ಕೃತಿಕಾರರ ಪರಿಚಯ :
ಎ.ಪಿ.ಜೆ. ಅಬ್ದುಲ್ ಕಲಾಂ
? ಎ.ಪಿ.ಜೆ. ಅಬ್ದುಲ್ ಕಲಾಂ ಅವರು ತಮಿಳುನಾಡಿನ ರಾಮೇಶ್ವರದಲ್ಲಿ ದಿನಾಂಕ 15 ನೇ ಅಕ್ಟೋಬರ್ 1931 ರಂದು ಜನಿಸಿದರು. ಇವರ ಪೂರ್ಣ ಹೆಸರು ಅವುಲ್ ಫಕೀರ್ ಜೈನುಲಬ್ದೀನ್ ಅಬ್ದುಲ್ ಕಲಾಂ.
? ಭಾರತದ 11 ನೇ ರಾಷ್ಟ್ರಪತಿಯಾಗಿ 22ನೇ ಜುಲೈ 2002 ರಂದು ಆಯ್ಕೆಯಾದರು. ಸರಳತೆ,ಪ್ರಾಮಾಣಿಕತೆ ಮತ್ತು ಮೇಧಾವಿತನದಿಂದ ನಡೆದುಕೊಂಡು ರಾಷ್ಟ್ರಪತಿ ಹುದ್ದೆಯ ಘನತೆಯನ್ನು ಹೆಚ್ಚಿಸಿದರು.
? ಲೇಖಕರಾಗಿದ್ದ ಕಲಾಂ ಅವರು ವಿಂಗ್ಸ್ ಆಫ್ ಫೈರ್ (ಆತ್ಮಕಥೆ), ಇಂಡಿಯಾ ಮೈ ಡ್ರೀಮ್ಇಂಡಿಯಾ 2020, ಮೈ ಜರ್ನಿ, ಟಾರ್ಗೇಟ್ ತ್ರಿ ಬಿಲಿಯನ್, ಟರ್ನಿಂಗ್ ಪಾಯಿಂಟ್, ಇಗ್ನೈಟೆಡ್ ಮೈಂಡ್ಸ್, ದಿ ಲೈಫ್ ಟ್ರೀ ಮುಂತಾದ ಕೃತಿಗಳನ್ನು ಬರೆದಿದ್ದಾರೆ.
? ಕಲಾಂ ಅವರ ಸೇವೆಗೆ ಪದ್ಮಭೂಷಣ, ಪದ್ಮವಿಭೂಷಣ ಹಾಗೂ ದೇಶದ ಅತ್ಯುನ್ನತ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಸುಮಾರು 30 ವಿಶ್ವವಿದ್ಯಾನಿಲಯಗಳು ಕಲಾಂ ಅವರಿಗೆ ಗೌರವ ಡಾಕ್ಟರೇಟ್ ನೀಡಿವೆ.
? ಪ್ರಸ್ತುತ ಗದ್ಯಭಾಗವನ್ನು ಎ.ಪಿ.ಜೆ ಅಬ್ದುಲ್ ಕಲಾಂ ಅವರ ಪ್ರಜ್ವಲಿತ ದೀಪಗಳು ಪುಸ್ತಕದಿಂದ ಆಯ್ದುಕೊಳ್ಳಲಾಗಿದೆ.
ಅನುವಾದಕರ ಪರಿಚಯ :
? ಶ್ರೀ ಜಯಕೃಷ್ಣ ಟಿ. ಎನ್. ಅವರು ಪತ್ರಕರ್ತರಾಗಿದ್ದು, ಡೇಲ್ ಕಾರ್ನಗಿ ಅವರ ಚಿಂತೆ ಬಿಡಿ: ಹೊಸ ಬದುಕು ಆರಂಭಿಸಿ, ಸಮರ್ಥ ನಾಯಕ ನೀವೂ ಆಗಬಲ್ಲಿರಿ! ಹಾಗೂ ನೆಪೋಲಿಯನ್ ಹಿಲ್ ಅವರ ಸಿರಿತನಕ್ಕೆ ಹದಿಮೂರೇ ಹೆಜ್ಜೆ ಮುಂತಾದ ಅನುವಾದಿತ ಕೃತಿಗಳ ಮೂಲಕ ಕನ್ನಡಿಗರಿಗೆ ಚಿರಪರಿಚಿತರಾಗಿದ್ದಾರೆ.
