Recent Posts

ಏಣಿ - ೧೦ ನೇ ತರಗತಿ ತಿಳಿ ಕನ್ನಡ ಪುಸ್ತಕದ ಪಶ್ನೋತ್ತರಗಳು        

                                                                                                 
                                                                        ಏಣಿ                              
                                                                                                -ಸುಕನ್ಯಾ ಮಾರುತಿ
 
ಕವಿ/ಲೇಖಕರ ಪರಿಚಯ
?  ಸುಕನ್ಯಾ ಮಾರುತಿ ಅವರು 1956 ರಲ್ಲಿ ಬಳ್ಳಾರಿ ಜಿಲ್ಲೆಯ ಕೊಟ್ಟೂರು ಎಂಬಲ್ಲಿ ಜನಿಸಿದರು.
?  ಇವರು ನಾನೆಂಬ ಮಾಯೆ, ಬಿಂಬದೊಳಗಣ ಮಾತು, ಪಂಚಾಗ್ನಿಯ ಮಧ್ಯ, ನಾನು ನನ್ನವರು, ತಾಜ ಮಹಲಿನ ಹಾಡು ಮುಂತಾದ ಕೃತಿಗಳನ್ನು ಬರೆದಿದ್ದಾರೆ.
?  ಶ್ರೀಯುತರಿಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.
?  ಏಣಿ ಕವನವನ್ನು ಅವರ ಸಮಗ್ರ ಕವನ ಸಂಕಲನ  ಕೃತಿಯಿಂದ ಆರಿಸಿಕೊಳ್ಳಲಾಗಿದೆ.  
                                                              
                                                    ಅಭ್ಯಾಸ
1.ಪದಗಳ ಅರ್ಥ :  

ಆಸರೆ - ಆಶ್ರಯ                                        ಏಣಿ - ಮೇಲೇರಲು ಬಳಸುವ ಸಾಧನ;
ನಿಚ್ಚಣಿಕೆ. ಕರಗು - ಸ್ಪಂದಿಸು                   ಕಾಳಜಿ - ಜಾಗರೂಕತೆ; ಆಸಕ್ತಿ; ತುಡಿತ.
ತ್ರಿಶಂಕು - ಇಕ್ಕಟ್ಟಿನಲ್ಲಿ ಸಿಲುಕಿದವ          ನಮ್ರತೆ - ವಿನಯ; ವಿಧೇಯ; ಬಾಗಿದ.
ಪಾಡು - ಅವಸ್ಥೆ; ಸ್ಥಿತಿ.                              ಬುನಾದಿ - ತಳಪಾಯ; ಅಡಿಪಾಯ.
ಶಿಖಂಡಿ - ನಪುಂಸಕ                                  ಹಮ್ಮು - ಸೊಕ್ಕು; ಮದ.

2. ಪ್ರಶ್ನೆಗಳು :
ಅ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.  

1. ಏಣಿ ಜನರಿಗೆ ಮಾಡಿದ ಉಪಕಾರವೇನು?

ಜನರನ್ನು ಮೇಲಕ್ಕೆ ಎತ್ತಿ ಹಿಡಿಯುವುದರ ಮೂಲಕ ಉಪಕಾರ ಮಾಡುತ್ತದೆ.

2. ಏಣಿಯನ್ನು ಬಳಸಿ ಮೇಲೇರಿದವರಿಗೆ ಏಣಿ ಹಾಕುವ ಸವಾಲು ಏನು?
ಏಣಿ ಅವರು ಹೇಗೆ ಇಳಿಯುತ್ತಾರೆಂದು ಸವಾಲು ಹಾಕುತ್ತದೆ.

3. ಕವಯಿತ್ರಿ ತ್ರಿಶಂಕುಗಳು ಎಂದು ಯಾರನ್ನು ಕೆದಿದ್ದಾರೆ?
 ಮೇಲಂತಸ್ತಿನ ಮಾನವನನ್ನು,

4. ಮೇಲೇರಿದವರು ತ್ರಿಶಂಕುಗಳು ಆಗುವುದು ಯಾವಾಗ?
ಸಹಾಯ ಮಾಡಿದವರನ್ನು ಮರೆತಾಗ

5. ಏಣಿಗೆ ಬೀಳುವ ಭಯವಿಲ್ಲ ಏಕೆ?

