Recent Posts

ನಾವೇಕೆ ಕಾಯಿಲೆ ಬೀಳುತ್ತೇವೆ - ೯ನೇ ತರಗತಿ ವಿಜ್ಞಾನ ಪುಸ್ತಕದ ಪ್ರಶ್ನೋತ್ತರಗಳು

 ನಾವೇಕೆ ಕಾಯಿಲೆ ಬೀಳುತ್ತೇವೆ

ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ,

1. ಉತ್ತಮ ಆರೋಗ್ಯಕ್ಕೆ ಅಗತ್ಯವಾದ ಯಾವುದಾದರೂ ಎರಡು ಸ್ಥಿತಿಗಳನ್ನು ತಿಳಿಸಿ,
(i) ಒಬ್ಬ ವ್ಯಕ್ತಿಗೆ, ಯಾವುದೇ ಕಾಯಿಲೆಗಳಿಲ್ಲದಿದ್ದರೆ, ಅವನನ್ನು ಆರೋಗ್ಯವಂತ ವ್ಯಕ್ತಿ ಎನ್ನಬಹುದು.
(ii) ಒಬ್ಬ ವ್ಯಕ್ತಿ ದೈಹಿಕವಾಗಿ, ಮಾನಸಿಕವಾಗಿ ಮತ್ತು ಸಾಮಾಜಿಕವಾಗಿ ಸಾಕಷ್ಟು ಒಳ್ಳೆಯ ಚಟುವಟಿಕೆಯನ್ನು ನಡೆಸುವ ಸ್ಥಿತಿಯಿದ್ದರೆ, ಆ ಸ್ಥಿತಿಯನ್ನು ಆರೋಗ್ಯವಂತ ಮನುಷ್ಯ’ನ ಸ್ಥಿತಿ ಎನ್ನಬಹುದು.

2. ರೋಗ ಮುಕ್ತವಾಗಿರಲು ಅಗತ್ಯವಾದ ಯಾವುದಾದರೂ ಎರಡು ಸ್ಥಿತಿಗಳನ್ನು ತಿಳಿಸಿ
(i) ವೈಯಕ್ತಿಕ ಮತ್ತು ಸಮುದಾಯ ಸ್ವಚ್ಛತೆ ಮತ್ತು ಉತ್ತಮ ಪರಿಸರವು, ರೋಗ ಮುಕ್ತವಾಗಿರಲು ಅಗತ್ಯವಾದ ಒಂದು ಮುಖ್ಯ ಸ್ಥಿತಿ,
(i) ದೇಹವನ್ನು ರೋಗ ಮುಕ್ತವಾಗಿಸಲು ಸರಿಯಾದ ಪ್ರಮಾಣದ ಸಮತೋಲನವಾದ ಆಹಾರ ಬಹು ಮುಖ್ಯ

3. ಮೇಲಿನ ಪ್ರಶ್ನೆಗಳ ಉತ್ತರಗಳು ಅಗತ್ಯವಾಗಿ ಒಂದೇ ಆಗಿರುತ್ತವೆಯೇ ಅಥವಾ ಭಿನ್ನವಾಗಿರುತ್ತದೆಯೇ ಏಕೆ?
ಎರಡು ಪ್ರಶ್ನೆಗಳು ಉತ್ತರಗಳು ಬೇರೆ-ಬೇರೆ ಆಗಿರುತ್ತವೆ. ಏಕೆಂದರೆ, ಆರೋಗ್ಯ, ಎಂದರೆ ಒಬ್ಬ ವ್ಯಕ್ತಿ ದೈಹಿಕವಾಗಿ, ಮಾನಸಿಕವಾಗಿ ಮತ್ತು ಸಾಮಾಜಿಕವಾಗಿ ಒಳ್ಳೆಯ ಸ್ಥಿತಿಯಲ್ಲಿರುವುದು. ಆದರೆ, ರೋಗ ಎಂದರೆ ದೈಹಿಕ ಆರೋಗ್ಯದ ಬಗ್ಗೆ ಮಾತ್ರ ವಿಚಾರಿಸುವುದು.

