Recent Posts

ಭಾಗ್ಯಶಿಲ್ಪಿಗಳು - ೧೦ನೇ ತರಗತಿ ಸಿರಿ ಕನ್ನಡ ಪುಸ್ತಕದ ಪ್ರಶ್ನೋತ್ತರಗಳು


 ಭಾಗ್ಯಶಿಲ್ಪಿಗಳು
ಕವಿ – ಕಾವ್ಯ ಪರಿಚಯ
ಡಿ.ಎಸ್.ಜಯಪ್ಪಗೌಡ
ಡಿ.ಎಸ್. ಜಯಪ್ಪಗೌಡ ಇವರು  1947ರಲ್ಲಿ ಚಿಕ್ಕಮಂಗಳೂರು  ಜಿಲ್ಲೆಯ ಮೂಡಿಗೆರೆ ತಾಲೂಕಿನ ದಾರದಹಳ್ಳಿಯಲ್ಲಿ ಜನಿಸಿದರು. ದಾರದಹಳ್ಳಿ ಸುಬ್ಬೇಗೌಡ ಜಯಪ್ಪಗೌಡ ಎಂಬುದು ಇವರ ಪೂರ್ಣ ಹೆಸರು.
ಕರ್ನಾಟಕ ಗ್ರಾಮೀಣ ಸಂಸ್ಥೆಗಳು, ಕರ್ನಾಟಕದ ಕಡಲಾಚೆಯ ಸಂಪರ್ಕಗಳು, ಮೈಸೂರು ಒಡೆಯರು. ಜನಪದ ಆಟಗಳು, ದಿವಾನ್ ಸರ್ ಎಂ. ವಿಶ್ವೇಶ್ವರಯ್ಯನವರ ಕಾರ್ಯಸಾಧನೆಗಳು ಇವರ ಪ್ರಮುಖ ಕೃತಿಗಳಿಗೆ  . ಕರ್ನಾಟಕದ ಕಡಲಾಚೆಯ ಸಂಪರ್ಕಗಳು ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ
ಪ್ರಶಸ್ತಿಗಳು  ಲಭಿಸಿದೆ. ಧಾರವಾಡ ಕರ್ನಾಟಕ ಸಂಘದ ಸಂಶೋಧನಾ ಬಹುಮಾನಕ್ಕೆ  ಭಾಜನರಾಗಿದ್ದಾರೆ.
 
ಆಶಯ ಭಾವ
ಪರಿಶ್ರಮ, ಪ್ರತಿಭೆ, ನಿಷ್ಠೆಯಿದ್ದರೆ, ಧ್ಯೇಯವನ್ನು ಸಾಧಿಸುತ್ತೇನೆಂಬ ದೃಢಸಂಕಲ್ಪವಿದ್ದರೆ ಸವಾಲುಗಳನ್ನು ಎದುರಿಸಿ ಯಶಸ್ಸು ಪಡೆಯಬಹುದು. ಬಡತನದ ಬವಣೆಯಾಗಲಿ, ಯಾವುದೇ ತಾರತಮ್ಯವಾಗಲಿ ಅದನ್ನು ನಿರ್ಬಂಧಿಸಲಾರದು.  
ವ್ಯಕ್ತಿತ್ವದ  ವಿಕಾಸಕ್ಕೆ  ಅಡ್ಡಿಯಾಗಲಾರವು.  ವ್ಯಕ್ತಿಯು  ಸಮಾಜಮುಖಿಯಾಗಿ  ಲಭಿಸಿದ ಅಧಿಕಾರವನ್ನು ಸಮರ್ಥವಾಗಿ ಬಳಕೆ ಮಾಡಿಕೊಂಡಾಗ ಜನಮನದಲ್ಲಿ ಶಾಶ್ವತ ಸ್ಥಾನ ಪಡೆಯಬಹುದೆಂಬುದಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರು ಮತ್ತು ಸರ್.ಎಂ. ವಿಶ್ವೇಶ್ವರಯ್ಯ ಅವರು ಪ್ರತ್ಯಕ್ಷ ಸಾಕ್ಷಿಯಾಗಿದ್ದಾರೆ. ಉತ್ಕರ್ಷದ ಆಕಾಂಕ್ಷೆ  ಇದ್ದವರಿಗೆ  ಜೀವಂತ  ಆದರ್ಶ  ವ್ಯಕ್ತಿತ್ವದ  ಪರಿಚಯ  ಮಾದರಿಯಾಗಬಲ್ಲದು.  ಬಹುಮುಖಿತ್ವದ ಅನುಭವವಾಗಬಲ್ಲದು.

ಪದಗಳ ಅರ್ಥ
ಅಸ್ತಿಭಾರ   -  ಬುನಾದಿ   
ಕಾಮಗಾರಿ   -  ಕೆಲಸ
ಗಿರಣಿ   -  ಹತ್ತಿಯನ್ನು ಬಿಡಿಸುವ, ನೂಲು ಮಾಡುವ, ಧಾನ್ಯ ಬೀಸುವ ಯಂತ್ರ ಮತ್ತು ಇಂತಹ ಯಂತ್ರಗಳಿಂದ ಕೂಡಿದ ಕಟ್ಟಡ, ಮಿಲ್ಲು      
ಗೊಮ್ಮಟ ವ್ಯಕ್ತಿತ್ವ  -  ಉನ್ನತ ವ್ಯಕ್ತಿತ್ವ     
ದೂಷಣೆ   -  ನಿಂದನೆ     
ವೈಜ್ಞಾನಿಕ   -  ವಿಜ್ಞಾನಕ್ಕೆ ಸಂಬಂಧಿಸಿದ     
ಸಮುಚ್ಚಯ   -  ಸಮೂಹ       
ಸುಸಂಗತ   -  ಯೋಗ್ಯವಾದ
ತಾಂತ್ರಿಕ   -  ತಂತ್ರಜ್ಞಾನಕ್ಕೆ ಸಂಬಂಧಿಸಿದ  
ಹಂಬಲ   -  ಬಯಕೆ
ಮುಕ್ತಕಂಠ   -  ತೆರೆದ ಮನಸ್ಸು
ಶತಮಾನೋತ್ಸವ -  ನೂರು ವರ್ಷ ತುಂಬಿದ  ಸಮಯದಲ್ಲಿ ಆಚರಿಸುವ ಉತ್ಸವ
ಸುಪರ್ದಿ   -  ವಶ    
ಸ್ಥೈರ್ಯ   -  ದೃಢತೆ
ಹರಿಕಾರ   -  ಮುಂದಾಳು

ಟಿಪ್ಪಣಿ
ರೀಜೆಂಟ್                     (ಇಂಗ್ಲಿಷ್ ಪದ)              ಪ್ರತಿನಿಧಿ
ಸ್ಯಾನಿಟರಿ                    (ಇಂಗ್ಲಿಷ್ ಪದ)              ನಿರ್ಮಲೀಕರಣ, ಆರೋಗ್ಯ ರಕ್ಷಣೆಗೆ ಸಂಬಂಧಿಸಿದ.
ದಿವಾನ                        (ಪರ್ಷಿಯನ್ ಪದ)        ಸಚಿವ, ಮಂತ್ರಿ, ಹಿರಿಯ, ಮುಖ್ಯಕಾರ್ಯಭಾರಿ.
ಮನ್ವಂತರ                    (ಸಂಸ್ಕೃತ ಪದ)            ಒಬ್ಬ ಮನುವಿನ ಕಾಲ. ಪರಿವರ್ತನೆಯ ಕಾಲ.

ಅಭ್ಯಾಸ
 
ಅ)  ಕೊಟ್ಟಿರುವ ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರಿಸಿ.
1.  ನಾಲ್ವಡಿ ಕೃಷ್ಣರಾಜ ಒಡೆಯರು ಯಾವಾಗ ಪಟ್ಟಾಭಿಷಿಕ್ತರಾದರು?
2.  ನಾಲ್ವಡಿ ಕೃಷ್ಣರಾಜ ಒಡೆಯರು ಯಾವುದಕ್ಕಾಗಿ ಕಂಕಣಬದ್ಧರಾದರು?
3.  ಏಷ್ಯಾ ಖಂಡದಲ್ಲಿಯೇ ಮೊದಲು ಪ್ರಾರಂಭಿಸಿದ ಜಲ ವಿದ್ಯುತ್ ಯೋಜನೆ ಯಾವುದು?
4.  ಬ್ರಿಟಿಷ್ ಸರ್ಕಾರ ವಿಶ್ವೇಶ್ವರಯ್ಯ ಅವರಿಗೆ ಯಾವ ಪದವಿಯನ್ನು ನೀಡಿ ಗೌರವಿಸಿತು?
5.  ವಿಶ್ವೇಶ್ವರಯ್ಯ ಅವರನ್ನು ದಿವಾನರಾಗಿ ನೇಮಿಸಿದವರು ಯಾರು?
6.  ವಿಶ್ವೇಶ್ವರಯ್ಯ ಅವರ ಹುಟ್ಟು ಹಬ್ಬದ ನೆನಪಿಗಾಗಿ ಯಾವ ದಿನಾಚರಣೆಯನ್ನು ಮಾಡಲಾಗುತ್ತಿದೆ?

ಆ)  ಕೊಟ್ಟಿರುವ ಪ್ರಶ್ನೆಗಳಿಗೆ ಮೂರು-ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ.
1.  ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಯಾವ ಕ್ಷೇತ್ರಗಳು ಸ್ವಯಂ ಆಡಳಿತ ಕ್ಷೇತ್ರಗಳಾದವು?
2.  ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಯಾವ ನೀರಾವರಿ ಯೋಜನೆಗಳು ಕಾರ್ಯರೂಪಕ್ಕೆ ಬಂದವು?
3.  ಶಿಕ್ಷಣದ ಬಗ್ಗೆ ವಿಶ್ವೇಶ್ವರಯ್ಯ ಅವರು ಏನೆಂದು ಹೇಳಿದ್ದಾರೆ?
4.  ನೆಹರೂ ಅವರು ಸರ್ ಎಂ. ವಿಶ್ವೇಶ್ವರಯ್ಯ ಅವರ ಬಗ್ಗೆ ಏನೆಂದು ಹೇಳಿದ್ದಾರೆ?
5.  ಹಣಕಾಸು ನೀತಿಯಲ್ಲಿ ವಿಶ್ವೇಶ್ವರಯ್ಯ ಅವರು  ಮಾಡಿದ ಮಾರ್ಪಾಡುಗಳಾವುವು?

ಇ) ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿ.
1.  ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಮೈಸೂರು ಮಾದರಿ ಮೈಸೂರು ರಾಜ್ಯ ಹೇಗಾಯಿತು?
2.  ವಿಶ್ವೇಶ್ವರಯ್ಯ ಅವರು ಮೈಸೂರು ದಿವಾನರಾಗಿ ಸಲ್ಲಿಸಿದ ಸೇವೆಯನ್ನು ಕುರಿತು ಬರೆಯಿರಿ.
3.  ಶಿಕ್ಷಣ ಕ್ಷೇತ್ರಕ್ಕೆ ವಿಶ್ವೇಶ್ವರಯ್ಯ ಅವರು ಸಲ್ಲಿಸಿದ ಕೊಡುಗೆಯನ್ನು ತಿಳಿಸಿ.

ಈ)  ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ.
1.  ``ಸಾಮಾಜಿಕ ಕಾನೂನುಗಳ ಹರಿಕಾರ.
2.  ಅವರ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿಯನ್ನು ಸೇರಿಸಿತು.
3.  ಮೈಸೂರು ಸಂಸ್ಥಾನಕ್ಕೆ ಮಾದರಿ ಮೈಸೂರು ಎಂಬ ಕೀರ್ತಿ ಪ್ರಾಪ್ತವಾಯಿತು.
4.  ತಾವು ಕಡಿಮೆ ಮಾತನಾಡಿದ್ದೀರಿ; ಹೆಚ್ಚು ಕೆಲಸ ಮಾಡಿದ್ದೀರಿ.

ಉ)  ಬಿಟ್ಟ ಸ್ಥಳವನ್ನು ಸರಿಯಾದ ಪದದಿಂದ ತುಂಬಿರಿ.
1.  ನಾಲ್ವಡಿ ಕೃಷ್ಣರಾಜ ಒಡೆಯರ್ರವರಿಗೆ ರೀಜೆಂಟರಾಗಿ ಕಾರ್ಯನಿರ್ವಹಿಸಿದವರು______
2.  1914ರಲ್ಲಿ ಶಾಲಾ ಪ್ರವೇಶಕ್ಕೆ ______________ ನಿಷೇಧವಾಯಿತು.
3.  ವಿಶ್ವೇಶ್ವರಯ್ಯ ಅವರು ಮುಂಬೈ ಪ್ರಾಂತ್ಯದಲ್ಲಿ ____________ ಆಗಿ ಸೇವೆ ಪ್ರಾರಂಭಿಸಿದರು.
4.  ಮುಂಬೈ  ಪ್ರಾಂತ್ಯದ  ಗವರ್ನರ್  ಆಗಿದ್ದ  ___________  ಅವರು  ವಿಶ್ವೇಶ್ವರಯ್ಯ  ಅವರನ್ನು ಮುಕ್ತಕಂಠದಿಂದ ಹಾಡಿ ಹೊಗಳಿದರು.
5.  ಭಾರತ ಸರಕಾರವು ವಿಶ್ವೇಶ್ವರಯ್ಯನವರಿಗೆ ___________ ಎಂಬ ಪ್ರಶಸ್ತಿ ನೀಡಿ ಗೌರವಿಸಿತು.

ಭಾಷೆಯ ಸೊಬಗು
ಕ, ಚ, ಟ, ತ, ಪ - ಇವು ಅಲ್ಪಪ್ರಾಣ ಅಕ್ಷರಗಳು. ಖ, ಛ, ಠ, ಥ, ಫ - ಇವು ಮಹಾಪ್ರಾಣ ಅಕ್ಷರಗಳು.
ಭೂತಾಯಿ ಎಂದರೆ ಭೂಮಿತಾಯಿ. ಬೂತಾಯಿ ಎಂದರೆ ಒಂದು ಬಗೆಯ ಮೀನು. ಆಧರಿಸಿ ಎಂದರೆ ಆಧಾರ ಮಾಡಿಕೊಂಡು. ಆದರಿಸಿ ಎಂದರೆ ಗೌರವಿಸಿ.
ಛಿನ್ನ ಎಂದರೆ ತುಂಡಾದ, ಕತ್ತರಿಸಿದ, ಭಗ್ನಗೊಂಡ. ಚಿನ್ನ ಎಂದರೆ ಸುವರ್ಣ. ಬೆಲೆಬಾಳುವ ಹಳದಿ ಲೋಹ.
(1) ರೈತನಿಗೆ ಭೂತಾಯಿಯೇ ದೇವರು.
(2) ಬೆಸ್ತನು ಹಿಡಿದ ಮೀನುಗಳಲ್ಲಿ ಬೂತಾಯಿಯದೇ ದೊಡ್ಡ ಪಾಲು.
(3) ರಾಮಾಯಣ ಮಹಾಕಾವ್ಯವನ್ನು ಆಧರಿಸಿ ಹಲವು ನಾಟಕಗಳು ಬಂದವು.
(4) ಅತಿಥಿಗಳನ್ನು ಆದರಿಸಿ ಉಪಚರಿಸುವುದು ನಮ್ಮ ಸಂಸ್ಕೃತಿ.
(5) 1947ರಲ್ಲಿ ಅಖಂಡ ಭಾರತವು ಛಿನ್ನವಾಗಿ ಎರಡು ರಾಷ್ಟ್ರಗಳು ಉದಯಿಸಿದವು.
(6) ಚಿನ್ನ ಎಂದರೆ ಹೆಂಗಳೆಯರಿಗೆ ಮೆಚ್ಚಲ್ಲವೆ?
ಇಂಥ ಇನ್ನಷ್ಟು ಶಬ್ದಗಳನ್ನು ಪಟ್ಟಿ ಮಾಡಿ.  

