Recent Posts

ಆಹಾರ ಸಂಪನ್ಮೂಲಗಳಲ್ಲಿ ಸುಧಾರಣೆ - ೯ನೇ ತರಗತಿ ವಿಜ್ಞಾನ ಪುಸ್ತಕದ ಪ್ರಶ್ನೋತ್ತರಗಳು

 ಆಹಾರ ಸಂಪನ್ಮೂಲಗಳಲ್ಲಿ ಸುಧಾರಣೆ

1.    ಗರಿಷ್ಟ ಇಳುವರಿಯನ್ನು ನಿಶ್ಚಿತವಾಗಿ ನೀಡುವ ಯಾವುದಾದರೂ ಒಂದು ಬೆಳೆಯ ಉತ್ಪಾದನಾ ವಿಧಾನವನ್ನು ವಿವರಿಸಿ.
•    ಸಸ್ಯಗಳ ತಳೀಕರಣ
•    ಈ ವಿಧಾನದ ಮೂಲಕ ಅಪೇಕ್ಷಿತ ಗುಣಗಳನ್ನು ಒದಗಿಸುವ ವಂಶವಾಹಿಯನ್ನು ಸೇರಿಸುವುದರಿಂದ ಬೆಳೆಯ ಸುಧಾರಣೆ ಮಾಡಲಾಗುತ್ತದೆ.
•    ವಿಭಿನ್ನ ಹವಾಮಾನದ ಪರಿಸ್ಥಿತಿಗಳಲ್ಲಿ ಅಧಿಕ ಇಳುವರಿ ನೀಡುವ ಹೊಸ ತಳಿಗಳನ್ನು ಅಭಿವೃದ್ದಿಪಡಿಸಲಾಗುತ್ತದೆ.
•    ಈ ವಿಧಾನದ ಮೂಲಕ ಪ್ರತಿ ಎಕರೆ ಬೆಳೆಯ ಉತ್ಪಾದನೆಯ ಪ್ರಮಾಣವನ್ನು ಹೆಚ್ಚಿಸುವುದು.

2. ಕೃಷಿ ಭೂಮಿಯಲ್ಲಿ ಸಾವಯವ ಗೊಬ್ಬರ ಮತ್ತು ರಸಗೊಬ್ಬರವನ್ನು ಏಕೆ ಬಳಸುತ್ತಾರೆ?
•    ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಲು
•    ಅಧಿಕ ಇಳುವರಿಯನ್ನು ಪಡೆಯಲು
•    ಅಲ್ಪಾವಧಿ ಮತ್ತು ದೀರ್ಘಾವದಿ ಲಾಭ ಪಡೆಯಲು

3.ಅಂತರ ಬೇಸಾಯ ಮತ್ತು ಸರದಿ ಬೇಸಾಯಗಳ ಅನುಕೂಲತೆಗಳೇನು?
ಅಂತರ ಬೇಸಾಯ ಮತ್ತು ಸರದಿ ಬೇಸಾಯಗಳ ಅನುಕೂಲತೆಗಳು:
•    ಉತ್ತಮ ಇಳುವರಿಯನ್ನು ಕೊಡುತ್ತದೆ.
•    ಕೀಟಗಳು ಮತ್ತು ರೋಗಗಳು ಕೃಷಿ ಭೂಮಿಯಲ್ಲಿನ ಒಂದು ಬೆಳೆಗೆ ಸೇರಿದ ಎಲ್ಲಾ ಸಸ್ಯಗಳಿಗೆ ಹರಡುವುದನ್ನು ತಡೆಗಟ್ಟುತ್ತದೆ.
•    ಇದು ಒದಗಿಸಿದ ಪೋಷಕಾಂಶಗಳು ಗರಿಷ್ಟ ಪ್ರಮಾಣದಲ್ಲಿ ಬಳಕೆಯಾಗುವುದನ್ನು ನಿಶ್ಚಿತಗೊಳಿಸುತ್ತದೆ.
•    ಕಳೆಗಳನ್ನು ನಿಯಂತ್ರಣ ಮಾಡಬಹುದು.

