Recent Posts

ಬೋಧಿವೃಕ್ಷದ ಹಾಡು - ೧೦ ನೇ ತರಗತಿ ತಿಳಿ ಕನ್ನಡ ಪುಸ್ತಕದ ಪ್ರಶ್ನೋತ್ತರಗಳು

                                                
                                           
                                                         ಬೋಧಿವೃಕ್ಷದ ಹಾಡು                 
                                                                                                   - ಡಾ|| ಬಸವರಾಜ ಸಬರದ
 
ಕವಿ/ಲೇಖಕರ ಪರಿಚಯ
?  ಡಾ|| ಬಸವರಾಜ ಸಬರದ ಅವರು 1954 ರಲ್ಲಿ ಕೊಪ್ಪಳ ಜಿಲ್ಲೆಯ ಕುಕನೂರಿನಲ್ಲಿ ಜನಿಸಿದರು.
 ?  ಇವರು ಪದಕಟ್ಟಿ ಹಾಡೇನ, ನನ್ನವರ ಹಾಡು, ಹೋರಾಟ ಮತ್ತು ನೂರು ಹನಿಗಳು ಮುಂತಾದ ಕೃತಿಗಳನ್ನು ಬರೆದಿದ್ದಾರೆ.
?  ಶ್ರೀಯುತರಿಗೆ ದೇವರಾಜ ಬಹದ್ದೂರು ಪ್ರಶಸ್ತಿ, ಸಾಹಿತ್ಯಶ್ರೀ ಪ್ರಶಸ್ತಿ ಮತ್ತು ಕನರ್ಾಟಕ ನಾಟಕ ಅಕಾಡಮಿ ಪ್ರಶಸ್ತಿಗಳು ಲಭಿಸಿವೆ.
?  ಪ್ರಸ್ತುತ ಕವನವನ್ನು ಅವರ ಪದಕಟ್ಟಿ ಹಾಡೇನ ಕವನ ಸಂಕಲನದಿಂದ ಆರಿಸಲಾಗಿದೆ.                                                                    
                                           
                                           ಅಭ್ಯಾಸ

1.ಪದಗಳ ಅರ್ಥ :  

ಅಡವಿ - ಕಾಡು; ಅರಣ್ಯ; ಕಾನನ.                
 ಏಕಾಂಗಿ - ಒಬ್ಬಂಟಿ
ಕೋಡಿ - ಕೆರೆತುಂಬಿ ಹರಿಯುವುದು.             
  ಗುಟುಕು - ಹಕ್ಕಿಗಳು ತನ್ನ ಮರಿಯ ಬಾಯಿಗೆ ಆಹಾರ ನೀಡುವ ರೀತಿ.
ಗೂಢಾರ್ಥ - ಒಳ ಅರ್ಥ; ರಹಸ್ಯವಾದುದು.         
 ತೊರೆದು - ಬಿಟ್ಟುಬಿಡು
ಪರಿ - ರೀತಿ; ಸ್ಥಿತಿ.                          
   ಬೆಳ್ಳಿಚುಕ್ಕಿ - ಬೆಳಗ್ಗೆ ಆಕಾಶದಲ್ಲಿ ಕಾಣುವ ಶುಕ್ರಗ್ರಹ.
ಬೋಧಿವೃಕ್ಷ - ಅರಳಿಮರ; ಅಶ್ವತ್ಥವೃಕ್ಷ.              
ಮಕರಂದ - ಹೂವಿನ ರಸ
ಮಡದಿ - ಪತ್ನಿ; ಹೆಂಡತಿ.                       
ಮೋಹ - ಆಸೆ
ಹಿಂಡು - ಗುಂಪು; ಸಮೂಹ.                    
ಹುತ್ತ - ಹಾವಿನ ಗೂಡು; ಗೆದ್ದಲು ಮಣ್ಣಿನ ಗೂಡು.  

2. ಪ್ರಶ್ನೆಗಳು :
ಅ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.  

1. ಸಿದ್ಧಾರ್ಥ ಬುದ್ಧನಾದ ಪರಿಯನ್ನು ಕವಿ ಎಂತಹ ಕಥೆಯೆಂದು ಬಣ್ಣಿಸಿದ್ದಾರೆ?

