಂದು ಕ್ರಿಯೆಯ ವಿಧವನ್ನು ಗುರುತಿಸಿ

a ) 2KBr + Bal₂ →2KI+BaBr2 ದ್ವಿಸ್ಥಾನಪಲ್ಲಟ ಕ್ರಿಯೆ
b ) ZnCO3 →ZnO+CO2 ವಿಭಜನೆ ಕ್ರಿಯೆ
c ) H₂ + Cl₂ →2HCI ಸಂಯೋಗ ಕ್ರಿಯೆ
d ) Mg + 2HCI →MgCl2+HCI ಸ್ಥಾನಪಲ್ಲಟ ಕ್ರಿಯೆ

9) ಅಂತರುಷ್ಣಕ ಕ್ರಿಯೆ ಮತ್ತು ಬಹಿರುಷ್ಣಕ ಕ್ರಿಯೆಗಳು ಎಂದರೇನು? ಉದಾ ಕೊಡಿ.
ಅಂತರುಷಕ ಕ್ರಿಯೆ ಎಂದರೆ ಉಷ್ಣವನ್ನು ಹೀರಿಕೊಳ್ಳುವ ರಾಸಾಯನಿಕ ಕ್ರಿಯೆ . ಉದಾಹರಣೆಗೆ ಬೆಳ್ಳಿಯ ಕ್ಲೋರೈಡ್ ನ ಬಿಳಿ ಬಣ್ಣವು ಸೂರ್ಯನ ಬೆಳಕನ್ನು ಹೀರಿಕೊಂಡು ಬೂದು ಬಣ್ಣಕ್ಕೆ ತಿರುಗುತ್ತದೆ .
ಬಹಿರುಷ್ಣಕ ಕ್ರಿಯೆ ಎಂದರೆ ಉಷ್ಣವನ್ನು ಬಿಡುಗಡೆ ಮಾಡುವ ರಾಸಾಯನಿಕ ಕ್ರಿಯೆ.ಉದಾಹರಣೆಗೆ ಕ್ಯಾಲ್ಸಿಯಂ ಆಕ್ಸೆಡ್ ನೀರಿನೊಂದಿಗೆ ವರ್ತಿಸಿ ಉಷ್ಣ ಬಿಡುಗಡೆ ಮಾಡುತ್ತಾ ಅರಳಿದ ಸುಣ್ಣ ( ಕ್ಯಾಲ್ಸಿಯಂ ಹೈಡ್ರಾಕ್ಸೆಡ್ ) ವನ್ನು ಉತ್ಪತ್ತಿ ಮಾಡುತ್ತದೆ .

10) ಉಸಿರಾಟವನ್ನು ಬಹಿರುಷ್ಣಕ ಕ್ರಿಯೆ ಎಂದು ಪರಿಗಣಿಸಲಾಗಿದೆ? ವಿವರಿಸಿ.
ಉಸಿರಾಟದ ಸಮಯದಲ್ಲಿ ಗೂಕೋಸ್ ಆಮ್ಲಜನಕದೊಂದಿಗೆ ವರ್ತಿಸಿ ಇಂಗಾಲದ ಡೈ ಆಕ್ಸೆಡ್ ಮತ್ತು ನೀರನ್ನು ಉತ್ಪತ್ತಿ ಮಾಡುವುದರ ಜೊತೆಗೆ ಶಕ್ತಿಯನ್ನು ಉಷ್ಣದ ರೂಪದಲ್ಲಿ ಬಿಡುಗಡೆ ಮಾಡುತ್ತದೆ .
C6H12O2 →CO2+H2O+ಶಕ್ತಿ

11) ವಿಭಜನ ಕ್ರಿಯಗಳು, ಸಂಯೋಗ ಕ್ರಿಯೆಗಳಿಗೆ ವಿರುದ್ಧವಾಗಿದೆ ಎನ್ನುತ್ತಾರೆ ಏಕೆ? ಈ ಕ್ರಿಯೆಗಳಿಗೆ ಸಮೀಕರಣವನ್ನು ಬರೆಯಿರಿ

