Recent Posts

ಹೊಸಹಾಡು - ೦೯ ನೇ ತರಗತಿ ಸಿರಿ ಕನ್ನಡ ಪುಸ್ತಕದ ಪ್ರಶ್ನೋತ್ತರಗಳು


ಹೊಸಹಾಡು

ಆ ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.

1. ಕವಿ ಎಂತಹ ಹಾಡು ಹಾಡಬೇಕೆಂದು ಬಯಸುವರು ?
ಉತ್ತರ ನವಭಾವ , ನವಜೀವನ , ನವಶಕ್ತಿ ತುಂಬಿಸುವ ಹಾಡನ್ನು ಹಾಡಬೇಕು ಎಂದು ಕವಿ ಬಯಸುವರು ,

2. ವೀರಧ್ವನಿ ಹೇಗೆ ಏರಬೇಕು ?
ಉತ್ತರ : ತೀವ್ರತರಹ ಗಂಭೀರ ಭಾವನೆಯ ತೆರೆ ಮಸಗಿ ವೀರ ಧ್ವನಿ ಏರಬೇಕು

3. ಕಡಿದೊಗೆಯಬೇಕಾದ ಪಾಠಗಳು ಯಾವುವು ?
ಉತ್ತರ : ಜಾತಿ , ಕುಲ , ಮತ , ಧರ್ಮ ಈ ಪಾಶಗಳನ್ನು ಕಡಿದೊಗೆಯಬೇಕು .

4. ಹಾಡು ನುಡಿಗುಂಡುಗಳು ಯಾವುದರ ಬೆನ್ನಟ್ಟಬೇಕು ?
ಉತ್ತರ : ಹಾಡಿನ ನುಡಿಗುಂಡುಗಳು ಭಯದ ಬೆನ್ನಟ್ಟಬೇಕು .

5. ಬಾನು ಬುವಿ ಯಾವುದರಿಂದ ಬೆಳಗಬೇಕು ?
ಉತ್ತರ : ಜಡನಿದ್ರೆಯಿಂದ ಸಿಡಿದೆದ್ದು ವೀರ ಅಟ್ಟಹಾಸದಲ್ಲಿ ಭಾನು ಮತ್ತು ಭುವಿಯು ಬೆಳಗಬೇಕು
 
ಆ ) ಕೊಟ್ಟಿರುವ ಪ್ರಶ್ನೆಗಳಿಗೆ ಮೂರು – ನಾಲ್ಕು ವಾಕ್ಯದಲ್ಲಿ ಉತ್ತರಿಸಿ.

1 ಕವಿ ಎಂತಹ ಹಾಡನ್ನು ಹಾಡಿದಾಗ ವೀರಧ್ವನಿಯೇರಬೇಕು ಎಂದು ಬಯಸುತ್ತಾರೆ ?
ಉತ್ತರ : ಬದುಕಿಗೆ ಹೊಸ ತಿರುವನ್ನು ನೀಡಬಲ್ಲ . ಹೊಸ ಆಶಯವನ್ನು , ಜೀವನದ ಗತಿಯನ್ನು ಬದಲಿಸಿ ಹೊಸ ಹುರುಪನ್ನು ತುಂಬಬಲ್ಲ ಹೊಸ ಭಾವನೆ , ಹೊಸ ಜೀವನ ಹಾಗೂ ಹೊಸ ಶಕ್ತಿ ತುಂಬಿ ತುಳುಕುವ ಹಾಡನ್ನು ಹಾಡಬೇಕು .
ಈ ಹಾಡನ್ನು ಗಂಭೀರವಾದ ಭಾವನೆಗಳಿಂದ ಹಾಡಬೇಕು . ಆಗ ವೀರಧ್ವ ಮುಗಿಲೆತ್ತರಕ್ಕೆ ಬರಬೇಕು ಎಂದು ಕವಿ ಬಯಸುತ್ತಾರೆ.
 
