Recent Posts

ಹೇಮಂತ - ೦೯ ನೇ ತರಗತಿ ಸಿರಿ ಕನ್ನಡ ಪುಸ್ತಕದ ಪ್ರಶ್ನೋತ್ತರಗಳು

ಹೇಮಂತ

I. ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.

1. ಹೇಮಂತರಾಜನು ಇಳೆಗೆ ಬಂದಾಗ ಮರಗಳು ಹೇಗಿರುತ್ತವೆ?
ಹೇಮಂತರಾಜನು ಇಳೆಗೆ ಬಂದಾಗ ಮರಗಳು ಹೂವಿಲ್ಲದೆ ಹಸುರಿಲ್ಲದೆ ಚಿಗುರೆಲೆಗಳಿಲ್ಲದೆ ಬೋಳಾಗಿರುತ್ತವೆ.

2. ಮಂಜು ಮುಸುಕನು ಹೊದ್ದು ಮಲಗಿರುವವರು ಯಾರು?
ಮಂಜು ಮುಸುಕನು ಹೊದ್ದು ಹೊಲಗದ್ದೆಗಳು ಮಲಗಿವೆ.

3. ಕಾನನದ ಹಕ್ಕಿ ಏನು ಮಾಡುತ್ತಿದೆ?
ಕಾನನದ ಹಕ್ಕಿ ಕಣ್ಣೀರನ್ನು ಸುರಿಸುತ್ತಿದೆ.

4. ಎತ್ತಲೂ ಕಾಣುತ್ತಿರುವ ದೃಶ್ಯ ಯಾವುದು?
ಬಿಳಿಯ ಮಂಜು, ಹಿಮದ ಗಾಳಿ, ನಡುಗುತ್ತಿರುವ ನೀರಸ ಲೋಕ, ಬರಡಾಗಿರುವ ಬನ, ಜಡವಾಗಿರುವ ಜನ ಎತ್ತಲೂ (ಎಲ್ಲಿ ನೋಡಿದರೂ) ಕಾಣುತ್ತಿದ್ದಾರೆ.

5. ಹೇಮಂತ ಋತುವಿನಲ್ಲಿ ತುಂಗೆಯ ತೊರೆ ಹೇಗೆ ಹರಿಯುತ್ತಿದೆ?
ಮೆಲ್ಲ ಮೆಲ್ಲನೆ ಸರಿಯುತ್ತಾ ಮುಖದ ಪರದೆಯನ್ನು ಎಳೆದುಕೊಂಡು ವೈ ನೆನೆದು ನಡುಗುತ್ತ ಹೇಮಂತ ಋತುವಿನಲ್ಲಿ ತುಂಗೆಯ ತೊರೆಯ ಹರಿಯುತ್ತಿದೆ.

6. ಯಾವುದಕ್ಕೆ ತಲೆಬಾಗಬೇಕೆಂದು ಕವಿ ಹೇಳುತ್ತಾರೆ?
ಹೇಮಂತನ ಕಠಿಣ ಶಾಸನಕ್ಕೆ ( ಕಾಯ್ದೆಗೆ ) ಎಲ್ಲರೂ ತಲೆಬಾಗಬೇಕು ಎಂದು ಕವಿ ಹೇಳುತ್ತಾರೆ.

7. ಜೀವಗಳ ಧರ್ಮ ಯಾವುದು?
ಒಂದೊಂದು ಋತುವಿನಲ್ಲಿ ಒಂದೊಂದು ರೀತಿಯಲ್ಲಿ ಸಂಸ್ಕಾರವನ್ನು ಪಡೆಯುವುದೇ ಜೀವಗಳ ಧರ್ಮವಾಗಿದೆ.

