Recent Posts

ಕಳ್ಳರ ಗುರು     - ೧೦ ನೇ ತರಗತಿ ತಿಳಿ ಕನ್ನಡ ಪುಸ್ತಕದ ಪ್ರಶ್ನೋತ್ತರಗಳು


ಪಾಠ-01.                          
                                                               ಕಳ್ಳರ ಗುರು                           
                                                                                                          -ಬೆಟಗೇರಿ ಕೃಷ್ಣಶರ್ಮ  

                                     ಅಭ್ಯಾಸ ಪ್ರಶ್ನೆಗಳು
 
 1. ವೈದ್ಯರು ತನ್ನ ವೃತ್ತಿಯ ಕುರಿತು ಹೆಂಡತಿ ರತ್ನಳಿಗೆ ಏನು ಹೇಳಿದರು?
  ವೈದ್ಯರು  ಈ  ವೈದ್ಯಕ  ವೃತ್ತಿ  ದುಡ್ಡುಗಳಿಸಬೇಕಾದುದ್ದಲ್ಲ!  ಕೇವಲ  ಸಮಾಜದ  ಕ್ಷೇಮ  ಸಾಧನೆಗಾಗಿ  ಇರುವುದು.  ಸಮಾಜದಿಂದ ನಮಗೆ,  ಬದುಕಿ  ಇರುವ  ಮಟ್ಟಿಗೆ  ಏನಾದರು  ದೊರೆತರೆ  ಸಾಕು.  ತನ್ನ  ಔಷಧಿ  ಕುಪ್ಪಿಗೆ  ಕಳ್ಳರು  ಕೈ  ಹಚ್ಚಿಲ್ಲ.  ತನ್ನ  ವೈದ್ಯಕ ಪ್ರಾವೀಣ್ಯವನ್ನಂತೂ ಯಾರೂ ಕದ್ದೊಯ್ಯಲಾರರು  ಎಂದು ವೈದ್ಯರು ತನ್ನ ವೃತ್ತಿಯ ಬಗ್ಗೆ ತನ್ನ ಹೆಂಡತಿ ರತ್ನಾಳಿಗೆ ಹೇಳಿದರು.

2. ಹಾವನ್ನು ಕಂಡ ವೈದ್ಯರ ತಲೆಯಲ್ಲಿ ಯಾವ ವಿಚಾರಗಳು ಮೂಡಿಬಂದವು?
ಹಾವಿನಂತಹ  ದುಷ್ಟ  ಜಂತುವು  ಕೆಣಕದೆ  ಯಾರನ್ನೂ  ಹಿಂಸಿಸದು.  ಆದರೆ    ಮನುಷ್ಯ?  ಮನುಷ್ಯ  ಸುಮ್ಮನೆ  ಬಿಡುವನೆ?  ಅವನ ಆಸೆಯ  ಹಾವು  ಯಾರು  ಕೆಣಕದಿದ್ದರೂ  ಎಲ್ಲರನ್ನೂ  ಕಡಿಯುವುದು  ಎಂದು  ಹಾವನ್ನು  ಕಂಡ  ವೈದ್ಯರ  ತಲೆಯಲ್ಲಿ ವಿಚಾರಗಳು  ಮೂಡಿಬಂದವು.

3. ಭೀಮನಾಯಕನು ವೈದ್ಯರಿಗೆ ಏನೆಂದು ಕೃತಜ್ಞತೆಗಳನ್ನು ಸಲ್ಲಿಸಿದನು?
ಭೀಮನಾಯಕನು ವೈದ್ಯರ ಕಾಲ ಮೇಲೆ ಬಿದ್ದು ಹೇಳಿದ ಆ ಕಾಣದ ದೇವರು ಇದ್ದಾನೋ ಇಲ್ಲವೋ! ನೀವು ಮಾತ್ರ ನನ್ನ ಕಣ್ಣಿಗೆ ಕಾಣುವ  ದೇವರು  ನಿಮ್ಮ  ಉಪಕಾರವನ್ನು  ಎಂದೂ  ಮರೆಯಲಾರೆ!  ಎಂದು    ಹೇಳಿದ  ಮರುದಿನ  ರಾತ್ರಿ  ತಾನು  ವೈದ್ಯರ ಮನೆಯಿಂದ ಕದ್ದ ವಸ್ತುಗಳನ್ನೆಲ್ಲಾ ಹಿಂದಿರುಗಿಸುವ ಮೂಲಕ ವ್ಯೆದ್ಯರಿಗೆ ಕೃತಜ್ಞತೆಯನ್ನು ಸಲ್ಲಿಸಿದನು.