ಪ್ರಾಚೀನ ಭಾರತವನ್ನು ಆಳಿದ ಮೌರ್ಯ ಸಾಮ್ರಾಜ್ಯದ ಚಕ್ರವರ್ತಿ. ಅಶೋಕನು ಸದಾ ಯುದ್ಧದಲ್ಲಿ ತೊಡಗಿರುತ್ತಿದ್ದನು. ಈತನು ಕಳಿಂಗದ ಮೇಲೆ ನಡೆಸಿದ ಯುದ್ಧವೇ ಕೊನೆಯದಾಯಿತು. ಕಳಿಂಗ ಯುದ್ಧದ ನಂತರ ಅಶೋಕನು ನಗರ ಪ್ರದಕ್ಷಿಣೆಗೆಂದು ಹೊರಟು ಎಲ್ಲೆಲ್ಲೂ ಸುಟ್ಟು ಹೋದ ಮನೆಗಳನ್ನು, ಚೆಲ್ಲಾಪಿಲ್ಲಿಯಾಗಿ ಬಿದ್ದ ಹೆಣಗಳನ್ನು, ದುಃಖತಪ್ತರನ್ನು ನೋಡಿದನು. ಇದರಿಂದ ಅವನ ಮನಸ್ಸು ಮರುಗಿತು. ಕೊನೆಗೆ ಯುದ್ಧವನ್ನು ತ್ಯಜಿಸಿ, ಬೌದ್ಧಧರ್ಮವನ್ನು ಸ್ವೀಕರಿಸುವ ಮೂಲಕ ಶಾಂತಿ ಪ್ರಿಯನಾದನು. ಆಲ್ಬರ್ಟ್ ಐನ್ಸ್ಟೀನ್ (18791955): ಜಗತ್ತಿನ ಶ್ರೇಷ್ಠ ವಿಜ್ಞಾನಿಯಾದ ಈತ ಜರ್ಮನಿಯ ಉಲ್ಮ್ ಎಂಬಲ್ಲಿ ಜನಿಸಿದನು. ಪರಮಾಣು ಬಾಂಬಿನ ಸಂಶೋಧನೆಗೆ ಮೂಲಕಾರಣವಾದ ಸಾಪೇಕ್ಷತಾ ಸಿದ್ಧಾಂತವನ್ನು ಕಂಡುಹಿಡಿದು ಭೌತಶಾಸ್ತ್ರದಲ್ಲಿ ಕ್ರಾಂತಿಕಾರಕ ಅಲೆಯನ್ನು ಎಬ್ಬಿಸಿದನು. ಎರಡನೇ ಜಾಗತಿಕ ಯುದ್ಧದಲ್ಲಿ ಪರಮಾಣು ಬಾಂಬು ಉಂಟುಮಾಡಿದ ಅನಾಹುತ ಕಂಡು ದುಃಖತಪ್ತರಾಗಿ ತಮ್ಮ ಜೀವಿತದ ಕೊನೆಯವರೆಗೆ ಶಾಂತಿ ಸ್ಥಾಪನೆಗಾಗಿ ಶ್ರಮಿಸತೊಡಗಿದರು.
ಅಬ್ರಹಾಂ ಲಿಂಕನ್ (1809-1865): ಅಮೇರಿಕಾದಲ್ಲಿ ಶಾಪವಾಗಿದ್ದ ಗುಲಾಮಗಿರಿಯನ್ನು ವರ್ಣಭೇದ ನೀತಿಯನ್ನು ತೊಲಗಿಸಲು ಹೋರಾಡಿದ ಧೀರೋದ್ಧಾತ ನಾಯಕ. ಸಾಮಾನ್ಯ ಕುಟುಂಬದಲ್ಲಿ ಜನಿಸಿ, ಗೆಳೆಯರಿಂದ ಪುಸ್ತಕಗಳನ್ನು ಎರವಲಾಗಿ ಪಡೆದು, ಬೀದಿ ದೀಪದ ಬೆಳಕಿನಲ್ಲಿ ಓದಿದವರು. ಇವರು ಅಮೇರಿಕಾದ ರಿಪಬ್ಲಿಕನ್ ಚಳುವಳಿಯಲ್ಲಿ ಧುಮುಕಿ ಅಮೇರಿಕಾದ ಅಧ್ಯಕ್ಷರಾಗಿ ಆಯ್ಕೆಯಾದರು. ಗುಲಾಮಗಿರಿಯನ್ನು ಕಿತ್ತೊಗೆದ ಇವರನ್ನು ಹತ್ಯೆ ಮಾಡಲಾಯಿತು. ಖಲೀಫ ಉಮರ್- ಪೈಗಂಬರ್ ಬಳಿಕ ನೇಮಕಗೊಂಡ ಅರಬ್ಬರ ಆಧ್ಯಾತ್ಮಿಕ ಮತ್ತು ರಾಜಕೀಯ ನಾಯಕ. ಈತನನ್ನು ಖಲೀಫ ಎಂದೂ ಕರೆಯಲಾಗುತ್ತದೆ.
1. ಪದಗಳ ಅರ್ಥ ತಿಳಿಯಿರಿ :
ಆಘಾತ - ಪೆಟ್ಟು; ಕೇಡು.
ಆರಾಧಿಸು - ಪೂಜಿಸು; ಸ್ಮರಿಸು.
ಆಹುತಿ - ಬಲಿ
ಉದ್ಯುಕ್ತ - ಪ್ರಯತ್ನಿಸು; ಸಿದ್ಧವಾಗು.
ಕುಬ್ಜ - ಕುಳ್ಳ; ಸಣ್ಣವ.
ಕೃತಜ್ಞತೆ - ಉಪಕಾರ ಸ್ಮರಣೆ
ಕೃತ್ಯ - ಕೆಲಸ
ದಿಗಂತ - ಕ್ಷಿತಿಜ
ದಿರಿಸು - ಉಡುಪು
ದಿಗ್ವಿಜಯ - ರಾಜ್ಯಗಳನ್ನು ಜಯಿಸುವುದು.
ಧರಣಿ - ಭೂಮಿ
ನಿರ್ದಯಿ - ಕ್ರೂರಿ; ದಯೆ ಇಲ್ಲದವ.
ನೀರವತೆ - ಮೌನ; ನಿಶ್ಯಬ್ದ.
ಪವಾಡಸದೃಶ - ಆಶ್ಚರ್ಯಕರ ರೀತಿಯಲ್ಲಿ
ಬೀಭತ್ಸ - ಜುಗುಪ್ಸೆ; ಅಸಹ್ಯ.
ಭಾಸವಾಗು - ಕಾಣು; ತೋರು.
ಮರುಭೂಮಿ - ಮರಳು ತುಂಬಿದ ಭೂಮಿ.
ಮೇಧಾವಿ - ಬುದ್ಧಿವಂತ.
ವಿಭಜಿತ - ಬೇರೆಯಾದ; ವಿಂಗಡಿಸಿದ.
ಅ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.
1. ಕಲಾಂ ಅವರು ಸಾಮಾನ್ಯವಾಗಿ ನಿತ್ಯ ಎಷ್ಟು ಗಂಟೆಗೆ ಮಲಗಿ, ಎಷ್ಟು ಗಂಟೆಗೆ ಏಳುತ್ತಿದ್ದರು?
