Recent Posts

ಹರಲೀಲೆ - ೦೯ ನೇ ತರಗತಿ ಸಿರಿ ಕನ್ನಡ ಪುಸ್ತಕದ ಪ್ರಶ್ನೋತ್ತರಗಳು

ಹರಲೀಲೆ

ಅ ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.

1. ನಂಬಿಯಣ್ಣನ ಪೂರ್ವಜನ್ಮದ ಹೆಸರೇನು ?
ಉತ್ತರ : ನಂಬಿಯಣ್ಣನ ಪೂರ್ವಜನ್ಮದ ಹೆಸರು ಪುಷ್ಪದತ್ತ

2. ಹರಲೀಲೆ ಪಾಠದ ಮೂಲ ಕೃತಿ ಯಾವುದು ?
ಉತ್ತರ : ಹರಲೀಲೆ ಪಾಠದ ಮೂಲ ಕೃತಿ ‘ ನಂಬಿಯಣ್ಣನ ರಗಳೆ ‘

3 , ಹರಲೀಲೆ ಪಾಠದ ಕವಿಯ ಹೆಸರೇನು ?
ಉತ್ತರ : ಗಿರಿಜೆಯು ಊರಲ್ಲಿರುವ ದೇವಾಲಯದಲ್ಲಿ ಇಂಬೇಕೆಂದು ಶಿವನು ತಿಳಿಸಿದನು .

4. ಹರಿಹರ ಬರೆದಿರುವ ಎರಡು ಕೃತಿಗಳನ್ನು ಹೆಸರಿಸಿ .
ಉತ್ತರ : ಗಿರಿಜಾಕಲ್ಯಾಣ , ‘ ಪಂಪಾಶತಕ ‘ , ‘ ರಕ್ಷಾಶತಕ ‘ ಹರಿಹರ ಅವರು ಬರೆದ ಕೃತಿಗಳು .
 
ಆ ) ಕೊಟ್ಟಿರುವ ಪ್ರಶ್ನೆಗಳಿಗೆ ಎರಡು ಮೂರು ವಾಕ್ಯಗಳಲ್ಲಿ ಉತ್ತರಿಸಿ.

1. ವಿರೂಪಾಕ್ಷನು ಗಿಂಜೆಗೆ ಏನೆಂದು ಹೇಳಿದನು ?
ಉತ್ತರ : ವಿರೂಪಾಕ್ಷನು ಗಿರಿಜೆಗೆ ” ದೇವಿ , ಕೇಳು ನಮ್ಮ ಮತ್ರನಾದ ಪುಷ್ಪದತ್ತನು ಭೂಲೋಕದಲ್ಲಿ ನಂಬಿಯಣ್ಣನಾಗಿ ಜನಿಸಿದ್ದಾನೆ . ಈಗ ಅವನು ಸಂಸಾರದಿಂದ ಕೆಟ್ಟು ಹೋಗಲು ಹವಣಿಸುತ್ತಿದ್ದಾನೆ .
ಆತನಿಗೆ ಮುಂಚೆ ನೀಡಿದ ಆಭಯದಂತೆ ಈ ನಾನು ಭೂಲೋಕಕ್ಕೆ ಹೋಗಿ , ಇಲ್ಲಿದ್ದ ರುದಕನ್ನಿಕೆಯರು ಚೋಳದೇಶದ ತಿರವಾರೂರು ಮತ್ತು ತಿರುವತ್ತಿಯೂರಿನಲ್ಲಿ ಪರಿವೆ ಮತ್ತು ಸಂಕಿಲಿಯರಾಗಿ ಜನಿಸಿದ್ದಾರೆ.
ನಾನು ಹೋಗಿ ಅವರಿಂದ ಸಕಲಸುಖವನ್ನು ಪೂಜೆಯನ್ನು ಕೈಗೊಂಡು ಬರುತ್ತೇನೆ ” ಎಂದು ಪರಮೇಶ್ವರನು ಗಿರಿಜೆಗೆ ಹೇಳಿದನು .

2. ಚೋಳದೇಶದಲ್ಲಿದ್ದ ಮೂರು ಗ್ರಾಮಗಳನ್ನು ಹೆಸರಿಸಿ.
ಉತ್ತರ : ಚೋಳದೇಶದಲ್ಲಿದ್ದ ಮೂರು ಗ್ರಾಮಗಳೆಂದರೆ ಮಣಮಂದ ಮತ್ತೂರು , ತಿರುವಾರೂರು , ಮತ್ತು ತಿರುವತ್ತಿಯೂರು

3.  ವೃದ್ಧಮಾಹೇಶ್ವರನು ಶಿವಮಂತ್ರವನ್ನು ಹೇಳುತ್ತಿದ್ದ ರೀತಿಯನ್ನು ತಿಳಿಸಿ .
ಉತ್ತರ : ವೃದ್ಧಮಾಹೇಶ್ವರನು ಪುಣ್ಯವೇ ಹಣ್ಣಾದಂತೆ ಮದುವೆ ಮಂಟಪದಲ್ಲಿ ಕಲ್ಕತ್ತಾ ಇದ್ದನು ಒಮ್ಮೊಮ್ಮೆ ಗೊರ್ ಗೊರ್ ಎಂದು ಶಬ್ದ ಮಾಡುತ್ತಾ ಕೊರಗುತ್ತಿದ್ದನು . ತೊದಲು ನುಡಿಗಳಿಂದ ನಮಃ ಶಿವಾಯ ನಮಃ ಶಿವಾಯ ಎಂದು ಶಿವಮಂತ್ರವನ್ನು ಹೇಳುತ್ತಿದ್ದನು .

