Recent Posts

ಸವಿಚೈತ್ರ  - ೧೦ ನೇ ತರಗತಿ ತಿಳಿ ಕನ್ನಡ ಪುಸ್ತಕದ ಪ್ರಶ್ನೋತ್ತರಗಳು

                      
                                                             ಸವಿಚೈತ್ರ                        
                                                                                                    -ಬಸವರಾಜ ಸಾದರ

ಕವಿ/ಲೇಖಕರ ಪರಿಚಯ
?ಬಸವರಾಜ ಸಾದರ ಅವರು 1955 ರಲ್ಲಿ ಧಾರವಾಡ ಜಿಲ್ಲೆಯ ಕುಂದಗೋಳದಲ್ಲಿ ಜನಿಸಿದರು.
?  ಇವರು  ಸಿಸಿ  ಫಸರ  ಸುತ್ತು,  ತಪ್ದಂಡ,  ಹೊಸ  ಆಲೋಚನೆ  ಮತ್ತು  ಮೃದುವಾಗಿ  ಮುಟ್ಟು  ಮುಂತಾದ  ಕೃತಿಗಳನ್ನು ಬರೆದಿದ್ದಾರೆ.
?  ಶ್ರೀಯುತರಿಗೆ  ರಾಜ್ಯ  ಸಾಹಿತ್ಯ  ಅಕಾಡೆಮಿ,  ಜಯತೀರ್ಥ  ರಾಜ  ಪುರೋಹಿತ  ಸ್ಮಾರಕ  ಬಹುಮಾನ,  ಅ.ಭಾ  ಆಕಾಶವಾಣಿ ಸ್ಫಧರ್ೆ ಬಹುಮಾನ ಮುಂತಾದ ಪ್ರಶಸ್ತಿಗಳು ಲಭಿಸಿವೆ.
?  ಇವರ ಸಿಸಿಫಸರ ಸುತ್ತು ಕವನ ಸಂಕಲನದಿಂದ ಪ್ರಸ್ತುತವನ್ನು  ಪದ್ಯವನ್ನು ಆಯ್ದುಕೊಳ್ಳಲಾಗಿದೆ.                                                                                          
 
                                                               ಅಭ್ಯಾಸ
   ಪದಗಳ ಅರ್ಥ                                      
ಆದಿ - ಮೊದಲು                                     
 ಕಲರವ - ಮೋಹಕ ಧ್ವನಿ
ಕೊರಡು  -ಒಣ ಮರದ ತುಂಡು.                         
 ಕೊನರು  -ಚಿಗುರು
ಖಗ  -(ಖಆಕಾಶ, ಗಗಮಿಸುವುದು) ಹಕ್ಕಿ                  
 ಚಿಗಿತ - ಚಿಗುರಿದ
ಚೈತನ್ಯ  -ಚಟುವಟಿಕೆ                                 
  ತಾರಕ - ಎತ್ತರದ ಸ್ವರ (ಪಾರು ಮಾಡುವವನು)
ದಗದ  ಕೆಲಸ                                      
 ನೆಲದವ್ವ - (ನೆಲದ ಅವ್ವ) ಭೂಮಿತಾಯಿ ಮತ್ತು  ಮಾದಕತೆ                                     
ಮುಕ್ತ - ಬಿಡುಗಡೆ ಹೊಂದಿದ ಮುಗುಳು  ಮೊಗ್ಗು      ವಧು  ಮದುಮಗಳು ವಾಲಗ  
ಓಲಗ; ವಾದ್ಯ   

2. ಪ್ರಶ್ನೆಗಳು :
ಅ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.  


1. ನೆಲದಮ್ಮ ನವವಧುವಿನಂತೆ ಸಿಂಗಾರಗೊಳ್ಳುವುದು ಯಾವಾಗ?
ಸುಗ್ಗಿ ಬಂದಾಗ ನೆಲದಮ್ಮ ನವವಧುವಿನಂತೆ ಸಿಂಗಾರಗೊಳ್ಳುತ್ತಾಳೆ.

2. ಯುಗಾದಿಯ ಸಂದರ್ಭದಲ್ಲಿ ನೆಲದಮ್ಮ ಹೇಗೆ ಸಿಂಗಾರಗೊಳ್ಳುತ್ತಾಳೆ?
ಯುಗಾದಿಯ ಸಂದರ್ಭದಲ್ಲಿ ನೆಲದಮ್ಮ ನವವಧುವಿನಂತೆ ಸಿಂಗಾರಗೊಳ್ಳುತ್ತಾಳೆ.