ಕಲಾಂ ಅವರು ಸಾಮಾನ್ಯವಾಗಿ ನಿತ್ಯ ರಾತ್ರಿ ಒಂದು ಗಂಟೆಗೆ ಮಲಗಿ, ಬೆಳಗ್ಗೆ ಆರು ಗಂಟೆಗೆ ಏಳುತ್ತಿದ್ದರು.
2. ಕಲಾಂ ಅವರು ಕನಸಿನಲ್ಲಿ ಕಂಡ ಪ್ರದೇಶ ಯಾವುದು?
ಕಲಾಂ ಅವರು ಕನಸಿನಲ್ಲಿ ಕಂಡ ಪ್ರದೇಶ ಮರುಭೂಮಿ.
3. ಕಲಾಂ ಅವರು ಕನಸಿನಲ್ಲಿ ಕಂಡ ಐವರು ಮಹಾಪುರುಷರು ಯಾರು?
ಕಲಾಂ ಅವರು ಕನಸಿನಲ್ಲಿ ಕಂಡ ಐವರು ಮಹಾಪುರುಷರು ಮಹಾತ್ಮಾ ಗಾಂಧಿ, ಆಲ್ಬರ್ಟ್ ಐನ್ಸ್ಟೀನ್, ಚಕ್ರವರ್ತಿ ಅಶೋಕ, ಅಬ್ರಹಾಂ ಲಿಂಕನ್ ಮತ್ತು ಖಲೀಫ ಉಮರ್
4. ಅಶೋಕನು ಪ್ರತಿಪಾದಿಸಿದ ಧರ್ಮ ಯಾವುದು?
ಅಶೋಕನು ಪ್ರತಿಪಾದಿಸಿದ ಧರ್ಮ ಅಹಿಂಸಾ ಧರ್ಮ.
5. ಅಶೋಕನ ಪ್ರಕಾರ ನಿಜವಾದ ಗೆಲುವು ಯಾವುದು?
ಅಶೋಕನ ಪ್ರಕಾರ ಶಾಂತಿ ನೆಮ್ಮದಿಯ ಸಾಮ್ರಾಜ್ಯ ನಿರ್ಮಾಣವೇ ನಿಜವಾದ ಗೆಲುವು.
ಆ) ಕೆಳಗಿನ ಪ್ರಶ್ನೆಗಳಿಗೆ ಮೂರು-ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ.
1. ಕಲಾಂ ಅವರು ರಾಂಚಿಯಿಂದ ಬೊಕಾರೋಗೆ ವಿಮಾನದಲ್ಲಿ ತೆರಳುವಾಗ ಯಾವ ದುರ್ಘಟನೆ ನಡೆಯಿತು?
ಕಲಾಂ ಅವರು ರಾಂಚಿಯಿಂದ ಬೊಕಾರೋಗೆ ವಿಮಾನದಲ್ಲಿ ತೆರಳುವಾಗ ಅವರನ್ನು ಕರೆದೊಯ್ಯುತ್ತಿದ್ದ ಹೆಲಿಕಾಪ್ಟರ್ ಇನ್ನೇನು ಭೂಸ್ಪರ್ಶ ಮಾಡಬೇಕೆನ್ನುವಷ್ಟರಲ್ಲಿ ಭಾರೀ ಸದ್ದಿನೊಂದಿಗೆ ನೆಲಕ್ಕಪ್ಪಳಿಸಿತು. ಅದರ ಎಂಜಿನ್ನಲ್ಲಿ ಏನೋ ದೋಷ ಕಾಣಿಸಿಕೊಂಡಿತ್ತು.
2. ಕಲಾಂ ಅವರಿಗೆ ನಿದ್ದೆಯಲ್ಲಿ ಯಾವ ಯಾವ ಯೋಚನೆಗಳು ಸುಳಿದಾಡಿದವು?
ಕಲಾಂ ಅವರಿಗೆ ನಿದ್ದೆಯಲ್ಲಿ ಆ ದೇವರ ಸೃಷ್ಟಿಯಲ್ಲಿ ಅತ್ಯಂತ ಶ್ರೇಷ್ಠವಾದುದೆನ್ನಲಾದ ಮಾನವ ಕುಲ ಏಕೆ ಇಷ್ಟೊಂದು ವಿಭಜಿತವಾಗಿದೆ? ಇಷ್ಟೊಂದು ಹಿಂಸಾಚಾರಗಳಲ್ಲಿ ಏಕೆ ತೊಡಗಿಸಿಕೊಳ್ಳುತ್ತಿದೆ?.....ಹೀಗೆ ಏನೇನೋ ಯೋಚನೆಗಳು ಸುಳಿದಾಡಿದವು.
3. ಕಲಾಂ ಅವರು ಕನಸಿನಲ್ಲಿ ಕಂಡ ಪ್ರದೇಶ ಯಾವ ರೀತಿ ಇತ್ತು?
ಕಲಾಂ ಅವರು ಕನಸಿನಲ್ಲಿ ಮರುಭೂಮಿಯನ್ನು ಕಂಡರು. ಅವರ ಸುತ್ತ ಎತ್ತ ನೋಡಿದರೂ ಬರೀ ಮರಳು! ಮೈಲಿ ಮೈಲಿಗಟ್ಟಲೆ ಮರಳು. ದೂರ ದಿಗಂತದವರೆಗೂ! ಆಗಸದಲ್ಲಿ ಪೂರ್ಣಚಂದ್ರ, ಮರಳುಗಾಡಿನುದ್ದಕ್ಕೂ ಹಾಲು ಬೆಳದಿಂಗಳು.
4. ಅಶೋಕನು ನಡೆಸಿದ ಎರಡು ಬಗೆಯ ಬದುಕು ಯಾವುವು?
