ಗದ್ಯ 5
ಅಚ್ಚರಿಯ ಜೀವಿ ಇಂಬಳ
ಕವಿ/ಲೇಖಕರ ಪರಿಚಯ
* ಪಿ . ಸತ್ಯನಾರಾಯಣ ಭಟ್ ಇವರು 1956 ರಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ಯಲ್ಲಿ ಜನಿಸಿದರು.
* ಇವರು ಬೆಂಗಳೂರು ಜಿಲ್ಲೆಯ ಬರಿಗಾಲ ವೈದ್ಯರು, ಖಗೆಂದ್ರ ಮಣಿದರ್ಪಣ ಮತ್ತು ಸಸ್ಯ ನಾಮಾವಳಿ ಇನ್ನೂ ಮುಂತಾದ ಕೃತಿಗಳನ್ನು ರಚಿಸಿದ್ದಾರೆ.
* ಆಕರ ಕೃತಿ :- ಪೃಥಿವಿಸೂಕ್ತ
ಪದಗಳ ಅರ್ಥ
ಜಿಗಣೆ - ಇಂಬಳ
ಅಟ್ಟೆ, ಇಂಬಳು ಚಿಗುಳೆ, ಇಂಬುದು, ಜಿಡುಕ (ದ.ಕ.):
ಕೆರೆಯಂಚು - ಕೆರೆಯಬದಿ, ದಡ;
ಪಾವ್ (ಹಳೆಗನ್ನಡ)- ಹಾವು ಹೊಸಗನ್ನಡ
ಪಾವ್ (ಹಳೆಗನ್ನಡ)- ಹಾವು ಹೊಸಗನ್ನಡ
ಪಾವರಿ- ಜಿಗಣೆ
ಕಾಲನಿ (ಆಂಗ್ಲಪದ) - ಬಡಾವಣೆ;
ಬಿಟ್ಟಿ - ಉಚಿತ
ಮೂಗಳೆ - ಉಪೇಕ್ಷಿಸು;
ಸತಾಯಿಸು(ಹಿಂದಿ) - ಕಾಡಿಸು, ತೊಂದರೆಕೊಡು;
ಸಿರೆ - ಸಿರ, ರಕ್ತನಾಳ, ನರ
ರಹದಾರಿ - ಅನುಮತಿ
ಕರಣಿಗಟ್ಟು- ಹೆಪ್ಪುಗಟ್ಟಿ
ಜೋಮು - ಅರಿವಳಿಕೆಯಾದಂತಾಗು;
ಸ್ರಾವ - ಸುರಿ;
ಉಪಶಮನ - ಗುಣವಾಗು;
ನಾಕಾರು - ನಾಲ್ಕು (ನಾಕು) + ಆರು, ಹಲವು;
ಸರ್ಜರಿ (ಆಂಗ್ಲಪದ) - ಶಸ್ತ್ರಚಿಕಿತ್ಸೆ;
ಸಿರಿಂಜ್ (ಆಂಗ್ಲಪದ) - ಪಿಚಕಾರಿ;
ಕ್ಲಿಷ್ಟ - ಕಠಿಣ, ನೋಯಿಸಲ್ಪಟ್ಟ
ಅಭಿನವ - ಹೊಸ ;
ಸಂಕೀರ್ಣ - ಇಕ್ಕಟ್ಟಾದ, ತೊಡಕಿನ;
ಸಾಕ್ಸ್ (ಆಂಗ್ಲಪದ) - ಕಾಲುಚೀಲ
ಸಾಕ್ಸ್ (ಆಂಗ್ಲಪದ) - ಕಾಲುಚೀಲ
ಅಭ್ಯಾಸ
ಆ) ಬಿಟ್ಟಿರುವ ಜಾಗವನ್ನು ಸೂಕ್ತ ಪದದಿಂದ ತುಂಬಿ
1. ಏನೇನೂಸಿಗದೇ ಇದ್ದರೆ ಹಸಿರು ಸಸ್ಯಗಳ ಎಲೆರಸ ಹಿರಿ ಬದುಕುವ ಇಂಬಳ ಸಹ ಇವೆ .