2. ಕವಿ ಎಂತಹ ಹಾಡು ಗುಡುಗಬೇಕು ಎಂದು ಆಶಿಸುತ್ತಾರೆ ?
ಉತ್ತರ : ಹಳೆಯ ಮೌಡ್ಯವನ್ನು ಕಡಿದೊಗೆದು ಹೊಸ ಭಾವನೆಗಳನ್ನು ಸೃಜಿಸಬಲ್ಲ ಹೊಸ ಹಾಡನ್ನು ಹಾಡಬೇಕು , ಜಾತಿ , ಕುಲ , ಮತ , ಧರ್ಮ ಪಾಠಗಳನ್ನು ಕಡಿದೊಗೆಯಬೇಕು
ಸ್ವಾಭಿಮಾನದಿಂದ ಆತ್ಮವಿಶ್ವಾಸದಿಂದ ಎದೆಯೆತ್ತಿ ಹಾಡನ್ನು ಹಾಡಬೇಕು ಆ ಹಾಡು : ಯುಗಯುಗ ಕಳೆದರೂ , ಲೋಕ ಲೋಕಗಳ ಆಚೆಯೂ ಗುಡುಗಿನ ರೀತಿಯಲ್ಲಿ ಪ್ರತಿಧ್ವನಿಸಬೇಕು ಎಂದು ಕವಿ ಆಶಿಸುತ್ತಾರೆ .

3 . ಈ ಹಾಡು ಹೊಸತು ಎಂದು ಕವಿ ಹೇಳಲು ಕಾರಣವೇನು ?
ಉತ್ತರ : ‘ ಜಯಜನನಿ , ಶಿರವೆತ್ತಿ ವೀರಭರವಸೆಯಿಂದ ಹೊಸಹಾಡ ಕೇಳಿ ನೋಡು ; ಇದೋ ಮೊದಲು ಮುನ್ನಿಲ್ಲ … ಮುಗಿದಾದಂದಿನ ಪಾಡು ಹೊಸತಿಂದು ಹೊಸತು ಹಾಡು ” ಕವಿ ವೀರ ಭರವಸೆಯನ್ನು ಮೂಡಿಸುವ ಹಾಡನ್ನು ಒಮ್ಮೆ ಕೇಳಿ ನೋಡಬೇಕೆಂದು ಜಗಜ್ಜನನಿಯಲ್ಲಿ ಪ್ರಾರ್ಥಿಸುತ್ತಾರೆ .
ಏಕೆಂದರೆ ಹಾಡಿನಲ್ಲಿ ಅಂದಿನ ಪಾಡು ಮುಗಿದು , ಇಂದು ಹೊಸ ಹುರುಪಿನೊಂದಿಗೆ ಹೊಸ ಹಾಡನ್ನು ಹಾಡುತ್ತಿದ್ದರೆ , ಆದ್ದರಿಂದ ಕವಿ ಈ ಹಾಡು ಹೊಸದು ಎಂದು ಹೇಳಿದ್ದಾರೆ .

ಇ) ಕೊಟ್ಟಿರುವ ಪ್ರಶ್ನೆಗೆ ಎಂಟು – ಒಟ್ಟು ವಾಕ್ಯಗಳಲ್ಲಿ ಉತ್ತರಿಸಿ .