ಅಶೋಕನು ಎರಡು ಬಗೆಯ ಬದುಕು ನಡೆಸಿದ. ಒಂದು ನಿರ್ದಯಿ ಆಕ್ರಮಣಕಾರನಾಗಿ ಹಾಗೂ ಇನ್ನೊಂದು ದಯಾಮಯಿ ಆಡಳಿತಗಾರನಾಗಿ.
5. ಕಳಿಂಗ ಯುದ್ಧದ ಪರಿಣಾಮವೇನು?
ಆ ಕಳಿಂಗ ಸಮರವು ಕಡಿಮೆಯೆಂದರೂ ಮೂರು ಲಕ್ಷ ಜನರ ಬಲಿ ತೆಗೆದುಕೊಂಡಿತ್ತು. ಅಷ್ಟೇ ಸಂಖ್ಯೆಯ ಜನ ತಮ್ಮ ಅಂಗಾಂಗಗಳನ್ನು ಕಳೆದುಕೊಂಡಿದ್ದರು. ಎಲ್ಲೆಲ್ಲೂ ರಕ್ತದ ಕೋಡಿ! ತನ್ನ ಕೃತ್ಯವನ್ನು ನೆನೆನೆನೆದು ಚಕ್ರವರ್ತಿ ಅಶೋಕ ಅಸಾಧ್ಯ ಯಾತನೆಪಟ್ಟ. ಇನ್ನು ಮುಂದೆ ಯುದ್ಧ ಮಾಡುವುದಿಲ್ಲ ಎಂದು ಪಣ ತೊಟ್ಟ. ಅಂದಿನಿಂದ ಅಹಿಂಸಾ ಧರ್ಮ ಉದಯವಾಯಿತು. ಮಾನವ ಮಾನವನ ನಡುವೆ ಪ್ರೀತಿಯ ಮಹತ್ವವನ್ನು ಸಾರಲು ಮುಂದಾದನು.
6. ಕಲಾಂ ಅವರಿಗೆ ಕನಸಿನಲ್ಲಿ ಅಶೋಕನು ಕಂಡದ್ದು ಹೇಗೆ?
ಘನಗಾಂಭೀರ್ಯದ ಸಾಕಾರಮೂರ್ತಿ ಚಕ್ರವರ್ತಿ ಅಶೋಕನ ಪಕ್ಕದಲ್ಲೇ ಕಲಾಂ ಅವರು ನಿಂತಿದ್ದರು. ಅವನೆದುರು ಕಲಾಂ ತೀರಾ ಕುಬ್ಜನಾದಂತೆ ಅನ್ನಿಸಿತು.
7. ಯುದ್ಧ ಹಾಗೂ ಹತ್ಯೆಯ ಬಗೆಗೆ ಕಲಾಂ ಅವರನ್ನು ಕಾಡಿದ ಪ್ರಶ್ನೆಗಳಾವುವು?
ಕಲಾಂ ಅವರು ನಿಂತಲ್ಲೇ ಒಂದು ಕ್ಷಣ ಗಂಭೀರವಾಗಿ ಯೋಚಿಸಿದರು. ಆ ಕಳಿಂಗ ಯುದ್ಧವಾದರೂ ಯಾಕಾಯಿತು? ಮಹಾತ್ಮಾ ಗಾಂಧಿ, ಅಬ್ರಹಾಂ ಲಿಂಕನ್ ಮತ್ತು ಅವರಂಥ ಅನೇಕ ಮಹಾಪುರುಷರ ಹತ್ಯೆಯಾದರೂ ಯಾಕಾಯಿತು? ಆ ದೇವರು ತನ್ನ ಸೃಷ್ಠಿಯಲ್ಲಿ ಏನಾದರೂ ತಪ್ಪೆಸಗಿರುವನೇ? ಅಥವಾ ಎರಡನೇ ಸೃಷ್ಟಿಗಾಗಿ ಈ ಮಾನವ ಕುಲದ ನಾಶ ಅನಿವಾರ್ಯವೇ? ಇವು ಕಲಾಂ ಅವರಿಗೆ ಯುದ್ಧ ಹಾಗೂ ಹತ್ಯೆಯ ಬಗೆಗೆ ಕಾಡಿದ ಪ್ರಶ್ನೆಗಳು.
8. ಕಲಾಂ ಅವರ ಕನಸಿನಲ್ಲಿ ಅಶೋಕನು ಯಾವ ಸಂದೇಶ ನೀಡಿದನು?
ಕಲಾಂ ಅವರ ಕನಸ್ಸಿನಲ್ಲಿ ಅಶೋಕನು ಗೆಳೆಯರೇ, ಒಂದು ವಿಷಯವನ್ನಂತೂ ನಾನೀಗ ಚೆನ್ನಾಗಿ ಅರ್ಥ ಮಾಡಿಕೊಂಡಿರುವೆ. ಜಯ ಎಂಬುದು ಸಾವುನೋವು ಉಂಟುಮಾಡುವುದರಲ್ಲಿಲ್ಲ. ಶಾಂತಿ ನೆಮ್ಮದಿಯ ಸಾಮ್ರಾಜ್ಯ ನಿರ್ಮಾಣವೇ ನಿಜವಾದ ಗೆಲುವು ಎಂದು ಹೇಳುತ್ತಾನೆ.
9. ಕನಸಿನ ಬಗ್ಗೆ ಕಲಾಂ ಅವರ ಸಂದೇಶವೇನು?
ಕನಸುಗಳನ್ನು ಕಾಣಿರಿ, ಕನಸುಗಳು ಭೂತ, ಭವಿಷ್ಯ ಹಾಗೂ ವರ್ತಮಾನದ ಅನುಭವಗಳನ್ನು ಕಟ್ಟಿಕೊಡುತ್ತವೆ. ಜೊತೆಗೆ ನಮ್ಮ ಬದುಕಿಗೆ ಸ್ಫೂರ್ತಿಯ ಸಂದೇಶಗಳಾಗಿರುತ್ತವೆ ಎಂದು ಕನಸ್ಸಿನ ಬಗ್ಗೆ ಕಲಾಂ ಅವರು ನೀಡುವ ಸಂದೇಶವಾಗಿದೆ.