2.ಇಂಬಳದ ವೈಜ್ಞಾನಿಕ ಹೆಸರು ಮತ್ತು ವರ್ಗೀಕರಣ ಮಹಾಶಯ ಕೆರೋಸ್ ಲಿನೆಯಸ್.
3. ಮೈಕ್ರೋಸರ್ಜರಿ ಎಂದರೆ ಸೂಕ್ಷ್ಮ ಶಸ್ತ್ರ ಚಿಕಿತ್ಸೆ
4. ಲೀಚ್ಗಳನ್ನು ಸಾಕುವ ಹೊಸ ವ್ಯವಸಾಯ ಯುರೋಪ್ ಖಂಡದಲ್ಲಿದೆ.
5. ಅಭಿನವ ಧನ್ವಂತರಿ ಕಾಜೀರ್ ಮೊಹಮ್ಮದ್ ಬಂಗೂ ಆಗಿದ್ದಾನೆ.
ಆ) ಹೊಂದಿಸಿ ಬರೆಯಿರಿ :
ಅ' ಪಟ್ಟಿ 'ಆ' ಪಟ್ಟಿ
1 ಸುಶ್ರುತ ಭಾರತ
2 ಎಫ್. ಡಿ .ಎ ಅಮೆರಿಕ
3 ವರ್ಡ್ಸ್ ವರ್ತ ಇಂಗ್ಲೆಂಡ್
4 ಅವಿಸೆನ್ಸ್ ಯುನಾನಿ
5 ಹಿಪ್ಪೋಕ್ರೇಟ್ಸ್ ಗ್ರೀಸ್
ಅ. ಕೊಟ್ಟಿರುವ ವಾಕ್ಯಗಳ ಸಂದರ್ಭೋಚಿತ ಸ್ವಾರಸ್ಯ ವಿವರವನ್ನು ಬರೆಯಿರಿ
1. "ಜಲಜೀವಿಗೆ ಅದು ಸಾರ್ಥಕ ಹೆಸರು "
ಆಯ್ಕೆ:- ಈ ವಾಕ್ಯವನ್ನು " ಪಿ.ಸತ್ಯ ನಾರಾಯಣ ಭಟ್" ರವರು ಬರೆದಿರುವ '' ಪೃ ಥಿವೀಸೂಕ್ತ' ಎಂಬ ಕೃತಿಯಿಂದ ಆಯ್ದ “ಅಚ್ಚರಿಯ ಜೀವಿ, ಇಂಬಳ" ಎಂಬ ಗದ್ಯ ಭಾಗದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ:- ಹಿಂದಿನಿಂದ ಇಂದಿಗೂ ಸಹ ಲೀಟ್ ಥೆರಪಿ ಒಂದು ಚಿಕಿತ್ಸಾ ವಿಧಾನವಾಗಿದೆ. ಅನೇಕ ಬಗೆಯ ಕಾಯಿಲೆ ವಾಸಿ ಮಾಡುವ ಸರಳ ವಿಧಾನವಾಗಿದೆ. ಜಿಗಣೆಯ ಸಂಸ್ಕತ ಹೆಸರು ಜಲೂಕಾ, ಜಲೂಕ ಎಂಬುದು ಜಲಜೀವಿಗೆ ಸಾರ್ಥಕ ಹೆಸರು ಇದಾಗಿದೆ ಎಂದು ಕವಿಯು ಓದುಗರಿಗೆ ತಮ್ಮ ಪಬಂಧದಲ್ಲಿ ಹೇಳುವ ಸಂದರ್ಭದಲ್ಲಿ ಈ ಮಾತು ಬಂದಿದೆ.
