Recent Posts

ಕೆಮ್ಮನೆ ಮೀಸೆವೊತ್ತೆನೇ - ೧೦ನೇ ತರಗತಿ ಸಿರಿ ಕನ್ನಡ ಪುಸ್ತಕದ ಪ್ರಶ್ನೋತ್ತರಗಳು


 
 ಕೆಮ್ಮನೆ ಮೀಸೆವೊತ್ತೆನೇ

ಕವಿ ಪರಿಚಯ : ಪಂಪ ಮಹಾಕವಿ
ಪಂಪ ಮಹಾಕವಿ ( ಕ್ರಿ.ಶ. ೯೪೧ ) ವೆಂಗಿ ಮಂಡಲದ ವೆಂಗಿಪಳು ಎಂಬ ಅಗ್ರಹಾರದವನು . ಚಾಲುಕ್ಯರ ಅರಿಕೇಸರಿಯ ಆಸ್ಥಾನಕವಿಯಾಗಿದ್ದ ಪಂಪ ಆದಿಪುರಾಣ ಮತ್ತು ವಿಕ್ರಮಾರ್ಜುನ ವಿಜಯಂ ಎಂಬ ಮಹಾಕಾವ್ಯಗಳ ಕರ್ತೃ ವಿಕ್ರಮಾರ್ಜುನ ವಿಜಯ೦ ಕಾವ್ಯಕ್ಕೆ ಪಂಪಭಾರತ ಎಂಬ ಮತ್ತೊಂದು ಹೆಸರಿದೆ .
ಕಲಿಯೂ ಕವಿಯೂ ಆಗಿದ್ದ ಪಂಪ ರತ್ನತ್ರಯರಲ್ಲಿ ಒಬ್ಬ ಸರಸ್ವತಿ ಮಣಿಹಾರ , ಸಂಸಾರ ಸಾರೋದಯ , ಕವಿತಾಗುಣಾರ್ಣವ ಎಂಬ ಬಿರುದುಗಳನ್ನು ಪಡೆದಿದ್ದ ಕವಿ . [ ಪಂಪಮಹಾಕವಿ ವಿರಚಿತ ವಿಕ್ರಮಾರ್ಜುನ ವಿಜಯಂ ಕಾವ್ಯವನ್ನು ಡಿ.ಎಲ್ . ನರಸಿಂಹಾಚಾರ್ಯರು ಸಂಪಾದಿಸಿದ್ದು ಅದರ ದ್ವಿತೀಯಾಶ್ವಾಸದಿಂದ ‘ ಕೆಮ್ಮನೆ ಮೀಸೆವೊತ್ತನೇ ‘ ಪದ್ಯಭಾಗವನ್ನು ಆಯ್ಕೆ ಮಾಡಲಾಗಿದೆ .

ಅ ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ .
 
೧. ದ್ರೋಣನು ಪರಶುರಾಮರಲ್ಲಿಗೆ ಏಕೆ ಬಂದನು ?
ಉ : ದ್ರೋಣನು ಪರಶುರಾಮರಲ್ಲಿಗೆ ದ್ರವ್ಯವನ್ನು ( ಹಣವನ್ನು ಬೇಡುವುದಕ್ಕಾಗಿ ಬಂದನು .

೨. ದ್ರೋಣನು ಯಾರೊಡನೆ ಪರಶುರಾಮನ ಬಳಿಗೆ ಬಂದನು ?
ಉ : ದ್ರೋಣನು ಅಶ್ವತ್ಥಾಮನೊಡನೆ ಪರಶುರಾಮನ ಬಳಿಗೆ ಬಂದನು .

೩. ಪರಶುರಾಮನು ದ್ರೋಣನಿಗೆ ಕೊಟ್ಟ ಪ್ರಧಾನ ಅಸ್ತ್ರಗಳು ಯಾವುವು ?
ಉ : ಪರಶುರಾಮನು ದೋಣನಿಗೆ ವಾರುಣ , ವಾಯುವ್ಯ , ಆಗ್ನೆಯ , ಐಂದಾದಿ ಪ್ರಧಾನ ಅಸ್ತ್ರಗಳನ್ನು ಕೊಟ್ಟನು .
 
೪ ದ್ರುಪದನು ಪಡಿಯನಿಗೆ ಏನೆಂದು ಹೇಳಿ ಕಳುಹಿಸಿದನು ?
ಉ : ಅಂತಹವನನ್ನು ನಾನು ತಿಳಿದಿಲ್ಲ : ಅವನನ್ನು ಹೊರಕ್ಕೆ ತಳ್ಳು ಎಂದು ದುಪದನು ಪಡಿಯಾನಿಗೆ ( ದ್ವಾರಪಾಲಕನಿಗೆ ) ಹೇಳಿದನು .