II. ಕೊಟ್ಟಿರುವ ಪ್ರಶ್ನೆಗಳಿಗೆ ಮೂರು ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ.

1.ಹೇಮಂತನು ಬಂದಿಳಿದಾಗ ಲೋಕದ ಪರಿಸ್ಥಿತಿ ಹೇಗಿತ್ತು?
ಹೇಮಂತನು ಬಂದಿಳಿದಾಗ ಗಿಡಗಳಲ್ಲಿ ಹೂವಿಲ್ಲ, ಹಸಿರಿಲ್ಲ, ಚಿಗುರೆಲೆಗಳಿಲ್ಲ. ಪ್ರಕೃತಿಯಲ್ಲಿ ದುಂಬಿಗಳ ದನಿ ಇಲ್ಲ. ಹಕ್ಕಿಗಳ ಹಾಡಿಲ್ಲ. ಹೂವಿನ ಪರಿಮಳ ತರುವ ಗಾಳಿ ಇಲ್ಲ.

2. ಹೊಲಗದ್ದೆಗಳು ಮತ್ತು ನದಿಗಳ ಮೇಲೆ ಹೇಮಂತನ ಪ್ರಭಾವ ಏನು?
ಹೊಲಗದ್ದೆಗಳು ಮಂಜಿನ ಮುಸುಕನ್ನು ಹೊದ್ದು ಮಲಗಿವೆ. ನದಿಯು ಮೆಲ್ಲಮೆಲ್ಲನೆ ಸರಿಯುತ್ತಾ ಮುಖದ ಪರದೆಯನ್ನು ಎಳೆದುಕೊಂಡು ಮೈ ನೆನೆದು ನಡಗುತ್ತಾ ಹರಿಯುತ್ತಿದೆ. ಇದು ಹೊಲಗದ್ದೆಗಳ ಮೇಲೆ ಮತ್ತು ನದಿಗಳ ಮೇಲೆ ಹೇಮಂತನ ಪ್ರಭಾವ.

3. ಹೇಮಂತ ಋತುವಿನಲ್ಲಿ ಮರಗಳ ಸ್ಥಿತಿ ಹೇಗಿರುತ್ತದೆ?
ಹೇಮಂತ ಋತುವಿನಲ್ಲಿ ಮರಗಳ ಎಲೆಗಳು ಹಣ್ಣಾಗಿ ಉದುರುತ್ತವೆ. ಮರ ಬೋಳಾಗುತ್ತದೆ. ಮರಗಳಲ್ಲಿ ಹೂವಿಲ್ಲ ಚಿಗುರೆಲೆಗಳಿಲ್ಲ ಹಸಿರು ಇಲ್ಲ. ಮರಗಳ ಸ್ಥಿತಿ ನೋಡಿ ಕಾನನದ ಹಕ್ಕಿ ಕೂಡ ಕಣ್ಣೀರು ಸುರಿಸುತ್ತಿದೆ ಎಂದು ಕವಿ ಮರಗಳ ಸ್ಥಿತಿಯನ್ನು ವರ್ಣಿಸಿದ್ದಾರೆ.

4. ಹೇಮಂತನ ಕಠಿಣ ಶಾಸನವನ್ನು ಹೇಗೆ ಸ್ವೀಕರಿಸಬೇಕು?
ಮನುಷ್ಯನ ಬದುಕು ಸದಾ ಸಂಭ್ರಮದ ವಸಂತ ಋತುವೇ ಆಗಿರುವುದಿಲ್ಲ. ಕೆಲವೊಮ್ಮೆ ಬಾಳಿನಲ್ಲಿ ಕಷ್ಟ ನಷ್ಟಗಳು ಬರುತ್ತವೆ. ಆದ್ದರಿಂದ ವಿಧಿಯನ್ನು ಹಳಿಯಬಾರದು. ಹೇಮಂತನ ಕಠಿಣ ಶಾಸನವನ್ನು ನೈಸರ್ಗಿಕ, ನಿಸರ್ಗದ ನಿಯಮ ಎಂದು ಸ್ವೀಕರಿಸಬೇಕು. ಹೊಸ ಕಾಲಕ್ಕೆ ಮಾನವ ಕಾಯಬೇಕು.


You Might Like

Post a Comment

0 Comments