Recent Posts

ಪಾರಿವಾಳ - ೦೯ ನೇ ತರಗತಿ ಸಿರಿ ಕನ್ನಡ ಪುಸ್ತಕದ ಪ್ರಶ್ನೋತ್ತರಗಳು


ಪಾರಿವಾಳ

ಆ ) ಈ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.

1. ಮುದ್ದು ಪಾರಿವಾಳಗಳ ಜೋಡಿ ಎಲ್ಲಿ ಸಂಸಾರ ಹೂಡಿದ್ದವು ?
ಉತ್ತರ : ದಟ್ಟಕಾಡಿನಲ್ಲಿದ್ದ ಹೆಮ್ಮರದ ಹೊದರಿನಲ್ಲಿ ಮುದ್ದು ಪಾರಿವಾಳಗಳ ಜೋಡಿ ಸಂಸಾರ ಹೂಡಿದ್ದವು

2. ಜೋಡಿ ಪಾರಿವಾಳಗಳು ಹೇಗೆ ಬಾಳುತ್ತಿದ್ದವು ?
ಉತ್ತರ  : ಹಗಲಿರುಳು ಒಂದನ್ನೋಂದು ಬಿತ್ತಿರದೆ ಜೊತೆಗೂಡಿ ಬಾಳುತ್ತಿದ್ದವು

3. ಬಲೆಯಲ್ಲಿದ್ದ ಮರಿಗಳು ಹೊರಗೆ ಬರಲು ಏನು ಮಾಡಿದವು ?
ಉತ್ತರ : ಬಲೆಯಲ್ಲಿದ್ದ ಮರಿಗಳು ಹೊರಗೆ ಬರಲು ಚೀತ್ಕರಿಸತೊಡಗಿದವು .

4. ಏನನ್ನು ತೊರೆದು ಬಾಳಬೇಕು ?
ಉತ್ತರ : ವ್ಯಾಮೋಹವನ್ನು ತೊರೆದು ಬಾಳಬೇಕು .
 
ಆ ) ಈ ಪ್ರಶ್ನೆಗೆ ಮೂರು – ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ .

1. ಪಾರಿವಾಳಗಳ ಆನಂದಕ್ಕೆ ಕಾಣವೇನು ?
ಉತ್ತರ : ಒಂದು ದಟ್ಟಕಾಡಿನಲ್ಲಿದ್ದ ಹೆಮ್ಮರದ ಹೊದರಿನಲ್ಲಿ ಮುದ್ದು ಪಾರಿವಾಳಗಳ ಜೋಡಿ ವಾಸವಾಗಿದ್ದವು ಜೋಡಿ ಪಾರಿವಾಳಗಳು ಎಂದಿಗೂ ಒಂದನ್ನೊಂದು ಹಗಲಿರುಳು ಬಿಟ್ಟಿರದೆ ಜೊತೆಗೂಡಿ ಬಾಳಿದವು .
ಕಾಲಾಂತರದಲ್ಲಿ ಹೊದರಿನಲ್ಲಿ ಪುಟ್ಟ ಮರಿಗಳ ಮಧುರ ಸದ್ದು ಕೇಳಿತು . ಆ ಪುಟ್ಟ ಪಾರಿವಾಳಗಳ ಮಧುರವಾದ ಮಾತುಗಳನ್ನು ಕೇಳಿದ ಜೋಡಿ ಪಾರಿವಾಳಗಳಿಗೆ ಮತ್ತಷ್ಟು ಸಂತೋಷವಾಗಿತು .

