Recent Posts

ತತ್ತ್ವಪದಗಳು - ೦೯ ನೇ ತರಗತಿ ಸಿರಿ ಕನ್ನಡ ಪುಸ್ತಕದ ಪ್ರಶ್ನೋತ್ತರಗಳು


ತತ್ತ್ವಪದಗಳು 

ಕೃತಿಕಾರರ ಪರಿಚಯ   
 
ಕಡಕೋಳ  ಮಡಿವಾಳಪ್ಪ  ಅವರು  (ಸಾ.  ಶ.  1765)  ಕಲಬುರಗಿ  ಜಿಲ್ಲೆಯ  ಅಫಜಲಪುರ ತಾಲ್ಲೂಕಿನ  ಬಿದನೂರ  ಗ್ರಾಮದಲ್ಲಿ  ಜನಿಸಿದರು.  
ಇವರ  ತಾಯಿ  ಗಂಗಮ್ಮ,  ತಂದೆ ವಿರೂಪಾಕ್ಷಯ್ಯ.  ಇವರು  ಕಲಬುರಗಿಯ  ಶ್ರೀಶರಣ  ಬಸವೇಶ್ವರರ  ನಿರ್ಧೇಶನದಂತೆ ಕಲಕೇರಿ  ಮರುಳಾರಾಧ್ಯರಿಂದ  ಲಿಂಗದೀಕ್ಷೆಯನ್ನು  ಪಡೆಯುತ್ತಾರೆ.
ಆಧ್ಯಾತ್ಮಕ್ಷೇತ್ರದಲ್ಲಿ ತನ್ನದೇ  ಆಗಿರುವ  ಪ್ರತಿಭೆಯನ್ನು  ಮೆರೆದ  ವಿಶಿಷ್ಠ  ಕವಿ  ಎನಿಸಿಕೊಂಡಿದ್ದಾರೆ.  
ಕಲಬುರಗಿ ಜಿಲ್ಲೆ  ಜೇವರ್ಗಿ ತಾಲ್ಲೂಕು  ಯಡ್ರಾಮಿ  ಬಳಿಯ  ಕಡಕೋಳ  ಗ್ರಾಮವು  ಇವರ ಕಾರ್ಯಕ್ಷೇತ್ರ.  
ಇಲ್ಲಿ  ಕಡಕೋಳ  ಮಡಿವಾಳಪ್ಪ  ಅವರ  ಮಠವಿದೆ.  ಮಹಾಂತೇಲಿ  ಎಂಬ ಅಂಕಿತವನ್ನು  ಇಟ್ಟುಕೊಂಡು  ನೂರಾರು  ತತ್ತ್ವಪದಗಳನ್ನು  ರಚಿಸಿದ  ಕೀರ್ತಿ  ಇವರಿಗೆ ಸಲ್ಲುತ್ತದೆ.     
 
ಸಂತ  ಶಿಶುನಾಳ  ಶರೀಫ  ತತ್ತ್ವಪದ  ರಚನಾಕಾರರಾದ  ಇವರು  (ಸಾ.ಶ.  1819) ಹಾವೇರಿ  ಜಿಲ್ಲೆಯ  ಶಿಗ್ಗಾಂವಿ ತಾಲ್ಲೂಕಿನ,  ಶಿಶುನಾಳದವರು. ಬಾಲ್ಯದ ಹೆಸರು ಮಹಮ್ಮದ್ ಶರೀಫ.  ಗುರು  ಕಳಸದ  ಗೋವಿಂದ  ಭಟ್ಟರು.  ಕರ್ನಾಟಕದ  ಕಬೀರರೆಂದೇ  ಶರೀಫರು ಪ್ರಸಿದ್ಧರು.  ಶಿಶುನಾಳಾಧೀಶ,  ಶಿಶುನಾಳೇಶ  ಅಂಕಿತ.  ಇವರು  ನೂರಾರು  ತತ್ತ್ವಪದಗಳನ್ನು ರಚಿಸಿದ್ದಾರೆ  

ಅಭ್ಯಾಸ  
 
ಅ] ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.      

1. ಯಾರ ಸ್ನೇಹವು ಸಾಯುವತನಕ ಬೇಡ ಎಂದಿದ್ದಾರೆ?        
ಉತ್ತರ: ಗುರುಕರುಣವಿಲ್ಲದವನ ಸ್ನೇಹವು ಸಾಯುವತನಕ ಬೇಡ ಎಂದಿದ್ದಾರೆ.      

