ಅಧ್ಯಾಯ-18
ವಾಯುಮಾಲಿನ್ಯ ಮತ್ತು ಜಲಮಾಲಿನ್ಯ
ವಾಯುಮಾಲಿನ್ಯ ಮತ್ತು ಜಲಮಾಲಿನ್ಯ
ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ
1. ನೀರು ಕಲುಷಿತಗೊಳ್ಳುವ ವಿಭಿನ್ನ ವಿಧಾನಗಳು ಯಾವುವು?
ಉತ್ತರ: ನೀರಿಗೆ ಈ ಕೆಳಕ೦ಡ ಪದಾರ್ಥಗಳು ಸೇರುವುದರಿಂದ, ನೀರು ಕಲುಷಿತಗೊಳ್ಳುತ್ತದೆ.
01] ಕೃಷಿ ರಾಸಾಯನಿಕಗಳು: ಬೆಳೆಗಳ ಇಳುವರಿಯನ್ನು ಹೆಚ್ಚಿಸುವ ಸಲುವಾಗಿ ರೈತರು ಅಗತ್ಯಕ್ಕಿಂತ ಹೆಚ್ಚು ಕಳೆನಾಶಕಗಳು ಕೀಟನಾಶಕಗಳು, ರಸಗೊಬ್ಬರಗಳು ಮುಂತಾದ ರಾಸಾಯನಿಕಗಳನ್ನು ಬಳಸುತ್ತಿದ್ದಾರೆ. ಮಳೆ ಮತ್ತು ಪ್ರವಾಹಗಳಿಂದ ಈ ಕೃಷಿ ರಾಸಾಯನಿಕಗಳು ಕೊಂಡೊಯಲ್ಪಡುತ್ತದೆ, ಇದರಿಂದ, ನೀರು ಕಲುಷಿತಗೊಳ್ಳುತ್ತದೆ.
02) ಕೈಗಾರಿಕಾ ತ್ಯಾಜ್ಯಗಳು: ಕೈಗಾರಿಕೆಗಳು ಅಪಾಯಕಾರಿ ರಾಸಾಯನಿಕಗಳನ್ನು ಸುತ್ತಮುತ್ತಲಿನ ನೀರಿನ ಆಕರಗಳಿಗೆ ಬಿಡುಗಡೆ ಮಾಡುತ್ತಿದ್ದು, ಅದರಿಂದಾಗಿ ನೀರು ಕಲುಷಿತಗೊಳ್ಳುತ್ತಿದೆ.
03) ಚರಂಡಿ ತ್ಯಾಜ್ಯಗಳು: ಅಡುಗೆಮನೆ, ಬಚ್ಚಲು, ಶೌಚಾಲಯ ಮುಂತಾದ ಗೃಹ ತ್ಯಾಜ್ಯಗಳು ಚರಂಡಿಯ ಮೂಲಕ ಸುತ್ತ ಮುತ್ತಲಿನ ನೀರಿನ ಆಕರಗಳಿಗೆ ಸೇರಲ್ಪಡುತ್ತಿದೆ ಅದರಿಂದಾಗಿ ನೀರು ಕಲುಷಿತಗೊಳ್ಳುತ್ತಿದೆ.
2. ವೈಯಕ್ತಿಕ ಮಟ್ಟದಲ್ಲಿ, ವಾಯುಮಾಲಿನ್ಯವನ್ನು ತಗ್ಗಿಸಲು ನೀವು ಹೇಗೆ ಸಹಾಯ ಮಾಡುವಿರಿ.
ಉತ್ತರ: ಈ ಕೆಳಗಿನ ಕ್ರಮಗಳನ್ನು ಅನುಸರಿಸುವುದರಿಂದ, ನಾವು ವೈಯಕ್ತಿಕ ಮಟ್ಟದಲ್ಲಿ ವಾಯುಮಾಲಿನ್ಯವನ್ನು ತಡೆಗಟ್ಟಬಹುದು.
01) ವೈಯಕ್ತಿಕ ವಾಹನಗಳ ಬಳಕೆಯನ್ನು ಕಡಿಮೆಮಾಡಿ, ಸಾಧ್ಯವಾದಷ್ಟು ಸಾರ್ವಜನಿಕ ಸಾರಿಗೆಗಳನ್ನು ಬಳಸಬೇಕು.