4. ಕೆಳಗೆ ಬಿದ್ದ ವೃದ್ಧನನ್ನು ನೋಡಿ ನೆರೆದಿದ್ದ ಜನ ಏನೆಂದು ಮಾತನಾಡಿಕೊಂಡರು ?
ಉತ್ತರ : ವೃದ್ಧ ಮಾದೇಶ್ವರನು ಕೆಳಗೆ ಬಿದ್ದಾಗ ಅಲ್ಲಿ ಸೇರಿದ್ದರ ಜನರೆಲ್ಲರೂ ಶೈತ್ಯೋಪಚಾರ ಮಾಡಿ ಎಬ್ಬಿಸಿದರು . ಜನರು ಕೋಪದಿಂದ “ ಈ ವೃದ್ಧ ವಾಹಣನನ್ನು , ಮುಪ್ಪಿನ ಮೂರ್ಖನನ್ನು , ಗೌತಮನ ಗೋವನ್ನು ,
ಬ್ರಾಹ್ಮಣನ್ನು ಕೊಂದ ಬ್ರಹ್ಮಹತ್ಯಾದೋಷಿಯನ್ನು ಮದುವೆ ಮಂಟಪದೊಳಗೆ ಬಿಟ್ಟವರು ಯಾರು ? ಕರೆ ತಂದವರು ಯಾರು ? ಇನ್ನೂ ಈ ಮದುವೆ ನಡೆಯದು . ಒಂದು ಪಕ್ಷ ನಡೆದರೆ ಅಪ ಶಕುನ ” ಎಂದು ನೆರೆದಿದ್ದ ಜನ ಮಾತನಾಡಿಕೊಂಡರು .
 
ಇ ) ಕೊಟ್ಟಿರುವ ಪ್ರಶ್ನೆಗಳಿಗೆ ನಾಲ್ಕು – ಐದು ವಾಕ್ಯಗಳಲ್ಲಿ ಉತ್ತರಿಸಿ .

1. ಶಿವನು ವೃದ್ಧಮಾಹೇಶ್ವರನಾಗಿ ವೇಷಧರಿಸಲು ಕಾರಣವೇನು ?
ಉತ್ತರ : ಕೈಲಾಸದಲ್ಲಿರುವ ಉದ್ಯಾನವನದಲ್ಲಿ ಇಬ್ಬರು ರುದ್ರಕನ್ನಿಕೆಯರು ಹೂ ಬಿಡಿಸುತ್ತಿದ್ದರು . ಇದನ್ನು ರುದ್ರಗಣದ ಸದಸ್ಯರಲ್ಲೊಬ್ಬನಾದ ಪುಷ್ಪದತ್ತ ಗಮನಿಸಿ ಅವರನ್ನು ಅನುರಾಗ ಭಾವದಿಂದ ನೋಡಿದನು .
ಪುಷ್ಪದತ್ತನನ್ನು ಕಂಡ ರುದ್ರಕನ್ನಿಕೆಯರೂ ಅವನನ್ನು ಅದೇ ಭಾವದಿಂದ ನೋಡುತ್ತಿರುವುದನ್ನು ಶಿವ ಗಮನಿಸಿದ ಮತ್ತು ಅಸಮಾಧಾನ ಹೊಂದಿದ ಕೈಲಾಸದಲ್ಲಿ ಗಣಗಳು ಇಂತಹ
ವಿಕಾರಭಾವನೆಗಳನ್ನು ಹೊಂದಿರುವುದು ಅಪರಾಧ ಹಾಗಾಗಿ ಶಿವನು ಈ ಮೂವರಿಗೂ ಇಹಲೋಕದಲ್ಲಿ ಮನುಜರಾಗಿ ಹುಟ್ಟಿ ಎಂದು ಶಪಿಸಿದನು .
ಈ ಶಾಪದಿಂದ ಮುಷದತ್ತನು ನರಲೋಕದಲ್ಲಿ ಹುಟ್ಟಿ ನಂಬಿ ಎಂಬ ಹೆಸರನ್ನು ಪಡೆದು ಸಂಸಾರದಿಂದ ಕೆಟ್ಟು ಹೋಗುವುದಕ್ಕೆ ಸಿದ್ಧನಾಗುತ್ತಿದ್ದಾನೆ .
ಆತನಿಗೆ ಮುಂಚೆ ನೀಡಿದ ನಂಬಿಕೆಯ ಮಾತನ್ನು ಅನುಸರಿಸಿಕೊಂಡು ನಾವು ಕಳುಹಿಸಿದ ರುದ್ರ ಕನ್ನಿಕೆಯರಿಬ್ಬರೂ ಚೋಳದೇಶದ ತಿರುವಾರೂರು ಮತ್ತು ತಿರುವತ್ತಿಯೂರಿನಲ್ಲಿ ಪರವೆ ಮತ್ತು ಸಂಕಿಲೆ ಎಂಬ ಹೆಸರಿನಿಂದ ಹುಟ್ಟಿದ್ದಾರೆ .
ಅವರನ್ನು ಆತನೊಡನೆ ಸೇರಿಸಿ , ಸಕಲಸುಖವನ್ನು ಪೂಜೆಯಾಗಿ ಸ್ವೀಕರಿಸಿ ಬರುವೆನು ಎಂದು ಶಿವನು ವೃದ್ಧಮಾಹೇಶ್ವರ ವೇಷಧರಿಸಿದನು .

2. ವೃದ್ಧಮಾಹೇಶ್ವರನನ್ನು ಕವಿ ಹೇಗೆ ವರ್ಣಿಸಿದ್ದಾನೆ ?
ಉತ್ತರ : ವೃದ್ಧಮಾಹೇಶ್ವರನನ್ನು ಕವಿ ಪಾದದಿಂದ ತಲೆಯವರೆಗೂ ಲೇಪಿಸಿದಕೊಂಡ ವಿಭೂತಿ , ನರೆತ ತಲೆ , ಸುಕ್ಕುಗಟ್ಟಿದ ದೇಹ ಹೊಂದಿದನು , ಆತನ ಜಟೆಯಲ್ಲಿದ ಚಂದ್ರಕಳೆಯೇ ಕೊಡೆಯಾಯಿತು .
ಹಿಡಿದಿದ್ದ ತ್ರಿಶೂಲ ಕೊಡೆಯ ಹಿಡಿಕೆಯಾಯಿತು . ನರಕಪಾಲ ಹೊಂದಿದದಂಡ ಊರುಗೋಲಾಯಿತು . ಸರ್ಪವು ಪ್ರಮಾಣವಚನವಾಯಿತು . ಬ್ರಹ್ಮನ ಶಿರವೇ ಕಮಂಡಲವಾಯಿತು . ಹುಲಿ ಮತ್ತು ಜಿಂಕೆಯ ಚರ್ಮಗಳು ಉಡುವ ಮತ್ತು ಹೊದೆಯುವ ವಸ್ತ್ರವಾದವು .
ಶಿವನು ಕಾಲಿನಿಂದ ಮೆಟ್ಟಿಕೊಂಡಿರುವ ನಾಗಾಸುರರು ಪಾದರಕ್ಷೆಗಳಾಗಿ , ಕೊರಳಿನಲ್ಲಿ ಕಟ್ಟಿಕೊಂಡಿರುವ ಶಿರೋಮಾಲೆ ಜಪಮಾಲೆಯಾಗಿ ಮಹಾವೃದ್ಧನಾಗಿ ರೂಪಧರಿಸಿದನು . ಎಂದು ವರ್ಣಿಸಿದ್ದಾರೆ .