ಆನೆ ಭಾರ ಹೊತ್ತು ಗಟ್ಟಿ ನೆಲೆದ ಮೇಲೆ ಕಾಲೂರಿದರಿಂದ ಬೀಳುವ ಭಯವಿಲ್ಲ.

 ಆ) ಈ ಪ್ರಶ್ನೆಗಳಿಗೆ ಮೂರು ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ
 
 1. ಏಣಿಯ ಸಹಾಯದಿಂದ ಮೇಲೇರಿದವರಿಗೆ  ಏಣಿಯ ಉಪದೇಶವೇನು?
ಏಣಿಯು  ಮೇಲಂತಸ್ತು  ಯಾವಾಗಲೂ  ಶಾಶ್ವತವಲ್ಲ.  ಅದು  ಸುರಕ್ಷಿತವೂ  ಅಲ್ಲ.  ಆಕಾಶದಲ್ಲಿ  ಎಷ್ಟೇ  ಹೊತ್ತು  ಹಾರಾಡಿದರೂ  ಮತ್ತೆ ಅವರು  ಕೆಳಗೆ  ಇಳಿಯಲೇ  ಬೇಕು.  ಹಾಗೆಯೇ  ಸಹಾಯ  ಮಾಡಿದವರನ್ನು  ಮರೆಯಬಾರದೆಂದು,  ಅವರನ್ನು  ಮರೆತರೆ  ಅವರಿಗೆ ಒಳಿತಲ್ಲ ಎಂದು ಉಪದೇಶಿಸಿದೆ.

2. ಏಣಿ ಹೇಳಿಕೊಳ್ಳುವ ಕಷ್ಟಗಳೇನು?

ಜನ  ಸಾಮಾನ್ಯರು  ಅದರ  ಮೇಲೆ  ಭಾರವನ್ನು  ಹಾಕಿ  ಮೇಲಕ್ಕೆ  ಏರಿದಾಗ  ಅದು  ಆ  ಭಾರವನ್ನು  ಕಷ್ಟಪಟ್ಟು  ಹೊತ್ತು  ನೋವನ್ನು ಅನುಭವಿಸಿದೆ.  ಆದರೆ  ಏಣಿಯ  ಸಹಾಯದಿಂದ  ಮೇಲೇರಿದ    ಇವರಿಗೆ  ಭಾರ  ಹೊತ್ತವರ  ಕಾಳಜಿಯೇ  ಇಲ್ಲ.  ಎಂದು  ಏಣಿ  ತನ್ನ ಕಷ್ಟಗಳನ್ನು ಹೇಳಿಕೊಳ್ಳುತ್ತದೆ.  

3. ಮೇಲೆರಿದವರಿಗೆ ಏಣಿಯ ಮಹತ್ವ ಯಾವಾಗ ಅರಿವಾಗುತ್ತದೆ?
ಮೇಲೇರಿದವರಿಗೆ ಮೇಲಂತಸ್ತು ಶಾಶ್ವತವಲ್ಲ ಮತ್ತು ಸುರಕ್ಷಿತವೂ ಅಲ್ಲ ಎಂಬುದು ಅರಿವಾಗುತ್ತದೆ. ಏಣಿಯ ಸಹಾಯವನ್ನು ಮರೆತು ಮೇಲಂತಸ್ತಿನಲ್ಲಿ  ಹಾರಾಡಿ,  ನಂತರ  ಅವರ  ಸೊಕ್ಕು  ಕರಗಿ  ಭೂಮಿ  ಶಾಶ್ವತವೆಂಬ  ಅರಿವು  ಮೂಡಿದಾಗ  ಏಣಿಯ  ಮಹತ್ವ ಅರಿವಾಗುತ್ತದೆ.