2. "ಅಂತಹ ಸುವ್ಯವಸ್ಥೆಯ ಕಡಿತ ಅದು!”
ಆಯ್ಕೆ:- ಈ ವಾಕ್ಯವನ್ನು " ಪಿ.ಸತ್ಯ ನಾರಾಯಣ ಭಟ್" ರವರು ಬರೆದಿರುವ '' ಪೃ ಥಿವೀಸೂಕ್ತ' ಎಂಬ ಕೃತಿಯಿಂದ ಆಯ್ದ “ಅಚ್ಚರಿಯ ಜೀವಿ, ಇಂಬಳ" ಎಂಬ ಗದ್ಯ ಭಾಗದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ:- ಲೀಚ್ ಮನುಷ್ಯನ ರಕ್ತವನ್ನು ಹೇಗೆ ಹೀರುತ್ತದೆ ಎಂದು ಲೇಖಕರು ವಿವರಿಸುವ ಸಂದರ್ಭದಲ್ಲಿ ಮೇಲಿನ ಮಾತು ಮೂಡಿಬಂದಿದೆ. ಜಿಗಣೆಯ ಬಾಯಿಯ ಕಡೆ 2 ಹೀರುಕಗಳಿವೆ. ಒಂದನ್ನು ಊರಿ ರಕ್ತವನ್ನು ಹೀರುತ್ತದೆ. ಇನ್ನೊಂದರಿಂದ 'ಹಿರುಡಿನ್ ಎಂಬ ರಕ್ತ ಕರಣಿಗಟ್ಟದಂತಹ (ಹೆಪ್ಪುಗಟ್ಟದಂತಹ) ರಾಸಾಯನಿಕವನ್ನು ಜೊಲ್ಲಿನ ಜೊತೆ ಸುರಿಸುವುದರಿಂದ ತಾತ್ಕಾಲಿಕವಾಗಿ ಗಾಯದ ಅಸುಪಾಸು ಜೋಮು ಹಿಡಿದು ಸ್ಪರ್ಶ ಹಾನಿ ಉಂಟಾಗಿತ್ತದೆ. ಜಿಗಣೆಗೆ ಸುಮಾರು ಒಂದು ನೂರು ಹರಿತದ ಹಲ್ಲುಗಳಿರುತ್ತದೆ. ಆದರೂ ಒಂದು ನೂರು ಹಲ್ಲಿಂದ ಕಚ್ಚಿ ರಕ್ತವನ್ನು ಹೀರುತ್ತಿದ್ದರೂ ತಾತ್ಕಾಲಿಕವಾಗಿ ಜೋಮು ಹಿಡಿಯುವುದರಿಂದ ಇಂಬಳ ಕಚ್ಚಿದಾಗ ಅದರ ನೋವು ತಿಳಿಯುವುದೇ ಇಲ್ಲ. ಅಂತಹ ಸುವ್ಯಸ್ಥೆಯ ಕಡಿತ ಅದಾಗಿರುತ್ತದೆ ಎಂದು ಲೇಖಕರು ಹೇಳಿದ್ದಾರೆ.
ಆ) ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು ಹತ್ತು ವಾಕ್ಯಗಳಲ್ಲಿ ಉತ್ತರಿಸಿ.
1.ಚಾರ್ಮಾಡಿ ಘಟ್ಟದ ಚರಣದಲ್ಲಿ ಲೇಖಕರಿಗಾದ ಅನುಭವವನ್ನು ವರ್ಣಿಸಿ ?