1. ಹೊಸಹಾಡು ಪದ್ಯದ ಸಾರಾಂಶವನ್ನು ನಿಮ್ಮ ಮಾತುಗಳಲ್ಲಿ ಬರೆಯಿರಿ .
ಉತ್ತರ : ಬದುಕಿಗೆ ಹೊಸ ತಿರುವನ್ನು ನೀಡಬಲ್ಲ , ಹೊಸ ಆಶಯವನ್ನು , ಜೀವನದ ಗತಿಯನ್ನು ಬದಲಿಸಿ ಹೊಸ ಹುರುಪನ್ನು ತುಂಬಬಲ್ಲ . ಹಳೆಯ ಮೌಡ್ಯವನ್ನು ಕಡಿದೊಗೆದು ಹೊಸ ಭಾವನೆಗಳನ್ನು ಸೃಜಿಸಬಲ್ಲ ಹೊಸ ಹಾಡನ್ನು ಹಾಡಬೇಕು .
ಆ ಹಾಡು ಎಲ್ಲರಲ್ಲೂ ಕ್ರಾಂತಿಯನ್ನುಂಟು ಮಾಡಬೇಕು , ಅದರ ಮಾರ್ದನಿಗಳು ಭೂಮಿ – ಆಕಾಶದಲ್ಲಿ ತುಂಬಬೇಕು , ಎಲ್ಲ ಕೀಳರಿಮೆಗಳನ್ನು ಕಡಿದೊಗೆದು , ಹೊಸ ಹುರುಪನ್ನು ತುಂಬುವ ಹಾಡು ಇದಾಗಿದೆ .
ಹೊಸಹಾಡು ಪ್ರಕೃತಿ ಜೀವನದ ಕಣಕಣದಲ್ಲೂ ಹೇಗೆ ಸಮ್ಮಿಳಿತಗೊಂಡಿದೆ ಎಂದು ಸೊಗಸಾಗಿ ವರ್ಣಿಸಿದ್ದಾರೆ . ಹೊಸಭಾವನೆ , ಹೊಸಜೀವನ ಹಾಗೂ ಹೊಸ ಶಕ್ತಿಯಿಂದ. ತುಂಬಿ ತುಳುಕುವ ಹಾಡನ್ನು ಒಮ್ಮೆಯಾದರು ಹಾಡಬೇಕು ಹರಿತವಾದ ಗಂಭೀರವಾದ ಭಾವನೆಗಳು ಅಲೆಅಲೆಯಾಗಿ ಹರಡುವ ರೀತಿಯಲ್ಲಿ ವೀರಧ್ವನಿಯು ಮುಗಿಲೆತ್ತರಕ್ಕೆ ಏರಬೇಕು ಜಾತಿ , ಕುಲ , ಧರ್ಮ , ಮತ ಪಾಶಗಳನ್ನು ಕಡಿದೊಗೆಯಬೇಕು .
ಎದೆಯುಬ್ಬಿಸಿ ಆತ್ಮವಿಶ್ವಾಸದಿಂದ ಸ್ವಾಭಿಮಾನದಿಂದ ಹಾಡನ್ನು ಹಾಡಬೇಕು ಆ ಹಾಡು ಅತ್ಯುನ್ನತವೂ ಶ್ರೇಷ್ಟವೂ ಆದ ಹಿಮಾಲಯದ ಶಿಖರವನ್ನೇರಿ ಹಾಡಬೇಕು .
ಆಹಾಡಿನ ನುಡಿಗುಂಡುಗಳು ಹತ್ತು ದಿಕ್ಕುಗಳಲ್ಲಿ ಹಾರಿ ಶತ್ರುಗಳಲ್ಲಿ ಭಯವನ್ನುಂಟುಮಾಡಿ ಅವರನ್ನು ಓಡಿಸಿ ಮಾರ್ದನಿಸಬೇಕು . ಇಂತಹ ಸ್ಪೂರ್ತಿಯ ಚಿಲುಮೆಯಾಗುವ ಹಾಡನ್ನು ಹಾಡಬೇಕು , ಅದು ನಿತ್ಯ ನೂತನವಾಗಿರಬೇಕೆಂಬುದು ಈ ಪದ್ಯದ ಸಾರಾಂಶವಾಗಿದೆ .