 ಆ ) ಕೊಟ್ಟಿರುವ ಪ್ರಶ್ನೆಗಳಿಗೆ ಮೂರು – ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ :
 
೧. ಪರಶುರಾಮನು ಮಣ್ಣಿನ ಪಾತ್ರೆಯಲ್ಲಿ ಅರ್ಥ್ಯವನ್ನು ಕೊಡಲು ಕಾರಣವೇನು ?
ಉ : ಪರಶುರಾಮನು ತನ್ನಲ್ಲಿದ್ದದ್ದನ್ನೆಲ್ಲಾ ಬೇಡಿದವರಿಗೆ ದಾನಮಾಡಿದ್ದರಿಂದ ಆತನ ಬಳಿ ಬಿಲ್ಲು ಬಾಣಗಳಲ್ಲದೆ ಬೇರೇನೂ ಇರಲಿಲ್ಲ . ಆ ಸಂದರ್ಭದಲ್ಲಿ ದ್ರೋಣನು ಅಶ್ವತ್ಥಾಮನ ಜೊತೆಯಲ್ಲಿ ಏನಾದರು ದ್ರವ್ಯ ಬೇಡಲೆಂದು ಪರಶುರಾಮನ ಬಳಿಗೆ ದನು . ಆಗ ಪರಶುರಾಮನು ತನ್ನ ಬಳಿ ಚಿನ್ನದ ಪಾತೆಗಳಿಲ್ಲದುದರಿಂದ ದ್ರೋಣರಿಗೆ ಮಣ್ಣಿನ ಪಾತ್ರೆಯಲ್ಲಿಯೇ ಅರ್ಭ್ಯವನ್ನು ಕೊಟ್ಟು ಪೂಜಿಸಿದನು .

೨. ದ್ರುಪದನು ದ್ರೋಣರಿಗೆ ಹೇಳಿದ ಮಾತುಗಳು ಯಾವುವು ?
ಉ : ದ್ರುಪದನು ದೋಣರಿಗೆ “ ನೀನು ಯಾರೆಂದು ನನಗೆ ತಿಳಿದಿಲ್ಲ . ನೀನು ನನ್ನನ್ನು ಅದೆಲ್ಲಿ ಕಂಡಿದ್ದೆಯೊ ? ರಾಜನಿಗೂ ಬ್ರಾಹ್ಮಣನಿಗೂ ಯಾವ ವಿಧವಾದ ಸ್ನೇಹ ? ಮನುಷ್ಯರಾದವರು ಇಷ್ಟು ನಾಚಿಕೆಗೆಟ್ಟವರೂ ಆಗುತ್ತಾರೆಯೇ ? ಎಂಬ ಮಾತುಗಳಿಂದ ದ್ರೋಣನಿಗೆ ಮರ್ಮಭೇದಕ ವಾಗುವಂತೆ ಹೀಯ್ಯಾಳಿಸಿದನು .

೩. ದ್ರುಪದನ ಮಾತಿಗೆ ದ್ರೋಣನ ಪ್ರತ್ಯುತ್ತರವೇನು ?
ಉ : ದುಪದನ ಮಾತಿಗೆ ದ್ರೋಣನು ಎಲೋ ಏಳನೇ ನೊಣಕ್ಕೆ ಕಸವೇ ಶ್ರೇಷ್ಠವಾದುದು ‘ ಎನ್ನುವ ಗಾದೆಯಂತೆ ನಿನ್ನ ಯೋಗ್ಯತೆ ನನ್ನವರೆಗೂ ಉಂಟೆ ? ಜೊತೆಯಲ್ಲಿ ವಿದ್ಯಾಭ್ಯಾಸ ಮಾಡಿದೆವೆಂಬ ಒಂದು ಕಾರಣದಿಂದ ನಿನ್ನನ್ನು ಕೊಲ್ಲದೆ ಬಿಡುತ್ತಿದ್ದೇನೆ . ಈ ಸಭಾವಲಯದಲ್ಲಿ ನನ್ನನ್ನು ಹಿಯ್ಯಾಳಿಸಿದ ನಿನ್ನನ್ನು ನನ್ನ ಶಿಷ್ಯರಿಂದ ನೀನು ಬೆಚ್ಚುವಂತೆ ಕಟ್ಟಿಸದೆ ಬಿಟ್ಟರೆ ನಾನು ಮೀಸೆಯನ್ನು ಹೊತ್ತಿರುವುದು ವ್ಯರ್ಥವಲ್ಲವೆ ? ” ಎಂದು ಪ್ರತ್ಯುತ್ತರ ಕೊಟ್ಟನು .
 
ಇ ) ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು – ಹತ್ತು ವಾಕ್ಯದಲ್ಲಿ ಉತ್ತರಿಸಿ