3. ಮದುವೆ ಮಂಟಪದಲ್ಲಿ ವೃದ್ಧನು ಮಾಡಿದ ಅವಾಂತರಗಳಾವುವು ?
ಉತ್ತರ : ವೃದ್ಧ ಮಾಹೇಶ್ವರನು ಮದುವೆ ಮಂಟಪದೊಳಗೆ ಪ್ರವೇಶ ಮಾಡಲು ಮೆಲ್ಲಮೆಲ್ಲನೆ ನಡೆಯುತ್ತಾ , ಕೆಮ್ಮುತ್ತ ತನ್ನನ್ನು ಯಾರೂ ಗಮನಿಸುತ್ತಿಲ್ಲವೆಂದು ತಿಳಿದು ಮನಸಿನ್ನಲಿಯೇ ನಸುನಕ್ಕು
ವಿವಾಹ ಮಂಟಪದ ಬಳಿ ಸಾಲಾಗಿ ಜೋಡಿಸಿದ್ದ ತುಪ್ಪದ ಕೊಡಗಳನ್ನು ಉರುಳಿಸಿ ತಾನೂ ಬಿದ್ದು ತುಪ್ಪವೂ ಎಲ್ಲರ ಮುಖಕ್ಕೆ , ಕಣ್ಣುಗಳಿಗೆ , ಮೈಯ ಮೇಲೆ ಸಿಡಿಯುವಂತೆ ಮಾಡಿದನು . ಮದುವೆ ಮಂಟಪದ ಬಳಿ ಸೇರಿದ್ದ ಜನರೆಲ್ಲಾ ಈ ವೃದ್ಧ ಮಾಹೇಶ್ವರನ್ನು ಹಿಡಿದು ನಿಲ್ಲಸಿದರು
. ಒಂದೆರಡು ಹೆಜ್ಜೆ ಇಟ್ಟ ತಕ್ಷಣವೇ ಘಳಿಗೆ ಬಟ್ಟಲ ಮೇಲೆಬಿದ್ದು ಹೊಡೆದು ಹಾಕಿದನು . ಕಳಶ ಒಡೆದುಹೋಗಿ , ಅಕ್ಕಿಯೆಲ್ಲ ಚೆಲ್ಲಿಹೋಯಿತು . ಜೋಯಿಸರು ಚದುರಿ ಓಡಿಹೋದರು . ಎಲ್ಲರು ಇದನ್ನು ಅಪಶಕುನವೆಂಬಂತೆ ಭಾವಿಸುವಂತೆ ಮಾಡಿದನು .
 
ಈ ) ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ .

1. “ ಸಕಲಸುಖಮಂ ಪೂಜೆಯಾಗಿ ಕೈಕೊಂಡುಬರ್ಪೆನ್
ಆಯ್ಕೆ : ಈ ವಾಕ್ಯವನ್ನು ತಿ.ನಂ. ಶ್ರೀಕಂಠಯ್ಯನವರು ಸಂಪಾದಿಸಿರುವ ಹರಿಹರ ಕವಿಯ ‘ ನಂಬಿಯಣ್ಣನ ರಗಳೆ ‘ ಕೃತಿಯಿಂದ ಆಯ್ದ ` ಹರಲೀಲೆ ‘ ಎಂಬ ಗದ್ಯ ಭಾಗದಿಂದ ಆರಿಸಲಾಗಿದೆ .
ಸಂದರ್ಭ : ಕೈಲಾಸಲದಲ್ಲಿ ಶಿವನು ಈ ಮಾತನ್ನ ಗಿರಿಜೆಗೆ ಹೇಳುತ್ತಾನೆ . ನಮ್ಮ ಪರಿವಾರದ ಪುಷ್ಪದತ್ತನು ಭೂಲೋಕದಲ್ಲಿ ನಂಬಿಯಣ್ಣನಾಗಿ ಹುಟ್ಟಿ ಈಗ ವಿವಾಹದಿಂದ ಕೊಟ್ಟು ಹೋಗಲು ಸಿದ್ಧನಾಗುತ್ತಿದ್ದಾನೆ .
ನಾನು ಈಗಲೇ ಭೂಲೋಕಕ್ಕೆ ಹೋಗುತ್ತೇನೆ . ಎಂದು ಹೇಳುವ ಸಂದರ್ಭವಾಗಿದೆ .
ಸ್ವಾರಸ್ಯ : ಶಿವನು ಪುಷ್ಪದತ್ತನಿಗೆ ಆದಷ್ಟು ಬೇಗನೆ ನಿಮ್ಮನ್ನು ಕೈಲಾಸಕ್ಕೆ ಕರೆ ತರುತ್ತೇನೆ ಎಂಬ ಆಶ್ವಾಸನೆ ನೀಡಿರುತ್ತಾನೆ . ಅದರಂತೆ ಶಿವನು ಭೂಲೋಕಕ್ಕೆ ಹೋಗಿ ಸಕಲಸುಖವನ್ನು ಪೂಜೆಯಾಗಿ ಪಡೆದು ಬರುತ್ತೇನೆ ಎಂಬ ಮಾತು ಸ್ವಾರಸ್ಯ ಪೂರ್ಣವಾಗಿ ವರ್ಣಿತವಾಗಿದೆ

