Recent Posts

ವ್ಯಾಕರಣ- ೧೦ ನೇ ತರಗತಿ ತಿಳಿ ಕನ್ನಡ ಪತ್ರಲೇಖನ     

                                                                      ಪತ್ರಲೇಖನ              
 
 ಖಾಸಗಿ ಪತ್ರ / ವೈಯಕ್ತಿಕ ಪತ್ರ 
 
1)ನಿಮ್ಮನ್ನು ಶ್ರೀರಂಗಪಟ್ಟಣದ ಸರ್ಕಾರಿ ಪ್ರೌಢಶಾಲೆಯ ಕೀರ್ತಿಕುಮಾರ್ ಎಂದು ಭಾವಿಸಿಕೊಂಡು ಹಾಸನದಲ್ಲಿರುವ ನಿಮ್ಮ ತಂದೆಗೆ ಶಾಲಾ ಶುಲ್ಕ ಕಟ್ಟಲು 150/- ರೂಪಾಯಿಗಳನ್ನು ಕೋರಿ  ಒಂದು ಪತ್ರ ಬರೆಯಿರಿ.
ಇವರಿಂದ:                                                          ದಿನಾಂಕ :05.05.2020
ಕೀರ್ತಿಕುಮಾರ,
ಒಂಬತ್ತನೆಯ ತರಗತಿ,
ಸರ್ಕಾರಿ ಪ್ರೌಢಶಾಲೆ,   
ಶ್ರೀರಂಗಪಟ್ಟಣ - 571438.  
 
                   ತೀರ್ಥರೂಪರವರಿಗೆ ನಿಮ್ಮ ಮಗನು ಮಾಡುವ ಸಾಷ್ಟಾಂಗ ನಮಸ್ಕಾರಗಳು. ಇಲ್ಲಿ ನಾನು ಆರೋಗ್ಯವಾಗಿದ್ದೇನೆ. ಅಲ್ಲಿ ನಿಮ್ಮ ಮತ್ತು ಅಮ್ಮನ ಆರೋಗ್ಯ ಹೇಗಿದೆ? ಯಾವುದಕ್ಕೂ ಪತ್ರ ಬರೆಯಿರಿ. ಇಲ್ಲಿ ನಾನು ಚೆನ್ನಾಗಿ ವಿದ್ಯಾಭ್ಯಾಸ ಮಾಡುತ್ತಿದ್ದೇನೆ. ನಿಮ್ಮ ಅಪೇಕ್ಷೆಯಂತೆ ಪ್ರಥಮ ಸ್ಥಾನದಲ್ಲಿ ಉತ್ತೀರ್ಣನಾಗಲು ಪ್ರಯತ್ನಿಸುತ್ತಿದ್ದೇನೆ. ಪತ್ರದ ಮುಖ್ಯ ವಿಚಾರವೇನೆಂದರೆ, ಜೂನ್ 10 ನೇ ತಾರೀಖಿನ ಒಳಗಾಗಿ ವಾಷರ್ಿಕ ಪರೀಕ್ಷೆಯ ಶುಲ್ಕ 150/- (ನೂರ ಐವತ್ತು ಮಾತ್ರ) ರೂಪಾಯಿಗಳನ್ನು ಕಟ್ಟಬೇಕಾಗಿದೆ. ತಾವು ಆದಷ್ಟು ಬೇಗ ಅಂಚೆ ಮೂಲಕ ಹಣ ಕಳುಹಿಸಿ ಕೊಡಿ ಎಂದು ಕೇಳಿಕೊಳ್ಳುತ್ತೇನೆ. ಮನೆಯವರಿಗೆಲ್ಲ ನನ್ನ ನಮಸ್ಕಾರಗಳನ್ನು ತಿಳಿಸಿ. ಉಳಿದ ವಿಷಯವನ್ನು ಊರಿಗೆ ಬಂದಾಗ ಮಾತನಾಡುತ್ತೇನೆ.  
ನಮಸ್ಕಾರಗಳೊಂದಿಗೆ,                                                               ನಿಮ್ಮ ಪ್ರೀತಿಯ ಮಗ
                                                                                                     ಕೀರ್ತಿಕುಮಾರ    
ಇವರಿಗೆ:
ಶ್ರೀ ಸಿದ್ದಪ್ಪ,
ಮನೆ ಸಂಖ್ಯೆ 54, 1ನೆಯ ಮುಖ್ಯರಸ್ತೆ,
ಕುವೆಂಪುನಗರ, ಹಾಸನ - 573 201  