ಸೈದ್ಧಾಂತಿಕ ಭಾಷಾಭ್ಯಾಸ  
ಲೇಖನ ಚಿಹ್ನೆಗಳು ಬರೆವಣಿಗೆಯಲ್ಲಿ  ಲೇಖನ  ಚಿಹ್ನೆಗಳ  ಪಾತ್ರ  ಅತ್ಯಂತ  ಮುಖ್ಯವಾದುದು.  ಲೇಖನ  ಚಿಹ್ನೆಗಳಿಲ್ಲದ  ಬರೆವಣಿಗೆ ಸ್ಪಷ್ಟಾರ್ಥವನ್ನು  ಕೊಡದೆ  ತೊಡಕುಗಳಿಗೆ  ಕಾರಣವಾಗುವುದುಂಟು.  ಹಾಗಾಗಿ  ಲೇಖನ  ಚಿಹ್ನೆಗಳು  ಅತ್ಯಂತ ಅಗತ್ಯ. ಇಲ್ಲಿ ಕೊಟ್ಟಿರುವ ವಿವರಗಳನ್ನು ಗಮನಿಸಿ.
ಪೂರ್ಣ ವಿರಾಮ :  (.)  ಒಂದು ಪೂರ್ಣಕ್ರಿಯೆಯಿಂದ ಕೂಡಿದ ವಾಕ್ಯದ ಕೊನೆಯಲ್ಲಿ ಈ ಪೂರ್ಣವಿರಾಮ ಚಿಹ್ನೆಯನ್ನು ಬಳಸಬೇಕು.
      ಉದಾ :- ವಿದ್ಯಾರ್ಥಿಗಳು ಪದ್ಯವನ್ನು ಹಾಡುತ್ತಾರೆ. ಅರ್ಧ ವಿರಾಮ   :  (;)   ಅನೇಕ ಉಪವಾಕ್ಯಗಳು ಒಂದು ಪ್ರಧಾನವಾಕ್ಯಕ್ಕೆ ಅಧೀನವಾಗಿದ್ದಾಗ ಉಪವಾಕ್ಯಗಳು ಮುಗಿದಾಗಲೆಲ್ಲ ಈ ಚಿಹ್ನೆಯನ್ನು ಬಳಸಲಾಗುವುದು.
      ಉದಾ :- ತಾವು ಕಡಿಮೆ ಮಾತನಾಡಿದ್ದೀರಿ; ಹೆಚ್ಚು ಕೆಲಸ ಮಾಡಿದ್ದೀರಿ.
ಅಲ್ಪವಿರಾಮ   :  (,)  ಸಂಬೋಧನೆಯ ಮುಂದೆ ಹಾಗೂ ಕರ್ತೃ, ಕರ್ಮ, ಕ್ರಿಯಾಪದಗಳಿಗೆ ಬೇರೆ ಬೇರೆ ವಿಶೇಷಣಗಳು ಬರುವಾಗ ಕೊನೆಯ ವಿಶೇಷಣ ಬಿಟ್ಟು ಉಳಿದವುಗಳ ಮುಂದೆ ಅಲ್ಪವಿರಾಮ ಬಳಸಬೇಕು.
      ಉದಾ  :-  ಬಟ್ಟೆಗಿರಣಿ,  ರಟ್ಟು,  ಪೆನ್ಸಿಲ್,  ಬೆಂಕಿಕಡ್ಡಿ  ತಯಾರಿಕಾ  ಘಟಕಗಳನ್ನು ಸ್ಥಾಪಿಸಲಾಗಿದೆ.
ಪ್ರಶ್ನಾರ್ಥಕ   :  (?)  ಪ್ರಶ್ನೆರೂಪದ  ಪದ  ಮತ್ತು  ವಾಕ್ಯಗಳ  ಮುಂದೆ  ಪ್ರಶ್ನಾರ್ಥಕ  ಚಿಹ್ನೆಯನ್ನು ಬಳಸಲಾಗುವುದು.
      ಉದಾ :- ದಾಶರಥಿ ಯಾರು ?
ಭಾವಸೂಚಕ   :  (!)  ಹರ್ಷ, ಆಶ್ಚರ್ಯ, ಸಂತೋಷ, ವಿಷಾದ, ದುಃಖ ಮುಂತಾದ ಭಾವನೆಗಳನ್ನು ಸೂಚಿಸುವ ಪದಗಳ ಮುಂದೆ ಈ ಚಿಹ್ನೆಯನ್ನು ಬಳಸಲಾಗುವುದು.
      ಉದಾ :- ಅಯ್ಯೋ! ಹೀಗಾಗಬಾರದಿತ್ತು!
ಉದ್ಧರಣ ಚಿಹ್ನೆ  :  ( ) ಒಬ್ಬರು  ಹೇಳಿದ  ಮಾತನ್ನೇ  ಯಥಾವತ್ತಾಗಿ  ಬರೆಯುವಾಗ  ಈ  ಚಿಹ್ನೆಯನ್ನು ಬಳಸಲಾಗುವುದು.      
ಉದಾ  :-  ಶಿಕ್ಷಣವು  ಕೆಲವೇ  ಜನರ  ಸ್ವತ್ತಾಗದೆ  ಪ್ರಗತಿಪರ  ರಾಜ್ಯದಲ್ಲಿ ಎಲ್ಲರ  ಆಜನ್ಮಸಿದ್ದ  ಹಕ್ಕಾಗಬೇಕು  ಎಂದು  ಸರ್  ಎಂ.  ವಿಶ್ವೇಶ್ವರಯ್ಯನವರು ಹೇಳಿದರು.
ವಾಕ್ಯವೇಷ್ಠನ ಚಿಹ್ನೆ :  ( )  ಪಾರಿಭಾಷಿಕ ಪದಗಳನ್ನು ಬಳಸುವಾಗ, ಅನ್ಯಭಾಷೆಯ ಪದಗಳನ್ನು ಬಳಸುವಾಗ, ಪ್ರಮುಖ ಪದಗಳನ್ನು ಸೂಚಿಸುವಾಗ ಈ ಚಿಹ್ನೆಯನ್ನು ಬಳಸಲಾಗುವುದು.
      ಉದಾ  :-  ಕನ್ನಡ  ಭಾಷೆಯಲ್ಲಿ  ಇಂಗ್ಲಿಷ್,  ಪರ್ಷಿಯನ್,  ಪೊರ್ಚುಗೀಸ್ ಭಾಷೆಗಳ ಪದಗಳನ್ನು ಬಳಸಲಾಗುತ್ತದೆ.
ಆವರಣ ಚಿಹ್ನೆ   :  ( )  ಒಂದು ಪದವನ್ನೋ ವಾಕ್ಯವನ್ನೋ ಹೇಳಿ ಅದಕ್ಕೆ   ಸವ  ಾನಾರ್ಥ ಕ  ಪದವನ್ನೋ ವಾಕ್ಯವನ್ನೋ ಹೇಳುವಾಗ ಈ ಚಿಹ್ನೆಯನ್ನು ಬಳಸಲಾಗುತ್ತದೆ.
      ಉದಾ  :-  ನೀರನ್ನು  ವಿಭಜಿಸಿದರೆ  ಆಮ್ಲಜನಕ  (ಆಕ್ಸಿಜನ್)  ಜಲಜನಕ  (ಹೈಡ್ರೋಜನ್)ಗಳು ಉತ್ಪತ್ತಿಯಾಗುತ್ತವೆ.
ವಿವರಣಾತ್ಮಕ ಚಿಹ್ನೆ :  (:)  ಒಂದು ಅಭಿಪ್ರಾಯದ ವಿವರಣೆ ಮುಂದೆ ತಿಳಿಸಿದಂತೆ ಇದೆ ಎಂದು ತೋರಿಸುವ ಸಂದರ್ಭದಲ್ಲಿ ಈ ಚಿಹ್ನೆಯನ್ನು ಬಳಸಲಾಗುತ್ತದೆ.
      ಉದಾ :- ಪಂಚಮಹಾವಾದ್ಯಗಳು : ತಾಳ, ಹಳಗ, ಗಂಟೆ, ಮೌರಿ, ಸನಾದಿ.
ವಾಕ್ಯರಚನೆ

ಇಲ್ಲಿರುವ ವಾಕ್ಯಗಳನ್ನು ಗಮನಿಸಿ :
1.  ಭೀಮನು ದುಷ್ಟನಾದ ಬಕನನ್ನು ಕೊಂದನು.
2.  ಮಹಾಶಕ್ತನಾದ ದೇವರು ಸಮಸ್ತಲೋಕಗಳನ್ನು ಪ್ರೀತಿಯಿಂದ ಕಾಪಾಡುವನು.
ಈ ಎರಡು ವಾಕ್ಯಗಳಲ್ಲಿ ಭೀಮ, ದೇವರು ಎಂಬ ಪದಗಳು ಕರ್ತೃ ಪದಗಳು, ಬಕ, ಸಮಸ್ತಲೋಕ  ಎಂಬ ಪದಗಳು ಕರ್ಮಪದಗಳು, ಕೊಂದನು, ಕಾಪಾಡುವನು ಎಂಬ ಪದಗಳು ಕ್ರಿಯಾಪದಗಳು ಹೀಗೆ___ ಕರ್ತೃ, ಕರ್ಮ ಮತ್ತು ಕ್ರಿಯಾಪದಗಳಿಂದ ಕೂಡಿರುವ ಪದ ಸಮೂಹವೇ ವಾಕ್ಯ ಎಂದೆನಿಸುವುದು.
ಆದರೆ  ಕೆಲವೊಮ್ಮೆ  ಕರ್ತೃ,  ಕರ್ಮ,  ಕ್ರಿಯಾಪದಗಳಿಗೆ  ವಿಶೇಷಣಗಳೂ  ಸೇರಿಕೊಂಡು ವಾಕ್ಯರಚನೆಯಾಗುವುದುಂಟು. ಹಾಗೆಯೇ ಕರ್ತೃ ಪದ ಅಥವಾ ಕರ್ಮಪದ ಅಥವಾ ಕ್ರಿಯಾಪದಗಳು ಇಲ್ಲದೆಯೂ ವಾಕ್ಯ ಪೂರ್ಣ ಅರ್ಥವನ್ನು ಕೊಡುವುದರಿಂದ ಅಂತಹ ಪ್ರಯೋಗವೂ ಇದೆ.
ಒಂದು ಸಂಪೂರ್ಣ ಅರ್ಥ ನೀಡುವ ಪದಗಳ ವ್ಯವಸ್ಥಿತ ಜೋಡಣೆಯೇ ವಾಕ್ಯ.
ಉದಾ:-  
1. ಈಗ ಬಂದನು (ಕರ್ತೃ ಪದ ಇಲ್ಲ)  
2. ಅವನು ಈಗ ತಾನೆ ತಿಂದನು (ಕರ್ಮಪದ ಇಲ್ಲ)     
3. ಹುಡುಗ ಬುದ್ಧಿವಂತ (ಕ್ರಿಯಾಪದ ಇಲ್ಲ)
ಇಂತಹ ವಾಕ್ಯಗಳನ್ನು ಅಧ್ಯಾಹಾರಯುಕ್ತ ವಾಕ್ಯಗಳು ಎಂದು ಕರೆಯಲಾಗಿದೆ.

ವಾಕ್ಯ ಪ್ರಕಾರಗಳು

1.  ಸಾಮಾನ್ಯ ವಾಕ್ಯ
  ಈ ವಾಕ್ಯಗಳನ್ನು ಗಮನಿಸಿ.
ಅ.  ಕಾರವಾರದಲ್ಲಿ ಮಲೇರಿಯಾ ವ್ಯಾಪಕವಾಗಿ ಹಬ್ಬಿತ್ತು.
ಆ.  ಕಾರವಾರದಲ್ಲಿ ಉದ್ಯೋಗಿಯಾಗಿದ್ದ ವೀರೇಶ್ವರ ಪಾಠಕ್ ಮಲೇರಿಯಾದಿಂದ ಬಳಲಿದರು.
ಇ.  ವೀರೇಶ್ವರ ಪಾಠಕ್ರನ್ನು ಬೆಂಗಳೂರಿಗೆ ವರ್ಗಾವಣೆ ಮಾಡಲಾಯಿತು.     
ಈ ಮೂರು ವಾಕ್ಯಗಳು ಒಂದೊಂದು ಪೂರ್ಣಕ್ರಿಯಾಪದದೊಡನೆ ಸ್ವತಂತ್ರ ವಾಕ್ಯಗಳಾಗಿವೆ. ಹೀಗೆ-
ಒಂದು ಪೂರ್ಣಕ್ರಿಯಾಪದದೊಂದಿಗೆ ಸ್ವತಂತ್ರವಾಗಿರುವ ವಾಕ್ಯವನ್ನು ಸಾಮಾನ್ಯವಾಕ್ಯವೆಂದು ಕರೆಯುತ್ತಾರೆ.
ಸಾಮಾನ್ಯವಾಕ್ಯದಲ್ಲಿ  ಒಂದು  ಕ್ರಿಯಾಪದ  ಮಾತ್ರ  ಇದ್ದು  ಸಾಪೇಕ್ಷ  ಕ್ರಿಯಾರೂಪಗಳು  ಮಧ್ಯದಲ್ಲಿ ಬರಬಹುದು.
ಉದಾ:- ಕಾರವಾರದಲ್ಲಿ ಮಲೇರಿಯಾ ಹಬ್ಬಿ, ವೀರೇಶ್ವರ ಪಾಠಕ್ರವರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿ, ಅವರು ಅಲ್ಲಿಂದ ವರ್ಗಾವಣೆ ಹೊಂದುವಂತೆ ಆಯಿತು.
ಈ ವಾಕ್ಯದಲ್ಲಿ ಆಯಿತು ಎಂಬ ಒಂದೇ ಕ್ರಿಯಾಪದವಿದ್ದು ಹಬ್ಬಿ, ಬೀರಿ ಎಂಬ ಸಾಪೇಕ್ಷ ಕ್ರಿಯಾಪದಗಳು ಮಧ್ಯದಲ್ಲಿ ಬಂದಿವೆ. ಹಾಗಾಗಿ ಇದು ಕೂಡಾ ಸಾಮಾನ್ಯವಾಕ್ಯವೆಂದೇ ಪರಿಗಣಿಸಲ್ಪಡುತ್ತದೆ.

2.  ಸಂಯೋಜಿತ ವಾಕ್ಯ :
ಕಾರವಾರದಲ್ಲಿ  ಮಲೇರಿಯಾ  ಹಬ್ಬಿತ್ತು;  ಆದ್ದರಿಂದ  ವೀರೇಶ್ವರ  ಪಾಠಕ್ರವರು  ಮಲೇರಿಯಾದಿಂದ ಬಳಲಬೇಕಾಯ್ತು; ಈ ಕಾರಣದಿಂದ ಅವರನ್ನು ಅಲ್ಲಿಂದ ವರ್ಗಾಯಿಸಲಾಯ್ತು.
ಈ  ವಾಕ್ಯ  ಸಮೂಹದಲ್ಲಿ  ಮೂರು  ಬೇರೆಬೇರೆ  ವಾಕ್ಯಗಳಿವೆ.  ಆದರೆ  ಈ  ವಾಕ್ಯಗಳು  ಒಂದಕ್ಕೊಂದು ಸಂಯೋಜನೆಗೊಂಡು ಒಂದು ಪೂರ್ಣವಾಕ್ಯವಾಗಿದೆ. ಹೀಗೆ_
ಸ್ವತಂತ್ರ ವಾಕ್ಯಗಳಾಗಿ ನಿಲ್ಲಬಲ್ಲ ಅನೇಕ ಉಪವಾಕ್ಯಗಳೊಡನೆ ಒಂದು ಪೂರ್ಣಾಭಿಪ್ರಾಯದ ವಾಕ್ಯವಾಗಿದ್ದರೆ ಅದು ಸಂಯೋಜಿತ ವಾಕ್ಯವೆನ್ನಿಸುವುದು.
 
3.  ಮಿಶ್ರವಾಕ್ಯ :
ಏನಾದರೂ  ಮಾಡಿ  ಭಾರತದಲ್ಲಿ  ಮೋಟಾರು  ಕಾರ್ಖಾನೆಯನ್ನು  ಸ್ಥಾಪಿಸಲು  ವಿಶ್ವೇಶ್ವರಯ್ಯನವರು ನಿರ್ಧರಿಸಿದರಾದರೂ ಅವರ ನಿರ್ಧಾರಕ್ಕೆ ಬ್ರಿಟಿಷ್ ಸರಕಾರದ ಅಪ್ಪಣೆ ದೊರೆಯಲಿಲ್ಲವೆಂಬ ವಿಷಯ ತಿಳಿದಾಗ ಅವರು ಬಹುವಾಗಿ ಮರುಗಿದರು.
ಇಲ್ಲಿ ಅವರು ಬಹುವಾಗಿ ಮರುಗಿದರು ಎಂಬ ಪ್ರಧಾನ ವಾಕ್ಯಕ್ಕೆ
1- ಏನಾದರೂ ಮಾಡಿ ಭಾರತದಲ್ಲಿ ಮೋಟಾರು ಕಾರ್ಖಾನೆಯನ್ನು ಸ್ಥಾಪಿಸಲು ವಿಶ್ವೇಶ್ವರಯ್ಯನವರು ನಿರ್ಧರಿಸಿದರು;
2- ಅವರ ನಿರ್ಧಾರಕ್ಕೆ ಬ್ರಿಟಿಷ್ ಸರಕಾರದ ಅಪ್ಪಣೆ ದೊರೆಯಲಿಲ್ಲ ಎಂಬ ವಾಕ್ಯಗಳು ಉಪವಾಕ್ಯಗಳಾಗಿ ಸೇರಿಕೊಂಡಿವೆ. ಹೀಗೆ__
ಒಂದು  ಅಥವಾ  ಅನೇಕ  ವಾಕ್ಯಗಳು  ಒಂದು  ಪ್ರಧಾನ  ವಾಕ್ಯಕ್ಕೆ  ಅಧೀನಗಳಾಗಿದ್ದರೆ  ಅಂಥ  ವಾಕ್ಯವನ್ನು ಮಿಶ್ರವಾಕ್ಯ ಎನ್ನುತ್ತೇವೆ.

ವ್ಯಾವಹಾರಿಕ ಪತ್ರ
ಪರಿಷತ್ತು ಪ್ರಕಟಿಸಿದ ಕನ್ನಡ ನಿಘಂಟು ವಿನ ಹತ್ತು ಪ್ರತಿಗಳನ್ನು ಕಳುಹಿಸಿಕೊಡುವಂತೆ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನೊಂದಿಗೆ ಪತ್ರವ್ಯವಹಾರ ನಡೆಸಿ.

ಇವರಿಂದ,
ಪ್ರಮೀಳ,                                                                                     ದಿನಾಂಕ  :  2.10.2016
ಹತ್ತನೆಯ ತರಗತಿ                                                                         ಸ್ಥಳ   :  ಶಿವಮೊಗ್ಗ
ಸರಕಾರಿ ಪ್ರೌಢಶಾಲೆ ಅಶೋಕನಗರ,
ಶಿವಮೊಗ್ಗ     

ಇವರಿಗೆ,
ಮಾನ್ಯ ಕಾರ್ಯದರ್ಶಿಗಳು,
ಕನ್ನಡ ಸಾಹಿತ್ಯ ಪರಿಷತ್ತು ಚಾಮರಾಜಪೇಟೆ,
ಬೆಂಗಳೂರು.

