Recent Posts

ಮುಳುಗದ ಸೂರ್ಯ - ೩ನೇ ತರಗತಿ ಸವಿ ಕನ್ನಡ ಪುಸ್ತಕದ ಪ್ರಶ್ನೋತ್ತರಗಳು

ಮುಳುಗದ ಸೂರ್ಯ

ಅ ) ಒಂದೊಂದು ವಾಕ್ಯದಲ್ಲಿ ಉತ್ತರಿಸು .

1. ಗದುಗಿನ ಗವಾಯಿಯವರು ಯಾರ ಬಾಳಿನ ಚಂದಿರ ?
ಉತ್ತರ : ಗದುಗಿನ ಗವಾಯಿಯವರು ಅಂಧರ ಬಾಳಿನ ಚಂದಿರರಾಗಿದ್ದಾರೆ .

2. ಗವಾಯಿಯವರು ಏನನ್ನು ಕಟ್ಟಿ ಬೆಳೆಸಿದರು?
ಉತ್ತರ : ಗವಾಯಿಯವರು ಸ್ವರ ಲೋಕವನ್ನು ಕಟ್ಟಿ ಬೆಳೆಸಿದರು

3. ಕವಿ ಮುಳುಗದ ಸೂರ್ಯ ಎಂದು ಯಾರನ್ನು ಕರೆದಿದ್ದಾರೆ ?
ಉತ್ತರ : ಪಂಡಿತ ಪುಟ್ಟರಾಜ ಗವಾಯಿಗಳವರನ್ನು ‘ ಮುಳುಗದ ಸೂರ್ಯ ‘ ಎಂದು ಕವಿ ಕರೆದಿದ್ದಾರೆ .

ಆ ) ಎರಡು ಮೂರು ವಾಕ್ಯದಲ್ಲಿ ಉತ್ತರಿಸು .

1. ಗವಾಯಿಯವರು ಮಾಡಿದ ಸಾಧನೆಗಳಾವುವು?
ಉತ್ತರ : ಗವಾಯಿಯವರು ಸ್ವರಲೋಕ ಹುಟ್ಟು ಹಾಕಿದ್ದಾರೆ . ಸಾವಿರ ಸಾವಿರ ಅಂಧ ಮಕ್ಕಳಿಗೆ ಸಂಗೀತ ಶಿಕ್ಷಣ ನೀಡಿದ್ದಾರೆ. ಇವರು ಕಣ್ಣುಗಳಿಲ್ಲದಿದ್ದರೂ ಹಲವು ನಾಟಕ ಪುರಾಣ ಚರಿತ್ರೆಗಳನ್ನು ಬರೆದಿದ್ದಾರೆ ಹೆಸರಾಂತ ಸಂಗೀತ ಗಾಯಕರನ್ನು ತಯಾರಿ ಮಾಡಿ ನಾಡಿಗೆ ನೀಡಿದ್ದಾರೆ.

2. ಭೂಲೋಕ ಸ್ವರ್ಗ ಲೋಕವಾದುದು ಹೇಗೆ ಎಂದು ಕವಿ ಹೇಳಿದ್ದಾರೆ?
ಈ ನಾಡಿಗೆ ಸಂಗೀತ ಸುಧೆಯನ್ನು ಉಣಬಡಿಸಿದ ಗದಿಗಿನ ಹೆಮ್ಮೆಯ ಶ್ರೀ ವೀರೇಶ್ವರ ಪುಣ್ಯಾಶ್ರಮವನ್ನು ಕಟ್ಟಿ ಬೆಳೆಸಿದ್ದಾರೆ. ಅವರು ಹುಟ್ಟುಹಾಕಿದ ಸ್ವರಲೋಕದಲ್ಲಿ ಸಾವಿರ ಸಾವಿರ ಅಂಧ ಮಕ್ಕಳು ಸಂಗೀತ ಶಿಕ್ಷಣ ಕಲಿಯುವುದರೊಂದಿಗೆ ಭೂಲೋಕ ಈ ಸ್ವರಲೋಕದಿಂದ ಸ್ವರ್ಗಲೋಕವಾದುದು ಎಂದು ಕವಿ ಹೇಳಿದ್ದಾರೆ.