2)ನಿಮ್ಮನ್ನು ಗೌರಿಬಿದನೂರಿನ ವಿನಾಯಕ ಪ್ರೌಢಶಾಲೆಯ ಮಮತ ಕೆ.ಎಲ್. ಎಂದು ಭಾವಸಿಕೊಡು ತುಮಕೂರಿನಲ್ಲಿರುವ ನಿಮ್ಮ ತಂದೆಗೆ ನಿಮ್ಮ ವಿದ್ಯಾಭ್ಯಾಸದ ಪ್ರಗತಿಯನ್ನು ಕುರಿತು ಒಂದು ಪತ್ರ ಬರೆಯಿರಿ.          
 ಇವರಿಂದ,                                   ದಿನಾಂಕ 25-06-2020
ಮಮತ ಕೆ. ಎಲ್.
10 ನೇ ತರಗತಿ,
ಬಿ ವಿಭಾಗ, ವಿನಾಯಕ ಪ್ರೌಢಶಾಲೆ,
ಗೌರಿಬಿದನೂರು.  
 
                ತೀರ್ಥರೂಪರವರಿಗೆ ನಿಮ್ಮ ಮಗಳು ಮಾಡುವ ನಮಸ್ಕಾರಗಳು. ನಾನು ಇಲ್ಲಿ ಆರೋಗ್ಯವಾಗಿದ್ದೇನೆ. ನಿಮ್ಮ ಯೋಗಕ್ಷೇಮದ ವಿಚಾರವಾಗಿ ಪತ್ರವನ್ನು ಬರೆಯಿರಿ.ಇಲ್ಲಿ ನಮ್ಮ ನಿತ್ಯದ ಶಾಲಾ ಚಟುವಟಿಕೆಗಳು ಯಾವ ತೊಂದರೆಯೂ ಇಲ್ಲದಂತೆ ನಡೆಯುತ್ತಿವೆ. ಕಳೆದ ವಾರ ಮಾಸಿಕ ಪರೀಕ್ಷೆಗಳು ನಡೆದಿದ್ದವು. ಆ ಪರೀಕ್ಷೆಯಲ್ಲಿ ನಾನು ತರಗತಿಗೆ ದ್ವಿತೀಯ ಸ್ಥಾನವನ್ನು ಪಡೆದಿದ್ದೇನೆ. ಮಂದಿನ ಪರೀಕ್ಷೆಯಲ್ಲಿ ಇನ್ನು ಸ್ವಲ್ಪ ಪ್ರಯತ್ನ ಮಾಡಿದಲ್ಲಿ ನೀನು ಪ್ರಥಮ ಸ್ಥಾನವನ್ನು ಪಡೆದೇ ಪಡೆಯುುತ್ತೀಯ ಎಂದು ನನ್ನ  ಗುರುಗಳು ಹೇಳಿದರು. ನಾನು ಅವರ ಮಾರ್ಗದರ್ಶನದಂತೆ ವ್ಯಾಸಂಗುುತ್ತೀಯ ಎಂದು ನನ್ನ  ಗುರುಗಳು ಹೇಳಿದರು. ನಾನು ಅವರ ಮಾರ್ಗದರ್ಶನದಂತೆ ವ್ಯಾಸಂಗಕ್ಕೆ ದಾರಿದೀಪವಾಗುವುದರಿಂದ ಶಾಲಾ ಶಿಕ್ಷಕರು ತುಂಬಾ ಕಾಳಜಿವಹಿಸಿ ಪಾಠಗಳನ್ನು ಮಾಡುತ್ತಿದ್ದಾರೆ. ನಾವೂ ಕೂಡ ಶ್ರದ್ಧೆವರು ತುಂಬಾ ಕಾಳಜಿವಹಿಸಿ ಪಾಠಗಳನ್ನು ಮಾಡುತ್ತಿದ್ದಾರೆ. ನಾವೂ ಕೂಡ ಶ್ರದ್ಧೆವಹಿಸಿ ಕಲಿಯುತ್ತಿದ್ದೇವೆ. ಒಳ್ಳೆಯ ಶಾಲೆ ಹಾಗೂ ಗುರುಗಳನ್ನು ಪಡೆದ ನಾವು ನಿಜಕ್ಕೂ ಧನ್ಯರು. ಮನೆಯಲ್ಲಿ ನನ್ನ ಪ್ರೀತಿಯ ಅಮ್ಮ ಮತ್ತು ಅಣ್ಣನಿಗೆ ನನ್ನ ನಮಸ್ಕಾರಗಳನ್ನು ತಿಳಿಸಿರಿ.       
ನಮಸ್ಕಾರಗಳೊಂದಿಗೆ,                                          ನಿಮ್ಮ ಪ್ರೀತಿಯ ಮಗಳು    
                                                                                 (ಮಮತ ಕೆ.ಎಲ್.)
ಇವರಿಗೆ,                                                                
ಶ್ರೀ ಬಸವರಾಜ ಕೆ. ಎಲ್.
ಮನೆ ನಂ - 1199, ಬನಶಂಕರಿ ನಿಲಯ,
ರಾಜಕುಮಾರ್ ರಸ್ತೆ, ತುಮಕೂರು.  