ಇ) ಕೆಳಗಿನ ಪ್ರಶ್ನೆಗಳಿಗೆ ಏಳು-ಎಂಟು ವಾಕ್ಯಗಳಲ್ಲಿ ಉತ್ತರಿಸಿರಿ.
1. ಅಶೋಕನಲ್ಲಿ ಅಹಿಂಸಾ ಧರ್ಮ ಹೇಗೆ ಉದಯಿಸಿತು?
ಅಶೋಕ ಕಳಿಂಗ ಯುದ್ಧದಲ್ಲಿ ಉಂಟಾದ ಸಾವು ನೋವುಗಳಿಂದ ಆತ ಚಿಂತಿತನಾಗಿದ್ದನು. ಆ ಕಳಿಂಗ ಸಮರವು ಕಡಿಮೆಯೆಂದರೂ ಮೂರು ಲಕ್ಷ ಜನರ ಬಲಿ ತೆಗೆದುಕೊಂಡಿತ್ತು. ಅಷ್ಟೇ ಸಂಖ್ಯೆಯ ಜನ ತಮ್ಮ ಅಂಗಾಂಗಗಳನ್ನು ಕಳೆದುಕೊಂಡಿದ್ದರು. ಚಕ್ರವರ್ತಿ ಅಶೋಕ ಹಾಗೆಯೇ ಕುಳಿತು ಆಗಸದತ್ತ ನೋಟ ಬೀರಿದ. ಮಂದಪ್ರಕಾಶ ಬೀರುತ್ತಿದ್ದ ಪ್ರಶಾಂತ ಪೂರ್ಣಚಂದ್ರನನ್ನು ಕಂಡ. ತಾಯಿ ಧರಣಿಯ ಮೇಲೆ ದೇವರ ಕೃಪಾದೃಷ್ಟಿ ಹರಿಯುತ್ತಿದ್ದುದನ್ನು ಕಂಡ. ಕೆಳಗೆ ನೋಡಿದರೆ, ತಾನು ಸೃಷ್ಠಿಸಿದ ಬೀಭತ್ಸ ದೃಶ್ಯ! ಎಲ್ಲೆಲ್ಲೂ ರಕ್ತದ ಕೋಡಿ! ತನ್ನ ಕೃತ್ಯವನ್ನು ನೆನೆನೆನೆದು ಚಕ್ರವರ್ತಿ ಅಶೋಕ ಅಸಾಧ್ಯ ಯಾತನೆಪಟ್ಟ. ರಮ್ಯ ಮನೋಹರ ಮತ್ತು ಬೀಭತ್ಸ ದೃಶ್ಯಗಳ ಸಮಾಗಮದ ಆ ಕ್ಷಣದಲ್ಲಿ ಅಶೋಕನ ಕೃತ್ಯದ ಬಗ್ಗೆ ಸ್ವತಃ ನಿಸರ್ಗವೇ ಅಸಹನೆ ವ್ಯಕ್ತಪಡಿಸುತ್ತಿರುವಂತೆ ಕಂಡುಬಂದ ಆ ಕ್ಷಣದಲ್ಲಿ ಅಹಿಂಸಾ ಧರ್ಮದ ಉದಯವಾಯಿತು. ಚಕ್ರವರ್ತಿ ಅಶೋಕ ದೇವರ ಆದೇಶವನ್ನು ಶಿರಸಾವಹಿಸಿದ, ಅಹಿಂಸಾ ಪರಮೋ ಧರ್ಮಃ ಸಿದ್ಧಾಂತದ ಮೂಲಕ ಮಾನವ-ಮಾನವ ನಡುವಣ ಪ್ರೀತಿಯ ಮಹತ್ವವನ್ನು ಸಾರಲು ಉದ್ಯುಕ್ತನಾದನು. ಈ ರೀತಿ ಅಶೋಕನಲ್ಲಿ ಅಹಿಂಸಾ ಧರ್ಮ ಉದಯವಯಿತು.
2. ಕಲಾಂ ಅವರ ಕನಸಿನಲ್ಲಿ ಮಹಾತ್ಮಾ ಗಾಂಧೀಜಿ ಏನೆಂದು ಮಾತನಾಡಿದರು?