02) ಕಡಿಮೆ ದೂರದ ಪ್ರಯಾಣಕ್ಕಾಗಿ ವಾಹನಗಳನ್ನು ಬಳಸಬಾರದು.
03) ಡೀಸೆಲ್ ಮತ್ತು ಪೆಟ್ರೋಲ್ಗಳ ಬದಲಿಗೆ LPG ಮುತ್ತು CNG ಗಳಂತಹ ಸ್ವಚ್ಛ ಇಂಧನಗಳನ್ನು ಬಳಸಬೇಕು.
04) ಯಾವುದೇ ತ್ಯಾಜ್ಯವನ್ನು ಸುಡಬಾರದು ಮತ್ತು ಸರಿಯಾದ ನಿರ್ಧಾದಲ್ಲಿ ವಿಲೇವಾರಿ ಮಾಡಬೇಕು.
05) ವಾಹನಗಳು, ಮನೆಗಳು ಮತ್ತು ಕಾರ್ಖಾನೆಗಳ ಚಿಮಣಿಗಳಿಂದ ಹೊರಹೋಗುವ ಹೊಗೆಯ ಪ್ರಮಾಣವನ್ನು ನಿಯಂತ್ರಿಸಬೇಕು.
06) ಪಟಾಕಿಗಳು ಮತ್ತು ಸಿಡಿಮದ್ದುಗಳನ್ನು ಸುಡುವುದನ್ನು ನಿಲ್ಲಿಸಬೇಕು.
07) ನಾವು ಗಿಡಗಳನ್ನು ನೆಡಬೇಕು ಮತ್ತು ನಮ್ಮ ಸುತ್ತಮುತ್ತ ಈಗಾಗಲೇ ಇರುವ ಗಿಡಗಳನ್ನು ಪೋಷಿಸಬೇಕು.
08) ಕೃಷಿ ಚಟುಚಟಿಕೆಗಳಲ್ಲಿ ಕಳಕ, ಪೀಡೆನಾಶಕಗಳಂತಹ ರಾಸಾಯನಿಕಗಳ ಬಳಕೆಯನ್ನು ಆದಷ್ಟೂ ನಿಯಂತ್ರಿಸಬೇಕು,
3. ಸ್ವಚ್ಛ, ಪಾರದರ್ಶಕ ನೀರು ಯಾವಾಗಲೂ ಕುಡಿಯಲು ಯೋಗ್ಯವಾಗಿರುತ್ತದೆ, ಅಭಿಪ್ರಾಯ ತಿಳಿಸಿ,
ಉತ್ತರ: ಇಲ್ಲ, ಸ್ವಚ್ಛ, ಪಾರದರ್ಶಕ ನೀರು ಯಾವಾಗಲೂ ಕುಡಿಯಲು ಯೋಗ್ಯವಾಗಿರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ನೀರು ನೋಡಲು ಪರಿಶುದ್ಧವಾಗಿರುವಂತೆ ತೋರಿದರೂ, ರೋಗಕಾರಕ ಸೂಕ್ಷ್ಮಜೀವಿಗಳನ್ನು ಮತ್ತು ವಿಲೀನಗೊಂಡ ಕಶ್ಮಲಗಳನ್ನು ಹೊಂದಿರಬಹುದು, ಆದ್ದರಿಂದ, ಕುಡಿಯುವ ಮೊದಲು ನೀರನ್ನು ಶುದ್ದೀಕರಿಸುವುದು ಅತ್ಯಂತ ಅಗತ್ಯ
4. ನೀವು ನಿಮ್ಮ ಪಟ್ಟಣದ ಪುರಸಭೆಯ ಸದಸ್ಯರಾಗಿದ್ದೀರಿ. ನಿಮ್ಮ ಪಟ್ಟಣದ ಎಲ್ಲಾ ನಿವಾಸಿಗಳಿಗೆ ಶುದ್ಧನೀರಿನ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುವ ಕ್ರಮಗಳ ಪಟ್ಟಿಯನ್ನು ಮಾಡಿ,
ಉತ್ತರ: ಪಟ್ಟಣದ ಎಲ್ಲಾ ನಿವಾಸಿಗಳಿಗೆ ಶುದ್ಧನೀರಿನ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಈ ಕೆಳಗಿನ ಕ್ರಮಗಳನ್ನು ಕೈಗೊಳ್ಳಬೇಕು.