೧. ದ್ರುಪದನಿಗೂ ದ್ರೋಣನಿಗೂ ನಡೆದ ಸಂಭಾಷಣೆಯನ್ನು ಸಂಕ್ಷಿಪ್ತವಾಗಿ ಬರೆಯಿರಿ .
ಉ : ದ್ರುಪದನು ” ಅಂತಹವನನ್ನು ನಾನು ತಿಳಿದಿಲ್ಲ ; ಅವನನ್ನು ಹೊರಕ್ಕೆ ತಳ್ಳು ” ಎಂದು ದ್ವಾರಪಾಲಕನಿಗೆ ಹೇಳಿದಾಗ ದ್ವಾರಪಾಲಕನು ಬಂದು ಆ ರೀತಿಯಲ್ಲಿ ತಿಳಿಸಲಾಗಿ ದ್ರೋಣನು ಬಲವಂತವಾಗಿ ಒಳಕ್ಕೆ ಪ್ರವೇಶಿಸಿ ದ್ರುಪದನನ್ನು ನೋಡಿ ‘ ಅಣ್ಣಾ ನೀನೂ ನಾನೂ ಜೊತೆಯಲ್ಲಿ ವಿದ್ಯಾಭ್ಯಾಸ ಮಾಡಿದುದನ್ನು ತಿಳಿದಿಲ್ಲವೇ ‘ ಎನ್ನಲು ದ್ರುಪದನು ನಿನ್ನನ್ನು ನಾನು ತಿಳಿದಿಲ್ಲ . ನೀನು ನನ್ನನ್ನು ಅದೆಲ್ಲಿ ಕಂಡಿದ್ದೆಯೊ ? ರಾಜನಿಗೂ ಬ್ರಾಹ್ಮಣನಿಗೂ ಯಾವ ವಿಧವಾದ ಸ್ನೇಹ ? ಮನುಷ್ಯರಾದವರು ಇಷ್ಟು ನಾಚಿಕೆಗೆಟ್ಟವರೂ ಆಗುತ್ತಾರೆಯೇ ? ‘ ಎಂಬ ಮಾತುಗಳಿಂದ ದೋಣನಿಗೆ ಮರ್ಮಭೇದಕ ವಾಗುವಂತೆ ಹೀಯಾಳಿಸಿದನು . ಹಾಗೆ ಮಾಡಿದುದೂ ಅಲ್ಲದೆ ದ್ರುಪದನು ” ಈ ನಾಚಿಕೆಗೆಟ್ಟ ಬ್ರಾಹ್ಮಣನನ್ನು ಎಳೆದು ಹೊರಗೆ ನೂಕಿಲ ” ಎನ್ನಲು ದ್ರೋಣನು ಹೀಗೆಂದನು- “ ಐಶ್ವರ್ಯ ಬರಲು ಮದ್ಯಪಾನ ಮಾಡಿದವರಂತೆ ಮಾತು ತೊದಲುವುದು , ಮುಖದಲ್ಲಿ ವಕಚೇಷ್ಟೆಯುಂಟಾಗುವುದು ; ಮಾತುಗಳು ನಾಚಿಕೆಯಿಲ್ಲದಾಗುವುವು ಸಂಬಂಧವನ್ನು ಮರೆಯುವಂತೆ ಮಾಡುವುದು ; ಅದುದರಿಂದ ಐಶ್ವರ್ಯವು ಕಳ್ಳಿನೊಡನೆ ಹೆಂಡದೊಡನೆ ) ಎಟ್ಟಿತು ಎಂಬುದನ್ನು ನಿಸ್ಸಂಶಯವಾಗಿ ತಟ್ಟನೆ ಈಗ ನಾನು ವಿಶದವಾಗಿ ತಿಳಿದೆನು . ಎಲೋ ಏಳನೇ “ ನೋಣಕ್ಕೆ ಕಸವೇ ಶ್ರೇಷ್ಠವಾದುದು ‘ ಎನ್ನುವ ಗಾದೆಯ ಹಾಗೆ ನಿನ್ನ ಯೋಗ್ಯತೆ ನನ್ನವರೆಗೂ ಉಂಟೆ ? ಜೊತೆಯಲ್ಲಿ ವಿದ್ಯಾಭ್ಯಾಸ ಮಾಡಿದೆವೆಂಬ ಒಂದು ಕಾರಣದಿಂದ ನಿನ್ನನ್ನು ಕೊಲ್ಲಲಾರೆ . ಈ ಸಭಾವಲಯದಲ್ಲಿ ನನ್ನನ್ನು ಹಿಯ್ಯಾಳಿಸಿದ ನಿನ್ನನ್ನು ನನ್ನ ಶಿಷ್ಯರಿಂದ ನಿರಾಯಾಸವಾಗಿ , ನೀನು ಗಾಬರಿಪಡುವಂತೆ ಕಟ್ಟಿಸದೆ ಬಿಟ್ಟರೆ ನಾನು ಮೀಸೆಯನ್ನು ಹೊತ್ತಿರುವುದು ವ್ಯರ್ಥವಲ್ಲವೆ ? ” ಕನ್ನಡ ದೀವಿಗೆ