ಕಲಾಂ ಅವರ ಕನಸಿನಲ್ಲಿ ಮಹಾತ್ಮಾ ಗಾಂಧೀಜಿಯವರು ಈ ರೀತಿ ಮಾತನಾಡತೊಡಗಿದರು ಸ್ನೇಹಿತರೆ, ನಮಗೆ ಕೇಳಿಬರುತ್ತಿರುವ ದಿವ್ಯ ಸಂದೇಶವು ಆ ಸೃಷ್ಠಿಕರ್ತನದು. ಇಲ್ಲಿ ನೆರೆದ ನಾವೆಲ್ಲರೂ ಭೂಗ್ರಹಕ್ಕೆ ಸೇರಿದವರಾಗಿರುವುದರಿಂದ ಇಡೀ ಮಾನವ ಕುಲಕ್ಕೆ ನಾವು ಆ ಸಂದೇಶವನ್ನು ತಲುಪಿಸಬೇಕಾಗಿದೆ. ನಾನಾ ಜಾತಿ-ಜನಾಂಗ, ಮತ-ಧರ್ಮ ಹಾಗೂ ಭಾಷೆಗಳ ಜನರು ಶಾಂತಿ ನೆಮ್ಮದಿಯಿಂದ, ಏಳಿಗೆ ಸಾಧಿಸುತ್ತಾ ಹೇಗೆ ಬಾಳಬಹುದು ಎಂಬುದನ್ನು ನಾವು ತಿಳಿಸಿಕೊಡಬೇಕಾಗಿದೆ. ಆ ದೇವರು ನಮ್ಮೆಲ್ಲರಿಗೂ ವಿಶಿಷ್ಟವಾದುದೇನನ್ನೋ ದಯಪಾಲಿಸಿದ್ದಾನೆ. ಅದನ್ನು ನಾವು ನಮ್ಮ ಸತ್ಕಾರ್ಯಗಳು ಹಾಗೂ ಶ್ರಮದ ಮೂಲಕ ಮಾನವಕುಲಕ್ಕೆ ತಲುಪಿಸಿದ್ದೂ ಆಗಿದೆ. ಆದರೆ, ಅದು ಪರಿಣಾಮ ಬೀರಿದೆಯೇ? ಅದಕ್ಕಾಗಿ ಯಾವುದಾದರೂ ದಿವ್ಯ ಸಂದೇಶ ಅಥವಾ ತತ್ವ ಇದೆಯೇ? ದೈವಿಕ ಸೌಂದರ್ಯವು ಮಾನವನ ಹೃದಯವನ್ನು ಪ್ರವೇಶಿಸುವಂತಾಗಬೇಕು. ಇದು ಸಾಧ್ಯವೇ? ಎಂದು ಮಹಾತ್ಮ ಗಾಂಧೀಜಿಯವರು ಹೇಳಿದರು.
3. ಮಾನವನ ತನುಮನಗಳಲ್ಲಿ ಸುಖ ಸಂತೋಷ ಅರಳಲು ಏನು ಮಾಡಬೇಕು?
ಮಾನವನ ತನುಮನಗಳಲ್ಲಿ ಸುಖ ಸಂತೋಷ ಅರಳಲು ಉತ್ತಮ ಆಲೋಚನೆ ಮತ್ತು ಉತ್ತಮ ಕಾರ್ಯಗಳನ್ನು ನಡೆಸಬೇಕು. ಬದುಕಿಗೊಂದು ಗುರಿ, ಉದ್ದೇಶವಿರಬೇಕು. ಉತ್ತಮ ಕನಸುಗಳನ್ನು ಸಾಕಾರಗೊಳಿಸಬೇಕು. ಮೇಲಾಗಿ ಮಾನವ ಮಾನವ ನಡುವಣ ಪ್ರೀತಿ ಬೆಳೆಸಬೇಕು. ಜಾತಿ, ಮತ, ಧರ್ಮ, ಭಾಷೆಗಳ ಕಲಾಂ ಅವರ ಕನಸಿನಲ್ಲಿ ಮಹಾತ್ಮಾ ಗಾಂಧೀಜಿಯವರು ಈ ರೀತಿ ಮಾತನಾಡತೊಡಗಿದರು ಸ್ನೇಹಿತರೆ, ನಮಗೆ ಕೇಳಿಬರುತ್ತಿರುವ ದಿವ್ಯ ಸಂದೇಶವು ಆ ಸೃಷ್ಠಿಕರ್ತನದು. ಇಲ್ಲಿ ನೆರೆದ ನಾವೆಲ್ಲರೂ ಭೂಗ್ರಹಕ್ಕೆ ಸೇರಿದವರಾಗಿರುವುದರಿಂದ ಇಡೀ ಮಾನವ ಕುಲಕ್ಕೆ ನಾವು ಆ ಸಂದೇಶವನ್ನು ತಲುಪಿಸಬೇಕಾಗಿದೆ. ನಾನಾ ಜಾತಿ-ಜನಾಂಗ, ಮತ-ಧರ್ಮ ಹಾಗೂ ಭಾಷೆಗಳ ಜನರು ಶಾಂತಿ ನೆಮ್ಮದಿಯಿಂದ, ಏಳಿಗೆ ಸಾಧಿಸುತ್ತಾ ಹೇಗೆ ಬಾಳಬಹುದು ಎಂಬುದನ್ನು ನಾವು ತಿಳಿಸಿಕೊಡಬೇಕಾಗಿದೆ. ಆ ದೇವರು ನಮ್ಮೆಲ್ಲರಿಗೂ ವಿಶಿಷ್ಟವಾದುದೇನನ್ನೋ ದ ಸಂಕುಚಿತ ಮನೋಭಾವನೆಯಿಂದ ಹೊರಬಂದು ನಾವೆಲ್ಲ ಒಂದು ಎಂಬ ಭಾವನೆ ಹೊಂದಬೇಕು. ಆ ದೇವರ ದಿವ್ಯ ಸಂದೇಶವನ್ನು ಮಾನವನ ಹೃದಯದಲ್ಲಿ ನೆಲೆಸುವಂತಾದರೆ ಮಾನವನ ತನುಮನಗಳಲ್ಲಿ ಸುಖ ಸಂತೋಷ ಅರಳುತ್ತದೆ.
ಈ) ಸಂದರ್ಭದೊಡನೆ ವಿವರಿಸಿರಿ.
1. ನಾವು ನಿಜಕ್ಕೂ ಅದೃಷ್ಟ ಮಾಡಿರಬೇಕು!
ಈ ವಾಕ್ಯವನ್ನು ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಬರೆದಿರುವ ಪ್ರಜ್ವಲಿತ ದೀಪಗಳು ಎಂಬ ಕೃತಿಯಿಂದ ಆಯ್ದ. ಕನಸು ಮತ್ತು ಸಂದೇಶ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.