2. “ ನೀನತ್ಯಂತ ಕರುಣಿ ”
ಆಯ್ಕೆ : ಈ ವಾಕ್ಯವನ್ನು ತಿ.ನಂ. ಶ್ರೀಕಂಠಯ್ಯನವರು ಸಂಪಾದಿಸಿರುವ ಹರಿಹರ ಕವಿಯ ‘ ನಂಬಿಯಣ್ಣನ ರಗಳೆ ‘ ಕೃತಿಯಿಂದ ಆಯ್ದ ‘ ಹರಲೀಲೆ ‘ ಎಂಬ ಗದ್ಯ ಭಾಗದಿಂದ ಆರಿಸಲಾಗಿದೆ .
ಸಂದರ್ಭ : ಶಿವನು ಭೂಲೋಕಕ್ಕೆ ಹೋಗಿ , ನಂಬಿಯಣ್ಣನನ್ನು ಮದುವೆ ಸಂಭ್ರಮದ ಮಂಟಪದಿಂದ ಮತ್ತೆ ಕೈಲಾಸಕ್ಕೆ ಕರೆತರುವೇನು . ಎಂದಾಗ ತಾನು ಬರುವುದಾಗಿ ಗಿರಿಜೆಯು ಹೇಳಿದಾಗ ಶಿವನು ಬೇಡವೆನ್ನುತ್ತಾನೆ .
ಏಕೆಂದರೆ ತಾನು ಅಲ್ಲಿ ಕೆಲವು ಕಠೋರವಾದ ನಿಷ್ಠುರವಾದ ಕೆಲಸವನ್ನು ಮಾಡಬೇಕಾಗಿದೆ . ನೀನು ಅದನ್ನು ಸಹಿಸುವುದಿಲ್ಲ ಎಂದು ಹೇಳುವ ಸಂದರ್ಭದಲ್ಲಿ ಶಿವನು ಹೇಳುತ್ತಾನೆ .
ಸ್ವಾರಸ್ಯ : ಶಿವನು ಭೂಲೋಕಕ್ಕೆ ಬಂದು ನಿಷ್ಠುರವಾದ ಕೆಲಸಗಳನ್ನು ಮಾಡಬೇಕಾಗಿದೆ . ಇದನ್ನು ಕರುಣಾಮಯಿಯಾದ ಗಿರಿಜೆಯು ನೋಡಿದರೆ ನನ್ನ ಕೆಲಸಗಳಿಗೆ ಅಡ್ಡಿಪಡಿಸಬಹುದು ಎಂಬುದು ಸ್ವಾರಸ್ಯಕರವಾಗಿದೆ .

3. “ ಮಣ್ಯಂ ಪಣ್ಣಾದಂತೆ ”
ಆಯ್ಕೆ : ಈ ವಾಕ್ಯವನ್ನು ತಿ.ನಂ. ಶ್ರೀಕಂಠಯ್ಯನವರು ಸಂಪಾದಿಸಿರುವ ಹರಿಹರ ಕವಿಯ ‘ ನಂಬಿಯಣ್ಣನ ರಗಳೆ ‘ ಕೃತಿಯಿಂದ ಆಯ್ದ ‘ ಹರಲೀಲೆ ‘ ಎಂಬ ಗದ್ಯ ಭಾಗದಿಂದ ಆರಿಸಲಾಗಿದೆ .
ಸಂದರ್ಭ : ಈ ಮಾತನ್ನು ಕವಿ ಹರಿಹರ ಹೇಳಿದ್ದಾರೆ . ಶಿವನು ವೃದ್ಧಮಾಹೇಶ್ವರನಾಗಿ ವೇಷವನ್ನು ಮರೆಸಿಕೊಂಡು ಭೂಲೋಕಕ್ಕೆ ಹೊರಟ ಸಂದರ್ಭವಾಗಿದೆ . ಬಿಳಿಕೂದಲು ಸುಕ್ಕು ಗಟ್ಟಿದ ಚರ್ಮದಿಂದ ಪುಣ್ಯವೆಲ್ಲಾ ಹಣ್ಣಾದಂತೆ ಶಿವನು ಕಂಡು ಬರುತ್ತಾನೆಂದು ಕವಿ ಹರಿಹರ ವರ್ಣಿಸಿದ್ದಾರೆ .
ಸ್ವಾರಸ್ಯ : ಶಿವನು ನೂರು ವರ್ಷದ ಮುದುಕನ ವೇಷ ಧರಿಸಿರುವುದು ಪುಣ್ಯವೇ ಹಣ್ಣಾದಂತೆ ಎಂದು ಕವಿ ವರ್ಣಿಸಿರುವ ಸಾಲು ಸ್ವಾರಸ್ಯಕರವಾಗಿದೆ .

4. “ ಈ ವೃದ್ಧಂ ಕಿಟುಕುಳನಲ್ಲ “
ಆಯ್ಕೆ : ಈ ವಾಕ್ಯವನ್ನು ತಿ.ನಂ. ಶ್ರೀಕಂಠಯ್ಯನವರು ಸಂಪಾದಿಸಿರುವ ಹರಿಹರ ಕವಿಯ ‘ ನಂಬಿಯಣ್ಣನ ರಗಳೆ ‘ ಕೃತಿಯಿಂದ ಆಯ್ದ ‘ ಹರಲೀಲೆ ‘ ಎಂಬ ಗದ್ಯ ಭಾಗದಿಂದ ಆರಿಸಲಾಗಿದೆ .
ಸಂದರ್ಭ : ಶಿವನು ಮದುವೆ ಮಂಟಪದಲ್ಲಿ ಮಾಡಿದ ಅವಾಂತರಗಳನ್ನು ನೋಡಿದ ಜನರು ಶಿವನನ್ನು ಕರೆದುಕೊಂಡು ಬಂದು ಮದುವೆ ಚಪ್ಪರದ ಹೊರಗೆ ಬಿಟ್ಟು ,
ಮದುವೆ ಮಂಟಪದ ಬಳಿ ಹೋಗುವ ಮೊದಲೇ ಶಿವನು ಮಂಟಪ ತೋರಣಗಳನ್ನು ಕೀಳುವುದನ್ನು ನೋಡಿದ ಜನರು ಆಶ್ಚರ್ಯದಿಂದ ಈ ಮಾತನ್ನು ಹೇಳಿದ್ದಾರೆ .
ಸ್ವಾರಸ್ಯ : ಶಿವನು ಮಾಡಿದ ಪವಾಡವನ್ನು ಅರ್ಥಮಾಡಿಕೊಂಡ ಜನರು ಈ ವೃದ್ಧ ನಮಗೆ ತೊಂದರೆ ಕೊಡಲು ಬಂದಿಲ್ಲ ಎಂದು ಯೋಚನೆ ಮಾಡುವದು ಸ್ವಾರಸ್ಯಕರವಾಗಿದೆ .

ಉ ) ಕೊಟ್ಟಿರುವ ನಾಲ್ಕು ಆಯ್ಕೆಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿ ಬರೆಯಿರಿ .
 