ಈ ) ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ ,

1. ವತರ ಗಂಭೀರ ಭಾವನೆಯ ತರ ಮಸ  ವೀರವನಿರಬೇಕು.
” ಆಯ್ಕೆ : ಈ ವಾಕ್ಯವನ್ನು ಕಯ್ಯಾರ ಕಿಞ್ಞಣ್ಣ ರೈ ಅವರು ಸಂಪಾದಿಸಿರುವ ` ಶತಮಾನದ ಗಾನ ‘ ಕವನಸಂಕಲನ ದಿಂದ ಆಯ್ದು ‘ ಹೊಸಹಾಡು ‘ ಎಂಬ ಪದ್ಯಭಾಗದಿಂದ ಆರಿಸಲಾಗಿದೆ .
ಸಂದರ್ಭ : ಈ ಮಾತನ್ನು ಕವಿ ಹೇಳಿದ್ದಾರೆ , ಹೊಸಹಾಡು ನವಭಾವ ನವಜೀವನ , ನವಶಕ್ತಿಯನ್ನು ತುಂಬಿಸುವಂತಿರಬೇಕು ಎಂದು ಹೇಳುವ ಸಂದರ್ಭದಲ್ಲಿ ಕವಿ ಈ ಮಾತನ್ನು ಹೇಳಿದ್ದಾರೆ .
ಸ್ವಾರಸ್ಯ : ಹಾಡಿಗೆ ಮನುಷ್ಯನ ಬದುಕಿಗೆ ಹೊಸ ತಿರುವನ್ನು ಕೊಡುವ ಶಕ್ತಿಯಿದೆ . ಅಂತಹ ಹಾಡನ್ನು ಗಂಭೀರವಾದ ಭಾವನೆಗಳಿರಬೇಕು ವೀರಧ್ವನಿಯನ್ನು ಮೂಡಿಸಬೇಕು ಎಂಬುದು ಸ್ವಾರಸ್ಯಕರವಾಗಿದೆ .

2 ” ಯುಗಯುಗಗಳಾಚೆಯಲ್ಲಿ ಲೋಕಲೋಕಾಂತರದಲ್ಲಿ ಆ ಹಾಡು ಗುಡುಗಬೇಕು ”
ಆಯ್ಕೆ : ಈ ವಾಕ್ಯವನ್ನು ಕಯ್ಯಾರ ಕಿಞ್ಞಣ್ಣ ರೈ ಅವರು ಸಂಪಾದಿಸಿರುವ ‘ ಶತಮಾನದ ಗಾನ ‘ ಕವನಸಂಕಲನ ದಿಂದ ಆಯ್ದು ‘ ಹೊಸಹಾಡು ‘ ಎಂಬ ಪದ್ಯಭಾಗದಿಂದ ಆರಿಸಲಾಗಿದೆ ,
ಸಂದರ್ಭ: ಈ ಮಾತನ್ನು ಕವಿ ಹೇಳಿದ್ದಾರೆ . ಜಾತಿ , ಕುಲ , ಮತ ಧರ್ಮಗಳ , ಪಾಠಗಳನ್ನು ಕಡಿದೊಗೆದು ಹಾಡನ್ನು ಹಾಡಬೇಕು . ಈ ಹಾಡು ಯುಗಯುಗಗಳಾಚಿ , ಲೋಕಲೋಕಗಳಾಚೆ ಕೇಳಬೇಕು ಎಂದು ಹೇಳುವ ಸಂದರ್ಭದಲ್ಲಿ ಈ ಮಾತು ಬಂದಿದೆ .
ಸ್ವಾರಸ್ಯ : ಸಮಾಜದಲ್ಲಿರುವ ಜಾತಿ , ಕುಲ , ಮತ , ಧರ್ಮಗಳ ಪಾಠಗಳು ನಾಶವಾಗಿ ಮನುಜ ವೃತದ ಹಾಡು ಕೇಳಬೇಕು ಎಂಬ ಕವಿಯ ಭಾವನೆಯು ಸ್ವಾರಸ್ಯಕರವಾಗಿದೆ .

