Recent Posts

ಸ್ವದೇಶಿ ಸೂತ್ರದ ಸರಳ ಹಬ್ಬ- ೧೦ನೇ ತರಗತಿ ಸಿರಿ ಕನ್ನಡ ಪುಸ್ತಕದ ಪ್ರಶ್ನೋತ್ತರಗಳು


ಸ್ವದೇಶಿ ಸೂತ್ರದ ಸರಳ ಹಬ್ಬ

 
ಕೃತಿಕಾರರ ಪರಿಚಯ
 
 
 
ಶಿವಾನಂದ ಕಳವೆಯವರು ಶಿರಸಿಯ ಕಳವೆಯವರು , ಕಾಲೇಜು ದಿನಗಳಿದ್ದಾಗಲೇ ಬರವಣಿಗೆಯತ್ತ ಹೊರಳಿಕೊಂಡರು . ಪರಿಸರ ಕುರಿತು ವಿಶೇಷ ಆಸಕ್ತಿ ಬೆಳೆಸಿಕೊಂಡರು .
ತಮ್ಮ ಶಿಕ್ಷಣ ಪೂರೈಸಿಕೊಂಡ ನಂತರ ಪತ್ರಕರ್ತರಾಗಿ ವೃತ್ತಿಜೀವನ ಪ್ರಾರಂಭಿಸಿದ ಕಳವೆಯವರು ಫ್ರಾನ್ಸಿಸ್ ಬುಕಾನನ್ ಸಂಚರಿಸಿದ್ದ ಪ್ರದೇಶಗಳಿಗೆ ಭೇಟಿಕೊಟ್ಟು ವಿಶಿಷ್ಟ ಸಂಗತಿಗಳನ್ನು ದಾಖಲಿಸಿದರು .
ಶಿರಸಿ ಸಮೀಪದ ನೀರ್ನಳ್ಳಿಯಲ್ಲಿರುವ “ ಮಲೆನಾಡ ಮಳೆಕೇಂದ್ರ ” ದ ರೂವಾರಿಗಳು , ಕಾನ್ ಗೌರಿ , ಗೌರಿ ಜಿಂಕೆಯ ಆತ್ಮಕಥೆ , ಅರಣ್ಯ , ಮಳೆ ಮನೆಯ ಮಾತುಕತೆ , ಕಾನ್ ಬಾಗಿಲು , ಮಣ್ಣಿನ ಓದು , ಒಂದು ತುತ್ತಿನ ಕಥೆ , ಕ್ಷಾಮ ಡಂಗುರ , ಜಲ ವರ್ತಮಾನ , ಕಾನನೆಯ ಕಥೆಗಳು ಮುಂತಾದ ಹಲವು ಮಹತ್ವದ ಕೃತಿಗಳನ್ನು ಬರೆದಿದ್ದಾರೆ . ಮಧ್ಯಘಟ್ಟ ಇವರ ಒಂದು ವಿಶಿಷ್ಟ ಕಾದಂಬರಿ .

ಪ್ರಶ್ನೆಗಳಿಗೆ ಉತ್ತರಿಸಿ :