ವಿಭಜನೆ ಕ್ರಿಯೆಗಳು ಸಂಯೋಗ ಕ್ರಿಯೆಯ ವಿರುದ್ಧವಾಗಿವೆ . ವಿಭಜನೆ ಕ್ರಿಯೆಯಲ್ಲಿ ಒಂದು ಸಂಯುಕ್ತವು 2 ಅಥವಾ ಹೆಚ್ಚು ಸಂಯುಕ್ತಗಳಾಗಿ ಅಥವಾ ಧಾತುಗಳಾಗಿ ವಿಭಜನೆ ಹೊಂದುತ್ತವೆ.ಪಾದರಸದ ಆಕ್ಸೆಡ್ ನು ಕಾಯಿಸಿದಾಗ ಅದು ಪಾದರಸ ಮತ್ತು ಆಮ್ಲಜನಕವಾಗಿ ವಿಭಜನೆ ಹೊಂದುತ್ತದೆ .
2HgO→ 2Hg + O₂
ಈ ಕ್ರಿಯೆಗೆ ಉಷ್ಣ ಒದಗಿಸಬೇಕಾದ ಕಾರಣ ಇದು ಅಂತರುಷ್ಟಕ ಕ್ರಿಯೆಯಾಗಿದೆ . ಹೆಚ್ಚಿನ ಎಲ್ಲಾ ರಾಸಾಯನಿಕ ವಿಭಜನೆ ಕ್ರಿಯೆಗಳು ಅಂತರುಷಕ ಕ್ರಿಯೆಗಳು , ಆದರೆ ರಾಸಾಯನಿಕ ಸಂಯೋಗ ಕ್ರಿಯೆಯಲ್ಲಿ 2 ಅಥವಾ ಹೆಚ್ಚು ಧಾತುಗಳು ಅಥವಾ ಸಂಯುಕ್ತಗಳು ಸಂಯೋಗವಾಗಿ ಒಂದೇ ಉತ್ಪನ್ನ ಉಂಟಾಗುತ್ತದೆ .
H₂ + O₂→2H2O

12) ಉಷ್ಣ, ಬೆಳಕು ಮತ್ತು ವಿದ್ಯುಚ್ಛಕ್ತಿಯ ರೂಪದಲ್ಲಿ ಶಕ್ತಿಯನ್ನು ಒದಗಿಸುವ ಮೂಲಕ ನಡೆಸುವ ವಿಭಜನ ಕ್ರಿಯೆಗಳಿಗೆ ತಲಾ ಒಂದೊಂದು ಉದಾಹರಣೆ ಕೊಡಿ.

ಕ್ಯಾಲ್ಸಿಯಂ ಕಾರ್ಬೋನೇಟನ್ನು ಕಾಯಿಸಿದಾಗ ಕ್ಯಾಲ್ಸಿಯಂ ಆಕ್ಸೆಡ್ ಮತ್ತು ಕಾರ್ಬನ್ ಡೈ ಆಕ್ಸೆಡ್ ಬಿಡುಗಡೆಯಾಗುತ್ತದೆ .
CaCO3→ CaO + CO2
ಆಮ್ಲ ಮಿಶ್ರಿತ ನೀರಿನೊಂದಿಗೆ ವಿದ್ಯುತ್ ಹಾಯಿಸಿದಾಗ ಅದು ಆಮ್ಲಜನಕ ಮತ್ತು ಜಲಜನಕವಾಗಿ ವಿಭಜಿಸಲ್ಪಡುತ್ತದೆ .
2H₂O →H₂ + O₂
ಬೆಳ್ಳಿಯ ಕ್ಲೋರೈಡನ್ನು ಸೂರ್ಯನ ಬೆಳಕಿಗೆ ಒಡ್ಡಿದಾಗ ಅದು ಬೆಳ್ಳಿ ಮತ್ತು ಕ್ಲೋರಿನ್ ಅನಿಲವನ್ನು ಬಿಡುಗಡೆ ಮಾಡುತ್ತದೆ .
2AgCl → 2Ag+Cl2