ಉತ್ತರ :- ಲೇಖಕರು ಒಮ್ಮೆ ಕಕ್ಕಿಂಜೆ, ಚಾರ್ಮಾಡಿ ಘಟ್ಟದ ಚಾರಣದ ಸಂದರ್ಭದಲ್ಲಿ ಪೊರಕೆ ಕಡ್ಡಿಯಾಕಾರದ 'ಸಾಮ ಕಾಲನಿ' ಯನ್ನು ನೋಡುತ್ತಾರೆ, 'ನಾಮ' ಎಂದರೆ ತುಳುಭಾಷೆಯ ಪದ, ಲೇಖಕರ ಅಮ್ಮ ಇಂಬಳ (ಜಿಗಣೆಯನ್ನು) ವನ್ನು 'ಪಾವರಿ' ಎಂದು ಗುರ್ತಿಸುತ್ತಿದ್ದರು. ಚಾರ್ಮಾಡಿ ಘಟ್ಟ ಸಾಲಿನ ಚಾರಣ ಸಂದರ್ಭದಲ್ಲಿ ಲೇಖಕರು ಕಂಡ, ಪಾವ ಕಾಲನಿಯಲ್ಲಿ ನೂರಾರು ಪಾವರಿಗಳ ರಾಶಿ ರಾಶಿ ಅಲ್ಲಿತ್ತು. ಅವು ನೆಗೆಯುವ ಸಾವರಿಯಾನೆ ಇಂಬಳಗಳು, ದಾರಿ ಹೋಕರ ಮೇಲೆ ಗಬಕ್ಕನೆ ನೆಗೆದು ಹಿಡಿದು ಬಿಡುತ್ತಿದ್ದವು, ಹೊಟ್ಟೆ ತುಂಬಾ ನೆತ್ತರು (ರಕ್ತ) ಹೀರಿಯೇ ಮನುಷ್ಯರನ್ನು ಬಿಡುತ್ತಿದ್ದವು. ರಕ್ತವನ್ನು ಹೀರಿದ ಇಂಬಳಗಳು ಎರೆಹುಳದಂತೆ ಗುಂಡನೆಯ ಗಾತ್ರ ಪಡೆದ ಮೇಲೆ ದೇಹದಿಂದ ಕಳಚಿ ಬೀಳುತ್ತಿದ್ದವು. ಆ ದಿನವಂತೂ ಎರಡು ಬಸ್ ಚಾರಣಿಗರಿಗೆ ಇದು ಮೋಜಿನ ಸಂಗತಿಯಾಗಿತ್ತು. ಹಸಿದ ಹೊಟ್ಟೆಯಲ್ಲಿದ್ದ ಚಾರಣಿಗರೆಲ್ಲರೂ ಸಂಜೆ ಘಟ್ಟ ಇಳಿಯುವ ಹೊತ್ತಿಗೆ ಒಬ್ಬೊಬ್ಬರೂ ಕನಿಷ್ಠ 5-6 ಇಂಬಳಗಳಿಗೆ ಬಿಟ್ಟಿಯಾಗಿ ನೆರನ್ನು ದಾನ ಮಾಡಿದ ದಾನಿಗಳಾಗಿದ್ದರು. ಅಂತಹ ಪುಣ್ಯ ಅಂದು ಅವರೆಲ್ಲರಿಗೂ ನಿರಾಯಾಸವಾಗಿ ಒದಗಿ ಬಂದಿತ್ತು ಎಂದು ಲೇಖಕರು ಈ ಅನುಭವವನ್ನು ಸ್ವಾರಸ್ಯವಾಗಿ ಚರ್ಚಿಸಿದ್ದಾರೆ.
2.ಜಿಗಣೆ ಚಿಕಿತ್ಸೆಯನ್ನು ಅನಾರೋಗ್ಯದ ಯಾವ್ಯಾವ ಸಂದರ್ಭಗಳಲ್ಲಿ ಬಳಸಬಹುದು?