1. ಸ್ವಾತಂತ್ರ್ಯಪೂರ್ವದಲ್ಲಿ ಹೋರಾಟಗಾರರು ಗಿರಾಕಿಗಳು ಮತ್ತು ಅಂಗಡಿಯವನನ್ನು ಏನೆಂದು ವಿನಂತಿಸಿಕೊಂಡರು ?
ಉತ್ತರ: ಹಿಂದೂಸ್ತಾನದಲ್ಲಿ ಪ್ರತಿಯೊಬ್ಬನ ದಿನದ ಉತ್ರನ್ನ ಸರಾಸರಿ ಒಂದು ಆಣೆ ಮೂರು ಪೈಸೆಗಳು ಮಾತ್ರ! ಇಲ್ಲಿ 55 ಕೋಟಿ ಜನರ ಸರಾಸರಿ ವರ್ಷದ ಉತ್ಪನ್ನ 1250 ಕೋಟಿಯಿದೆ. ದೇಶದ ಸಾಲವು 1100 ಕೋಟಿಯಿದೆ. ಇದಲ್ಲದೆ ಪ್ರತಿವರ್ಷ 125 ಕೋಟಿ ಪರದೇಶಕ್ಕೆ ಹೋಗುತ್ತಿದೆ. ವಸ್ತುಸ್ಥಿತಿ ಹೀಗಿರುವಾಗ ಹಬ್ಬ, ಹುಣ್ಣಿಮೆಗಳು ಸಮೀಪಿಸಿದ ಈ ದಿನಗಳಲ್ಲಿ ಪರದೇಶಿ ವಸ್ತುಗಳನ್ನು ಕೊಳ್ಳುವುದು ಸರಿಯಲ್ಲ. ಬಣ್ಣದ ಕಾಗದ, ಗಾಜಿನ ಮಣಿಗಳು, ಬೇಗಡಿ, ಇಮಿಟೇಶನ್ ಮುತ್ತು, ತುರಾಯಿಗಳು ನಮ್ಮ ಹಿಂದುಸ್ತಾನದಂತಹ ಬಡದೇಶಕ್ಕೆ ಅನವಶ್ಯಕ ಪಟಾಕಿ, ಧಡಾಕಿ, ನೆಲಗುಮ್ಮ, ಮುಂತಾದ ವಸ್ತುಗಳು, ವಿದೇಶಿ ಎಂದು ಮಾರಲ್ಟಡುವ ಕರ್ಪೂರ, ಪರದೇಶಿ ಅತ್ತರುಗಳನ್ನು ಖರೀದಿಸಿ ದೇಶಕ್ಕೆ ಒದಗಿರುವ ಸಂಕಟ ಪರಂಪರೆಯನ್ನು ಯಾರೂ ಹೆಚ್ಚಿಸಬಾರದು! ದೇವರ ಪೂಜಾದಿಗಳನ್ನು ಶುದ್ದ ಶುಭ್ರ ದೇಶೀ ವಸ್ತುಗಳಿಂದಲೇ ಮಾಡಿರಿ, ಪರದೇಶಿ ವಸ್ತುಗಳಿಂದ ದೇವರ ಮೂರ್ತಿಗನ್ನು ಭ್ರಷ್ಟ ಮಾಡಬೇಡಿರಿ!

2.ಯಾವ ಯಾವ ವಸ್ತುಗಳನ್ನು ಬಳಸಬೇಡಿರೆಂದು ಜನಾಂದೋಲನ ಮಾಡಲಾಯಿತು ?
ಉತ್ತರ: ಪರದೇಶದಿಂದ ಬರುವ ಬಣ್ಣದ ಕಾಗದ, ಗಾಜಿನ ಮಣಿಗಳು, ಬೇಗಡಿ, ಇಮಿಟೇಶನ್ ಮುತ್ತು, ತುರಾಯಿಗಳು, ಪಟಾಕಿ, ಧಡಾಕಿ, ನೆಲಗುಮ್ಮ, ಕರ್ಪೂರ ಹಾಗೂ ಜರಿಯ ಟೋಪಿಗಳನ್ನು ಬಳಸಬೇಡಿರೆಂದು ಜನಾಂದೋಲನ ಮಾಡಲಾಯಿತು.

