Recent Posts

ನಕ್ಷತ್ರ ಮತ್ತು ಸೌರಮಂಡಲ - 8 ನೇ ತರಗತಿ ವಿಜ್ಞಾನ ಪುಸ್ತಕದ ಪ್ರಶ್ನೋತ್ತರಗಳು

 ಅಧ್ಯಾಯ-17
ನಕ್ಷತ್ರ ಮತ್ತು ಸೌರಮಂಡಲ

1 ರಿಂದ 3ರ ವರೆಗಿನ ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನು ಆರಿಸಿ ಬರೆಯಿರಿ.
 
1. ಈ ಕೆಳಗಿನವುಗಳಲ್ಲಿ ಯಾವುದು ಸೌರಮಂಡಲದ ಸದಸ್ಯ ಅಲ್ಲ
ಉತ್ತರ: (೧) ನಕ್ಷತ್ರಪುಂಜ

2. ಈ ಕೆಳಗಿನವುಗಳಲ್ಲಿ ಯಾವುದು ಸೂರ್ಯನ ಗ್ರಹವಾಗಿಲ್ಲ?

ಉತ್ತರ: (೧) ಸಿರಿಯಸ್

3. ಚಂದ್ರನ ಬಿಂಬಾವಸ್ಥೆಗಳು ಸಂಭವಿಸಲು ಕಾರಣ
ಉತ್ತರ: (1) ಬೆಳಕನ್ನು ಪ್ರತಿಫಲಿಸುವ ಚಂದ್ರನ ಸ್ವಲ್ಪ ಭಾಗ ಮಾತ್ರ ನಮಗೆ ಕಾಣುತ್ತದೆ.

4. ಬಿಟ್ಟ ಸ್ಥಳವನ್ನು ಸೂಕ್ತ ಉತ್ತರಗಳಿಂದ ತುಂಬಿರಿ,
(a) ಸೂರ್ಯನಿಂದ ಅತ್ಯಂತ ದೂರದಲ್ಲಿರುವ ಗ್ರಹ ನೆಪ್ಚೂನ್
(b) ಕೆಂಪು ಬಣ್ಣದಂತೆ ಕಾಣುವ ಗ್ರಹ ಮಂಗಳ
(c) ಆಕಾಶದಲ್ಲಿ ಗುರುತಿಸಬಹುದಾದ ಆಕಾರವನ್ನು ಉಂಟುಮಾಡುವ ನಕ್ಷತ್ರಗಳ ಗುಂಪಿಗೆ ನಕ್ಷತ್ರಪುಂಜ ಎನ್ನುವರು.
(d) ಗ್ರಹದ ಸುತ್ತಲೂ ಪರಿಭ್ರಮಿಸುವ ಆಕಾಶಕಾಯವನ್ನು ಉಪಗ್ರಹ ಎನ್ನುವರು.
(e) ಕ್ಷುದ್ರ ಗ್ರಹಗಳು ಮಂಗಳ ಮತ್ತು ಗುರು ಗ್ರಹಗಳ ಕಕ್ಷೆಗಳ ನಡುವೆ ಕಂಡುಬರುತ್ತದೆ.
(f) ಶೂಟಿಂಗ್ ಸ್ಟಾರ್ಸ್ (Shooting stars) ವಾಸ್ತವವಾಗಿ ನಕ್ಷತ್ರ ಗಳಲ್ಲ

2.ಕೆಳಗಿನ ಹೇಳಿಕೆಗಳನ್ನು ಸರಿ (T) ಅಥವಾ ತಪ್ಪು (F) ಎಂದು ಗುರುತಿಸಿ
(a) ಧ್ರುವನಕ್ಷತ್ರವು ಸೌರಮಂಡಲದ ಒಂದು ಸದಸ್ಯ (F)
(b) ಯುರೇನಸ್, ಸೌರಮಂಡಲದ ಅತ್ಯಂತ ದೂರದ ಗ್ರಹ (F)
(c) INSAT ಒಂದು ಕೃತಕ ಉಪಗ್ರಹ (T)
(d) ಬುಧಗ್ರಹವು ಸೌರಮಂಡಲದ ಅತ್ಯಂತ ಚಿಕ್ಕ ಗ್ರಹ (F)
(e) ಓರಿಯನ್ ನಕ್ಷತ್ರಪುಂಜವನ್ನು ದೂರದರ್ಶಕದ ಸಹಾಯದಿಂದ ಮಾತ್ರ ವೀಕ್ಷಿಸಬಹುದು. (F)
(f) ಸೌರಮಂಡಲದಲ್ಲಿ ಒಂಬತ್ತು ಗ್ರಹಗಳಿವೆ. (F)

