Recent Posts

ಜಾತ್ರೆ - ೩ನೇ ತರಗತಿ ಸವಿ ಕನ್ನಡ ಪುಸ್ತಕದ ಪ್ರಶ್ನೋತ್ತರಗಳು


 ಜಾತ್ರೆ

ಅ ) ಒಂದೊಂದು ವಾಕ್ಯದಲ್ಲಿ ಉತ್ತರಿಸು .

1. ರಥಬೀದಿ ಹೇಗೆ ಕಂಗೊಳಿಸುತ್ತಿತ್ತು?
ಉತ್ತರ : ರಥಬೀದಿಯು ತಳಿರು ತೋರಣ ಹಾಗೂ ಬಣ್ಣದ ಹೂಗಳ ಅಲಂಕಾರದಿಂದ ಕಂಗೊಳಿಸುತ್ತಿತ್ತು.

2. ಕಂಸಾಳೆ ಎಂದರೇನು ?
ಉತ್ತರ : ಕಂಚಿನ ತಾಳಕ್ಕೆ ಕಂಸಾಳೆ ಎನ್ನುವರು .

3 . ದೇವರ ಗುಡ್ಡರು ಎಂದು ಯಾರನ್ನು ಈ ಕರೆಯುತ್ತಾರೆ ?
ಉತ್ತರ : ಕಂಸಾಳೆ ನೃತ್ಯದವರನ್ನು , ಅವರು ಮಲೆಯ ಮಹದೇಶ್ವರನ ಭಕ್ತರಾದ್ದರಿಂದ ಅವರನ್ನು ದೇವರಗುಡ್ಡರು ಎಂದು ಕರೆಯುತ್ತಾರೆ .

4. ಡೊಳ್ಳು ಎಂದರೇನು ?
ಉತ್ತರ : ಡೊಳ್ಳು ಎಂದರೆ ಅದು ಒಂದು ಚರ್ಮ ವಾದ್ಯ .

5. ಡೊಳ್ಳು ಕುಣಿತದವರು ಯಾರ ಭಕ್ತರು ?
ಉತ್ತರ : ಡೊಳ್ಳು ಕುಣಿತದವರು ಬೀರದೇವರ ಭಕ್ತರು .

6. ರಂಗಸ್ಥಳ ಎಂದರೇನು ?
ಉತ್ತರ : ಬಣ್ಣದ ನಾಲ್ಕು ಕಂಬಗಳಿಂದ ಸಿಂಗರಿಸಿರುವ ಆ ಎತ್ತರವಾದ ಜಾಗಕ್ಕೆ ರಂಗಸ್ಥಳ ಎನ್ನುವರು.

7. ಯಾರನ್ನು ಭಾಗವತರೆಂದು ಕರೆಯುತ್ತಾರೆ?
ಉತ್ತರ : ಜಾಗಟೆ ಹಿಡಿದು ದನಿ ಎತ್ತಿ ಹಾಡುತ್ತಿರುವವರನ್ನು ಭಾಗವತರೆಂದು ಕರೆಯುತ್ತಾರೆ .

ಆ ) ಎರಡು – ಮೂರು ವಾಕ್ಯಗಳಲ್ಲಿ ಉತ್ತರಿಸು .

1. ಬೀಸು ಕಂಸಾಳೆ ಎಂದೇರನು ?

ಉತ್ತರ : ಮಹದೇಶ್ವರನನ್ನು ಕುರಿತು ಹಾಡುತ್ತಾ ಬಾಗಿ , ಬಳುಕಿ , ಕುಳಿತು , ನಿಂತು ಲಯವಾಗಿ ಕಂಸಾಳೆಯನ್ನು ತಟ್ಟುತ್ತಾ ಮತ್ತು ಕಂಸಾಳೆಯನ್ನು ಬೀಸುತ್ತಾ ನೃತ್ಯ ಮಾಡುವುದಕ್ಕೆ ಬೀಸು ಕಂಸಾಳೆ ಎನ್ನುವರು .

2. ಕಂಸಾಳೆಯವರು ಹಾಡುತ್ತಾ ಹೇಗೆ ನರ್ತಿಸುತ್ತಾರೆ ?
ಉತ್ತರ : ಕಂಸಾಳೆಯವರು ಮಹದೇಶ್ವರನನ್ನು ಕುರಿತು ಹಾಡುತ್ತಾ ಬಾಗಿ , ಬಳುಕಿ , ಕುಳಿತು , ನಿಂತು ಲಯವಾಗಿ ಕಂಸಾಳೆಯನ್ನು ತಟ್ಟುತ್ತಾ ನರ್ತಿಸುತ್ತಾರೆ .

3. ಡೊಳ್ಳು ಕುಣಿತವನ್ನು ಯಾವ ಸಂದರ್ಭದಲ್ಲಿ ಮಾಡುತ್ತಾರೆ ?
ಉತ್ತರ : ಡೊಳ್ಳು ಕುಣಿತವನ್ನು ಜಾತ್ರೆ , ಉತ್ಸವ, ಕಲಾಮೇಳ, ಹಬ್ಬ ಮುಂತಾದ ಸಂದರ್ಭಗಳಲ್ಲಿ ಮಾಡುತ್ತಾರೆ.

4. ಯಕ್ಷಗಾನ ಬಯಲಾಟ ಎಂದರೇನು?
ಉತ್ತರ : ಪುರಾಣ ಕಥೆಗಳನ್ನು ವೇಷ , ಕುಣಿತ , ಮಾತು ಹಾಗೂ ಹಿಮ್ಮೇಳದೊಂದಿಗೆ ಆಡಿ ತೋರಿಸುವ ಕಲೆಗೆ ಯಕ್ಷಗಾನ ಬಯಲಾಟ ಎನ್ನುವರು .