2. ಯಾರ ಸ್ನೇಹವನ್ನು ಮಾಡಿ ಕೆಡಬಾರದು?       
ಉತ್ತರ: ಹೀನ ಮನುಷ್ಯನ ಸ್ನೇಹವನ್ನು ಮಾಡಿ ಕೆಡಬಾರದು.      

3. ತತ್ವ್ತಪದಕಾರರು ಯಾರ ಸೇವೆ ಮಾಡಬೇಕು ಎಂದಿದ್ದಾರೆ?        
ಉತ್ತರ: ತತ್ತ್ವಪದಕಾರರು ಸಾಧು-ಸತ್ಪುರುಷರ ಸೇವೆ ಮಾಡಬೇಕು ಎಂದಿದ್ದಾರೆ.    

4. ಬಿದಿರು ಹೇಗೆ ಬೆಳೆಯಿತು?        
ಉತ್ತರ: ಹುಟ್ಟುತ್ತಾ ಹುಲ್ಲಾಗಿ ಬೆಳೆಯುತ್ತಾ ಮೈತುಂಬಿಕೊಳ್ಳುತ್ತದೆ.      

5. ಬಿದಿರಿನ ಚಪ್ಪರವು ಏನನ್ನು ಕೊಡುತ್ತದೆ?       
ಉತ್ತರ: ಬಿದಿರಿನ ಚಪ್ಪರವು ಏನನ್ನು ಕೊಡುತ್ತದೆ.      

6. ಬಿದಿರು ಶಿಶುನಾಳಾಧೀಶನಿಗೆ ಏನಾಗುತ್ತದೆ?         
ಉತ್ತರ: ಬಿದಿರು ಶಿಶುನಾಳಾಧೀಶನಿಗೆ ಓಲಗವನ್ನು ಕೊಡುತ್ತದೆ.  

ಆ] ಕೊಟ್ಟಿರುವ ಪ್ರಶ್ನೆಗಳಿಗೆ ಮೂರು-ನಾಲ್ಕು ವಾಕ್ಯಗಳಲ್ಲಿ ಉತ್ತರ ಬರೆಯಿರಿ.      

1.  ಬಿದಿರು  ಮಕ್ಕಳಿಗೆ,  ರೈತರಿಗೆ,  ಮಹಾತ್ಮರಿಗೆ  ಯಾವ  ರೀತಿಯಲ್ಲಿ ಉಪಯೋಗವಾಗುತ್ತದೆ?
ಉತ್ತರ: ಬಿದಿರು ಮಕ್ಕಳಿಗೆ ತೂಗುವ ತೊಟ್ಟಿಲಾಗಿ, ರೈತರಿಗೆ ಬಿತ್ತುವ ಕೂರಿಗೆಯಾಗಿ, ಮಹಾತ್ಮರ ಕೈಗೆ ಬೆತ್ತವಾಗಿ ಉಪಯೋಗವಾಗುತ್ತದೆ.      

2. ಧಾನ್ಯಗಳನ್ನು ಕುಟ್ಟಲು, ಬೀಸಲು, ಕೇರಲು ಬಿದಿರು ಹೇಗೆ ಸಹಾಯಕವಾಗಿರುತ್ತದೆ?
ಉತ್ತರ:  ಧಾನ್ಯಗಳನ್ನು  ಕುಟ್ಟಲು  ಒನಕೆಯಾಗಿ,  ಬೀಸುವ  ಕಲ್ಲಿಗೆ  ಗೂಟವಾಗಿ, ಕೇರಲು ಮರವಾಗಿ ಬಿದಿರು ಸಹಾಯಕವಾಗಿರುತ್ತದೆ.      

3. ತತ್ತ್ವಪದಕಾರರು ಸ್ನೇಹ ಮಾಡುವ ಬಗೆಗೆ ಏನೆಂದು ತಿಳಿಸಿದ್ದಾರೆ?
ಉತ್ತರ:  ತತ್ತ್ವಪದಕಾರರು ಸ್ನೇಹ   ಮಾಡುವ  ಬಗೆಗೆ  ಗುರುಕರುಣವ್ಲಿದವನ ಸ್ನೇಹವನ್ನು   ಸಾಯುವವರೆಗೂ ಮಾಡಬಾರದು, ಕೊಟ್ಟ ಮಾತಿನಂತೆ ನಡೆಯದವನ ಸ್ನೇಹ    ಮಾಡಬಾರದು. ಹೀನ  ಮನುಶ್ಯಿನ  ಸ್ನೇಹ  ಮಾಡಿ  ಕೆಡಬಾರದು  ಎಂದು ತಿಳಿಸಿದ್ದಾರೆ.      