2.  ಬೇಡ ಏನು ಮಾಡಿದನು ?
ಉತ್ತರ : ಕಾಡಿನ ಹೆಮ್ಮರ ಹೊದರಿನಲ್ಲಿ ಜೋಡಿ ಪಾರಿವಾಳಗಳ ಜೋಡಿ ತನ್ನ ಪುಟ್ಟ ಮರಿಗಳ ಜೊತೆಗೆ ಆನಂದದಿಂದ , ಸಂತೋಷದಿಂದ ಬಾಳುತ್ತಿದ್ದವು . ಇದನ್ನು ನೋಡಿ ಬೇಡನೊಬ್ಬನು ಬಲೆಯ ಹರಡಿದನು .
ಈ ಬಲೆಯಲ್ಲಿ ಮೊದಲು ಪುಟ್ಟ ಮರಿಗಳು ಹಾರಿ ಸಿಲುಕಿ ಹೊರಗೆ ಚೀತ್ಕರಿಸತೊಡಗಿದವು . ಮರಿ ಪಾರಿವಾಳಗಳ ಸ್ಥಿತಿಯನ್ನು ಕಂಡು ತಾಯಿ ಪಾರಿವಾಳ ಬಲೆಗೆ ಧುಮುಕಿತು .
ಹೆಂಡತಿಯನ್ನು ಬಿಟ್ಟಿರಲಾರದ ಗಂಡು ಪಾರಿವಾಳವು ಸಹ ಬಲೆಯಲ್ಲಿ ಬಿದ್ದಿತು . ಹಸಿದ ಬೇಡನು ಹೊತ್ತುಕೊಂಡು ಹೋದನು .

ಇ ) ಈ ಪ್ರಶ್ನೆಗೆ ಎಂಟು – ಹತ್ತು ವಾಕ್ಯಗಳಲ್ಲಿ ಉತ್ತರಿಸಿ.

1. ಜೋಡಿ ಪಾರಿವಾಳಗಳ ದುಡುಕಿನ ನಿರ್ಧಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ?
ಉತ್ತರ : ಕಾಡಿನಲ್ಲಿ ಒಂದು ಪಾರಿವಾಳಗಳ ಕುಟುಂಬ ವಾಸ ಮಾಡುತ್ತಿರುತ್ತದೆ . ಇವುಗಳು ಆನಂದದಿಂದ ತನ್ನ ಮರಿ ಪಾರಿವಾಳಗಳೊಂದಿಗೆ ಬಾಳುತ್ತಿರುವ ಸಂದರ್ಭದಲ್ಲಿ ಬೇಡನೊಬ್ಬನು ಬಂದು ಬಲೆಯನ್ನು ಹಾಕುತ್ತಾನೆ .
ಈ ಬಲೆಯಲ್ಲಿ ಮೊದಲು ಮರಿ ಪಾರಿವಾಳಗಳು ಬೀಳುತ್ತವೆ . ತನ್ನ ಮಕ್ಕಳು ಬಲೆಯಲ್ಲಿ ಬಿದ್ದಿರುವುದನ್ನು ನೋಡಿ ತಾಯಿ ಪಾರಿವಾಳವು ಸಹ ಬಲೆಯಲ್ಲಿ ಬೀಳುತ್ತದೆ .
ಹೆಂಡತಿ ಪಾರಿವಾಳ , ಮಕ್ಕಳು ಪಾರಿವಾಳ ಬಲೆಯಲ್ಲಿ ಬಿದ್ದಿರುವುದನ್ನು ನೋಡಿ ಗಂಡು ಪಾರಿವಾಳವು ಸಹ ಬಲೆಯಲ್ಲಿ ಬೀಳುತ್ತದೆ . ಈ ರೀತಿ ಎಲ್ಲಾ ಪಾರಿವಾಳಗಳು ದುಡುಕಿನ ನಿರ್ಧಾರವನ್ನು ತೆಗೆದುಕೊಂಡು ಬಲೆಯಲ್ಲಿ ಬೀಳಬಾರದಿತ್ತು .
ಮರಿ ಪಾರವಾಳಗಳು ಬಲೆಯಲ್ಲಿ ಬಿದ್ದಾಗ ತಾಯಿ ಪಾರಿವಾಳವು ಏವೇಕದಿಂದ ಯೋಚಿಸಿ ‘ ನಾನು ಬಲೆಯಲ್ಲಿ ಬಿದ್ದರೆ ಮರಿ ಪಾರಿವಾಳಗಳನ್ನು ಕಾಪಾಡಲು ಸಾಧ್ಯವೇ ? ‘ ಎಂದು ಯೋಚಿಸಿದ್ದರೆ ತಾನು ಬದುಕುಳಿಯಬಹುದಿತ್ತು .
ಅದರಂತೆ ಮರಿ ಪಾರಿವಾಳಗಳು , ಹೆಂಡತಿ ಪಾರಿವಾಳ ಬೇಡನ ಬಲೆಯಲ್ಲಿ ಬಿದ್ದಾಗ ಹೆಂಡತಿಯನ್ನು ಬಿಟ್ಟಿರಲಾರದೆ ಗಂಡು ಪಾರಿವಾಳ ಬಿಕ್ಕಿ ಬಿಕ್ಕಿ ಅಳುತ್ತಾ ಒಳಗೆ ಹಾರಿತು . ಅದಕ್ಕಾಗಿ ಕಾಯುತ್ತಿದ್ದ ಬೇಡ ಪಾರಿವಾಳಗಳನ್ನು ಹೊತ್ತು ನಡೆದನು .
ವ್ಯಾಮೋಹವನ್ನು ತೊರೆದು ಬಾಳಬೇಕು ಏನೇ ಬಂದರು ತಾಳ್ಮೆಯಿಂದ ಯೋಚಿಸಿ ಕಾರ್ಯಸಾಧನೆ ಮಾಡಬೇಕು . ಎಂಬುದೇ ನಮ್ಮ ಅಭಿಪ್ರಾಯವಾಗಿದೆ .

