Recent Posts

ಮಳೆ ಬರಲಿ - Class 8th Second Langauge Kannada Textbook Solutions

ಮಳೆ ಬರಲಿ

ಕವಿ/ಲೇಖಕರ ಪರಿಚಯ 
 
*  ಸವಿತಾ ನಾಗಭೂಷಣ ಇವರು 1961 ರಲ್ಲಿ ಚಿಕ್ಕಮಗಳೂರಿನಲ್ಲಿ ಜನಿಸಿದರು.
* ಇವರು ಚಂದ್ರನನ್ನು ಕರೆಯಿರಿ ಭೂಮಿಗೆ, ಹೊಳೆ ಮಗಳು, ಆಕಾಶ ಮಲ್ಲಿಗೆ, ಜಾತ್ರೆಯಲ್ಲಿ ಶಿವ ದರುಶನ ಕಾಡು ಲಿಲ್ಲಿ ಹೂಗಳು, ಹಳ್ಳಿಯ ದಾರಿ - ಮುಂತಾದ ಕೃತಿಗಳನ್ನು ಬರೆದಿದ್ದಾರೆ. -
* ಶ್ರೀಯುತರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಾಗೂ ಡಿ. ಎಸ್. ಕರ್ಕಿ ಕಾವ್ಯ ಪ್ರಶಸ್ತಿಯೂ ಲಭಿಸಿದೆ.
*.ಪ್ರಸ್ತುತ 'ಮಳೆ ಬರಲಿ...' ಕವನವನ್ನು ಚಂದ್ರನನ್ನು ಕರೆಯಿರಿ ಭೂಮಿಗೆ' ಕವನ ಸಂಕಲನದಿಂದ ಆಯ್ದುಕೊಳ್ಳಲಾಗಿದೆ.

                   ಪದಗಳ ಅರ್ಥ 
 
ಕಂಬಳಿ - ಕುರಿಯ ತುಪ್ಪಟದಿಂದ ಮಾಡಿದ ಹೊದಿಕೆ. 
ಕೊಳ್ಳ - ತಗ್ಗು: ಗುಣಿ ಬಯಲು ವಿಸ್ತಾರವಾದ ಭೂಪ್ರದೇಶ. 
ಹಳ್ಳ - ತಗ್ಗು: ಗುಣಿ, 
ಬೆಂದ (ಕಿ) - ಸುಡು; ಕುದಿ; 
ಬಿಸಿ ಕಸಿದು (ಕಿ) - ಕಿತ್ತುಕೊಳ್ಳು: ಅಪಹರಿಸು. 
ಛಾವಣಿ - ಚಾವಣಿ(ಕ), ಮಾಳಿಗೆ
 
* ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.

1.ರೈತರಿಗೆ ಸುಖ ನಿದ್ದೆಗಳು ಯಾವಾಗ ಸಿಗುತ್ತವೆ?

ಉತ್ತರ:- ಮಳೆಯಿಂದ ರೈತರ ಬದುಕು ಹಸನಾದಾಗ ರೈತರಿಗೆ ಸುಖ ನಿದ್ದೆಗಳು ಸಿಗುತ್ತವೆ.

2. ಕೆರೆ ಹಳ್ಳ ಬಾವಿಗಳಿಗೆ ಬಾಯಾರಿಕೆ ಆಗುವುದು ಯಾವಾಗ?
ಉತ್ತರ:- ಕೆರೆ ಹಳ್ಳ ಬಾವಿಗಳಿಗೆ ಬಾಯಾರಿಕೆ ಆಗುವುದು ಮಳೆ ಬರದೇ ಇದ್ದಾಗ. 

3. ನೊಂದ ಬಯಲುಗಳು, ಬೆಂದ ಬೆಟ್ಟಗಳು ತಂಪಾಗುವುದು ಯಾವಾಗ?
ಉತ್ತರ:- ನೊಂದ ಬಯಲುಗಳು, ಬೆಂದ ಬೆಟ್ಟಗಳು ತಂಪಾಗುವುದು ಮಳೆ ಬಂದಾಗ,

4. ಮಳೆ ಬಂದು ನಿಂತಾಗ ನೆಲ ಮುಗಿಲು ಹೇಗೆ ಕಾಣಬೇಕು?
ಉತ್ತರ:- ಮಳೆ ಬಂದು ನಿಂತಾಗ ನೆಲ ಮುಗಿಲು ಏಳು ಬಣ್ಣಗಳಲ್ಲಿ ನಕ್ಕಂತೆ ಕಾಣಬೇಕು.