೨. ದ್ರೋಣನು ದ್ರುಪದನ ವಿರುದ್ಧ ತಪಥ ಮಾಡಲು ಕಾರಣವಾದ ಅಂಶಗಳನ್ನು ವಿವರಿಸಿ .
ಉ : ದ್ರೋಣ ಮತ್ತು ದುಪದರಿಬ್ಬರೂ ಯಜ್ಞಸೇನನೆಂಬ ಗುರುವಿನಲ್ಲಿ ಸಹಪಾಠಿಗಳಾಗಿ ವಿದ್ಯಾಭ್ಯಾಸ ಮಾಡಿದರು . ದುಪದನು ತಾನು ದೊರೆಯಾದಾಗ ತನ್ನ ಬಳಿಕ ಬಂದರೆ ಸಹಾಯಮಾಡುವುದಾಗಿ ದ್ರೋಣನಿಗೆ ಹೇಳಿದನು . ಇಬ್ಬರ ವಿದ್ಯಾಭ್ಯಾಸ ಮುಗಿದ ನಂತರ ದುಪದನು ಛತ್ರಾವತಿಯಲ್ಲಿ ರಾಜನಾಗಿ ಆಳುತ್ತಿದ್ದನು . ಆಸಮಯದಲ್ಲಿ ದ್ರೋಣನಿಗೆ ಬಹಳ ಬಡತನ ಉಂಟಾಯಿತು . ಆಗ ಅವನು ದ್ರುಪದನು ವಿದ್ಯಾಭ್ಯಾಸ ಮಾಡುವ ಸಮಯದಲ್ಲಿ ಆಡಿದ್ದ ಮಾತುಗಳನ್ನು ಜ್ಞಾಪಿಸಿಕೊಂಡು ಸಹಾಯವನ್ನು ನಿರೀಕ್ಷಿಸಿ ದ್ರುಪದನಲ್ಲಿಗೆ ಬಂದನು . ಆದರೆ ದ್ರುಪದನಿಗೆ ಅಧಿಕಾರಮದ ಆವರಿಸಿತ್ತು . ದೋಣ ತನ್ನ ಸಹಪಾಠಿ ಎಂದು ಗುರುತಿಸದಾದನು . ದ್ರೋಣನು ದ್ರುಪದನರಮನೆಯ ಬಾಗಿಲಲ್ಲಿ ನಿಂತು ಬಾಗಿಲು ಕಾಯುವವನನ್ನು ಕರೆದು ನಿಮ್ಮ ಜೊತೆಯಲ್ಲಾಟವಾಡಿದ ಸ್ನೇಹಿತನಾದ ದ್ರೋಣನೆಂಬ ಬ್ರಾಹ್ಮಣನು ಬಂದಿದ್ದಾನೆಂದು ನಿಮ್ಮ ರಾಜನಿಗೆ ತಿಳಿಯಪಡಿಸು ಹೇಳಿ ಕಳುಹಿಸಿದಾಗ ದ್ರುಪದನು ಅವನಾರೋ ನನಗೆ ತಿಳಿದಿಲ್ಲ . ಅವನನ್ನು ಹೊರಕ್ಕೆ ತಳ್ಳು ‘ ಎಂದು ಆದೇಶಿಸಿದನು . ಆದರೆ ದೋಣನು ಬಲವಂತವಾಗಿ ಒಳಕ್ಕೆ ನುಗ್ಗಿ ಬಂದು ದಪದನಿಗೆ ತಮ್ಮಿಬ್ಬರೂ ಸಹಪಾಠಿಗಳಾಗಿದ್ದ ಸಂದರ್ಭವನ್ನು ಹೇಳಿದಾಗ ದ್ರುಪದನು “ ನೀನಾರೋ ನನಗೆ ತಿಳಿದಿಲ್ಲ . ನೀನು ನನ್ನನ್ನು ಅದೆಲ್ಲಿ ಕಂಡಿದ್ದೆಯೊ ? ರಾಜನಿಗೂ ಬ್ರಾಹ್ಮಣನಿಗೂ ಯಾವ ವಿಧವಾದ ಸ್ನೇಹ ? ಮನುಷ್ಯರಾದವರು ಇಷ್ಟು ನಾಚಿಕೆಗೆಟ್ಟವರೂ ಆಗುತ್ತಾರೆಯೇ ? ” ಎಂದು ಹೀಯಾಳಿಸಿ ಮಾತನಾಡಿದ್ದನ್ನು ಕೇಳಿ ಕೋಪಗೊಂಡ ದೋಣನು “ ಜೊತೆಯಲ್ಲಿ ವಿದ್ಯಾಭ್ಯಾಸ ಮಾಡಿದೆವೆಂಬ ಒಂದು ಕಾರಣದಿಂದ ನಿನ್ನನ್ನು ಕೊಲ್ಲದೆ ಬಿಡುತ್ತಿದ್ದೇನೆ . ಈ ಸಭಾವಲಯದಲ್ಲಿ ನನ್ನನ್ನು ಹಿಯ್ಯಾಳಿಸಿದ ನಿನ್ನನ್ನು ನನ್ನ ಶಿಷ್ಯರಿಂದ ನೀನು ಬೆಚ್ಚುವಂತೆ ಕಟ್ಟಿಸದೆ ಬಿಟ್ಟರೆ ನಾನು ಮೀಸೆಯನ್ನು ಹೊತ್ತಿರುವುದು ವ್ಯರ್ಥವಲ್ಲವೆ ? ” ಎಂದು ಶಪಥ ಮಾಡಿದನು .