2. ‘ ಪಾರಿವಾಳ ‘ ಪದ್ಯದ ಕಥೆಯನ್ನು ನಿಮ್ಮ ಮಾತುಗಳಲ್ಲಿ ಬರೆಯಿರಿ .
ಉತ್ತರ : ‘ ಪಾರಿವಾಳ ‘ ಎಂಬ ಕವನವು ಒಂದು ಕಥನ ಕವನವಾಗಿದೆ . ಒಂದು ದಟ್ಟವಾದ ಕಾಡಿನ ಹೆಮ್ಮರದ ಹೊದರಿನಲ್ಲಿ ಮುದ್ದು ಪಾರಿವಾಳ ಜೋಡಿ ಸಂಸಾರ ಹೂಡಿ ಸುಃಖದಿಂದ ಬಾಳುತ್ತಿದ್ದವು .
ಈ ಪಾರಿವಾಳಗಳ ಜೋಡಿ ಹಗಲಿರುಳು ಒಂದನೊಂದು ಬಿಟ್ಟಿರದೆ ಜೊತೆಯಾಗಿ ಬಾಳುತ್ತಿದ್ದವು . ಈ ಪುಟ್ಟ ಸಂಸಾರದಲ್ಲಿ ಸುಃಖ , ಸಂತೋಷ , ಆನಂದ ಮನೆ ಮಾಡಿತ್ತು .
ಈ ಗೂಡಿನಲ್ಲಿ ಮೊಟ್ಟೆಯೊಡೆದು ತನ್ನ ಮರಿ ಪಾರಿವಾಳಗಳನ್ನು ನೋಡಿ ಅವುಗಳ ಸಂತೋಷ ಇಮ್ಮಡಿಯಾಯಿತು ಕಾಲಗತಿಸಿದಂತೆ ಮೊಟ್ಟೆಯೊಡೆದು ಮರಿಗಳಾಗಿ ಆ ಮರಿಗಳ ಮಧುರ ಸದ್ದು ಕೇಳಿ ಸಂತೋಷದಿಂದ ಜೀವನ ಸಾಗಿಸುತ್ತಿದ್ದವು , ಆನಂದದಿಂದ ಬಾಳು ಸಾಗಿಸುತ್ತಿದ್ದವು .
ಹೀಗಿರುವಾಗ ಒಂದು ಈ ಪುಟ್ಟ ಪಾರಿವಾಳ ಕುಟುಂಬದ ಮೇಲೆ ಬೇಡನೊಬ್ಬನ ಕಣ್ಣು ಬೀಳುತ್ತದೆ . ಈ ಬೇಡನು ಬಂದು ಬಲೆಯನ್ನು ಹಾಕಿದಾಗ ಈ ಬಲೆಯಲ್ಲಿ ಮೊದಲು ಮರಿ ಪಾರಿವಾಳಗಳು ಬಿದ್ದು ಸಿಲುಕಿದವು . ಬಲೆಯಿಂದ ಹೊರ ಬರಲು ಚೀತ್ಕರಿಸ ತೊಡಗಿದವು .
ಬಲೆಯಲ್ಲಿ ಬಿದ್ದು ಕಷ್ಟ ಪಡುವುದನ್ನು ನೋಡಿದ ತಾಯಿ ಪಾರಿವಾಳ ಸ್ವಲ್ಪವೂ ಯೋಚಿಸದೆ , ತಡಮಾಡದೆ ಬಲೆಯಲ್ಲಿ ಬಿದ್ದಿತು . ತನ್ನ ಮರಿ ಪಾರಿವಾಳಗಳು ,
ಹೆಂಡತಿ ಪಾರಿವಾಳ ಬಲೆಯಲ್ಲಿ ಬಿದ್ದಿರುವುದನ್ನು ನೋಡಿ ಗಂಡು ಪಾರಿವಾಳವು ಸಹ ಹಿಂದೆ ಮುಂದೆ ನೋಡದೆ ಹೆಂಡತಿ , ಮಕ್ಕಳನ್ನು ಕಾಪಾಡಲು ತಾನು ಬಲೆಗೆ ಬಿದ್ದಿತು .