4. ಗುರುಕರುಣೆ ಪದ್ಯದ ಮೂರು ಮತ್ತು ನಾಲ್ಕನೇಯ ಚರಣದಲ್ಲಿ ಏನನ್ನು  ಮಾಡಬಾರದೆಂದು ತತ್ತ್ವಸಾರಿದ್ದಾರೆ?
ಉತ್ತರ:  ಅಕ್ಕ-ತಂಗಿಯರೆಂದು  ಬಾಯಲ್ಲಿ  ಕರೆದು  ಅವರ  ಬಗ್ಗೆ  ಕೆಟ್ಟದಾಗಿ ಯೋಚಿಸಬಾರದು. ಸುಮ್ಮನೆ  ಊಟಮಾಡಿಕೊಂಡು  ಕುಳಿತು  ಕಾಲಕಳೆಯಬಾರದು. ಹಳೆಯದೆಲ್ಲವು ಶ್ರೇಷ್ಠವೆಂದು  ಕಡೆಗಣಿಸಿ,  ಇಂದಿನದೇ  ಶ್ರೇಷ್ಠವೆಂದು ಸರಿಮಾಡಬಾರದು. ಎಂದು ಗುರುಕರುಣೆ ಪದ್ಯದಲ್ಲಿ ಹೇಳಲಾಗಿದೆ.    

ಇ] ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರ ಬರೆಯಿರಿ.   

1. ಗುರುಕರುಣೆ ಪದ್ಯದ ಸಾರಾಂಶವನ್ನು ನಿಮ್ಮ ಮಾತುಗಳಲ್ಲ ಬರೆಯಿರಿ.  
ಉತ್ತರ:  ಕಡಕೋಳ  ಮಡಿವಾಳಪ್ಪನವರು  ಗುರುಕರುಣೆ  ಎಂಬ  ತತ್ವಪದದಲ್ಲಿ ಸ್ನೇಹ, ಸಂಬಂಧ, ಸೇವೆ  ಮುಂತಾದ  ವಿಷಯವನ್ನು  ಕುರಿತು  ಹೇಳಿದ್ದಾರೆ.    ಯಾವ  ವ್ಯಕ್ತಿಯು ಗುರುಗಳ  ಬಗ್ಗೆ  ಗೌರವವನ್ನು  ಹೊಂದಿಲ್ಲವೋ,  ಅವರ  ಕೃಪೆಯನ್ನು  ಗಳಿಸಿಲ್ಲವೋ ಅಂತಹವನ  ಸ್ನೇಹವನ್ನು  ಸಾಯುವವರೆಗೂ  ಮಾಡಬಾರದು.  ಕೊಟ್ಟ  ಮಾತಿನಂತೆ ನಡೆಯದವನ  ಸ್ನೇಹ  ಮಾಡಬಾರದು.  ಕೆಟ್ಟ  ಮನುಷ್ಯನ  ಸ್ನೇಹ ಮಾಡಿ  ಕೆಡಬಾರದು. ಸಾಧು-ಸತ್ಪುರುಶರ  ಸೇವೆ  ಮಾಡುವುದರ  ಮೂಕ  ಜೀವನದಲ್ಲ  ಸಾರ್ಥಕತೆಯನ್ನು ಪಡೆಯಬೇಕು.  ಅಕ್ಕ-ತಂಗಿಯರೆಂದು  ಬಾಯಲ್ಲಿ  ಕರೆದು  ಅವರ  ಬಗ್ಗೆ  ಕೆಟ್ಟದಾಗಿ ಯೋಚಿಸಬಾರದು.  ಸುಮ್ಮನೆ  ಊಟಮಾಡಿಕೊಂಡು  ಕುಳಿತು  ಸೋಮಾರಿಯಾಗಿ  ಕಾಲ ಕಸೆಯಬಾರದು. ಹಳೆಯದೆಲ್ಲವು ಶ್ರೇಷ್ಠವೆಮದು ಕಡೆಗಣಿಸಿ,  ಇಂದಿನದೇ ಶ್ರೇಷ್ಠವೆಂದು ಸರಿಮಾಡಬಾರದು.  

