Recent Posts

ಗುರಿ - ೧೦ ನೇ ತರಗತಿ ತಿಳಿ ಕನ್ನಡ ಪುಸ್ತಕದ ಪಶ್ನೋತ್ತರಗಳು

                     
                                                                     ಗುರಿ                      
                                                                                                 -ಎಂ.ಗೋಪಾಲಕೃಷ್ಣ ಅಡಿಗ
  ಕವಿ/ಲೇಖಕರ ಪರಿಚಯ
?  ಗೋಪಾಲಕೃಷ್ಣ ಅಡಿಗ ಅವರು 1918 ರಲ್ಲಿ ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಮೊಗೇರಿ ಎಂಬಲ್ಲಿ ಜನಿಸಿದರು.
?  ಇವರು ಭಾವತರಂಗ, ಭೂಮಿಗೀತಾ, ಆಕಾಶದೀಪ ಮುಂತಾದ ಕೃತಿಗಳನ್ನು ಬರೆದಿದ್ದಾರೆ.
?  ಇವರಿಗೆ ರಾಜ್ಯೋತ್ಸವ ಪ್ರಶಸ್ತಿ, ಪಂಪ ಪ್ರಶಸ್ತಿ, ಕೇಂದ್ರ ಹಾಗೂ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ದೊರಕಿವೆ.
?  ಪ್ರಸ್ತುತ ಕವನವನ್ನು ಅವರ ಸಮಗ್ರ ಕಾವ್ಯ ದಿಂದ ಆರಿಸಲಾಗಿದೆ.                                                    

                                                 ಅಭ್ಯಾಸ
1.ಪದಗಳ ಅರ್ಥ :  

ಅಂಬುಜ - ತಾವರೆ                              
  (ಅಂಬು - ನೀರು, ಜ - ಜನಿಸಿದ್ದು).                      
ಅಳಿಯಾಸೆ - ಕೀಳಾಸೆ; ಈಡೇರದ ಆಸೆ                   
ಆಳ್ವೆಸ - ಆಳಿನ ಕೆಲಸ (ಆಳ್+ಬೆಸ=ಆಳ್ವೆಸ. ಆದೇಶಸಂಧಿ)                      
ಬೆಸನ (ದ್ಭ) - ವ್ಯಸನ (ತ್ಸ); ಕೆಲಸ.                      
ಒಳ್ದಾರಿ - ಒಳ್ಳೆಯ ದಾರಿ   
ಗೈಮೆ - ದುಡಿಮೆ                              
 ತಿರೆ (ದ್ಭ) - ಭೂಮಿ; ಸ್ಥಿರಾ (ತ್ಸ).                                       
ನನೆ ಕೊನೆ - ಅರಳಲಿರುವ ಮೊಗ್ಗು.                
ಪೆರತು - ಬೇರೆ        
ಬಸ (ದ್ಭ) - ವಶ (ತ್ಸ)
ಬಾಂದಳ - ಆಕಾಶ                              
ಮಸಗು - ವಿಜೃಂಭಿಸು
ಮಿಸುಪ - ಹೊಳೆಯುವ                        
 ಲಾಂಛನ - ಗುರುತು; ಚಿಹ್ನೆ
ಸುರಪುರ - ದೇವಲೋಕ                        
  ಹೊನಲು - ಪ್ರವಾಹ; ಹರಿವ ಹೊಳೆ.

2. ಪ್ರಶ್ನೆಗಳು :
ಅ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.  

1.ಮನಸ್ಸು ಅಳಿಯಾಸೆಗಳ ಸುಳಿಗೆ ಸಿಲುಕುಬಾರದು ಏಕೆ?

ಮನುಷ್ಯನ ಮನಸ್ಸು  ಅಳಿಯಾಸೆಗಳ ಸುಳಿಗೆ ಸಿಲುಕಬಾರದು. ಏಕೆಂದರೆ, ಅಂತಹ ಸುಳಿಗೆ ಸಿಲುಕಿದರೆ ಮನುಷ್ಯನು ಜೀವನಪೂತರ್ಿ ಆಶ್ರಯವಿರದೇ ತೊಳಲುತ್ತಾನೆ.   