ಮರಿ ಪಾರಿವಾಳಗಳ ಮೇಲಿನ ವ್ಯಾಮೋಹ ತಾಯಿ ಪಾರಿವಾಳ ಬಲೆಯಲ್ಲಿ ಬೀಳುವಂತೆ ಮಾಡಿತು . ಹೆಂಡತಿ , ಮಕ್ಕಳ ಮೇಲಿನ ವ್ಯಾಮೋಹದಿಂದ ವಿವೇಕ ಕಳೆದುಕೊಂಡು ಗಂಡು ಪಾರಿವಾಳ ಸಹ ಬಲೆಯಲ್ಲಿ ಬಿದ್ದಿತು , ಬೇಡನಿಗೆ ಲಾಭವೆ ಆಯಿತು .
ಈ ಸಂಸಾತವನ್ನು ಬೆಡನು ಹೊತ್ತುಕೊಂಡು ನಡೆದನು . “ ಮೋಹ ಮುಸುಕಿದ ಬುದ್ಧಿ ಸರ್ವನಾಶದ ಸಿದ್ಧಿ ವ್ಯಾಮೋಹವನು ತೊರೆದು ಬಾಳಬೇಕು ಏನು ಬಂದರು ಕೂಡ ತಾಳಬೇಕು ” ಎಂಬ ಕವಿಯ ಈ ಸಾಲುಗಳು ಪಾಠವಾಗಿ ನಿಲ್ಲುತ್ತವೆ .
ಮಕ್ಕಳು ಬಲೆಯಲ್ಲಿ ಬಿದ್ದಾಗ ತಾಯಿ ಪಾರಿವಾಳ ವ್ಯಾಮೋಹ ಬಿಟ್ಟು ಸ್ವಲ್ಪ ವಿವೇಕದಿಂದ ಯೋಚನೆ ಮಾಡಬೇಕಿತ್ತು . ಇದರಿಂದ ತನ್ನ ಪ್ರಾಣ ಉಳಿಯುತ್ತಿತ್ತು .
ಬೇಡನ ಬಲೆಯಲ್ಲಿ ಬಿದ್ದು ಮರಿ ಪಾರಿವಾಳಗಳ ಜೀವ ಹೋಗಬೇಕು ಎಂದು ಆ ವಿಧಿ ಬರೆದಿದ್ದರೆ ಯಾರು ತಾನೇ ತಪ್ಪಿಸಲು ಸಾಧ್ಯ ? ಎಂದು ತಾಯಿ ಪಾರಿವಾಳ ವಿವೇಕದಿಂದ ಯೋಚನೆ ಮಾಡಬೇಕಿತ್ತು.
ಇದೇ ರೀತಿ ಮರಿ ಪಾರಿವಾಳ , ಹೆಂಡತಿ ಪಾರಿವಾಳ ಬಲೆಯಲ್ಲಿ ಬಿದ್ದಾಗ ಗಂಡು ಪಾರಿವಾಳ ಯೋಚನೆ ಮಾಡಿದ್ದರೆ ಪಾರಿವಾಳಗಳ ಕುಟುಂಬ ಸರ್ವನಾಶವಾಗುತ್ತಿರಲಿಲ್ಲ . ಜೀವನ ಎಂದ ಮೇಲೆ ಕಷ್ಟ ನಷ್ಟ ಸಮಸ್ಯೆಗಳು ಬರುತ್ತವೆ .
ಸವಾಲುಗಳಿಗೆ ಹೆದರದೆ , ಬಾವುಕರಾಗಿ ಅನಾಹುತಗಳನ್ನು ಮಾಡಿಕೊಳ್ಳದೇ ವಿವೇಕದಿಂದ ಆಲೋಚಿಸಿ ಪರಿಹಾರ ಕಂಡುಕೊಳ್ಳಬೇಕು . ಎನೇ ಬಂದರು ಕಲ್ಲುಬಂಡೆಯಂತೆ ತಾಳಬೇಕು ಎಂದು ಕವಿ ಹೇಳಿದ್ದಾರೆ.