ಯುದ್ಧ ಬಿಟ್ಟು ಪ್ರೀತಿ ಕೊಟ್ಟ ಕಥೆಯೆಂದು ಬಣ್ಣಿಸಿದ್ದಾರೆ.

2. ಸಿದ್ದಾರ್ಥ ಯಾರ ಹಾಗೂ ಯಾವುದರ ಮೋಹವನ್ನು ತೊರೆದನು?
ಪತ್ನಿ, ಮಗ ಹಾಗೂ ಅರಮನೆಯ ಮೋಹವನ್ನು ತೊರೆದನು.

3. ಕಾಡನ್ನು ಅಲೆದ ಸಿದ್ಧಾರ್ಥನಿಗೆ ಹೊಳೆದುದ್ದೇನು?
ನಾಡಿನರ್ಥ ಹೊಳೆಯಿತು.

4. ಸಿದ್ಧಾರ್ಥನು ಕಾಡಿನಿಂದ ನಾಡಿನತ್ತ ಏಕೆ ಹೊರಟನು?
ಜನರ ಪ್ರೀತಿಯನ್ನು ಹುಡುಕುತ್ತ ನಾಡಿನತ್ತ ಹೊರಟನು.

5. ಸಿದ್ಧಾರ್ಥನು ಕಂಡುಕೊಂಡ ಬದುಕಿನ ಗೂಡಾರ್ಥವೇನು?
ತಪಸ್ಸಿಗಿಂತ ಜೀವ ಪ್ರೀತಿ ದೊಡ್ಡದೆಂದು ಬದುಕಿನ ಗೂಡಾರ್ಥವನ್ನು ಕಂಡು ಕೊಂಡನು.

6. ಬೋಧಿವೃಕ್ಷದ ಹಾಡು ಯಾರ ಜೀವನವನ್ನು ಕುರಿತು ತಿಳಿಸುತ್ತದೆ?.

ಬುದ್ಧನ ಜೀವನವನ್ನು ಕುರಿತು ತಿಳಿಸುತ್ತದೆ.

7. ಬುದ್ಧನು ಅರಿತುಕೊಂಡ ಬದುಕಿನ ಸತ್ಯವೇನು?

ತಪಸ್ಸಿಗಿಂತ ಜೀವಪ್ರೀತಿ ದೊಡ್ಡದೆಂಬ ಬದುಕಿನ ಸತ್ಯವನ್ನು ಅರಿತುಕೊಂಡನು.

8. ಮಹಾ ಬೆಳಕು ಎಲ್ಲಿ ಕಂಡಿತು?
ಬೋಧಿವೃಕ್ಷದಲ್ಲಿ ಮಹಾಬೆಳಕು ಕಂಡಿತು.  

ಆ) ಈ ಪ್ರಶ್ನೆಗಳಿಗೆ ಮೂರು ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ

1. ಸಿದ್ಧಾರ್ಥನಿಗೆ ನಾಡಿನ ಅರ್ಥ ತಿಳಿದ ಸಂದರ್ಭವನ್ನು ಕವಿ ಏನೆಂದು ಬಣ್ಣಿಸಿದ್ಧಾರೆ?

ಕಾಡು ಕಾಡುಗಳಲ್ಲಿ ಅಲೆದ ಅವನಿಗೆ ನಾಡಿನ ಅರ್ಥ ಹೊಳೆಯುತ್ತದೆ. ಕೋಗಿಲೆಯ ಹಾಡು ದೂರದಿಂದ ಕೇಳಿ ಬರುತ್ತದೆ. ಬೆಳ್ಳಿಚುಕ್ಕಿ ಬಾನಿನಲ್ಲಿ  ಬೆಳಗುತ್ತದೆ.  ಆಗ  ಬೋಧಿವೃಕ್ಷದಲ್ಲಿ    ಮಹಾ  ಬೆಳಕೊಂದು  ಕಂಡುಬಂದು  ಬುದ್ಧನಿಗೆ  ಜ್ಞಾನೋದಯವಾಯಿತು  ಎಂದು ಕವಿ ಸಿದ್ಧಾರ್ಥನಿಗೆ ನಾಡಿನ ಅರ್ಥ ತಿಳಿದ ಸಂದರ್ಭವನ್ನು ಬಣ್ಣಿಸಿದ್ದಾರೆ.