01) ನೀರಿನ ಪ್ರಮುಖ ಆಕರಗಳನ್ನು ಶುದ್ಧ ಪರಿಸರವಿರುವ ಸ್ಥಳಗಳಲ್ಲಿ ನಿರ್ಮಿಸಬೇಕು ಮತ್ತು ಸರಿಯಾಗಿ ನಿರ್ವಹಿಸಬೇಕು
02) ನೀರನ್ನು ಶುದ್ದೀಕರಿಸಲು ಕ್ಲೋರಿನೀಕರಣದಂತಹ ವಿಧಾನಗಳನ್ನು ಬಳಸಬೇಕು.
03) ನೀರಿನ ಕೊಳವೆಗಳ ಸುತ್ತಲಿನ ಪ್ರದೇಶಗಳನ್ನು ಶುಚಿಯಾಗಿಟ್ಟುಕೊಳ್ಳಬೇಕು
04) ಮಲಿನಗೊಂಡ ನೀರನ್ನು ನೇರವಾಗಿ ಗಡಿಗಳಿಗೆ ಮತ್ತು ಸರೋವರಗಳಿಗೆ ಬಿಡದಂತೆ ನಿರ್ಬಂಧಿಸಲು ಕೈಗಾರಿಕಾ ಘಟಕಗಳಿಗಿರುವ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು.
5. ಶುದ್ಧ ಗಾಳಿ ಮತ್ತು ಕಲುಷಿತ ಗಾಳಿಯ ನಡುವಣ ವ್ಯತ್ಯಾಸಗಳನ್ನು ವಿವರಿಸಿ,
6. ಆಮ್ಲಮಳೆಗೆ ಕಾರಣವಾಗುವ ಸಂದರ್ಭಗಳನ್ನು ವಿವರಿಸಿ. ಆಮ್ಲಮಳೆ ನಮ್ಮ ಮೇಲೆ ಉಂಟುಮಾಡುವ ಪರಿಣಾಮವೇನು?
ಉತ್ತರ; ಇದ್ದಿಲು ಮತ್ತು ಡೀಸಲ್ ನಂತಹ ಪಳೆಯುಳಿಕೆ ಇಂಧನಗಳ ದಹನದಿಂದ ಸಲ್ಪರ್ ಡೈ ಆಕ್ಸೈಡ್, ನೈಟ್ರೋಜನ್ ಡೈಆಕ್ಸೆಡ್ಗಳಂತಹ ಹಲವು ಮಾಲಿನ್ಯಕಾರಕಗಳು ವಾತಾವರಣವನ್ನು ಸೇರುತ್ತದೆ. ಈ ಮಾಲಿನ್ಯಕಾರಕಗಳು ವಾತಾವರಣದಲ್ಲಿನ ನೀರಾವಿಯೊಂದಿಗೆ ವರ್ತಿಸಿ, ಕ್ರಮವಾಗಿ ಸಲ್ಯೂರಿಕ್ ಆಮ್ಲ ಮತ್ತು ನೈಟ್ರಿಕ್ ಆಮ್ಲಗಳನ್ನು ಉತ್ಪತ್ತಿ ಮಾಡುತ್ತದೆ. ಈ ಆಮ್ಲಗಳು ಮಳೆನೀರಿನೊಂದಿಗೆ ವಿಲೀನವಾಗಿ, ಆಮ್ಲ ಮಳೆಯಾಗಿ ಸುರಿಯುತ್ತದೆ.
01] ಆಮ್ಲ ಮಳೆಯು ಬೆಳೆಗಳನ್ನು ಹಾಳುಮಾಡುತ್ತದೆ.
02) ಅಮ್ಲ ಮಳೆಯು ಕಟ್ಟಡಗಳು ಮತ್ತು ಸ್ಮಾರಕಗಳ ಮೇಲೆ ತೀಕ್ಷ್ಣವಾದ ದುಷ್ಪರಿಣಾಮವನ್ನು ಬೀರುತ್ತದೆ ಪ್ರಮುಖವಾಗಿ ಅಮೃತ ಶಿಲೆಯನ್ನು ಸಂಕ್ಷಾರಣಗೊಳಿಸುತ್ತದೆ.