4. ಏಣಿ ತಾನು ಎಂಥವರಿಗೆ ಯಾವ ರೀತಿ ಸ್ಪಂದಿಸುತ್ತೇನೆಂದು ಹೇಳುತ್ತದೆ?
 ಯಾವ  ಜನಸಾಮಾನ್ಯರಲ್ಲಿ  ವಿನಯ,  ವಿಧೇಯ  ಇರುತ್ತದೆಯೋ  ಅಂಥಹ  ಜನಸಾಮಾನ್ಯರ  ನಮ್ರತೆಗೆ  ಕರಗುತ್ತೇನೆಂದು ಹೇಳುತ್ತದೆ.ಯಾರು ಮೇಲೇರಿದರೂ ಸಹ ತನಗೆ ಬೆಲೆ ಕೊಡುತ್ತಾರೋ ಅಂತವರಿಗೆ ತಾನು ಸಹಾಯ ಮಾಡುತ್ತೇನೆ. ಅವರನ್ನು ಕೆಳಗೆ ಬೀಳದಂತೆ ಎತ್ತಿ ಹಿಡಿದು ಅವರ ಏಳಿಗೆಗೆ ಕಾರಣನಾಗುತ್ತೇನೆ ಎಂದು ಹೇಳುತ್ತದೆ.  

ಇ) ಈ ಕೆಳಗಿನ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿರಿ
 
1. ಏಣಿ ಕವಿತೆ ನೀಡುವ ಸಂದೇಶವೇನು?
ಏಣಿ ಈ ಪ್ರಸ್ತುತ ಪದ್ಯದ ಮೂಲಕ ಶ್ರಮಿಕರ ಮತ್ತು ಜನಸಾಮಾನ್ಯರ ಸಹಾಯ ಪಡೆದು ಪದವಿ, ಅಧಿಕಾರ, ಕೀತರ್ಿ, ಹಣ, ಗೌರವ, ಯಶಸ್ಸು ಪಡೆದು ವ್ಯಕ್ತಿ ಮೇಲೇರುತ್ತಾನೆ. ಹೀಗೆ ಮೇಲೇರಿದವನಿಗೆ ಅಹಂ ತುಂಬಿಕೊಳ್ಳುತ್ತದೆ. ತನ್ನ ಏಳಿಗೆಗೆ ಕಾರಣರಾದವರನ್ನು ಮರೆಯುತ್ತಾನೆ, ತಿರಸ್ಕರಿಸುತ್ತಾನೆ. ಹಣ, ಅಧಿಕಾರ ಅಂತಸ್ತುಗಳು ಎಂದಿಗೂ ಶಾಶ್ವತವಲ್ಲ ಎಂಬುದನ್ನು ಅರಿತು ತನ್ನ ಏಳಿಗೆಗೆ ಕಾರಣರಾದವರನ್ನು ಗೌರವಿಸದಿದ್ದರೆ ತಮ್ಮ ವಿಪತ್ತಿಗೆ ತಾವೇ ಕಾರಣರಾಗುತ್ತಾರೆ ಎಂಬುದನ್ನು ತಿಳಿಸುತ್ತದೆ. ಹಾಗೆಯೇ ಅದು ಸಹಾಯ ಮಾಡಿದವರನ್ನು ಮರೆಯದಿದ್ದರೆ ಅವರ ಜೀವನದಲ್ಲಿ ಕೆಳಗೆ ಬೀಳುವ ಭಯವಿಲ್ಲದೆ ಬದುಕಬಹುದೆಂದು ಏಣಿ ಸಂದೇಶವನ್ನು ನೀಡುತ್ತದೆ.

2. ಏಣಿ ಹೇಳಿಕೊಳ್ಳುವ ಸಂಕಟ ಹಾಗೂ ಹಾಕುವ ಸವಾಲುಗಳೇನು?