2. ಬಿದಿರು ಪದ್ಯದ ಸಾರಾಂಶವನ್ನು ನಿಮ್ಮ ಮಾತುಗಳಲ್ಲಿ ಬರೆಯಿರಿ.  
ಉತ್ತರ:  ಪ್ರಕೃತಿಯಲ್ಲಿರುವ  ಬಹೂಪಯೋಗಿ  ಪರಿಕರಗಳಲ್ಲಿ  ಬಿದಿರು  ಸಹ  ಒಂದಾಗಿದೆ. ಬಿದಿರು ಮಾನವನ ಜೀವನದಲ್ಲಿ ಹಲವಾರು ವಿಧದಲ್ಲಿ ಉಪಯೋಗಕ್ಕೆ ಬರುತ್ತದೆ. ಅದನ್ನು ಮಾನವನ ಹುಟ್ಟಿನಿಂದ ಸಾಯುವ ಕಾಲದವರೆಗೂ ಬಳಸಲಾಗುತ್ತದೆ.   ಶಿಶುನಾಳ ಶರೀಫರು ಬಿದಿರಿನ ಬಗ್ಗೆ ಈ ತತ್ವಪದದಲ್ಲಿ ತಿಳಿಸಿದ್ದಾರೆ. ಹುಟ್ಟುತ್ತ ಹುಲ್ಲಾಗಿ ಬೆಳೆಯುತ್ತಾ  ಬೆಳೆಯುತ್ತಾ  ಮೈತುಂಬಿಕೊಳ್ಳುತ್ತದೆ.  ಮಕ್ಕಳನ್ನು  ತೂಗುವ  ತೊಟ್ಟಿಲಾಗಿ, ಪಲ್ಲಕ್ಕಿಯಾಗಿ,  ಹೂ-ಪತ್ರೆಗಳಿಗೆ  ಬುಟ್ಟಿಯಾಗಿ,  ಮಹಾತ್ಮರ  ಕೈಗೆ  ಬೆತ್ತವಾಗಿ ಬಳಕೆಯಾಗುತ್ತದೆ.  ಕುಟ್ಟುವ  ಒನಕೆಯಾಗಿ,  ಅಂಬಿಗನಿಗೆ  ದೋಣಿ  ನಡೆಸಲು  ಕೋಲಾಗಿ,  ರೈತನಿಗೆ  ಹೊಲದಲ್ಲಿ ಬಿತ್ತನೆ ಮಾಡಲು ಉಪಯುಕ್ತವಾದ ಕೂರಿಗೆಯಾಗಿ ಬಳಕೆಯಾಗುತ್ತದೆ. ಬೀಸುವ  ಕಲ್ಲಿನ  ಗೂಟವಾಗಿ,  ಧಾನ್ಯ  ಕೇರುವ  ಮರವಾಗಿ,  ಮುದುಕರಿಗೆ ಊರುಗೋಲಾಗಿ,  ಕೋಲಾಟ  ಆಡಲು  ಬಳಸುವ  ಕೋಲಾಗಿ,  ಎತ್ತಿನ  ಬಂಡಿಯಾಗಿ, ಜಾತ್ರೆಗಳಲ್ಲಿ  ಬಳಸುವ  ನಂದಿಕೋಲಾಗಿ  ನೆರಳಿಗೆ  ಚಪ್ಪರವಾಗಿ,  ಏಕದಂಡಿ  ಎಂಬ ವಾದ್ಯವಾಗಿ,  ಓಲಗ (ಶಹನಾಯಿ)  ಆಗಿ  ಬಿದಿರು  ಬಹು  ರೂಪದಲ್ಲಿ  ಮಾನವನಿಗೆ ಉಪಕಾರಿಯಾಗಿದೆ.  

ಈ] ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ.  

