Recent Posts

ನನ್ನಾಸೆ - ೦೯ ನೇ ತರಗತಿ ಸಿರಿ ಕನ್ನಡ ಪುಸ್ತಕದ ಪ್ರಶ್ನೋತ್ತರಗಳು

ನನ್ನಾಸೆ

ಅ] ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರ ಬರೆಯಿರಿ.  

1. ಅಜ್ಞಾನ ತೊಲಗಿಸಲು ಕವಯಿತ್ರಿ ಏನಾಗ ಬಯಸಿದ್ದಾರೆ?
ಉತ್ತರ: ಅಜ್ಞಾನ  ತೊಲಗಿಸಲು  ಕವಯಿತ್ರಿ  ವಾಗ್ದೇವಿಯ  ಕೈಯಲ್ಲಿಯ  ಗ್ರಂಥವಾಗ ಬಯಸಿದ್ದಾರೆ.  

2. ಸದಾ ಚಿಮ್ಮುವ ಚಿಲುಮೆಯಾಗಬೇಕು, ಏಕೆ?
ಉತ್ತರ: ದಾಹಗೊಂಡವರ  ತನುವ  ತಣಿಸುವಂತಾಗಲು  ಸದಾ  ಚಿಮ್ಮುವ ಚಿಲುಮೆಯಾಗಬೇಕು ಎಂದಿದ್ದಾರೆ.  

3. ನನ್ನಾಸೆ ಕವನದಲ್ಲಿ ಕವಯಿತ್ರಿಯವರ ಆಸೆಗಳೇನು?  
ಉತ್ತರ: ನನ್ನಾಸೆ ಕವನದಲ್ಲಿ ಕವಯಿತ್ರಿಯವರು ತಾವು ಬೆಸಕು ನೀಡುವ ಬತ್ತಿಯಾಗಬೇಕು. ಮರವಾಗಿ ಪುಣ್ಯವಂತರಿಗೆ ನೆರಳಾಗಬೇಕು, ದಾಹಗೊಂಡವರ ತನುವ ತಣಿಸುವಂತಾಗಲು ಸದಾ  ಚಿಮ್ಮುವ  ಚಿಲುಮೆಯಾಗಬೇಕು.  ಅಮ್ಮನ  ಕಂಠದ  ಜೋಗುಳವಾಗಬೇಕು. ಮಾನವನ  ಅಜ್ಞಾನತೆ  ತೊಲಗಿಸಲು  ವಾಗ್ದೇವಿಯ  ಕೈಯಲ್ಲಿಯ  ಗ್ರಂಥವಾಗಿ ಧನ್ಯವಾಗಬೇಕು.  ಮುಸ್ಸಂಜೆ  ಹೊಸ್ತಿಲಲ್ಲಿ  ದಿಕ್ಕಿಲ್ಲದೆ  ನರಳಾಡುವ  ದೀನರ  ಊರುಗೋಲು ನಾನಾಗಬೇಕು. ಎಂದು ಆಶಿಸಿದ್ದಾರೆ.
 
You Might Like

Post a Comment

0 Comments