3. ಚೈತ್ರದಲ್ಲಿ ಯಾವುದರ ವಾಲಗ ನಡೆದಿರುತ್ತದೆ?

ನೆಲಮುಗಿಲುಗಳ (ಪ್ರಾಣಿ ಪಕ್ಷಿಗಳ) ವಾಲಗ ನಡೆದಿರುತ್ತದೆ.

4.ಚೈತ್ರವು ಮಾಡುವ ಕೆಲಸವೇನು?
ಚೈತ್ರ ಮಾಸದಲ್ಲಿ ಫಲಪುಷ್ಪಗಳು ಸಮೃದ್ಧವಾಗಿ ಜಗದಲ್ಲಿ ಹೊಸ ಕಳೆ ತುಂಬುತ್ತದೆ.

 5. ಯುಗಾದಿಯಲ್ಲಿ ಯಾವ ತಿನಿಸನ್ನು ಹಂಚುವ ಸಂಪ್ರದಾಯವಿದೆ?

ಯುಗಾದಿಯಲ್ಲಿ ಬೇವು ಬೆಲ್ಲ ಹಂಚುವ ಸಂಪ್ರದಾಯವಿದೆ.

6. ಋತುಗಳ ರಾಜ ಯಾವುದು?
ಋತುಗಳ ರಾಜ ವಸಂತ ಋತು.

7. ಬರಡು ಜೀವಕೆ ಹೊಸ ಚೈತನ್ಯ ಸಿಗುವುದು ಯಾವಾಗ?

ಕೊರಡ ಕೊನರಿಸಿ ತುದಿಗೆ ಮುಗುಳು ನಗೆ  ಮುತ್ತಿಟ್ಟಾಗ ಬರಡು ಜೀವಕೆ ಹೊಸ ಚೈತನ್ಯ ಸಿಗುವುದು.  

ಆ) ಈ ಪ್ರಶ್ನೆಗಳಿಗೆ ಮೂರು ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ

1. ಯುಗದ ಆದಿ ತಂದ ಸಂಭ್ರಮವೇನು?

ಯುಗದ  ಆದಿ  ಎಂದರೆ  ನೂತನ  ವರ್ಷದ  ಆರಂಭವನ್ನು  ಸೂಚಿಸುವ  ಯುಗಾದಿ  ಹಬ್ಬವು  ಒಂದು  ಸುಖದ  ಸಗ್ಗಿಯನ್ನು  ತಂದಿದೆ. ಇದರಿಂದಾಗಿ  ಜಗತ್ತೆಲ್ಲಾ  ಹೊಸ  ಕಳೆಯಿಂದ  ಕಂಗೊಳಿಸಿದೆ.  ಇಡೀ  ಪ್ರಕೃತಿ  ಹಸಿರಿನಿಂದ  ಕೂಡಿದ್ದು  ಹೊಸ  ಚೈತನ್ಯವನ್ನು  ಹೊಂದಿದೆ. ಭೂಮಿತಾಯಿ ನವವಧುವಿನಂತೆ ಶೃಂಗಾರಗೊಂಡಂತೆ ಕಾಣುತ್ತಿದ್ದಾಳೆ.   

2 . ಚೈತ್ರದಲ್ಲಿ ಹಕ್ಕಿಗಳು ಕಲರವ ಹೇಗಿರುತ್ತದೆಂದು ಕವಿ ವರ್ಣಿಸಿದ್ದಾರೆ?

ಪ್ರಕೃತಿಯಲ್ಲಿ ಎಲ್ಲೆಲ್ಲೂ ಹೊಸತನ ತುಂಬಿದ್ದು ಬರಡು ಜೀವಕ್ಕೆ ಹೊಸ ಚೈತನ್ಯ ಬಂದಿದೆ. ವೃಕ್ಷರಾಜನ ಸೌಂದರ್ಯ ಸಂತೋಷವನ್ನು ಕಂಡ  ಹಕ್ಕಿಗಳೂ  ಮುಗಿಲು  ಮುಟ್ಟುವಂತೆ  ಪಂಚಮ  ಸ್ವರದಲ್ಲಿ  ಮಧುರವಾಗಿ  ಹಾಡುತ್ತದೆ.  ಆಕಾಶವು  ಪ್ರತಿಧ್ವನಿಸುವಂತೆ  ಕಾಣುತ್ತದೆ. ಇದನ್ನು ಕಂಡ ಇತರ ಹಕ್ಕಿಗಳು ಚಿಲಿಪಿಲಿಗುಟ್ಟುತ್ತಾ ಶಬ್ದ ಮಾಡುತ್ತವೆ.