ಈ ) ಕೊಟ್ಟಿರುವ ಹೇಳಿಕೆಗಳಿಗೆ ಸಂದರ್ಭದೊಡನೆ ಸ್ವಾರಸ್ಯ ಬರೆಯಿರಿ :

೧. ‘ ಈಗಳೊಂದಡಕೆಯುಮಿಲ್ಲ ಕೈಯೊಳ್ “
 ಆಯ್ಕೆ : ಈ ವಾಕ್ಯವನ್ನು ಪಂಪ ಮಹಾಕವಿ ರಚಿಸಿರುವ ‘ ವಿಕ್ರಮಾರ್ಜುನ ವಿಜಯಂ ‘ ಕೃತಿಯಿಂದ ಆರಿಸಿಕೊಳ್ಳಲಾಗಿರುವ ‘ ಕೆಮ್ಮನೆ ಮೀಸೆವೊತ್ತನೇ ‘ ಎಂಬ ಪದ್ಯಭಾಗದಿಂದ ತೆಗೆದುಕೊಳ್ಳಲಾಗಿದೆ .
ಸಂದರ್ಭ: ದ್ರೋಣನು ತನಗೆ ಬಡತನವುಂಟಾಗಲು ಅಶ್ವತ್ಥಾಮನನ್ನೂ ಕರೆದುಕೊಂಡು ದೇಶದೇಶಗಳಲ್ಲೆಲ್ಲ ಸುತ್ತಿ ಪರಶುರಾಮನ ಬಳಿಗೆ ಬಂದು ಸಹಾಯ ಯಾಚಿಸಿದ ಸಂದರ್ಭದಲ್ಲಿ ಪರಶುರಾಮನು “ ನನ್ನ ಪದಾರ್ಥಗಳನ್ನೆಲ್ಲ ಬೇಡಿದವರಿಗೆ ಕೊಟ್ಟೆನು , ಭೂಮಂಡಲವನ್ನು ಗುರುಗಳಿಗೆ ಕೊಟ್ಟೆನು . ಈಗ ನನ್ನಲ್ಲಿ ಒಂದಡಕೆಯೂ ಇಲ್ಲ ” ಎಂದು ದ್ರೋಣನಿಗೆ ಹೇಳುತ್ತಾನೆ .
ಸ್ವಾರಸ್ಯ : ದೋಣನು ತನ್ನ ಬಳಿ ಬಂದು ಸಹಾಯ ಯಾಚಿಸಿದಾಗ ಪರಶುರಾಮನು ಯಾವುದೇ ಮುಚ್ಚುಮರೆ ಇಲ್ಲದೆ ತನ್ನ ನಿಜ ಸ್ಥಿತಿಯನ್ನು ಹೇಳಿಕೊಳ್ಳುವುದು ಈ ಮಾತಿನಲ್ಲಿ ಸ್ವಾರಸ್ಯ ಪೂರ್ಣವಾಗಿ ವ್ಯಕ್ತವಾಗಿದೆ .

೨. ವಿದ್ಯಾಧನಮೆ ಧನಮಪ್ಪುದು
 ಆಯ್ಕೆ : ಈ ವಾಕ್ಯವನ್ನು ಪಂಪ ಮಹಾಕವಿ ರಚಿಸಿರುವ ‘ ವಿಕ್ರಮಾರ್ಜುನ ವಿಜಯಂ ‘ ಕೃತಿಯಿಂದ ಆರಿಸಿಕೊಳ್ಳಲಾಗಿರುವ ‘ ಕೆಮ್ಮನೆ ಮೀಸೆವೊತ್ತನೇ “ ಎಂಬ ಪದ್ಯಭಾಗದಿಂದ ತೆಗೆದುಕೊಳ್ಳಲಾಗಿದೆ .
ಸಂದರ್ಭ : ದೋಣನು ತನ್ನ ಬಳಿ ಬಂದು ಸಹಾಯ ಯಾಚಿಸಿದಾಗ ಪರಶುರಾಮನು “ ಎಲೈ ದ್ರೋಣನೆ ಈಗ ಇದೊಂದು ಬಿಲ್ಲ ಇದೊಂದು ದಿವ್ಯಾಸ್ತ್ರಗಳ ಸಮೂಹವೂ ಇದೆ . ನನ್ನಲ್ಲಿ ಬೇರೆ ಯಾವುದೇ ಆಸ್ತಿಯಿಲ್ಲ . ಇವುಗಳಲ್ಲಿ ನಿನಗೆ ಯಾವುದನ್ನು ಕೊಡಲಿ ? ಚೆನ್ನಾಗಿ ಹೇದ ಸಂದರ್ಭದಲ್ಲಿ ದೋಣನು “ ನನಗೆ ವಿದ್ಯಾಧನವೇ ಧನವಾಗಿರುವುದರಿಂದ ಆ ದಿವ್ಯಾಸ್ತ್ರಗಳನ್ನು ದಯಪಾಲಿಸಬೇಕು ” ಎಂದು ಹೇಳುತ್ತಾನೆ . ಯೋಚಿಸಿ ಹೇಳು ಎಂದು .
ಸ್ವಾರಸ್ಯ ‘ ‘ ವಿದ್ಯಾಧನರ್ವೆ ನಿಜವಾದ ಸಂಪತ್ತು ‘ ಎಂದು ಹೇಳುವ ಮೂಲಕ ದೋಣನು ವಿದ್ಯೆಯ ಮಹತ್ವವನ್ನು ತಿಳಿಸಿರುವುದು ಇಲ್ಲಿನ ಸ್ವಾರಸ್ಯವಾಗಿದೆ .