4. ನೀವು ರೋಗ ಪೀಡಿತರಾಗಿದ್ದೀರಿ ಮತ್ತು ಡಾಕ್ಟರ್ನ್ನು ನೋಡಲು ಏಕೆ ಯೋಚಿಸುತ್ತೀರಿ ಎಂಬುದಕ್ಕೆ ಮೂರು ಪಟ್ಟಿ ಮಾಡಿ.
ಅ. ಒಂದು ವೇಳೆ ಇವುಗಳಲ್ಲಿ ಒಂದು ಲಕ್ಷಣ ಗೋಚರವಾದರೂ ನೀವು ಡಾಕ್ಟರ್ ಬಳಿ ಹೋಗುವಿರಾ? ಹೋಗುವಿರಾದರೆ ಏಕೆ? ಹೋಗುವುದಿಲ್ಲವಾದರೆ ಏಕೆ?
ಆ. ಕೆಲವು ಸಾಮಾನ್ಯ ಲಕ್ಷಣಗಳಿರುವ ರೋಗಗಳಾದ ಎ) ತಲೆನೋವು (ಬಿ)ಕೆಮ್ಮು (ಸಿ)ಭೇದಿ.
ಈ ಮೇಲಿನ ಯಾವುದೇ ಲಕ್ಷಣಗಳು ಕಂಡು ತಕ್ಷಣ ಡಾಕ್ಟರನ್ನು ಕಾಣಬೇಕು.
ಕಾರಣ: ಯಾವುದೇ ಮೇಲಿನ ಲಕ್ಷಣ ಕಂಡು ಬಂದರೆ, ಅದನ್ನು ಗಮನಿಸದಿದ್ದರೆ ನಾವು ಇನ್ನು ಹೆಚ್ಚಿನ ತೊಂದರೆಗೆ ಸಿಕ್ಕಿ ಹಾಕಿಕೊಳ್ಳಬಹುದು.

5. ಈ ಕೆಳಗಿನ ಯಾವ ಪ್ರಕರಣಗಳಲ್ಲಿ ನಿಮ್ಮ ಆರೋಗ್ಯದ ಮೇಲೆ ಪರಿಣಾಮಗಳು ತುಂಬಾ ಅಹಿತಕರವಾಗಿರು ತ್ತದೆಂದು ನೀವು ಯೋಚಿಸುತ್ತೀರಿ ಮತ್ತು ಏಕೆ?
•    ನಾವು / ನಮಗೆ ಜಾಂಡೀಸ್ನಿಂದ ಪೀಡಿತರಾದಾಗ
•    ನಮ್ಮ ದೇಹದೊಳಗೆ ಪರೋಪಜೀವಿಗಳು ಸೇರಿದಾಗ
•    ನಮಗೆ ಮೊಡವೆಗಳಾದಾಗ
ಜಾಂಡೀಸ್ನಿಂದ ಪೀಡಿತರಾದಾಗ, ಏಕೆಂದರೆ, ಇದು ದೀರ್ಘಕಾಲೀನ ಕಾಯಿಲೆ ಹಾಗೂ ಪಥ್ಯಾಹಾರವನ್ನು ಸಹ ತೆಗೆದುಕೊಳ್ಳಬೇಕು. ಆದ್ದರಿಂದ ಈ ಕಾಯಿಲೆಯ ಪರಿಣಾಮ ಗಳು ತುಂಬಾ ಆಹಿತಕರವಾಗಿರುತ್ತದೆಂದು ನಾವು ಯೋಚಿಸುತ್ತೇವೆ.