13) ಸ್ಥಾನಪಲ್ಲಟ ಕ್ರಿಯೆ ಮತ್ತು ದ್ವಿಸ್ಥಾನಪಲ್ಲಟ ಕ್ರಿಯೆಗಳ ನಡುವಿನ ವ್ಯತ್ಯಾಸವೇನು? ಈ ಕ್ರಿಯೆಗಳಿಗೆ ಸಮೀಕರಣವನ್ನು ಬರೆಯಿರಿ.
ರಾಸಾಯನಿಕ ಸ್ಥಾನಪಲ್ಲಟ ಕ್ರಿಯೆಯಲ್ಲಿ ಒಂದು ಕ್ರಿಯಾಶೀಲ ಧಾತು ಸಂಯುಕ್ತದಲ್ಲಿರುವ ಇನ್ನೊಂದು ಧಾತುವನ್ನು ಪಲ್ಲಟಗೊಳಿಸುತ್ತದೆ . ದ್ವಿಸ್ಥಾನಪಲ್ಲಟ ಕ್ರಿಯೆಯಲ್ಲಿ ಎರಡು ಧನ ಅಯಾನುಗಳು ಮತ್ತು ಋಣ ಅಯಾನುಗಳು ತಮ್ಮ ಸಂಯುಕ್ತಗಳಿಂದ ಪಲ್ಲಟಗೊಳ್ಳುತ್ತವೆ .
ಉದಾಹರಣೆಗೆ CuSO4 + Zn ZnSO4 →ZnSO4 + Cu
Na2CO3+CaCl2 →CaCo3+Nacl

14) ಬೆಳ್ಳಿಯ ಶುದ್ದೀಕರಣ ಕ್ರಿಯೆಯು ಬೆಳ್ಳಿಯ ನೈಟ್ರೇಟ್ ದ್ರಾವಣದಿಂದ ಬೆಳ್ಳಿಯು ತಾಮ್ರದಿಂದ ಸ್ಥಾನಪಲ್ಲಟಗೊಳ್ಳುವುದನ್ನು ಒಳಗೊಂದಿದೆ, ಈ ಸಂದರ್ಭದಲ್ಲಿ ನಡೆಯುವ ಕ್ರಿಯೆಯನ್ನು ಬರೆಯಿರಿ.
Cu + 2AgNO3 → Cu ( NO3 )2 ( ಜಲೀಯ ) + 2Ag ( ಘನ )

15) ಪ್ರಕ್ಷೇಪನ ಕ್ರಿಯೆ ಎಂದರೇನು? ಉದಾಹರಣೆಗಳನ್ನು ವಿವರಿಸಿ.
ವಿಲೀನಗೊಂಡ ಅಯಾನುಗಳನ್ನು ಹೊಂದಿರುವ ಎರಡು ದ್ರಾವಣಗಳನ್ನು ಸೇರಿಸಿದಾಗ ವಿಲೀನಗೊಳ್ಳದ ಲವಣವು ಉತ್ಪತ್ತಿಯಾಗುತ್ತದೆ.ಸ್ವಲ್ಪ ಸಮಯದ ನಂತರ ತಳ ಸೇರುವ ಈ ಲವಣಕ್ಕೆ ಪ್ರಕ್ಷೇಪಣ ಎಂದೂ ಈ ಕ್ರಿಯೆಗೆ ಪ್ರಕ್ಷೇಪಣೆ ಕ್ರಿಯೆ ಎಂದು ಕರೆಯಲಾಗುತ್ತದೆ .
ಉದಾ : ಪೊಟ್ಯಾಷಿಯಂ ಕ್ಲೋರೈಡ್ ದ್ರಾವಣಕ್ಕೆ ಜಲೀಯ ಬೆಳ್ಳಿಯ ನೈಟ್ರೇಟ್ ದ್ರಾವಣವನ್ನು ಸೇರಿಸಿದಾಗ ಬೆಳ್ಳಿಯ ಕ್ಲೋರೈಡ್ ನ ಪ್ರಕ್ಷೇಪಣ ಉಂಟಾಗುವುದು .
AgNO3 + KCI→ AgCl + KNO3