3. ಮಲೆನಾಡಿನಲ್ಲಿ ದೀಪದ ಬತ್ತಿಯ ಸಮಸ್ಯೆಯನ್ನು ಹೇಗೆ ಪರಿಹರಿಸಿಕೊಳ್ಳಲಾಯಿತು?
ಉತ್ತರ: ಮಲೆನಾಡಿನ ಪಶ್ಚಿಮ ಘಟ್ಟದ ಕಾಡುಗಳಲ್ಲಿ ತೊಡಕಲು ಕುಡಿಯ ಎಂಬ ಗಿಡವಿದೆ ಇದರ ಎಳೆಯ ಕುಡಿ ಸಂಗ್ರಹಿಸಿ ಡಬ್ಬದಲ್ಲಿ ಶೇಖರಿಸಿ ಇಡಲಾಗುತ್ತಿತ್ತು ಒಣಗಿದ ಕುಡಿಯನ್ನು ಎಣ್ಣೆಯಲ್ಲಿ ಅದ್ದಿ ನಿತ್ಯ ಆರತಿಗೆ ಬಳಸಲಾಗುತ್ತಿತ್ತು. ಇದಲ್ಲದೆ ನಾಗಸಂಪಿಗೆ ಮರದ ಬೀಜಗಳಲ್ಲಿ ಎಣ್ಣೆ ಅಂಶ ಜಾಸ್ತಿ ಇರುವುದರಿಂದ ಅದನ್ನೂ ದೀಪಕ್ಕೆ ಉಪಯೋಗಿಸಲಾಗುತ್ತದೆ. ಅಡಿಕೆ ತೋಟಗಳ ಅಂಚಿನಲ್ಲಿ ಒಂದೆರಡು ಜವಾರಿ ಹತ್ತಿ ಗಿಡಗಳು ಇರುತ್ತಿದ್ದವು. ಈ ಹತ್ತಿಯನ್ನು ದೀಪಕ್ಕೆ ಬಳಸುವ ಪರಿಪಾಠವಿತ್ತು.

೪. ಆಗ ಕರ್ಪೂರಕ್ಕೆ ಕಾದಾಡಿದ ಮನಸ್ಸುಗಳು ಮರುಗಿವೆ – ಏಕೆ?
ಉತ್ತರ: ಆದರ್ಶವಾಗಿದ್ದ ನೆಲದಲ್ಲಿ ಆಡಂಬರ, ರಂಗು, ನಾಟಕೀಯತೆ ಸೇರಿಕೊಂಡು ಬದುಕು ಲಗಾಮಿಲ್ಲದ ಓಟ ಕಿತ್ತಿದೆ. ಸಂಪ್ರದಾಯ ದೇವರ ನಂಬಿಕೆಗಳಿಗಿಂತ ಹಬ್ಬಗಳು ಖರೀದಿಯ ಸವಾಲು ಒಡ್ಡಿ ಮನೆ ಮನಗಳನ್ನು ಕಾಡುತ್ತಿವೆ. ರಾತ್ರಿ ಹಗಲಾಗಿಸುವ ವಿದ್ಯುತ್ ದೀಪಾಲಂಕಾರದಲ್ಲಿ ಪರದೇಶಿ ಚೈನಾ ಬಲ್ಬ್ ಮೆರೆದಿವೆ! ಆಗ ಕರ್ಪೂರಕ್ಕೆ ಕಾದಾಡಿದ ಮನಸ್ಸುಗಳು ಮರುಗಿವೆ.