6. ನಾವು ರೋಗಪೀಡಿತರಾದ ಸಾಮಾನ್ಯವಾಗಿ ಮೃದುವಾದ ಮತ್ತು ಪೋಷಕಾಂಶಯುಕ್ತ ಆಹಾರವನ್ನು ಸೇವಿಸುವಂತೆ ಸಲಹೆ ಪಡೆಯಲು ಕಾರಣವೇನು?
ರೋಗದ ಸೋಂಕಿನಿಂದ, ನಮ್ಮ ದೇಹದ ರೋಗ ನಿರೋಧಕ ಶಕ್ತಿ ಕಡಿಮೆಯಾಗಿರುತ್ತದೆ. ಆದ್ದರಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡಲು ಸುಲಭವಾಗಿ ಜೀರ್ಣವಾಗುವ, ಸರಿಯಾದ ಪೋಷಕಾಂಶಯುಕ್ತ ಆಹಾರ ವನ್ನು ಸೇವಿಸುವಂತೆ ಡಾಕ್ಟರ್ಗಳು ಸಲಹೆ ಕೊಡುತ್ತಾರೆ.

7. ಸಾಂಕ್ರಾಮಿಕ ರೋಗಗಳು ಹರಡುವ ವಿವಿಧ ವಿಧಾನಗಳು ಯಾವುವು?
ಸಾಂಕ್ರಾಮಿಕ ರೋಗಗಳು ಹರಡುವ ವಿವಿಧ ವಿಧಾನ ಗಳು ಈ ಕೆಳಗಿನಂತಿವೆ.
•    ಗಾಳಿಯ ಮೂಲಕ ರೋಗ ಪೀಡಿತ ವ್ಯಕ್ತಿ ಸೀನಿದಾಗ ಮತ್ತು ಕೆಮ್ಮಿದಾಗ, ರೋಗಾಣುಗಳು ಗಾಳಿಯ ಮೂಲಕ ಬೇರೆಯವರಿಗೂ ಹರಡುತ್ತವೆ.
•    ನೀರಿನ ಮೂಲಕ : ನಾವು ಅಶುದ್ಧವಾದ ನೀರನ್ನು ಸೇವಿಸಿದಾಗ, ಅದರಲ್ಲಿರುವ ರೋಗಾಣುಗಳು ನಮ್ಮ ದೇಹವನ್ನು ಸೇರಿ ರೋಗವನ್ನು ಉಂಟು ಮಾಡುತ್ತವೆ.
•    ರೋಗ್ಯವಂತ ವ್ಯಕ್ತಿಗೆ ದೈಹಿಕ ಸಂಪರ್ಕದಿಂದ
•    ಪ್ರಾಣಿ/ಕೀಟಗಳಿಂದ ಹರಡುವ ರೋಗ: ನಾಯಿಗಳು ಕಚ್ಚುವುದರಿಂದ, ಏಡ್ಸ್ ರೋಗ, ಹಾಗೂ ಸೊಳ್ಳೆಗಳ ಕಡಿತದಿಂದ ಸಹ ರೋಗಗಳು ಹರಡುತ್ತವೆ.

8, ಸಾಂಕ್ರಾಮಿಕ ರೋಗಗಳು ಹರಡುವಿಕೆಯನ್ನು ತಗ್ಗಿಸಲು ನೀವು ನಿಮ್ಮ ಶಾಲೆಯಲ್ಲಿನ ಯಾವ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಿರಿ.
•    ಕಿಕ್ಕಿರಿಯದ ವ್ಯವಸ್ಥೆಯನ್ನು ಒದಗಿಸುವುದು.
•    ಶುದ್ಧ ಮತ್ತು ಸುರಕ್ಷಿತ ಕುಡಿಯುವ ನೀರನ್ನು ಒದಗಿಸುತ್ತೇವೆ.
•    ಸ್ವಚ್ಛ ಪರಿಸರವನ್ನು ಒದಗಿಸುವುದರ ಮೂಲಕ, ವಾಹಕಗಳ ಮೂಲಕ ಹರಡುವ ಸೋಂಕುಗಳನ್ನು ತಡೆಗಟ್ಟಬಹುದು.
•    ಲಸಿಕೆಗಳನ್ನು ಹಾಕಿಸುವ ಮೂಲಕ ರೋಗಗಳನ್ನು ತಡೆಗಟ್ಟಬಹುದು.
•    ತೆರೆದಂತಹ ಆಹಾರವನ್ನು ಸೇವಿಸುವುದನ್ನು ತಪ್ಪಿಸುವುದು.
•    ಶೌಚಾಲಯವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು.
•    ಊಟಕ್ಕೆ ಮುಂಚೆ ಹಾಗೂ ಶೌಚಾಲಯವನ್ನು ಬಳ ಸಿದ ನಂತರ ಕೈಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು.

