Recent Posts

ಸಾಮಾಜಿಕ ಮತ್ತು ಧಾರ್ಮಿಕ ಸುಧಾರಕರು - ೧೦ನೇ ತರಗತಿ ಸಿರಿ ಕನ್ನಡ ಪುಸ್ತಕದ ಪ್ರಶ್ನೋತ್ತರಗಳು



 
 ಸಾಮಾಜಿಕ ಮತ್ತು ಧಾರ್ಮಿಕ ಸುಧಾರಕರು

ಪ್ರಶ್ನೆಗಳಿಗೆ ಉತ್ತರಿಸಿ :

೧. ನಾರಾಯಣಗುರು ಧರ್ಮಪರಿಪಾಲನಾ ಯೋಗಂ ಸಂಘಟನೆಯ ಕೊಡುಗೆಗಳನ್ನು ತಿಳಿಸಿ ,
ಉತ್ತರ: ಶ್ರೀ ನಾರಾಯಣಗುರು ಅವರು 1903ರಲ್ಲಿ ಧರ್ಮಪರಿಪಾಲನಾ ಯೋಗಂ ಸಂಘಟನೆಯನ್ನು ಆರಂಭಿಸಿದರು. ಈ ಸಂಘಟನೆಯ ಪ್ರಮುಖ ಉದ್ದೇಶವೆಂದರೆ ಹಿಂದುಳಿದ ಮತ್ತು ಶೋಷಣೆಗೊಳಗಾದ ಸಮುದಾಯಗಳ ಸಬಲೀಕರಣವಾಗಿತ್ತು. ಇದನ್ನು ಸಾಧಿಸಲು ಶಿಕ್ಷಣವೇ ಮಾರ್ಗವೆಂದು ಸಾರಿದರು. ಕೆಳಸಮುದಾಯಗಳ ಪ್ರವೇಶ ನಿರಾಕರಿಸುತ್ತಿದ್ದ ದೇವಾಲಯಗಳಿಗೆ ಪರ್ಯಾಯ ದೇವಾಲಯಗಳನ್ನು ಕಟ್ಟಿದರು. ನಾರಾಯಣ ಗುರು ಮತ್ತು ಅವರ ಅನುಯಾಯಿಗಳು 1924ರಲ್ಲಿ ʼವೈಕಂ ಸತ್ಯಾಗ್ರಹʼ ವೆಂಬ ಶಿವ ದೇವಾಲಯ ಪ್ರವೇಶ ಚಳುವಳಿಯನ್ನು ನಡೆಸಿದರು. ಗುರುವಾಯೂರು ದೇವಾಲಯ ಪ್ರವೇಶ ಚಳುವಳಿಯು ಮತ್ತೊಂದು ಮಹತ್ವದ ಘಟನೆ.

೨. ನಾರಾಯಣಗುರು ಅವರ ಪ್ರಮುಖ ಆಶಯ ಏನಾಗಿತ್ತು?
ಉತ್ತರ: ನಾರಾಯಣ ಗುರು ಅವರ ಪ್ರಮುಖ ಆಶಯ ಮಾನವ ಕುಲಕ್ಕೆ ಒಂದೇ ಜಾತಿ, ಒಂದೇ ಧರ್ಮ ಮತ್ತು ಒಬ್ಬನೇ ದೇವರು ಎಂಬುದು.

೩. ಪೆರಿಯಾರ್ ಚಳವಳಿಯ ಮುಖ್ಯಾಂಶಗಳನ್ನು ಪಟ್ಟಿ ಮಾಡಿ ,
ಉತ್ತರ: ಪೆರಿಯಾರ್ ಚಳವಳಿಯ ಮುಖ್ಯಾಂಶಗಳು
1. ವರ್ಣಾಶ್ರಮ ಧರ್ಮದ ಪರವಾಗಿ ಕಾಂಗ್ರೆಸ್ಸಿದೆ ಎಂದು ಅದಕ್ಕೆ ಪರ್ಯಾಯವಾದ ದ್ರಾವಿಡ ಚಳುವಳಿ ಎಂಬ ಜನಾಂಗೀಯ ಪರಿಕಲ್ಪನೆ ಕೇಂದ್ರಿತ ಚಳುವಳಿಯನ್ನು ರೂಪಸಿದರು.
2. ತಮಿಳು ಭಾಷೆಯನ್ನು ದ್ರಾವಿಡರ ಭಾಷೆ ಎಂದರು.
3. ಜಾತಿ ಮತ್ತು ಲಿಂಗ ತಾರತಮ್ಯಗಳನ್ನು ವಿರೋಧಿಸಿ ಸಮಾನತೆಯ ಆಶಯವನ್ನು ಎತ್ತಿ ಹಿಡಿದರು.
4. ಮೊದಲಿಗೆ ಆರಂಭವಾಗಿದ್ದ ಬ್ರಾಹ್ಮಣೇತರ ಚಳುವಳಿಯನ್ನು ಪರಿವರ್ತಿಸಿದರು.
5. ಎಲ್ಲ ಬಗೆಯ ಶೋಷಣೆಗಳಿಂದ ಹೊರಬಂದು ಸರ್ವಧರ್ಮ ಸಹಿಷ್ಣುತೆಯ ಸಮಾಜ ರೂಪುಗೊಳ್ಳಬೇಕು ಎಂದರು.

೪ , ಪೆರಿಯಾರ್ರವರು ಹುಟ್ಟು ಹಾಕಿದ ಸಂಘಟನೆಯ ಹೆಸರೇನು ?
ಉತ್ತರ: ಪೆರಿಯಾರ್ರವರು ಹುಟ್ಟು ಹಾಕಿದ ಸಂಘಟನೆಯ ಹೆಸರು ʼದ್ರಾವಿಡ ಕಳಗಂʼ
You Might Like

Post a Comment

0 Comments