5. ಯಕ್ಷಗಾನ ಬಯಲಾಟದ ಮುಖ್ಯ ಅಂಗಗಳಾವುವು ?
ಉತ್ತರ : ಯಕ್ಷಗಾನ ಬಯಲಾಟದಲ್ಲಿ ರಂಗಸ್ಥಳ , ಹಿಮ್ಮೇಳ , ಮುಮ್ಮೇಳ ಮತ್ತು ಪ್ರಸಂಗ ಇವುಗಳೇ ಮುಖ್ಯ ಅಂಗಗಳು .

ಇ ) ಈ ವಾಕ್ಯಗಳಲ್ಲಿ ಬಿಟ್ಟಿರುವ ಶಬ್ದಗಳನ್ನು ತುಂಬು .

1. ರಾಜು ಮತ್ತು ಕಮಲ ………… ಜೊತೆ ಜಾತ್ರೆಗೆ ಹೋದರು .
ಉತ್ತರ : ತಾತನ

2. ಜಾತ್ರೆಯಲ್ಲಿ ನೋಡಿದಲ್ಲೆಲ್ಲಾ …………
ಉತ್ತರ : ಜನಸಾಗರವೇ

3. ಯಕ್ಷಗಾನ ಬಯಲಾಟದ ಅಂದಿನ ಪ್ರಸಂಗ …………
ಉತ್ತರ : ಶ್ರೀದೇವಿ ಮಹಾತ್ಮ

4 ಜಾತ್ರೆಯಲ್ಲಿ ಭಕ್ತರು ………… ಎಳೆಯುತ್ತಿದ್ದರು .
ಉತ್ತರ : ರಥ

ಹೊಂದಿಸಿ ಬರೆಯಿರಿ
ಅ                                 ಬ                       ಉತ್ತರ
ಡೊಳ್ಳು                  ತಾಳವಾದ್ಯ           ಚರ್ಮವಾದ್ಯ
ಕಂಸ                       ಚಂಡೆ                   ತಾಳವಾದ್ಯ
ಯಕ್ಷಗಾನ           ಚರ್ಮವಾದ್ಯ             ಚಂಡೆ

ಉ ) ಈ ಮಾತುಗಳನ್ನು ಯಾರು , ಯಾರಿಗೆ ಹೇಳಿದರು ? ಬರೆ .

1. ‘ ಇವರು ಮಲೆಯ ಮಹದೇಶ್ವರನ ಭಕ್ತರಾದ ದೇವರ ಗುಡ್ಡರು .
‘ ಉತ್ತರ : ಈ ಮಾತನ್ನು ತಾತನು ರಾಜುವಿಗೆ ಹೇಳಿದನು

2. ‘ ತಾತ ಅದೇನದು ಅಲ್ಲಿ ಕಾಣುತ್ತಿರುವುದುʼ
ಉತ್ತರ : ಈ ಮಾತನ್ನು ರಾಜು , ತಾತನಿಗೆ ಕೇಳುವನು .

ಅ ) ಈ ಶಬ್ದಗಳನ್ನು ಬಳಸಿ ಆರ್ಥಪೂರ್ಣ ವಾಕ್ಯ ರಚಿಸು.

1. ಕುತೂಹಲ: ಜಾತ್ರೆಯಲ್ಲಿ ನೃತ್ಯ ಮಾಡುವವರನ್ನು ಕಂಡು ರಾಜು ಕುತೂಹಲದಿಂದ ಅವರು ಯಾರು? ಎಂದು

2. ಬಾರಿಸು : ಜಾತ್ರೆಯಲ್ಲಿ ಡಬ್ ಡಬ್ ಸದ್ದು ಮಾಡುತ್ತಾ ಡೊಳ್ಳು ಬಾರಿಸುತ್ತಿದ್ದರು .

ಭಾಷಾಭ್ಯಾಸ

ಅ ) ಇಲ್ಲಿ ಕೊಟ್ಟಿರುವ ವಿವರವು ನಡೆದು ಹೋಗಿರುವ ಘಟನೆಯದ್ದಾಗಿದೆ . ಅಡಿಗರೆ ಎಳೆದಿರುವ ಪದಗಳನ್ನು ಮಾತ್ರ ಬದಲಿಸಿ ಮುಂದೆ ನಡೆಯಲಿರುವ ಘಟನೆಯಂತ ಬದಲಿಸಿ ಬರೆ .
ರಾಜು ಓಟದ ಸ್ಪರ್ಧೆಯಲ್ಲಿ ಓಡಿದನು . ಸ್ಪರ್ಧೆಯಲ್ಲಿ ಗೆದ್ದನು . ಅವನಿಗೆ ಬಹುಮಾನ ನೀಡಿದರು ರಾಜು ಬಹುಮಾನ ಪಡೆದುಕೊಂಡನು . ಜನರು ಚಪ್ಪಾಳೆ ತಟ್ಟಿದರು . ರಾಜು ಸಂತೋಷದಿಂದ ನಕ್ಕನು .
ರಾಜು ಓಟದ ಸ್ಪರ್ಧೆಯಲ್ಲಿ ಓಡುವನು , ಸ್ಪರ್ಧೆಯಲ್ಲಿ ಗೆಲ್ಲುವನು . ಅವನಿಗೆ ಬಹುಮಾನ ನೀಡುವರು . ರಾಜು ಬಹುಮಾನ ಪಡೆದುಕೊಳ್ಳುವನು . ಜನರು ಚಪ್ಪಾಳೆ ತಟ್ಟುವರು . ರಾಜು ಸಂತೋಷದಿಂದ ನಗುವನು .

You Might Like

Post a Comment

0 Comments