3. ಶುಕ್ರ ಗ್ರಹವು ಸಂಜೆ ನಕ್ಷತ್ರದಂತೆ ಗೋಚರಿಸಿದರೆ ಆಕಾಶದ ಯಾವ ಭಾಗದಲ್ಲಿ ಅದನ್ನು ನೀವು ಕಾಣುವಿರಿ.
ಉತ್ತರ: ಶುಕ್ರಗ್ರಹವು ಸಂಜೆನಕ್ಷತ್ರದಂತೆ ಗೋಚರಿಸಿದರೆ ಆಕಾಶದ ಪಶ್ಚಿಮ ಭಾಗದಲ್ಲಿ ಅದನ್ನು ನಾವು ಕಾಣುತ್ತೇವೆ.

4. ಸೌರಮಂಡಲದ ಅತ್ಯಂತ ದೊಡ್ಡ ಗ್ರಹವನ್ನು ಹಸರಿಸಿ
ಉತ್ತರ: ಸೌರಮಂಡಲದ ಅತ್ಯಂತ ದೊಡ್ಡ ಗ್ರಹ ಗುರು,

5. ನಕ್ಷತ್ರಪುಂಜ ಎಂದರೇನು? ಯಾವುದಾದರೂ ಎರಡುನಕ್ಷತ್ರಪುಂಜಗಳನ್ನು ಹೆಸರಿಸಿ
ಉತ್ತರ: ಗುರುತಿಸಬಹುದಾದ ಆಕಾರದಲ್ಲಿ ಗೋಚರಿಸುವ ನಕ್ಷತ್ರಗಳ ಗುಂಪನ್ನು ನಕ್ಷತ್ರಪುಂಜ ಎನ್ನುವರು ಉದಾಹರಣೆ: ಲುಬ್ದಕ/ ಮಹಾವ್ಯಾದ ಮತ್ತು ಸಪ್ತರ್ಷಿ ಮಂಡಲ

6.ಸಪ್ತರ್ಷಿಮಂಡಲ ಮತ್ತು (5) ಲುಬ್ದಕಗಳಲ್ಲಿನ ಪ್ರಮಖ ನಕ್ಷತ್ರಗಳ ನಡುವಿನ ಸಂಬಂಧಿತ ಸ್ಥಾನಗಳನ್ನು ಸೂಚಿಸುವ ರೇಖಾಚಿತ್ರವನ್ನು ರಚಿಸಿ.


7. ಗ್ರಹಗಳನ್ನು ಹೊರತುಪಡಿಸಿ ಸೌರಮಂಡಲದ ಯಾಪುದಾದರೂ ಎರಡು ಸದಸ್ಯ ಕಾಯಗಳನ್ನು ಹೆಸರಿಸಿ
ಉತ್ತರ: ಗ್ರಹಗಳನ್ನು ಹೊರತುಪಡಿಸಿ ಸೌರಮಂಡಲದ ಎರಡು ಸದಸ್ಯ ಕಾಯಗಳೆಂದರೆ ಕ್ಷುದ್ರಗ್ರಹಗಳು ಮತ್ತು ಉಲ್ಕೆಗಳು,