1 . ಹರಿಹರನ ಕಾಲ,,,,,,,,,,,,( 1160 1360 1200 1460 )

2. ವೃದ್ಧಮಾಹೇಶ್ವರ,,,,,,,,,,,,,ಕೊಡದ ಮೇಲೆ ಬಿದ್ದನು( ಎಣ್ಣೆಯ ಹಾಲಿನ ತುಪ್ಪದ ಮಜ್ಜಿಗೆ)

3 , ಹರಲೀಲೆ ಪಾಠವನ್ನು,,,,,,,,,  ರಗಳೆಯಿಂದ ಆಯ್ದುಕೊಳ್ಳಲಾಗಿದೆ .
( ಬಸವರಾಜ ದೇವರ ರಗಳೆ ನಂಬಿಯಣ್ಣನರಗಳ ಗುಂಡಯ್ಯನರಗಳೆ ಮಹಾದೇವಿಯಕ್ಕನ ರಗಳೆ )

4. ವೃದ್ಧಮಾಹೇಶ್ವರನು ಕೈಲಾಸದಿಂದ,,,,,,,,,,,,,,,, ಗೆ ಬಂದನು . ( ಮಣಮಂದಪುತ್ತೂರು ತಿರುವಾರೂರು ತಿರುವತ್ತಿಯೂರ್,  ಕೈಲಾಸಪುರ

೧, 1200
೨, ತುಪ್ಪದ
೩. ನಂಬಿಯಣ್ಣನರಗಳೆ
೪ , ಮಣಮಂದಪುತ್ತೂರು
 
ಹೊಂದಿಸಿ ಬರೆಯಿರಿ
 
“ಅ” ಪಟ್ಟಿ                                                ‘ ಆ ‘ ಪಟ್ಟಿ
1. ಪುಷ್ಪದತ್ತ                                               ಹಂಪಿ
2 , ರುದ್ರಕನ್ನಿಕೆಯರು                                 ಬಾಗಿಲು
3. ಚೋಳದೇಶ                                            ನಂಬಿಯಣ್ಣ
4. ಕದ                                                         ಪರವೆ-ಸಂಕಿಲೆ
5 , ಗಿರಿಜೆ                                                     ಮಣಮಂದಪುತ್ತೂರು
ಶಿವ
ಪಾರ್ವತಿ
 
ಸರಿ ಉತ್ತರಗಳು.
1. ನಂಬಿಯಣ್ಣ
2. ಪರವೆ – ಸಂಕಿಲೆ
3. ಮಣಮಂದಪುತ್ತೂರು
4. ಬಾಗಿಲು
5  ಪಾರ್ವತಿ
 
ಆ ) ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿ .

1. ಕರ್ತರಿ ಪ್ರಯೋಗ ವಾಕ್ಯದ ವಿಶೇಷತೆಯನ್ನು ತಿಳಿಸಿ ,
ಉತ್ತರ : ಕರ್ತರಿ ಪ್ರಯೋಗದ ವಾಕ್ಯದ ಕ್ರಿಯಾಪದಕ್ಕೆ ಕರ್ತೃವಿನ ಲಿಂಗ , ವಚನ ಬಂದರೆ ಅದು ಕರ್ತರಿ ಪ್ರಯೋಗ , ಉದಾ : ಅಣ್ಣ ಅನ್ನವನ್ನು ಉಂಡನು . ಇದು ಕರ್ತರಿ ಪ್ರಯೋಗದ ವಾಕ್ಯ ಇಲ್ಲಿ ಕರ್ತೃ ಪದ ಮಲ್ಲಿಂಗ ಇದೆ ಕ್ರಿಯಾಪದ ಉಂಡನು ಪುಲ್ಲಿಂಗ ಇದೆ . ಅಣ್

2. ವಿಧ್ಯರ್ಥಕ ಕ್ರಿಯಾಪದ ಎಂದರೇನು ? ಎರಡು ಉದಾಹರಣೆ ಕೊಡಿ.
ಉತ್ತರ : ಆಶೀರ್ವಾದ , ಅಪ್ಪಣೆ , ಆಜ್ಞೆ , ಹಾರೈಕೆ ಸಮ್ಮತಿ ಇತ್ಯಾದಿ ವಿಧಿಗಳನ್ನು ಹೊಂದಿರುವ ಕ್ರಿಯಾಪದಗಳ ವಿಧ್ಯರ್ಥಕ ಕ್ರಿಯಾಪದಗಳು . ಉದಾ : ಓದಲಿ , ಆಗಲಿ , ಬರೆಯಲಿ ಇತ್ಯಾದಿ ,

3. ಸಂಭಾವನಾರ್ಥಕ ಕ್ರಿಯಾಪದವನ್ನು ಸೂತ್ರ ಸಹಿತ ವಿವರಿಸಿ.
ಉತ್ತರ : ಕ್ರಿಯೆ ನಡೆಯುವ ಬಗ್ಗೆ ಸಂಶಯ ಅಥವಾ ಊಹೆಯನ್ನು ವ್ಯಕ್ತಪಡಿಸುವಂತಹ ಪದಗಳೇ ಸಂಭಾವನಾರ್ಥಕ ಕ್ರಿಯಾಪದಗಳು , ಉದಾ : ಅವರು ನಾಳೆ ಬಂದಾರು , – ಚೆಂಡು ಮೇಲಕ್ಕೆ ಹೋದೀತು .
ಈ ವಾಕ್ಯಗಳಲ್ಲಿರುವ ಬಂದಾರು . ಹೋದೀತು ಎಂಬ ಕ್ರಿಯಾಪದಗಳು ಸಂಶಯ ಅಥವಾ ಊಹೆಯನ್ನು ಸೂಚಿಸುತ್ತವೆ .

ಆ ) ಕೊಟ್ಟಿರುವ ನಾಲ್ಕು ಆಯ್ಕೆಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿ ಬರೆಯಿರಿ .