ಮಾನ್ಯರೇ,
                ವಿಷಯ : ಪರಿಷತ್ತಿನ ಪ್ರಕಟಣೆಯಾದ ಕನ್ನಡ ನಿಘಂಟುವಿನ ಹತ್ತು ಪ್ರತಿಗಳನ್ನು ಕಳುಹಿಸಿ ಕೊಡುವ ಬಗ್ಗೆ.
        ಪರಿಷತ್ತು ಪ್ರಕಟಿಸಿರುವ ಕನ್ನಡ ನಿಘಂಟಿನ ಹತ್ತು ಪ್ರತಿಗಳು ನನಗೆ ಮತ್ತು ನನ್ನ ಗೆಳತಿಯರಿಗೆ ಬೇಕಾಗಿದೆ. ದಯಮಾಡಿ ಹತ್ತು ಪ್ರತಿಗಳನ್ನು ನನ್ನ ವಿಳಾಸಕ್ಕೆ ವಿ.ಪಿ.ಪಿ. ಮಾಡಬೇಕಾಗಿ ಈ ಮೂಲಕ ಕೇಳಿ ಕೊಳ್ಳುತ್ತೇನೆ. ಆ ಬಗ್ಗೆ ಐನೂರು ರೂಪಾಯಿಗಳ ಬ್ಯಾಂಕ್ ಹುಂಡಿಯನ್ನು ಮುಂಗಡರೂಪವಾಗಿ ಈ ಪತ್ರದ ಜೊತೆ ಇರಿಸಿದ್ದೇನೆ.
ವಂದನೆಗಳೊಂದಿಗೆ,

                                                                       ಇಂತಿ    ತಮ್ಮ ನಂಬುಗೆಯ,
                                                                                                                ಸಹಿ.......................                                                            
                                                                              (ಪ್ರಮೀಳ)


ಭಾಷಾ ಚಟುವಟಿಕೆ
 
1.  ಕೊಟ್ಟಿರುವ ಪದಗಳ ತತ್ಸಮ-ತದ್ಭವ ಬರೆಯಿರಿ.
ವಂಶ, ಸ್ಥಾನ, ಯಶ, ಪಟ್ಟಣ, ಕಾರ್ಯ.

2.  ನೀಡಿರುವ ಪದಗಳಲ್ಲಿ ಅನ್ಯದೇಶ್ಯ ಪದಗಳನ್ನು ಆರಿಸಿ ಬರೆಯಿರಿ.
ಡಿಪ್ಲೊಮಾ,  ದಿವಾನ, ಪ್ರೌಢ, ಶಿಕ್ಷಣ, ನಡೆಸು, ಸೋಪು, ಕಾರ್ಖಾನೆ, ಕಾಗದ, ಕಚೇರಿ.

3.  ಕೊಟ್ಟಿರುವ ಗಾದೆಗಳ ಅರ್ಥವನ್ನು ವಿವರಿಸಿ ಬರೆಯಿರಿ.
1.  ಕೂಡಿಬಾಳಿದರೆ ಸ್ವರ್ಗ ಸುಖ.
2.  ಮಾತೇ ಮುತ್ತು, ಮಾತೇ ಮೃತ್ಯು.

ಪೂರಕ ಓದು
 ಎಸ್. ಜಯಪ್ಪಗೌಡರ ದಿವಾನ್ ಸರ್ ಎಂ. ವಿಶ್ವೇಶ್ವರಯ್ಯನವರ ಕಾರ್ಯಸಾಧನೆಗಳು ಕೃತಿಯನ್ನು ಓದಿರಿ

1. ‘ದುರದೃಷ್ಟ’ ಪದದ ವಿರುದ್ಧಾರ್ಥಕ ರೂಪ.
ಅ] ಅಪದೃಷ್ಟ. ಆ] ಅದೃಷ್ಟ ಇ] ನತದೃಷ್ಟ. ಈ] ದುಷ್ಟ

2. ‘ಹರಿಕಾರ’ ಪ ದದ ಅರ್ಥ.
ಅ] ಮುಂದಾಳು. ಆ] ಬ್ರಹ್ಮ  ಇ] ಸರದಾರ. ಈ] ವಿಷ್ಣು.

3. ‘ಪುಣ್ಯ’ ಪದದ ವಿರುದ್ಧಾರ್ಥಕ ರೂಪ.
ಅ] ಸತ್ಯ ಆ] ಪಾಪ. ಇ] ಪುಣ್ಯಾ. ಈ] ಚಿತ್ರ

4. ‘ವಂಶ’ ಪದದ ತದ್ಭವ ರೂಪ  ರೂಪ.
ಅ] ಹಂಸ. ಆ]ಸಂಸ. ಇ] ವಂಸ. ಈ] ಅಂಚು.

5. ‘ನೇತಾರ’ ಪದದ ಅರ್ಥ.

ಅ]ನಾಯಕ. ಆ] ಸರದಾರ. ಇ] ತಾರೆ ಈ] ನೇತಾಜಿ

6. ‘ಇಲಾಖೆ’ ಇದು ಈ ಭಾಷೆಯ ಶಬ್ದ.
ಅ] ಕನ್ನಡ. ಆ] ಅರಬ್ಬಿ. ಇ] ಇಂಗ್ಲೀಷ್ ಈ] ಪರ್ಷಿಯನ್.

7. ‘ಮನ್ವಂತರ’ ಇದು ಈ ಸಂಧಿಗೆ ಉದಾಹಗಳು
ಅ] ಗುಣ ಸಂಧಿ. ಆ] ಧೀರ್ಘ ಸಂಧಿ. ಇ] ಯಣ್ ಸಂಧಿ. ಈ] ವೃದ್ಧಿ ಸಂಧಿ.

8. ‘ದಿವಾನ’ ಇದು ಈ ಭಾಷೆಯಿಂದ ಬಂದ ಶಬ್ದವಾಗಿದೆ.
ಆ] ಇಂಗ್ಲೀಷ್. ಆ] ಪರ್ಷಿಯನ್. ಇ] ಗ್ರೀಕ್. ಈ] ಪೋರ್ಚುಗೀಸ್.

9. ‘ಬೆಟ್ಟದಾವರೆ’ ಇದು ಈ ಸಮಾಸಕ್ಕೆ ಉದಾಹಗಳು
ಅ] ದ್ವಿಗು ಆ] ತತ್ಪುಷ. ಇ] ದ್ವಂದ್ವ. ಈ] ಬಹುವ್ರೀಹಿ.

10. ‘ಗ್ರಾಮ’ ಪದದ ತದ್ಭವ ರೂಪ
ಅ] ಗಮ. ಆ] ಹಳ್ಳಿ ಇ] ಗಾಮ ಈ] ಗಾವ

11. “ಶತಮಾನೋತ್ಸವ’ ಈ ಪದವನ್ನ  ಬಿಡಿಸಿ ಬರೆಯಿರಿ.
ಅ] ಶತ + ಮಾನೋತ್ಸವ. ಆ] ಶತ+ಹುತ್ಸವ. ಇ] ಶತ+ಉತ್ಸವ. ಈ] ಶತಮಾನ+ಉತ್ಸವ.

12. ‘ಜ್ಞಾನೇಶ್ವರ’ ಇದು ಈ ಸಂಧಿಗೆ .
ಅ] ಯಣ್ ಆ]ಸವರ್ಣಧೀರ್ಘ ಇ] ಆಗಮ ಈ] ಗುಣ.
 
13. ‘ಮನ್ವಂತರ’ ಬಿಡಿಸಿ ಬರೆಯಿರಿ.
ಅ] ಮನು+ಅಂತರ. ಆ] ಮಾನವ+ಅಂತರ  ಇ] ಮನುಷ್ಯ+ಅಂತರ ಈ] ಯಾವುದು ಅಲ್ಲ.

14. ‘ಒಂದು ಒಂದು’ ಇದು
ಅ]ಜೋಡುನುಡಿ.ಆ] ನುಡಿಗಟ್ಟು. ಇ] ದ್ವಿರುಕ್ತಿ  ಈ] ಅವ್ಯಯ.

15. ‘ವದು ’ ಇದು ಈ ಸಂಧಿಗೆ ಸೇರುತ್ತದೆ.
ಅ] ಗುಣ ಸಂಧಿ. ಆ] ಸವರ್ಣಧೀರ್ಘ ಸಂಧಿ. ಇ] ಯಣ್ ಸಂಧಿ. ಈ] ವೃದ್ಧಿ ಸಂಧಿ.

16. ‘ಅರಮನೆ’ ಬಿಡಿಸಿ ಬರೆದಾಗ
ಅ] ಅವನ+ಮನೆ ಆ] ಅರ+ಮನೆ ಇ] ಅರಸನ+ಮನೆ ಈ] ಅರ¸+ ಮನೆಯ

17. ‘ಹೊಸಗನ್ನಡ’ ಇದು
ಅ] ಕರ್ಮಧಾರಯ ಆ] ದ್ವಿಗು ಇ] ಅಂಶಿ ಈ] ಕ್ರಿಯಾ.

18. ‘ಹಿಂದಲೆ’
ಅ]ಕರ್ಮಧಾರಯ ಆ] ಗಮಕ ಇ] ಅಂಶಿ ಈ] ಕ್ರಿಯಾ.

19. ‘ಕಂಗೆಡು ’
ಅ] ತತ್ಪುರುಷ  ಆ] ದ್ವಿಗು ಇ] ಅಂಶಿ ಈ] ಕ್ರಿಯಾ.

20. ಕರ್ಮಧಾರೆಯಾ ಸಮಾಸ ಉದಾ:
ಅ] ಮೇಲ್ವಾತು ಆ] ಕಂಗೆಡು ಇ] ಚಕ್ರಪಾಣಿ ಈ] ಇಮ್ಮಾವು

21. ಈ ಬೆಕ್ಕು ಬಿಡಿಸಿ ಬರೆದಾಗ.
ಅ] ಇದು+ಬೆಕ್ಕು ಆ] ಈ+ಬೆಕ್ಕು ಇ] ಇ+ಬೆಕ್ಕು ಈ] ಒಂದು+ಬೆಕ್ಕು

22. ಮುಕ್ಕಣ್ಣ ಈ ಸಮಾಸ  ಉದಾ:
ಅ] ತತ್ಪುರುಷ  ಆ] ಬಹುವ್ರೀಸಮಾಸ ಇ] ಅಂಶಿ ಈ] ದ್ವಿಗು ಸಮಾಸ

23.ತಲೆ ಯಲ್ಲಿ  + ನೋವು ಕೂಡಿಸಿ ಬರೆದಾಗ
ಅ] ತಲೆ + ನೋವು ಆ] ತಲೆಯಲ್ಲಿ+ನೋವು ಇ] ತಲೇ ಯಿಂದ +ನೋವು ಈ] ತಲೆಮೇಲೆ+ನೋವು

24. ಒಟ್ಟು ಸಮಾಸ ಪ್ರಕಾರಳು
ಅ] ೮ ಆ] ೯ ಇ] ೭ ಈ] ೪

25. ಇಮ್ಮಾವು  ಈ ಸಮಾಸಕ್ಕೆ ಉದಾ
ಅ] ತತ್ಪುರುಷ  ಆ] ಕರ್ಮಧಾರಯ ಸಮಾಸ ಇ] ಅಂಶಿ ಈ] ದ್ವಿಗು ಸಮಾಸ

26. ‘ಅಜಮಾಯಿಷಿ’ ಇದು ಈ ಭಾಷೆಯ ಶಬ್ದ.
ಅ] ಪಾರ್ಸಿ ಆ] ಅರಬ್ಬಿ. ಇ] ಇಂಗ್ಲೀಷ್ ಈ] ಪರ್ಷಿಯನ್.

ಉತ್ತರಗಳು
1]ಆ 2]ಅ 3]ಆ 4] ಇ 5]ಅ 6]ಆ 7]ಈ 8] ಆ 9]ಆ 10]ಆ 11]ಈ 12] ಈ 13]ಆ 14]ಇ 15]ಅ 16]ಇ 17]ಅ 18]ಇ 19]ಈ 20]ಅ 21]ಅ 22] ಆ 23]ಆ 24]ಅ 25] ಆ 26]. ಅ

ಮೊದಲೆರೆಡು ಪದಗಳಿಗಿರುವ ಸಂಬಂಧಿಸಿದಂತೆ ಮೂರನೆಯ ಪದಕ್ಕೆ ಸಂಬಂಧಿಸಿದ ಪದ ಬರೆಯಿರಿ.
1.ಸುಸಂಗತ : ಯೋಗ್ಯವಾದ :: ಪುಸ್ತಕ : __________
2. ರತ್ನ : ರತುನ :: ವರ್ಷ : _______________
3. ಪರಮೋಚ್ಯ : ಗುಣಸಂಧಿ :: ದಿನಾಚರಣೆ : _________
4. ಸ್ಥಾನ : ತಾಣ :: ಕಾರ್ಯ : _________
5. ಉಂಬಳಿಯಾಗಿ :: ಉಂಬಳಿ+ಆಗಿ : ನೂರಾರು : _________
6. ಒಂದು+ಒಂದು : ಲೋಪ ಸಂಧಿ :: ಪೀಠ+ಉಪಕgಣ________
7. ಪಟ್ಟಣ : ಪತ್ತನ :: ಯಸ : _________
8. ಬೆಟ್ಟದಾವರೆ : ತತ್ಪುರುಷ :: ಮುಕ್ಕಣ್ಣು
9. ಅಂಗೈ: ಕೈಯ + ಅಡಿ :: ಹಿಂದಲೆ :
10. ಗಿರಿವನದುರ್ಗಗಳು  : ದ್ವಂದ್ವ :: ಮೈಮುಚ್ಚು :
11. ಯಶ :ಜಶ :: ಪಟ್ಟಣ :
12. ಸಪ್ತಸ್ವರಗಳು  : ದ್ವಿಗು :: ಚಕ್ರಪಾಣಿ :
13. ಡಿಪ್ಲೋಮಾ : ಇಂಗ್ಲೀಷ್ :: ಮನ್ವಂತರ :
ಉತ್ತರಗಳು
1.ಹೊತ್ತಿಗೆ, 2.ವರುಷ, 3.ಸವರ್ಣಧೀರ್ಘ ಸಂಧಿ, 4.ಕಜ್ಜ, 5.ನೂರು+ಆರು, 6.ಗುಣಸಂಧಿ, 7.ಜಸ, 8.ದ್ವಿಗು ಸಮಾಸ, 9.ತಲೆಯ + ಹಿಂದು , 10.ಕ್ರಿಯಾಸಮಾಸ, 11.ಪತ್ತನ 12. ಬಹುವ್ರಿ. 13. ಸಂಸ್ಕೃತ ಪದ
 
ಪಾಠದ ಆಶಯ ಭಾವ
ಹುಟ್ಟಿದವರೆಲ್ಲರಿಗೂ ಸಾಧಕರಾಗುವುದಕ್ಕೆ ಅವಕಾಶವಿದ್ದರೂ ಎಲ್ಲರೂ ಸಾಧಕರಾಗುವುದಿಲ್ಲ. ಸಾಧಕರಾಗುವುದಕ್ಕೆ  ಅಪಾರವಾದ ಸಾಮಾಜಿಕಹೊಣೆಗಾರಿಕೆ, ಪರಿಶ್ರಮ ,ಭವಿಷ್ಯಚಿಂತನೆ, ಛಲವಂತಿಕೆ ಬೇಕಾಗುತ್ತದೆ. ಸಾಧನೆ  ಪಥದಲ್ಲಿ  ಎದುರಾಗುವ ಅಡ್ಡಿಆತಂಕಗಳನ್ನೂನಿವಾರಿಸಿಕೊಳ್ಳಬೇಕು. ಇಂತಹ ಅಪರೂಪದ ಸಾಧಕರನ್ನು ಸಮಾಜ ನಿತ್ಯ ಸ್ಮರಿಸುತ್ತದೆ. ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆಡಳಿತಾತ್ಮಕ ವೈಜ್ಞಾನಿಕವಾಗಿ ಸಾಧನೆ  ಮಾಡಿಕನ್ನಡನಾಡಿನ  ಅಭಿವೃದ್ಧಿಗಾಗಿ ಸೇವೆಯ ಸಲ್ಲಿಸಿರುವ ವ್ಯಕ್ತಿಗಳ ಜೀವನ ಮತ್ತು ಸಾಧನೆಯನ್ನು ಪರಿಚಯ ಮಾಡಿಕೊಡುವುದು ಇಲ್ಲಿನ ಆಶಯ.ಪರಿಶ್ರಮ  , ಪ್ರತಿಭೆ, ನಿಷ್ಠೆಯಿದ್ದರೆ, ಧ್ಯೇಯವನ್ನ  ಸಾಧಿಸುತ್ತೇನೆಂಬ ದೃಢಸಂಕಲ್ಪವಿದ್ದರೆ ಸವಾಲುಗಳನ್ನು ಎದುರಿಸಿ  ಪಡೆಯಬಹುದು.ಬಡತನದ ಬವಣೆಯಾಗಲಿ, ಯಾವುದೇ ತಾರತಮ್ಯವಾಗಲಿ ಅದನ್ನು ನಿರ್ಬಂಧಿ¸
. ವ್ಯಕ್ತಿತ್ವದ ವಿಕಾಸಕ್ಕೆ ಅಡ್ಡಿಯಾಗಲಾರವು. ವ್ಯಕ್ತಿಯುಸಮಾಜಮುಖಿಯಾಗಿ ಲಭಿಸಿದ ಅಧಿಕಾರವನ್ನು ಸಮರ್ಥವಾಗಿ ಬಳಕೆ ಮಾಡಿಕೊಂಡಾಗ ಜನರಿನಲ್ಲಿ ಶಾಶ್ವತ ಸ್ಥಾನ ಪಡೆಯಬಹುದೆಂಬುದ ನಾಲ್ವಡಿ ಕೃಷ್ಣರಾಜ ಒಡೆಯರು ಮತ್ತು ಸರ್.ಎಂ. ವಿಶ್ವೇಶ್ವರಯ್ಯ ಅವರು  ಸಾಕ್ಷಿಯಾಗಿದ್ದಾರೆ. ಉತ್ಕರ್ಷದ ಆಕಾಂಕ್ಷೆ ಇದ್ದವರಿಗೆ ಜೀವಂತಆದರ್ಶ ವ್ಯಕ್ತಿತ್ವದ ಪರಿಚಯ ಮಾದರಿಯಾಗಬಲ್ಲದು. ಬಹುಮುಖಿತ್ವದ ಅನುಭವಾಗಬಲ್ಲದು.
 