1. ಹೀನ ಮನುಶ್ಯಿನ ಸ್ನೇಹ ಮಾಡಿ ನೀನು ಕೆಡಲಬೇಡ'  
ಆಯ್ಕೆ:  ಈ  ವಾಕ್ಯವನ್ನು  ಕಡಕೋಸ  ಮಡಿವಾಸಪ್ಪನವರು  ಬರೆದಿರುವ  ಗುರುಕರುಣ ಎಂಬ ತತ್ವಪದದಿಂದ ಆರಿಸಿಕೊಳ್ಳಲಾಗಿದೆ.  
ಸಂದರ್ಭ:  ಎಂತಹ  ಜನರ  ಸ್ನೇಹ  ಮಾಡಬಾರದು  ಎಂದು  ತಿಳಿಸುವ  ಸಂದರ್ಭದಲ್ಲಿ ಮಡಿವಾಳಪ್ಪನವರು ಈ ಮಾತನ್ನು ಹೇಳಿದ್ದಾರೆ.  
ಸ್ವಾರಸ್ಯ:  ತತ್ತ್ವಪದಕಾರರು ಸ್ನೇಹ  ಮಾಡುವ  ಬಗೆಗೆ  ಗುರುಕರುಣವ್ಲಿದವನ  ಸ್ನೇಹವನ್ನು ಸಾಯುವವರೆಗೂ  ಮಾಡಬಾರದು,  ಕೊಟ್ಟ  ಮಾತಿನಂತೆ  ನಡೆಯದವನ  ಸ್ನೇಹ ಮಾಡಬಾರದು. ನ ಮನುಷ್ಯನ ಸ್ನೇಹ ಮಾಡಿ ಕೆಡಬಾರದು ಎಂದು ತಿಸಿಷದ್ದಾರೆ.  

2. ನಿತ್ಯಕಾದಲ್ಲ ಅಲಿನವ ಉಂಡು ಹೊತ್ತು ಗಳಿಯಲಬೇಡ'  
ಆಯ್ಕೆ:  ಈ  ವಾಕ್ಯವನ್ನು  ಕಡಕೋಸ  ಮಡಿವಾಸಪ್ಪನವರು  ಬರೆದಿರುವ  ಗುರುಕರುಣ ಎಂಬ ತತ್ವಪದದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ:  ಸುಮ್ಮನೆ  ವ್ಯರ್ಥವಾಗಿ  ಕಾಲಕಳೆಯಬಾರದೆಂಬುದನ್ನು  ತಿಳಿಸುವ  ಸಂದರ್ಭದಲ್ಲಿ ಮಡಿವಾಳಪ್ಪನವರು ಈ ಮಾತನ್ನು ಹೇಳಿದ್ದಾರೆ.  
ಸ್ವಾರಸ್ಯ:  ಯಾವುದೇ  ವ್ಯಕ್ತಿಯಾದರೂ  ಸರಿ  ಸುಮ್ಮನೆ  ಊಟಮಾಡಿಕೊಂಡು  ಕುಳಿತು ಸೋಮಾರಿಯಾಗಿ  ಕಾಲ  ಕಳೆಯಬಾರದು.  ಅಂದರೆ  ಏನಾದರು  ಉಪಯುಕ್ತವಾದ  ಕೆಲಸ ಮಾಡಬೇಕು ಎಂಬುದು ಈ ಮಾತಿನ ಸ್ವಾರಸ್ಯವಾಗಿದೆ.  

3. ಮಹಾತ್ಮರ ಕೈಗೆ ಬೆತ್ತ ನಾನಾದೆ'  
ಆಯ್ಕೆ: ಈ ವಾಕ್ಯವನ್ನು ಶಿಶುನಾಳ ಶರೀಫರು ಬರೆದಿರುವ ಬಿದಿರು ಎಂಬ ತತ್ವಪದದಿಂದ ಆರಿಸಿಕೊಳ್ಳಲಾಗಿದೆ.  
ಸಂದರ್ಭ:  ಬಿದಿರಿನ  ಉಪಯೋಗಗಳನ್ನು  ವರ್ಣಿಸುವ  ಸಂದರ್ಭದಲ್ಲಿ  ಶಿಶುನಾಳ ಶರೀಫರು ಈ ಮಾತನ್ನು ಹೇಳಿದ್ದಾರೆ.  
ಸ್ವಾರಸ್ಯ :  ಬಹೂಪಯೋಗಿಯಾದ  ಬಿದಿರು  ಅನೇಕ  ರೀತಿಯಲ್ಲಿ  ಮಾನವನ  ಜೀವನದಲ್ಲಿ ಬಳಸಲ್ಪಡುತ್ತದೆ.  ಹಾಗೆಯೇ  ಅದು  ಮಹಾತ್ಮರು  ಬಳಸುವ  ಬೆತ್ತವಾಗಿಯೂ ಬಸಕೆಯಾಗುವ ಶ್ರೇಷ್ಠತೆಯನ್ನು ಹೊಂದಿದೆ ಎಂಬುದು ಈ ಮಾತಿನ ಸ್ವಾರಸ್ಯವಾಗಿದೆ.  