8. ಸಪ್ತರ್ಷಿಮಂಡಲದ ಸಮಯದಿಂದ ಧ್ರುವನಕ್ಷತ್ರವನ್ನು ಹೇಗೆ ಗುರುತಿಸುವಿರಿ ಎಂದು ವಿವರಿಸಿ
ಉತ್ತರ: ಬೇಸಿಗೆಯಲ್ಲಿ, ಶುಭ್ರವಾದ ಚಂದ್ರರಹಿತ ರಾತ್ರಿಯಲ್ಲಿ ಸುಮಾರು 9.00 ಗಂಟೆಯ ಸಮಯದಲ್ಲಿ ಆಕಾಶದ ಉತ್ತರ ಭಾಗವನ್ನು ನೋಡಿ ಸಪ್ತರ್ಷಿಮಂಡಲವನ್ನು ಗುರುತಿಸಿ ಸಪ್ತರ್ಷಿಮಂಡಲದ ತುದಿಯಲ್ಲಿ ಇರುವ ಎರಡು ನಕ್ಷತ್ರಗಳನ್ನು ನೋಡಿ, ಪಕ್ಷದಲ್ಲಿನ ಚಿತ್ರದಲ್ಲಿ ತೋರಿಸಿರುವಂತೆ ಆ ಎರಡೂ ನಕ್ಷತ್ರಗಳ ನಡುವೆ ಒಂದು ಸರಳರೇಖೆ ಚಲಿಸಿರುವಂತೆ ಕಲ್ಪಿಸಿಕೊಳ್ಳಿ. ಈ ಕಾಲ್ಪನಿಕ ರೇಖೆಯನ್ನು ಉತ್ತರ ದಿಕ್ಕಿಗೆ ವೃದ್ಧಿಸಿ (ಎರಡು ನಕ್ಷತ್ರಗಳ ನಡುವಿನ ಅಂತರ ಅಂದಾಜು ಐದು ಪಟ್ಟು), ಈ ರೇಖೆಯು ಅತಿಯಾದ ಪ್ರಕಾರಮಾನದಲ್ಲದ ನಕ್ಷತ್ರವೊಂದರ ಬಳಿ ಕರೆದೊಯ್ಯುತ್ತದೆ. ಅದೇ ಧ್ರುವ ನಕ್ಷತ್ರ,

9. ಆಕಾಶದಲ್ಲಿನ ಎಲ್ಲಾ ನಕ್ಷತ್ರಗಳು ಚಲಿಸುತ್ತದೆಯೇ? ವಿವರಿಸಿ,

ಉತ್ತರ: ಇಲ್ಲ, ಭೂಮಿಯು ತನ್ನ ಕಕ್ಷೆಯಲ್ಲಿ ಪಪ್ಪಿದು ದಿಕ್ಕಿನಿಂದ ಪೂರ್ವಕ್ಕೆ ತಿರುಗುತ್ತಿದೆ. ಇದರಿಂದಾಗಿ, ಎಲ್ಲ ನಕ್ಷತ್ರಗಳು ಮೊರ್ದದಿಂದ ಪಶ್ಚಿಮಕ್ಕೆ ಚಲಿಸುವಂತೆ ಗೋಚರವಾಗುತ್ತದೆ. ಭೂಮಿಯ ದೃಷ್ಟಿಯಿಂದ ಧ್ರುವನಕ್ಷತ್ರವು ಚಲಿಸುವಂತೆ ಗೋಚರಿಸುವುದಿಲ್ಲ. ಕಾರಣ, ಆಡು ಭೂಮಿಯ ಉತ್ತರ ಧ್ರುವದ ನೇರದಲ್ಲಿ ಸ್ಥಿತವಾಗಿದೆ, ಆದು ಉತ್ತರ ದಿಕ್ಕಿನಲ್ಲಿ ಒಂದು ನಿರ್ದಿಷ್ಟ ಬಿಂಬುವಿನಲ್ಲಿ ನಿಶ್ಚಲವಾಗಿರುದಂತೆ ಗೋಚರವಾಗುತ್ತದೆ.


10. ನಕ್ಷತ್ರಗಳ ನಡುವಿನ ಅಂತರವನ್ನು ಜ್ಯೋತಿರ್ವರ್ಷಗಳಲ್ಲಿ ಏಕೆ ವ್ಯಕ್ತಪಡಿಸುತ್ತಾರೆ! ಒಂದು ನಕ್ಷತ್ರವು ಭೂಮಿಯಿಂದ ಜ್ಯೋತಿರ್ವಷ್ರಗಳಷ್ಟು ದೂರದಲ್ಲಿದೆ ಎಂಬ ಹೇಳಿಕೆಯಿಂದ ನೀರನ್ನು ಅರ್ಥ ಮಾಡಿಕೊಳ್ಳುವಿರಿ?
ಉತ್ತರ: ಭೂಮಿ ಮತ್ತು nಕ್ಷತ್ರಗಳ ನಡುವಿನ ಅಂತರಗಳು ಹಾಗೂ ನಕ್ಷತ್ರಗಳ ನಡುವಿನ ಪರಸ್ಪರ ಅಂತರಗಳು ಬಹಳ ದೊಡ್ಡದಾಗಿದೆ. ಅವುಗಳನ್ನು ಕಿಲೋಮೀಟರ್ ಗಳಲ್ಲಿ ವ್ಯಕ್ತಪಡಿಸುವುದು ಅನುಕೂಲಕರವಲ್ಲ, ಆದ್ದರಿಂದ, ಆ ಅತ್ಯಂತ ಹೆಚ್ಚಿನ ದೂರಗಳನ್ನು ಜ್ಯೋತಿರ್ ವರ್ಷಗಳಿಂದ ವ್ಯಕ್ತಪಡಿಸಲಾಗುತ್ತದೆ, ಜ್ಯೋತಿರ್ವಷ್ರವು ಒಂದು ವರ್ಷದಲ್ಲಿ ಬೆಳಕು ಚಲಿಸಿದ ಒಟ್ಟು ದೂರವಾಗಿದೆ. ಒಂದು ಜ್ಯೋತಿರ್ವರ್ಷವು 9.46 x 1012ಮೀ ಗೆ ಸಮ.
ಒಂದು ನಕ್ಷತ್ರವು ಭೂಮಿಯಿಂದ 8 ಜ್ಯೋತಿರ್ವಷ್ರಗಳಷ್ಟು ದೂರದಲ್ಲಿದೆ ಎಂದರೆ, ಆ ನಕ್ಷತ್ರ ಮತ್ತು ಭೂಮಿಯ ನಡುವಿನ ಅಂತರವು, ಬೆಳಕಿನಿಂದ 8 ವರ್ಷಗಳ ಕಾಲ ನಿರಂತರವಾಗಿ ಕ್ರಮಿಸಲ್ಪಟ್ಟ ದೂರವಾಗಿರುತ್ತದೆ.
ಆ ನಕ್ಷತ್ರ ಮತ್ತು ಭೂಮಿಯ ನಡುವಿನ ಅಂತರ = 8 x ( 9,46 x1012) =7.6 x 1013

11. ಗುರುಗ್ರಹದ ತ್ರಿಜ್ಯವು ಭೂಮಿಯ ತ್ರಿಜ್ಯದ 11ರಷ್ಟಿದೆ ಗುರುಗ್ರಹ ಮತ್ತು ಭೂಮಿಯ ಗಾತ್ರಗಳ ಅನುಪಾತವನ್ನು ಕಂಡುಹಿಡಿಯಿರಿ, ಎಷ್ಟು ಸ೦ಖ್ಯೆಯು ಭೂಮಿಗಳನ್ನು ಗುರುಗ್ರವವು ತನ್ನಲ್ಲಿ ಸರಿಹೊಂದಿಸಿಕೊಳ್ಳುತ್ತದೆ?
ಉತ್ತರ: ಭೂಮಿಯ ತ್ರಿಜ್ಯ ಮತ್ತು ಗುರು ಗ್ರಹದ ತ್ರಿಜ್ಯ =R ಆಗಿರಲಿ ದತ್ತದಲ್ಲಿ ಹೇಳಿರುವ ಪ್ರಕಾರ, ಗುರುಗ್ರಹದ ತ್ರಿಜ್ಯವು ಭೂಮಿಯ ತ್ರಿಜ್ಯದ 11ರಷ್ಟಿದೆ.

 
12. ಬೂಝೋ, ಸೌರಮಂಡಲದ ಚಿತ್ರವನ್ನು ಹೀಗೆ ಬರದಿದ್ದಾನೆ (ಚಿತ್ರ 17.29), ಇದು ಸರಿಯಾಗಿದೆಯೇ ತಿಳಿಸಿ. ಇಲ್ಲವಾದಲ್ಲಿ ಸರಿಪಡಿಸಿ.