೩. ‘ ಎಂತು ನಾಣಿಲಿಗರಪ್ಪರೆ ಮಾನಸರ್ ‘
 ಆಯ್ಕೆ : ಈ ವಾಕ್ಯವನ್ನು ಪಂಪ ಮಹಾಕವಿ ರಚಿಸಿರುವ ‘ ವಿಕ್ರಮಾರ್ಜುನ ವಿಜಯಂ ‘ ಕೃತಿಯಿಂದ ಆರಿಸಿಕೊಳ್ಳಲಾಗಿರುವ ‘ ಕೆಮ್ಮನೆ ಮೀಸೆವೊತ್ತನೇ ‘ ಎಂಬ ಪದ್ಯಭಾಗದಿಂದ ತೆಗೆದುಕೊಳ್ಳಲಾಗಿದೆ .
ಸಂದರ್ಭ : ದ್ರೋಣನು ದುಪದನ ಬಳಿಗೆ ಹೋಗಿ ” ಅಣ್ಣಾ ನೀನೂ ನಾನೂ ಜೊತೆಯಲ್ಲಿ ವಿದ್ಯಾಭ್ಯಾಸ ಮಾಡಿದುದನ್ನು ತಿಳಿದಿಲ್ಲವೇ ? ” ಎನ್ನಲು ದುಪದನು ನನಗೆ ನಿನ್ನ ಪರಿಚಯವಿಲ್ಲ . ನೀನು ನನ್ನನ್ನು ಅದೆಲ್ಲಿ ಕಂಡಿದ್ದೆಯೊ ? ರಾಜನಿಗೂ ಬ್ರಾಹ್ಮಣನಿಗೂ ಯಾವ ವಿಧವಾದ ಸ್ನೇಹ ? ಮನುಷ್ಯರಾದವರು ಇಷ್ಟು ನಾಚಿಕೆಗೆಟ್ಟವರೂ ಆಗುತ್ತಾರೆಯೇ ? ಎಂಬ ಮಾತುಗಳಿಂದ ದೋಣನಿಗೆ ಹೀಯ್ಯಾಳಿಸುವ ಸಂದರ್ಭದಲ್ಲಿ ಈ ಮಾತನ್ನು ಹೇಳುತ್ತಾನೆ .
ಸ್ವಾರಸ್ಯ : ತನ್ನ ಸಹಪಾಠಿಯಾಗಿದ್ದ ಆತ್ಮೀಯ ಸ್ನೇಹಿತ ಒಬ್ಬ ಬಡವನೆಂಬ ಕಾರಣಕ್ಕೆ ‘ ನೀನಾರೋ ನನಗೆ ತಿಳಿದಿಲ್ಲ ‘ ಎಂದು ಹೇಳುವ ದ್ರೋಣನ ಅಹಂಕಾರ ಇಲ್ಲಿ ಸ್ವಾರಸ್ಯಪೂರ್ಣವಾಗಿ ವ್ಯಕ್ತವಾಗಿದೆ .
 