3. ಚೈತ್ರದಲ್ಲಿ ಪ್ರಾಣಿ ಪಕ್ಷಿಗಳ ಚಟುವಟಿಕೆಗಳು ಕವಿಗೆ ಹೇಗೆ ಗೋಚರಿಸಿದವು?
ಚೈತ್ರ  ಮಾಸದ  ಆಗಮನದಿಂದ  ಪ್ರಾಣಿಪಕ್ಷಿಗಳಿಗೆ  ಸಂತೋಷವಾಗಿ  ಹೊಸ  ಚೈತನ್ಯವುಂಟಾಗುತ್ತದೆ.  ಹಕ್ಕಿಗಳ  ಚಿಲಿಪಿಲಿ  ಶಬ್ಧದೊಂದಿಗೆ ಕೋಗಿಲೆಯು  ಇಂಪಾಗಿ  ಮಧುರ  ಕಂಠದಿಂದ  ಹಾಡುತ್ತದೆ.  ಇದರಿಂದ  ಹಕ್ಕಿಗಳ  ಚಿಲಿಪಿಲಿ  ಕಂಠಕ್ಕೆ  ಮತ್ತೇರಿದಂತಾಗುತ್ತದೆ.  ಪ್ರಾಣಿ ಪಕ್ಷಿಗಳು ಮೈಕೊಡವಿ ಎದ್ದು ಹೊಸ ಚೈತನ್ಯದಿಂದ ತಮ್ಮ ಕಾರ್ಯಗಳಿಗೆ ಸಂತಸದಿಂದ ಹಾರಿ ಹೋಗುತ್ತವೆ.

4. ಚೈತ್ರದಲ್ಲಿ ನೆಲ ಮುಗಿಲು ವಾಲಗ ನಡೆದಂತೆ ಭಾಸವಾಗುತ್ತದೆ ಏಕೆ?

ಚೈತ್ರ  ಮಾಸದಲ್ಲಿ  ಇಡೀ  ಪ್ರಕೃತಿ  ಹೊಸ  ಚೈತನ್ಯದಿಂದ  ಕಂಗೊಳಿಸುತ್ತಿರುತ್ತದೆ.  ಪ್ರಾಣಿ  ಪಕ್ಷಿಗಳಲ್ಲಿ  ಹೊಸ  ಉತ್ಸಾಹ  ಕಂಡುಬರುತ್ತದೆ. ಜಗದ  ಖಗ,  ಪಕ್ಷಿ,  ಪ್ರಾಣಿಗಳು  ಮೈ  ಕೊಡವಿ  ಎದ್ದು  ಹೊಸ  ಕೆಲಸಕ್ಕೆ  ಲಗುಬಗೆಯಿಂದ  ಎಂದರೆ  ಉತ್ಸಾಹದಿಂದ  ಹೊಸ  ಕೆಲಸಕ್ಕೆ ಹೊರಟಿರುವಂತೆ  ಕಾಣುತ್ತದೆ.  ಗಿಡ  ಮರಗಳು  ಚಿಗುರಿ  ಹೊಸ  ಜೀವೋಲ್ಲಾಸ  ತುಂಬಿ  ನೆಲಮುಗಿಲ  ವಾಲಗವೇ  ನಡೆಯುತ್ತಿರುವಂತೆ ಕಾಣುತ್ತದೆ.  

ಇ) ಈ ಕೆಳಗಿನ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿಉತ್ತರಿಸಿರಿ

1. ಚೈತ್ರದಲ್ಲಾಗುವ ಪ್ರಕೃತಿಯ ಬದಲಾವಣೆಗಳಾವುವು?

