Recent Posts

ಧ್ಯಾನ - 7ನೇ ತರಗತಿ ದೈಹಿಕ ಶಿಕ್ಷಣ ಪುಸ್ತಕದ ಪ್ರಶ್ನೋತ್ತರಗಳು

 

ಪ್ರ.ಸಂ 1. ಖಾಲಿ ಬಿಟ್ಟಿರುವ ಶ್ಥಳಗಳನ್ನು ಸೂಕ್ತ ಪದಗಳಿಂದ ತುಂಬಿರಿ.                        

1. ಮನೋ ದೈಹಿಕ ಕಾಯಿಲೆಗಳಿಗೆ ಧ್ಯಾನವು ದಿವ್ಯೌಷಧಿಯಾಗಿರುತ್ತದೆ. 

2. ಒಂದು ನಿರ್ದಿಷ್ಟ ವಸ್ತುವನ್ನು ಆಧರಿಸಿ ಮಾಡುವ ವಿಧಾನವೇ ಸ್ಥೂಲ ಧ್ಯಾನ.

3. ಜ್ಯೋತಿರ್ಧ್ಯಾನಕ್ಕಿಂತಲೂ ಸೂಕ್ಷ್ಮ ಧ್ಯಾನವು ಶ್ರೇಷ್ಠವಾದದ್ದು. 

4. ಉಪಾಸನೆ ಎಂದರೆ ಆರಾಧನೆ, ಪೂಜೆ ಅಥವಾ ಧ್ಯಾನ ಮಾಡು ಎಂದು ಅರ್ಥವಾಗುತ್ತದೆ. 

5. ನಿರ್ಗುಣೋಪಾಸನೆಯು ಅಭೌತಿಕ ಉಪಾಸನೆಯಾಗಿರುತ್ತದೆ.

6. ಸಗುಣೋಪಾಸನೆಯು ಭೌತಿಕ ಉಪಾಸನೆಯಾಗಿರುತ್ತದೆ.

ಪ್ರ.ಸಂ 2. ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ.

1. ಧ್ಯಾನದ ಅರ್ಥ ತಿಳಿಸಿ.
ಉತ್ತರ :- Maditation ಎಂಬ ಶಬ್ದವು ಎಂಬ ಮೂಲ ಧಾತುವಿನಿಂದ ಬಂದಿದ್ದು ಅದರ ಅರ್ಥ ಗುಣಪಡಿಸು ಎಂದರ್ಥವಾಗುತ್ತದೆ.   

2. ಧ್ಯಾನ ಎಂದರೇನು ?
ಉತ್ತರ :- ಒಂದೇ ವಿಷಯ ಅಥವಾ ವಸ್ತುವಿನ ಮೇಲೆ ಮನಸ್ಸನ್ನು ಏಕಾಗ್ರಗೊಳಿಸುವುದನ್ನು ಧ್ಯಾನ ಎನ್ನುವರು. ಅಂದರೆ ತಲ್ಲೀನತೆ, ತನ್ಮಯತೆ,ಏಕಾಗ್ರತೆ ಅಥವಾ ನಿಶ್ಚಲತೆ ಎಂದು ಹೇಳಬಹುದು.

3. ಧ್ಯಾನ ಯಾವ ಧಾತುವಿನಿಂದ ಬಂದಿದೆ ?
ಉತ್ತರ :- ಧ್ಯಾನ ಎಂಬ ಶಬ್ದವು ಎಂಬ ಮೂಲ ಧಾತುವಿನಿಂದ ಬಂದಿದೆ.

4. ಧ್ಯಾನದಲ್ಲಿ ಪ್ರಕಾರಗಳೆಷ್ಟು ?
ಉತ್ತರ :- ಧ್ಯಾನದಲ್ಲಿ 3 ಪ್ರಕಾರಗಳಿವೆ ಅವುಗಳೆಂದರೆ :-
1. ಸ್ಥೂಲ ಧ್ಯಾನ 2. ಜ್ಯೋತಿರ್ಧ್ಯಾನ 3. ಸೂಕ್ಷ್ಮ ಧ್ಯಾನ