4. ಅನುವಂಶಿಯತೆಯ ಬದಲಾವಣೆ ಎಂದರೇನು? ಕೃಷಿ ಪದ್ದತಿಯಲ್ಲಿ ಇದು ಹೇಗೆ ಪುಯುಕ್ತವಾಗಿದೆ?
ಅಪೇಕ್ಷಿತ ಗುಣಗಳನ್ನು ಒದಗಿಸುವ ವಂಶವಾಹಿಯನ್ನು ಬೆಳೆಯ ತಳಿಗೆ ಸೇರಿಸಿ ಹೊಸ ತಳಿ ಅಭಿವೃದ್ದಿಪಡಿಸುವುದಕ್ಕೆ ವಂಶವಾಹಿಯ ಬದಲಾವಣೆ ಎನ್ನುವರು.
ಕೃಷಿ ಪದ್ದತಿಯಲ್ಲಿ ಅನುವಂಶೀಯತೆಯ ಬದಲಾವಣೆಯ ಉಪಯುಕ್ತತೆಗಳು:
•    ಅಧಿಕ ಇಳುವರಿ
•    ಗುಣಮಟ್ಟದ ಸುಧಾರಣೆ
•    ಜೈವಿಕ ಮತ್ತು ಅಜೈವಿಕ ಪ್ರತಿರೋಧಕತೆ
•    ಪರಿಪಕ್ವತೆಯ ಅವಧಿ ಬದಲಾವಣೆ
•    ವ್ಯಾಪಕ ಹೊಂದಾಣಿಕೆ
•    ಬೆಳೆಗಳಿಗೆ ಸಂಬಂಧಿಸಿದಂತೆ ಅಪೇಕ್ಷಿತ ಗುಣಲಕ್ಷಣಗಳು

5. ಶೇಖರಣಾ ಧಾನ್ಯಗಳ ನಷ್ಟ ಹೇಗೆ ಉಂಟಾಗುತ್ತದೆ?
ಶೇಖರಣಾ ಧಾನ್ಯಗಳ ನಷ್ಟವು ತೇವಾಂಶ, ಗಾಳಿ, ತಾಪ ಕೀಟಗಳು, ಪಕ್ಷಿಗಳು , ಇಲಿಗಳು, ಬ್ಯಾಕ್ಟೀರಿಯಾಗಳು ಇತ್ಯಾದಿಗಳಿಂದ ಉಂಟಾಗುತ್ತದೆ.

6. ಉತ್ತಮ ಪಶುಸಂಗೋಪನಾ ವಿಧಾನಗಳು ರೈತರಿಗೆ ಹೇಗೆ ಲಾಭದಾಯಕ?
•    ತಮ್ಮ ಪಶುಸಂಗೋಪನಾ ವಿಧಾನಗಳಿಂದ ರೈತರಿಗೆ ಹಾಲು, ಮೊಟ್ಟೆ ಮತ್ತು ಮಾಂಸಗಳ ಬೇಡಿಕೆ ಪೂರೈಸಲು ಸಹಾಯಕವಾಗಿದೆ.
•    ಜಾನುವಾರುಗಳ ಉತ್ಪಾದನೆ ಸುಧಾರಿಸಲು ಸಹಾಯಕ

7. ದನಗಳ ಸಾಕಾಣಿಕೆಯ ಲಾಭಗಳೇನು?
ದನಗಳ ಸಾಕಾಣಿಕೆಯ ಲಾಭಗಳು
•    ಬರಡು ಕೃಷಿ ಕಾರ್ಯಗಳಾದ ಉಳುಮೆ ನೀರಾವರಿ ಮತ್ತು ಸಾಗಾಣಿಕೆ ಸಹಾಯಕವಾಗಿವೆ.
•    ಹಾಲಿನ ಉತ್ಪಾದನೆಯನ್ನು ಹೆಚ್ಷಿಸಲು