3).ನಿಮ್ಮ ಶಾಲೆಯಲ್ಲಿ ನಡೆದ ಶಾಲಾ ವಾಷರ್ಿಕೋತ್ಸವವನ್ನು ಕುರಿತು ನಿಮ್ಮ ಗೆಳೆಯ/ ಗೆಳತಿಗೆ ಒಂದು ಪತ್ರವನ್ನು ಬರೆಯಿರಿ.
ಇಂದ:                                                    ದಿನಾಂಕ:12:07:2020                                      
ಸಲ್ಮಾ /ಸಲ್ಮಾನ್                                                                                            
10 ನೇ ತರಗತಿ ಸರ್ಕಾರಿ ಉರ್ದು ಪ್ರೌಢಶಾಲೆ(ಆರ್.ಎಂ.ಎಸ್.ಎ.)
ಅರಳಿಹಳ್ಳಿ, ಭದ್ರಾವತಿ ತಾಲ್ಲೂಕು      
 
              ಪ್ರೀಯ ಗೆಳೆಯ/ಗೆಳತಿ ಯಾದ  ಸುಧಾ/ಸುಧಾಕರ ಳಿಗೆ/ನಿಗೆ ನಿನ್ನ ಗೆಳೆಯ/ಗೆಳತಿ ಮಾಡುವ ವಂದನೆಗಳು. ನಮ್ಮ ಶಾಲೆಯಲ್ಲಿ ದಿನಾಂಕ 7ನೇ ಫೆಬ್ರವರಿ 2019 ರಂದು ಶಾಲಾ ವಾರ್ಷಿಕೋತ್ಸವವನ್ನು ಹಮ್ಮಿಕೊಂಡಿದ್ದೆವು. ನಮ್ಮ ಮುಖ್ಯೋಪಾಧ್ಯಾಯರ ಮುಂದಾಳತ್ವದಲ್ಲಿ ಎಲ್ಲಾ ಶಿಕ್ಷಕರು, ವಿದ್ಯಾರ್ಥಿಗಳು ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಸಕ್ರೀಯವಾಗಿ ಭಾಗವಹಿಸಿದ್ದರು. ವಾರ್ಷಿಕೋತ್ಸವದ ಅಂಗವಾಗಿ ವಾರ್ಷಿಕ ಕ್ರೀಡಾಕೂಟ, ರಸಪ್ರಶ್ನೆ, ಪ್ರಬಂಧ, ಭಾಷಣ ಸ್ಪಧರ್ೆಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದರು. ಕೆಲವು ಸ್ಪರ್ಧೆಗಳಲ್ಲಿ ನಾನು ಸಹ ಭಾಗವಹಿಸಿ ಬಹುಮಾನಗಳನ್ನು ಪಡೆದಿದ್ದೇನೆ ಎಂದು ಹೇಳಲು ನನಗೆ ಹೆಮ್ಮೆ ಎನಿಸುತ್ತದೆ. ಹಾಗೆಯೇ ನನ್ನ ವಿದ್ಯಾಭ್ಯಾಸದ ಕಡೆಗೂ ಗಮನ ನೀಡುತ್ತದ್ದೇನೆ. ಈ ಪತ್ರ ತಲುಪಿದ ತಕ್ಷಣ ಪತ್ರ ಬರೆಯುತ್ತೀಯ ಎಂದು ನಂಬಿರುತ್ತೇನೆ. ಈ ಎಲ್ಲ ವಿಷಯವನ್ನು  ನಿನ್ನ ಮಾತೃಶ್ರೀಯವರಿಗೂ ಹೇಳಿ, ನನ್ನ ನಮಸ್ಕಾರಗಳನ್ನು ತಿಳಿಸು..     
ವಂದನೆಗಳೊಂದಿಗೆ,                                               ಇತಿ ನಿನ್ನ ಪ್ರೀತಿಯ 
                                                                                    ಸಲ್ಮಾ/ಸಲ್ಮಾನ್
                                                                         
                                                                                   
ಗೆ,
ಸುಧಾ/ಸುಧಾಕರ
ನೆಹರು ನಗರ ಶಿವಮೊಗ್ಗ 
577421
                                                                 

ವ್ಯವಹಾರಿಕ ಪತ್ರ ಅಥವಾ ಮನವಿ ಪತ್ರ

4) ನಿಮ್ಮನ್ನು ವಿಜಯಪುರದ ಸಂಗಮೇಶ ಎಂದು ಭಾವಿಸಿಕೊಂಡು ನಿಮ್ಮ ಊರಿನ ಕೋಟೆ ಬೀದಿಗೆ ನೀರಿನ ಸೌಲಭ್ಯ ಒದಗಿಸಿಕೊಡುವಂತೆ ಕೋರಿ, ನಿಮ್ಮ ಜಿಲ್ಲೆಯ ಜಿಲ್ಲಾಧಿಕಾರಿಯವರಿಗೆ ಒಂದು ಪತ್ರ ಬರೆಯಿರಿ.   
ಇವರಿಂದ,                                              ದಿನಾಂಕ : 05.05.2020
ಶ್ರೀ ಸಂಗಮೇಶ,
ಕೋಟೆ ಬೀದಿ,
ಬಿಜಾಪುರ - 586101.
 
ಇವರಿಗೆ,
ಜಿಲ್ಲಾಧಿಕಾರಿಗಳು,
ವಿಜಯಪುರ - 586101,
ವಿಜಯಪುರ ಜಿಲ್ಲೆ.