3. “ ಜಡನಿದ್ರೆ ಸಿಡಿದೆದ್ದ ವೀರಾಟಹಾಸದಲಿ ಬಾನು ಭುವಿ ಬೆಳಗಬೇಕು.
” ಆಯ್ಕೆ : ಈ ವಾಕ್ಯವನ್ನು ಕಯ್ಯಾರ ಕಿಞ್ಞಣ್ಣ ರೈ ಅವರು ಸಂಪಾದಿಸಿರುವ ` ತತಮಾನದ ಗಾನ ‘ ಕವನಸಂಕಲನ ‘ ದಿಂದ ಆಯ್ದು ‘ ಹೊಸಹಾಡು ‘ ಎಂಬ ಪದ್ಯಭಾಗದಿಂದ ಅಧಿಸಲಾಗಿದೆ ,
ಸಂದರ್ಭ : ಈ ಮಾತನ್ನು ಕವಿ ಹೇಳಿದ್ದಾರೆ . ನಾವು ಜಡನಿದ್ರೆಯಿಂದ ಎಚ್ಚರಗೊಂಡು ವೀರ ಅಟ್ಟಹಾಸದಲ್ಲಿ ಭಾನು ಭುವಿ ಬೆಳಗಬೇಕು ಹೀಗೆ ಹೊಸ ಹಾಡು ಹೇಗೆ ಮತ್ತು ಯಾವುದನ್ನು ಬೆಳಗಬೇಕು ಎಂದು ವಿವರಿಸುವ ಸಂದರ್ಭದಲ್ಲಿ ಈ ಮಾತು ಬಂದಿದೆ .
ಸ್ವಾರಸ್ಯ : ಸಮಾಜದಲ್ಲಿ ಬದಲಾವಣೆಯ ಗಾಳಿ ಬೀಸಬೇಕಾದರೆ ಮೊದಲು ಹಳೆಯ ಮೌಡ್ಯಗಳು ದೂರವಾಗಬೇಕು ಎಂಬುದು ಸ್ವಾರಸ್ಯಕರವಾಗಿದೆ .

4. “ ನಡೆನುಡಿಗಳೆಡೆಯಲ್ಲಿ ಪದತಾಳ ಗತಿಯಲ್ಲಿ ಕಾಂತಿಕಿಡಿ ಕೆರಳಬೇಕು.
ಆಯ್ಕೆ : ಈ ವಾಕ್ಯವನ್ನು ಕಯ್ಯಾರ ಕಿಟ್ಟಣ್ಣ ರೈ ಅವರು ಸಂಪಾದಿಸಿರುವ ‘ ಶತಮಾನದ ಗಾನ ‘ ಕವನಸಂಕಲನ ದಿಂದ ಆಯು ‘ ಹೊಸಹಾಡು ‘ ಎಂಬ ಪದ್ಯಭಾಗದಿಂದ ಆರಿಸಲಾಗಿದೆ . ಸರಿ ಉತ್ತರಗಳು 1. ಜಗ
ಸಂದರ್ಭ : ಈ ಮಾತನ್ನು ಕವಿ ಹೇಳಿದ್ದಾರೆ . ಹೊಸ ಹಾಡಿನ ಗತಿ , ಪ್ರಗತಿ ಹೇಗಿರಬೇಕು , ಆ ಹಾಡು ಯುಗಯುಗ ಕಳೆದರೂ , ಲೋಕ ಲೋಕಗಳ ಆಚೆಯೂ ಗುಡುಗಿನ ರೀತಿಯಲ್ಲಿ ಪ್ರತಿಧ್ವನಿಸಬೇಕು ಕ್ರಾಂತಿಯ ಕಿಡಿಯನ್ನು ಹೊತ್ತಿಸಬೇಕು ಎಂದು ಹೇಳುವ ಸಂದರ್ಭ್ರದಲ್ಲಿ ಈ ಈ ಮಾತು ಬಂದಿದೆ * ಶಾಂತಿ
ಸ್ವಾರಸ್ಯ : ಹಾಡು ಶೃಂತಿಕಾರಿಯಾಗಿದ್ದರೆ ಮಾತ್ರ ಜಡವಾದ ಜನರ ಮನಸ್ಸಿನಲ್ಲಿ ಜಾಗೃತಿಯನ್ನು ಮೂಡಿಸಲು ಸಾಧ್ಯ ಎಂಬುದು ಸ್ವಾರಸ್ಯಕರವಾಗಿ ಕವಿ ಹೇಳಿದ್ದಾರೆ .