2. ನಮ್ಮ ದುಡಿಮೆಯ ಹೂವು ಫಲಿಸುವುದು ಯಾವಾಗ?
ನಾವು ಒಂದೇ ಹೆಗ್ಗುರಿಯನ್ನು ಇಟ್ಟುಕೊಂಡು ದುಡಿದಾಗ ನಮ್ಮ ದುಡಿಮೆಯ ಹೂವು ಫಲಿಸುತ್ತದೆ.

3. ಅಡಿಗರ ಪ್ರಕಾರ ಪೌರುಷದ ಬಾಳ್ವೆ ಯಾವುದು?
ಹಿಡಿದ ಒಂದು ಒಳ್ಳೆಯ ದಾರಿಯಲ್ಲಿ ಕೊನೆಯವರಿಗೂ ಹೊನಲೊಳಗೆ ಬಾಳ್ವೆಯನ್ನು ಮಾಡಬೇಕು.

4. ಅಡಿಗರು ಹಗಲಿರುಳು ಯಾವುದಕ್ಕೆ ಹೋರಾಡಬೇಕೆಂದು ಹೇಳುತ್ತಾರೆ?
ಅಡಿಗರು ಒಂದೇ ಹೆಗ್ಗುರಿಗೆ ಹಗಲಿರುಳು ಹೋರಾಡಬೇಕೆಂದು ಹೇಳುತ್ತಾರೆ..

5. ಅಡಿಗರು ತಿಳಿಸುವಂತೆ ನರನಲ್ಲಿ ಯಾರ ರೂಪವನ್ನು ಕಾಣಬೇಕಾಗಿದೆ?
ನರನಲ್ಲಿ ನಾರಾಯಣನ ರೂಪವನ್ನು ಕಾಣಬೇಕಾಗಿದೆ.

6. ಅಡಿಗರಿಗೆ  ಕೇರಳ ಮತ್ತು  ಮಧ್ಯಪ್ರದೇಶ ರಾಜ್ಯಗಳು ಯಾವ ಪಶಸ್ತಿಯನ್ನು ನೀಡಿವೆ?
ಕೇರಳ ರಾಜ್ಯವು ಕುಮಾರನ್ ಆಶಾನ್ ಪ್ರಶಸ್ತಿ ಮತ್ತು ಮಧ್ಯಪ್ರದೇಶ ರಾಜ್ಯವು  ಕಬೀರ್ ಸಮ್ಮಾನ್ ಪ್ರಶಸ್ತಿಯನ್ನು ನೀಡಿವೆ.  

ಆ) ಈ ಪ್ರಶ್ನೆಗಳಿಗೆ ಮೂರು ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ
 
1) ನಮ್ಮ ಬದುಕು ಕೆಸರಿನ ಕಮಲದಂತಿರಬೇಕು ಏಕೆ ?
ಕಮಲವು ಮೇಲೆ ಬಾಂದಳವನ್ನು ನೋಡುತ್ತ, ಹೊಳೆಯುವ ಸೂರ್ಯನ ಕಿರಣಗಳ ಸಿರಿಗೆ ಮೆರೆದಾಡುತ್ತ ವಿಜೃಂಭಿಸುತ್ತದೆ. ಹಾಗೆಯೇ ಮಾನವ ತನ್ನ ಧ್ಯೇಯದ ಕಾರ್ಯಕ್ಕೆ ವಶವಾಗಬೇಕು. ಗುರಿಯನ್ನು ಮುಟ್ಟಿ ಮನುಜತೆಯ ಸಾರ್ಥಕತೆಯನ್ನು ಪಡೆಯಬೇಕು. ಆದ್ದರಿಂದ ನಮ್ಮ ಬದುಕು ಕೆಸರಿನ ಕಮಲದಂತಿರಬೇಕು.