ಈ ) ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ.

1. “ ಒಳಗೆ ಬಂದಿತು ಬಳಿಗೆ ಬಿಕ್ಕಿ ಬಿಕ್ಕಿ
ಆಯ್ಕೆ : ಈ ವಾಕ್ಯವನ್ನು. ಸು . ರಂ . ಎಕ್ಕುಂಡಿ ಅವರ ‘ ಸಮಗ್ರ ಕಥನ ಕವನಗಳು ‘ ಎಂಬ ಕೃತಿಯಿಂದ ಆಯ್ದ ‘ ಪಾರಿವಾಳ ‘ ಎಂಬ ಪದ್ಯಭಾಗದಿಂದ ಆರಿಸಲಾಗಿದೆ
ಸಂದರ್ಭ : ಬೇಡನು ಹಾಕಿದ ಬಲೆಗೆ ಮೊದಲು ಮರಿ ಪಾರಿವಾಳಗಳು ಬೀಳುತ್ತವೆ . ಇದನ್ನು ನೋಡಿದ ತಾಯಿ ಪಾರಿವಾಳವು ಮಮತೆ , ವಾತ್ಸಲ್ಯದಿಂದ ಬಲೆಗೆ ಬೀಳುತ್ತದೆ .
ಹೆಂಡತಿ , ಮಕ್ಕಳು ಬಲೆಯಲ್ಲಿ ಬಿದ್ದ ದುಃಖವನ್ನು ನೋಡಿ ಸಹಿಸದ ಗಂಡು ಪಾರಿವಾಳವು ಬಲೆಯಲ್ಲಿ ಬಿದ್ದ ಸಂದರ್ಭದಲ್ಲಿ ಕವಿ ಈ ಮಾತನ್ನು ಹೇಳಿದ್ದಾರೆ .
ಸ್ವಾರಸ್ಯ : ಮರಿಗಳ ಮೇಲಿನ ಕುರುಡು ವಾತ್ಸಲ್ಯ , ಮಮತೆಯಿಂದ ತಾಯಿ ಪಾರಿವಾಳ , ಹೆಂಡತಿ , ಮಕ್ಕಳ ಮೇಲಿನ ವ್ಯಾಮೋಹದಿಂದ ವಿವೇಕ ಕಳೆದುಕೊಂಡು ಪಾರಿವಾಳ ಕುಟುಂಬ ನಾಶವಾಗಿರುವುದನ್ನು ಕವಿ ಸ್ವಾರಸ್ಯ ಪೂರ್ಣವಾಗಿ ಹೇಳಿದ್ದಾರೆ .
 