ಉತ್ತರ:- ಜಿಗಣೆ ಚಿಕಿತ್ಸೆಯನ್ನು ಅನೇಕ ಖಾಯಿಲೆಗಳ ನಿವಾರಣೆಗಾಗಿ ಬಳಸುತ್ತಾರೆ. ಅವುಗಳಲ್ಲಿ ತುಂಬಾ ಪ್ರಮುಖವಾದುವುಗಳೆಂದರೆ ಒಸಡಿನ ಬೆಂಬಿಡದ ಖಾಯಿಲೆಗೆ, ಒಸಡಿನ ಭಾಗದಲ್ಲಿ ಜಿಗಣೆ ಬಿಟ್ಟು ಪರ: ಹಿಡಿಸಿದರೆ, ಅಲ್ಲಿದ್ದ ಖಾಯಿಲೆ ಪರಿಹಾಭಿವಾಗುತ್ತದೆ. ಎರಡನೆಯದಾಗಿ ನಾಯ್ಕಲಾಕಾಲದ ಕೂದಲುದುರಿತ ಸಮಸ್ಯೆ, ಉದ್ದಿನ ಕಾಲಸಿರ (ತುರಿಕೋಸ್ ವೇಬನ್ಸ್), ಹಳೆಯ ಗಳು, ಮೂಲವ್ಯಾದಿಯ ಅನಂತರದ ಘನ ಘೋರ ಅವಸ್ಥೆಯ ಜರಡಿ ಹಣ್ಣುಗಳಲ್ಲಿ ಲೀಚ್ ಥೆರಪಿಯನ್ನು ಯಶಸ್ವಿಯಾಗಿ ಬಳಸುತ್ತಾರೆ, ಇಷ್ಟೇ ಅಲ್ಲದೆ ಕಣ್ಣಿನ ರಸ್ತೆ, ಕಿವಿ, ಒಳಮೂಗು, ಕೈ ಕಾಲಿನ ಬೆರಳು, ಕೊಳೆತು ನಾರುವ ಹಣ್ಣು (ಗ್ಯಾಂಗ್ರಿನ್) ಇಂತಹ ತುಂಬು ಆಯಕಟ್ಟಿನ ಅಪಾಯಕಾರಿ ಶಸ್ತ್ರಚಿಕಿತ್ಸೆಗಳಲ್ಲಿ ಲೋಚನ ಬಳಕೆ ತುಂಬಾ ಯಶಸ್ವಿಯಾಗುತ್ತದೆ. ಯಾವುದೇ ಕತ್ತರಿ, ಚಾಕುವಿನ ಬಳಕೆಯಿಲ್ಲದೆ, ಅರವಳಿಕೆಯೂ ಸಹ ಇಲ್ಲದೆ ಖಾಯಿಲೆ ಸಂಪೂರ್ಣವಾಗಿ ಗುಣವಾಗುವುದು, ಜಿಗಣೆಗಳು ರಕ್ತ ಹೀರಿಕೊಳ್ಳುವಾಗ ತಾವು ಕಚ್ಚುವ ಸ್ಥಳದಲ್ಲಿ ತಾವೇ ಅರಿವಳಿಕೆಯನ್ನುಂಟು ಮಾಡಿಕೊಳ್ಳುತ್ತವೆ. ಲೇಖಕರಿಗೆ ಇದ್ದ ಮೊಣಕಾಲಿನ ಗಂಟು ನೋವಿನ ಬಾಧೆಯೂ ಸಹ ಲೀಜ್ನ ಕಡಿತದಿಂದಲೇ ನಿರ್ಮೂಲಗೊಂಡಿತ್ತು. ಹೀಗೆ ಹತ್ತು ಹಲವಾರು ಸಂದರ್ಭಗಳಲ್ಲಿ ಜಿಗಣೆಯ ಚಿಕಿತ್ಸೆಯನ್ನು ಬಳಸಬಹುದು.
3 ಬಂಗೂ ಯಾರು? ಅವನ ಚಿಕಿತ್ಸಾ ವಿಧಾನವನ್ನು ವಿವರಿಸಿ?