1. ‘ ದೇವರು ಎಲ್ಲರಿಗೂ ಒಳ್ಳೆಯದನ್ನೇ ಉಂಟುಮಾಡಲಿ – ಈ ವಾಕ್ಯದಲ್ಲಿರುವ ಕ್ರಿಯಾಪದ
ಆ ) ದೇವರು ಆ ) ಎಲ್ಲರಿಗೂ ಇ ) ಒಳ್ಳೆಯದನ್ನೆ ಈ ) ಉಂಟುಮಾಡಲಿ
ಉತ್ತರ  ಈ) ಉಂಟುಮಾಡಲಿ

2. ಈ ಪದವು ನಿಷೇಧಾರ್ಥಕ ಕ್ರಿಯಾಪದಕ್ಕೆ ಉದಾಹರಣೆ,,,,,,,,,,
ಆ ) ತಿನ್ನನು ಆ ) ತಿನ್ನಲಿ 3 .ತಂದಾನು, 4, ತಿನ್ನುತಾನೆ
ಉತ್ತರ : ಅ ) ತಿನ್ನನು

3. ಇದು ಈ ಗುಂಪಿಗೆ ಸೇರದ ಪದವಾಗಿದೆ,,,,,,,,,,,,,,
ಅ ) ಉತ್ಸಾಹ  ಆ) ಉಪಮಾ  ಇ ) ಮಂದಾನಿಲ ಈ ) ಲಲಿತ
ಉತ್ತರ :ಆ ) ಉಪಮಾ

4. ‘ ಎಳಸಿರ್ಪ ‘ ಈ ಪದದ ಅರ್ಥ,,,,,,,,,,,
ಅ) ಎಳೆಯದಾಗಿರುವ ಆ ) ಮಿತಿಯಿಲ್ಲದ ಇ ) ರುಚಿಯಾದ ಈ ) ಸುತ್ತುವರಿದಿರುವ
 
ಈ ಪದ್ಯಭಾಗಕ್ಕೆ ಪ್ರಸ್ತಾರ ಹಾಕಿ , ಗಣ ವಿಭಾಗಮಾಡಿ , ಛಂದಸ್ಸಿನ ಹೆಸರು ಬರೆದು , ಲಕ್ಷಣ ಬರೆಯಿರಿ .  
ರಸಫಳಂಗಳನ ಸುತಿರ್ಪ ಶುಕನಿಕರಮಂ
ಪೊಸ ಪೂವನೆಳಸಿಪರ್ಪಿ ಮಧುಕರ ಪ್ರಕರಮಂ

ಈ ) ಕೊಟ್ಟಿರುವ ವಿಷಯಗಳನ್ನು ಕುರಿತು ಪ್ರಬಂಧ ಬರೆಯಿರಿ .