ಮಾನ್ಯರೇ,  
 
ವಿಷಯ : ಕೋಟೆ ಬೀದಿಗೆ ನೀರಿನ ಸೌಲಭ್ಯ ಒದಗಿಸುವಂತೆ ಕೋರಿ. ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ನಮ್ಮ ಕೋಟೆ ಬೀದಿಯಲ್ಲಿ ಸುಮಾರು 60 ಮನೆಗಳಿದ್ದು ಕೊಳಾಯಿಯ ವ್ಯವಸ್ಥೆ ಇಲ್ಲದೆ ಕುಡಿಯುವ ನೀರಿಗೆ ತುಂಬಾ ತೊಂದರೆಯಾಗಿದೆ. ಜನ ಪರ ಕಾಳಜಿ ಇರುವ ತಾವು ದಯಮಾಡಿ ಕೋಟೆ ಬೀದಿಗೆ ಬೋರ್ವೆಲ್ ಹಾಕಿಸಿ, ನಳದ ಮೂಲಕ ಕುಡಿಯುವ ನೀರಿನ ಸೌಲಭ್ಯ ಒದಗಿಸಿಕೊಡಬೇಕೆಂದು ತಮ್ಮಲ್ಲಿ ವಿನಯಪೂರ್ವಕವಾಗಿ ಕೋರುತ್ತೇನೆ. ವಂದನೆಗಳೊಂದಿಗೆ,                                                              ತಮ್ಮ  ವಿಶ್ವಾಸಿ,                                                                                                     (ಸಂಗಮೇಶ) 
ಸ್ಥಳ : ಬಿಜಾಪುರ  
                                                                                                     

5) ನಿಮ್ಮನ್ನು ಧಾರವಾಡದ ಜವಾಹರ ನವೋದಯ ಶಾಲೆಯ ಚಿನ್ಮಯ ಜಿ.ಎಂ. ಎಂದು ಭಾವಿಸಿಕೊಂಡು ಎರಡು ದಿನ ರಜೆ ಕೋರಿ   ನಿಮ್ಮ ಶಾಲೆಯ ತರಗತಿ ಶಿಕ್ಷಕರಿಗೆ ಒಂದು ರಜಾ ಅರ್ಜಿ ಬರೆಯಿರಿ. 
ಇವರಿಂದ,                                          ದಿನಾಂಕ-20-04-2020
ಚಿನ್ಮಯ್ ಜಿ.ಎಂ.
8 ನೇ ತರಗತಿ,
ಎ ವಿಭಾಗ, ಜವಾಹರ ನವೋದಯ ಶಾಲೆ
ಧಾರವಾಡ.
 
ಇವರಿಗೆ,
ತರಗತಿ ಅಧ್ಯಾಪಕರು
ಜವಾಹರ ನವೋದಯ ಶಾಲೆ
ಧಾರವಾಡ.
 
ಮಾನ್ಯರೆ,  
 
ವಿಷಯ : ಎರಡು ದಿನ ರಜೆ ನೀಡುವಂತೆ ಕೋರಿ
ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ, ನನ್ನ ಅಕ್ಕನ ಮದುವೆಯು ದಿನಾಂಕ 22-04-2020 ಹಾಗೂ  23-04-2020 ರಂದು ಬೆಳಗಾವಿಯಲ್ಲಿ ನೆರವೇರುತ್ತಿದೆ. ಈ ಸಂಭ್ರಮದಲ್ಲಿ   ನಾನೂ ಅಗತ್ಯವಾಗಿ ಪಾಲ್ಗೊಳ್ಳಬೇಕಾಗಿದೆ. ಆದುದಗತಿ, ಎ ವಿಭಾಗ, ಜವಾಹರ ನವೋದಯ ಶಾಲೆ ಧಾರವಾಡ. ಇವರಿಗೆ, ತರಗತಿ ಅಧ್ಯಾಪಕರು ಜವಾಹರ ನವೋದಯ ಶಾಲೆ ಧಾರವಾಡ. ಮಾನ್ಯರೆ,  
 ನಮಸ್ಕಾರಗಳೊಂ ದಿಗೆ                                                       ತಮ್ಮವಿಧೇಯ   ವಿಧ್ಯಾರ್ಥಿನಿ                                                                                                         ಸಹಿ                                                                                            (ಚಿನ್ಮಯ್ಜಿ.ಎಂ.)                                                                                       

 6) ನಿಮ್ಮನ್ನು ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲ್ಲೂಕಿನ  ಗುಬ್ಬಿಹಳ್ಳಿಯ ಸಕರ್ಾರಿ ಪ್ರೌಢಶಾಲೆಯ ತನುಜ ಎಸ್. ಎಂ. ಎಂದು ಭಾವಿಸಿಕೊಡು ನಿಮ್ಮ ಊರಿನ ಬೀದಿ  ದೀಪಗಳನ್ನು ಸರಿಪಡಿಸುವಂತೆ ಕೋರಿ ನಿಮ್ಮ ಗ್ರಾಮಪಂಚಾಯಿತಿ ಅಧ್ಯಕ್ಷರಿಗೆ ಒಂದು ಪತ್ರ ಬರೆಯಿರಿ.

