Recent Posts

ಆಡೋಣ ಬಾ - ೩ನೇ ತರಗತಿ ಸವಿ ಕನ್ನಡ ಪುಸ್ತಕದ ಪ್ರಶ್ನೋತ್ತರಗಳು

ಆಡೋಣ ಬಾ

ಅ ) ಈ ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರಿಸು .

1. ಕಿಶೋರ ಏಕೆ ಅಳುತ್ತಿದ್ದ ?

ಉತ್ತರ : ಪ್ರಮೀಳಕ್ಕ ತನ್ನನ್ನು ಅವನು ಅಳುತಿದ್ದನು .

2. ಕಿಶೋರ ಅಳುವ ಸದ್ದಿಗೆ ಯಾರು ಹೊರಗೆ ಬಂದರು ?
ಉತ್ತರ : ಕಿಶೋರ ಸೇರಿಸಿಕೊಳ್ಳುತ್ತಿಲ್ಲ ಅಳುವ ಸದ್ದಿಗೆ ಅವನ ಅಜ್ಜ ಹೊರಗೆ ಬಂದರು .

3. ಪ್ರಮೀಳ ಯಾವ ಆಟವನ್ನು ಆಡಲು ತಯಾರಾಗಿದ್ದಳು ? 

ಪ್ರಮೀಳ ಕುಂಟೆಬಿಲ್ಲೆ ಆಟವನ್ನು ಆಡಲು ತಯಾರಾಗಿದ್ದಳು .

4. ಬಿಲ್ಲೆ ಹೇಗಿರಬೇಕು ?
ಉತ್ತರ : ಬಿಲ್ಲೆ ನಯವಾಗಿ ದುಂಡಾಗಿರಬೇಕು .

5. ಅಂಕಣದಲ್ಲಿ ವಿಶ್ರಾಂತಿಗಾಗಿ ಇರುವ ಎರಡು ಚೌಕಗಳಿಗೆ ಏನೆನ್ನುತ್ತಾರೆ ?
ಉತ್ತರ : ಅಂಕಣದಲ್ಲಿ ವಿಶ್ರಾಂತಿಗಾಗಿ ಇರುವ ಚೌಕಗಳಿಗೆ ಘಟ್ಟದ ಮನೆಗಳು ಎನ್ನುತ್ತಾರೆ .

ಆ ) ಈ ಪ್ರಶ್ನೆಗಳಿಗೆ ಎರಡು – ಮೂರು ವಾಕ್ಯಗಳಲ್ಲಿ ಉತ್ತರಿಸು .

1. ಅಜ್ಜ ಆಡಿದ್ದ ಆಟಗಳು ಯಾವುವು ?
ಉತ್ತರ : ಕಲ್ಲೋ ಮಣ್ಣೋ , ಚಿಣ್ಣಿದಾಂಡು , ಓಟದ ಆಟ , ಮರಕೋತಿ ಆಟ , ಆಣೆಕಲ್ಲು , ಚೌಕಾಬಾರಾ ಮತ್ತು ಉದ್ದಿನ ಮೂಟೆ ಇವು ಅಜ್ಜ ಆಡಿದ್ದ ಆಟಗಳು .

2. ಬಿಲ್ಲೆ ಎಸೆಯುವ ಬಗ್ಗೆ ಅಜ್ಜ ಏನೆಂದು ಹೇಳಿದರು ?
ಚೌಕದೊಳಗೆ ಎಸೆಯುವ ಬಿಲ್ಲೆ ಅಂಕಣದೊಳಗಿನ ಯಾವುದೇ ಚೌಕದ ಗೆರೆ ಮೇಲೆ ಬಿದ್ದರೂ ಔಟ್ ಆದಂತೆ . ಅಂದರೆ ಆಗ ಇನ್ನೊಬ್ಬ ಆಟಗಾರನ ಸದರಿ , ಅದೇ ರೀತಿ ಎಲ್ಲಾ ಚೌಕಗಳಿಗೂ ಬಿಲ್ಲೆಯನ್ನು ತಳ್ಳುತ್ತಾ ಸಾಗುವಾಗಲೂ ಬಿಲ್ಲೆ ಗೆರೆಯ ಮೇಲೆ ನಿಲ್ಲಬಾರದು ಎಂದು ಹೇಳಿದರು .