5. ಧ್ಯಾನಕ್ಕೆ ಸಹಾಯಕವಾಗುವ ಆಸನಗಳಾವುವು ?
ಉತ್ತರ :-  ಧ್ಯಾನಕ್ಕೆ ಸಹಾಯಕವಾಗುವ ಆಸನಗಳೆಂದರೆ ;-
           1) ಪದ್ಮಾಸನ        2) ವಜ್ರಾಸನ       3) ಸ್ವಸ್ತಿಕಾಸನ
           4) ಸಿದ್ದಾಸನ        5) ಭದ್ರಾಸನ

6. ಸಗುಣವೆಂದರೇನು ?
ಉತ್ತರ :- ಸಗುಣವೆಂದರೆ ಆಕಾರ,ರೂಪ ಮತ್ತು ಗುಣವಿಶೇಷಣಗಳಿರುವಂತಹದ್ದು.ಇದು ಮನಸ್ಸನ್ನು ಸ್ಥಿರಗೊಳಿಸಲು ಮತ್ತು ಏಕಾಗ್ರಗೊಳಿಸಲು ಪೂರಕವಾಗಿರುತ್ತದೆ.

7.ಧ್ಯಾನದಿಂದಾಗುವ ಪ್ರಯೋಜನಗಳೇನು ?
ಉತ್ತರ :- ಧ್ಯಾನದಿಂದಾಗುವ ಪ್ರಯೋಜನಗಳು :
1. ಶರೀರಕ್ಕೆ, ಮನಸ್ಸಿಗೆ ವಿಶ್ರಾಂತಿ ಲಭಿಸಿ ಮಾನಸಿಕ ಉದ್ವೇಗ, ಒತ್ತಡ ಚಿಂತೆ ಕಡಿಮೆಯಾಗಿ ಅದರಿಂದ ಬರುವ ರಕ್ತದೊತ್ತಡ, ಹೃದ್ರೋಗ ಮುಂತಾದ ಮನೋದೈಹಿಕ ಸಮಸ್ಯೆಗಳ ನಿವಾರಣೆಗೆ ಸಹಕಾರಿಯಾಗಿದೆ.
2. ಉಸಿರಾಟದ ಗತಿಯು ನಿಧಾನವಾಗುವುದರಿಂದ ಆಮ್ಲಜನಕದ ಬಳಕೆ ಕಡಿಮೆಯಾಗುವುದು.
3. ಹೃದಯ ಬಡಿತದ ಗತಿಯು ಕಡಿಮೆಯಾಗುವುದರಿಂದ ಹೃದಯಕ್ಕೆ ವಿಶ್ರಾಂತಿ ದೊರೆತು, ಹೃದ್ರೋಗದ ಸಂಭವಣೀಯತೆ ಕಡಿಮೆಯಾಗುವುದು.
4. ರಕ್ತದಲ್ಲಿ ವಿಷಕಾರಿ ಆಮ್ಲದ ಪ್ರಮಾಣ ಕಡಿಮೆಯಾಗಿ ಉದ್ವಿಗ್ನತೆ, ಕಳವಳ,ಆತಂಕ ಹಾಗೂ ಸಂಬಂಧಿಸಿದ
ರೋಗಗಳು ದೂರವಾಗುವವು.
5. ಮನಸ್ಸು ಪ್ರಫುಲ್ಲವಾಗಿ ಮತ್ತು ಚೈತನ್ಯದಾಯಕವಾಗಿ ಲವಲವಿಕೆ ಹೊಂದುವುದು.
6. ಬಾಹ್ಯ ಜಗತ್ತಿನ ಯಾವುದೇ ಸಮಸ್ಯೆಗಳು ಸಾಧಕನನ್ನು ಬಾಧಿಸುವುದಿಲ್ಲ.
7. ಸಾಧಕನ ದೇಹಕ್ಕೆ ಲಘುತ್ವ, ಮನಸ್ಸಿಗೆ ಸ್ಥಿರತೆ ಮತ್ತು ಸ್ಪಷ್ಟತೆ ಲಭ್ಯವಾಗುತ್ತದೆ.