16) ಆಕ್ಸಿಜನ್ ಪಡೆದುಕೊಳ್ಳುವುದು ಅಥವಾ ಪಡೆದುಕೊಳ್ಳುವುದಕ್ಕೆ ಸಂಬಂಧಿಸಿದಂತೆ ಕೆಳಗಿನ ಪ್ರತಿಯೊಂದಕ್ಕೂ ಎರೆಡೆರಡು ಉದಾ ನೀಡಿ.
a ) ಉತ್ಕರ್ಷಣ ಕ್ರಿಯೆ ಎಂದರೆ ವಸ್ತುವೊಂದು ಆಕ್ಸಿಜನ್ ಪಡೆದುಕೊಳ್ಳುವುದು ,
ಉದಾ : ತಾಮ್ರದ ಪುಡಿಯನ್ನು ಆಕ್ಸಿಜನ್ ಜೊತೆಗೆ ಕಾಯಿಸಿದಾಗ ತಾಮ್ರದ ಆಕ್ಸೆಡ್ ಉಂಟಾಗುವುದು .
2Cu + 0₂ → 2CuO
ಬಿಸಿಯಾಗಿರುವ ತಾಮ್ರದ ಆಕ್ಸೆಡ್ ಮೇಲೆ ಹೈಡೋಜನ್ ಅನಿಲವನ್ನು ಹಾಯಿಸಿದಾಗ ತಾಮ್ರ ದೊರಕುವುದು , ಹೈಡೋಜನ್ ಆಕ್ಸಿಜನ್ಅನ್ನು ಪಡೆದುಕೊಂಡು ನೀರಾವಿಯಾಗುತ್ತದೆ .
CuO + H₂ → Cu + H₂O
b ) ವಸ್ತುವೊಂದು ಆಕ್ಸಿಜನ್ ಕಳೆದುಕೊಂಡರೆ ಅದು ಅಪಕರ್ಷಣೆ .
ಉದಾ : ಬಿಸಿಯಾಗಿರುವ ತಾಮ್ರದ ಆಕ್ಸೆಡ್ ಮೇಲೆ ಹೈಡೋಜನ್ ಅನಿಲವನ್ನು ಹಾಯಿಸಿದಾಗ ತಾಮ್ರದ ಆಕ್ಸೆಡ್ ಆಕ್ಸಿಜನ್ ಅನ್ನು ಕಳೆದುಕೊಂಡು ತಾವು ದೊರಕುವುದು .
CuO + H₂ → Cu +H₂O
ಸತುವಿನ ಆಕ್ಸೆಡ್ ಜೊತೆ ಕಾರ್ಬನ್ ವರ್ತಿಸಿದಾಗ ಸತುವಿನ ಆಕ್ಸೆಡ್ ಅಪಕರ್ಷಣಗೊಂಡು ಸತು ಉಂಟಾಗುತ್ತದೆ.
ZnO + C → Zn + CO

17) ಹೊಳಪುಳ್ಳ ಕಂದುಬಣ್ಣದ X ಧಾತುವನ್ನು ಗಾಳಿಯಲ್ಲಿ ಕಾಸಿದಾಗ ಕಪ್ಪು ಬಣ್ಣಕ್ಕೆ ತಿರುಗುತ್ತದೆ, X ಧಾತು ಮತ್ತು ಉಂಟಾದ ಕಪ್ಪು ಬಣ್ಣದ ಸಂಯುಕ್ತವನ್ನು ಹೆಸರಿಸಿ.
X ಧಾತು ತಾಮ್ರ , ಕಪ್ಪು ಬಣ್ಣದ ಸಂಯುಕ್ತ ತಾಮ್ರದ ಆಕ್ಸೆಡ್ .

18) ಕಬ್ಬಿಣದ ವಸ್ತುಗಳಿಗೆ ಬಣ್ಣ ಬಳಿಯುವುದೇಕೆ?