ಆ)ಕೆಳಗಿನ ಪ್ರಶ್ನೆಗಳಿಗೆ ಮೂರು-ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ.

1. ಮಳೆ ಯಾವ ಯಾವ ನಷ್ಟಗಳನ್ನು ಉಂಟುಮಾಡದಿರಲಿ ಎಂದು ಕವಯಿತ್ರಿ ಆಶಿಸಿದ್ದಾರೆ?

ಉತ್ತರ:- ಮಳೆಯೂ ಹಸಿರು ಹೊಲ, ಗದ್ದೆ, ರೈತರ ಸುಖನಿದ್ದೆ, ಹುಲ್ಲಿನ ಛಾವಣಿ, ಮಣ್ಣಿನ ಗೋಡೆಗಳ ನಷ್ಟಗಳನ್ನು ಉಂಟುಮಾಡದಿರಲಿ ಎಂದು ಕವಯಿತ್ರಿ ಆಶಿಸಿದ್ದಾರೆ. 

2. ವಿಪರೀತ ಮಳೆಯಿಂದ ಯಾರ ಮನೆಗಳಿಗೆ ಹೆಚ್ಚು ಹಾನಿ ಉಂಟಾಗುತ್ತದೆ? ಏಕೆ?
ಉತ್ತರ:- ವಿಪರೀತ ಮಳೆಯಿಂದ ರೈತರ ಮನೆಗಳಿಗೆ ಹೆಚ್ಚು ಹಾನಿ ಉಂಟಾಗುತ್ತದೆ. ಏಕೆಂದರೆ ರೈತರ ಮನೆಯ ಗೋಡೆ ಮಣ್ಣಿನಿಂದ ಮಾಡಿರುತ್ತದೆ. ಛಾವಣಿ ಹುಲ್ಲಿನಿಂದ ಮಾಡಲ್ಪಟ್ಟಿರುತ್ತದೆ.

3. ಮಳೆಯಿಂದ ಯಾವ ಯಾವ ಸುಖಗಳು ಸಿಗಲಿ ಎಂದು ಕವಯಿತ್ರಿ ಆಶಿಸುತ್ತಾರೆ?
ಉತ್ತರ:- ಮಳೆಯಿಂದ ಇರಲೊಂದು ಮನೆ, ಹೊದೆಯಲು ಬೆಚ್ಚನೆಯ ಕಂಬಳಿ ಸಿಗಬೇಕು. ಕೆರೆ, ಕಟ್ಟೆ, ಬಾವಿ ತುಂಬಿರಬೇಕು. ಇಂತಹ ಸುಖಗಳು ಸಿಗಲಿ ಎಂದು ಕವಯಿತ್ರಿ ಆಶಿಸುತ್ತಾರೆ.

4. ನೊಂದು ಬೆಂದು ಬಾಯಾರಿದ ಪ್ರಕೃತಿಯ ಅಂಶಗಳಾವುವು?
ಉತ್ತರ:- ನೊಂದು ಬೆಂದು ಬಾಯಾರಿದ ಪ್ರಕೃತಿಯ ಅಂಶಗಳೆಂದರೆ ನೊಂದ ಬಯಲುಗಳು, ಬೆಂದ ಬೆಟ್ಟಗಳು, ಬಾಯಾರಿದ ಕೆರೆ. ಬಾವಿ, ಹಳ್ಳ, ಕೊಳ್ಳಗಳು ಎಂದು ತಿಳಿಸಿದ್ದಾರೆ. 
 
* ಕೆಳಗಿನ ಪ್ರಶ್ನೆಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿರಿ. 

1. ಮಳೆಯಿಂದ ಆಗುವ ಅನುಕೂಲ ಹಾಗೂ ಅನಾನುಕೂಲಗಳಾವುವು?