2. “ ಮೋಹ ಮುಸುಕಿದ ಬುದ್ಧಿ ಸರ್ವನಾಶದ ಸಿದ್ಧಿ
ಆಯ್ಕೆ : ಈ ವಾಕ್ಯವನ್ನು ಪದ್ಯಭಾಗದಿಂದ ಆರಿಸಲಾಗಿದೆ .
ಸಂದರ್ಭ : ಬೇಡನು ಹಾಕಿದ ಬಲೆಗೆ ಸಿಲುಕಿದ ಪುಟ್ಟ ಮರಿಗಳನ್ನು ಕಂಡ ತಂದೆ – ತಾಯಿ ಪಾರಿವಾಳಗಳು ಕುರುಡು ವಾತ್ಸಲ್ಯದ ಅವಿವೇಕದಿಂದ ತಾವೂ ಬಲೆಗೆ ಸಿಲುಕಿ ಬೇಡನ ಪಾಲಾದವು .
ಮೋಹ ಎಂಬುದು ಸರ್ವನಾಶಕ್ಕೆ ಕಾರಣ ವ್ಯಾಮೋಹ ತೊರೆದು ತಾಳ್ಮೆಯಿಂದ ಯೋಚಿಸಿ ಕಾರ್ಯ ಸಾಧನೆ ಮಾಡಬೇಕು ಎಂದು ಹೇಳುವ ಸಂದರ್ಭದಲ್ಲಿ ಈ ಮಾತು ಬಂದಿದೆ .
ಸ್ವಾರಸ್ಯ : ಮಕ್ಕಳು ಮರಿ , ಹೆಂಡತಿ , ನನ್ನ ಕುಟುಂಬ ಎಂಬ ವ್ಯಾಮೋಹದಿಂದ ಬದುಕಿದರೆ ಇಡೀ ಕುಟುಂಬವೇ ಸರ್ವನಾಶವಾಗುತ್ತದೆ . ಎಂಬುದನ್ನು ಕವಿ ಸ್ವಾರಸ್ಯ ಪೂರ್ಣವಾಗಿ ವಿವರಿಸಿದ್ದಾರೆ .
 
ಭಾಷಾ ಚಟುವಟಿಕೆ

1 .ರೂಪಕಾಲಂಕಾರವನ್ನು ನಿದರ್ಶನದ ಮೂಲಕ ವಿವರಿಸಿ.
ಲಕ್ಷಣ : ಉಪಮೇಯ , ಉಪಮಾಗಳು ಎರಡೂ ಒಂದೇ ಎಂದು ಭೇದವಿಲ್ಲದಂತೆ ಹೇಳುವ ಅಲಂಕಾರವೇ ರೂಪಕಾಲಂಕಾರ
ಉದಾ : ಸೀತೆಯ ಮುಖ ಕಮಲ ಅರಳಿತು
ಉಪಮೇಯ :  ಸೀತೆಯ ಮುಖ
ಉಪಮಾನ : ಕಮಲ
ಅಲಂಕಾರ : ರೂಪಕಾಲಂಕಾರ
ಸಮನ್ವಯ : ಉಪಮೇಯವಾದ ಸೀತೆಯ ಮುಖವನ್ನು ಉಪಮಾನವಾದ ಕಮಲಕ್ಕೆ ಅಭೇದವಾಗಿ ರೂಪಿಸಿದೆ ಹಾಗಾಗಿ ಸಮನ್ವಯ ಇದು ರೂಪಕಾಲಂಕಾರ
 
2. “ಸಾವಿತ್ರಿಯ ಮುಖಕಮಲ ಅರಳಿತು” ಇಲ್ಲಿರುವ ಅಲಂಕಾರವನ್ನು ಹೆಸರಿಸಿ ಸಮನ್ವಯಿಸಿರಿ
ಲಕ್ಷಣ : ಉಪಮೇಯ, ಉಪಮಾನಗಳು ಎರಡೂ ಒಂದೇ ಎಂದು ಭೇದವಿಲ್ಲದಂತೆ ಹೇಳುವ ಅಲಂಕಾರವೇ ರೂಪಕಾಲಂಕಾರ ,
ಉಪಮೇಯ : ಸಾವಿತ್ರಿಯ ಮುಖ
ಉಪಮಾನ : ಕಮಲ
ಅಲಂಕಾರ : ರೂಪಕಾಲಂಕಾರ
ಸಮನ್ವಯ : ಉಪಮೇಯವಾದ ಸಾವಿತ್ರಿಯ ಮುಖವನ್ನು ಉಪಮಾನವಾದ ಕಮಲ ಕೈ ಅಭೇದವಾಗಿ ರೂಪಿಸಿದೆ . ಹಾಗಾಗಿ ಇದು ರೂಪಕಾಲಂಕಾರ
 