ಉತ್ತರ; ಇದ್ದಿಲು ಮತ್ತು ಡೀಸಲ್ ನಂತಹ ಪಳೆಯುಳಿಕೆ ಇಂಧನಗಳ ದಹನದಿಂದ ಸಲ್ಪರ್ ಡೈ ಆಕ್ಸೈಡ್, ನೈಟ್ರೋಜನ್ ಡೈಆಕ್ಸೆಡ್ಗಳಂತಹ ಹಲವು ಮಾಲಿನ್ಯಕಾರಕಗಳು ವಾತಾವರಣವನ್ನು ಸೇರುತ್ತದೆ. ಈ ಮಾಲಿನ್ಯಕಾರಕಗಳು ವಾತಾವರಣದಲ್ಲಿನ ನೀರಾವಿಯೊಂದಿಗೆ ವರ್ತಿಸಿ, ಕ್ರಮವಾಗಿ ಸಲ್ಯೂರಿಕ್ ಆಮ್ಲ ಮತ್ತು ನೈಟ್ರಿಕ್ ಆಮ್ಲಗಳನ್ನು ಉತ್ಪತ್ತಿ ಮಾಡುತ್ತದೆ. ಈ ಆಮ್ಲಗಳು ಮಳೆನೀರಿನೊಂದಿಗೆ ವಿಲೀನವಾಗಿ, ಆಮ್ಲ ಮಳೆಯಾಗಿ ಸುರಿಯುತ್ತದೆ.
01] ಆಮ್ಲ ಮಳೆಯು ಬೆಳೆಗಳನ್ನು ಹಾಳುಮಾಡುತ್ತದೆ.
02) ಅಮ್ಲ ಮಳೆಯು ಕಟ್ಟಡಗಳು ಮತ್ತು ಸ್ಮಾರಕಗಳ ಮೇಲೆ ತೀಕ್ಷ್ಣವಾದ ದುಷ್ಪರಿಣಾಮವನ್ನು ಬೀರುತ್ತದೆ ಪ್ರಮುಖವಾಗಿ ಅಮೃತ ಶಿಲೆಯನ್ನು ಸಂಕ್ಷಾರಣಗೊಳಿಸುತ್ತದೆ.
7. ಈ ಕೆಳಗಿನವುಗಳಲ್ಲಿ ಯಾವುದು ಹಸಿರುಮನೆ ಅನಿಲವಲ್ಲ
1. ಕಾರ್ಬನ್ ಡೈಆಕ್ಸೆಡ್
2, ಸಲ್ಪರ್ ಡೈ ಆಕ್ಸೈಡ್
3. ಮೀಥೆನ್
4. ನೈಟ್ರೋಜನ್
ಉತ್ತರ: 4. ನೈಟ್ರೋಜನ್
ಉತ್ತರ: 4. ನೈಟ್ರೋಜನ್
8. ನಿಮ್ಮ ಸ್ವಂತ ವಾಕ್ಯಗಳಲ್ಲಿ ಹಸಿರುಮನೆ ಪರಿಣಾಮವನ್ನು ವಿವರಿಸಿ
ಉತ್ತರ: ಹಸಿರುಮನೆ ಪರಿಣಾಮವು, ಹಸಿರುಮನೆ ಅನಿಲಗಳಾದ ಕಾರ್ಬನ್ ಡೈಆಕ್ಸೈಡ್, ಮೀಥೇನ್ ಮತ್ತು ನೀರಾವಿಗಳಿಂದ ಉಂಟಾಗುತ್ತದೆ. ಸೂರ್ಯನ ವಿಕಿರಣಗಳು ಭೂಮಿಯನ್ನು ತಲುಪಿದಾಗ, ಕೆಲವು ವಿಕಿರಣಗಳು ಭೂಮಿಯಿಂದ ಹೀರಲ್ಪಡುತ್ತದೆ ಮತ್ತು ಮರಳಿ ವಾತಾವರಣಕ್ಕೆ ವಿಸರ್ಜಿಸಲ್ಪಡುತ್ತದೆ, ಈ ವಿಕಿರಣಗಳನ್ನು ವಾತಾವರಣದಲ್ಲಿನ ಹಸಿರುಮನೆ ಅನಿಲಗಳು, ಪ್ರಮುಖವಾಗಿ CO2 ಶಾಖವನ್ನು ಸೆರೆಹಿಡಿಯುತ್ತದೆ ಮತ್ತು ಅದು ವ್ಯೋಮಕ್ಕೆ ಹಿಂದಿರುಗದಂತೆ ತಡೆಯುತ್ತದೆ. ಇದರಿಂದಾಗಿ ಭೂಮಿಯ ವಾತಾವರಣವು ಬೆಚ್ಚಗಿರುತ್ತದೆ ಮತ್ತು ಜೀವಿಗಳಿಗೆ ವಾಸಿಸಲು ಅನುಕೂಲಕರವಾಗಿರುತ್ತದೆ. ಆದರೆ, ವಾತಾವರಣದಲ್ಲಿನ ಹಸಿರುಮನೆ ಅನಿಲಗಳ ಪ್ರಮಾಣದ ಹೆಚ್ಚಳದ ಪರಿಣಾಮದಾಗಿ ಭೂಮಿಯ ವಾತಾವರಣದ ಸರಾಸರಿ ಉಷ್ಣತೆಯು ನಿಧಾನವಾಗಿ ಏರಿಕೆಯಾಗುತ್ತಿದೆ. ಈ ವಿದ್ಯಮಾನವನ್ನು ಹಸಿರುಮನೆ ಪರಿಣಾಮ ಎನ್ನುವರು.