ಉತ್ತರ:- ಮಳೆಯಿಂದ ಆಗುವ ಅನುಕೂಲಗಳೆಂದರೆ, ಬತ್ತಿ ಹೋದ ಬಾವಿ, ಕೆರೆ, ಕಟ್ಟೆ ತುಂಬುತ್ತದೆ. ಮಳೆಯು ಸಕಾಲಕ್ಕೆ ಹಿತವಾಗಿ ಬಂದು ಕೆರೆ ಕಟ್ಟೆ ಬಾವಿಗಳು ತುಂಬಿದರೆ ರೈತರ ಬದುಕು ಹಸನಾಗುತ್ತದೆ. ಕೃಷಿ ಬೆಳೆ ಬೆಳೆಯಲು ಸಹಕಾರಿಯಾಗುತ್ತದೆ. ಭೂಮಿಯ ಅಂತರ್ಜಲದ ಮಟ್ಟ ಹೆಚ್ಚಾಗುತ್ತದೆ. ಭೂಮಿಯೂ ತಂಪಾಗುತ್ತದೆ. ಆ ಮುಖೇನ ನಾಡು ಸಮೃದ್ಧಿಯಿಂದ ನೆಮ್ಮದಿಯಿಂದ ಕೂಡಿರುತ್ತದೆ. ಮಳೆಯಿಂದ ಆಗುವ ಅನಾನುಕೂಲಗಳಾವುವೆಂದರೆ, ಜಲಪ್ರಳಯವಾಗುತ್ತದೆ. ಆಸ್ತಿ ಪಾಸ್ತಿ ನಾಶವಾಗುತ್ತದೆ. ಬೆಳೆದ ಬೆಳೆಗಳು ನಾಶವಾಗುತ್ತವೆ. ರೋಗರುಜಿನಗಳು ಹೆಚ್ಚಾಗುತ್ತವೆ. ಅಭಿವೃದ್ಧಿಗೆ ತೊಡಕಾಗುತ್ತದೆ.

    *  ಸಂದರ್ಭದೊಂದಿಗೆ ವಿವರಿಸಿರಿ.

1. ರೈತರ ಸುಖ ನಿದ್ದೆಗಳನ್ನು ಕಸಿದುಕೊಳ್ಳದಿರಲಿ.
ಆಯ್ಕೆ:
- ಈ ವಾಕ್ಯವನ್ನು "ಸವಿತಾ ನಾಗಭೂಷಣ" ಅವರು ಬರೆದಿರುವ 'ಚಂದ್ರನನ್ನು ಕರೆಯಿರಿ ಭೂಮಿಗೆ' ಎಂಬ ಕೃತಿಯಿಂದ ಆಯ್ದ"ಮಳೆ ಬರಲಿ" ಎಂಬ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ:- ಈ ಮಾತನ್ನು ಕವಯಿತ್ರಿ ಹೇಳಿದ್ದಾರೆ. ಬರುವ ಮಳೆ ರೈತರ ಬಾಳನ್ನು ಹಸನುಗೊಳಿಸುವಂತಾಗಬೇಕು. ಆದರೆ ಅವರ
ಸುಖನಿದ್ದೆಗಳನ್ನು ಕಸಿದುಕೊಳ್ಳದಿರಲಿ ಎಂದು ತಿಳಿಸುವ ಸಮಯದಲ್ಲಿ ಈ ಮೇಲಿನ ಮಾತು ಬಂದಿದೆ.