ಉತ್ತರ:- ಕಾಶ್ಮೀರದ ಶ್ರೀನಗರದ ಹೊರವಲಯದ ಒಂದು ಪುಟ್ಟಹಳ್ಳಿಯಲ್ಲಿ, ಹಳ್ಳಿಯ ಹೆಸರು ತೇಲಬಾಲ್, ಅಲ್ಲೊಬ್ಬ ಲೀಚ್ ಥೆರಪಿಸ್ಟ್, ಆತನ ಹೆಸರು ಕಾಝರ್ ಮೊಹಮದ್ ಬಂಗೂ, ಕಾಶ್ಮೀರಿ ಭಾಷೆಯಲ್ಲಿ ಲೀಚ್ ಥೆರಪಿಗೆ ಝೇಂಕ್ ಲಗಾನಾ ಎನ್ನುವರು, ಬಂಗೂ ಇದ್ದೆಡೆಗೆ ರೋಗಿಗಳ ದಂಡೇ ಬರುತ್ತದೆ. ನಾನಿದ್ದಾಗ ಮೂವತ್ತರ ಹರೆಯದ ಒಬ್ಬ ಯುವಕ ಬಂದ, ಆತನಿಗೆ ಮೊಣಕಾಲು ಊದಿತ್ತು. ತೀವ್ರ ನೋವಿತ್ತಂತೆ. ಇದೀಗ ಎರಡನೆಯ ಬಾರಿ ಬಂಗೂನ ವಿದೇಶಿ(ಪಾಕಿಸ್ತಾನಿ) ಲೀಚ್ಗೆ ಯುವಕನಿಂದ ರಕ್ತದಾನ, ನೋವು ಉಪಶಮನವಾಗಿದೆಯಂತೆ, ಕೇವಲ ಎರಡೇ ಸಿಟ್ಟಿಂಗ್ ಮಾತ್ರ ಮಾತ್ರೆ ಇಲ್ಲ. ಕಾಸು ಖರ್ಚಿಲ್ಲ. ತೇವದ ಹತ್ತಿ ಉಂಡೆಯಲ್ಲಿ ನಾಕಾರು ಲೀಚ್ ಹಿಡಿದು ಕೋಣೆ ಹೊಕ್ಕ ಉದ್ದನೆಯ ಬಿಳಿಗಡ್ಡದ, ಕುಳ್ಳನೆಯ ಆಳು ಬಂಗೂ, ಆತನ ಅಂಗೈಗೆ ಯುವಕ ಕೇವಲ ಹತ್ತುರೂ ತುರುಕಿದ. ಹತ್ತೇ ನಿಮಿಷದಲ್ಲಿ ಚಿಕಿತ್ಸೆ ಮುಗಿದೇ ಹೋಯಿತು. ಅಂತಹ ಮೊಣಕಾಲಿನ ಉರಿ ಊತದ ರೋಗಿಗೆ ಚುಚ್ಚು ಮದ್ದು ನೀಡಿ ಅರಿವಳಿಕೆ ಮಾಡಿ ಸರ್ಜರಿಯೋ, ನೋಯುತ್ತಿರುವ ಗಂಟಿನ ಒಳಗಣ ದ್ರವವನ್ನು ಕಷ್ಟಪಟ್ಟು ಸಿರಿಂಜಲ್ಲಿ ಹೀರುವ ಚಿಕಿತ್ಸೆಯೋ ನೀಡುವ ಕ್ಲಿಷ್ಟಕರ ಸಂಕೀರ್ಣ ವಿಧಾನದ ಕುರಿತು ನನಗೆ ಅರಿವಿದೆ. ಆದರೆ ಬಂಗೂನ ಸರಳ ಚಿಕಿತ್ಸೆ ಅದ್ಭುತ ಎನಿಸಿತು. ಆತನೇ ಅಭಿನವ ಧನ್ವಂತರಿ ಎನಿಸಿತು.
ಇ ಕೊಟ್ಟಿದ ಪ್ರಶ್ನೆಗಳಿಗೆ ಮೂರು ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ,
1 ಮುದುಕನು ಜಿಗಣೆಗಳನ್ನು ಏಕೆ ಸಂಗ್ರಹಿಸುತ್ತಿದ್ದರು ?