ಚೈತ್ರವೆಂದರೆ ವಸಂತ, ವಸಂತ ಕಾಲದಲ್ಲಿ ಫಲಪುಷ್ಪ ಸಮೃದ್ಧವಾಗಿರುತ್ತವೆ. ಪ್ರಕೃತಿ ಹಸಿರಿನಿಂದ ಕಂಗೊಳಿಸುತ್ತಿರುತ್ತದೆ. ಜಗವೆಲ್ಲಾ ಹೊಸ ಕಳೆಯಿಂದ ತುಂಬಿರುತ್ತದೆ. ಹಸಿರಿನಿಂದ ನೆಲದಮ್ಮ ನವ ವಧುವಿನಂತೆ ಕಂಗೊಳಿಸುತ್ತಾಳೆ. ಮರಗಿಡಗಳೆಲ್ಲ ಚಿಗುರು ಮುಳುಗು ನಗೆ ಬೀರಿ ಬರಡು ಜೀವಕೆ ಹೊಸ ಚೈತನ್ಯ ನೀಡುತ್ತದೆ. ಕೋಗಿಲೆಯ ಕಂಠ ತಾರಕಕ್ಕೇರಿ ಚಿಲಿಪಿಲಿಯ ಕಲರವ ಮತ್ತೇರುತ್ತದೆ. ವರ್ಷದ ಜಡತ್ವ ಎಂಬ ಕೊಳೆಯನ್ನು ತಿಕ್ಕಿ-ತಿಕ್ಕಿ ಮೈ ತೊಳೆದಂತೆ ಒಂದೆಡೆ ಕಾಣುತ್ತಿದ್ದರೆ, ಮತ್ತೊಂದಡೆ ಎಲ್ಲರ ಮುಖದಲ್ಲೂ ನಗುವು ಹೊರಹೊಮ್ಮುತ್ತದೆ. ಚೈತ್ರದ ಸೊಬಗನ್ನು ಯುಗಾದಿಯ ಹೊಸ ವರುಷದ ಹೊಸ ದಿನದೊಂದಿಗೆ ಹರ್ಷದಿಂದ ಆಚರಿಸುತ್ತೇವೆ.

2. ಕವಿ ಯುಗದ ಆದಿಯನ್ನು ಸವಿಚೈತ್ರ ಎಂದು ಏಕೆ ಬಣ್ಣಿಸಿದ್ದಾರೆ?

ಚೈತ್ರವೆಂದರೆ ವಸಂತ. ಋತುವಿನ ಕಾಲ, ಈ ಋತುವಿನಲ್ಲಿ ಯುಗಾದಿ ಹಬ್ಬವು ಬರುತ್ತದೆ. ಅಂದರೆ ಹೊಸ ವರುಷದ ಪ್ರಾರಂಭದ ಕಾಲ, ವಸಂತನೆಂದರೆ ಋತುಗಳ ರಾಜ. ಈ ಋತುವಿನಲ್ಲಿ ಮರಗಿಡಗಳೆಲ್ಲಾ ಚಿಗಿತು, ಫಲಪುಷ್ಪಗಳಿಂದ ಸಮೃದ್ಧವಾಗಿರುವುದು. ಚೈತ್ರ ಮಾಸದಲ್ಲಿ ಬಗೆ ಬಗೆಯ ಬಣ್ಣಗಳ ಹೂಗಳು ಅರಳುತ್ತವೆ. ಎಲ್ಲಾ ಕಡೆ ಹೊಸಕಳೆಯಿಂದ ಬರೆದ ಚಿತ್ರದ ಹಾಗೆ ಈ ಭೂಮಿ ತಾಯಿಯು ನವವಧುವಿನಂತೆ ಕಂಗೊಳಿಸುತ್ತಾಳೆ. ಚೈತ್ರಮಾಸ ಎಂದರೆ ಕವಿಗಳ ಮೆಚ್ಚಿನ ಕಾಲವೂ ಹೌದು. ಚೈತ್ರದ ಸೊಬಗನ್ನು ಬಣ್ಣಿಸದ ಕವಿಯೇ ಇಲ್ಲ. ಹೀಗೆ ಚೈತ್ರವೇ ಯುಗದ ಆದಿಯ ಕಾಲ ಎಂಬುದನ್ನು ವಣರ್ಿಸಿದ್ದಾರೆ. ಸ್ವರ್ಗದ ಸಂತೋಷವನ್ನು ಸುಗ್ಗಿಯನ್ನು ಈ ಕಾಲವು ತರುತ್ತದೆ ಎಂದು ಹೇಳಿದ್ದಾರೆ.  