2. ಹೊದೆಯಲು ಬೆಚ್ಚನೆಯ ಕಂಬಳಿ ಎಲ್ಲರಿಗೂ ಸಿಗಲಿ
ಆಯ್ಕೆ:
- ಈ ವಾಕ್ಯವನ್ನು "ಸವಿತಾ ನಾಗಭೂಷಣ" ಅವರು ಬರೆದಿರುವ'ಚಂದ್ರನನ್ನುಕರೆಯಿರಿಭೂಮಿಗೆ'ಎಂಬ ಕೃತಿಯಿಂದ ಆಯ್ದ"ಮಳೆ ಬರಲಿ" ಎಂಬ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ:- ಈ ಮಾತನ್ನು ಕವಯಿತ್ರಿ ಹೇಳಿದ್ದಾರೆ.ಬರುವ ಮಳೆ ಹರುಷವನ್ನು ಹೊತ್ತು ತರಲಿ ಇರಲೊಂದು ಪುಟ್ಟ ಮನೆ ಹೊದೆಯಲು ಬೆಚ್ಚನೆಯ ಕಂಬಳಿ ಎಲ್ಲರಿಗೂ ಸಿಗಲಿ ಎಂದು ತಿಳಿಸುವ ಸಮಯದಲ್ಲಿ ಈ ಮೇಲಿನ ಮಾತು ಬಂದಿದೆ.

3. ಕೆರೆ ಬಾವಿ ಹಳ್ಳಕೊಳ್ಳಗಳಿಗೆ ಬರಲಿ ಮಳೆ.
ಆಯ್ಕೆ:
- ಈ ವಾಕ್ಯವನ್ನು "ಸವಿತಾ ನಾಗಭೂಷಣ" ಅವರು ಬರೆದಿರುವ'ಚಂದ್ರನನ್ನುಕರೆಯಿರಿಭೂಮಿಗೆ'ಎಂಬ ಕೃತಿಯಿಂದ ಆಯ್ದ"ಮಳೆ ಬರಲಿ" ಎಂಬ ಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ:- ಈ ಮಾತನ್ನು ಕವಯಿತ್ರಿ ಹೇಳಿದ್ದಾರೆ. ಮಳೆ ಬಾರದೇ ಹೋದರೆ ಭೂಮಿಯ ಮೇಲೆ ಜೀವಕಳೆ ನಾಶವಾಗುತ್ತದೆ. ಆದ್ದರಿಂದ ಕೆರೆ, ಬಾವಿ, ಹಳ್ಳಕೊಳ್ಳಗಳಿಗೆ ಮಳೆ ಬರಲಿ ಎಂದು ಆಶಿಸುವ ಸಂದರ್ಭದಲ್ಲಿ ಈ ಮೇಲಿನ ಮಾತು ಬಂದಿದೆ.

                                ಭಾಷಾಭ್ಯಾಸ :

ಅ) ಮೊದಲೆರಡು ಪದಗಳಿಗೆ ಸಂಬಂಧಿಸಿದಂತೆ ಮೂರನೆಯ ಪದಕ್ಕೆ ಸಂಬಂಧಿಸಿದ ಪದ ಬರೆಯಿರಿ.

1. ಹಳ್ಳಕೊಳ್ಳ : ಜೋಡುನುಡಿ : ಧೋ : ಅನುಕರಣಾವ್ಯಯ   
2. ಹಳ್ಳ : ತಗ್ಗು :: ಕಸಿದು : ಕಿತ್ತುಕೊಳ್ಳು  
3, ಸಿಗು : ಸಿಗಲಿ : ನಗು : ನಗಲಿ

ಇ) ಕೆಳಗಿನ ಪದಗಳಿಗೆ ವಿರುದ್ಧಾರ್ಥಕಗಳನ್ನು ಬರೆಯಿರಿ.
ಕೆಡವು X ಕಟ್ಟು, 
ಮೇಲ್ಲೆ X ಕೆಳಗೆ, 
ಬೀಳು X ಏಳು 
ಸುಖ X ದುಃಖ,

ಈ ಕೆಳಗಿನ ಪದಗಳನ್ನು ಮಾದರಿಯಂತೆ ಬಿಡಿಸಿ ಬರೆಯಿರಿ.
ಮಾಡು : ಕದೆ + ಇರಲಿ = ಹಾಕದಿರಲಿ
1. ಇರಲೊಂದು = ಇರಲಿ + ಒಂದು  
2 ಬಾಯಾರಿದ = ಬಾಯ + ಆರಿದ    
3 ಕೊಳ್ಳದಿರಲಿ = ಕೊಳ್ಳದೆ + ಇರಲಿ

You Might Like

Post a Comment

0 Comments