2) ಅಡಿಗರು ಯಾವುದನ್ನು ಹೇಡಿತನ ಹಾಗೂ ಹೆಣ್ತನ ಎಂದು ಕರೆದಿದ್ದಾರೆ ?
ಕವಿ ಅಡಿಗರು ಗಾಳಿ ಬಂದೆಡೆ ತಿರುಗುವುದು ಹೇಡಿತನವೆನ್ನುತ್ತಾರೆ. ಅಂದರೆ ದೊರೆತ ಯಾವುದೋ ಕೆಲಸವನ್ನು ಮಾಡುತ್ತೇನೆ ಎನ್ನುವುದು ಹೇಡಿತನ. ಹಾಗೂ ದಾಳಿ ಬಂದೊಡನೆ ಶರಣಾಗುವುದು ಹೆಣ್ತನ ಎಂದು ಹೇಳಿದ್ದಾರೆ. ಅಂದರೆ ಯಾವುದೇ ವಿರೋಧ ಪರಿಸ್ಥಿತಿಯನ್ನು ಎದಿರಿಸಲು ಸಾಧ್ಯವಾಗದೇ ಸೋಲನ್ನು ಒಪ್ಪಿಕೊಳ್ಳುವುದು.

3) ಜೀವನದಲ್ಲಿ ಒಂದೇ ಹೆಗ್ಗುರಿ ಇರಬೇಕು ಏಕೆ ?
ಒಂದು ಬಾಣಕೆ ಒಂದೇ ಗುರಿಯಿರುತ್ತದೆ, ಒಂದು ದೇಹದೊಳಗೆ ಒಂದೇ ಆತ್ಮವಿರುತ್ತದೆ. ಒಂದು ಜೀವನಕ್ಕೆ ಹಲವು ಸಾಧ್ಯತೆಗಳು ಇರಲು ಸಾಧ್ಯವಿಲ್ಲ. ಆದ್ದರಿಂದ ಜೀವನದಲ್ಲಿ ಒಂದೇ ಹೆಗ್ಗುರಿ ಇರಬೇಕು. ಹಗಲಿರುಳು ಒಂದೇ ಹೆಗ್ಗುರಿಗೆ ಹೋರಾಡಬೇಕೆಂದು ಹೇಳಿದ್ದಾರೆ.

4) ಜೀವನದಲ್ಲಿ ಒಂದೇ ಗುರಿ ಇರಬೇಕು ಎಂಬುದಕ್ಕೆ ಅಡಿಗರು ನೀಡುವ ನಿದರ್ಶನಗಳಾವುವು ?
ಬದುಕಿಗೊಂದು ಗುರಿ ಇಲ್ಲದಿದ್ದರೆ ಎಲ್ಲಿಗೆ ಹೋಗಬೇಕೆಂದು ಗೊತ್ತಾಗದೆ, ಅಪಾರವಾದ ಕಡಲಲ್ಲಿ ಚುಕ್ಕಾಣಿಯಿಲ್ಲದ ನೌಕೆಯನ್ನು ನಡೆಸಿದಂತಾಗುತ್ತದೆ. ಒಂದು ಬಾಣಕ್ಕೆ ಒಂದೇ ಗುರಿ ಇರುತ್ತದೆಯೇ ಹೊರತು ಹಲವು ಗುರಿಗಳು ಇರುವುದಿಲ್ಲ. ಒಂದು ದೇಹದಲ್ಲಿ ಒಂದೇ ಆತ್ಮವಿರುತ್ತದೆಯೇ ಹೊರತು ಎರಡು ಆತ್ಮಗಳು ಇರುವುದಿಲ್ಲ. ಹಾಗೆಯೇ ಒಂದು ಜೀವನಕ್ಕೆ  ಒಂದೇ ಗುರಿ ಇರಲೇಬೇಕು.    

ಇ) ಈ ಕೆಳಗಿನ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿ.
 