9. ಜಾಗತಿಕ ತಾಪಮಾನದ ಏರಿಕೆಯ ಕುರಿತು ನಿಮ್ಮ ತರಗತಿಯಲ್ಲಿ ಮಾತನಾಡಲು ಸಂಕ್ಷಿಪ್ತ ಭಾಷಣವನ್ನು ಸಿದ್ಧಪಡಿಸಿ,
ಉತ್ತರ: ಜಾಗತಿಕ ತಾಪಮಾನವು, ಭೂಮಿಯ ಮೇಲ್ಮೈನ ಸರಾಸರಿ ತಾಪದಲ್ಲಿನ ಹೆಚ್ಚಳವಾಗಿದೆ. ವಾತಾವರಣದಲ್ಲಿ ಹಸಿರುಮನೆ ಅನಿಲಗಳ ಪ್ರಮಾಣದಲ್ಲಿನ ಹೆಚ್ಚಳದ ಪರಿಣಾಮವಾಗಿ ಇದು ಉಂಟಾಗುತ್ತದೆ, ಹಸಿರುಮನೆ ಅನಿಲಗಳು ಕಾರ್ಬನ್ ಡೈಆಕ್ಸಿಡ್, ಮೀಥೇನ್, ಮತ್ತು ನೀರಾವಿಗಳನ್ನು ಒಳಗೊಂಡಿದೆ. ಸೂರ್ಯನ ವಿಕಿರಣಗಳು ಭೂಮಿಯನ್ನು ತಲುಪಿದಾಗ, ಕೆಲವು ವಿಕಿರಣಗಳು ಭೂಮಿಯಿಂದ ಹೀರಲ್ಪಡುತ್ತದೆ ಮತ್ತು ಮರಳಿ: ವಾತಾವರಣಕ್ಕೆ ವಿಸರ್ಜಿಸಲ್ಪಡುತ್ತದೆ. ಈ ವಿಕಿರಣಗಳನ್ನು ವಾತಾವರಣದಲ್ಲಿನ ಹಸಿರುಮನೆ ಅನಿಲಗಳು, ಪ್ರಮುಖವಾಗಿ CO2, ಶಾಖವನ್ನು ಸೆರೆಹಿಡಿಯುತ್ತವೆ ಮತ್ತು ಅದು ವ್ಯೋಮಕ್ಕೆ ಹಿಂದಿರುಗದಂತೆ ತಡೆಯುತ್ತದೆ. ಇದರಿಂದಾಗಿ ಭೂಮಿಯ ವಾತಾವರಣದ ಬೆಚ್ಚಗಿರುತ್ತದೆ ಮತ್ತು ಜೀವಿಗಳಿಗೆ ವಾಸಿಸಲು ಅನುಕೂಲಕರವಾಗಿರುತ್ತದೆ. ಆದರೆ, ವಾತಾವರಣದಲ್ಲಿನ ಹಸಿರುಮನೆ ಅನಿಲಗಳ ಪ್ರಮಾಣದ ಹೆಚ್ಚಳದ ಪರಿಣಾಮವಾಗಿ ಭೂಮಿಯ ವಾತಾವರಣದ ಸರಾಸರಿ ಉಷ್ಣತೆಯು ನಿಧಾನವಾಗಿ ಏರಿಕೆಯಾಗುತ್ತಿದೆ, ಈ ವಿದ್ಯಮಾನವನ್ನು ಹಸಿರುವನೆ ಪರಿಣಾಮ ಎನ್ನುವರು.