4. ವೈದ್ಯರು ಭೀಮನಾಯಕನ ಮಗುವಿನ ಪ್ರಾಣವನ್ನು ಹೇಗೆ ಉಳಿಸಿದರು ?
ವೈದ್ಯರು ಮಗುವಿನ ನಾಡಿ ಹಿಡಿದು, ಜ್ಚರದ ರೀತಿ ಪರೀಕ್ಷಿಸಿದರು. ವೈದ್ಯರು ತಾವೇ ಕಾಡಿಗೆ ಹೋಗಿ ಕಷ್ಟದಿಂದ ಸೊಪ್ಪನ್ನು ಹುಡುಕಿ ತಂದು ರಸಮಾಡಿ, ಆ ರಸದೊಂದಿಗೆ ಮತ್ತೊಂದು ಸಲ ಔಷಧಿಯನ್ನು ಕುಡಿಸಿದರು. ಕುಪ್ಪೆಯಲ್ಲಿದ್ದ ಒಂದು ಲೇಹವನ್ನು ಹಣೆಯ ತುಂಬ ಬಳಿದರು. ಹೀಗಾಗಿ ಭೀಮನಾಯಕನ ಮಗುವಿನ ಜ್ವರ ಕಡಿಮೆಯಾಗಿ, ಪ್ರಾಣ ಉಳಿಯಿತು.

5. ವೈದ್ಯರ ಯಾವ ಮಾತುಗಳು ಭೀಮನಾಯಕನ ಮನಸ್ಸನ್ನು ಚುಚ್ಚಿದವು ?
ಕಾಯುವುದು ದೇವರ ಕೆಲಸ, ಕೊಲ್ಲುವುದು ರಾಕ್ಷಸರ ಕೆಲಸ ಕಾಯುವ ಕೆಲಸಕ್ಕಾಗಿ ಮನಮುಟ್ಟಿ ದುಡಿಯುವವರಿಗೆ ದೇವರ ಸಹಾಯ ಇದ್ದೇ ಇರುತ್ತದೆ. ಎಂದು ವೈದ್ಯರು ನುಡಿದರು. ಈ ಮಾತುಗಳು ಭೀಮನಾಯಕನ ಮನಸ್ಸನ್ನು ಚುಚ್ಚಿದವು.

6. ವೈದ್ಯರು ತಮ್ಮ ಸೇವೆಯಿಂದ ಯಾವ ಪ್ರತಿಫಲಗಳು ಲಭಿಸಿದವು ಎಂದು ತನ್ನ ಹೆಂಡತಿಗೆ ಹೇಳಿದರು ?
ವೈದ್ಯರು ನನ್ನು ವೈದ್ಯಕೀಯ ಪ್ರಾವಿಣ್ಯದಿಂದ ಒಬ್ಬ ತಾಯಿಯ ಕರುಳನ್ನು ಸಂತಯಿಸಿತು. ಒಬ್ಬ ತಂದೆಯ ಕುಲವನ್ನು ಮುಂದುವರಿಸಿತು ಎಂದು ಹೇಳಿದರು.