ಈ ಮಾತನ್ನು ಎ.ಪಿ.ಜೆ. ಅಬ್ದುಲ್ ಕಲಾಂರವರು ಹೇಳಿದ್ದಾರೆ. ಕಲಾಂ ಅವರು ರಾಂಚಿಯಿಂದ ಬೊಕಾರೋಗೆ ವಿಮಾನದಲ್ಲಿ ತೆರಳುವಾಗ ಅವರನ್ನು ಕರೆದೊಯ್ಯುತ್ತಿದ್ದ ಹೆಲಿಕಾಪ್ಟರ್ ಇನ್ನೇನು ಭೂಸ್ಪರ್ಶ ಮಾಡಬೇಕೆನ್ನುವಷ್ಟರಲ್ಲಿ ಭಾರೀ ಸದ್ದಿನೊಂದಿಗೆ ನೆಲಕ್ಕಪ್ಪಳಿಸಿತು. ಪವಾಡ ಸದೃಶ ನಾವೆಲ್ಲಾ ಬದುಕಿ ಉಳಿದೆವು ಎಂದು ತಿಳಿಸುವ ಸಮಯದಲ್ಲಿ ಈ ಮೇಲಿನ ಮಾತು ಬಂದಿದೆ.
2. ನನ್ನ ಅತ್ಯಂತ ಮೆಚ್ಚಿನ ಮಹಾ ಪುರುಷರು ಅವರು, ನಾನು ಆರಾಧಿಸುವಂಥವರು.

ಈ ಮಾತನ್ನು ಎ.ಪಿ.ಜೆ. ಅಬ್ದುಲ್ ಕಲಾಂರವರು ಹೇಳಿದ್ದಾರೆ. ಅಬ್ದುಲ್ ಕಲಾಂರವರು ಕನಸಿನಲ್ಲಿ ಈ ರೀತಿ ಚಿಂತಿಸುತ್ತಿದ್ದರು. ಆ ದೇವರ ಸೃಷ್ಟಿಯಲ್ಲಿ ಅತ್ಯಂತ ಶ್ರೇಷ್ಠವಾದುದೆನ್ನಲಾದ ಮಾನವ ಕುಲ ಏಕೆ ಇಷ್ಟೊಂದು ವಿಭಜಿತವಾಗಿದೆ? ಇಷ್ಟೊಂದು ಹಿಂಸಾಚಾರಗಳಲ್ಲಿ ಏಕೆ ತೊಡಗಿಸಿಕೊಳ್ಳುತ್ತಿದ್ದಾನೆ ಎಂಬ ಆಲೋಚನೆ ಸುಳಿಯುವಾಗ ಅಷ್ಟರಲ್ಲಿ, ಕಲಾಂ ಅವರ ಅತ್ಯಂತ ಮೆಚ್ಚಿನ ಮಹಾಪುರುಷರು, ಆರಾಧಿಸುವಂಥವರು ಕಂಡರು ಎಂದು ತಿಳಿಸುವ ಸಂದರ್ಭದಲ್ಲಿ ಈ ಮೇಲಿನ ಮಾತು ಬಂದಿದೆ.
3. ಅಹಿಂಸಾ ಧರ್ಮದ ಉದಯವಾಯಿತು.
ಈ ವಾಕ್ಯವನ್ನು ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಬರೆದಿರುವ ಪ್ರಜ್ವಲಿತ ದೀಪಗಳು ಎಂಬ ಕೃತಿಯಿಂದ ಆಯ್ದ. ಕನಸು ಮತ್ತು ಸಂದೇಶ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ. ಕುರಿತು ಹೇಳಿದ ಮಾತಾಗಿದೆ. ಕಳಿಂಗ ಸಮರದಲ್ಲಿ ಕಂಡ ಅಸಂಖ್ಯ ಜನರ ಸಾವು ನೋವುಗಳು, ಅಲ್ಲಿ ಭೀಬತ್ಸ ದೃಶ್ಯ ಕಂಡು ಅಶೋಕ ಯುದ್ಧ ಮಾಡುವುದಿಲ್ಲ ಎಂದು ಪಣತೊಟ್ಟು ಅಹಿಂಸಾ ಧರ್ಮ ಸ್ವೀಕರಿಸಿದನು ಎಂದು ತಿಳಿಸುವ ಸಂದರ್ಭದಲ್ಲಿ ಈ ಮೇಲಿನ ಮಾತು ಬಂದಿದೆ.
4. ಶಾಂತಿ ನೆಮ್ಮದಿಯ ಸಾಮ್ರಾಜ್ಯ ನಿರ್ಮಾಣವೇ ನಿಜವಾದ ಗೆಲುವು.
? ಭಾರತದ 11 ನೇ ರಾಷ್ಟ್ರಪತಿಯಾಗಿ 22ನೇ ಜುಲೈ 2002 ರಂದು ಆಯ್ಕೆಯಾದರು. ಸರಳತೆ,ಪ್ರಾಮಾಣಿಕತೆ ಮತ್ತು ಮೇಧಾವಿತನದಿಂದ ನಡೆದುಕೊಂಡು ರಾಷ್ಟ್ರಪತಿ ಹುದ್ದೆಯ ಘನತೆಯನ್ನು ಹೆಚ್ಚಿಸಿದರು.
? ಲೇಖಕರಾಗಿದ್ದ ಕಲಾಂ ಅವರು ವಿಂಗ್ಸ್ ಆಫ್ ಫೈರ್ (ಆತ್ಮಕಥೆ), ಇಂಡಿಯಾ ಮೈ ಡ್ರೀಮ್ಇಂಡಿಯಾ 2020, ಮೈ ಜರ್ನಿ, ಟಾರ್ಗೇಟ್ ತ್ರಿ ಬಿಲಿಯನ್, ಟರ್ನಿಂಗ್ ಪಾಯಿಂಟ್, ಇಗ್ನೈಟೆಡ್ ಮೈಂಡ್ಸ್, ದಿ ಲೈಫ್ ಟ್ರೀ ಮುಂತಾದ ಕೃತಿಗಳನ್ನು ಬರೆದಿದ್ದಾರೆ.