9. ಪ್ರತಿರಕ್ಷಣೆ ಎಂದರೇನು?
ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಹಾಗೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡಲು ಬಾಲ್ಯದಲ್ಲಿ ಲಸಿಕೆಗಳನ್ನು ಹಾಕಿಸುತ್ತಾರೆ. ಈ ಲಸಿಕೆಯು ರೋಗಾಣು ಗಳನ್ನು ಕೊಲ್ಲುತ್ತವೆ. ಹಾಗೂ ರೋಗಾಣುಗಳು ನಮ್ಮ ದೇಹವನ್ನು ಪ್ರವೇಶಿಸುವುದನ್ನು ತಡೆಗಟ್ಟುತ್ತವೆ. ಈ ಪ್ರಕ್ರಿಯೆ ಯನ್ನು ಪ್ರತಿರಕ್ಷಣೆ ಎನ್ನುತ್ತೇವೆ.

10. ನೀವು ವಾಸಿಸುವ ಸ್ಥಳಕ್ಕೆ ಹತ್ತಿರವಿರುವ ಆರೋಗ್ಯ ಕೇಂದ್ರ ದಲ್ಲಿ ಪ್ರತಿರಕ್ಷಣೆ ಉಂಟು ಮಾಡುವ ಯಾವ ಕಾರ್ಯ ಕ್ರಮಗಳು ಜಾರಿಯಲ್ಲಿವೆ? ಅವುಗಳಲ್ಲಿ ಯಾವ ರೋಗ ಗಳು ನಿಮ್ಮ ಸ್ಥಳದ ಪ್ರಮುಖ ಆರೋಗ್ಯ ಸಮಸ್ಯೆಗಳಾಗಿವೆ.
•    ಪ್ರತಿರಕ್ಷಣೆ ಕಾರ್ಯಕ್ರಮಗಳು
•    ದಡಾರದ ವಿರುದ್ಧ ಲಸಿಕೆ ಹಾಕುವುದು
•    ಟಿ.ಬಿ(ಕ್ಷಯ)ರೋಗದ ವಿರುದ್ಧ ಬಿ.ಸಿ.ಜಿ. ಲಸಿಕೆ ಹಾಕುವುದು.
•    ಪೋಲಿಯೋ ಲಸಿಕ
•    ಟೆಟಾನಸ್, ಡಿಪ್ತೀರಿಯಾ, ನಾಯಿ ಕೆಮ್ಮುಗಳ ವಿರುದ್ಧ ಡಿ.ಪಿ.ಟಿ ಚುಚ್ಚುಮದ್ದು ನಮ್ಮ ಸ್ಥಳದ ಪ್ರಮುಖ ಆರೋಗ್ಯ ಸಮಸ್ಯೆಗಳು ಹೀಗಿವೆ.
•    ಹೆಪಟೈಟಿಸ್
•    ಟೆಟಾನಸ್ (ಧನುರ್ವಾಯು)
•    ಕ್ಷಯ
•    ದಡಾರ