ಉತ್ತರ:- ಮುದುಕನು ಬಹಳ ಬಡತನದಲ್ಲಿ ಜೀವಿಸುತ್ತಿದ್ದರು. ಅವರು ತೀರಾ ಸಂಕಷ್ಟದಲ್ಲಿದ್ದು ದರಿಂದ, ಜಿಗಣೆಗಳನ ಹಿಂಡು ಸಂಗ್ರಹಿಸುವ ಕೆಲಸವನ್ನೇ ತನ್ನ ವೃತ್ತಿಯನ್ನಾಗಿ ನಂಬಿದ್ದರು. ಇದರಿಂದ ಅವರ ಜೀವನವು ಸಾಗುತ್ತಿತ್ತು.
2. ಇಂಬಳದ ಜೀರ್ಣಾಂಗದ ವಿಶೇಷತೆ ಏನು?
ಉತ್ತರ :- ಇಂಬಳಗಳಿಗೆ, ವಿಚಿತ್ರವಾದ ಜೀರ್ಣಾಂಗ ವ್ಯೂಹವಿರುತ್ತದೆ. ಇದೇ ಇದರ ವೈಶಿಷ್ಟ್ಯತೆ, ಇಂಬಳಗಳು ಒಮ್ಮೆ ಒಬ್ಬ ಅತಿಥಿಗೆ ಕಚ್ಚಿದರೆ, ಆ ರಕ್ತವು ಅದಕ್ಕೆ ವರ್ಷ ಮೂರ್ತಿ ಸಾಕಾಗುತ್ತಿತ್ತು. ಅದರ ಜೀರ್ಣಾಂಗದ ಮ ಸಹ ತುಂಬಾ ತುಂಬಾ ನಿಧಾನವಾದ ಜೀರ್ಣಾಂಗ ವ್ಯೂಹವಿದೆ.
3.ಇಂಬಳ ಯಾವ್ಯಾವ ಪ್ರಾಣಿಗಳನ್ನು ಸತಾಯಿಸಿ ರಕ್ತ ಹೀರುತ್ತವೆ?
ಉತ್ತರ :- ಇಂಬಳದ ಆಹಾರವೇ ರಕ್ತ, ಅವುಗಳಿಗೆ ಬಿಸಿರಕ್ತದ ಪ್ರಾಣಿಗಳು ಸಿಗದೇ ಹೋದಾಗ ಶೀತ ರಕ್ತ ಪಾಣಿಗಳನ್ನೇ ಹಿಡಿದು ಅವುಗಳ ರಕ್ತವನ್ನು ಹೀರುತ್ತವೆ. ಮೀನಿನ ಮೊಟ್ಟೆಗಳನ್ನೂ ಸಹ ತಿನ್ನುತ್ತವೆ. ಇಂಬಳಗಳು ಮೀನು, ಹಕ್ಕಿ, ಹಾವು, ಮೊಸಳೆ, ಕಪ್ಪೆ ಮತ್ತು ಆಮೆಯಂತಹ ಪ್ರಾಣಿಗಳನ್ನು ಸತಾಯಿಸಿ ರಕ್ತ ಹೀರುತ್ತವೆ.
4.ಡಾ. ಕವಿತಾ ಅವರು ತಿಳಿಸಿದಂತೆ ಜಿಗಣೆ ಮೂಲಕ ನೀಡುವ ಚಿಕಿತ್ಸೆಗಳು ಯಾವುದು?