5. ಇದೋ : ಮೊದಲು ಮುನ್ನಿಲ್ಲ – ಮುಗಿದುದಂದಿನ ಪಾಡು ಹೊಸತಿಂದು ಹೊಸತು ಹಾಡು
” ಆಯ್ಕೆ : ಈ ವಾಕ್ಯವನ್ನು ಕಯ್ಯಾರ ಕಿ ರೈ ಅವರು ಸಂಪಾದಿಸಿರುವ ‘ ಶತಮಾನದ ಗಾನ ‘ ಕವನಸಂಕಲನ ‘ ದಿಂದ ಆಯ್ದು ‘ ಹೊಸಹಾಡು ‘ ಎಂಬ ಪದ್ಯಭಾಗದಿಂದ ಆರಿಸಲಾಗಿದೆ ,
ಸಂದರ್ಭ : ವೀರ ಭರವಸೆಯನ್ನು ಮೂಡಿಸುವ ಹಾಡನ್ನು ಒಮ್ಮೆ ಕೇಳಿ ನೋಡಬೇಕೆಂದು ಜಗಜ್ಜನನಿಯಲ್ಲಿ ಪ್ರಾರ್ಥಿಸುತ್ತಾರೆ . ಏಕೆಂದರೆ ಹಾಡಿನಲ್ಲಿ ಅಂದಿನ ಪಾಡು ಮುಗಿದು , ಇಂದು ಹೊಸ ಹುರುಪಿನೊಂದಿಗೆ ಹೊಸ ಹಾಡನ್ನು ಹಾಡಬೇಕು ಎಂದು ಕವಿ ಹೇಳುವ ಸಂದರ್ಭವಾಗಿದೆ .
ಸ್ವಾರಸ್ಯ:  ಹಿಂದಿನ ಕಷ್ಟಗಳೆಲ್ಲ ಮುಗಿದು ಹೊಸ ಬದುಕು ಪ್ರಾರಂಭವಾಗಿದೆ ಎಂಬುದು ಸ್ವಾರಸ್ಯಕರವಾಗಿದೆ .
 
ಉ ) ಮೊದಲೆರಡು ಪದಗಳಿಗಿರುವ ಸಂಬಂಧದಂತ ಮೂರನೆಯ ಪದಕ್ಕೆ ಸಂಬಂಧಿಸಿದ ಪದವನ್ನು ಬರೆಯಿರಿ .
ದ್ವನಿ:ದನಿ::ಯುಗ:……………………..
2. ಲೋಕಾಂತರ : ಸವರ್ಣದೀರ್ಘ ಸಂಧಿ :: ಉನ್ನತೋನ್ನತ :……….
3. ಬಾನು:ಆಕಾಶ ::ಭಾನು:……….
1. ಜುಗ, 2.ಗುಣಸಂಧಿ 3. ಸೂರ್ಯ
 
ಉ ) ಕೊಟ್ಟಿರುವ ನಾಲ್ಕು ಆಯ್ಕೆಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿ ಬರೆಯಿರಿ .

1.ಹೊಸಹಾಡು ‘ ಪದ್ಯದ ಆಕರ ಗ್ರಂಥ……………
( ಪುನರ್ನವ . ಚೇತನ , ಕೊರಗ. ಶತಮಾನದಗಾನ )

2. ‘ ಹೊಸಹಾಡು ‘ ಪದ್ಯದ ಕವಿ,,,,,,,,,
( ಗೋಪಾಲಕೃಷ್ಣ ಅಡಿಗ , ಕಯ್ಯಾರ ಕಿಞ್ಞಣ್ಣ ರೈ , ದ.ರಾ. ಬೇಂದ್ರೆ , ಜಿ . ಎಸ್ . ಶಿವರುದ್ರಪ್ಪ )

3. ಉನ್ನತೋನ್ನತ…………ಶಿಖರವನೇರಿ ಹಾಡಲ್ಲಿ ಹಾಡಬೇಕು)
( ಹಿಮಾಲಯ ,ಘನಹಿವಾದಿ, ಸಹ್ಯಾದ್ರಿ , ವಿಂಧ್ಯಾ )

4 …………….ಧರ್ಮಪಾಠಗಳ ಕಡಿದೊಗೆದು ಎದೆಹಿಗ್ಗಿ ಹಾಡಬೇಕು ( ಜಾತಿ – ಕುಲ – ಮತ,ಮೇಲು 

ಕೀಳು,ಬಡವ – ಬಲ್ಲಿದ, ಹಳ್ಳಿ – ಪಟ್ಟಣ )