ಭಾಗ್ಯಶಿಲ್ಪಿಗಳು ಪಾಠದ ಸಂಕ್ಷಿಪ್ತ ಪರಿಚಯ
 
೧. ನಾಲ್ವಡಿ ಕೃಷ್ಣರಾಜ ಒಡೆಯರು
ಮೈಸೂರು ಸಂಸ್ಥಾನದ ೨೪ನೇ ರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರು ೧೮೯೫ರಲ್ಲಿ ಪಟ್ಟಾಭಿಷಿಕ್ತರಾದರು.
ಇವರ  ಪಟ್ಟಾಭಿಷಿಕ್ತರಾಗಿದ್ದಾಗ ೧೦ ವರ್ಷðದ ಬಾಲಕರಾಗಿದ್ದರು. ಆದ್ದರಿಂದ ಅವರ ತಾಯಿಯಾದ ಮಹಾರಾಣಿ ವಾಣಿ ವಿಲಾಸಮ್ಮನ ರೀಜೆಂಟರಾಗಿ(ಪ್ರತಿನಿಧಿಯಾಗಿ) ಆಡಳಿತ ನಿರ್ವಹಣೆ ಮಾಡಿದ್ದು
ರಾಜಕುಮಾರನಿಗೆ ಸೂಕ್ತ ವಿದ್ಯಾಭ್ಯಾಸ, ಆಡಳಿತ  ಇವುಗಳನ್ನು ಮಹಾರಾಣಿತೀವ್ರ ನಿಗಾವಹಿಸಿ  ದುದರ ಪರಿಣಾಮವಾಗಿ, ಮೈಸೂರು ರಾಜ್ಯಕ್ಕೆ ಒಬ್ಬ ಸಮರ್ಥ ಆಡಳಿತಗಾರರಾಗಿ ನಾಲ್ವಡಿಕೃಷರಾಜ  ಒಡೆಯರು ದೊರಕಿದರು.೧೯೦೨ರ ಆಗಸ್ಟ್ ೮ನೇ ತಾರೀಖಿನಿಂದ ಮೈಸೂರು ರಾಜ್ಯದ ನೇರ ಉಸ್ತುವಾರಿ ಕೃಷರಾಜ ಒಡೆಯರ ಸುಪರ್ದಿಗೆ ಬಂದಿತು. ಆಗ ದಿವಾನರಾಗಿದ್ದಸರ್. ಕೆ. ಶೇಷಾದ್ರಿ ಅಯ್ಯರ್ ಸಹಕಾರದೊಡನೆ ನಾಲ್ವಡಿ ಕೃಷ್ಣರಾಜ ಒಡೆಯರು ಮೈಸೂರು ರಾಜ್ಯದ ಸರ್ವೋತೋಮುಖ ಅಭಿವೃದ್ಧಿಗೆಕಂಕಣಬದ್ಧರಾದರು. ಇವರ ಕಾಲದಲ್ಲಿ ಇಡೀ ¨ ಯಾವ ಸಂಸ್ಥಾನದ  ಕಾಣದ ಅಭಿವೃದ್ಧಿಯನ್ನು ಮೈಸೂರು ರಾಜ್ಯವುಕಂಡುದರಿಂದ, ಮೈಸೂರು ಸಂಸ್ಥಾನಕ್ಕೆ ‘ಮಾದರಿ ಮೈಸೂರು’ ಎಂಬ ಕೀರ್ತಿ ಪ್ರಾಪ್ತವಾಯಿತು.ನಾಲ್ವಡಿ ಕೃಷರಾಜ ಒಡೆಯರು ೧೯೨೩ರಲ್ಲಿ ಹೊಸ ಕಾನೂನೊಂದನ್ನು ಜಾರಿಗೆ ತಂದು ಪ್ರಜಾಪ್ರತಿನಿಧಿ ಸಭೆ ಯನ್ನು ಶಾಸನಬದ್ಧ ಸಂಸ್ಥೆಯನ್ನಾಗಿಮಾರ್ಪಡಿಸಿದರು  . ಪ್ರಜಾ ಪ್ರತಿನಿಧಿ ಸಭೆಯು ಎರಡು ಬಾರಿ (೧ ಜೂನ್ಜೂನ್ ಮಹಾರಾಜರ ವರ್ಧಂತಿ, ೨ ಅಕ್ಟೋಬರ್ – ದಸರಾ
ಮಹೋತ್ಸವ) ಸಮಾವೇಶಗೊಂಡು ಕಲಾಪಗಳನ್ನ  ನಡೆಸುತ್ತಿತ್ತು. ಅಲ್ಲಿ ವಾರ್ಷಿಕ ಆಯವ್ಯಯ ಪರಿಶೀಲನೆ ಪ್ರಶ್ನೋತ್ತರಗಳು  ಠರಾವುಗಳನ್ನುಮಂಡಿಸುವುದು ಮುಂತಾದ ಸಂಸದೀಯ ಮಾದರಿಯ ನಡವಳಿಕೆಗಳು ನಡೆಯುತ್ತಿದ್ದವು.ನಾಲ್ವಡಿ ಕೃಷರಾಜ ಒಡೆಯರು ೧೯೦೭ ರಲ್ಲಿ ನ್ಯಾಯ ವಿಧಾಯಕ ಸಭೆಯನ್ನೂ ಸಹ ಸ್ಥಾಪಿಸಿದರು. ಮೇಲ್ಮನೆಯ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಈ ಸಂಸ್ಥೆ, ಜೂನ್ ಮತ್ತು ಡಿಸೆಂಬರ್ ತಿಂಗಳುಗಳಲಿ ಬೆಂಗಳೂರಿನಲ್ಲಿ ಸಮಾವೇಶಗೊಳ್ಳುತ್ತಿತ್ತು. ಪ್ರಜಾಪ್ರತಿನಿಧಿ  ಮಂಡಿಸಿದ ಎಲ್ಲವಿಷಯಗಳನ್ನೂ ಸಹ ವಿರ್ಮಶಿಸುವ ಅಧಿಕಾರ ಆ ಸಭೆಗೆ ಇದ್ದಿತು. ಮುಖ್ಯವಾಗಿ ಯಾವುದೇ ಕಾನೂನನ್ನು ಜಾರಿಗೊಳಿಸಲು ಆ ಸಭೆಯಅನುಮತಿ ಅಗತ್ಯವಾಗಿತತ್ತು. ಸರ್ಕಾರದ ಖರ್ಚುಗಳನ್ನು ಕಡಿಮೆ ಮಾಡುವ ಅಧಿಕಾರ ಸಹ ಇದ್ದಿತು.ನಾಲ್ವಡಿ ಕೃಷರಜ ಒಡೆಯರು ಕಾಲದಲ್ಲಿ
1. ಗ್ರಾಮ ನಿರ್ಮಲೀಕರಣ
2. ವೈದ್ಯ ಸಹಾಯ
3. ವಿದ್ಯಾ ಪ್ರಚಾರ
4. ನೀರಿನ ಸೌಕರ್ಯ
5. ಪ್ರಯಾಣ
ಸೌಲಭ್ಯ ಮುಂತಾದ ಕ್ಷೇತ್ರಗಳು ಸ್ವಯಂ ಆಡಳಿತ ಕ್ಷೇತ್ರಗಳಾದವು. ಮೈಸೂರು ಸಂಸ್ಥಾವನ್ನು ಮಾದರಿ ಸಂಸ್ಥಾನಕ್ಕಾಗಿ  ರೂಪಿಸಿದರು. ಸಾಹಿತ್ಯ , ಸಂಗೀತ, ವಾಸ್ತುಶಿಲ್ಪಗಳ ಅಭಿವೃದ್ಧಿಗೆ ಒತ್ತು ನೀಡಿದ .ಮೈಸೂರು – ಅರಸೀಕೆರೆ, ಬೆಂಗಳೂರು- ಚಿಕ್ಕಬಳ್ಳಾಪುರ, ಚಿಕ್ಕಜಾಜೂರು- ಚಿತ್ರದು ರ್ಗ, ನಂಜನಗೂಡು
– ಚಾಮರಾಜನಗರ, ತರೀಕೆರೆ ಶಿವಮೊಗ್ಗ- ಆನಂದಪುರ ಈ ಎಲ್ಲ ರೈಲು ಮಾರ್ಗಗಳನ್ನು ೧೯೩೧ರ ವೇಳೆಗೆ ಪೂರ್ಣಗೊಳಿಸಲಾಯಿತು.
ನಾಲ್ವಡಿ ಕೃಷರಾಜ ಒಡೆಯರ ಕಾಲದಲ್ಲಿ ೧೯೦೦ರಲ್ಲಿ ಶಿವನಸಮುದ್ರದ ಬಳಿ ಕಾವೇರಿ ನದಿ ನೀರಿನಿಂದ ಪ್ರಾರಂಭಿಸಿದ ಶಿವನಸಮುದ್ರ ಜಲವಿದ್ಯುತ್ ಯೋಜನೆ ಏಷ್ಯಾ ಖಂಡದಲ್ಲೇ ಮೊದಲು ಪ್ರಾರಂಭಿಸಿದ ಜಲವಿದ್ಯುತ್ ಯೋಜನೆಯಾಗಿದೆ. ೧೯೦೭ರಲ್ಲಿ ವಾಣಿ ವಿಲಾಸ ಸಾಗರ ಆಣೆಕಟ್ಟು (ಮಾರಿ ಕಣಿವೆ ಚಿತ್ರದುರ್ಗ) ಮತ್ತು ೧೯೧೧ರಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಕನ್ನಾಂಬಾಡಿಯಲ್ಲಿ ಕೃಷ್ಣರಾಜ ಸಾಗರ (ಏಖ – ಮಂಡ್ಯ ಜಿಲ್ಲೆ) ಆಣೆಕಟ್ಟು ನಿರ್ಮಾಣ ಮಾಡಿದ್ದರಿಂದ ವಿದ್ಯುತ್ ಮತ್ತು ನೀರಾವರಿ ಯೋಜನೆ  ಕರ್ಯರೂಪಕ್ಕೆ ಬಂದವು.ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಪ್ರಾಥಮಿಕ ಮತ್ತು ಮಾಧ್ಯಮಿಕ ವಿದ್ಯಾಭ್ಯಾಸವನ್ನ  ಉಚಿತ ಮತ್ತು ಕಡ್ಡಾಯವಾಗಿ ಪ್ರಾರಂಭಿಲಾಯಿತು.ನಾಡಿನಲ್ಲೇ ಮೊಟ್ಟಮೊದಲ ವಿಶ್ವವಿದ್ಯಾನಿಲಯವಾದ ಮೈಸೂರು ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಿದರು. ಬೆಂಗಳೂರಿನಲ್ಲಿ ಕನ್ನಡ ಸಾಹಿತ್ಯಪರಿಷತ್ತನ್ನು  ಪ್ರಾರಂಭಿಸಿದರು. ಮೈಸೂರು ಬ್ಯಾಂಕಿನ ಸ್ಥಾಪನೆ ಮಾಡಲಾಯಿತು. ಉಚಿತ ಆಸ್ಪತ್ರೆ ಕಾರ್ಯಾರಂಭ ಮಾಡಿದವು. ೧೯೦೬ರಲ್ಲಿಸಹಕಾರ ಸಂಘಗಳನ್ನ  ಸ್ಥಾಪಿಸಲಾಯಿತು.
೧೯೦೯ – ದೇವದಾಸಿ ಪದ್ಧತಿ ನಿಷೇದ ,೧೯೧೦- ಬಸವಿ ಪದ್ದತಿ ರದ್ಧತಿ, ಪೂಜೆ ಪದ್ದತಿ ಸಂಪೂರ್ಣ ನಿರ್ಮೂಲನೆ, ೧೯೩೬ – ವೇಶ್ಯಾ ವೃತ್ತಿ ತಡೇಗಟ್ಟುವ ಕಾಯ್ದೆ; ವಿಧವಾ ಮರು ವಿವಾಹ ಕಾಯ್ದೆ, ಸ್ತಿಯರಿಗೆ ಕಡ್ಡಾಯ ಶಿಕ್ಷಣ ಜಾರಿ, ೧೯೧೪ರಲ್ಲಿ ಶಾಲಾ ಪ್ರವೇಶಕ್ಕೆ ಜಾತಿ ಪರಿಗಣನೆಯ ನಿಷೇದ ೧೯೧೯- ಮಾಧ್ಯಮಿಕ ಶಾಲಾ ಶಿಕ್ಷಣ ಶುಲ್ಕ ರದ್ಧತಿ, ೧೯೨೭ – ಮೊಟ್ಟ ಮೊದಲ ಬಾರಿಗೆ ಸ್ತಿಯರಿಗೆ ಮತದಾನದ ಹಕ್ಕು  , ೧೯೦೫ ಸಹಕಾರಿ ಕಾರ್ಮಿಕ ಪರಿಹಾರ ಕಾಯ್ದೆ, ೧೯೧೩ – ಮೈಸೂರು ಗ್ರಾಮ ನ್ಯಾಯಾಲಯ ಕಾಯ್ದೆ, ೧೯೧೮ – ಗ್ರಾಮ ಪಂಚಾಯಿತಿಗಳ ಕಾಯ್ದೆಗಳನ್ನು ಜಾರಿಗೆ ತಂದು‘ಸಾಮಾಜಿಕ ಕಾನೂನುಗಳ ಹರಿಕಾರ’ ಎಂದು ಹೆಸರಾದರು.
 
