Recent Posts

ಅನಾರೋಗ್ಯದ ಸಿಂಹ - ೩ನೇ ತರಗತಿ ಸವಿ ಕನ್ನಡ ಪುಸ್ತಕದ ಪ್ರಶ್ನೋತ್ತರಗಳು

ಅನಾರೋಗ್ಯದ ಸಿಂಹ

ಅ ) ಒಂದು ಪದ / ವಾಕ್ಯದಲ್ಲಿ ಉತ್ತರಿಸು .


1. ಕಾಡಿನ ರಾಜ ಸಿಂಹಕ್ಕೆ ಏನಾಯಿತು ?
ಉತ್ತರ : ಕಾಡಿನ ರಾಜ ಸಿಂಹಕ್ಕೆ ಅನ್ನವೂ ಸೇರದೆ , ನೀರೂ ಸೇರದೇ ಅನಾರೋಗ್ಯ ಉಂಟಾಯಿತು .

2. ಡಾ . ಜೀಬ್ರಾ ಕಾಡಿನ ರಾಜ ಸಿಂಹವನ್ನು ಪರೀಕ್ಷಿಸಿ ಏನೆಂದು ಹೇಳಿತು ?
ಉತ್ತರ : ಡಾ . ಜೀಬ್ರಾ ಕಾಡಿನ ರಾಜ ಸಿಹವನ್ನು ಪರೀಕ್ಷಿಸಿ ‘ ದುರ್ವಾಸನೆಯ ಉಸಿರಿದೆ ‘ ಎಂದು ಹೇಳಿತು.

3. ಡಾ . ಹೈನಾ ಕಾಡಿನ ರಾಜ ಸಿಂಹವನ್ನು ಪರೀಕ್ಷಿಸಿ ಏನೆಂದು ಹೇಳಿತು ?
ಉತ್ತರ : ಡಾ.ಹೈನಾ ಕಾಡಿನ ರಾಜ ಸಿಂಹವನ್ನು ಪರೀಕ್ಷಿಸಿ ‘ ಎಂತಹ ಸುವಾಸನೆ ನಿಮ್ಮ ಉಸಿರಲಿ ‘ ಎಂದು ಹೇಳಿತು .

4. ಜಾಣವೈದ್ಯ ನರಿ ಕಾಡಿನ ರಾಜ ಸಿಂಹವನ್ನು ಪರೀಕ್ಷಿಸಿ ಏನೆಂದು ಹೇಳಿತು ?
ಉತ್ತರ : ಜಾಣವೈದ್ಯ ನರಿ ಕಾಡಿನ ರಾಜ ಸಿಂಹವನ್ನು ಪರೀಕ್ಷಿಸಿ ‘ ಶೀತದಿ ಮೂಗು ಕಟ್ಟಿದೆ ಒಡೆಯ ವಾಸನೆ ಏನು ತಿಳಿಯದು ನನಗೆ ‘ ಎಂದು ಹೇಳಿತು .

5. ಈ ಪದ್ಯದ ನೀತಿಯೇನು ? ‘
ಉಪಾಯ ಬಲ್ಲವನಿಗೆ ಅಪಾಯವಿಲ್ಲ ‘ ಎಂಬ ಪದ್ಯದ ನೀತಿಯಾಗಿದೆ .

ಆ ) ಎರಡು , ಮೂರು ವಾಕ್ಯಗಳಲ್ಲಿ ಉತ್ತರಿಸು .

1. ಕಾಡಿನ ರಾಜ ಸಿಂಹವು ವ್ಯಥೆ ಪಡಲು ಕಾರಣವೇನು ?
ಉತ್ತರ : ಕಾಡಿನ ರಾಜ ಸಿಂಹವು ವ್ಯಥೆಪಡಲು ಕಾರಣವೇನೆಂದರೆ – ಅದಕ್ಕೆ ಊಟಮಾಡಲು ಅನ್ನವು ಸೇರದಂತಾಯಿತು ಹಾಗೂ ನೀರೂ ಕೂಡ ಸೇರದಂತಾಯಿತು . ಹೀಗಾಗಿ ಸಿಂಹವು ಅನಾರೋಗ್ಯದಿಂದ ಬಹಳಷ್ಟು ನೋವು ಪಟ್ಟಿತು .

2. ಡಾ . ಜೀಬ್ರಾ ಕಾಯಿಲೆ ಬಿದ್ದ ಕಾಡಿನ ರಾಜ ಸಿಂಹವನ್ನು ಹೇಗೆ ಪರೀಕ್ಷಿಸಿತು ? ಸಿಂಹವು ಏನು ಮಾಡಿತು ?
ಉತ್ತರ : ಡಾ.ಜೀಬ್ರಾ ಕಾಯಿಲೆ ಬಿದ್ದ ಕಾಡಿನ ರಾಜ ಸಿಂಹವನ್ನು ಪರೀಕ್ಷಿಸಿ ಬಾಯನ್ನು ತೆಗೆಯಲು ಹೇಳಿತು . ಸಿಂಹವು ಬಾಯನ್ನು ತೆರೆದು ತೋರಿಸಿದ ನಂತರ ‘ ದುರ್ವಾಸನೆಯ ಉಸಿರಿದೆ ‘ ಎಂದು ಹೇಳಿತು . ಆಗ ಸಿಂಹಕ್ಕೆ ಕೋಪವು ಬಂದು ಹೀಗೆ ಹೇಳಲು ಎಂಥ ಧೈರ್ಯ ನಿನಗೆ ಎಂದು ಗರ್ಜಿಸಿತು . ಸತ್ಯವನ್ನು ಹೇಳಿದ ವೈದ್ಯನನ್ನು ಬೈದು ಹೊರಗಡೆ ಓಡಿಸಿತು .