ಕಬ್ಬಿಣವು ಗಾಳಿಯಲ್ಲಿನ ಆಮ್ಲಜನಕ ಮತ್ತು ತೇವಾಂಶದ ಜೊತೆಗೆ ವರ್ತಿಸಿದಾಗ ಕಬ್ಬಿಣದ ಜಲೀಯ ಆಕ್ಸೆಡ್ ಆಗಿ ಪರಿವರ್ತನೆ ಹೊಂದಿ ತುಕ್ಕು ಹಿಡಿಯುತ್ತದೆ . ಇದನ್ನು ತಪ್ಪಿಸಲು ಕಬ್ಬಿಣದ ವಸ್ತುಗಳಿಗೆ ಬಣ್ಣ ಬಳಿಯಲಾಗುತ್ತದೆ .

19) ಎಣ್ಣೆ ಮತ್ತು ಕೊಬ್ಬು ಹೊಂದಿದ ಆಹಾರ ಪದಾರ್ಥಗಳ ಮೂಲಕ ನೈಟ್ರೋಜನ್ ಅನಿಲವನ್ನು ಹಾಯಿಸುತ್ತಾರೆ ಏಕೆ?

ಎಣ್ಣೆ ಮತ್ತು ಕೊಬ್ಬು ಹೊಂದಿದ ಆಹಾರ ಪದಾರ್ಥಗಳು ಗಾಳಿಯಲ್ಲಿರುವ ಆಮ್ಲಜನಕದೊಂದಿಗೆ ವರ್ತಿಸಿ ಕಮಟು ವಾಸನೆಯನ್ನು ಉಂಟುಮಾಡುತ್ತದೆ . ಇದನ್ನು ತಪ್ಪಿಸಲು ಅವುಗಳ ಜೊತೆಗೆ ವರ್ತಿಸದ ನೈಟ್ರೋಜನನ್ನು ಹಾಯಿಸಲಾಗುತ್ತದೆ .

20) ಒಂದೊಂದು ಉದಾಹರಣೆಯೊಂದಿಗೆ ಕೆಳಗಿನ ಪದಗಳನ್ನು ವಿವರಿಸಿ.
ನಶಿಸುವಿಕೆ : ಲೋಹಗಳ ಮೇಲೆ ಗಾಳಿಯಲ್ಲಿರುವ ಆಮ್ಲಜನಕ ಮತ್ತು ನೀರಾವಿ ವರ್ತಿಸಿ ಅವು ಸವೆಯುವಂತೆ ಮಾಡುವುದನ್ನು ನಶಿಸುವಿಕೆ ಎನ್ನುವರು . ನಶಿಸುವಿಕೆಯು ಸಾಮಾನ್ಯವಾಗಿ ಲೋಹಗಳ ಉತ್ಕರ್ಷಣ ಕ್ರಿಯೆಯಿಂದಾಗುತ್ತದೆ . ಉದಾಹರಣೆಗೆ ಕಬ್ಬಿಣಕ್ಕೆ ತುಕ್ಕು ಹಿಡಿಯುವುದು .
ಕಮಟುವಿಕೆ : ಕೊಬ್ಬು ಮತ್ತು ಎಣ್ಣೆ ಪದಾರ್ಥಗಳು ಉತ್ಕರ್ಷಣೆಗೊಂಡಾಗ ಅದರ ರುಚಿ ಮತ್ತು ವಾಸನೆ ಬದಲಾಗುವುದೇ ಕಮಟುವಿಕೆ . ಎಣ್ಣೆ ಪದಾರ್ಥಗಳನ್ನು ರೆಫ್ರಿಜರೇಟರನಲ್ಲಿ ಇಟ್ಟಾಗ ತಾಪದ ಇಳಿಕೆಯಿಂದ ಉತ್ಕರ್ಷಣ ಕ್ರಿಯೆ ನಿಧಾನವಾಗುತ್ತದೆ . ಇದರಿಂದ ಬೇಗನೆ ಅವು ಕೆಟ್ಟು ಹೋಗುವುದಿಲ್ಲ .

You Might Like

Post a Comment

0 Comments