ಉತ್ತರ: ಬೂಝೋ ಬರೆದಿರುವ ಸೌರಮಂಡಲದ ಚಿತ್ರ ಸರಿಯಿಲ್ಲ. ಸೌರಮಂಡಲದ ಗ್ರಹಗಳ ಸರಿಯಾದ ಕ್ರಮ ಬುಧ, ಶುಕ್ರ, ಭೂಮಿ, ಮುಂಗಳ, ಗುರು, ಶನಿ, ಯುರೇನಸ್ ಮತ್ತು ನೆಪ್ಚೂನ್ ಆದರೆ, ಅವನು ಗ್ರಹಗಳನ್ನು ಬರೆದಿರುವ ಕ್ರಮ ತಪ್ಪಾಗಿದೆ. ಅವನ್ನು ಮಂಗಳ ಮತ್ತು ಶುಕ್ರ ಗ್ರಹಗಳ ಹಾಗೂ ಯುರೇನಸ್ ಮತ್ತು ನೆಪ್ಚೂನ್ ಗ್ರಹಗಳ ಸ್ಥಾನಗಳನ್ನು ಅದಲುಬದಲು ಮಾಡಿ ಬರೆದಿದ್ದಾರೆ, ಜೊತೆಗೆ, ಕ್ಷುದ್ರಗ್ರಹಗಳ ಪಟ್ಟಿಯನ್ನು 4ನೇ ಮತ್ತು 5ನೇ ಗ್ರಹಗಳ ಕಕ್ಷೆಗಳ ನಡುವೆ ಚಿತ್ರಸುವ ಬದಲು 5ನೇ ಮುತ್ತು 6ನೇ ಗ್ರಹಗಳ ಕಕ್ಷೆಗಳ ನಡುವೆ ಚಿತ್ರಿಸಿದ್ದಾನೆ.
 
13. ನಕ್ಷತ್ರಗಳ ದೂರವನ್ನು ಜ್ಯೋತಿರ್ವಷ್ರ ಗಳಲ್ಲಿ ವ್ಯಕ್ತಪಡಿಸುವುದು ಅನುಕೂಲಕರ

14. ಭೂಮಿಯ ನೈಸರ್ಗಿಕ ಉಪಗ್ರಹ ಚಂದ್ರ.

15. ರಾತ್ರಿ ಆಕಾಶದಲ್ಲಿ ಅತ್ಯಂತ ಪ್ರಕಾಶಮಾನವಾದ ಗ್ರಹ ಶುಕ್ರ

16. .ಆಕಾಶದಲ್ಲಿ ಗೋಚರಿಸುವ, ಮಿನುಗದ ನಕ್ಷತ್ರದಂತಹ ಕಾಯಗಳೇ ಗ್ರಹಗಳು

17. ಆಕಾಶದಲ್ಲಿನ ನಕ್ಷತ್ರಗಳು, ಗ್ರಹಗಳು, ಚಂದ್ರ ಮುಂತಾದವುಗಳನ್ನು ಆಕಾಶಕಾಯಗಳು ಎನ್ನುವರು

18. ಆಕಾಶಕಾಯಗಳ ಮತ್ತುಅವುಗಳಿಗೆ ಸಂಬಂಧಿಸಿದ ವಿದ್ಯಮಾನಗಳ ಅಧ್ಯಯನವೇ ಖಗೋಳ ವಿಜ್ಞಾನ

19. ಪೂರ್ಣವಾಗಿ ಚಂದ್ರನ ಆಕಾರ ಗೋಚರಿಸುವ ದಿನವನ್ನು ಹುಣ್ಣಿಮೆ ಎನ್ನುವರು.

20. ಪೂರ್ಣವಾಗಿ ಚಂದ್ರನ ಆಕಾರ ಆಗೋಚರವಾಗುವ ದಿನವನ್ನು ಅಮಾವಾಸ್ಯೆ ಎನ್ನುವರು.

21. ಒಂದು ತಿಂಗಳಲ್ಲಿ ಗೋಚರಿಸುವ ಚಂದ್ರನ ಪ್ರಕಾಶಮಾನವಾದ ವಿವಿಧ ಆಕಾರಗಳೇ ಚಂದ್ರನ ಬಿಂಬಾವಸ್ಥೆ

22. ಒಂದು ಹುಣ್ಣಿಮೆಯ ದಿನದಿಂದ ಮತ್ತೊಂದು ಹುಣ್ಣಿಮೆಯ ದಿನದ ನಡುವಿನ ಅವಧಿಯ 29 ದಿನಗಳಿಗಿಂತಲೂ ಸ್ವಲ್ಪ ಹೆಚ್ಚು