ಅಭ್ಯಾಸದ ಪ್ರಶ್ನೆಗಳು

1. ಕಳೆದ ಒಂದು ವರ್ಷದಲ್ಲಿ ನೀನು ಎಷ್ಟು ಬಾರಿ ರೋಗ ಪೀಡಿತನಾದೆ? ರೋಗಗಳು ಯಾವುವು?
ಅ) ಈ ಮೇಲಿನ ಒಂದು ಎಲ್ಲಾ ರೋಗಗಳು ಬರದಂತೆ ತಡೆಯಲು ನಿನ್ನ ಹವ್ಯಾಸಗಳಲ್ಲಿ ಒಂದು ಬದಲಾವಣೆ/ಉಂಟು ಮಾಡುವ ಬಗ್ಗೆ ಚಿಂತಿಸು.
ಆ) ಈ ಮೇಲಿನ ಒಂದು/ಎಲ್ಲಾ ರೋಗಗಳು ಬರದಂತೆ ತಡೆಯಲು ನಿನ್ನ ಸುತ್ತಮುತ್ತ
ಇ) ನೀನು ತರಬಯಸುವ ಒಂದು ಬದಲಾವಣೆಯ ಬಗ್ಗೆ ಚಿಂತಿಸು.
1. ಮೂರು ಬಾರಿ ರೋಗದಿಂದ ಪೀಡಿತನಾಳಾದೆ.
ಅ) ಮಲೇರಿಯಾ (ii)ಭೇದಿ (iii)ವೈರಸ್ ಜ್ವರ ಹವ್ಯಾಸಗಳಲ್ಲಿ ಮಾಡಿಕೊಳ್ಳಬಯಸುವ ಬದಲಾವಣೆ.
(i) ನನ್ನ ದೇಹದ ಸ್ವಚ್ಛತೆಯ ಬಗ್ಗೆ ಗಮನ ಕೊಡುವುದು.
•    ಇ) ಸೊಳ್ಳೆಗಳ ಸಂತಾನೋತ್ಪತ್ತಿಯ ಬಗ್ಗೆ ಗಮನಿಸುವುದು ಹಾಗೂ ಸ್ವಚ್ಛತೆ ಮಾಡುವುದು,
•    ಸೊಳ್ಳೆಪರದೆ ಉಪಯೋಗಿಸುವುದು.
•    ಸಮತೋಲನ ಆಹಾರವನ್ನು ತಿನ್ನುವುದು.
•    ಸುತ್ತಮುತ್ತಲ ಪರಿಸರದಲ್ಲಿ ತರಬಯಸುವ ಒಂದು ಬದಲಾವಣೆ.
•    ತ್ಯಾಜ್ಯದ ಶೇಖರಣೆಯನ್ನು ತಡೆಗಟ್ಟುವುದು ಹಾಗೂ ಕೊಳಚೆ ನೀರಿನ ಸಂಗ್ರಹವನ್ನು ತಡೆಗಟ್ಟುವುದು ಹಾಗೂ ಪರಿಸರವನ್ನು ಸ್ವಚ್ಛವಾಗಿಡುವುದು.

2) ಈ ಸಮಾಜದಲ್ಲಿನ ಇತರರಿಗಿಂತ ಒಬ್ಬ ಡಾಕ್ಟರ್ / ನರ್ಸ್/ಆರೋಗ್ಯ ಕಾರ್ಯಕರ್ತ ರೋಗಿಗಳೊಂದಿಗೆ ಬೆರೆಯುತ್ತಾರೆ. ಅವನು ಅವಳು ರೋಗ ಬರದಂತೆ ಸ್ವತಃ ನೋಡಿಕೊಳ್ಳುತ್ತಾರೆಂದು ಪತ್ತೆ ಮಾಡಿ.
ಒಬ್ಬ ಡಾಕ್ಟರ್ / ನರ್ಸ್/ ಆರೋಗ್ಯ ಕಾರ್ಯಕರ್ತರು ಯಾವಾಗಲು ರೋಗಿಗಳ ತಪಾಸಣೆ ಮಾಡುವುದರಿಂದ ಅವರು ಸಹ ರೋಗಗಳಿಂದ ನರಳಬಹುದು. ಆದರೆ, ಅವರು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಈ ಕೆಳಗಿನ ಕ್ರಮಗಳನ್ನು ಅನುಸರಿಸುತ್ತಾರೆ.
•    ರೋಗಿಗಳ ತಪಾಸಣೆಯ ನಂತರ ತಮ್ಮ ಕೈಗಳನ್ನು ಕ್ರಿಮಿನಾಶಕಗಳಿಂದ (ಡೇಟಾಲ್ ) ಸ್ವಚ್ಛಗೊಳಿಸುತ್ತಾರೆ.
•    ರೋಗಿಗಳ ತಪಾಸಣೆಯ ಸಮಯದಲ್ಲಿ ಕೈಗೆ ಮತ್ತು ಮೂಗಿಗೆ ಮುಸುಕುಗಳನ್ನು ಧರಿಸುತ್ತಾರೆ.
•    ರೋಗಿಗಳ ಜೊತೆ ನೇರ ದೈಹಿಕ ಸಂಪರ್ಕವನ್ನು ತಡೆಗಟ್ಟುತ್ತಾರೆ.
•    ರೋಗಿಗಳ ಜೊತೆ ಊಟ ಮಾಡುವುದಿಲ್ಲ.
•    ಸಮತೋಲನ ಆಹಾರವನ್ನು ತೆಗೆದುಕೊಳ್ಳುವರು ಹಾಗೂ ಯೋಗ, ನಡಿಗೆಗಳನ್ನು ಕೈಗೊಳ್ಳುತ್ತಾರೆ.