೫. ಸ್ವದೇಶೀ ಆರ್ಥಿಕತೆ ಬಲಪಡಿಸಲು ಹಬ್ಬಗಳಲ್ಲಿ ಸ್ವದೇಶೀ ವಸ್ತುಗಳನ್ನೇ ಬಳಸಲು ಪ್ರಾರಂಭಿಸಬೇಕು – ಈ ಕುರಿತು ನಿಮ್ಮ ಅಭಿಪ್ರಾಯವೇನು ?
ಉತ್ತರ: ನಮ್ಮ ದೇಶದಲ್ಲಿ ಹಬ್ಬದ ಸಮಯದಲ್ಲಿ ಬಟ್ಟೆಗಳನ್ನು ವಿವಿಧ ವಸ್ತುಗಳಿಂದ ಬೆಳೆದು ಬಂದಿವೆ. ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ನಡೆದಿದೆ. ಇದಕ್ಕೆ ಕಾರಣ ಹಬ್ಬ ಎಂದರೆ ಉತ್ಸಾಹ ಸಂಭ್ರಮವನ್ನು ಆಚರಿಸುವ ಕಾಲ ಎಂಬ ಭಾವನೆ. ಜನರು ಈ ಸಮಯದಲ್ಲಿ ಹೆಚ್ಚು ಕೊಳ್ಳುತ್ತಾರೆ ಅಥವಾ ಅವರನ್ನು ಕೊಳ್ಳುವಂತೆ ಮಾಡಬೇಕು ಎಂದು ಅಂಗಡಿಗಳು ಈ ಸಮಯದಲ್ಲಿ ರಿಯಾಯಿತಿ ( ಡಿಸ್ಕೌಂಟ್) ಗಳನ್ನು ಘೋಷಿಸುತ್ತದೆ. ಜನರು ಈ ಸಮಯದಲ್ಲಿ ಸ್ವದೇಶಿ ವಸ್ತುಗಳನ್ನು ಖರೀದಿಸುವ ಮನಸ್ಸು ಮಾಡಿದರೆ ಖಂಡಿತ ಸ್ವದೇಶಿ ಆರ್ಥಿಕತೆಯು ಬಲವಾಗುತ್ತದೆ. ಅದರೆ ಇದು ಅಷ್ಟು ಸುಲಭವಾಗಿಲ್ಲ. ಜನರು ವಿದೇಶಿ ವಸ್ತಗಳನ್ನು ಏಕೆ ಖರೀದಿಸುತ್ತಾರೆ ಎಂಬುದಕ್ಕೆ ಮುಖ್ಯವಾಗಿ ಎರಡು ಕಾರಣಗಳನ್ನು ಕೊಡಬಹುದು. ಕೆಲವು ವಿದೇಶಿ ವಸ್ತುಗಳು ಉದಾಹರಣೆಗೆ ಚೈನಾದಿಂದ ಆಮದಾಗುಬ ಹಲವಾರು ವಸ್ತುಗಳು ಸ್ವದೇಶಿ ವಸ್ತುಗಳಿಗಿಂತ ತುಂಬಾ ಅಗ್ಗವಾಗಿತ್ತದೆ. ಎರಡನೆಯದು ವಿದೇಶಿ ವಸ್ತುಗಳು ಗುಣಮಟ್ಟದಲ್ಲಿ ಸ್ವದೇಶಿ ವಸ್ತುಗಳಿಗಿಂತ ಚೆನ್ನಾಗಿರುತ್ತದೆ ಎಂಬುದು. ಇದು ಲೋಕಲ್ (ಸ್ವದೇಶಿ) ಚೆನ್ನಾಗಿರುವುದಿಲ್ಲ. ಇದು ಇಂಪೋರ್ಟೆಡ್ (ವಿದೇಶದಿಂದ ತರಿಸಿದ್ದು ) ತುಂಬಾ ಚೆನ್ನಾಗಿರುತ್ತದೆ ಎಂಬ ಭಾವನೆ ಜನರಲ್ಲಿ ಬಲವಾಗಿ ಬೇರೂರಿದೆ. ಒಳ್ಳೆಯ ಗುಣಮಟ್ಟದ ವಸ್ತುಗಳನ್ನು ಸ್ಪರ್ಧಾತ್ಮಕ ದರದಲ್ಲಿ ತಯಾರಿಸುವ ಸವಾಲು ದೇಶಿಯ ಉತ್ಪಾದಕರ ಮುಂದಿದೆ. ನಾವು ಧರಿಸುವ ವಿವಿಧ ಬಟ್ಟೆಗಳು ಉಡುಪುಗಳು, ಮನೆಬಳಕೆ ವಸ್ತುಗಳು, ಮನೆಯ ಅಲಂಕಾರದ ಸಾಮಗ್ರಿ , ಸವಾರಿ ಮಾಡುವ ವಿವಿಧ ಗಾಡಿಗಳನ್ನು ಹಬ್ಬದ ಸಮಯದಲ್ಲಿ ಖರೀದಿಸುವುದು ರೂಢಿ. ಈ ಎಲ್ಲವನ್ನೂ ಖರೀದಿಸುವಾಗ ಜನರು ಆದಷ್ಟು ಸ್ವದೇಶಿ ವಸ್ತುಗಳನ್ನೆ ಕೊಳ್ಳಬೇಕು. ಎಂಬ ಮನಸ್ಸು ಮಾಡಿದರೆ ಸ್ವದೇಶಿ ಆರ್ಥಿಕತೆಗೆ ಖಂಡಿತ ಬಲ ಸಿಗುತ್ತದೆ.
You Might Like

Post a Comment

0 Comments