2. ಸಿದ್ಧಾರ್ಥ ಬುದ್ಧನಾದ ಸಂದರ್ಭದಲ್ಲಿ ಕಾಡಿನ ತುಂಬ ಪ್ರೀತಿ ಹೇಗೆ ತುಂಬಿಕೊಂಡಿತು?
ಕಾಡಿನ  ತುಂಬ  ಪ್ರೀತಿಯ  ಹೊಳೆಯು  ಕೆರೆತುಂಬಿ  ಹರಿಯುವಂತೆ  ಕಂಡಿತು.  ಗೂಡಿನಲ್ಲಿ  ಹಕ್ಕಿಗಳ  ಹೊಸರಾಗ  ಕೇಳಿಸಿತು.  ಹೂವಿನ ಮಕರಂದವನ್ನು  ಸವಿಯಲು  ದುಂಬಿ  ಹೂವಿನಿಂದ  ಹೂವಿಗೆ  ಹಾರಾಡುತ್ತಿತ್ತು.  ಎಲ್ಲ  ಗಿಡವು  ಒಂದನ್ನೊಂದು  ಅಪ್ಪಿಕೊಂಡು ಕುಣಿಯುವಂತೆ ಕಾಣುತ್ತಿತ್ತು.  

ಇ) ಈ ಕೆಳಗಿನ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿಉತ್ತರಿಸಿರಿ

1. ಸಿದ್ಧಾರ್ಥನು ಬುದ್ಧನಾದ ಪರಿ ಹೇಗೆ?

ಸಿದ್ಧಾರ್ಥ ಯುದ್ಧದ ದುರಂತವನ್ನು ನೋಡಿ ದುಃಖಪಡುತ್ತಾನೆ. ಅದರಿಂದ ನೊಂದ ಅವನು ಏಕಾಂಗಿಯಾಗಿ ಮಧ್ಯರಾತ್ರಿಯಲ್ಲಿ ವೀರನಂತೆ ಎದ್ದು ತನ್ನ ಪತ್ನಿ, ಮಗನನ್ನು ಬಿಟ್ಟು ಸಿಂಹಾಸನದ ಮೋಹವನ್ನು ತೊರೆದು, ಯಾವುದೇ ಗೊತ್ತು ಗುರಿ ಇಲ್ಲದೆ ಕತ್ತಲಿನಲ್ಲಿ ಕಾಡಿಗೆ ಹೊರಟನು. ಅವನು ಕಾಡಿನಿಂದ ಕಾಡಿಗೆ ಅಲೆದ ನಂತರ ಅವನಿಗೆ ನಾಡಿನ ಅರ್ಥ ಹೊಳೆಯಿತು. ಅವನು ಬೋಧಿವೃಕ್ಷದ ಅಡಿಯಲ್ಲಿ ತಪಸ್ಸಿಗೆ ಕುಳಿತನು. ತಪಸ್ಸನ್ನು ಮಾಡುವಾಗ ಅವನಿಗೆ ದೂರದಿಂದ ಬೆಳಕು ಕಂಡಿತು. ಅವನು ಕಾಡಿನಲ್ಲಿ ಹಕ್ಕಿಯೊಂದು ತನ್ನಮರಿಗೆ ನೀರನ್ನು ಕೊಟ್ಟು ಹಾರಿ ಹೋಗುವುದನ್ನು ಕಂಡನು. ಹುತ್ತದಿಂದ ಇರುವೆ ಗುಂಪು ಸಾಲಾಗಿ ಹೋಗುತ್ತಿದ್ದವು. ಕಾಡು ತುಂಬ ಪ್ರೀತಿಯ ಹೊಳೆಯು ಹರಿಯುತ್ತಿತ್ತು. ಅದನ್ನೇಲ್ಲಾ ನೋಡಿದ ಸಿದ್ಧಾರ್ಥನ ಮನಸ್ಸು ಕರುಗಿತು. ಕಾಡನ್ನು ಬಿಟ್ಟು ನಾಡಿಗೆ ಹೊರಟನು. ಪ್ರೀತಿಯನ್ನು ಹುಡಿಕಿಕೊಂಡು ಜನರ ಬಳಿ ಹೋದನು. ಅವನಿಗೆ ತಪಸ್ಸಿಗಿಂತ ಜೀವ ಪ್ರೀತಿಯೇ ದೊಡ್ಡದು ಎಂದು ಅರಿವಾಯಿತು. ಹೀಗೆ ಸಿದ್ಧಾರ್ಥನು ಬುದ್ದನಾದನು.