ಇವರಿಂದ,                             ದಿನಾಂಕ 10-01-2020
 ತನುಜ ಎಸ್. ಎಂ.
10 ನೇ ತರಗತಿ, ಸಕರ್ಾರಿ ಪ್ರೌಢಶಾಲೆ,
ಗುಬ್ಬಿಹಳ್ಳಿ, ಕಡೂರು ತಾಲ್ಲೂಕು, ಚಿಕ್ಕಮಗಳೂರು ಜಿಲ್ಲೆ.  
 
ಇವರಿಗೆ,
ಅಧ್ಯಕ್ಷರು,
ಗ್ರಾಮ ಪಂಚಾಯಿತಿ, ಗುಬ್ಬಿಹಳ್ಳಿ.
ಕಡೂರು ತಾಲ್ಲೂಕು, ಚಿಕ್ಕಮಗಳೂರು ಜಿಲ್ಲೆ.
ಮಾನ್ಯರೇ,  

ವಿಷಯ:
ನಮ್ಮ ಊರಿನ ಬೀದಿ ದೀಪಗಳನ್ನು ಸರಿಪುಗಳೂರು ಜಿಲ್ಲೆ.  ಇವರಿಗೆ, ಅಧ್ಯಕ್ಷರು, ಗ್ರಾಮ ಪಂಚಾಯಿತಿ, ಗುಬ್ಬಿಹಳ್ಳಿ. ಕಡೂರು ತಾಲ್ಲೂಕು, ಚಿಕ್ಕಮಗಳೂರು ಜಿಲ್ಲೆ. ಮಾನ್ಯರೇ,  ವಿಷಯ: ನಮ್ಮ ಊರಿನ ಬೀದಿ ದೀಪಗಳನ್ನು ಸರಿಪಂತೆ, ತಮ್ಮ ಗಮನಕ್ಕೆ ತಥರಬಯಸುವುದೇನೆಂದರೆ, ನಮ್ಮ ಊರಿನ ಬೀದಿ ದೀಪಗಳು ಕೆಲವು ದಿನಗಳಿಂದ ಕೆಟ್ಟುಹೋಗಿವೆ. ಇದರಿಂದ ರಸ್ತೆಯಲ್ಲಿ ರಾತ್ರಿ ಹೊತ್ತು ಮುದುಕರು, ಹೆಣ್ಣುಮಕ್ಕಳು ಹಾಗೂ ಮಕ್ಕಳು ಏಕಾಂಗಿಯಾಗಿ ಸಂಚರಿಸಲು ಭಯಪಡುವಂತಾಗಿದೆ. ಹೀಗಾಗಿ, ಜನಪರ ಕಾಳಜಿ ಹೊಂದಿರುವ ತಾವು ಈ ಕೂಡಲೇ ನಮ್ಮ ಗ್ರಾಮದ ಬೀದಿ ದೀಪಗಳನ್ನು ಸರಿಪಡಿಸಿ ಜನರಿಗಾಗುತ್ತಿರುವ ತೊಂದರೆಗಳನ್ನು ನಿವಾರಿಸಬೇಕೆಂದು ಗ್ರಾಮಸ್ಥರ ಪರವಾಗಿ ಮನವಿ ಮಾಡಿಕೊಳ್ಳುತ್ತೇನೆ.       

ವಂದನೆಗಳೊಂದಿಗೆ,                                                                 ತಮ್ಮ ವಿಶ್ವಾಸಿ,
                                                                                                (ತನುಜ ಎಸ್. ಎಂ.)  
You Might Like

Post a Comment

0 Comments