3,  “ಶಾಲೆಗೆ ಈ ವಿದ್ಯಾರ್ಥಿಯೊಂದು ರತ್ನ”
ಲಕ್ಷಣ : ಉಪಮೇಯ , ಉಪಮಾಗಳು ಎರಡೂ ಒಂದೇ ಎಂದು ಭೇದವಿಲ್ಲದಂತೆ ಹೇಳುವ ಅಲಂಕಾರವೇ ರೂಪಕಾಲಂಕಾರ
ಉಪಮೇಯ : ವಿದ್ಯಾರ್ಥಿ
ಉಪಮಾನ   :  ರತ್ನ
ಅಲಂಕಾರ    : ರೂಪಕಾಲಂಕಾರ
ಸಮನ್ವಯ    : ಉಪಮೇಯವಾದ ವಿದ್ಯಾರ್ಥಿಯನ್ನು ಉಪಮಾನವಾದ ರತ್ನ ಕೈ ಅಭೇದವಾಗಿ ರೂಪಿಸಿದೆ . ಹಾಗಾಗಿ ಇದು ರೂಪಕಾಲಂಕಾರ ,,

4, ” ಮನೆಯೇ ಧರ್ಮಾಶ್ರಮ “
ಲಕ್ಷಣ            :          ಉಪಮೇಯ , ಉಪಮಾಗಳು ಎರಡೂ ಒಂದೇ ಎಂದು ಭೇದವಿಲ್ಲದಂತೆ ಹೇಳುವ ಅಲಂಕಾರವೇ ರೂಪಕಾಲಂಕಾರ
ಉಪಮೇಯ   :          ಮನೆ
ಉಪಮಾನ     :          ಧರ್ಮಾಶ್ರಮ
ಅಲಂಕಾರ     :          ರೂಪಕಾಲಂಕಾರ
ಸಮನ್ವಯ     :          ಉಪಮೇಯವಾದ ಮನೆಯನ್ನು ಉಪಮಾನವಾದ ಧರ್ಮಾಶ್ರಮಕ್ಕೆ ಅಭೇದವಾಗಿ ರೂಪಿಸಿದೆ ಹಾಗಾಗಿ ಇದು  ರೂಪಕಾಲಂಕಾರ
 
5. ‘ ಪಾರಿವಾಳ ‘ ಪದ್ಯದಲ್ಲಿರುವ ಅಂತ್ಯಪ್ರಾಸ ಪದಗಳನ್ನು ಪಟ್ಟಿಮಾಡಿ .
ಹೂಡಿ                  –        ಜೋಡಿ
ಒಂದನೊಂದು    –        ಬಂದು
ಕೇಳಿ                     –        ಬಾಳಿ
ಸೆರೆಗೆ                    –        ಹೊರಗೆ
ಹಕ್ಕಿ                    –         ಬಿಕ್ಕಿ
ಹಿಂಡು                –        ಕೊಂಡು
ಬಾಳಬೇಕು         –        ತಾಳಬೇಕು
 
ಆ ) ಕೊಟ್ಟಿರುವ ಪದ್ಯಭಾಗವನ್ನು ಪೂರ್ಣಗೊಳಿಸಿ ಕಂಠಪಾಠ ಮಾಡಿರಿ .

1. ದಟ್ಟ ಕಾಡಿನಲೊಂದು…………….ಪಾರಿವಾಳಗಳ ಜೋಡಿ

2. ಹಗಲಿರುಳು…………… ಹೊದರಿನಲ್ಲಿ ಬಂದು .
 
ದಟ್ಟ ಕಾಡಿನಲೊಂದು ಹೆಮ್ಮರದ ಹೊದರಿನಲಿ
ಇರುತಿತ್ತು ಪುಟ್ಟ ಸಂಸಾರ ಹೂಡಿ
ಮುದ್ದು ಬಿಳಿ ಪಾರಿವಾಳಗಳ ಜೋಡಿ ……
 
ಹಗಲಿರುಳು ಜೊತೆಗೂಡಿ ಬಾಳಿದವು ಈ ಜೋಡಿ
ಎಂದಿಗೂ ಅಗಲಿರವು ಒಂದನೊಂದು
ಹಿಗ್ಗು ತುಂಬಿತು ಹೊದರಿನಲ್ಲಿ ಬಂದು


You Might Like

Post a Comment

0 Comments