10. ತಾಜ್ ಮಹಲ್ ನ ಸೌಂದರ್ಯಕ್ಕೆ ಇರುವ ಅಪಾಯವನ್ನು ವಿವರಿಸಿ
ಉತ್ತರ: ಆಗ್ರಾ ಮತ್ತು ಅದರ ಸುತ್ತಲಿನ ಪ್ರದೇಶದಲ್ಲಿರುವ ಕೈಗಾರಿಕೆಗಳಾದ ರಬ್ಬರ್ ಸಂಸ್ಕರಣೆ, ಆಟೋಮೊಬೈಲ್, ರಾಸಾಯನಿಕಗಳು ಮತ್ತು ವಿಶೇಷವಾಗಿ ಮಥುರಾ ಪೆಟ್ರೋಲಿಯಂ ಸಂಸ್ಕರಣಾ ಘಟಕ, ಸಲ್ಪರ್ ಡೈ ಆಕ್ಸೈಡ್ ಮತ್ತು ನೈಟ್ರೋಜನ್ ಡೈ ಆಕ್ಸೈಡ್ ಗಳಂತಹ ಮಾಲಿನ್ಯಕಾರಕಗಳ ಉತ್ಪತ್ತಿಗೆ ಕಾರಣವಾಗಿದೆ. ಈ ಅನಿಲಗಳು ವಾತಾವರಣದಲ್ಲಿನ ನೀರಾವಿಯೊಂದಿಗೆ ವರ್ತಿಸಿ ನೈಟ್ರಿಕ್ ಆಮ್ಲವನು ಉಂಟುಮಾಡುತ್ತದೆ. ಈ ಆಮ್ಲಗಳು ಮಳೆಯೊಂದಿಗೆ ಸೇರಿಕೊಂಡು ಭೂಮಿಯ ಮೇಲೆ ಸುರಿಯುತ್ತದೆ, ಇದನ್ನು ಅಮ್ಲ ಮಳೆ ಎನ್ನುವರು ಆಮ್ಲ ಮಳೆಯ ಸ್ಮಾರಕದ ಅಮೃತ ಶಿಲೆಯನ್ನು ಸಂಕ್ಷಾರಗೊಳಿಸುತ್ತದೆ. ಈ ವಿದ್ಯಮಾನವನ್ನು ಮಾರ್ಬಲ್ ಕ್ಯಾನ್ಸರ್ ಎಂದೂ ಕರೆಯುತ್ತಾರೆ. ಮಥುರಾ ಪೆಟ್ರೋಲಿಯಂ ಸಂಸ್ಕರಣಾಗಾರದಿಂದ ಹೊರಸೂಸುತ್ತಿರುವ ಕಾರ್ಬನ್ ಮಸಿಯಂತಹ ನಿಲಂಬಿತ ಕಣಗಳು ಅದ್ಭುತಶಿಲೆಯ ಹಳದಿ ಬಣ್ಣಕ್ಕೆ ಕರಣವಾಗಿದೆ.
11. ಜಲಜೀವಿಗಳ ಬದುಕುಳಿಯುವಿಕೆಯ ಮೇಲೆ ನೀರಿನಲ್ಲಿನ ಪೋಷಕಾಂಶಗಳ ಹೆಚ್ಚಳದ ದುಷ್ಪರಿಣಾಮ ಬೀರುತ್ತದೆ, ಏಕೆ ?