3. ಡಾ . ಹೈನಾ ಕಾಯಿಲೆ ಬಿದ್ದ ಕಾಡಿನ ರಾಜ ಸಿಂಹವನ್ನು ಹೇಗೆ ಪರೀಕ್ಷಿಸಿತು? ಸಿಂಹವು ಏನು ಮಾಡಿತು ?
ಉತ್ತರ : ಡಾ . ಹೈನಾ ಕಾಯಿಲೆ ಬಿದ್ದ ಕಾಡಿನ ರಾಜ ಸಿಂಹದ ನಾಡಿಯನ್ನು ಹಿಡಿದು ನೋಡಿ ಪರೀಕ್ಷಿಸಿತು . ನಂತರ ಸಿಂಹಕ್ಕೆ ಬಾಯಿಯನ್ನು ತೆರೆಯಲು ಹೇಳಿತು . ‘ ಎಂತಹ ಸುವಾಸನೆ ನಿಮ್ಮ ಉಸಿರಲಿ ‘ ಎನ್ನುತ್ತ ಅದರ ಮುಖವನ್ನು ನೋಡಿತು . ಆಗ ಸಿಂಹವು ಕೋಪಗೊಂಡು ನನ್ನ ಎದುರಿನಲ್ಲೇ ಪ್ರಶಂಸೆ ಮಾಡುತ್ತಿಯಾ ಎಂದು ಹೇಳುತ್ತದೆ . ಇರುವ ಸತ್ಯವ ಹೇಳಲು ಹೆದರಿದ ಡಾ . ಹೈನಾಳನ್ನು ಹೊರ ಹಾಕಿಸಿತು .

4. ಜಾಣ ವೈದ್ಯ ನರಿ ಕಾಯಿಲೆ ಬಿದ್ದ ಕಾಡಿನ ರಾಜ ಸಿಂಹವನ್ನು ಹೇಗೇ ಪರೀಕ್ಷಿಸಿತು ?
ವೈದ್ಯ ನರಿ ಚಕ್ರವರ್ತಿಯಾದ ಸಿಂಹವನ್ನು ಉಪಚರಿಸುತ್ತ ಬಾಯನ್ನು ತೆಗೆಯಲು ವಿನಂತಿಸಿತು . ಆಗ ಚಕ್ರವರ್ತಿಯಾದ ಸಿಂಹವು ಉಸಿರನು ಕುರಿತು ಏನು ಹೇಳುವಿರಿ ? ‘ ಎಂದು ಕೇಳುತ್ತಾ ತನ್ನ ಬಾಯನ್ನು ತೆರೆಯಿತು . ಆಗ ಬುದ್ಧಿವಂತ ನರಿಯು ‘ ಶೀತದ ಮೂಗು ಕಟ್ಟಿದೆ ಒಡೆಯ ವಾಸನೆ ಏನು ನನಗೆ ತಿಳಿಯದು ” ಎಂದು ತಕ್ಷಣ ಹೇಳುತ್ತಾ ಕ್ಷಮೆಯನ್ನು ಕೇಳಿತು . ಬುದ್ಧಿವಂತ ನರಿಯು ಸಿಂಹದ ಕೋಪಕ್ಕೆ ಬಲಿಯಾಗದೆ ಪಾರಾಯಿತು .

ಇ ) ಸಮಾನಾರ್ಥಕ ಪದಗಳನ್ನು
ಅಡವಿ = ಕಾಡು , ಅರಣ್ಯ ,
ಕಾಯಿಲೆ = ರೋಗ , ವ್ಯಾಧಿ ,
ದುರ್ವಾಸನೆ = ದುರ್ನಾತ ,

ಸಾಮರ್ಥ್ಯಧಾರಿತ ಚಟುವಟಿಕೆ

ಅ ) ಈ ಒಗಟುಗಳನ್ನು ಬಿಡಿಸಿ ಸರಿ ಉತ್ತರವನ್ನು ಆವರಣದಿಂದ ಆರಿಸಿ ಬರೆ .

[ ನಾಲಗೆ , ಮೀನು , ಕಮಲ ]

1. ನೀರಲೇ ಹುಟ್ಟುತ್ತದೆ . ನೀರಲೇ ಬೆಳೆಯುತ್ತದೆ . ನೀರಲೇ ಸಾಯುತ್ತದೆ .
ಉತ್ತರ : [ ಕಮಲ ]

2. ‘ ನಾಡಿನಲ್ಲಿ ಮೊದಲಿರುವ ‘ ಕೆಲಸ’ದಲ್ಲಿ ನಡುವಿರುವ ‘ ಕೊಡುಗೆ’ಯಲ್ಲಿ ಕಡೆಗಿರುವೆ ನುಡಿ ನಾ ಯಾರೆಂದು ?
ಉತ್ತರ : [ ನಾಲಗೆ ]

3. ನೀರಿನಲ್ಲಿದ್ದರೆ ಗಿಲಿಗಿಲಿ ನೀರ ಹೊರಗಿದ್ದರೆ ವಿಲಿವಿಲಿ ಕಡಲ ಕಾಗೆಗೆ ನಾ ಮಿರಿಮಿರಿ.
ಉತ್ತರ : ಮೀನು
You Might Like

Post a Comment

0 Comments