8. ಸ್ಥೂಲ ಧ್ಯಾನವನ್ನು ಏನೆಂದು ವರ್ಣಿಸುತ್ತಾರೆ ?
ಉತ್ತರ :-ಯಾವುದಾದರೂ ಒಂದು ನಿರ್ಧಿಷ್ಟ ವಸ್ತುವನ್ನು ಆಧರಿಸಿ ಮಾಡುವ ಧ್ಯಾನವೇ ಸ್ಥೂಲ ಧ್ಯಾನ ಪತಂಜಲಿ ಇದನ್ನು 'ಧಾರಣ' ಎಂದು ಕರೆದಿರುವರು. ಅವರು ಇದನ್ನು ಯಾವ ಭಗವಂತನ ನಯನ ಮನೋಹರವಾದ ರೂಪವು, ಅಲಂಕಾರ ವಾಹನಾದಿಗಳಹಿವೆಯೋ ಅಂತಹ ಸುಂದರವಾದ ರೂಪವನ್ನು
ನಿತ್ಯ ಸ್ಮರಣೆ ಮಾಡುವುದನ್ನು ಸ್ಥೂಲ ಧ್ಯಾನ ಎಂದು ವರ್ಣಿಸುತ್ತಾರೆ.

9. ಜ್ಯೋತಿರ್ಧ್ಯಾನ ಎಂದರೇನು ?
ಉತ್ತರ :- ಇದನ್ನು ತೇಜೋಧ್ಯಾನವೆಂದೂ ಕರೆಯುತ್ತಾರೆ. ಮೂಲಾಧಾರ ಅಂದರೆ ಗುಹ್ಯ ಪ್ರದೇಶ ಹಾಗೂ ಲಿಂಗ ಮೂಲದ ಮಧ್ಯಸ್ಥಾನದಲ್ಲಿರುವ ಕುಂಡಲಿನಿಯು ಸರ್ಪಾಕಾರದಲ್ಲಿ ಇರುತ್ತದೆ. ಈ ಸ್ಥಾನದಲ್ಲಿ ತೇಜೋಮಯನಾದ ಬ್ರಹ್ಮನನ್ನು ಧ್ಯಾನಮಾಡುವುದು ಜ್ಯೋತಿರ್ಧ್ಯಾನ.

10.ಧ್ಯಾನದ ವಿವಿಧ ಹಂತಗಳಾವುವು ?
ಉತ್ತರ :-ಧ್ಯಾನದ ವಿವಿಧ ಹಂತಗಳು :-
1. ಮನಸ್ಸಿನಲ್ಲಿ ಬರುವ ವಿಚಾರಗಳನ್ನು ಅವಲೋಕಿಸಬೇಕು. ಪ್ರಾರಂಭದಲ್ಲಿ ಅನೇಕ ವಿಚಾರಗಳು ಬರುತ್ತಿರುತ್ತವೆ.
2. ವಿಚಾರಗಳ ದಿಕ್ಕು ಬದಲಿಸಿಒಂದೇ ವಿಷಯದೆಡೆಗೆ ಕೇಂದ್ರೀಕರಿಸಬೇಕು. ಆಗಲೂ ಅನೇಕ ವಿಚಾರಗಳು
ಬರುತ್ತಿರುತ್ತವೆ.
3. ವಿಚಾರಗಳ ವೇಗವನ್ನು ಕಡಿಮೆ ಮಾಡಬೇಕು.
4. ವಿಚಾರಗಳ ತೀವ್ರತೆ ಕಡಿಮೆಯಾಗಿ ನೈಧಾನ್ಯತೆ ಬರುತ್ತದೆ.
5. ಏಕ ಸಂಕಲ್ಪ ಉಂಟಾಗುತ್ತದೆ.

11. ನಿರ್ಗುಣೋಪಾಸನೆ ಎಂದರೇನು ?
ಉತ್ತರ :- ನಿರ್ಗುಣವೆಂದರೆ ಯಾವುದೇ ಗುಣಗಳು ಇಲ್ಲದಿರುವುದು. ಅಂದರೆ ಅಂತರ್ಗತವಾದ ಆತ್ಮಕ್ಕೆ ಅಥವಾ ವ್ಯಕ್ತಿಗೆ ಬಾಹ್ಯವಾದ ಪರಮಾತ್ಮನಿಗೆ ಅಥವಾ ಆ ದೇವರಿಗೆ ಭೌತಿಕವಾಗಿಯಾಗಲಿ, ಅಭೌತಿಕವಾಗಿಯಾಗಲಿ ಅಥವಾ ಜ್ಞಾನಾತ್ಮಕವಾಗಿಯಾಗಲಿ ಯಾವುದೇ ವಿಧದ ರೂಪಗಳು ಅಥವಾ ಗುಣ ವಿಶೇಷಣಗಳು ಇರುವುದಿಲ್ಲ.

You Might Like

Post a Comment

0 Comments