ಉತ್ತರ: ನೀರಿನಲ್ಲಿನ ಪೋಷಕಾಂಶಗಳ ಹೆಚ್ಚಳವು ನೀರಿನಲ್ಲಿ ಶಿಲೀಂದ್ರಗಳ ಅತಿಯಾದ ಹೆಚ್ಚಳಕ್ಕೆ ಕರಣವಾಗುತ್ತದೆ. ಈ ಶಿಲೀಂದ್ರಗಳು ಸತ್ತಾಗ, ಅವು ನೀರಿನಲ್ಲಿನ ಕೊಳೆತಿನಿಗಳಿಗೆ ಆಹಾರವಾಗುತ್ತವೆ. ಈ ಪ್ರಕ್ರಿಯೆಯಲ್ಲಿ, ನೀರಿನಲ್ಲಿ ವಿಲೀನಗೊಂಡಿರುವ ಆಮ್ಲಜನಕವು ಅತಿ ಹೆಚ್ಚು ಹೀರಲ್ಪಡುತ್ತದೆ. ಇದರಿಂದಾಗಿ, ನೀರಿನಲ್ಲಿ ವಿಲೀನಗೊಂಡಿರುವ ಆಮ್ಲಜನಕದ ಪ್ರಮಾಣವು ಕಡಿಮೆಯಾಗುತ್ತದೆ, ಪರಿಣಾಮವಾಗಿ, ನೀರಿನಲ್ಲಿನ ಮೀನು ಮುಂತಾದ ಜಲಚರ ಜೀವಿಗಳು ನಾಶವಾಗುತ್ತದೆ.
ಹೆಚ್ಚುವರಿ ಪ್ರಶ್ನೆಗಳು:
1. ಪ್ರಮುಖ ವಾಯುಮುಲಿನಕಾರಿಗಳನ್ನು ಹೆಸರಿಸಿ,
ಉತ್ತರ: ಕ್ಲೋರೋಫ್ಲೋರೋಕಾರ್ಬನ್, ಕಾರ್ಬನ್ ಮಾನಾಕ್ಸೈಡ್, ನೈಟ್ರೋಜನ್ ಆಕ್ಸೈಡ್ ಗಳು, ಕಾರ್ಬನ್ ಡೈಆಕ್ಸೆಡ್, ಮೀಥೇನ್ ಮತ್ತು ಸಲ್ಫರ್ ಡೈ ಆಕ್ಸೈಡ್ ಗಳು ಪ್ರಮುಖ ವಾಯುಮಾಲಿನಕಾರಿಗಳಾಗಿದೆ.
2. ಪ್ರಮುಖ ಜಲಮಲಿನಕಾರಿಗಳನ್ನು ಹೆಸರಿಸಿ
ಉತ್ತರ: ಚರಂಡಿರೊಚ್ಚು, ಕೃಷಿಯಲ್ಲಿ ಬಳಸುವ ರಾಸಾಯನಿಕಗಳು ಮತ್ತು ಕೈಗಾರಿಕಾ ತ್ಯಾಜ್ಯಗಳು
3. ಗಾಳಿಯು ಹೇಗೆ ಮಲಿನಗೊಳ್ಳುತ್ತದೆ ವಿವರಿಸಿ
ಉತ್ತರ; ಗಾಳಿಯನ್ನು ಕಲುಷಿತಗೊಳಿಸುವ ವಸ್ತುಗಳನ್ನು ವಾಯು ಮಲಿನಕಾರಿಗಳು ಎಂದು ಕರೆಯುತ್ತಾರೆ, ಕೆಲವೊಮ್ಮೆ, ಇಂತಹ ವಸ್ತುಗಳು ಕಾಡಿನ ಬೆಂಕಿ ಅಥವಾ ಜ್ವಾಲಾಮುಖಿ ಸ್ಫೋಟದಿಂದ ಉಂಟಾಗುವ ಹೊಗೆ ಮತ್ತು ಧೂಳಿನ೦ತಹ ನೈಸರ್ಗಿಕ ಆಕರಗಳಿಂದ ಬರಬಹುದು. ಕೆಲವು ಮಾನವ ಚಟುವಟಿಕೆಗಳಿಂದ ಮಲಿನಕಾರಿಗಳು ವಾತಾವರಣಕ್ಕೆ ಸೇರುತ್ತದೆ. ಕಾರ್ಖಾನೆಗಳು, ವಿದ್ಯುತ್ ಸ್ಥಾವರಗಳು, ವಾಹನಗಳ ನಿಷ್ಕಾಸ ಅನಿಲ ಹಾಗೂ ಸೌದೆ ಮತ್ತು ಬೆರಣಿಗಳ ಉರಿಸುವಿಕೆ ಇವು ವಾಯುಮಲಿನಕಾರಿಗಳ ಆಕರಗಳಾಗಿದೆ. ಇವುಗಳು ವಾತಾವರಣವನ್ನು ಸೇರುವುದರಿಂದ ಗಾಳಿಯು ಮಲಿನಗೊಳ್ಳುತ್ತದೆ,
4. ವಾಯುಮಾಲಿನ್ಯದಿಂದ ಉಂಟಾಗುವ ದುಷ್ಪರಿಣಾಮಗಳನ್ನು ಪಟ್ಟಿ ಮಾಡಿ,
1) ಆಕ್ಸಿಜನ್ ಅನ್ನು ಸಾಗಿಸುವ ರಕ್ತದ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ.