1) ರಾಷ್ಟ್ರೀಯ ಹಬ್ಬಗಳ ಮಹತ್ವ
ಪೀಠಿಕೆ : ಒಂದು ದೇಶದ ಐಕ್ಯತೆಯನ್ನು ಕಾಪಾಡುವ ನಿಟ್ಟಿನಲ್ಲಿ ರಾಷ್ಟ್ರೀಯ ಹಬ್ಬಗಳು ಬಹಳ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತವೆ ಭಾರತದಂತಹ ವೈವಿಧ್ಯತೆಯುಳ್ಳ ರಾಷ್ಟ್ರಗಳಲ್ಲಿ ಏಕತೆಯನ್ನು ತರುವುದು ಇಂತಹ ರಾಷ್ಟ್ರೀಯ ಹಬ್ಬಗಳ ಮೂಲಕ ಸಾಧ್ಯವಿದೆ .
ಇಡಿ ರಾಷ್ಟ್ರದ ಜನರೆಲ್ಲರೂ ಯಾವುದೇ ಭೇದಭಾವವಿಲ್ಲದೆ , ಜಾತಿ , ಧರ್ಮ , ಪ್ರಾದೇಶಿಕ ಭಿನ್ನತೆಯನ್ನು ತೊರೆದು ಒಟ್ಟಾಗಿ ಆಚರಿಸುವ ಹಬ್ಬಗಳೇ ರಾಷ್ಟ್ರೀಯ ಹಬ್ಬಗಳು ಎಂದು ಕರೆಯಬಹುದು .
ನಮ್ಮದೇಶದಲ್ಲಿ ಮೂರು ರಾಷ್ಟ್ರೀಯ ಹಬ್ಬಗಳೆಂದು ಘೋಷಿಸಲಾಗಿದೆ ಅವುಗಳೆಂದರೆ ಸ್ವಾತಂತ್ರ್ಯ ದಿನಾಚರಣೆ ಗಣರಾಜ್ಯೋತ್ಸವ ಗಾಂಧಿ ಜಯಂತಿ
ವಿಷಯ ವಿವರಣೆ : 1 ) ಸ್ವಾತಂತ್ರ್ಯ ದಿನಾಚರಣೆ : ಭಾರತ ಬ್ರಿಟಿಷರ ಆಳ್ವಿಕೆಗೆ ಒಳಪಟ್ಟಿತ್ತು ವ್ಯಾಪಾರದ ಉದ್ದೇಶದಿಂದ ಬಂದ ಬ್ರಿಟೀಷರು ಭಾರತೀಯ ಅರಸರುಗಳು ದೌರ್ಬಲ್ಯಗಳನ್ನು ಉಪಯೋಗಿಸಿಕೊಂಡು ಭಾರತ ದೇಶದ ಆಡಳಿತ ಚುಕ್ಕಾಣಿ ಹಿಡಿದಿದ್ದರು .
ಭಾರತಿಯರಿಗೆ ಸ್ವಾತಂತ್ರ ಎನ್ನವುದೇ ಇರಲಿಲ್ಲ . ಹಾಗಾಗಿ ಭಾರತೀಯರೆಲ್ಲರೂ ಒಟ್ಟಾಗಿ ಬ್ರಿಟೀಷರ ವಿರುದ್ಧ ಸ್ವಾತಂತ್ರ್ಯ ಹೋರಾಟದ ರಣಕಹಳೆಯನ್ನು ಊದಿ ಕೊನೆಗೆ 1947 ನೇ ಆಗಸ್ಟ್ 15 ರಂದು ಸ್ವಾತಂತ್ರವನ್ನು ಪಡೆದರು .
ಆ ಸುದಿನವನ್ನೇ ಪ್ರತಿವರ್ಷ ಭಾರತೀಯರೆಲ್ಲರೂ ಒಟ್ಟಾಗಿ ರಾಷ್ಟ್ರೀಯ ಹಬ್ಬವನ್ನಾಗಿ ಆಚರಿಸಿ ರಾಷ್ಟ್ರೀಯ ಐಕ್ಯತೆಯನ್ನು ಮೆರೆಯುತ್ತಾರೆ .
ಅಂದು ಶಾಲಾ – ಕಾಲೇಜು – ಕಛೇರಿಗಳಲ್ಲಿ ರಾಷ್ಟ್ರೀಯ ಧ್ವಜವನ್ನು ಹಾರಿಸಿ ದೇಶಭಕ್ತಿ ಸಾರುವ ಕಾರ್ಯಕ್ರಮಗಳನ್ನು ಆಚರಿಸಿ ಒಗ್ಗಟ್ಟನ್ನು ಪ್ರದರ್ಶಿಸುತ್ತಾರೆ .
ಗಣರಾಜ್ಯೋತ್ಸವ : ಭಾರತದೇಶವು ಸ್ವಾತಂತ್ರ್ಯವನ್ನು ಪಡೆದ ನಂತರ ಆಡಳಿತದ ರೂಪುರೇಷಗಳನ್ನು ಸಿದ್ಧಪಡಿಸಲಾಗುತ್ತದೆ . ಆ ರೂಪುರೇಷಗಳನ್ನು ಒಳಗೊಂಡಿರುವುದೇ
ನಮ್ಮ ಸಂವಿಧಾನ ಎಲ್ಲ ರಾಜ್ಯಗಳನ್ನು ಗಣಗಳನ್ನಾಗಿ ಮಾಡಿ ( ಒಟ್ಟುಗೂಡಿಸಿ ) ಉತ್ತಮವಾದ ಆಡಳಿತ ನಡೆಸಲು ಕಾನೂನುರೂಪ ಪಡೆದ ಸಂವಿಧಾನವನ್ನು ಜಾರಿಗೆ ತಂದ ದಿನವೇ ಗಣರಾಜ್ಯ ದಿನ .
ಇದನ್ನು ಕೂಡ ನಮ್ಮ ದೇಶದ ಪ್ರಜೆಗಳೆಲ್ಲರೂ ಒಟ್ಟಾಗಿ ಸೇರಿ ಆಚರಿಸುತ್ತಾರೆ.ಈ ದಿನದಲ್ಲಿ ರಾಷ್ಟ್ರಧ್ವಜವನ್ನು ಆರಿಸಿ ಸಂವಿಧಾನದ ನಿರ್ಮಾತೃಗಳು ಹಾಗೂ ತತ್ವಗಳನ್ನು ಸ್ಮರಿಸಿಕೊಳ್ಳತ್ತಾರೆ .
ಪ್ರತಿಯೊಬ್ಬರು ಸಂವಿಧಾನ ಪಾಲಿಸುವ ಮನೋಧರ್ಮವನ್ನು ಬೆಳೆಸಿಕೊಳ್ಳುವ ಆಶಯನ್ನು ಪಡೆಯುತ್ತಾರೆ . ಹಾಗೆಯೇ ದೇಶಭಕ್ತಿ ಸಾರುವ ಕಾರಕ್ರಮಗಳನ್ನು ಆಚರಿಸಿ ಒಗ್ಗಟ್ಟನ್ನು ಪ್ರದರ್ಶಿಸುತ್ತಾರೆ . ಗಾಂಧಿ ಜಯಂತಿ :
ಯಾವುದೇ ಒಂದು ದೇಶದ ಜನರೆಲ್ಲರೂ ಒಟ್ಟಾಗಿ ಸೇರಲು ನಾಯಕತ್ವ ಬೇಕು , “ ನಾಯಕರಿಲ್ಲದ ನಾವೆ ದಡಸೇರಲಾರದು ” ಅಂತೆಯೇ ನಮ್ಮ ದೇಶದ ಸ್ವಾತಂತ್ರ್ಯ ಪಡೆಯಲು ಬಹುಮುಖ್ಯ ನಾಯಕತ್ವವಹಿಕೊಂಡವರು ನಮ್ಮ ದೇಶದ ರಾಷ್ಟ್ರಪಿತ ಎನಿಸಿಕೊಂಡ ಮಹಾತ್ಮ ಗಾಂಧಿಜಿಯವರು .
ಅವರ ಹುಟ್ಟಿದ ದಿನವೇ ಅಕ್ಟೋಬರ್ 2 , ಆ ದಿನವನ್ನು ಗಾಂಧಿಜಯಂತಿಯೆಂದು ರಾಷ್ಟ್ರೀಯ ಹಬ್ಬವನ್ನಾಗಿ ಆಚರಿಸಲಾಗುತ್ತದೆ .
ಏಕೆಂದರೆ ಗಾಂಧೀಜಿವರು ಸ್ವಾತಂತ್ರ್ಯ ಚಳುವಳಿಯ ಮುಂದಾಳತ್ವವನ್ನು ವಹಿಸಿಕೊಂಡು ಸ್ವಾತಂತ್ರ್ಯವನ್ನು ತಂದುಕೊಡುವಲ್ಲಿ ಪ್ರಾಮುಖ್ಯತೆಯನ್ನು ಪಡೆದುಕೊಂಡರು .
ಆದ್ದರಿಂದ ಅವರ ಆದರ್ಶಗಳನ್ನು ನೆನೆಯುತ್ತ ಅವರನ್ನು ಸ್ಮರಿಸುತ್ತಾ ಸ್ವಾತಂತ್ರ್ಯದ ಮಹತ್ವದಬಗ್ಗೆ ಕೊಂಡಾಡುವ ದಿನವಾಗಿದೆ ಉಪಸಂಹಾರ : ಭಾರತದಲ್ಲಿ ರಾಷ್ಟ್ರೀಯ ಹಬ್ಬಗಳನ್ನು ಆಚರಿಸುವುದರಿಂದ ಪ್ರತಿಯೊಬ್ಬ ನಾಗರಿಕರಲ್ಲಿ ಏಕತೆ , ದೇಶಭಕ್ತಿ ,
ಸಂವಿಧಾನದ ಮಹತ್ವ , ನಾಯಕತ್ವದ ಮಹತ್ವ ಮುಂತಾದ ವಿಚಾರಗಳನ್ನು ತಿಳಿಯಲು ಮತ್ತು ನಾವು ಅದೇ ರೀತಿ ನಡೆದುಕೊಳ್ಳಲು ನೆರವಾಗುತ್ತದೆ ಎಂಬ ಆಶಯವನ್ನು ಇಟ್ಟುಕೊಳ್ಳೋಣ .