1.ಗುರಿ ಪದ್ಯದ ಸಾರಾಂಶವನ್ನು ಬರೆಯಿರಿ.
 ಮಾನವರು  ಕೀಳು  ಆಸೆಗಳಲ್ಲಿ  ಮುಳುಗಬಾರದು.  ಮಾನವನಲ್ಲಿ  ದಿನನಿತ್ಯದ  ದುಡಿಮೆಯ  ಫಲವನ್ನು  ಪಡೆ ಮಾನವನ ಜೀವನವು ಹೂವಿನಂತೆ ಅರಳಬೇಕು. ಅವನಿಗೆ ಒಂದು ಗುರಿ ಇರಲೇಬೇಕು. ಗುರಿ ಇಲ್ಲದ ಬಾಳು ಎಲ್ಲಿಗೆ ಹೋಗಬೇಕೆಂಬ ನಿಶ್ಚಿತತೆ ಇಲ್ಲದ  ಅಪಾರವಾದ  ಕಡಲಲ್ಲಿ  ಚುಕ್ಕಾಣೆ  ಇಲ್ಲದ  ನೌಕೆಯನ್ನು  ನಡೆಸಿದಂತೆ.  ಕೆಸರೊಳಗಿದ್ದರು  ಕಮಲ  ಊದ್ರ್ವಮುಖವಾಗಿರುತ್ತದೆ. ಮೇಲೆ  ಬಾಂದಳವನ್ನು  ನೋಡುತ್ತಾ  ಹೊಳೆಯುವ  ಸೂರ್ಯನ  ಕಿರಣಗಳ  ಹಾಗೆಯೇ  ಮಾನವ  ತನ್ನ  ಕಾರ್ಯಕ್ಕೆ  ವಶವಾಗಬೇಕು. ಗುರಿಯನ್ನು  ಮುಟ್ಟಿ  ಮನುಜತೆಯನ್ನು  ಸಾರ್ಥಕತೆಯನ್ನು  ಪಡೆಯಬೇಕು.  ಗುರಿ  ಇಲ್ಲದ  ಜೀವನ  ಸಾರ್ಥಕವಾಗುವದಿಲ್ಲ.  ಗಾಳಿ ಬಂದರೆ  ತೂರಿಕೊಳ್ಳುವುದು  ಹೇಡಿತನ.  ಬಂದೊಡನೆ  ಶರಣಾಗುವದು  ಹೆಣ್ತನ.  ಇದರ  ಬದಲಾಗಿ  ಒಳ್ಳೆಯ  ದಾರಿಯಲ್ಲಿ ಕೊನೆಯವರೆಗೂ  ಪೌರುಷದ  ಹೊನಲೊಳಗೆ  ಬಾಳ್ವೆಯಿಂದ  ದುಡಿಯಬೇಕು.  ಒಂದು  ಬಾಣಕ್ಕೆ  ಒಂದೇ  ಗುರಿ  ಇರುತ್ತದೆ.  ಒಂದು ದೇಹದಲ್ಲಿ ಒಂದೇ ಆತ್ಮ ಇರುತ್ತದೆ. ಜೀವನಕ್ಕೆ ಹಲವು ಸಾಧ್ಯವು ಬೇಕಿಲ್ಲ. ಬದಲಾಗಿ ಒಂದೇ ಹೆಗ್ಗುರಿ ಇರಬೇಕು.

ಈ) ಸಂದರ್ಭದೊಡನೆ ವಿವರಿಸಿ
 
1. ದಾಳಿ ಬಂದೊಡನೆ ಶರಣೆಂಬ ಹೆಣ್ತನವು
ಈ  ವಾಕ್ಯವನ್ನು  ಎಂ.ಗೋಪಾಲಕೃಷ್ಣ  ಅಡಿಗರು  ಬರೆದಿರುವ  ಸಮಗ್ರ  ಕಾವ್ಯ  ಸಂಕಲನದಿಂದ  ಆಯ್ದ  ಗುರಿ  ಎಂಬ  ಪದ್ಯದಿಂದ ಆರಿಸಲಾಗಿದೆ. ಈ  ವಾಕ್ಯವನ್ನು  ಕವಿಯು  ಹೇಳಿದ್ದಾರೆ.  ಮನುಷ್ಯ  ಜೀವನದಲ್ಲಿ  ಒಂದೇ  ಗುರಿ  ಹೊಂದಿರಬೇಕು.  ಗಾಳಿ    ಬಂದ  ಕಡೆ  ತಿರುಗುವಂತ ಹೇಡಿತನವು  ಬೇಡವೆಂದು  ಹೇಳುವಾಗ  ಕವಿ  ಹೇಳುತ್ತಾರೆ.  ದಾಳಿ  ಬಂದೊಡನೆ  ಶರಣೆಂಬ  ಹೆಣ್ತನವು  ಬೇಡ  ಎಂದು  ತಿಳಿಸಿದ್ದಾರೆ. ಹೇಡಿತನವಿದ್ದರೆ. ಏನನ್ನು ಸಾಧಿಸಲು ಸಾಧ್ಯವಾಗುವುದಿಲ್ಲ ಎಂದು ಹೇಳುವಾಗ ಹೇಳಿದ್ದಾರೆ.