೪ , ‘ ಜಲಕ್ಕನೀಗಳದೆ ಸಿರಿ ಕಳ್ಕೊಡವುಟ್ಟಿತೆಂಬುದಂ
 ಆಯ್ಕೆ : ಈ ವಾಕ್ಯವನ್ನು ಪಂಪ ಮಹಾಕವಿ ರಚಿಸಿರುವ ‘ ವಿಕಮಾರ್ಜುನ ವಿಜಯಂ ‘ ಕೃತಿಯಿಂದ ಆರಿಸಿಕೊಳ್ಳಲಾಗಿರುವ “ ಕಮ್ಮನೆ ಮೀಸೆವೊತ್ತನೇ ‘ ಎಂಬ ಪದ್ಯಭಾಗದಿಂದ ತೆಗೆದುಕೊಳ್ಳಲಾಗಿದೆ .
ಸಂದರ್ಭ : ತನ್ನ ಬಳಿ ಸಹಾಯ ಕೇಳಲು ಬಂದ ದ್ರೋಣನನ್ನು ಕುರಿತು ದ್ರುಪದನು “ ನೀನು ನನ್ನನ್ನು ಅದೆಲ್ಲಿ ಕಂಡಿದ್ದೆಯೊ ? ರಾಜನಿಗೂ ಬಾಹಣನಿಗೂ ಯಾವ ವಿಧವಾದ ಸ್ನೇಹ ? ಮನುಷ್ಯರಾದವರು ಇಷ್ಟು ನಾಚಿಕೆಗೆಟ್ಟವರೂ ಆಗುತ್ತಾರೆಯೇ ? ” ಎಂದು ಹೀಯಾಳಿಸಿದ ಸಂದರ್ಭದಲ್ಲಿ ದೋಣನು “ ಐಶ್ವರ್ಯವೆಂಬ ಮದವೇರಿದರೆ ಮಾತಿನಲ್ಲಿ ಮುಖದಲ್ಲಿ ವಕತೆಯುಂಟಾಗುತ್ತದೆ ; ಸಂಬಂಧವನ್ನು ಐಶ್ವರ್ಯವು ಕಳ್ಳಿನೊಡನೆ ( ಹೆಂಡದೊಡನೆ ) ಹುಟ್ಟಿತು ಎಂಬುದನ್ನು ಈಗ ನಾನು ತಕ್ಷಣವೇ ಸ್ಪಷ್ಟವಾಗಿ ಮರೆಯುವಂತೆ ಮಾಡುವುದು ; ತಿಳಿದೆನು ” ಎಂದು ಹೇಳುತ್ತಾನೆ .
ಸ್ವಾರಸ್ಯ : ಸಮುದ್ರ ಮಥನ ಕಾಲದಲ್ಲಿ ಐಶ್ವರ್ಯ ( ಲಕ್ಷಿ ) ಮತ್ತು ಕಳ್ಳು ( ಅಮೃತ / ಸುರಪಾನ ) ಇವರಡೂ ಹುಟ್ಟಿದವು , ಆ ಘಟನೆಯನ್ನು ದ್ರೋಣನ ಮೂಲಕ ಮಹಾಕವಿ ಪಂಪನು ‘ ದುಪದನ ಐಶ್ವರ್ಯ ಮದಕ್ಕೆ ‘ ಅನ್ವಯಮಾಡಿ ಹೇಳಿರುವುದು ಇಲ್ಲಿನ ಸ್ವಾರಸ್ಯವಾಗಿದೆ . ಕನ್ನಡ ದೀವಿಗೆ

೫. ‘ ನೊಳವಿಂಗೆ ಕುಪ್ಪೆ ವರಂ ‘   
 ಆಯ್ಕೆ : ಈ ವಾಕ್ಯವನ್ನು ಪಂಪ ಮಹಾಕವಿ ರಚಿಸಿರುವ ‘ ವಿಕ್ರಮಾರ್ಜುನ ವಿಜಯಂ ‘ ಕೃತಿಯಿಂದ ಆರಿಸಿಕೊಳ್ಳಲಾಗಿರುವ ‘ ಕೆಮ್ಮನೆ ಮೀಸೆವೊತ್ತನೇ ‘ ಎಂಬ ಪದ್ಯಭಾಗದಿಂದ ತೆಗೆದುಕೊಳ್ಳಲಾಗಿದೆ .
ಸಂದರ್ಭ : ದ್ರುಪದನು ಹೀಯಾಳಿಸಿದಾಗ ಕೋಪಗೊಂಡ ದ್ರೋಣನು ದ್ರುಪದನನ್ನು ಕುರಿತು “ ಎಲೋ ಏಳನೇ , ನೊಣಕ್ಕೆ ಕಸವೇ ಶ್ರೇಷ್ಠವಾದುದು ” ಎನ್ನುವ ಗಾದೆಯ ಹಾಗೆ ನಿನ್ನ ಯೋಗ್ಯತೆ ನನ್ನವರೆಗೂ ಉಂಟೆ ? ಜೊತೆಯಲ್ಲಿ ವಿದ್ಯಾಭ್ಯಾಸ ಮಾಡಿದೆವೆಂಬ ಒಂದು ಕಾರಣದಿಂದ ನಿನ್ನನ್ನು ಕೊಲ್ಲಲಾರೆ , ಈ ಸಭಾವಲಯದಲ್ಲಿ ನನ್ನನ್ನು ಹಿಯ್ಯಾಳಿಸಿದ ನಿನ್ನನ್ನು ನನ್ನ ಶಿಷ್ಯರಿಂದ ನಿರಾಯಾಸವಾಗಿ , ನೀನು ಗಾಬರಿಪಡುವಂತೆ ಕಟ್ಟಿಸದೆ ಬಿಟ್ಟರೆ ನಾನು ಮೀಸೆಯನ್ನು ಹೊತ್ತಿರುವುದು ವ್ಯರ್ಥವಲ್ಲವೆ ? ” ಎಂದು ಶಪಥ ಮಾಡುವ ಸಂದರ್ಭದಲ್ಲಿ ಈ ಮಾತನ್ನು ಹೇಳುತ್ತಾನೆ .
ಸ್ವಾರಸ್ಯ : ‘ ನೊಣಕ್ಕೆ ಕಸವೇ ಶ್ರೇಷ್ಠ ‘ ಎಂಬಂತೆ ವ್ಯಕ್ತಿಯ ಯೋಗ್ಯತೆಗೆ ತಕ್ಕಂತೆ ಗುಣ – ನಡತೆ ಅಭಿರುಚಿಗಳಿರುತ್ತವೆ ಎಂಬುದು ಇಲ್ಲಿ ಸ್ವಾರಸ್ಯಪೂರ್ಣವಾಗಿದೆ .