3. ಸಾಮಾನ್ಯವಾಗಿ ಬರುವ ಮೂರು ರೋಗಗಳು ಯಾವುವು ಎಂದು ಪತ್ತೆ ಮಾಡಲು ನಿಮ್ಮ ನೆರೆ ಹೊರೆ ಯಲ್ಲಿ ಒಂದು ಸಮೀಕ್ಷೆ ನಡೆಸಿ ಈ ರೋಗಗಳು ಬರುವ ಅಪಾಯವನ್ನು ಕಡಿಮೆ ಮಾಡಲು ಸ್ಥಳೀಯ ಸಂಸ್ಥೆ ಕೈಗೊಳ್ಳಬಹುದಾದ ಮೂರು ಕ್ರಮಗಳ ಬಗ್ಗೆ ಅವರಿಗೆ ಸಲಹೆ ನೀಡಿ,
ಸಾಮಾನ್ಯವಾಗಿ ಬರುವ ಮೂರು ರೋಗಗಳು ಯಾವುವೆಂದರೆ
1) ಮಲೇರಿಯಾ 2) ಜಾಂಡೀಸ್ 3) ಬೇಧಿ
ಈ ರೋಗಗಳು ಬರುವ ಅಪಾಯವನ್ನು ಕಡಿಮೆ ಮಾಡಲು ಸ್ಥಳೀಯ ಸಂಸ್ಥೆ
ಕೈಗೊಳ್ಳಬಹುದಾದ ಮೂರು ಕ್ರಮಗಳು ಕೆಳಕಂಡಂತಿವೆ.
•    ಸುತ್ತ-ಮುತ್ತಲ ಪ್ರದೇಶ ಮತ್ತು ಪರಿಸರವನ್ನು ಸ್ವಚ್ಛವಾಗಿಡಬೇಕು.
•    ಕೊಳಚೆ ನೀರಿನ ಸರಿಯಾದ ನಿರ್ವಹಣೆ ಹಾಗೂ ಕೊಳಚೆ ನೀರು ಹರಿಯುವ ಚರಂಡಿಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು.
•    ಸೊಳ್ಳೆಗಳನ್ನು ನಿಯಂತ್ರಣ ಮಾಡಲು ರಾಸಾಯನಿಕಗಳ ಸಿಂಪಡಣೆ ಮಾಡಬೇಕು ಹಾಗೂ ಧೂಮವನ್ನು (Fumigation) ಸಿಂಪಡಿಸಬೇಕು.