2. ಒಂದು ಜೀವನಕೇಕೆ ಹಲವು ಸಾಧ್ಯಗಳು
ಈ  ವಾಕ್ಯವನ್ನು  ಎಂ  ಗೋಪಾಲಕೃಷ್ಣ  ಅಡಿಗರು  ಬರೆದಿರುವ  ಸಮಗ್ರ  ಕಾವ್ಯ  ಸಂಕಲನದಿಂದ  ಆಯ್ದ  ಗುರಿ  ಎಂಬ  ಪದ್ಯದಿಂದ ಆರಿಸಲಾಗಿದೆ.
ಈ ವಾಕ್ಯವನ್ನು ಕವಿಯು ಹೇಳಿದ್ದಾರೆ. ಒಂದು ಬಾಣಕ್ಕೆ ಒಂದೇ ಗುರಿ ಇರುವಂತೆ ಒಂದು ದೇಹದೊಳಗೆ ಒಂದೇ ಆತ್ಮವು ಇರುವ ಹಾಗೆ ಈ ಜೀವನದಲ್ಲಿ ಅವಕಾಶ ಒಂದೇ ಬಾರಿ ಸಿಗುತ್ತದೆ. ಅದನ್ನು ಸರಿಯಾಗಿ ಉಪಯೋಗಿಸಿಕೊಳ್ಳಬೇಕು. ಎಂದು ತಿಳಿಸುತ್ತಾ, ಈ ಮಾತನ್ನು ಹೇಳಿದ್ದಾರೆ. ಒಂದೇ ಹೆಗ್ಗುರಿಯ ಸಾಧನೆಗಾಗಿ ಹಗಲಿರುಳು ಹೋರಾಡಬೇಕೆಂದು ಕವಿ ಹೇಳಿದ್ದಾರೆ.

3.ಪರಹಿತಕೆ ಬಳಲುತಿರಲದುವೆ ಜೀವನವು.
ಈ  ವಾಕ್ಯವನ್ನು  ಎಂ.ಗೋಪಾಲಕೃಷ್ಣ  ಅಡಿಗರು  ಬರೆದಿರುವ  ಸಮಗ್ರ  ಕಾವ್ಯ  ಸಂಕಲನದಿಂದ  ಆಯ್ದ  ಗುರಿ  ಎಂಬ  ಪದ್ಯದಿಂದ ಆರಿಸಲಾಗಿದೆ.
 ಈ ಮಾತನ್ನು ಕವಿಯು ಹೇಳಿದ್ದಾರೆ. ಮನುಷ್ಯನು ಜೀವನದಲ್ಲಿ ಖಚಿತವಾದ ಗುರಿಯನ್ನು ಹೊಂದಿರಬೇಕು. ಅದನ್ನು ಸಾಧಿಸುವಾಗ ಅಡ್ಡಿ ಆತಂಕಗಳು ಎದುರಾದರೆ ಹೆದರದೆ ಅದನ್ನು ನಿವಾರಿಸಿಕೊಳ್ಳಬೇಕು. ಅಡ್ಡ ದಾರಿ ಹಿಡಿಯದೆ ಸರಿಯಾದ ಒಳ್ಳೆ ಮಾನವರು  ಕೀಳು  ಆಸೆಗಳಲ್ಲಿ  ಮುಳುಗಬಾರದು.  ಮಾನವನಲ್ಲಿ  ದಿನನಿತ್ಯದ  ದುಡಿಮೆಯ  ಫಲವನ್ನು  ಪಡೆಯು ಮಾರ್ಗದಲ್ಲಿ ನಡೆಯಬೇಕು. ಮಾನವನಲ್ಲಿ ಭಗವಂತನ ರೂಪ ಕಂಡು ಸುರಪುರದ ವಾತಾವಣ ನಿರ್ಮಾಣ ಮಾಡಬೇಕು ಎಂದು ಹೇಳುವಾಗ ಮೇಲಿನ ಮಾತು ಬಂದಿದೆ.
 
You Might Like

Post a Comment

0 Comments