2. ಸಿದ್ಧಾರ್ಥ ಬುದ್ಧನಾದ ಸಂದರ್ಭದಲ್ಲಿ ಪ್ರಕೃತಿ ಕವಿಗೆ ಹೇಗೆ ಕಂಡು ಬಂದಿತು?

ಮರವು ಬಳ್ಳಿಯ ಹೂವನ್ನು ಮುಡಿದು ಅಪ್ಪಿಕೊಂಡಂತೆ ನಗುತ್ತಿತ್ತು. ಹಕ್ಕಿಯು ಸುಂದರವಾಗಿ ಹಾರಾಡುತ್ತಿತ್ತು. ಇರುವೆಗಳು ಹುತ್ತದಿಂದ ಹೊರಗೆ ಬಂದು ಗುಂಪಾಗಿ ಸಾಲುಗಟ್ಟಿ ನಡೆಯುತ್ತಿತ್ತು. ಬೆಳ್ಳಕ್ಕಿಯು ಗುಂಪಾಗಿ ಬಾನಿಗೆ ಏಣಿಯನ್ನು ಹಾಕುವಂತೆ ಕಂಡವು. ಕಾಡು ತುಂಬ ಪ್ರೀತಿಯ ಹೊಳೆಯು ಕೆರೆ ತುಂಬಿ ಹರಿಯುವಂತೆ ಕಾಣುತ್ತಿತ್ತು. ಗೂಡಿನಲ್ಲಿ ಹೊಸರಾಗ ಕೇಳಿಬಂದಿತು. ದುಂಬಿಯ ಮಕರಂದವನ್ನು ಸವಿಯನ್ನು ಸವಿಯಲೆಂದೆ ಹೂವಿನಿಂದ ಹೂವಿಗೆ ಹಾರುತ್ತಿತ್ತು. ಎಲ್ಲ ಗಿಡವೂ ಒಂದನ್ನೊಂದು ಅಪ್ಪಿಕೊಂಡು ಕುಣಿಯುವಂತೆ ಕಂಡಿತು.  

ಈ) ಸಂದರ್ಭದೊಡನೆ ವಿವರಿಸಿ
 
1. ಗೊತ್ತು ಗುರಿ ಇಲ್ಲದೆ ಕತ್ತಲಲ್ಲಿ ನಡೆದನು
ಈ  ವಾಕ್ಯವನ್ನು  ಡಾ||  ಬಸವರಾಜ  ಸಬರದ  ಅವರು  ಬರೆದಿರುವ  ಪದಕಟ್ಟಿ  ಹಾಡೇನ  ಎಂಬ  ಕೃತಿಯಿಂದ  ಆಯ್ದ  ಭೋಧಿವೃಕ್ಷದ ಹಾಡು ಎಂಬ ಪದ್ಯದಿಂದ ಆರಿಸಲಾಗಿದೆ.
ಈ  ವಾಕ್ಯವನ್ನು  ಕವಿ,  ಸಿದ್ಧಾರ್ಥನು  ತನ್ನ  ಪತ್ನಿ,  ಮಗ  ಅರಮನೆಯನ್ನು  ತೊರೆಯುವ  ಸಂದರ್ಭದಲ್ಲಿ  ಹೇಳಿದ್ದಾರೆ.  ಯುದ್ಧ  ಬಿಟ್ಟು ಪ್ರೀತಿಯ  ಮಾರ್ಗವನ್ನು  ಹುಡುಕುವ  ಸಲುವಾಗಿ  ತನ್ನ  ಪತ್ನಿ,  ಮಗ,  ಅರಮನೆಯ  ಮೋಹವನ್ನು  ತೊರೆದು  ಯಾವ  ಗೊತ್ತು  ಗುರಿ ಇಲ್ಲದೆ ಏಕಾಂಗಿಯಾಗಿ ಮಧ್ಯರಾತ್ರಿ ವೀರನಂತೆ ಕಾಡಿಗೆ ಹೊಗುತ್ತಾನೆ ಎಂದು ಕವಿ ಹೇಳುತ್ತಾರೆ.