ಭಾಷಾ ಚಟುವಟಿಕೆ

ಅ ) ಕೊಟ್ಟಿರುವ ಪದಗಳನ್ನು ಬಿಡಿಸಿ , ಸಂಧಿ ಹೆಸರಿಸಿ .

ವಲ್ಕಲಾವೃತ = ವಲ್ಕಲ + ಅವೃತ – ಸವರ್ಣದೀರ್ಘಸಂಧಿ
ದ್ರವ್ಯಾರ್ಥಿ = ದ್ರವ್ಯ + ಅರ್ಥಿ – ಸವರ್ಣದೀರ್ಘಸಂಧಿ
ನಿಮ್ಮರಸ = ನಿಮ್ಮ + ಆರಸ – ಲೋಪಸಂಧಿ
ಮದೋನ್ಮತ್ತ  = ಮದ + ಉನ್ನತ್ತ ಗುಣಸಂಧಿ
ಕುಲ್ಗುಡಿದ  =  ಕಳ + ಕುಡಿ – ಆದೇಶಸಂಧಿ

 ಆ ) ಕೊಟ್ಟಿರುವ ಪದಗಳನ್ನು ವಿಗ್ರಹ ವಾಕ್ಯ ಮಾಡಿ , ಸಮಾಸ ಹೆಸರಿಸಿ .
ನಾಣಿಲಿ  = ನಾಣು ( ನಾಚಿಕೆ ) ಇಲ್ಲದವನು ಯಾರೋ ಅವನೇ  ( ನಾಚಿಕೆಗೇಡಿ ) – ಬಹುವೀಹಿ
ದಿವ್ಯಶರಾಳಿ   =ದಿವ್ಯವಾದ + ಶರಾಳಿ – ಕರ್ಮಧಾರಯ ಸಮಾಸ   –
ಮಹೀಪತಿ= ಮಹೀ ( ಭೂಮಿ ) ಗೆ  ( ಒಡೆಯ ) ಆದವನು ಯಾರೋ ಅವನೇ ಮಹೀಪತಿ ( ರಾಜ )  ಬಹುವೀಹಿ ಸಮಾಸ
ಕುಲ್ಗುಡಿದ= ಕಳ್ಳಂ ( ಕಳನ್ನು + ಕುಡಿದ – ಕ್ರಿಯಾ ಸಮಾಸ  

ಇ ) ಕೊಟ್ಟಿರುವ ವಾಕ್ಯದಲ್ಲಿರುವ ಅಲಂಕಾರವನ್ನು ಗುರುತಿಸಿ , ಲಕ್ಷಣದೊಂದಿಗೆ ಸಮನ್ವಯಗೊಳಿಸಿ
” ನೊಳವಿಂಗೆ ಕುಪ್ಪೆ ವರಮೆಂಬವೊಲಾಂಬರಮುಂಟೆ ನಿನ್ನ ದೊಂದಳವು? ”
 ಅಲಂಕಾರ : ಉಪಮಾಲಂಕಾರ
ಲಕ್ಷಣ : ಎರಡು ವಸ್ತುಗಳಿಗಿರುವ ಸಾದೃಶ್ಯಸಂಪತ್ತನ್ನು ಪರಸ್ಪರ ಹೋಲಿಸಿ ವರ್ಣಿಸಿದರೆ ಅದು ‘ ಉಪಮಾಲಂಕಾರ ‘
ಉಪಮೇಯ : ದ್ರುಪದನ ಅಳವು ( ಯೋಗ್ಯತೆ / ಪರಾಕ್ರಮ )
ಉಪಮಾನ : ಕುಪ್ಪೆಯನ್ನೇ ಶ್ರೇಷ್ಠವೆಂದು ಭಾವಿಸಿದ ನೊಳ ( ನೊಣ ) ಉಪಮಾ ವಾಚಕ : ವೊಲ್
ಸಮನ್ವಯ : ಇಲ್ಲಿ ಉಪಮೇಯವಾಗಿರುವ ದುಪದನ ಯೋಗ್ಯತೆಯನ್ನು ಕುಪ್ಪೆಯನ್ನೇ ಶ್ರೇಷ್ಠವೆಂದು ಭಾವಿಸಿದ ನೊಳ ( ನೊಣ ) ಕ್ಕೆ ಹೋಲಿಸಲಾಗಿರುವುದರಿಂದ ಇದು ಉಪಮಾಲಂಕಾರವಾಗಿದೆ .

ಈ ) ಕೊಟ್ಟಿರುವ ಪದ್ಯಭಾಗಕ್ಕೆ ಪ್ರಸ್ತಾರ ಹಾಕಿ , ಗಣವಿಭಾಗ ಮಾಡಿ , ಛಂದಸ್ಸಿನ ಹೆಸರನ್ನು ಬರೆಯಿರಿ .
 
You Might Like

Post a Comment

0 Comments