3. ಮೊದಲ ಮೂರು ಚೌಕಗಳನ್ನು ಬಿಲ್ಲೆ ತಳ್ಳುತ್ತಾ ಸಾಗಿದ ನಂತರ ಏನು ಮಾಡಬೇಕು ?
ಉತ್ತರ : ಮೂರನೆಯ ಚೌಕದಿಂದ ತಳ್ಳಿ , ಘಟ್ಟದ ಮನೆಗಳಲ್ಲಿ ಕಾಲುಬಿಟ್ಟು ವಿಶ್ರಾಂತಿ ತೆಗೆದುಕೊಳ್ಳಬೇಕು . ಪಕ್ಕದ ಘಟ್ಟದ ಚೌಕದಿಂದ ಕುಂಟುತ್ತಾ ಬಿಲ್ಲೆಯನ್ನು ಹಿಂದಿನ ರೀತಿಯಲ್ಲಿ ತಳ್ಳುತ್ತಾ ಹೋಗಬೇಕು .

4. ಕೊನೆಯ ಚೌ ಕಕ್ಕೆ ಬಂದ ಮೇಲೆ ಏನು ಮಾಡಬೇಕೆಂದು ಪ್ರಮೀಳ ಹೇಳಿದಳು ?
ಕೊನೆಯ ಚೌಕಕ್ಕೆ ಬಂದ ಮೇಲೆ , ಅಲ್ಲಿಂದ ಬಿಲ್ಲೆಯನ್ನು ಅಂಕಣದಿಂದ ಹೊರಗೆ ತಳ್ಳಬೇಕು . ಆನಂತರ ಕೊನೆಯ ಚೌಕದಿಂದ ಹಾರಿ ಆ ಬಿಲ್ಲೆಯನ್ನು ತುಳಿಯಬೇಕು ಎಂದು ಪ್ರಮೀಳ ಹೇಳಿದಳು .

5. ಕುಂಟೋಬಿಲ್ಲೆ ಆಟದ ಉದ್ದೇಶಗಳು ಯಾವುವು ?
ಉತ್ತರ : ದೇಹಕ್ಕೆ ವ್ಯಾಯಾಮ , ಮನಸ್ಸಿಗೆ ರಂಜನೆ ಪಡೆಯುವುದೇ ಕುಂಟೆಬಿಲ್ಲೆ ಆಟದ ಉದ್ದೇಶಗಳು .

ಇ ) ಕೊಟ್ಟಿರುವ ಆಟಗಳನ್ನು ಒಳಾಂಗಣ ಹಾಗೂ ಹೊರಾಂಗಣ ಆಟಗಳಾಗಿ ವರ್ಗಿಕರಿಸಿ ಬರೆ .
ಒಳಾಂಗಣ ಆಟಗಳು :
ಉದ್ದಿನ ಮೂಟೆ , ಚಿಣ್ಣಿದಾಂಡು , ಆಣೆ ಕಲ್ಲು ,
ಹೊರಾಂಗಣ ಆಟಗಳು :
ಚೌಕಾಬಾರಾ , ಕಲ್ಲೋಮಣ್ಣೊ , ಕಣ್ಣುಮುಚ್ಚಾಲೆ

ಈ ) ಕುಂಟೆಬಿಲ್ಲೆ ಆಡುವ ವಿಧಾನವನ್ನು ಅನುಕ್ರಮವಾಗಿ ಬರೆ
ಕೊನೆಯ ಚೌಕದಿಂದ ಬಿಲ್ಲೆಯನ್ನು ಹಾರಿ ತುಳಿಯುವುದು . ಮೊದಲ ಚೌಕಕ್ಕೆ ಬಿಲ್ಲೆ ಎಸೆಯವುದು . – ಘಟ್ಟದ ಚೌಕುಗಳಲ್ಲಿ ವಿಶ್ರಾಂತಿ ಪಡೆದುಕೊಳ್ಳುವುದು .
ಉತ್ತರ :
1. ಅಂಕಣ ಬರೆಯುವುದು .
2. ಮೊದಲ ಚೌಕಕ್ಕೆ ಬಿಲ್ಲೆ ಎಸೆಯುವುದು .
3. ಘಟ್ಟದ ಚೌಕಗಳಲ್ಲಿ ವಿಶ್ರಾಂತಿ ಪಡೆಯುವುದು
4. ಕೊನೆಯ ಚೌಕದಿಂದ ಬಿಲ್ಲೆಯನ್ನು ಹಾರಿ ತುಳಿಯುವುದು .