4. ಒಂದು ಮಗು ತಾನು ರೋಗದಿಂದ ನರಳುತ್ತಿದ್ದೇನೆಂದು ಪೋಷಕರಿಗೆ ಹೇಳಲು ಅಶಕ್ತವಾಗಿದೆ.
ಎ) ಮಗು ರೋಗದಿಂದ ನರಳುತ್ತಿರುವುದೇ?
ಬಿ) ಮಗು ಯಾವ ರೋಗದಿಂದ ನರಳುತ್ತಿದೆ ಎಂಬುದನ್ನು ಪತ್ತೆ ಮಾಡಲು ನಮಗೆ ಸಹಾಯ ಮಾಡುವ ಅಂಶಗಳು ಯಾವುವು?
ಎ) ಕೆಮ್ಮು ಮತ್ತು ಭೇದಿಯಂತಹ ರೋಗದ ಗುಣ ಲಕ್ಷಣಗಳಿಂದ ಒಂದು ಮಗು ರೋಗದಿಂದ ನರಳುತ್ತಿದೆ ಎಂದು ಪೋಷಕರು ತಿಳಿದುಕೊಳ್ಳಬಹುದು.
ಬಿ) ಪ್ರತಿಯೊಂದು ಖಾಯಿಲೆಗೆ ಅದರದೇ ಆದಂತಹ ಲಕ್ಷಣಗಳಿರುತ್ತವೆ. ಅವುಗಳಿಂದ ಮಗು ಯಾವ ರೋಗ ದಿಂದ ನರಳುತ್ತಿದೆ ಎಂದು ತಿಳಿದುಕೊಳ್ಳಬಹುದು. ಹಾಗೇ ಪ್ರಯೋಗಶಾಲೆಗಳಲ್ಲಿ ರಕ್ತ ಪರೀಕ್ಷೆ ಹಾಗೂ ಇನ್ನಿತರ ಪರೀಕ್ಷೆಗಳಿಂದ, ಮಗುವಿನ ಖಾಯಿಲೆಯನ್ನು ದೃಢಪಡಿಸಿ ಕೊಳ್ಳಬಹುದು.

5. ಈ ಕೆಳಗಿನ ಯಾವ ಪರಿಸ್ಥಿತಿಗಳಲ್ಲಿ ಒಬ್ಬ ಮನುಷ್ಯ ಸುಲಭವಾಗಿ ಕಾಯಿಲೆ ಬೀಳುತ್ತಾರೆ ಮತ್ತು ಏಕೆ ?
ಎ) ಅವಳು ಮಲೇರಿಯಾದಿಂದ ಚೇತರಿಸಿಕೊಳ್ಳುತ್ತಿರುವಾಗ
ಬಿ) ಅವಳು ಮಲೇರಿಯಾದಿಂದ ಚೇತರಿಸಿಕೊಂಡು ನಂತರ ದಡಾರದಿಂದ ನರಳುತ್ತಿರುವ ರೋಗಿಯ ಶುಶ್ರೂಷೆ ಮಾಡುತ್ತಿರುವಾಗ
ಸಿ) ಅವಳು ಮಲೇರಿಯಾದಿಂದ ಚೇತರಿಸಿಕೊಂಡು ನಂತರ ನಾಲ್ಕು ದಿನಗಳವರೆಗೆ ಉಪವಾಸವಿದ್ದು ನಂತರ ದಡಾರದಿಂದ ನರಳುತ್ತಿರುವ ವ್ಯಕ್ತಿಯೊಬ್ಬನ ಶುಶ್ರೂಷೆ ಮಾಡುವಾಗ.
ಅವಳು ಮಲೇರಿಯಾದಿಂದ ಚೇತರಿಸಿಕೊಂಡು ನಂತರ ನಾಲ್ಕು ದಿನಗಳವರೆಗೆ ಉಪವಾಸವಿದ್ದು ನಂತರ ದಡಾರದಿಂದ ನರಳುತ್ತಿರುವ ವ್ಯಕ್ತಿಯೊಬ್ಬನ ಶುಶ್ರೂಷೆ ಮಾಡುವಾಗ
ಕಾರಣ :
ಸಮತೋಲನವಾದ ಆಹಾರವಿರದೆ ನಾಲ್ಕು ದಿನ ದವರೆಗೆ ಉಪವಾಸವಿದ್ದಾಗ, ಅವಳ ದೇಹದ ರೋಗ ನಿರೋಧಕ ಶಕ್ತಿ ಕುಗ್ಗಿರುವುದರಿಂದ ಅವಳು ಮತ್ತೆ ಸುಲಭ ವಾಗಿ ಕಾಯಿಲೆ ಬೀಳುತ್ತಾಳೆ.