2) ಉಸಿರಾಟದ ತೊಂದರೆಗಳಾದ ಅಸ್ತಮಾ, ಕೆಮ್ಮು ಮತ್ತು ಮಕ್ಕಳಲ್ಲಿ ಉಬ್ಬಸವನ್ನು ಉಂಟುಮಾಡುತ್ತದೆ,
3) ಉಸಿರಾಟದ ತೊಂದರೆಗಳನ್ನು ಉಂಟು ಮಾಡುವುದರ ಜೊತೆಗೆ ಶ್ವಾಸಕೋಶದ ಶಾಶ್ವತ ಹಾನಿಗೂ ಕಾರಣವಾಗುತ್ತದೆ.
4) ವಾತಾವರಣದ ಓಝೋನ್ ಪದರಕ್ಕೆ ಹಾನಿಯುಂಟುಮಾಡುತ್ತದೆ.
5) ಗೋಚರತೆಯನ್ನು ಕಡಿಮೆ ಮಾಡುತ್ತದೆ.
5. ಜಾಗತಿಕ ತಾಪ ಏರಿಕೆಯಿಂದ ಉಂಟಾಗಬಹುದಾದ ಪರಿಣಾಮಗಳನ್ನು ತಿಳಿಸಿ,
ಉತ್ತರ: ಜಾಗತಿಕ ತಾಪ ಏರಿಕೆಯು ಇದ್ದಕ್ಕಿದ್ದಂತೆ ಸಮುದ್ರ ಮಟ್ಟವು ಏರಿಕೆಯಾಗಲು ಕಾರಣವಾಗಬಹುದು, ಈಗಾಗಲೇ ಕರಾವಳಿ ಪ್ರದೇಶದ ಬಹುತೇಕ ಸ್ಥಳಗಳು ಪ್ರವಾಹ ಪೀಡಿತವಾಗಿದೆ. ಮಳೆಯ ಮಾದರಿಗಳು, ಕೃಷಿಪದ್ಧತಿಗಳು, ಅರಣ್ಯಗಳು, ಸಸ್ಯಗಳು ಮುತ್ತು ಪ್ರಾಣಿಗಳ ಮೇಲೆ ಜಾಗತಿಕ ತಾಪ ಏರಿಕೆಯು ವ್ಯಾಪಕ ಪರಿಣಾಮಗಳನ್ನು ಉಂಟುಮಾಡಬಹುದು, ಏಷ್ಯಾದ ಬಹುಪಾಲು ಜನರು ಜಾಗತಿಕ ತಾಪಏರಿಕೆ ಬೆದರಿಕೆಯಿರುವ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ಹವಾಮಾನ ಬದಲಾವಣೆಗೆ ಸಂಬಂಧಿಸಿದ ಇತ್ತೀಚಿನ ವರದಿಯು ಹಸಿರು ಮನೆ ಅನಿಲಗಳು ಈಗಿರುವ ಮಟ್ಟದಲ್ಲೇ ನಿಯಂತ್ರಿಸಲು ಒತ್ತಾಯಿಸುತ್ತದೆ. ಇಲ್ಲದಿದ್ದರೆ ಈ ಶತಮಾನದ ಅಂತ್ಯದ ವೇಳೆಗೆ ವಾತಾವರಣದ ತಾಪಮಾನದ 2 ಡಿಗ್ರಿ ಸೆಲ್ಸಿಯಸ್ ಗಿಂತ ಹೆಚ್ಚು ಏರಿಕೆಯಾಗಬಹುದು ಇದನ್ನು, ಅಪಾಯಕಾರಿ ಮಟ್ಟ ಎಂದು ಪರಿಗಣಿಸಲಾಗುತ್ತದೆ.
0 Comments