Recent Posts

ಹೊಂಗೆ ಬೇವುಗಳ ಹಾಡು    - ೧೦ ನೇ ತರಗತಿ ತಿಳಿ ಕನ್ನಡ ಪುಸ್ತಕದ ಪ್ರಶ್ನೋತ್ತರಗಳು

                                            
 
                                                                  ಪಾಠ-2.                       
                                                 ಹೊಂಗೆ ಬೇವುಗಳ ಹಾಡು               
                                                                                                              -ಶ್ರೀಮತಿ.ಎಚ್.ಎಲ್.ಪುಷ್ಪ    


                                                   ಅಭ್ಯಾಸ ಪ್ರಶ್ನೆಗಳು
1) ಬದುಕ ಬದುವ ಬೇಲಿ ಯಾವ ರೀತಿ ಇದೆ ?

ಬದುಕ ಬದುವ ಬೇಲಿಯಲ್ಲಿ  ಹೊಂಗಯ ಮರದ ಜೋಲಿಯಲ್ಲಿ ಹೂವು ಅರಳಿದೆ. ಅದು ಮಲ್ಲಿಗೆಯಂತಹ ರೂಪವನ್ನು ಹೊಂದಿದ್ದು ಸುಂದರವಾಗಿದೆ. ಹೊಂಗೆಯ ಮರದ ನೆರಳು ತಾಯಿಯ  ಪ್ರೀತಿಯನ್ನು ನೀಡುವಂತಿದೆ. ಅದು ವಾತ್ಸಲ್ಯದಿಂದ ಕೂಡಿದ ಹೆತ್ತ ಕರುಳಿನಂತಹ ಮಡಿಲನ್ನು ಹೊಂದಿದ್ದು ಜೀವಿಗಳಿಗೆ ಆಶ್ರಯವಾಗಿದೆ.  

2)ಹೊಳೆಯ ದಂಡೆಯ ಸಾಲಿನಲ್ಲಿ ಹಿಂದಿನ ಯಾವ ನೆನಪುಗಳಿವೆ ?
ಹೊಳೆಯ ದಂಡೆಯು ಹಲವಾರು ನಾಗರಿಕತೆಗಳ ಉಗಮ ಸ್ಥಾನಗಳಾಗಿವೆ. ಹಲವು ಸಾಮ್ರಾಜ್ಯಗಳು ಉದಯವಾಗಿವೆ. ಹಲವು ಸಾಮ್ರಾಜ್ಯಗಳು ಅಳಿದು ಹೋಗಿವೆ. ಶತಮಾನಗಳಿಂದ ನೇಗಿಲಯೋಗಿ ಶ್ರಮವಹಿಸಿ, ಉತ್ತಿ, ಬಿತ್ತಿ, ಬೆಳೆ ಬೆಳೆದ ನೆನಪಿದೆ. ಗೊಬ್ಬರದ ಹಾಡು ಹೊಮ್ಮಿದೆ.. ಜನರು ಮಾಡಿದ ಸಂತೆ, ಜಾತ್ರೆಗಳ ನೆನಪಿದೆ.

3) ಈ ಲೋಕವು ಯಾವ ರೀತಿ ಸಂತೋಷದಾಯಕವಾಗಿದೆ ಎಂದು ಕವಯಿತ್ರಿ ಹೇಳುತ್ತಾರೆ ?
ಪ್ರಕೃತಿ ಸೌಂದರ್ಯ ಇಲ್ಲಿ ಅತ್ಯಂತ ಆಕರ್ಷಕವಾಗಿದೆ. ಬಣ್ಣ ಬಣ್ಣದ ಚಿಟ್ಟೆಗಳು ಹಾರಾಡುತ್ತಿವೆ. ಭೃಂಗದ ಸಂಗೀತ ಕೇಳಿಬರುತ್ತಿದೆ. ಕೆಳಗೆ ಹೊಂಗೆ ಮುಂತಾದ ಮರಗಳಿವೆ. ಹೂಗಳು ಅರಳಿ ಗಮಗಮಿಸಿ ಪರಿಮಳ ಬೀರಿವೆ. ಆ ಗಮಲಿನಲ್ಲಿ ಇಲ್ಲೆ ಎಲ್ಲೋ ನಾಳೆಯೆಂಬ ಕೂಸಿನ ಬರುವಿಕೆಗಾಗಿ ಜಗತ್ತು ಸಂತೋಷದಾಯಕವಾಗಿದೆಯೆಂದು ಕವಯಿತ್ರಿ ಹೇಳುತ್ತಾರೆ.

4)ನಾಗರಿಕತೆಯ ಬೆಳವಣಿಗೆಯ ಬಗ್ಗೆ ಕವಿಯಿತ್ರಿಗೆ ಯಾವ ಅಳಕು ಇದೆ?
 ನಗರಗಳು  ಬೆಳವಣಿಗೆ  ಹೊಂದುತ್ತಾ  ಸಾಗಿದಂತೆ  ಅವು  ಪ್ರಕೃತಿ  ಸಂಪತ್ತನ್ನು  ನಾಶಪಡಿಸುತ್ತಿವೆ.  ಜನರು  ನಗರವನ್ನು  ಎಲ್ಲಾ  ತಿಂದು ತೇಗಿದ್ದು ಬಗೆಬಗೆಯ ಕಾರೇನು, ಪಟಪಟ ಮೋಟಾರುಗಳೇನು, ಅಲ್ಲಿ ಮೇಲೆ ಲೋಹದ ಹಕ್ಕಿ ಹಾರಾಟವೇನು, ಈ ಎಲ್ಲಾ ಜೀವದ ಇಂಧನ ತೀರುತ್ತಲಿದೆ. ಬದುಕು ನಾಳೆ ಏನೋ ಯಾಕೋ ಏನೋ ಎಂದು ಕವಯಿತ್ರಿಗೆ ಅಳುಕು ಇದೆ.

 5. ಮನುಕುಲದ ಭವ್ಯ ಬದುಕು ಯಾವ ರೀತಿ ಅರಳಬೇಕಿದೆ?
ಕವಯಿತ್ರಿಯು  ಮನುಕುಲದ ಭವ್ಯ ಬದುಕು ಜೈವಿಕ ಇಂದನದಿಂದ ಅರಳಬೇಕಿದೆ ಎಂದು ಬಯಸಿದ್ದಾರೆ. ತೆಂಗನ್ನು ಬೆಳೆಯುತ್ತಾ, ಅದರಿಂದ ತೈಲಧಾರೆ ಹೊಮ್ಮಿ ಬರಬೇಕು. ಹೊಂಗೆ, ಹಿಪ್ಪೆಗಳ ಜೀವಮೇಳ ನಡೆದು ಅದರಿಂದಲೂ ತೈಲಧಾರೆ ಹೊಮ್ಮಿ ಬರಬೇಕು. ಮುಗಿದು ಹೋಗುತ್ತಿರುವ ತೈಲ ಸಂಪತ್ತನ್ನು ಜೈವಿಕ ಇಂಧನ ಪರ್ಯಾಯ ಇಂಧನವಾಗಿ ಮನುಕುಲವನ್ನು ಬೆಳಗುವುದರ ಮೂಲಕ ಮನುಕುಲದ ಭವ್ಯ ಬದುಕು ಅರಳಬೇಕಿದೆ ಎಂದು ಕವಯಿತ್ರಿ ಹೇಳಿದ್ದಾರೆ.                                                                             


You Might Like

Post a Comment

0 Comments