8. ಕೋಳಿ ಸಾಕಾಣಿಕೆ ಮೀನು ಸಾಕಾಣಿಕೆ ಮತ್ತು ಜೇನು ಸಾಕಾಣಿಕೆಯಲ್ಲಿ ಉತ್ಪದನೆಯನ್ನು ಹೆಚ್ಚಿಸಲು ಇರುವ ಸಾಮಾನ್ಯ ಅಂಶಗಳುಏನು?
ಇವುಗಳ ಸಾಕಾಣಿಕೆ ಇಲ್ಲಿರುವ ಸಾಮಾನ್ಯ ಅಂಶಗಳು
ಅನುವಂಶಿಯವಾಗಿ ವಿಭಿನ್ನವಾಗಿರುವ ಸಸ್ಯಗಳನ್ನು ಅಡ್ಡ ಹಾಯಿಸುವುದು ಅಂದರೆ ತಳಿಗಳ ಸಂಕರಣ

9. ನೈಸರ್ಗಿಕ ಮೀನುಗಾರಿಕೆ ಸಮುದ್ರ ಮೀನು ಕೃಷಿ ಮತ್ತು ಸಿಹಿ ಮೀನು ಕೃಷಿಗಳ ನಡುವಿನ ವ್ಯತ್ಯಾಸಗಳನ್ನು ತಿಳಿಸಿ.
ನೈಸರ್ಗಿಕ ಮೀನುಗಾರಿಕೆ    ಸಮುದ್ರ ಮೀನು ಕೃಷಿ    ಸಿಹಿ ಮೀನು ಕೃಷಿ
ನೈಸರ್ಗಿಕ ಪರಿಸರದಲ್ಲಿ ಮೀನುಗಳನ್ನು ಉತ್ಪಾದಿಸುವ ವಿಧಾನ    ಉಪ್ಪಿನ ನೀರಿನಲ್ಲಿ ವಿವಿಧ ಪ್ರಭೇದಗಳ ಮೀನುಗಳನ್ನು ಉತ್ಪಾದಿಸಿ ನಿರ್ವಹಣೆ ಮಾಡುವ ವಿಧಾನ ಸಿಹಿನೀರಿನಲ್ಲಿ ವಿವಿಧ ಪ್ರಭೇಧಗಳ ಮೀನುಗಳನ್ನು ಉತ್ಪಾದಿಸಿ ನಿರ್ವಹಣೆ ಮಾಡುವ ವಿಧಾನ
ಸಿಗಡಿ, ಮೃದಂಗಿ, ಈಜು ರೆಕ್ಕೆ ಉಳ್ಳ ನಿಜವಾದ ಮೀನು ಮುಂತಾದವುಗಳನ್ನು ನೈಸರ್ಗಿಕವಾಹಿ ಉತ್ಪಾದಿಸಲಾಗುತ್ತದೆ.    ಹೆಚ್ಚುವಾಣಿಜ್ಯ ಮೌಲ್ಯವಿರುವ ಮಿಲ್ಲಟ್ಸ್ ಪರ್ಲ್ ಸ್ಪಾಟ್ ಭೆಟ್ಕಿ ಮುತ್ತಿನ ಪ್ರಾಣಿಗಳು ಚಿಪ್ಪು ಮೀನುಗಳು ಮುಂತಾದವುಗಳನ್ನು ಸಮುದ್ರದಲ್ಲಿ ಮೀನು ಕೃಷಿ ಮಾಡಲಾಗುತ್ತದೆ. ಕಾಲುವೆಗಳು ಕೆರೆಗಳು ಜಲಾಶಯಗಳು ಮತ್ತು ನದಿಗಳಂತಹ ಸಿಹಿನೀರಿನ ಆಕರಗಳಲ್ಲಿ ಮೀನುಗಳನ್ನು ಕೃಷಿಮಾಡಿ ಉತ್ಪಾದಿಸಲಾಗುತ್ತದೆ.



You Might Like

Post a Comment

0 Comments