23. ನೀಲ್ ಆರ್ಮ್ ಸ್ಟ್ರಾಂಗ್ನ ನಂತರ ಚಂದ್ರನ ಮೇಲೆ ಕಾಲಿಟ್ಟ ಗಗನಯಾತ್ರಿ ಎಡ್ವಿನ್ ಆಲ್ಟ್ರಿನ್

24.) ಸೂರ್ಯ ಭೂಮಿಯಿಂದ 150.000,000 (150 ಮಿಲಿಯನ್) km ದೂರದಲ್ಲಿದ್ದಾನೆ.

25. ಸೂರ್ಯನ ನಂತರ ಭೂಮಿಗೆ ಹತ್ತಿರದ ನಕ್ಷತ್ರ ಪ್ರಾಕ್ಸಿಮ ಸೆಂಟೋರಿ

26. ಆಕಾಶದ ಅತ್ಯಂತ ಪ್ರಕಾಶಮಾನ ನಕ್ಷತ್ರ ಸಿರಿಯಸ್

27. ಸೌರಮಂಡಲವು ಹೊಂದಿರುವ ಸದಸ್ಯರನ್ನು ಪಟ್ಟಿಮಾಡಿ
ಉತ್ತರ: ಸೌರದುಂಡಲವು ಎಂಟು ಗ್ರಹಗಳನ್ನು, ಕ್ಷುದ್ರಗ್ರಹಗಳನ್ನು, ಧೂಮಕೇತುಗಳನ್ನು ಮತ್ತು ಉಲ್ಕೆಗಳ ಗುಂಪನ್ನು ಹೊಂದಿದೆ.

28. ಕೃತಕ ಉಪಗ್ರಹಗಳನ್ನು ಎಲ್ಲಿ ಉಪಯೋಗಿಸುತ್ತಾರೆ?
ಉತ್ತರ: ಕೃತಕ ಉಪಗ್ರಹಗಳನ್ನು ಹವಾಮಾನ ಮುನ್ಸೂಚನೆ ಪಡೆಯಲು, ದೂರಸಂಪರ್ಕ ಮತ್ತು ದೂರಸಂವೇದಿ ವ್ಯವಸ್ಥೆಗಳಲ್ಲಿ ಉಪಯೋಗಿಸುತ್ತಾರೆ.

29. ಚಂದ್ರನು ಪ್ರತಿದಿನ ತನ್ನ ಆಕಾರವನ್ನು ಏಕೆ ಬದಲಿಸುತ್ತಾನೆ? ಏಕೆ ಎಂಬುದನ್ನು ಸೂಕ್ತ ಚಿತ್ರದೊಂದಿಗೆ ತಿಳಿಸಿ,
ಉತ್ತರ: ಚಂದ್ರನಿಗೆ ಸೂರ್ಯ ಮತ್ತು ಬೇರೆ ನಕ್ಷತ್ರಗಳಂತೆ ಸ್ವಯಂ ಪ್ರಕಾಶವಿಲ್ಲ. ಸೂರ್ಯನ ಬೆಳಕನ್ನು ಚಂದ್ರ ನಮ್ಮ ಕಡೆ ಪ್ರತಿಫಲಿಸುವುದರಿಂದ ನಮಗೆ ಚಂದ್ರನು ಗೋಚರಿಸುತ್ತಾನೆ, ಆದ್ದರಿಂದ ನಾವು ಸೂರ್ಯನ ಬೆಳಕನ್ನು ನನ್ನ ಕಡೆ ಪ್ರತಿಫಲಿಸುವ ಚಂದ್ರ ಭಾಗವನ್ನು ಮಾತ್ರ ಕಾಣುತ್ತೇವೆ. ಚಂದ್ರನು ದಿನದಿಂದ ದಿನಕ್ಕೆ 50 ರಿಂದ 52 ನಿಮಿಷಗಳ ಕಾಲ ತಡವಾಗಿ ಉದಯಿಸುತ್ತಾನೆ. ಇದರಿಂದಾಗಿ, ಸೂರ್ಯನ ಬೆಳಕನ್ನು ನಮ್ಮ ಕಡೆ ಪ್ರತಿಫಲಿಸುವ ಚಂದ್ರನ ಭಾಗದ ಪ್ರಮಾಣವೂ ದಿನದಿಂದ ದಿನಕ್ಕೆ ಬದಲಾಗುತ್ತದೆ. ಆದ್ದರಿಂದ, ಚಂದ್ರನು ಪ್ರತಿದಿನ ತನ್ನ ಆಕಾರವನ್ನು ಬದಲಿಸುತ್ತಾನೆ.