ಈ) ಸಂದರ್ಭದೊಡನೆ ವಿವರಿಸಿ
 
1. ನೆಲದಮ್ಮ ನವವಧವೆ ಆದಳಿಂತು!
ಈ  ವಾಕ್ಯವನ್ನು  ಬಸವರಾಜ  ಸಾದರ  ಅವರು  ಬರೆದಿರುವ  ಸಿನಿಫಸರಸುತ್ತು  ಕವನ  ಸಂಕಲನದಿಂದ  ಆಯ್ದ  ಸವಿಚೈತ್ರ  ಪದ್ಯದಿಂದ ಆರಿಕೊಳ್ಳಲಾಗಿದೆ. ಈ ವಾಕ್ಯವನ್ನು ಕವಿ ಚೈತ್ರ ಮಾಸದಲ್ಲಿ ಆಗುವ ಬದಲಾವಣೆಯನ್ನು ಕುರಿತು ಹೇಳಿದ್ದಾರೆ. ಯುಗಾದಿ ಆದಿಯ ಸೊಗಸು ಸುಗ್ಗಿಯನ್ನು ತಂದಿತು.  ಜಗಕ್ಕೆಲ್ಲ  ಹೊಸ  ಕಳೆಯು  ತುಂಬಿ  ಬಗೆಬಗೆಯ  ಬಣ್ಣಗಳ  ಬರೆದ  ಚೈತ್ರದ  ಹಾಗೆ  ನೆಲದಮ್ಮ  ನವವಧುವೆ  ಆದಳು  ಎಂದು ಚೈತ್ರಮಾಸದ ಸೌಂದರ್ಯವನ್ನು ವಣರ್ಿಸಿದ್ದಾರೆ.

2. ನೆಲಮುಗಿಲು ವಾಲಗವೆ ನಡೆದಂತಿದೆ.

ಈ  ವಾಕ್ಯವನ್ನು  ಬಸವರಾಜ  ಸಾದರ  ಅವರು  ಬರೆದಿರುವ  ಸಿನಿಫಸರಸುತ್ತು  ಕವನ  ಸಂಕಲನದಿಂದ  ಆಯ್ದ  ಸವಿಚೈತ್ರ  ಪದ್ಯದಿಂದ ಆರಿಕೊಳ್ಳಲಾಗಿದೆ.
ಈ  ಮಾತನ್ನು  ಕವಿ  ಹೇಳಿದ್ದಾರೆ.  ಚೈತ್ರವೆಂದರೆ  ವಸಂತಋತು,  ವಸಂತವೆಂದರೆ  ಋತುಗಳ  ರಾಜ.  ಈ  ಕಾಲದಲ್ಲಿ  ಗಿಡಮರಗಳು ಚಿಗುರುತ್ತವೆ.  ಎಲ್ಲೆಡೆ  ಪ್ರಕೃತಿಯಲ್ಲಿ  ಹೊಸತನ  ಕಾಣುತ್ತದೆ.  ಜಗದ  ಎಲ್ಲಾ  ಪ್ರಾಣಿ  ಪಕ್ಷಿಗಳು  ಕೆಲಸಕ್ಕೆ  ಹೋಗುತ್ತವೆ.  ಜೀವನದಲ್ಲಿ ಉಲ್ಲಾಸ ಮೂಡಿ ನೆಲಮುಗಿಲು ಓಲಗ ಊದಿದಂತೆ ಕಾಣುತ್ತದೆ ಎಂದು ಕವಿ ಹೇಳಿದ್ದಾರೆ.

3. ಎಲ್ಲರೆದೆಗಳ ತುಂಬ ಸವಿಚೈತ್ರವು.
ಈ  ವಾಕ್ಯವನ್ನು  ಬಸವರಾಜ  ಸಾದರ  ಅವರು  ಬರೆದಿರುವ  ಸಿನಿಫಸರಸುತ್ತು  ಕವನ  ಸಂಕಲನದಿಂದ  ಆಯ್ದ  ಸವಿಚೈತ್ರ  ಪದ್ಯದಿಂದ  ಆರಿಕೊಳ್ಳಲಾಗಿದೆ. ಯುಗಾದಿಯ  ಹೊಸ  ವರುಷದ  ಬಗ್ಗೆ  ವಿವರಿಸುವ  ಸಂದರ್ಭದಲ್ಲಿ  ಹೇಳಿದ್ದಾರೆ.  ಹಿಂದಿನ  ಕಹಿ  ನೆನಪುಗಳನ್ನೆಲ್ಲಾ  ತಿಕ್ಕಿ  ಕೊಳೆ ತೆಗೆದಂತೆ  ಅವೆಲ್ಲವನ್ನು  ಮರೆತು  ಬೆಲ್ಲದ  ಸವಿಯ  ಸಿಹಿಯನ್ನು  ಸವಿದಂತೆ  ಚೈತ್ರ  ಮಾಸವು  ಎಲ್ಲರ  ಮನಸ್ಸಿನಲ್ಲಿಯೂ  ಸಿಹಿ ಭಾವನೆಗಳನ್ನು  ಸವಿಯುವಂತೆ ಚೈತ್ರವು ಎಲ್ಲರಿಗೂ ಸವಿಚೈತ್ರವಾಗಿ ಮೂಡಿದೆಯೆಂದು ಹೇಳಿದ್ದಾರೆ.  


 
You Might Like

Post a Comment

0 Comments