ಸರಿ ಉತ್ತರಗಳು
1. ಶತಮಾನದ ಗಾನ
2. ಕಯ್ಯಾರ ಕಿಞಣ್ಣ ರೈ ,
3. ,ಘನಹಿಮಾದಿ
4. ಜಾತಿ – ಕುಲ ಮತ
 
ಭಾಷಾ ಚಟುವಟಿಕೆ

1 ಅಲಂಕಾರದ ಎರಡು ವಿಧಗಳನ್ನು ಹೆಸರಿಸಿ.
ಉತ್ತರ : ಅಲಂಕಾರದಲ್ಲಿ ಎರಡು ವಿಧ ಅದು ಅರ್ಥಾಲಂಕಾರ ಮತ್ತು ತಬ್ದಾಲಂಕಾರ ,

2. “ ಬಾನಿನಲಿ ಗಾಳಿಪಟಗಳು ಹಕ್ಕಿಗಳಂತೆ ಹಾರಾಡುತ್ತಿದ್ದವು – ಇಲ್ಲಿರುವ ಅಲಂಕಾರವನ್ನು ಗುರುತಿಸಿ ,  

ಲಕ್ಷಣದೊಂದಿಗೆ ಸಮನ್ವಯಗೊಳಿಸಿ
ಅಲಂಕಾರ :ಉಪಮಾಲಂಕಾರ
ಉಪಮೇಯ:ಬಾನಿನಲ್ಲಿ ಗಾಳಿಪಟಗಳು
ಉಪಮಾನ:ಹಕ್ಕಿಗಳು
ಉಪಮಾವಾಚಕ :ಅಂತೆ
ಸಮಾನಧರ್ಮ:ಹಾರಾಡುವುದು
ಸಮನ್ವಯ:ಉಪಮೇಯವಾದ ಬಾನಿನಲ್ಲಿ ಗಾಳಿಪಟಗಳನ್ನು ಉಪಮಾನವಾದ ಹಕ್ಕಿಗಳಿಗೆ ಹೋಲಿಸಿ ವರ್ಣಿಸಲಾಗಿದೆ . ಎಂಬ ಉಪಮಾವಾಚಕ ಪದವಿದ್ದು , ಹಾರಾಡುತ್ತಿದ್ದವು ಎಂಬ ಇರುವದರಿಂದ ಇದು ಉಪಮಾಲಂಕಾರ

ಇ ) ಕೊಟ್ಟಿರುವ ಪದ್ಯಭಾಗವನ್ನು ಪೂರ್ಣಗೊಳಿಸಿ ಕಂಠಪಾಠ ಮಾಡಿರಿ.

ನವಭಾವ – ನವಜೀವ ನವಶಕ್ತಿ ತುಂಬಿಸುವ ಹಾಡೊಮ್ಮೆ ಹಾಡಬೇಕು ;
ತೀವ್ರತರ ಗಂಭೀರ ಭಾವನೆಯ ತಲೆ ಮಸಗಿ ವೀರಧ್ವನಿಯೇರಬೇಕು ;
 
ಜಾತಿ – ಕುಲ – ಮತ – ಧರ್ಮ ಪಾಶಗಳ ಕಡಿದೊಗೆದು ಎದೆಹಿಗ್ಗಿ ಹಾಡಬೇಕು;
ಯುಗಯುಗಗಳಾಚೆಯಲಿ ಲೋಕಲೋಕಾಂತದಲಿ ಆ ಹಾಡು ಗುಡುಗಬೇಕು.
 
ಉನ್ನತೋನ್ನತ ಘನ ಹಿಮಾದ್ರಿ ಶಿಖರವನೇರಿ ಹಾಡಲ್ಲಿ ಹಾಡಬೇಕು ;
ಹಾಡು ನುಡಿಗುಂಡುಗಳು ಹಾರಿ ದಶದಿಕ್ಕಿನಲ್ಲಿ ಭಯದ ಬೆನ್ನಟ್ಟಬೇಕು ;


You Might Like

Post a Comment

0 Comments