ಉ ) ಈ ಕೆಳಗಿನ ಪದಗಳನ್ನು ನಿಮ್ಮ ಸ್ವಂತ ವಾಕ್ಯಗಳಲ್ಲಿ ಬಳಸಿ ಬರೆ .
ಉತ್ತರ : 1. ಸರದಿ : ನಾನು ಸರದಿಯಲ್ಲಿ ನಿಂತು ನೀರು ತುಂಬುತ್ತೇನೆ .
2. ಕುಣಿದು ಕುಪ್ಪಳಿಸು : ನಾನು ಸಂತೋಷದಿಂದ ಕುಣಿದು ಕುಪ್ಪಳಿಸಿದೆನು .
3. ಪಾಲಿಸು : ನಾನು ತಂದೆ – ತಾಯಿ ಹೇಳಿದ ಮಾತನ್ನು ಚಾಚು ತಪ್ಪದೇ ಪಾಲಿಸುತ್ತೇನೆ .
4. ಅವಸರ : ನಾನು ಅವಸರದಿಂದ ಊಟ ಮಾಡುವುದಿಲ್ಲ .
ನಾನಾರ್ಥ : ಒಂದು ಪದಕ್ಕೆ ಇರುವ ಬೇರೆ ಬೇರೆ ಅರ್ಥಗಳಿಗೆ ನಾನಾರ್ಥ ಎನ್ನುವರು .
ಉದಾ : ಕಳೆ – ಶೋಭೆ , ಕಳೆ – ಬೇಡವಾದ ಸಸ್ಯ .

ಊ ) ಕೊಟ್ಟಿರುವ ಪದಗಳಿಗೆ ನಾನಾರ್ಥಗಳನ್ನು ಬರೆ .
ಆಡು : ಮೇಕೆ ; ಪಂದ್ಯವಾಡು
ಕಾಡು : ಕಾನನ , ಅರಣ್ಯ , ಪೀಡಿಸು
ಹೊಳೆ : ನದಿ , ತೊರೆ ;
ಹರಿ : ವಿಷ್ಣು , ಚಿಂದಿ ಮಾಡು
ಕವಿ : ಕಬ್ಬಿಗ , ಕಾವ್ಯಕರ್ತೃ ,

ಸಾಮರ್ಥ್ಯಾಧಾರಿತ ಅಭ್ಯಾಸ


ಅ ) ಈ ವಾಕ್ಯಗಳಲ್ಲಿನ ಸೂಚನೆಗಳಿಗೆ ಅಡಿಗೆರೆ ಹಾಕು .

ಮಾದರಿ : ನಿಧಾನವಾಗಿ ನಡೆ , ಇಲ್ಲವಾದರೆ ಬಿದ್ದು ಬಿಡುವೆ

1. ರಸ್ತೆ ದಾಟುವಾಗ ಎಡ ಬಲ ನೋಡಬೇಕು

ಉತ್ತರ : ರಸ್ತೆ ದಾಟುವಾಗ , ಎಡ ಬಲ ನೋಡಬೇಕು .

2. ಗಲಾಟೆ ಮಾಡಬೇಡಿ ಮಾಡಿದರೆ ಪಾಠ ಅರ್ಥವಾಗುವುದಿಲ್ಲ
ಉತ್ತರ : ಗಲಾಟೆ ಮಾಡಬೇಡಿ , ಮಾಡಿದರೆ ಪಾಠ ಅರ್ಥವಾಗುವುದಿಲ್ಲ .

3. ಆಟ ಆಡುವಾಗ ಎಚ್ಚರವಿರಲಿ ಇಲ್ಲವಾದರೆ ಅಪಘಾತ ಆಗುವುದು
ಉತ್ತರ : ಆಟ ಆಡುವಾಗ ಎಚ್ಚರವಿರಲಿ ಇಲ್ಲವಾದರೆ ಅಪಘಾತ ಆಗುವುದು

4. ಊಟ ಮಾಡುವಾಗ ಅವಸರ ಮಾಡಬಾರದು
ಉತ್ತರ : ಊಟ ಮಾಡುವಾಗ ಅವಸರ ಮಾಡಬಾರದು .

ಭಾಷಾ ಚಟುವಟಿಕೆ

ಆ ) ಮಾದರಿಯಂತೆ ಬರೆಯಿರಿ
ಮಾದರಿ : ಆಡೋದು – ಆಡುವುದು

ಉತ್ತರ : 1. ಮಾಡೋದು- ಮಾಡುವುದು
2. ಬಿಡೋದು – ಬಿಡುವುದು
3. ಬರೆಯೋದು- ಬರೆಯುವುದು
4. ತಳ್ಳೋದು – ತಳ್ಳುವುದು

You Might Like

Post a Comment

0 Comments