6. ಈ ಕೆಳಗಿನ ಯಾವ ಸಂದರ್ಭಗಳಲ್ಲಿ ನೀವು ತುಂಬಾ ಸುಲುಭವಾಗಿ ರೋಗಪೀಡಿತರಾಗುತ್ತೀರ ಮತ್ತು ಏಕೆ?
(a) ನೀವು ಪರೀಕ್ಷೆ ತೆಗೆದುಕೊಳ್ಳುತ್ತಿರುವ ಸಮಯದಲ್ಲಿ
(b) ಎರಡು ದಿನಗಳವರೆಗೆ ನೀವು ಬಸ್ ಮತ್ತು ರೈಲುಗಳಲ್ಲಿ ಪ್ರಯಾಣಿಸಿದಾಗ
(c) ನಿಮ್ಮ ಗೆಳೆಯ (ದಡಾರ) ಮೀಸೆಲ್ಸ್ನಿಂದ ನರಳುತ್ತಿರು ವಾಗ,
ಉತ್ತರ : c) ನಮ್ಮ ಗೆಳೆಯ ಮೀಸೆಲ್ಸ್ (ದಡಾರ)ದಿಂದ ನರಳುತ್ತಿರುವಾಗ
ಕಾರಣ : ನಮ್ಮ ಗೆಳೆಯನಿಗೆ ಹುಷಾರಿಲ್ಲದಿದ್ದಾಗ ನಾನು ದಿನಾಲು ಅವನನ್ನು ನೋಡಲು,ಅವನ ಮನೆಗೆ ಹೋಗು ತ್ತಿರುತ್ತೇನೆ. ದಡಾರ, ಒಂದು ಗಾಳಿ ಸಂಪರ್ಕದಿಂದ ಬರುವ ರೋಗ, ಆದ್ದರಿಂದ ನನ್ನ ಗೆಳೆಯ ಕೆಮ್ಮಿದಾಗ ಅಥವಾ ಸೀನಿದಾಗ ರೋಗಾಣುಗಳು ಗಾಳಿಯಲ್ಲಿ ಸೇರಿ ನನಗೂ ಸಹ ಸೋಂಕನ್ನು ಉಂಟು ಮಾಡುತ್ತದೆ. ಆದ್ದರಿಂದ ನಾನು ತುಂಬಾ ಸುಲಭವಾಗಿ ರೋಗಪೀಡಿತ ನಾಗುತ್ತೇನೆ.

ಹೆಚ್ಚುವರಿ ಪ್ರಶೋತ್ತರಗಳು

1. ಆರೋಗ್ಯ ಎಂದರೇನು?
ಆರೋಗ್ಯ ಎಂಬುದು ಭೌತಿಕ, ಮಾನಸಿಕ ಮತ್ತು ಸಾಮಾಜಿಕವಾಗಿ ಚೆನ್ನಾಗಿ ಇರುವ ಸ್ಥಿತಿಯಾಗಿದೆ.

2. ರೋಗದ ಎರಡು ವಿಧಗಳನ್ನು ಹೆಸರಿಸಿ.
(i) ಸಾಂಕ್ರಾಮಿಕ ರೋಗ
(ii) ಸಾಂಕ್ರಾಮಿಕವಲ್ಲದ ರೋಗ

3. ಗಾಳಿಯಿಂದ ಬರುವ ರೋಗಗಳನ್ನು ಹೆಸರಿಸಿ.
ಕೆಮ್ಮು ನ್ಯೂಮೋನಿಯಾ ಮತ್ತು ಕ್ಷಯ ರೋಗಗಳು ಗಾಳಿಯಿಂದ ಹರಡುವ ರೋಗಗಳು.

4. ಮಲೇರಿಯಾವನ್ನು ಹರಡುವ ಜೀವಿಯನ್ನು ಹೆಸರಿಸಿ.
ಹೆಣ್ಣು ಅನಾಫಿಲಿಸ್ ಸೊಳ್ಳೆ


You Might Like

Post a Comment

0 Comments