೨. ಸರ್ ಎಂ. ವಿಶ್ವೇಶ್ವರಯ್ಯ
ಬೆಂಗಳೂರಿನಲ್ಲಿ ವಿಶ್ವೇಶ್ವರಯ್ಯನವರ ಶತಮಾನೋತ್ಸವ ಸಮಾರಂಭ ನಡೆಯಿತು. ಆ ಕಾರ್ಯಕ್ರಮದಲ್ಲಿ ಅಂದಿನ ಭಾರತದ ಪ್ರಧಾನ ಮಂತ್ರಿಗಳಾಗಿದ್ದ ಪಂಡಿತ್ ಜವಾಹರಲಾಲ್ನೆರವರುಭಾಗವಹಿಸಿದ್ದರು.ಅವರುಸರ್.ಎಂ.ವಿಶ್ವೇಶ್ವರಯ್ಯ ಅವರ ಬಗ್ಗೆ “ದದುರದೃಷ್ಟವಶಾತ್ ಭಾರತೀಯರಾದ ನಾವು ಹೆಚ್ಚು ಮಾತನಾಡುವವರು ಮತ್ತು ನುಡಿದಂತೆ ನಡೆಯಲಾರದವರೆಂಬ ದೂಷಣೆಗೆ ಒಳಗಾಗಿದ್ದೇವೆ. ತಾವು ಈ ಮಾತಿಗೆ ಬಹುದೊಢ್ಡ ರೀತಿಯಲ್ಲಿ ಹೊರತಾಗಿದ್ದೀರಿ. ತಾವು ಕಡಿಮೆ ಮಾತನಾಡಿದ್ದೀರಿ; ಹೆಚ್ಚು ಕೆಲಸ ಮಾಡಿದ್ದೀರಿ. ಅದನ್ನು ನಾವು ತಮ್ಮಿಂದ ಕಲಿಯೋಣ”. ಎಂದು ಹೇಳಿದರು.ವಿಶ್ವೇಶ್ವರಯ್ಯ ಅವರು ಕ್ರಿಸ್ತ ಶಕ ೧೮೬೦ ಸೆಪ್ಟೆಂಬರ್  ೧೫ರಂದು ಶ್ರೀನಿವಾಸಶಾಸ್ತ್ರೀ ಮತ್ತು ವೆಂಕಟಲಕ್ಷ್ಮಮ್ಮ  ಅವರ ಎರಡನೇ  ಮಗನಾಗಿ ಜನಿಸಿದರು. ವಿಶ್ವೇಶ್ವರಯ್ಯನವರ ಪೂರ್ವಜರು ಮೂಲತಃ ಕರ್ನೂಲು ಜಿಲ್ಲೆ ಗಿಡ್ಡಲೂರು ತಾಲೂಕಿನ ‘ಮೋಕ್ಷಗೊಂಡು ’ ಅಗ್ರಹಾರಕ್ಕೆ ಸೇರಿದವರು.
ಕಾರಣಾಂತ ಕರ್ನಾಟಕಕ್ಕೆ ವಲಸೆ ಬಂದು ಚಿಕ್ಕಬಳ್ಳಾಪುರ ಸಮೀಪದಲ್ಲಿರುವ ಮುದ್ದೇನಹ ಳ್ಳಿ ನೆಲೆಸಿದ . ವೆಂಕಟಲಕ್ಷ್ಮಮ್ಮ  ಅವರಿಗೆ ಮಕ್ಕಳು  ಹೆಚ್ಚು ಓದಿ ದೊಡ್ಡ ವ್ಯಕ್ತಿಗಳಾಗಬೇಕೆಂಬ ಹಂಬಲವಿತ್ತು. ಅದಕ್ಕಾಗಿ ಸಂಸಾರವನ್ನು ಚಿಕ್ಕಬಳ್ಳಾಪುರಕ್ಕೆ ಸ್ಥಳಾಂತರಿಸಿದ.ವಿಶ್ವೇಶ್ವರಯ್ಯ ಅವರ ಪ್ರಾಥಮಿಕ ಶಿಕ್ಷಣ ಚಿಕ್ಕಬಳ್ಳಾಪುರದಲ್ಲಿ ನಡೆಯಿತು.ಸೋದರಮಾವ ಎಚ್. ರಾಮಯ್ಯ ಅವರ ಮಾರ್ಗದನದಂತೆ ಬೆಂಗಳೂರುರಿನ ವೆಸ್ಲಿಯನ್ ಪ್ರೌಢಶಾಲೆಯಲ್ಲಿ ಪ್ರೌಢಶಿಕ್ಷಣವನ್ನೂ ಸೆಂಟ್ರಲ್ ಕಾಲೇಜಿನಲ್ಲಿ   ಇಂಟರ್ ಮೀಡಿಯಟ್ ಮತ್ತು ಮೂರು ವರ್ಷಗಳ ಬಿ.ಎ. ಪದವಿಶಿಕ್ಷಣವನ್ನೂಪಡೆದು ಅಂದಿನಮೈಸೂರುದಿವಾನರಾಗಿದ್ದ ಸಿ.ರಗಾಚಾರ್ಲುರವರು ನೀಡಿದ ವಿದ್ಯಾರ್ಥಿವೇತನ ಸೌಲಬ್ಯಾವನ್ನು ಬಳಸಿಕೊಂಡುಪೂನಾದ ಎಂಜಿನಿಯರಿಗ್ ಕಾಲೇಜಿನಲ್ಲಿ ಡಿಪ್ಲೊಮಾ ಶಿಕ್ಷಣವನ್ನು ಪ್ರಥಮಸ್ಥಾನದಲ್ಲಿ   ಪಡೆದು ಜೇಮ್ಸ್ ಬರ್ಕ್ಲಿ ಬಹುಮಾನಕ್ಕೂ ಪಾತ್ರರಾದರು.ವಿಶ್ವೇಶ್ವರಯ್ಯನವರು  ೧೮೮೪ ರಲ್ಲಿ ಮುಂಬೈ ಪ್ರಾಂತ್ಯದ ಲೋಕೋಪಯೋಗಿ ಇಲಾಖೆಯಲ್ಲಿ ಸಹಾಯಕ ಎಂಜಿನಿಯರ್ ಆಗಿ ಸೇವೆ ಪ್ರಾರಂಭಿಸಿದರು.ಖಾನ್ದೇಶ ಮತ್ತು ನಾಸಿಕ್ ಜಿಲ್ಲೆಗಳಲ್ಲಿ  ಹರಿಯುತ್ತಿದ್ದ ಪಂಜ್ರಾ ನದಿಯ ನೀರಾವರಿ ಕಾಲುವೆಗೆ ತೂಬು ಮೇಲ್ಗಾಲುವೆಯನ್ನು ನಿರ್ಮಿಸುವಕಾರ್ಯದಲ್ಲಿ ಯಶಸ್ಸು ಗಳಿಸಿ ಮೇಲಧಿಕಾರಿಗಳ ಮೆಚ್ಚುಪಾತ್ರರಾದರು. ಮುಂಬೈ ಸರ್ಕಾರದ ಸೂಚನೆಯ ಮೇರೆಗೆ ಸಿಂಧ್ ಪ್ರಾಂತ್ಯದ ಸುಕ್ಕೂರು ಪಟ್ಟಣಕ್ಕೆ ಕುಡಿಯುವ ನೀರಿನ ಪೂರೈಕೆಯ ಕಾರ್ಯವನ್ನು ಯಶಸ್ವಿಯಾಗಿ ಪೂರೈಸಿದರು. ಅಂದಿನ ಮುಂಬೈ ಪ್ರಾಂತ್ಯದ ಗವರ್ನರ್ಆಗಿದ್ದ ಲಾರ್ಡ್  ಹರ್ಸ್ಟ್ ಅವರು  ಇವರನ್ನು ಮುಕ್ತಕಂಠದಿಂದ  ಹಾಡಿಹೊಗಳಿದರು.ವಿಶ್ವೇಶ್ವರಯ್ಯನವರು ಪೂನಾದ ಮುಥಾ ಕಾಲುವೆಗೆ ನೀರಿನ ನೆಲೆಯಾಗಿದ್ದ ಪೀಪ್ ಜಲಾಶಯಕ್ಕೆ ಸ್ವಯಂಚಾಲಿತ ಬಾಗಿಲುಗಳನ್ನ  ಅಳವಾದಿಸಿದ್ದರು  .ಸ್ವಯಂಚಾಲಿತ ಬಾಗಿಲುಗಳ ಅನ್ವೇಷ್ವಣೆ ವಿಶ್ವೇಶ್ವರಯ್ಯ ಅವರ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿಯನ್ನು ಸೇರಿಸಿತು. ಇದನ್ನೇ ಮುಂದೆ ಗ್ವಾಲಿಯರ್ನ ತಿಗ್ರ ಜಲಾಶಯಕ್ಕೂ ಮೈಸೂರಿನ ಕೃಷ್ಣರಾಜಸಾಗರ (ಈಗಿನ ಮಂಡ್ಯಜಿಲ್ಲೆಯ) ಜಲಾಶಯಕ್ಕೂ ಅಳವಡಿ  ಸಲಾಯಿತು. ಮುಂದೆ ನಾಲುನಾಲ್ಕು ಕಾಲ ಮುಂಬೈ ಪ್ರಾಂತ್ಯದ ಸ್ಯಾನಿಟರಿ ಎಂಜಿನಿಯರ್ ಆಗಿ ನೇಮಕಕೊಂಡ  ಈ ಹುದ್ದೆಗೆ ನೇಮಕವಾದ ಪ್ರಥಮ  ಭಾರತೀಯರು ಎಂಬುದು ಗಮನಾರ್ಹ ಅಂಶ. ಹೈದರಾಬಾದ್ ನಗರಕ್ಕೆ ಈಸಿ ಮತ್ತು ಮೂಸಿ ನದಿಗಳ ಪ್ರವಾಹದಿಂದ ಅಪಾರ ನಷ್ಟ ಸಂಭವಿಸುತ್ತಿತ್ತು. ಅದನ್ನು   ಎರಡು ನದಿಗಳಿಗೂಕ ಜಲಾಶಯ ನಿರ್ಮಿಸುವುದರ ಮೂಲಕ ಸಮಸ್ಯೆಯನ್ನು  ನ್ನು ಬಗೆಹರಿಸಿದರು. ಹೈದರಾಬಾದ್ ನಗವನ್ನು ಭಾರತದ ಸುಯೋಜಿತ ನಗರಗಳಸಾಲಿಗೆ ಸೇರ್ಪಡೆಯಾಗುವಂತೆ ಮಾಡಿದರು.ವಿಶ್ವೇಶ್ವರಯ್ಯ ಅವರು ಮೂರು  ಕಾಲ ಮೈಸೂರು ಸಂಸ್ಥಾನಗಳಲ್ಲಿ  ಮುಖ್ಯ ಎಂಜಿನಿಯರ್ ಆಗಿ ಕಾರ್ಯ ನಿರ್ವಹಿಸಿದರು. ಕಾವೇರಿನದಿಗೆ ಕನ್ನಂಬಾಡಿ ಜಲಾಶಯ ನಿರ್ಮಾಣ ಯೋಜನೆ ಪ್ರಾರಂಭ, ರೈಲು ಮಾರ್ಗಗಳ ವಿಸ್ತರಣೆಗೆ ಕ್ರಮ, ತಾಂತ್ರಿಕ ಶಿಕ್ಷಣದ ಅಭಿವೃದ್ಧಿಗೆ ಯೋಜನೆ, ಮಾರಿಕಣಿವೆ ಜಲಾಶಯದ ನೀರು ಹಂಚಿಕೆಯ , ಸಣ್ಣ ನೀರಾವರಿ ವ್ಯವಸ್ಥೆಗೆ ಮರುಜೀವ, ಇವೆಲ್ಲ ಅವರ ಅಭಿವೃದ್ಧಿ ಕಾರ್ಯಗಳ ಕುರುಹು.ಮೈಸೂರು ಸಂಸ್ಥಾನದ ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರು ವಿಶ್ವೇಶ್ವರಯ್ಯ ಅವರನ್ನು ದಿವಾನರನ್ನಾಗಿ ನೇಮಿಸಿದರು. ಆಡಳಿತದಲ್ಲಿ ಹೊಸ ಮಾದರಿಯನ್ನು ಅನುಷ್ಠಾನಗೊಳಿಸಿ  ಕೆಲಸ ಕಾರ್ಯಗಳಲ್ಲಿ ಸುಧಾರಣೆ ತಂದರು. ಅಷ್ಠೆ ಅಲ್ಲದೆ ದಕ್ಷತೆ ಮತ್ತು ಪ್ರಾಮಾಣಿಕತೆಗೆ ಒತ್ತುನೀಡಿದ. ಸಂಸ್ಥಾನದಲ್ಲಿ ಸ್ಥಳೀಯ ಮಟ್ಟದಲ್ಲಿ ಕೇಂದ್ರೀಕೃತವಾಗಿದ್ದ ನ್ಯಾಯಾಂಗ ಮತ್ತು ಕಾರ್ಯಾಂಗಗಳ ಅಧಿಕಾರವನ್ನು ಪ್ರತ್ಯೇಕಗೊಳಿಸಿಳಿಸಿದರು.ಗಾಂಧೀಜಿ ಅವರು ಮೈಸೂರಿನ ಆಡಳಿತ ರೀತಿಯನ್ನು ಮುಕ್ತಕಂಠದಿಂದ  ಹೊಗಳಿದರು. ಇದರಿಂದ ‘ವೆಮೈಸೂರು ಮಾದರಿ’ ಎಂಬ ಹೊಸ ಆಡಳಿತಮಾದರಿ ಜನ್ಮತಾಳಿತು.ಶಿಕ್ಷಣದ ಬಗ್ಗೆವಿಶ್ವೇಶ್ವರಯ್ಯ ಅವರು ಆಧುನಿಕ ಶಿಕ್ಷಣವೇ ಎಲ್ಲ ಸಮಸ್ಯೆಗಳಿಗೂಪರಮೋಚ್ಚ  ಪರಿಹಾರ,ಶಿಕ್ಷಣವು ಸಂಜೀವಿನಿ ಎಂಬುದನ್ನು  ಅರಿತಿದ್ದ ಇವರು  “ಶಿಕ್ಷಣಕ್ಕಾಗಿ ಶಿಕ್ಷಣವಿರಬೇಕು. ಅದು ಕೆಲವೇ ಜನರ ಸೊತ್ತಾಗದೆ ಪ್ರಗತಿಪರ ರಾಜ್ಯದಲ್ಲಿಎಲ್ಲರ ಆಜನ್ಮಸಿದ್ಧ ಹಕ್ಕಾಗಬೇಕು”ಎಂದು ಹೇಳಿದ್ದಾರೆ. ಅದಕ್ಕಾಗಿ ಅವರು ಶಿಕ್ಷಣದ ವಿವಿಧ ಯೋಜನೆಗಳನ್ನು ರೂಪಿಸಿದರು. ೧೯೧೩ ರಲ್ಲಿ ಪ್ರಾಥಮಿಕ ಶಿಕ್ಷಣ ನಿಬಂಧನೆಯನ್ನು ಜಾರಿಗೆತಂದರು. ಪ್ರೌಢಶಿಕ್ಷಣ ಶಾಲೆಗಳು  ಮದ್ರಾಸ್ ವಿಶ್ವವಿದ್ಯಾನಿಲಯದ ನಿಯಂತ್ರಣಕ್ಕೆಒಳಪಟ್ಟಿದ್ದವು. ಇದನ್ನು ಬದಲಿಸಿ ಮೈಸೂರು ಸಂಸ್ಥಾನದ ಪ್ರತ್ಯೇಕವಾದ ಪ್ರೌಢಶಿಕ್ಷಣದಅಂತಿಮ ಪರೀಕ್ಷೆ ನಡೆಸುವ ಯೋಜನೆಗಳನ್ನು  ಆರ್ಥಿಕ ಪರಿಷತ್ತಿನ ಮೂಲಕರೂಪುಗೊಳಿಸಿದರು  . ಮೈಸೂರು ವಿಶ್ವವಿದ್ಯಾನಿಲಯದ ಸ್ಥಾಪನೆ ಇವರ ಕಾಲ-ಕಾಲದಲ್ಲಾಯಿತು.ತಾಂತ್ರಿಕ ಮತ್ತು ವೃತ್ತಿಪರ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದರು. ಇದಕ್ಕಾಗಿಯೇ ಬೆಂಳೂರಿನಲ್ಲಿ ಮೆಕಾನಿಕಲ್ ಎಂಜಿನಿಯರಿಂಗ್  ಶಾಲೆ ಮೈಸೂರಿನಲ್ಲಿ ಚಾಮರಾಜೇಂದ್ರತಾಂತ್ರಿಕ ಸಂಸ್ಥೆಗಳನ್ನು  ಪ್ರಾರಂಭಿಸಿದರು. ‘ಕಕನ್ನಡ ಸಾಹಿತ್ಯ ಪರಿಷತ್ತನ್ನು’ ಸ್ಥಾಪಿಸಿದ್ದು ಇವರಕಾಲದ ಮತ್ತೊಂದು ಮಹತ್ವದ ಸಾಧನವಗಿದೆ.ವಿಶ್ವೇಶ್ವರಯ್ಯ ಅವರು ಕೈಗಾರಿಕೆಗೆ ಅಗ್ರ  ನೀಡಿದ್ದರು. “ಕೈಗಾರಿಕೀಕರಣ ಇಲ್ಲವೆ ಅವನತಿ” ಎಂಬ ಘೋಷಣೆ ಮಾಡಿದರು  . ಇವರ ಕಾಲದಲ್ಲಿ¨ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯನ್ನು ಸ್ಥಾಪಿತವಾಯಿತು. ಇದಲ್ಲದೆ ಹೆಂಚಿನ ಕಾರ್ಖಾನೆ, ಮೊಳೆ ಮತ್ತು ಗೊಬ್ಬರ ತಯಾರಿಕಾಸ್ಥಾವರ, ಸಕ್ಕರೆ ಕಾರ್ಖಾನೆ, ಔಷದs ತಯಾರಿಕಾ ಘಟಕ, ಗಂಧದ ಎಣ್ಣೆ, ಬೆಂಕಿಕಡ್ಡಿ ಹಾಗೂ ಕಾಗದದ ಕಾರ್ಖಾನೆಕಾರ್ಖಾನೆಗಳನ್ನೂ  ಸ್ಥಾಪಿತವಾದವು. ಸೋಪುಹಾಗೂ ಲೋಹ ತಯಾರಿಕೆ, ಕಲೆ ಮತ್ತು ಕರಕುಶಲ ಡಿಪೋ, ಕೃಷ್ಣರಜೇಂದ್ರ ಬಟ್ಟೆ ಗಿರಣ,ಕಾಗದದ ತಿರುಳು, ರಟ್ಟು, ಪೆನ್ಸಿಲ್, ಬೆಂಕಿಕಡ್ಡಿ ಮತ್ತುಪೀಠೋಪಣಗಳ ತಯಾರಿಕಾ ಘಟಕಗಳು  -ಹೀಗೆ ಹೀಗೆ ನೂರಾರು ಕೈಗಾರಿಕೆಗಳು  ಪ್ರಾರಂಭಗೊಂಡವು.ವಿಶೆಶ್ವೇಶ್ವರಯ್ಯನವರು ಹಣಕಾಸು ನೀತಿಯಲ್ಲಿ ಸಾಕಷ್ಟು ಮಾರ್ಪಾಡು ಮಾಡಿದ . ಇದಕ್ಕಾಗಿ ೧೯೧೩ ರಲ್ಲಿ ಮೈಸೂರು ಬ್ಯಾಂಕನ್ನು ಸ್ಥಾಪಿಸಿದರು..ಕೈಗಾರಿಕೆಅಭಿವೃದ್ಧಿಗೆ ಫೀಡರ್ ಬ್ಯಾಂಕ್ ಹಾಗೂ ಕೈಗಾರಿಕಾ ಹೂಡಿಕೆ ಮತ್ತು ಅಭಿವೃದ್ಧಿ ನಿಧಿಗಳನ್ನು ಸ್ಥಾಪಿಸಿದರು.. ಸಾರ್ವಜನಿಕ ಜೀವವಿಮಾಯೋಜನೆ ಜಾರಿಗೆ ತಂದರು. ರೈತರಿಗೆ ಹಾಗೂ ಕರಕುಶಲ ಕೆಲಸಗಾರರಿಗೆ ಸಾಲದ ಸೌಲಭ್ಯ ನೀಡಲು ಸಹಕಾರಿ ಕ್ಷೇತ್ರದಲ್ಲಿ . ಪ್ರಾಂತೀಯ ಸಹಕಾರಿ ಬ್ಯಾಂಕ್ಗಬ್ಲ್ಯಾಂಕ್ಗಳನ್ನು ಸ್ಥಾಪಿಸಿದರು. ರಾಜ್ಯದ ಆಸ್ತಿಯನ್ನು ಹೆಚ್ಚಿಸಿ, ಆದಾಯವುದರ ಮೂಲಕಅಭಿವೃದ್ಧಿ ಕಾರ್ಯಗಳ ಪ್ರಭಾವವನ್ನು ಅಳೆಯಲು ಅನುಕೂಲವಾಗುವಂತೆ ಆಯವ್ಯಯದಲ್ಲಿ ಹೊಸ  ಕಂಡುಕೊಡರು.ಬ್ರಿಟಿಷ್ ಸರ್ಕಾರ ವಿಶ್ವೇಶ್ವರಯ್ಯ ಅವರಿಗೆ ‘ಸರ್’ ಪದವಿಯನ್ನು ನೀಡಿ ಗೌರವಿಸಿತು. ಅವರ ಸಾಧನೆಯನ್ನು ಗುರುತಿಸಿ ಭಾರತ ಸರ್ಕಾರ ದೇಶದಅತ್ಯುನ್ನತ ‘ಭಾರತ ರತ್ನ’ಪ್ರಶಸ್ತಿಗಳನ್ನು  ಸಲ್ಲಿಸಿತು. ಮಹಾನ್ ಆಡಳಿತಗಾರರಾದ ಇವರ ಶತಮಾನೋತ್ಸವದ ಸವಿನೆಪಿಗಾಗಿ ವಿಶೇಷ ಅಂಚೆಚೀಟಿಬಿಡುಗಡೆ ಮಾಡಲಾಯಿತು.  ‘ರಿಕನ್ಸ್ಟಕ್ಟಿಂಗ್ ಇಂಡಿಯಾ’, ‘ಪ್ಲಾಪ್ಲಾನ್ಡ್ ಎಕಾನಮಿ ಫಾರ್ ಇಂಡಿಯ’ ಹಾಗೂ ಆತ್ಮಚರಿತ್ರೆ‘ಮೆಮೋರೀಸ್  ಆಫ್ ಮೈ ವರ್ಕಿಂಗ್ ’, ‘ನೇಷನ್ ಬಿಲ್ಡಿಂಗ್ ಪ್ಲಾನ್ ಫಾರ್ ಇಂಡಿಯಾ’ ಕೃತಿಗಳನ್ನು ಬರೆದು  ಸಾಹಿತ್ಯ ಕ್ಷೇತ್ರಕ್ಕೆಕೊಡುಗೆ ನೀಡಿದ್ದಾರೆ. ಸೆಪ್ಟೆಂಬರ್ ೧೫, ೧೯೬೦ ರಂದು ಶತಮಾನೋತ್ಸವ ಅಭಿನಂದನೆ ಕರ್ಯಕ್ರಮದಲ್ಲಿ‘ಸರ್ ಎಂ. ವಿ.ವಿ.’ಎಂಬ ಅಭಿನಂದನಾ ಗ್ರಂಥವನ್ನುಪ್ರಕ್ತಿ ಸಲಾಯಿತು. ೧೦೨  ತುಂಬುಜೀವನ ಪೂರೈಸಿದ ಸರ್ ಎಂ. ವಿ. ಅವರು ೧೯೬೨ ರಲ್ಲಿ ಇಹಲೋಕ ತ್ಯಜಿಸಿದರು .ವಿಶ್ವೇಶ್ವರಯ್ಯ ಅವರ ಹುಟ್ಟು ಹಬ್ಬದ ನೆನಪಿಗಾಗಿ‘ ದಿನಾಚರಣೆ’ಯನ್ನು ಮಾಡಲಾಗುತ್ತಿದೆ.