ಉತ್ತರ :- ಡಾ. ಕವಿತಾರವರು ತಿಳಿಸಿದಂತೆ ಮನುಷ್ಯರ ಬಾಯಿಯಲ್ಲಿರುವ ಒಸಡಿನ ಬೆಂಬಿಡದ ಖಾಯಿಲೆಗಳಿಗೆ ಜಿಗಣೆಗಳ ಮೂಲಕ ಚಿಕಿತ್ಸೆ ನೀಡುತ್ತಾರೆ. ನಾಣ್ಯದಾಕಾರದ ಕೂದಲುದುರಿದ ಸಮಸ್ಯೆ ಇತ್ಯಾದಿಗಳಿಗೂ ಜಿಗಣೆಗಳ ಮೂಲಕ ಚಿಕಿತ್ಸೆ ನಡೆಯುತ್ತಾರೆ. ಒಸಡಿನ ಭಾಗದಲ್ಲಿ ಜಿಗಣೆ ಬಿಟ್ಟು ನೆತ್ತರು ಹೀರಿಸಿದರೆ ಬೆಂಬಿಡದ ಖಾಯಿಲೆಗಳು ಮಾಯವಾಗಿ ಬಿಡುತ್ತದೆ.
5. ಜಿಗಣೆ ಕಚ್ಚಿಬಿಟ್ಟ ಬಳಿಕ ರಕ್ತಸ್ರಾವ ಯಾಕೆ ನಿಲ್ಲುವುದಿಲ್ಲ?
ಉತ್ತರ :- ಬಿಸಿರಕ್ತದ ಪ್ರಾಣಿಗಳ ಪೈಕಿ ಜಿಗಣೆಗೆ ಕುದುರೆಯ ನೆತ್ತರು ಎಂದರೆ ಪಂಚಪ್ರಾಣ ಆದುದರಿಂದಲೇ ಕುದುರೆ ಲಾಯಗಳನ್ನು ಕುದರೆಗಳ ಸಂಗಡ ಜಿಗಣೆಗಳನ್ನು ಸಾಕುವ ಹೊಸ ವ್ಯವಸಾಯ ಪದ್ಧತಿಯು ಯೂರೋಪಿನಲ್ಲಿ ಜಾರಿಯಲ್ಲಿದೆ.
ಈ. ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ
1.ಮುದುಕ ಯಾರಿಗೆ ಎದುರಾದ?
ಉತ್ತರ:- ಮುದುಕ ಕವಿ ವರ್ಡ್ಸ್ ವರ್ತ ಗೆ ಎದುರಾದ.
2. 'ಜಿಗಣೆ ಹಿಡುಕ' - ಇದರ ಆಂಗ್ಲ ರೂಪ ಯಾವುದು?
ಉತ್ತರ:- 'ಜಿಗಣೆ ಹಿಡುಕ' - ಇದರ ಆಂಗ್ಲ ರೂಪ Leach gatherer.
3. ಜಿಗಣೆಗಳು ಶೀತರಕ್ತ ಪ್ರಾಣಿಗಳ ನೆತ್ತರನ್ನು ಯಾವಾಗ ಹೀರುತ್ತವೆ?
ಉತ್ತರ:- ಜಿಗಣೆಗಳು ಬಿಸಿ ರಕ್ತ ಪ್ರಾಣಿ ದೊರಕದೆ ಇದ್ದರೆ ಅಂತಹ ಜೀವಿಗಳು ಶೀತರಕ್ತ ಪ್ರಾಣಿಗಳ ನೆತ್ತರನ್ನು ಹೀರುತ್ತವೆ.
4.'ಲೀಚ್ಥೆರಪಿ' ಎಂದರೇನು?
ಉತ್ತರ:- ಲೀಚ್ಥೆರಪಿ' ಎಂದರೆ ಝೋo ಗ ಲಗಾನಾ.
5.ಜಿಗಣೆಗೆ ಯಾವ ಪ್ರಾಣಿಯ ನೆತ್ತರು ಪಂಚಪ್ರಾಣ?
ಉತ್ತರ:- ಜಿಗಣೆಗೆ ಕುದುರೆ ಪ್ರಾಣಿಯ ನೆತ್ತರು ಪಂಚಪ್ರಾಣ.
0 Comments