2. ಕಾಡ ತುಂಬಾ ಪ್ರೀತಿ ಹೊಳೆಯು ಕೋಡಿಯಂತೆ ಹರಿಯಿತು.
ಈ  ವಾಕ್ಯವನ್ನು  ಡಾ||  ಬಸವರಾಜ  ಸಬರದ  ಅವರು  ಬರೆದಿರುವ  ಪದಕಟ್ಟಿ  ಹಾಡೇನ  ಎಂಬ  ಕೃತಿಯಿಂದ  ಆಯ್ದ  ಭೋಧಿವೃಕ್ಷದ ಹಾಡು ಎಂಬ ಪದ್ಯದಿಂದ ಆರಿಸಲಾಗಿದೆ.
ಈ  ವಾಕ್ಯವನ್ನು  ಸಿದ್ಧಾರ್ಥನು  ಬೋಧಿವೃಕ್ಷದ  ಕೆಳಗೆ  ತಪಸ್ಸು  ಮಾಡುವಾಗ  ಪ್ರಕೃತಿಯ  ಸೌಂದರ್ಯವನ್ನು  ಕಾಣುವ  ಸಂದರ್ಭದಲ್ಲಿ ಹೇಳಿದ್ದಾರೆ.  ಕಾಡಿನಲ್ಲಿರುವ  ಪ್ರಕೃತಿಯ  ಸೌಂದರ್ಯಗಳು  ಅವನ  ಮನಸ್ಸನ್ನು  ಸೆಳೆಯಿತು.  ಹಕ್ಕಿಯೊಂದು  ತನ್ನ  ಮರಿಗೆ  ಗುಟುಕು ನೀರನ್ನು  ಕುಡಿಸಿ  ಸಂತೋಷದಿಂದ  ಆಕಾಶದ  ಎತ್ತರಕ್ಕೆ  ಹಾರಿ  ಹೋಯಿತು.  ಇದನ್ನು  ಕಂಡ  ಸಿದ್ಧಾರ್ಥ  ಕಾಡು  ತುಂಬ  ಪ್ರೀತಿಯ ಹೊಳೆಯು ಕೋಡಿಯಂತೆ ಹರಿಯಿತು ಎಂದು ಕವಿ ಹೇಳಿದರು.

3. ಪ್ರೀತಿಯನ್ನು ಹುಡುಕಿಕೊಂಡು ಜನರ ಕಡೆಗೆ ಬಂದನು.
ಈ  ವಾಕ್ಯವನ್ನು  ಡಾ||  ಬಸವರಾಜ  ಸಬರದ  ಅವರು  ಬರೆದಿರುವ  ಪದಕಟ್ಟಿ  ಹಾಡೇನ  ಎಂಬ  ಕೃತಿಯಿಂದ  ಆಯ್ದ  ಭೋಧಿವೃಕ್ಷದ ಹಾಡು ಎಂಬ ಪದ್ಯದಿಂದ ಆರಿಸಲಾಗಿದೆ.
ಈ  ಮಾತನ್ನು  ಬುದ್ಧನು  ಜ್ಞಾನೋದಯ  ಆದ  ನಂತರ  ಹೇಳಿದ್ದಾರೆ.  ಅವನು  ಕಾಡಿನಿಂದ  ಎದ್ದು  ನಾಡಿನ  ಕಡೆಗೆ  ಬಂದನು.  ತಪಸ್ಸು ಮಾಡುವುದಕ್ಕಿಂತ ಜೀವನದ ಪ್ರೀತಿ ದೊಡ್ಡದು ಎಂದು ತಿಳಿದು ಬದುಕಿನ ಗೂಡಾರ್ಥವನ್ನು ಅರಿತು ಬುದ್ಧನಾಗಿ ಬಂದನು. 
You Might Like

Post a Comment

0 Comments