ಅಭ್ಯಾಸ ಪ್ರಶ್ನೋತ್ತರಗಳು

ಅ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದೊಂದು  ವಾಕ್ಯಗಳಲ್ಲಿ ಉತ್ತರಿಸಿ.

1. ನಾಲ್ವಡಿ ಕೃಷ್ಣರಾಜ ಒಡೆಯರು ಯಾವಾಗ ಪಟ್ಟಾಭಿಷಿಕ್ತರಾದರು?
ನಾಲ್ವಡಿ ಕೃಷ್ಣರಾಜ ಒಡೆಯರು ಕ್ರಿ. ಶ. ೧೮೯೫ ರಲ್ಲಿ ಪಟ್ಟಾಭಿಷಿಕ್ತರಾದರು.

2. ನಾಲ್ವಡಿ ಕೃಷ್ಣರಾಜ ಒಡೆಯರು ಯಾವುದಕ್ಕಾಗಿ ಕಂಕಣಬದ್ಧರಾದರು?
ನಾಲ್ವಡಿ ಕೃಷ್ಣರಾಜ ಒಡೆಯರು ಮೈಸೂರು ರಾಜ್ಯದ ಸರ್ವೋತೋಮುಖ ಅಭಿವೃದ್ಧಿಗೆ ಕಂಕಣಬದ್ಧರಾದರು.

3. ಏಷ್ಯಾ ಖಂಡದಲ್ಲಿಯೇ ಮೊದಲು ಪ್ರಾರಂಭಿಸಿದ  ಜಲ ವಿದ್ಯುತ್ ಯೋಜನೆ ಯಾವುದು?
ಶಿವನಸಮುದ್ರ ಜಲವಿದ್ಯುತ್ ಯೋಜನೆ ಏಷ್ಯಾ ಖಂಡದಲ್ಲೇ ಮೊದಲು ಪ್ರಾರಂಭಿಸಿದ ಜಲವಿದ್ಯುತ್ ಯೋಜನೆಯಾಗಿದೆ.

4. ಬ್ರಿಟಿಷ್ ಸರ್ಕಾರ ವಿಶ್ವೇಶ್ವರಯ್ಯನವಯಿಗೆ  ಅವರಿಗೆ ಯಾವ ಪದವಿಯನ್ನ  ನೀಡಿ ಗೌರವಿಸಿತು?
ಬ್ರಿಟಿಷ್ ಸರ್ಕಾರ ವಿಶ್ವೇಶ್ವರಯ್ಯ ಅವರಿಗೆ ‘ಸರ್’ ಪದವಿಯನ್ನು ನೀಡಿ ಗೌರವಿಸಿತು.

5. ವಿಶ್ವೇಶ್ವರಯ್ಯನವರು   ಅವರನ್ನ  ದಿವಾನರಾಗಿ ನೇಮಿಸಿದವರು ಯಾರು?
ನಾಲ್ವಡಿ ಕೃಷ್ಣರಾಜ ಒಡೆಯರು ವಿಶ್ವೇಶ್ವರಯ್ಯ ಅವರನ್ನು ದಿವಾನರನ್ನಾಗಿ ನೇಮಿಸಿದರು.

6. ವಿಶ್ವೇಶ್ವನವರ  ಅವರ ಹುಟ್ಟು ಹಬ್ಬದ ನೆನಪಿಗಾಗಿ ಯಾವ ದಿನಾಚರಣೆಯನ್ನು ಮಾಡಲಾಗುತ್ತಿದೆ?
ವಿಶ್ವೇಶ್ವರಯ್ಯ ಅವರ ಹುಟ್ಟು ಹಬ್ಬದ ನೆನಪಿಗಾಗಿ‘ಎಂಜಿನಿಯರ್ ದಿನಾಚರಣೆ’ಯನ್ನು ಮಾಡಲಾಗುತ್ತಿದೆ.

ಹೆಚ್ಚುವರಿ ಪ್ರಶ್ನೋತ್ತರಗಳು

7. ನಾಲ್ವಡಿ ಕೃಷ್ಣರಾಜ ಒಡೆಯರು ಬಾಲಕರಾಗಿದ್ದಾಗ ರೀಜೆಂಟರಾಗಿ ಆಡಳಿತ ನಿರ್ವಹಣೆ ಮಾಡಿದವರು ಯಾರು ?
ನಾಲ್ವಡಿ ಕೃಷ್ಣರಾಜ ಒಡೆಯರು ಬಾಲಕರಾಗಿದ್ದಾಗ ಮಹಾರಾಣಿ ವಾಣಿ ವಿಲಾಸಮ್ಮನವರು ರೀಜೆಂಟರಾಗಿ ಆಡಳಿತ ನಿರ್ವಹಣೆ ಮಾಡಿದರು.

8. ನಾಲ್ವಡಿ ಕೃಷ್ಣರಾಜ ಒಡೆಯರು ಯಾವಾಗ ನ್ಯಾಯ ವಿಧಾಯಕ ಸಭೆಯನ್ನೂ  ಸಹ ಸ್ಥಾಪಿಸಿದರು.
ನಾಲ್ವಡಿ ಕೃಷ್ಣರಾಜ ಒಡೆಯರು ೧೯೦೭ ರಲ್ಲಿ ನ್ಯಾಯ ವಿಧಾಯಕ ಸಭೆಯನ್ನೂ ಸಹ ಸ್ಥಾಪಿಸಿದರು.
 
9. ಕನ್ನಾಂಬಾಡಿ ಆಣೆಕಟ್ಟನ್ನು ಯಾವ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ ?
ಕನ್ನಾಂಬಾಡಿ ಆಣೆಕಟ್ಟನ್ನು ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ.

10. “ಕೈಗಾರಿಕೀಕರಣ ಇಲ್ಲವೆ ” ಎಂಬ ಘೋಷಣೆ ಮಾಡಿದರು  ಯಾರು ?
“ಕೈಗಾರಿಕೀಕರಣ ಇಲ್ಲವೆ ಅವನತಿ” ಎಂಬ ಘೋಷಣೆ ಮಾಡಿದರು ಸರ್.ಎಂ. ವಿಶ್ವೇಶ್ವರಯ್ಯನವರು.

11. ಸರ್.ಎಂ. ವಿಶ್ವೇಶ್ವಯ್ಯನವರ  ಸಾಧನೆಯನ್ನು ಗುರುತಿಸಿ ಭಾರತ ಸರ್ಕಾರ ಯಾವ ಪ್ರಶಸ್ತಿಯನ್ನು ನೀಡಿತು ?
ಸರ್.ಎಂ. ವಿಶ್ವೇಶ್ವರಯ್ಯನವರ ಸಾಧನೆಯನ್ನು ಗುರುತಿಸಿ ಭಾರತ ಸರ್ಕಾರ ದೇಶದ ಅತ್ಯುನ್ನತ ‘ಭಾರತ ರತ್ನ’ ಪ್ರಶಸ್ತಿಯನ್ನು ನೀಡಿತು.

12. ಜಲಾಶಯಗಳಿಗೆ ಸ್ವಯಂಚಾಲಿತ ಬಾಗಿಲುಗಳ ಅನ್ವೇಷ್ವಣೆ ಮಾಡಿದವರು  ಯಾರು ?

ಜಲಾಶಯಗಳಿಗೆ ಸ್ವಯಂಚಾಲಿತ ಬಾಗಿಲುಗಳ ಅನ್ವೇಷ್ವಣೆ ಮಾಡಿದವರು ಸರ್.ಎಂ. ವಿಶ್ವೇಶ್ವರಯ್ಯನವರು.

13. ವಿಶ್ವೇಶ್ವರಯ್ಯನವರ  ಪೂರ್ವಜರು ಎಲ್ಲಿಯವರು ?
ವಿಶ್ವೇಶ್ವರಯ್ಯನವರ ಪೂರ್ವಜರು ಮೂಲತಃ ಕರ್ನೂಲು ಜಿಲ್ಲೆ ಗಿಡ್ಡಲೂರು ತಾಲೂಕಿನ ‘ಮೋಕ್ಷಗೊಂಡಂ’ ಅಗ್ರಹಾರಕ್ಕೆ ಸೇರಿದವರು.

ಆ) ಕೊಟ್ಟಿರುವ ಪ್ರಶ್ನೆಗಳಿಗೆ ಮೂರು-ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ.

1. ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಯಾವ ಕ್ಷೇತ್ರಗಳು ಸ್ವಯಂ ಆಡಳಿತ ಕ್ಷೇತ್ರಗಳಾದವು?
ನಾಲ್ವಡಿ ಕೃಷ್ಣರಾಜ ಒಡೆಯರು ಕಾಲದಲ್ಲಿ
1. ಗ್ರಾಮ ನಿರ್ಮಲೀಕರಣ 
2. ವೈದ್ಯ ಸಹಾಯ
3. ವಿದ್ಯಾ ಪ್ರಚಾರ
4. ನೀರಿನ ಸೌಕರ್ಯ 
5. ಪ್ರಯಾಣ ಸೌಲಭ್ಯ ಮುಂತಾದ ಕ್ಷೇತ್ರಗಳ್ನ್ನು ಸ್ವಯಂ ಆಡಳಿತ ಕ್ಷೇತ್ರಗಳಾದಗ  .

2. ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಯಾವ ನೀರಾವರಿ ಯೋಜನೆಗಳು ಕಾರ್ಯರೂಪಕ್ಕೆ ಬಂದವು?
ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ೧೯೦೦ರಲ್ಲಿ ಶಿವನ¸ªಸಮುದ್ರದ ಬಳಿ ಕಾವೇರಿ ನದಿ ನೀರಿನಿಂದ ಪ್ರಾರಂಭಿಸಿದ ಶಿವನ ಸಮುದ್ರ ಜಲವಿದ್ಯುತ್ಯೋಜನೆ, ೧೯೦೭ರಲ್ಲಿ ವಾಣಿ ವಿಲಾಸ ಸಾಗರ ಆಣೆಕಟ್ಟು (ಮಾರಿ ಕಣಿವೆ ) ಮತ್ತು ೧೯೧೧ರಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಕನ್ನಾಂಬಾಡಿಯಲ್ಲಿ ಕೃಷ್ಣರಾಜ  ಸಾಗರ ಆಣೆಕಟ್ಟು ನಿರ್ಮಾಣ ಮುಂತಾದ ವಿದ್ಯುತ್ ಮತ್ತು ನೀರಾವರಿ ಯೋಜನೆಗಳು  ಕಾರ್ಯರೂಪಕ್ಕೆ ಬಂದವು.

3.ಶಿಕ್ಷಣದ ಬಗ್ಗೆ ವಿಶ್ವೇಶ್ವರಯ್ಯ ಅವರು ಏನೆಂದು ಹೇಳಿದ್ದಾರೆ ?
ಶಿಕ್ಷಣದ ಬಗ್ಗೆ ವಿಶ್ವೇಶ್ವರಯ್ಯ ಅವರು “ ಆಧುನಿಕ ಶಿಕ್ಷಣವೇ ಎಲ್ಲ ಸಮಸ್ಯೆಗಳಿಗೂ ಪರಮೋಚ್ಚ  ಪರಿಹಾರ, ಶಿಕ್ಷಣವು ಸಂಜೀವಿನಿ , ಶಿಕ್ಷಣಕ್ಕಾಗಿಶಿಕ್ಷಣವಿರಬೇಕು. ಅದು ಕೆಲವೇ ಜನರ ಸೊತ್ತಾಗದೆ ಪ್ರಗತಿಪರ  ಪರ ರಾಜ್ಯದಲ್ಲಿ ಎಲ್ಲರ ಆಜನ್ಮಸಿದ್ಧ ಹಕ್ಕಾಗಬೇಕು ”ಎಂದು ಹೇಳಿದ್ದಾರೆ.

4. ನೆಹರೂ ಅವರು ಸರ್ ಎಂ. ವಿಶ್ವೇಶ್ವರಯ್ಯ ಅವರ ಬಗ್ಗೆ ಏನೆಂದು ಹೇಳಿದ್ದಾರೆ ?
ಸರ್.ಎಂ.ವಿಶ್ವೇಶ್ವರಯ್ಯ ಅವರ ಬಗ್ಗೆ “ದುರದೃಷ್ಟವಶಾತ್ ಭಾರತೀಯರಾದ ನಾವು  ಮಾತನಾಡುವವರು ಮತ್ತು ನುಡಿದಂತೆನಡೆಯಲಾರದ ಸಂಭಾಷಣೆಗೆ  ಒಳಗಾಗಿದ್ದೇವೆ. ತಾವು ಈ ಮಾತಿಗೆ ಬಹುದೊಡ್ಡ ರೀತಿಯಲ್ಲಿ ಹೊರತಾಗಿದ್ದೀರಿ. ತಾವು ಕಡಿಮೆ ಮಾತನಾಡಿದ್ದೀರಿ; ಹೆಚ್ಚು ಕೆಲಸ ಮಾಡಿದ್ದೀರಿ. ಅದನ್ನು ನಾವು ತಮ್ಮಿಂದ ಕಲಿಯೋಣ”. ಎಂದು ಹೇಳಿದ್ದಾರೆ.

5.ಹಣಕಾಸು ನೀತಿಯಲ್ಲಿ ವಿಶ್ವೇಶ್ವರಯ್ಯ ಅವರು ಮಾಡಿದ ಮಾರ್ಪಾಡುಗಳಾವುವು?
ವಿಶ್ವೇಶ್ವರಯ್ಯನವರು  ಹಣಕಾಸು ನೀತಿಯಲ್ಲಿ ಮಾರ್ಪಾಡು ಮಾಡಲು ೧೯೧೩ ರಲ್ಲಿ ಮೈಸೂರು ಬ್ಯಾಂಕನ್ನು ಸ್ಥಾಪಿಸಿದರು.. ಕೈಗಾರಿಕೆಗಳ ಅಭಿವೃದ್ಧಿಗೆ ಫೀಡರ್ ಬ್ಯಾಂಕ್ ಹಾಗೂ ಕೈಗಾರಿಕಾರಿಕಾ ಹೂಡಿಕೆ ಮತ್ತು ಅಭಿವೃದ್ಧಿ ನಿಧಿಗಳನ್ನು ಸ್ಥಾಪಿಸಿದರು.. ಸಾರ್ವಜನಿಕ ಜೀವವಿಮಾ ಯೋಜನೆ ಜಾರಿಗೆ
ತಂದರು . ರೈತರಿಗೆ ಹಾಗೂ ಕರಕುಶಲಕೆಲಸಗಾರರಿಗೆ ಸಾಲದ ಸೌಲಭ್ಯ ನೀಡಲುಸಹಕಾರಿ ಕ್ಷೇತ್ರವನ್ನು ಬಲವರ್ಧನೆ ಗಳಿಸಿದರು.ಪ್ರಾಂತೀಯ ಸಹಕಾರಿ ಬ್ಯಾಂಕ್ಗಳು  ಸ್ಥಾಪಿಸಿದರು. ರಾಜ್ಯದ ಆಸ್ತಿಯನ್ನು ಹೆಚ್ಚಿಸಿ, ಆದಾಯ ತರುವುದರ ಮೂಲಕ ಅಭಿವೃದ್ಧಿ ಕಾರ್ಯಗಳ ಪ್ರಭಾವನ್ನು  ಅಳೆಯಲು ಅನುಕೂಲವಾಗುವಂತೆ ಆಯವ್ಯಯದಲ್ಲಿ ಹೊಸ ದೃಷ್ಟಿಕೋನವನ್ನು ಕಂಡುಕೊಂಡರು  .

ಹೆಚ್ಚುವರಿ ಪ್ರಶ್ನೋತ್ತರಗಳು

6. ವಿಶ್ವೇಶ್ವರಯ್ಯನವರು ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆ ಏನು ?
ವಿಶ್ವೇಶ್ವರಯ್ಯನವರು  ‘ರಿಕನ್ಸ್ಟಕ್ಟಿಂಗ್ ಇಂಡಿಯಾ’, ‘ಪ್ಲಾನ್ಡ್ ಎಕಾನಮಿ ಫಾರ್ ಇಂಡಿಯ’ ಹಾಗೂ ‘ವೆ ಮೆಮೋರೀಸ್  ಆಫ್ ಮೈವರ್ಕಿಂಗ್ ಲೈಫ್(ಆತ್ಮಚರಿತ್ರೆ )’, ‘ನೆನೇಷನ್ ಬಿಲ್ಡಿಂಗ್ ಪ್ಲಾನ್ ಫಾರ್ ಇಂಡಿಯಾ’ ಕೃತಿಗಳನ್ನು  ಬರೆದು ಸಾಹಿತ್ಯ ಕ್ಷೇತ್ರಕ್ಕೆ  ಕೊಡುಗೆ ನೀಡಿದ್ದಾರೆ.

7. ವಿಶ್ವೇಶ್ವರಯ್ಯನವರು ಈಸಿ ಮತ್ತು ಮೂಸಿ ನದಿಗಳ ಸಮಸ್ಯೆಯನ್ನು ಹೇಗೆ ಬಗೆಹರಿಸಿದರು ?
ಅಥವ ವಿಶ್ವೇಶ್ವರಯ್ಯನವರು ಹೈದರ್ಬಾದ್ ನಗರಕ್ಕೆ ಸಲ್ಲಿಸಿದ ಸೇವೆ ಏನು ?