ಜನಸಾಮಾನ್ಯರನ್ನು ಎತ್ತಿ ಹಿಡಿದು ಅವರನ್ನು ಮೇಲಕ್ಕೇರಿಸುತ್ತದೆ. ಆದರೆ ಆ ಜನರು ಅದರ ಸಹಾಯವನ್ನು ಮರೆತು ಹೋಗುತ್ತಾರೆ. ಅಂತಹ ಜನರನ್ನು ಏಣಿ ಅವರು ಹೇಗೆ ತನ್ನ ಸಹಾಯವಿಲ್ಲದೆ ಕೆಳಗೆ ಇಳಿಯುತ್ತಾರೆಂದು ನೋಡುವೆ ಎಂದು ಸವಾಲು ಹಾಕುತ್ತದೆ. ಏಣಿಯು ಒಂದೊಂದು ಜನರ ಹೆಜ್ಜೆಯ ಭಾರ ಹೊರುವಾಗ ತಾನು ಪಟ್ಟ ಕಷ್ಟ ಹೇಳಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳುತ್ತದೆ. ಅದು ಆನೆ ಭಾರ ಹೊತ್ತು, ಗಟ್ಟಿನೆಲದಲ್ಲಿ ಕಾಲೂರಿ ನಿಂತಿರುವುದರಿಂದ ಕೆಳಗೆ ಬೀಳುವ ಭಯವಿಲ್ಲ ಎಂದು ಹೇಳುತ್ತದೆ. ಈ ಜನಸಾಮಾನ್ಯರು ಕಾಲೂರಿದ ನೆ     ಲವನ್ನು ಮರೆತು ಆಕಾಶದಲ್ಲಿ ಎಷ್ಟೇ ಹೊತ್ತು ಹಾರಾಡಿದರೂ ಅವರು ಏಣಿಯ ಸಹಾಯವಿಲ್ಲದೆ ಕೆಳಗೆ ಬರಲು ಸಾಧ್ಯವಿಲ್ಲ. ಅವರು ತಮ್ಮ ಸೊಕ್ಕು ಕರಗಿ ಭೂಮಿ ಶಾಶ್ವತವೆಂಬ ಅರಿವು ಮೂಡಿದಾಗ ಏಣಿ ಅವರ ಸಹಾಯಕ್ಕೆ ಬರುವುದಿಲ್ಲ ಎಂದು ಹೇಳುತ್ತದೆ.

ಈ) ಸಂದರ್ಭದೊಡನೆ ವಿವರಿಸಿ
 
1. ನಾನು ನೋಡುತ್ತೇನೆ ಹೇಗೆ ಇಳಿಯುತ್ತಾರೆಂದು
ಈ  ವಾಕ್ಯವನ್ನು  ಸುಕನ್ಯಾ  ಮಾರುತಿ  ಅವರು  ಬರೆದಿರುವ  ಸಮಗ್ರ  ಕವನ  ಸಂಕಲನ      ಎಂಬ  ಕೃತಿಯಿಂದ  ಆಯ್ದ    ಏಣಿ  ಎಂಬ ಪದ್ಯಭಾಗದಿಂದ ಆರಿಸಿಕೊಳ್ಳ    ಲಾಗಿದೆ.
ಈ ವಾಕ್ಯವನ್ನು ಏಣಿಯು ತನ್ನ ಸಹಾಯವನ್ನು ಮರೆಯುವ ಸಂದರ್ಭದಲ್ಲಿ ಹೇಳಿದೆ. ಜನ ಸಾಮಾನ್ಯರು ಏಣಿಯ ಸಹಾಯದಿಂದ ಮೇಲಕ್ಕೆ  ಹತ್ತಿ  ಹೋಗಿ  ಅದಕ್ಕೆ  ಕೈ  ಬೀಸಿದಾಗ  ಅವರು  ಅದರ  ಸಹಾಯವಿಲ್ಲದೆ  ಹೇಗೆ  ಕೆಳಗೆ  ಇಳಿಯುತ್ತಾರೆಂದು  ನೋಡುತ್ತೇನೆ. ಎಂದು ಸವಾಲು ಹಾಕುತ್ತದೆ.