3. ಪುಟ್ಟರಾಜರು ಸೇವೆ ಸಲ್ಲಿಸಿದ ಕ್ಷೇತ್ರಗಳಾವವು ?
ಉತ್ತರ : ಪುಟ್ಟರಾಜರು ಸಂಗೀತದ ಜೊತೆಗೆ ಸಾಹಿತ್ಯ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲೂ ಗಣನೀಯ ಸೇ ಸಲ್ಲಿಸಿದ್ದಾರೆ

ಭಾಷಾಭ್ಯಾಸ ಚಟುವಟಿಕೆ
ಅ ) ಮಾದರಿಯಂತೆ ಬರೆ :
ಮಾದರಿ : ನುಡಿ – ನುಡಿದರು
ಬರೆ – ಬರೆದರು .
ನಡೆ – ನಡೆದರು
ನಲಿ – ನಲಿದರು .

ಭಾಷಾ ಚಟುವಟಿಕೆ

ಅ ) ಈ ಪದಗಳಿಗೆ ಎರಡು ಸಮಾನಾರ್ಥಕ ಪದಗಳನ್ನು ಬರೆ
ಉತ್ತರ :

1. ಚಂದಿರ : ಶಶಿ , ಚಂದ್ರ
2. ಸೂರ್ಯ : ಪುಭಾಕರ , ಭಾಸ್ಕರ
3.ಧರೆ : ಭೂಮಿ , ಇಳೆ , ಪೃಥ್ವಿ ,

ಆ ) ಅರ್ಥದ ಆಧಾರದಲ್ಲಿ ಗುಂಪಿಗೆ ಸೇರದ ಪದ ಗುರುತಿಸಿ ಬರೆ .

1. ನಾಟಕ , ಚರಿತ್ರೆ , ಚಿತ್ರ , ಪುರಾಣ
ಉತ್ತರ : ಚಿತ್ರ

2. ಬೆಟ್ಟ , ನದಿ , ಪರ್ವತ , ಗಿರಿ
ಉತ್ತರ : ನದಿ

3. ಮಂತ್ರಿ , ರಾಜ , ದೊರೆ ,
ಉತ್ತರ : ಮಂತ್ರಿ

4. ಗಾಯಕ , ಶಿಲ್ಪಿ , ಹಾಡುಗಾರ , ಗವಾಯಿ
ಉತ್ತರ : ಶಿಲ್ಪಿ .

ಈ ) ಕೊಟ್ಟಿರುವ ವಾಕ್ಯಗಳಲ್ಲಿಯ ದ್ವಿರುಕ್ತಿ ಪದಗಳನ್ನು ಅಡಿಗೆರೆ ಎಳೆದು ಗುರುತಿಸು

1. ಗವಾಯಿಗಳು ಸಾವಿರ ಸಾವಿರ ಅಂಧ ಮಕ್ಕಳಿಗೆ ಆಧಾರವಾದರು .

ಉತ್ತರ : ಗವಾಯಿಗಳು ಸಾವಿರ ಸಾವಿರ ಅಂಧ ಮಕ್ಕಳಿಗೆ ಆಧಾರವಾದರು .

2. ರಾಜರಾಜ ಕವಿ ಮಹಾರಾಜರೆಂದು ಪುಟ್ಟರಾಜರನ್ನು ಕವಿ ಕರೆದಿರುವರು .
ಉತ್ತರ : ರಾಜರಾಜ ಕವಿ ಮಹಾರಾಜರೆಂದು ಪುಟ್ಟರಾಜರನ್ನು ಕವಿ ಕರೆದಿರುವರು .

3. ಈ ಮಣ್ಣಿನ ಕಣಕಣದಲ್ಲೂ ಶೌರ್ಯ ಅಡಗಿದೆ ,
ಉತ್ತರ : ಈ ಮಣ್ಣಿನ ಕಣಕಣದಲ್ಲೂ ಶೌರ್ಯ ಅಡಗಿದೆ .

You Might Like

Post a Comment

0 Comments