ಹೈದರಾಬಾದ್ ನಗರಕ್ಕೆ ಈಸಿ ಮತ್ತು ಮೂಸಿ ನದಿಗಳ ಪ್ರವಾಹದಿಂದ ಅಪಾರ ನಷ್ಟ ಸಂಭವಿಸುತ್ತಿತ್ತು. ಎರಡು ನದಿಗಳಿಗೂಪ್ರಕ ಜಲಾಶಯ ನಿರ್ಮಿಸುವುದರ ಮೂಲಕ ಸಮಸ್ಯೆಯನ್ನು ಬಗೆರಿಸಿದಸಿದರು. ಹೈದರಾಬಾದ್ ನಗರವನ್ನು  ಭಾರತದ ಸುಯೋಜಿತ ನಗರಗಳಸಾಲಿಗೆ ಸೇರ್ಪಡೆಯಾಗುವಂತೆ ಮಾಡಿದರು.

8. ವಿಶ್ವೇಶ್ವರಯ್ಯನವರು ಮುಂಬೈ ಪ್ರಾಂತ್ಯದಲ್ಲಿ ಸಲ್ಲಿಸಿದ ಸೇವೆಯನ್ನು ಕುರಿತು ಬರೆಯಿರಿ.
ವಿಶ್ವೇಶ್ವರಯ್ಯನವರು  ೧೮೮೪ ರಲ್ಲಿ ಮುಂಬೈ ಪ್ರಾಂತ್ಯದ ಇಲಾಖೆಯಲ್ಲಿ ಸಹಾಯಕ ಎಂಜಿನಿಯರ್ ಆಗಿ ಸೇವೆ ಪ್ರಾರಂಭಿಸಿದರು  .
ಖಾನ್ದೇಶ ಮತ್ತು ನಾಸಿಕ್ ಜಿಲ್ಲೆಗಗಳಲ್ಲಿ  ಹರಿಯುತ್ತಿದ್ದ ಪಂಜ್ರಾ ನದಿಯ ನೀರಾವರಿ ಕಾಲುವೆಗೆ ತೂಬು ಮೇಲ್ಗಾಲುವೆಯನ್ನು ನಿರ್ಮಿಸುವ ಕಾರ್ಯದಲ್ಲಿ ಯಶಸ್ಸು ಗಳಿಸಿದರು. ಸಿಂಧ್ ಪ್ರಾಂತ್ಯದ ಸುಕ್ಕೂರು ಪಟ್ಟಣಕ್ಕೆ ಕುಡಿಯುವ ನೀರಿನ ಪೂರೈಕೆಯ ಕಾರ್ಯವನ್ನ  ಯಶಸ್ವಿಯಾಗಿ ಪೂರೈಸಿದರು. ಪೂನಾದ ಮುಥಾ ಕಾಲುವೆಗೆ ನೀರಿನ ನೆಲೆಯಾಗಿದ್ದ ಪೀಪ್ ಜಲಾಶಯಕ್ಕೆ ಸ್ವಯಂಚಾಲಿತ ಬಾಗಿಲುಗಳನ್ನ  ಅಳವಡಿಸಿದ್ದಾರೆ  .ಮುಂದೆ ನಾಲ್ಕು  ಕಾಲ ಮುಂಬೈ ಪ್ರಾಂತ್ಯದ ಸ್ಯಾನಿಟರಿ ಎಂಜಿನಿಯರ್ ಆಗಿ ನೇಮಕಗೊಂಡರು. ಈ ಹುದ್ದೆಗೆ ನೇಮಕವಾದ ಪ್ರಥಮ ಭಾರತೀಯರು ಎಂಬುದು ಗಮನಾರ್ಹ ಅಂಶವಾಗಿದೆ.

ಇ) ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿ.

1. ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಮೈಸೂರು ‘ಮಾದರಿ ಮೈಸೂರು ರಾಜ್ಯ’ ಹೇಗಾಯಿತು?
ನಾಲ್ವಡಿ ಕೃಷ್ಣರಾಜ  ಒಡೆಯರು ೧೯೦೨ ರಲ್ಲಿ ಮೈಸೂರು ರಾಜ್ಯದ ನೇರ ಉಸ್ತುವಾರಿ ವಹಿಸಿಕೊಂಡರು. ಆಗ ದಿವಾನರಾಗಿದ್ದ ಸರ್. ಕೆ. ಶೇಷಾದ್ರಿ ಅಯ್ಯಂಗಾರ್‌ ರವರು  ಸಹಕಾರದೊಡನೆ ಮೈಸೂರು ರಾಜ್ಯದ ಸರ್ವೋತೋಮುಖ ಅಭಿವೃದ್ಧಿಗೆ ಕಂಕಣಬದ್ಧರಾದರು. ೧೯೨೩ರಲ್ಲಿ ಹೊಸ ಕಾನೂನೊಂದನ್ನು ಜಾರಿಗೆ ತಂದರು  ಪ್ರಜಾಪ್ರತಿನಿಧಿ  ಶಾಸನಬದ್ಧ ಸಂಸ್ಥೆಯನ್ನಾಗಿ ಮಾರ್ಪಡಿಸಿದರು  .
೧೯೦೭ ರಲ್ಲಿ ನ್ಯಾಯ ವಿಧಾಯಕ ಸಭೆಯನ್ನೂ ಸಹ ಸ್ಥಾಪಿಸಿದರು. ಪ್ರಜಾಪ್ರತಿನಿಧಿ ಸಭೆಯಲ್ಲಿ ಮಂಡಿಸಿದ ಎಲ್ಲ ವಿಷಯಗಳನ್ನೂ ಸಹ ವಿರ್ಮಶಿಸುವ ಅಧಿಕಾರ ಆಸಕ್ತಿ ಇದ್ದಿತು. ೧. ಗ್ರಾಮ ನಿರ್ಮಲೀಕರಣ ೨. ವೈದ್ಯ ಸಹಾಯ ೩. ವಿದ್ಯಾ ಪ್ರಚಾರ ೪. ನೀರಿನ ಸೌಕರ್ಯ ೫. ಪ್ರಯಾಣ ಸೌಲಭ್ಯ ಮುಂತಾದ ಕ್ಷೇತ್ರಗಳಲ್ಲಿ  ಸ್ವಯಂ ಆಡಳಿತ ಕ್ಷೇತ್ರಗಳದವು. ಸಾಹಿತ್ಯ , ಸಂಗೀತ, ವಾಸ್ತುಶಿಲ್ಪಗಳ ಅಭಿವೃದ್ಧಿಗೆ ಒತ್ತು ನಿನೀಡಿದರು.
ನಾಡಿನಲ್ಲೇ ಮೊಟ್ಟಮೊದಲ ವಿಶ್ವವಿದ್ಯಾನಿಲಯವಾದ ಮೈಸೂರು ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಿದರು. ಬೆಂಗಳೊರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್,ಮೈಸೂರು ಬ್ಯಾಂಕಿನ ಸ್ಥಾಪನೆ ಮಾಡಲಾಯಿತು. ಉಚಿತ ಆಸ್ಪತ್ರೆಯ ಕಾರ್ಯಾರಂಭ ಮಾಡಿದರು  . ೧೯೦೬ರಲ್ಲಿ ಸಹಕಾರ ಸಂಘವನ್ನುಸ್ಥಾಪಿಸಲಾಯಿತು. ರೈಲು ಯೋಜನೆಯನ್ನು  ಜಾರಿಗೆ ತಂದರು.ಅಲ್ಲದೆ ಒಡೆಯರ ಕಾಲದಲ್ಲಿ ಶಿವನ ಸಮುದ್ರ  ಜಲವಿದ್ಯುತ್ ಯೋಜನೆ, ವಾಣಿ ವಿಲಾಸ ಸಾಗರ ಆಣೆಕಟ್ಟು ಮತ್ತು ಕನ್ನಾಂಬಾಡಿಯಲ್ಲಿ ಕೃಷ್ಣರಾಜಸಾಗರ ಆಣೆಕಟ್ಟು ನಿರ್ಮಾಣ ಮಾಡಿದ್ದರಿಂದ ವಿದ್ಯುತ್ ಮತ್ತು ನೀರಾವರಿ ಯೋಜನೆಯನ್ನು ಕರ್ಯರೂಪಕ್ಕೆ ಬಂದರು  ಪ್ರಾಥಮಿಕ ಮತ್ತು ಮಾಧ್ಯವಿಮಿಕವಿದ್ಯಾಭ್ಯಾಸವನ್ನು  ಉಚಿತ ಮತ್ತು ಕಡ್ಡಾಯವಾಗಿ ಪ್ರಾರಂಭಾವಯಿತು. ಮೈಸೂರು ಸಂಸ್ಥಾನವನ್ನು ಮಾದರಿ ಸಂಸ್ಥಾವನ್ನಾಗಿ ರೂಪಿಸಿದರು.ಇವರ ಕಾಲದಲ್ಲಿ ಇಡೀ ¨ ಯಾವ ಸಂಸ್ಥಾದಲ್ಲಿ  ಕಾಣದ ಅಭಿವೃದ್ಧಿಯನ್ನು ಮೈಸೂರು ರಾಜ್ಯವು ಕಂಡುದರಿಂದ , ಮೈಸೂರು ಮಾದರಿ ಮೈಸೂರು ರಾಜ್ಯ’ ಎಂಬ ಕೀರ್ತಿಗೆಗೆ  ಪ್ರಾಪ್ತವಾಯಿತು.

2. ವಿಶ್ವೇಶ್ವರಯ್ಯ ಅವರು ಮೈಸೂರು ದಿವಾನರಾಗಿ ಸಲ್ಲಿಸಿದ ಸೇವೆಯನ್ನು ಕುರಿತು ಬರೆಯಿರಿ.
ಮೈಸೂರು ಸಂಸ್ಥಾನದ ಮಹಾರಾಜರಾಗಿದ್ದ ನಾಲ್ವಡಿಕೃಷ್ಣರಾಜ ಒಡೆಯರು ವಿಶ್ವೇಶ್ವರಯ್ಯ ಅವರನ್ನು ದಿವಾನರನ್ನಾಗಿ ನೇಮಿಸಿದರು. ದಿವಾನರಾದ ನಂತರ ಆಡಳಿತದಲ್ಲಿ ಹೊಸ ಮಾದರಿಯನ್ನು  ಅನುಷ್ಠಾನಗೊಳಿಸಿ  ಕೆಲಸ ಕಾರ್ಯಗಳಲ್ಲಿ ಸುಧಾರಣೆ ತಂದರು. ದಕ್ಷತೆ ಮತ್ತುಪ್ರಾಮಾಣಿಕತೆಗೆ ಒತ್ತು ನೀಡಿದರು. ನ್ಯಾಯಾಂಗ ಮತ್ತು ಕಾರ್ಯಾಂಗವನ್ನು  ಅಧಿಕಾರವನ್ನು ಪ್ರತ್ಯಾರ್ಪ್ರತ್ಯೇಕಗೊಳಿಸುತ್ತದೆ . ಶಿಕ್ಷಣದ ವಿವಿಧ ಯೋಜನೆಗಳನ್ನು ರೂಪಿಸಿದರು. ೧೯೧೩ ರಲ್ಲಿ ಪ್ರಾಥಮಿಕ ಶಿಕ್ಷಣ ನಿಬಂಧವನ್ನು  ಜಾರಿಗೆ ತಂದರು. ಮೈಸೂರು ಸಂಸ್ಥಾನದ ಪ್ರತ್ಯೇಕವಾದ  ಪ್ರೌಢಶಿಕ್ಷಣದ ಅಂತಿಮಪರೀಕ್ಷೆ ನಡೆಸುವ ಯೋಜನೆಯನ್ನು ಆರ್ಥಿಕ ಪರಿಷತ್ತಿನ ಮೂಲಕ ರೂಪುಗೊಳಿಸಿದರು  . ಮೈಸೂರು ವಿಶ್ವವಿದ್ಯಾನಿಲಯದ ಸ್ಥಾಪನೆ ಇವರಕಾಲದಲ್ಲಾಯಿತು. ಬೆಂಗಳೂರಿನಲ್ಲಿ ಮೆಕಾನಿಕನಿಕಲ್ ಎಂಜಿನಿಯರಿಂಗ್  ಶಾಲೆ, ಮೈಸೂರಿನಲ್ಲಿ ಚಾಮರಾಜೇಂದ್ರ ತಾಂತ್ರಿಕ ಸಂಸ್ಥೆಗಳನ್ನೂ ಪ್ರಾರಂಭಿಸಿದರು  .ಕನ್ನಡ ಸಾಹಿತ್ಯ ಪರಿಷತ್ತನ್ನು ’ ಸ್ಥಾಪಿಸಿದ್ದು ಇವರ ಕಾಲದ ಮತ್ತೊಂದು ಮಹತ್ವದ . ವಿಶ್ವೇಶ್ವರಯ್ಯ ಅವರು ಕೈಗಾರಿಕೆಗೆ ಅಗ್ರಪ್ರಾಶ ನೀಡಿದ್ದರು. “ಕೈಗಾರಿಕೀಕರಣ ಇಲ್ಲವೆ ಅವನತಿ” ಎಂಬ ಘೋಷಣೆ ಮಾಡಿದರು . ಇವರ ಕಾಲದಲ್ಲಿ ¨ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯನ್ನು ಸ್ಥಾಪಿತವಾಯಿತು. ಇದಲ್ಲದೆ ಹೆಂಚಿನ ಕಾರ್ಖಾನೆ, ಮೊಳೆ ಮತ್ತು ಗೊಬ್ಬರ ತಯಾರಿಕಾ  ಸಕ್ಕರೆ ಕಾರ್ಖಾನೆ, ಔಷಧಿಯ ತಯಾರಿಕಾ ಘಟಕ, ಗಂಧದ ಎಣ್ಣೆ, ಬೆಂಕಿಕಡ್ಡಿ ಹಾಗೂ ಕಾಗದದ ಕಾರ್ಖಾನೆಗಳು  ಸ್ಥಾಪಿತವಾದವು. ಸೋಪು ಹಾಗೂ ಲೋಹ ತಯಾರಿಕೆ, ಕಲೆಮತ್ತು ಕರಕುಶಲ ಡಿಪೋ, ಕೃಷ್ಣರಾಜೇಂದ್ರ  ಬಟ್ಟೆ ಗಿರಣ,ಕಾಗದ  ತಿರುಳು, ರಟ್ಟು, ಪೆನ್ಸಿಲ್, ಬೆಂಕಿಕಡ್ಡಿ ಮತ್ತು ಪೀಠೋಪಕರಣಗಳು  ತಯಾರಿಕಾಘಟಕಗಳು  -ಹೀಗೆ ನೂರಾರು ಕೈಗಾರಿಕೆಗಳು  ಪ್ರಾರಂಭಗೊಂಡವು  .
೧೯೧೩ ರಲ್ಲಿ ಮೈಸೂರು ಬ್ಯಾಂಕನ್ನು  ಸ್ಥಾಪಿಸಿದರು.. ಕೈಗಾರಿಕೆ ಅಭಿವೃದ್ಧಿಗೆ ಫೀಡರ್ ಬ್ಯಾಂಕ್ ಹಾಗೂ ಕೈಗಾರಿಕಾಗಾರಿಕಾ ಹೂಡಿಕೆ ಮತ್ತು ಅಭಿವೃದ್ಧಿನಿಧಿಗಳನ್ನು ಸ್ಥಾಪಿಸಿದರು.. ಸಾರ್ವಜನಿಕ ಜೀವವಿಮಾ ಯೋಜನೆ ಜಾರಿಗೆ ತಂದರು. ಪ್ರಾಂತೀಯ ಸಹಕಾರಿ ಬ್ಯಾಂಕ್ಗಳನ್ನು  ಸ್ಥಾಪಿಸಿದರು. ರಾಜ್ಯದಆಸ್ತಿಯನ್ನು ಹೆಚ್ಚಿಸಿ, ಆದಾಯ ತರುವುದರ ಮೂಲಕ ಅಭಿವೃದ್ಧಿ ಕಾರ್ಯಗಳ ಪ್ರಭಾವವನ್ನು ಅಳೆಯಲು ಅನುಕೂಲವಾಗುವಂತೆ ಆಯವ್ಯಯದಲ್ಲಿಹೊಸ ದೃಷ್ಟಿಕೋಣವನ್ನು ಕಂಡುಕೊಂಡರು  .

3. ಶಿಕ್ಷಣ ಕ್ಷೇತ್ರಕ್ಕೆ ವಿಶ್ವೇಶ್ವರಯ್ಯ ಅವರು ಸಲ್ಲಿಸಿದ ಕೊಡುಗೆಯನ್ನು ತಿಳಿಸಿ.
ವಿಶ್ವೇಶ್ವರಯ್ಯಅವರುಆಧುನಿಕ ಶಿಕ್ಷಣವೇ ಎಲ್ಲ ಸಮಸ್ಯೆಗಳಿಗೂ ಪರಮೋಚ್ಚ  ಪರಿಹಾರ, ಶಿಕ್ಷಣವು ಸಂಜೀವಿನಿಎಂಬುದನ್ನು ಅರಿತು“ಶಿಕಶಿಕ್ಷಣಕ್ಕಾಗಿ ಶಿಕ್ಷಣವಿರಬೇಕು. ಅದು ಕೆಲವೇ ಜನರ ಸೊತ್ತಾಗದೆ ಪ್ರಗತಿಪರ ರಾಜ್ಯದಲ್ಲಿ ಎಲ್ಲರ ಆಜನ್ಮಸಿದ್ಧ ಹಕ್ಕಾಗಬೇಕು”ಎಂದು ಹೇಳಿದ್ದಾರೆ.ಅದಕ್ಕಾಗಿ ಅವ್ರು ಶಿಕ್ಷಣದ ವಿವಿಧ ಯೋಜನೆಗಳನ್ನು ರೂಪಿಸಿದರು. ೧೯೧೩ ರಲ್ಲಿ ಪ್ರಾಥಮಿಕ ಶಿಕ್ಷಣ ನಿಬಂಧನೆಯನ್ನು ಜಾರಿಗೆ ತಂದರು.ಪ್ರೌಢಶಿಕ್ಷಣ ಶಾಲೆÄ ಮದ್ರಾಸ್ ವಿಶ್ವವಿದ್ಯಾನಿಲಯದ ನಿಯಂತ್ರಣಕ್ಕೆ ಒಳಪಟ್ಟಿದ್ದವು. ಇದನ್ನು ಬದಲಿಸಿ ಮೈಸೂರು ಸಂಸ್ಥಾನವೇ  ಪ್ರೌಢಶಿಕ್ಷಣದ ಅಂತಿಮ ಪರೀಕ್ಷೆ ನಡೆಸುವ ಯೋಜನೆಯನ್ನು ಆರ್ಥಿಕ ಪರಿಷತ್ತಿನ ಮೂಲಕ ರೂಪುಗೊಳಿಸಿದರು. ಮೈಸೂರು ವಿಶ್ವವಿದ್ಯಾನಿಲಯದ ಸ್ಥಾಪನೆ ಇವರ ಕಾಲದಲ್ಲಾಯಿತು. ತಾಂತ್ರಿಕ ಮತ್ತು ವೃತ್ತಿಪರ ಶಿಕ್ಷಣಕ್ಕೆ ಹೆಚ್ಚ್ಚಿನ ಆದ್ಯತೆ ನೀಡಿದರು. ಇದಕ್ಕಾಗಿಯೇ ಬೆಂಗಳೂರು  ಮೆಕಾನಿಕಲ್ಎಂಜಿನಿಯರಿಂಗ್  ಶಾಲೆ, ಮೈಸೂರಿನಲ್ಲಿ ಚಾಮರಾಜೇಂದ್ರ ತಾಂತ್ರಿಕ ಸಂಸ್ಥೆಗಳನ್ನು  ಪ್ರಾರಂಭಿಸಿದರು. ಕನ್ನಡ  ಭಾಷೆ ಮತ್ತು ಸಾಹಿತ್ಯಗಳ ಬಗ್ಗೆಸಾರ್ವಜನಿಕರಲ್ಲಿ ಉಂಟಾಗಿದ್ದ ಆಸಕ್ತಿಯನ್ನು  ‘ಕನ್ನಡ ಸಾಹಿತ್ಯಪರಿಷತ್ತನ್ನು ’ ಸ್ಥಾಪಿಸಿದ್ದು ಇವರ ಕಾಲದ ಮತ್ತೊಂದು ಮಹತ್ವದ ಸ್ಥಾನವಿದೆ.