30. ಭೂಮಿಯಿಂದ ಚಂದ್ರನ ಹಿಂಭಾಗವು ಗೋಚರಿಸುವುದಿಲ್ಲ. ಏಕೆ?
ಉತ್ತರ: ಚಂದ್ರನು ತನ್ನ ಅಕ್ಷದ ಮೇಲೆ ಒಂದು ಬಾರಿ ಭ್ರಮಿಸಲು ತೆಗೆದುಕೊಳ್ಳುವ ಕಾಲವು ಭೂಮಿಯ ಸುತ್ತ ಒಂದು ಬಾರಿ ಪರಿಭ್ರಮಣೆ ಹೊಂದುವ ಕಾಲಕ್ಕೆ ಸಮ, ಆದ್ದರಿಂದ, ಭೂಮಿಯಿಂದ ಚಂದ್ರನ ಹಿಂಭಾಗವು ಗೋಚರಿಸುವುದಿಲ್ಲ.

31. ಚಂದ್ರನ ಮೇಲೆ ಪ್ರಥಮ ಬಾರಿಗೆ ಯಾವ ಗಗನಯಾತ್ರಿ ಇಳಿದರು?
ಉತ್ತರ: 1969, ಜುಲೈ 21ರಂದು ಪ್ರಥಮ ಬಾರಿಗೆ ಗಗನಯಾತ್ರಿ ನೀಲ್ ಆರ್ಮ್ ಸ್ಟ್ರಾಂಗ್ ಚಂದ್ರನ ಮೇಲೆ ಇಳಿದರು.

32. ಒಳಗ್ರಹಗಳು ಎಂದರೇನು? ಅವು ಯಾವವು?
ಉತ್ತರ: ಮೊದಲ ನಾಲ್ಕು ಗ್ರಹಗಳಾದ ಬುಧ, ಶುಕ್ರ, ಭೂಮಿ ಮತ್ತು ಮಂಗಳಗ್ರಹಗಳು ಉಳಿದ ನಾಲ್ಕು ಗ್ರಹಗಳಿಗಿಂತ ಸೂರ್ಯನಿಗೆ ಅತೀ ಹತ್ತಿರದಲ್ಲಿದೆ. ಇವುಗಳನ್ನು ಒಳಗ್ರಹಗಳು ಎನ್ನುವರು.

33. ಹೊರಗ್ರಹಗಳು ಎಂದರೇನು? ಅವು ಯಾವುವು?
ಉತ್ತರ: ಮಂಗಳ ಗ್ರಹದ ಕಕ್ಷೆಯ ಹೊರಗಿನ ಗ್ರಹಗಳಾದ ಗುರು, ಶನಿ, ಯುರೇನಸ್ ಮತ್ತು ನೆಪ್ಚೂನ್ ಒಳ ಗ್ರಹಗಳಿಗಿಂತ ಹೆಚ್ಚು ದೂರದಲ್ಲಿದೆ. ಅವುಗಳನ್ನು ಹೊರಗ್ರಹಗಳು ಎನ್ನುವರು.

34. ಉಲ್ಕಾಶಿಲೆಗಳು ಎಂದರೆನು?
ಉತ್ತರ: ಕೆಲವು ಉಲ್ಕೆಗಳು ಹೆಚ್ಚು ಗಾತ್ರ ಹೊಂದಿದ್ದು ಸಂಪೂರ್ಣ ಆವಿಯಾಗುವುದಕ್ಕೂ ಮೊದಲೇ ಭೂಮಿಯನ್ನು ತಲುಪುತ್ತದೆ. ಭೂಮಿಯನ್ನು ತಲುಪುವ ಆ ಕಾಯಗಳಿಗೆ ಉಲ್ಕಾಶಿಲೆಗಳು ಎನ್ನುವರು.


You Might Like

Post a Comment

0 Comments