7. ಭೀಮನಾಯಕನು ವೈದ್ಯರ ವಸ್ತುಗಳನ್ನು ಹಿಂತಿರುಗಿ ಏನೆಂದು ಹೇಳಿದನು ?  
ದೇವರ ಒಡವೆಗಳನ್ನು ದೇವರಿಗೆ ಒಪ್ಪಿಸಲು ಬಂದಿದ್ದೇನೆ. ನನ್ನನ್ನು ಕ್ಷಮಿಸಿ. ದಯವಿಟ್ಟು ಎಲ್ಲವನ್ನೂ ಒಪ್ಪಿಸಿಕೊಳ್ಳಬೇಕು ಎಂದು ಹೇಳಿದ ನಂತರ ತಮ್ಮ ಹಾಸಿಗೆ ಮಾತ್ರ ತನ್ನ ಮಗನ ಮಗ್ಗುಲಿನಲ್ಲಿ ಇದೆ. ಅದೊಂದನ್ನು ಮಾತ್ರ ತಂದಿಲ್ಲ. ಅದು ತಮ್ಮ ಹರಕೆಯಾಗಿ ತನ್ನ ಮಗನಿಗೆಂದೇ ಇರಲಿ ಎಂದು ಹೇಳಿದನು.

8. ವೈದ್ಯರ ಮನೆಯಿಂದ ಕಳುವಾದ ವಸ್ತುಗಳು ಮರಳಿ ಸಿಕ್ಕಿದ ಬಗೆ ಹೇಗೆ ?
ಕಳ್ಳರ ಗುರು ಭೀಮನಾಯಕನ ಮಗ ಜ್ವರದಿಂದ ಬಳಲುತ್ತಿದ್ದನು. ವೈದ್ಯರು ಅವನನ್ನು ಬದುಕಿಸಿದರು. ಮಗನ ಪ್ರಾಣ ಉಳಿಸಿದರಲ್ಲ ಎಂದು ಯೋಚಿಸಿ, ಭೀಮನಾಯಕನಿಗೆ ನಾಚಿಕೆಯಾಗಿ, ವೈದ್ಯರ ಮನೆಯಿಂದ ಕದ್ದುತಂದ ಎಲ್ಲ ಸಾಮಾನುಗಳನ್ನು ಮರಳಿ ತಂದು ವೈದ್ಯರಿಗೆ ಒಪ್ಪಿಸಿದನು.

9. ಕಳ್ಳರ ಗುರುವಿನ ಮನಃಪರಿವರ್ತನೆ ಹೇಗಾಯಿತು ?
 ಕಾಯುವುದು ದೇವರ ಕೆಲಸ, ಕೊಲ್ಲುವುದು ರಾಕ್ಷಸರ ಕೆಲಸ ಕಾಯುವ ಕೆಲಸಕ್ಕಾಗಿ ಮನಮುಟ್ಟಿ ದುಡಿಯುವವರಿಗೆ ದೇವರ ಸಹಾಯ ಇದ್ದೇ ಇರುತ್ತದೆ     . ಎಂದು ವೈದ್ಯರು ಹೇಳಿದ ಮಾತುಗಳು ಭೀಮನಾಯಕನ ಮೇಲೆ ಪರಿಣಾಮ ಬೀರಿದವು. ವೈದ್ಯರ ವ್ಯಕ್ತತ್ವ ಮತ್ತು ಅವರ ಮಾತುಗಳಿಂದ ಅವನ ಮನಃಪರಿವರ್ತನೆಯಾಯಿತು.

10. ಕಳ್ಳರ ಗುರು ಪಾಠದಿಂದ ನಾವು ಕಲಿತುಕೊಳ್ಳಬೇಕಾದ ವಿಚಾರಗಳೇನು ?
ಎಷ್ಟೇ ಕಷ್ಟ ಬಂದರೂ ಸಹಿಸಿಕೊಳ್ಳಬೇಕು. ಯಾರೊಂದಿಗೂ ವೈರತ್ವ ಸಾಧಿಸದೆ ಸಹಾಯ ಮಾಡಬೇಕು. ಬೇರೆಯವರ ಕಷ್ಟ ತಿಳಿದು ಪರಿಹರಿಸಲು ಪ್ರಯತ್ನಿಸಬೇಕು. ಅದಲ್ಲದೆ ಜೀವಕ್ಕೆ ಬೆಲೆಕೊಟ್ಟು ಕಾಪಾಡಲು ಪ್ರಯತ್ನಿಸಬೇಕು. ಮಾನವಿಯತೆ ಮೆರೆಯಬೇಕು. ಎಂದೆಲ್ಲಾ ಕಲಿತುಕೊಳ್ಳಬಹುದಾಗಿದೆ.   
   
You Might Like

Post a Comment

0 Comments