ಈ) ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ.

1. “ಸಾಮಾಜಿಕ ಕಾನೂನುಗಳ ಹರಿಕಾರ.”
ಆಯ್ಕೆ :- ಈ ವಾಕ್ಯವನ್ನು  “ಭಾಗ್ಯಶಿಲ್ಪಿಗಳು” ಪಾಠದಲ್ಲಿನ ಪಠ್ಯಪುಸ್ತಕ ರಚನಾ ಸಮಿತಿ ಆಯ್ಕೆ ಮಾಡಿ ಕೊಟ್ಟಿರುವ “ನಾಲ್ವಡಿ ಕೃಷ್ಣರಾಜ ಒಡೆಯರ್” ಎಂಬ ಪಾಠಬಾs ಗದಿಂದ ಆರಿಸಲಾಗಿದೆ.
ಸಂದರ್ಭ:- ನಾಲ್ವಡಿ ಕೃಷ್ಣರಾಜ ಒಡೆಯರು ಸಮಾಜದ ಅಭಿವೃದ್ಧಿಗಾಗಿ ಮತ್ತು ಸಾಮಾಜಿಕ ಅನಿಷ್ಟ ಪದ್ಧತಿಗಲು  ಹೋಗಲಾಡಿಸಲು ಸಹಕಾರಿಕಾರ್ಮಿಕ ಪರಿಹಾರ ಕಾಯ್ದೆ, – ಮೈಸೂರು ಗ್ರಾಮ ನ್ಯಾಯಾಲಯ ಕಾಯ್ದೆ, ಗ್ರಾಮ ಪಂಚಾಯಿತಿಗಳ ಕಾಯ್ದೆ, ವೇಶ್ಯಾ ವೃತ್ತಿ ಕಾಯ್ದೆ;ವಿಧವಾ ಮರು ವಿವಾಹ ಕಾಯ್ದೆ ಮುಂತಾದ ಕಾನೂನುಗಳನ್ನು  ಜಾರಿಗೆ ತಂದು ಮೈಸೂರು ಸಂಸ್ಥಾನವನ್ನು ಮಾದರಿ ಸಂಸ್ಥಾನ್ನಾಗಿರೂಪಿಸಿದ್ದರಿಂದ ‘ ಸಾಮಾಜಿಕ ಕಾನೂನುಗಳ ಹರಿಕಾರ ’ ಎಂದು ಹೆಸರಾದ.
ಸ್ವಾರಸ್ಯ:- ಸ್ವಾಸ್ಥ ಸಮಾಜಕ್ಕಾಗಿ ಮತ್ತು ಸಮಾಜದ ಸರ್ವತೋಮುಖ ಅಭಿವೃದ್ಧಿಗಾಗಿ ನಾಲ್ವಡಿ ಕೃಷ್ಣರಾಜ ಒಡೆಯರು ತಂದ ಕಾನೂನುಗಳನ್ನು ಅವರನ್ನು “ಸಾಮಾಜಿಕ ಕಾನೂನುಗಳ ಹರಿಕಾರ” ರನ್ನಾಗಿಸಿದ್ದು ಹೆಮ್ಮೆಯ ವಿಷಯವಾಗಿದೆ.

2.“ಅವಅವರ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿಯನ್ನು ಸೇರಿಸಿತು.”
.ಆಯ್ಕೆ :- ಈ ವಾಕ್ಯವನ್ನು  “ಭಾಗ್ಯಶಿಲ್ಪಿಗಳು” ಪಾಠದ ಭಾಗವಾಗಿ ಶ್ರೀ ಡಿ.ಎಸ್. ಜಯಪ್ಪಗೌಡ ಅವರು ರಚಿಸಿರುವ “ ದಿವಾನ್ ಸರ್ ಎಂ.ವಿಶ್ವೇಶ್ವರಯ್ಯನವರ ಕಾರ್ಯಸಾಧನೆಗಳು”ಎಂಬ ಕೃತಿಯಿಂದ ಆಯ್ದು ಕೊಟ್ಟಿರುವ “ಸರ್.ಎಂ.ವಿಶ್ವೇಶ್ವರಯ್ಯ”ಎಂಬ  ಪಾಠಭಾಗದಿಂದ ಆರಿಸಲಾಗಿದೆ.
ಸಂದರ್ಭ:- ವಿಶ್ವೇಶ್ವರಯ್ಯನವರ  ಮುಂಬೈ ಪ್ರಾಂತ್ಯದಲ್ಲಿ ಸಹಾಯಕ ಇಂಜಿನಿಯರಾಗಿ ಅನೇಕ ಮಾಡಿದ್ದರು. ಹಾಗೆಯೇ ಪೂನಾದಮುಥಾ ಕಾಲುವೆಗೆ ನೀರಿನ ನೆಲೆಯಾಗಿದ್ದ ಪೀಪ್ ಜಲಾಶಯಕ್ಕೆ ಸ್ವಯಂಚಾಲಿತ ಬಾಗಿಲುಗಳನ್ನು ಅಳವಡಿಸಿದರು. ಸ್ವಯಂಚಾಲಿತ ಬಾಗಿಲುಗಳಅನ್ವೇಷ್ವಣೆ ವಿಶ್ವೇಶ್ವರಯ್ಯ ಅವರ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿಯನ್ನು ಸೇರಿಸಿತು ಎಂದು ಅವರ ಸಾಧನೆಯನ್ನು  ಹೊಗಳಿದಸಂದ¨ .
ಸ್ವಾರಸ್ಯ:- ವಿಶ್ವೇಶ್ವರಯ್ಯನವರ ಅನ್ವೇಷಣೆಗಳು ಸಾಧನೆಗಳು  ಸರಮಾಲೆಯಾಗಿ ರೂಪುಗೊಂಡಿರುವುದು ಅವರ ಭೌದ್ಧಿಕ ಯಶಸ್ಸಿನ ಕಿರೀಟದ ಗರಿಗಳಾಗಿವೆ ಎಂಬುದು ಸ್ವಾರಸ್ಯಪೂರ್ಣವಾಗಿದೆ.

3.“ಮೈಸೂರು ಸಂಸ್ಥಾನಕ್ಕೆ ‘ಮಾದರಿ ಮೈಸೂರು’ ಎಂಬ ಕೀರ್ತಿ ಪ್ರಾಪ್ತವಾಯಿತು.”
ಆಯ್ಕೆ :- ಈ ವಾಕ್ಯವನ್ನು  “ಭಾಗ್ಯಶಿಲ್ಪಿಗಳು” ಪಾಠದಲ್ಲಿನ ಪಠ್ಯಪುಸ್ತಕ ರಚನಾ ಸಮಿತಿ ಆಯ್ಕೆ ಮಾಡಿ ಕೊಟ್ಟಿರುವ “ನಾಲ್ವಡಿ ಕೃಷ್ಣರಾಜ ಒಡೆಯರ್” ಎಂಬ ಪಾಠಬಾಗದಿಂದ ಆರಿಸಲಾಗಿದೆ.
ಸಂದರ್ಭ:- ನಾಲ್ವಡಿ ಕೃಷ್ಣರಾಜ  ಒಡೆಯರು ಮೈಸೂರು ರಾಜ್ಯದ ನೇರ ಉಸ್ತುವಾರಿಯನ್ನು ವಹಿಸಿಕೊಂಡ ನಂತರ ಮೈಸೂರು ರಾಜ್ಯದ ಸರ್ವೋತೋಮುಖ ಅಭಿವೃದ್ಧಿಗೆ ಕಂಕಣಬದ್ಧರಾಗಿ ದುಡಿದರು. ಇಡೀ  ಖಂಡದಲ್ಲಿ  ಯಾವ ಸಂಸ್ಥಾವನ್ನು  ಕಾಣದ ಅಭಿವೃದ್ಧಿಯನ್ನುಮೈಸೂರು ರಾಜ್ಯವು ಕಂಡಿತು ಆದ್ದರಿಂದ “ವೆಮೈಸೂರು ಸಂಸ್ಥಾನಕ್ಕೆ ‘ಮಾದರಿ ಮೈಸೂರು’ ಎಂಬ ಕೀರ್ತಿ ಪ್ರಾಪ್ತವಾಯಿತು ”ಎಂದು ಹೇಳಿದಸಂದ¨ವಾಗಿದೆ.
ಸ್ವಾರಸ್ಯ:- ಮೈಸೂರು ಸಂಸ್ಥಾದಲ್ಲಿ  ಇಡಿ ¨ಖಂಡಕ್ಕೆ  ಮಾದರಿ ಸಂಸ್ಥಾವಗಿ ಕೀರ್ತಿಯನ್ನು ಪಡೆಯಿತು ಎನ್ನುವುದರ ಹಿಂದೆ ನಾಲ್ವಡಿ ಕೃಷ್ಣರಾಜ  ಒಡೆಯರ ಆಡಳಿತದ ಸಾಮಥÄರ್ಥ್ಯವನ್ನು ಎತ್ತಿ ತೋರಿಸಿರುವುದು ಸ್ವಾರಸ್ಯಭರಿತವಾಗಿದೆ.

4. “ತಾವತಾವು ಕಡಿಮೆ ಮಾತನಾಡಿದ್ದೀರಿ; ಹೆಚ್ಚು ಕೆಲಸ ಮಾಡಿದ್ದೀರಿ.”
ಆಯ್ಕೆ :- ಈ ವಾಕ್ಯವನ್ನು  “ಭಾಗ್ಯಶಿಲ್ಪಿಗಳು” ಪಾಠದ ಭಾಗವಾಗಿ ಶ್ರೀ ಡಿ.ಎಸ್. ಜಯಪ್ಪಗೌಡ ಅವರು ರಚಿಸಿರುವ “ ದಿವಾನ್ ಸರ್ ಎಂ. ವಿಶ್ವೇಶ್ವರಯ್ಯನವರ ಕಾರ್ಯಸಾಧನೆಗಳು”ಎಂಬ ಕೃತಿಯಿಂದ ಆಯ್ದು  ಕೊಟ್ಟಿರುವ “ಸರ್.ಎಂ.ವಿಶ್ವೇಶ್ವರಯ್ಯ”ಎಂಬ  ಪಾಠಭಾಗದಿಂದ ಆರಿಸಲಾಗಿದೆ.
ಸಂದರ್ಭ:- ವಿಶ್ವೇಶ್ವರಯ್ಯನವರ ಶತಮಾನೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಭಾರತದ ಪ್ರಧಾನ ಮಂತ್ರಿಗಳಾದ ಪಂಡಿತ್ ಜವಾಹರಲಾಲ್ನೆ ಅವರು ಸರ್.ಎಂ.ವಿಶ್ವೇಶ್ವರಯ್ಯ  ಅವರ ಬಗ್ಗೆ “ದದುರದೃಷ್ಟವಶಾತ್ ಭಾರತೀಯರಾದ ನಾವು  ಮಾತನಾಡುವವರು ಮತ್ತು ನುಡಿದಂತೆ ನಡೆಯಲಾರದರು ದೂಷಣೆಗೆ ಒಳಗಾಗಿದ್ದೇವೆ. ತಾವು ಈ ಮಾತಿಗೆ ಬಹುದೊ ರೀತಿಯಲ್ಲಿ ಹೊರತಾಗಿದ್ದೀರಿ. ತಾವು ಕಡಿಮೆ ಮಾತನಾಡಿದ್ದೀರಿ; ಹೆಚ್ಚು ಕೆಲಸ ಮಾಡಿದ್ದೀರಿ. ಅದನ್ನು ನಾವು ತಮ್ಮಿಂದ ಕಲಿಯೋಣ”.. ಎಂದು ಹೇಳಿದ ಸಂದರ್ಭವಾಗಿದೆ.
ಸ್ವಾರಸ್ಯ:- ಈ ವಾಕ್ಯವು“ನುಡಿಗಿಂತ ನಡೆ ಲೇಸು”ಎಂಬ ಅರ್ಥದೊಂದಿಗೆ ವಿಶ್ವೇಶ್ವರಯ್ಯನವರ ವಾಸ್ತವ ಚಿಂತನೆ , ಕರ್ಯತತ್ಪರತೆ , ನಿಸ್ವಾರ್ಥ ನಡೆದುಕೊಂಡನು  ಸ್ವಾರಸ್ಯಕರವಾಗಿ  ವರ್ಣಿಸಿದೆ.

ಉ) ಇಲ್ಲಿ ಬಿಟ್ಟಿರುವ ಪದಗಳನ್ನು ಸರಿಯಾದ ಪದಗಳಿಂದ ತುಂಬಿರಿ.
1. ನಾಲ್ವಡಿ ಕೃಷ್ಣರಾಜ ಒಡೆಯರ್ರವರಿಗೆ ರೀಜೆಂಟರಾಗಿ ಕಾರ್ಯನಿರ್ವಹಿಸಿದವರು ಮಹಾರಾಣಿ ವಾಣಿವಿಲಾಸ ಅಮ್ಮನವರ
2. ೧೯೧೪ರಲ್ಲಿ ಶಾಲಾ ಪ್ರವೇಶಕ್ಕೆ  ಜಾತಿ ಪರಿಗಣನೆಯ ನಿಷೇಧವಾಯಿತು
3. ವಿಶ್ವೇಶ್ವರಯ್ಯ ಅವರು ಮುಂಬೈ ಪ್ರಾಂತ್ಯದಲ್ಲಿ ಸಹಾಯಕ ಎಂಜಿನಿಯರ್ ಆಗಿ ಸೇವೆ ಪ್ರಾರಂಭಿಸಿದರು.
4. ಮುಂಬೈ ಪ್ರಾಂತ್ಯದ ಗವರ್ನರ್ ಆಗಿದ್ದ ಲಾರ್ಡ್ಸಂಡ್ಹರ್ಸ್ಟ್ ಅವರು ವಿಶ್ವೇಶ್ವರಯ್ಯ ಅವರನ್ನು ಮುಕ್ತಕಂಠದಿಂದ ಶ್ಲಾಘಿಸಿದರು.
5. ಭಾರತ ಸರಕಾರವು  ವಿಶ್ವೇಶ್ವರಯ್ಯನವರಿಗೆ ಭಾರತ ರತ್ನ ಎಂಬ ಪ್ರಶಸ್ತಿ ನೀಡಿ ಗೌರವಿಸಿತು.

ಭಾಷಾ ಚಟುವಟಿಕೆ
1. ಕೊಟ್ಟಿರುವ ಪದಗಳ ತತ್ಸಮ-ತದ್ಭವ ಬರೆಯಿರಿ.
ವಂಶ – ಬಂಚ    ಸ್ಥಾನ – ತಾಣ    ಯಶ – ಜಸ    ಪಟ್ಟಣ – ಪತ್ತನ     ಕಾರ್ಯ – ಕಜ್ಜ

2. ನೀಡಿರುವ ಪದಗಳಲ್ಲಿ ಅನ್ಯದೇಶ್ಯ ಪದಗಳನ್ನು ಆರಿಸಿ ಬರೆಯಿರಿ.
ಡಿಪ್ಲೊಮಾ, ಅಜಮಾಯಿಷಿ, ದಿವಾನ, ಪ್ರೌಢ, ಶಿಕ್ಷಣ,ನಡೆಸು , ಸೋಪು, ಕಾರ್ಖಾನೆ,ಕಾಗದ ಕಚೇರಿ ಅನ್ಯದೇಶ್ಯ ಪದಗಳು – ಡಿಪ್ಲೊಮಾ, ಅಜಮಾಯಿಷಿ, ದಿವಾನ, ಸೋಪು, ಕಾರ್ಖಾನೆ, ಕಾಗಡಾ  ಕಚೇರಿ.
ಡಿಪ್ಲೊಮಾ –ಇಂಗ್ಲೀಷ್    ದಿವಾನ – ಪರ್ಶಿಯನ್(ಪಾರ್ಶಿ)    ಕಾರ್ಖಾನೆ – ಹಿಂದುಸ್ಥಾನಿ
ಸೋಪು – ಇಂಗ್ಲೀಷ್    ಅಜಮಾಯಿಷಿ -ಪರ್ಶಿಯನ್( ಪಾರ್ಶಿ)    ಕಾಗದ – ಹಿಂದುಸ್ಥಾನಿ


You Might Like

Post a Comment

0 Comments