4. ಬೆಳೆ ಬೆಳೆಯುತ್ತ ದಿವಿನಾದೆ'  
ಆಯ್ಕೆ: ಈ ವಾಕ್ಯವನ್ನು ಶಿಶುನಾಳ ಶರೀಫರು ಬರೆದಿರುವ ಬಿದಿರು ಎಂಬ ತತ್ವಪದದಿಂದ ಆರಿಸಿಕೊಳ್ಳಲಾಗಿದೆ.  
ಸಂದರ್ಭ:  ಬಿದಿರು  ಬೆಳೆಯುವ  ಬಗೆಯನ್ನು  ವರ್ಣಿಸುವ  ಸಂದರ್ಭದಲ್ಲಿ  ಶಿಶುನಾಳ ಶರೀಫರು ಈ ಮಾತನ್ನು ಹೇಳಿದ್ದಾರೆ.  
ಸ್ವಾರಸ್ಯ:  ಬೃಹದಾಕಾರವಾಗಿ  ಬೆಳೆಯುವ  ಬಿದಿರು  ಹುಟ್ಟುವಾಗ  ಹುಲ್ಲಾಗಿ  ಹುಟ್ಟುತ್ತದೆ. (ಇದು  ಹುಲ್ಲಿನ  ವರ್ಗಕ್ಕೆ  ಸೇರಿದ  ದೊಡ್ಡ  ಸಸ್ಯ)  ಆದರೆ  ಬೆಳೆಬೆಳೆಯುತ್ತಾ ಮೈತುಂಬಿಕೊಳ್ಳುತ್ತದೆ. ಎಂಬುದು ಈ ಮಾತಿನ ಸ್ವಾರಸ್ಯವಾಗಿದೆ.  

ಉ] ಕೊಟ್ಟಿರುವ ಪದಗಳಲ್ಲಿ ಸೂಕ್ತಪದವನ್ನು ಆರಿಸಿ ಬರೆಯಿರಿ. 
1. ಅಲಿನ ಪದದ ಅರ್ಥ ಬಟ್ಟೆ  
2. ಬೆತ್ತ ಪದದ ತತ್ಸಮ ರೂಪ ವೇತ್ರ.  
3. ಕರುಣೆ ಪದದ ವಿರುದ್ಧಾರ್ಥಕ ಪದ ನಿಶ್ಕರುಣೆ  
4. ಅಂಬಿಗ ಎಂದರೆ ದೋಣಿ ನಡೆಸುವವ.  

ಊ]  ಮೊದಲೆರಡು  ಪದಗಳಿಗೆ  ಸಂಬಂಧ  ಇರುವಂತೆ  ಮೂರನೆಯ  ಪದಕ್ಕೆ ಸಂಬಂಧಿಸಿದ ಪದವನ್ನು ಬರೆಯಿರಿ.  
1. ಹಿಂದು : ಮುಂದು :: ಹಿರಿದು : ಕಿರಿದು  
2. ಮಾತಿಲ್ಲದವನ : ಲೋಪ ಸಂಧಿ :: ಕರುಣವಿಲ್ಲದವನ : ಆದೇಶಸಂಧಿ  
3. ಮನುಶ್ಯಿನ : ಷಷ್ಠಿ ವಿಭಕ್ತಿ :: ಕಾದಲ್ಲ : ಸಪ್ತಮೀ ವಿಭಕ್ತಿ.  
4. ಪತ್ರ : ಎಲೆ :: ಚಕ್ಕಡಿ : ಎತ್ತಿನಗಾಡಿ

ಚಟುವಟಿಕೆ

ಅ. ಕೊಟ್ಟಿರುವ ಪದ್ಯಗಳನ್ನು ಕಂಠಪಾಠ ಮಾಡಿರಿ      
1. ಮಾತಿನೊಳಗ ಮಾತಿಲ್ಲದವನ ಸ್ನೇಹ ಜಾತಿಜನ್ಮಕಬೇಡ |ಹೀನ ಮನುಷ್ಯನ ಸ್ನೇಹ ಮಾಡಿ ನೀನು ಕೆಡಲಬೇಡ
2.  ಬೀಸುವ ಗೂಟವಾದೆ ಕೇರುವ ಮರವಾದೆ  ಮುದುಕರಿಗೆ ಊರುವ ಬೆತ್ತವಾದೆ
3.  ಆಡುವ ಕೋಲಾದೆ ಹೂಡಲು ಚಕ್ಕಡಿಯಾದೆ  ಸಿದ್ದರಾಮೇಶಗೆ ನಂದಿ ಕೋಲಾದೆ








 
You Might Like

Post a Comment

0 Comments