 2. ಇವರಿಗೆ ಭಾರ ಹೊತ್ತುವರ ಕಾಳಜಿಯೇ ಇಲ್ಲ
ಈ  ವಾಕ್ಯವನ್ನು  ಸುಕನ್ಯಾ  ಮಾರುತಿ  ಅವರು  ಬರೆದಿರುವ  ಸಮಗ್ರ  ಕವನ  ಸಂಕಲನ  ಎಂಬ  ಕೃತಿಯಿಂದ  ಆಯ್ದ    ಏಣಿ  ಎಂಬ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.  
ಈ ವಾಕ್ಯವನ್ನು ಏಣಿಯು ಜನ ಸಾಮಾನ್ಯರ ಭಾರ ಹೊರುವಾಗ ಹೇಳುತ್ತದೆ. ಜನರ ಹೆಜ್ಜೆಯ ಭಾರವನ್ನು ಹೊರುವಾಗ ಪಡುವ ಕಷ್ಟ  ಯಾರಿಗೂ  ಅರಿವಾಗುವುದಿಲ್ಲ.  ಅವರು  ಯಾವುದೇ  ಕಷ್ಟ  ಪಡದೆ  ಮೇಲಕ್ಕೇರಿ  ಮೇಲಕ್ಕೇರಿಸಿದವರ  ಸಹಾಯವನ್ನು ಮರೆಯುವರು ಎಂದು ಹೇಳಿಕೊಳ್ಳುತ್ತದೆ.

 3.ನಾನು ತಿರಸ್ಕರಿಸಿದರೆ ಏನು ಮಾಡುತ್ತಾರೆ ಈ ಶಿಖಂಡಿಗಳು?
ಈ  ವಾಕ್ಯವನ್ನು  ಸುಕನ್ಯಾ  ಮಾರುತಿ  ಅವರು  ಬರೆದಿರುವ  ಸಮಗ್ರ  ಕವನ  ಸಂಕಲನ  ಎಂಬ  ಕೃತಿಯಿಂದ  ಆಯ್ದ    ಏಣಿ  ಎಂಬ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ. ಈ  ವಾಕ್ಯವನ್ನು  ಏಣಿಯ  ಸಹಾಯದಿಂದ  ಮೇಲಕ್ಕೇರಿದವರು  ಕೆಳಗೆ  ಇಳಿಯುವ  ಸಂದರ್ಭದಲ್ಲಿ  ಹೇಳುತ್ತದೆ.  ಜನರು  ಆಕಾಶದಲ್ಲಿ ಎಷ್ಟೇ ಹೊತ್ತು ಹಾರಾಡಿದರೂ ಅವರು ಏಣಿಯ ಸಹಾಯದಿಂದಲೇ ಮತ್ತೆ ಕೆಳಗೆ ಇಳಿಯಬೇಕು. ಆ ಸಂದರ್ಭದಲ್ಲಿ ಏಣಿ ಅವರನ್ನು ತಿರಸ್ಕರಿಸುತ್ತದೆ ಎಂದು ಹೇಳುವಾಗ ಮೇಲಿನ ಮಾತು ಬಂದಿದೆ.

4.. ನಮ್ರತೆಗೆ ನಾ ಕರಗುತ್ತೇನೆ.

ಈ  ವಾಕ್ಯವನ್ನು  ಸುಕನ್ಯಾ  ಮಾರುತಿ  ಅವರು  ಬರೆದಿರುವ  ಸಮಗ್ರ  ಕವನ  ಸಂಕಲನ  ಎಂಬ  ಕೃತಿಯಿಂದ  ಆಯ್ದ    ಏಣಿ  ಎಂಬ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.
ಏಣಿಯು  ಜನರ  ವಿನಯಕ್ಕೆ  ಕರಗುವ  ಸಂದರ್ಭದಲ್ಲಿ  ಹೇಳುತ್ತದೆ.  ಏಣಿಯು  ಮೇಲಕ್ಕೇರಿದ  ಜನರ  ಸೊಕ್ಕು  ಕರಗಿ  ಭೂಮಿ ಶಾಶ್ವತವೆಂಬ ಅರಿವು ಮೂಡಿದಾಗ ಅವರಿಗೆ ಅದು ನಿಲುಕುವುದಿಲ್ಲ ಎಂದು ಹೇಳುತ್ತದೆ. ಅದು ನಮ್ರತೆಗೆ ಕರಗಿ ಬೆಳೆಯ ಬಲ್ಲವರನ್ನು ಮಾತ್ರ ಎತ್ತಿ ಹಿಡಿಯುತ್ತೇನೆ ಎಂದು ಹೇಳುತ್ತದೆ.  


 
You Might Like

Post a Comment

0 Comments