2) ರಾಷ್ಟ್ರೀಯ ಭಾವೈಕ್ಯ
ಪೀಠಿಕೆ : ಜನರು ವಾಸಮಾಡುತ್ತಿರುವ ಒಂದು ನಿರ್ಧಿಷ್ಟವಾದ ಭೌಗೋಳಿಕ ಪ್ರದೇಶವನ್ನು ದೇಶ ಎಂದು ಕರೆಯಬಹುದು . ಎಲ್ಲ ಜನರು ತಾವೆಲ್ಲ ಒಂದೇ ಎಂಬ ಭಾವನೆಗಳನ್ನು ಹೊಂದುವುದು ಐಕ್ಯತೆ .
ಅದೇ ರೀತಿ ದೇಶದಲ್ಲಿ ವಾಸಿಸುತ್ತಿರುವ ಜನರೆಲ್ಲರು ತಮ್ಮ ಧರ್ಮ ಜಾತಿ , ಕುಲ , ಭಾಷೆಗಳನ್ನು ಬದಿಗೊತ್ತಿ ಒಂದೇ ಕುಟುಂಬದ ಸದಸ್ಯರಂತೆ ವಾಸಮಾಡುವುದನ್ನು ರಾಷ್ಟ್ರೀಯ ಭಾವೈಕ್ಯತೆ ಎಂದು ಕರೆಯಬಹುದು .
ಭಾರತದಂತಹ ವೈವಿಧ್ಯತೆಗಳಿಂದ ಕೂಡಿರುವ ರಾಷ್ಟ್ರದಲ್ಲಿ ಏಕತೆಯನ್ನು ಸಾಧಿಸುವುದು ಬಹಳ ಮುಖ್ಯವೆನಿಸುತ್ತದೆ .
ವಿಷಯ ವಿವರಣೆ : “ ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿ ಗರಿಯಸಿ ” ಎಂಬ ಮಾತಿನಂತೆ ಹೆತ್ತತಾಯಿ ಹೊತ್ತಭೂಮಿಯು ಸ್ವರ್ಗವಿದ್ದಂತೆ.
ಇಂತಹ ಹೊತ್ತ ಭೂಮಿಯಲ್ಲಿ ವಾಸಿಸುವ ನಾವೆಲ್ಲರೂ ಒಂದೇ ತಾಯಿಯ ಮಕ್ಕಳಂತೆ ಇದ್ದೇವೆ . ರಾಷ್ಟ್ರದ ಐಕ್ಯತೆಗೆ ರಾಷ್ಟ್ರೀಯ ಭಾವನೆಯೂ ಅಗತ್ಯವಾದದು . ಭಾರತ ಸರ್ವಧರ್ಮಗಳ ನೆಲೆಬೀಡು , ಇಲ್ಲಿ ವಿವಿಧ ಜಾತಿ , ಮತ , ಪಂಥ , ಭಾಷೆ ಸಂಸ್ಕೃತಿಯ ಜನರು ಇದ್ದಾರೆ .
ಇಂತಹ ವೈವಿಧ್ಯತೆಯಿಂದ ಕೂಡಿರುವ ಜನರಲ್ಲಿ ರಾಷ್ಟ್ರೀಯ ಭಾವೈಕ್ಯತೆಯನ್ನು ಮೂಡಿಸುವಲ್ಲಿ ರಾಷ್ಟ್ರೀಯ ಹಬ್ಬಗಳು , ರಾಷ್ಟ್ರಧ್ವಜ , ರಾಷ್ಟ್ರಲಾಂಛನ , ರಾಷ್ಟ್ರಗೀತೆಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ .
ಭಾರತದ ಪ್ರತಿಯೊಬ್ಬ ಪ್ರಜೆಯು ತನ್ನ ಸಂಕೀರ್ಣತೆಯನ್ನು ತೊರೆದು ಆಚರಿಸುವ ಸ್ವಾತಂತ್ರ್ಯ ದಿನಾಚರಣೆ , ಗಣರಾಜ್ಯೋತ್ಸವ , ಗಾಂಧಿಜಯಂತಿಗಳನ್ನು ಸಾಮೂಹಿಕವಾಗಿ ಆಚರಿಸಿದಾಗ ಐಕ್ಯತೆಯನ್ನು ಸಾಧಿಸಬಹುದು .
ರಾಷ್ಟ್ರಗೀತೆ , ರಾಷ್ಟ್ರಧ್ವಜಕ್ಕೆ ಗೌರವವನ್ನು ನೀಡುವುದು , ರಾಷ್ಟ್ರನಾಯಕರ ಉತ್ತಮ ಆದರ್ಶಗಳನ್ನು ಬೆಳೆಸಿಕೊಳ್ಳುವುದು ರಾಷ್ಟ್ರಕ್ಕೆ ಧಕ್ಕೆಯುಂಟಾದಾಗ ದೇಶದ ಎಲ್ಲ ಪಜೆಗಳು ಪರಸ್ಪರ ಸಹಾಯ ಸಹಕಾರದಿಂದ ನಡೆದುಕೊಂಡರೆ ರಾಷ್ಟ್ರೀಯ ಭಾವೈಕ್ಯತೆಯನ್ನು ಸಾರಬಹುದಾಗಿದೆ .
ಅಲ್ಲದೆ ರಾಷ್ಟ್ರಮಟ್ಟದ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಕಾರಕ್ರಮಗಳು ಕೂಡ ರಾಷ್ಟ್ರೀಯ ಭಾವೈಕ್ಯತೆಯನ್ನು ತರಬಲ್ಲವು .
ಉಪಸಂಹಾರ ::ಎಲ್ಲರೂ ಎಲ್ಲರಿಗಾಗಿ ಎಂಬ ಮಂತ್ರದಿಂದ ಕಣ್ಣು ಬೇರೆಯಾದರೂ ನೋಟ ಒಂದೇ
ಭಾಷೆ ಬೇರೆಯಾದರೂ ಬಾವ ಒಂದೇ ಜಾತಿ , ಕುಲ , ಮತ , ಧರ್ಮ ಬೇರೆ ಬೇರೆಯಾದರೂ ಬಾಳುವ ದೇಶ ಒಂದೆಯಾಗಿದೆ ಎಂದ ಮೇಲೆ ನಾವೆಲ್ಲಾ ಒಂದೆ ತೊಟ್ಟಿಲಲ್ಲಿ ಬೆಳೆವ ಜನರು ನಾವು ಭಾರತೀಯರು ಐಕ್ಯತೆಯ ಮಂತ್ರ ಪಠಿಸುವವರಾಗಬೇಂಬುದು ನಮ್ಮ ನಿಮ್ಮೆಲ್ಲರ ಆಶಯವಾಗಬೇಕಿದೆ .


You Might Like

Post a Comment

0 Comments