? ಕಲಾಂ ಅವರ ಸೇವೆಗೆ ಪದ್ಮಭೂಷಣ, ಪದ್ಮವಿಭೂಷಣ ಹಾಗೂ ದೇಶದ ಅತ್ಯುನ್ನತ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಸುಮಾರು 30 ವಿಶ್ವವಿದ್ಯಾನಿಲಯಗಳು ಕಲಾಂ ಅವರಿಗೆ ಗೌರವ ಡಾಕ್ಟರೇಟ್ ನೀಡಿವೆ.
? ಪ್ರಸ್ತುತ ಗದ್ಯಭಾಗವನ್ನು ಎ.ಪಿ.ಜೆ ಅಬ್ದುಲ್ ಕಲಾಂ ಅವರ ಪ್ರಜ್ವಲಿತ ದೀಪಗಳು ಪುಸ್ತಕದಿಂದ ಆಯ್ದುಕೊಳ್ಳಲಾಗಿದೆ.
ಅನುವಾದಕರ ಪರಿಚಯ :
? ಶ್ರೀ ಜಯಕೃಷ್ಣ ಟಿ. ಎನ್. ಅವರು ಪತ್ರಕರ್ತರಾಗಿದ್ದು, ಡೇಲ್ ಕಾರ್ನಗಿ ಅವರ ಚಿಂತೆ ಬಿಡಿ: ಹೊಸ ಬದುಕು ಆರಂಭಿಸಿ, ಸಮರ್ಥ ನಾಯಕ ನೀವೂ ಆಗಬಲ್ಲಿರಿ! ಹಾಗೂ ನೆಪೋಲಿಯನ್ ಹಿಲ್ ಅವರ ಸಿರಿತನಕ್ಕೆ ಹದಿಮೂರೇ ಹೆಜ್ಜೆ ಮುಂತಾದ ಅನುವಾದಿತ ಕೃತಿಗಳ ಮೂಲಕ ಕನ್ನಡಿಗರಿಗೆ ಚಿರಪರಿಚಿತರಾಗಿದ್ದಾರೆ.
ಟಿಪ್ಪಣಿಗಳು :
ಅಶೋಕ ಚಕ್ರವರ್ತಿ : (ಕ್ರಿ.ಪೂ. 304 - ಕ್ರಿ.ಪೂ. 232) ಪ್ರಾಚೀನ ಭಾರತವನ್ನು ಆಳಿದ ಮೌರ್ಯ ಸಾಮ್ರಾಜ್ಯದ ಚಕ್ರವರ್ತಿ. ಅಶೋಕನು ಸದಾ ಯುದ್ಧದಲ್ಲಿ ತೊಡಗಿರುತ್ತಿದ್ದನು. ಈತನು ಕಳಿಂಗದ ಮೇಲೆ ನಡೆಸಿದ ಯುದ್ಧವೇ ಕೊನೆಯದಾಯಿತು. ಕಳಿಂಗ ಯುದ್ಧದ ನಂತರ ಅಶೋಕನು ನಗರ ಪ್ರದಕ್ಷಿಣೆಗೆಂದು ಹೊರಟು ಎಲ್ಲೆಲ್ಲೂ ಸುಟ್ಟು ಹೋದ ಮನೆಗಳನ್ನು, ಚೆಲ್ಲಾಪಿಲ್ಲಿಯಾಗಿ ಬಿದ್ದ ಹೆಣಗಳನ್ನು, ದುಃಖತಪ್ತರನ್ನು ನೋಡಿದನು. ಇದರಿಂದ ಅವನ ಮನಸ್ಸು ಮರುಗಿತು. ಕೊನೆಗೆ ಯುದ್ಧವನ್ನು ತ್ಯಜಿಸಿ, ಬೌದ್ಧಧರ್ಮವನ್ನು ಸ್ವೀಕರಿಸುವ ಮೂಲಕ ಶಾಂತಿ ಪ್ರಿಯನಾದನು. ಆಲ್ಬರ್ಟ್ ಐನ್ಸ್ಟೀನ್ (18791955): ಜಗತ್ತಿನ ಶ್ರೇಷ್ಠ ವಿಜ್ಞಾನಿಯಾದ ಈತ ಜರ್ಮನಿಯ ಉಲ್ಮ್ ಎಂಬಲ್ಲಿ ಜನಿಸಿದನು. ಪರಮಾಣು ಬಾಂಬಿನ ಸಂಶೋಧನೆಗೆ ಮೂಲಕಾರಣವಾದ ಸಾಪೇಕ್ಷತಾ ಸಿದ್ಧಾಂತವನ್ನು ಕಂಡುಹಿಡಿದು ಭೌತಶಾಸ್ತ್ರದಲ್ಲಿ ಕ್ರಾಂತಿಕಾರಕ ಅಲೆಯನ್ನು ಎಬ್ಬಿಸಿದನು. ಎರಡನೇ ಜಾಗತಿಕ ಯುದ್ಧದಲ್ಲಿ ಪರಮಾಣು ಬಾಂಬು ಉಂಟುಮಾಡಿದ ಅನಾಹುತ ಕಂಡು ದುಃಖತಪ್ತರಾಗಿ ತಮ್ಮ ಜೀವಿತದ ಕೊನೆಯವರೆಗೆ ಶಾಂತಿ ಸ್ಥಾಪನೆಗಾಗಿ ಶ್ರಮಿಸತೊಡಗಿದರು.
ಅಬ್ರಹಾಂ ಲಿಂಕನ್ (1809-1865): ಅಮೇರಿಕಾದಲ್ಲಿ ಶಾಪವಾಗಿದ್ದ ಗುಲಾಮಗಿರಿಯನ್ನು ವರ್ಣಭೇದ ನೀತಿಯನ್ನು ತೊಲಗಿಸಲು ಹೋರಾಡಿದ ಧೀರೋದ್ಧಾತ ನಾಯಕ. ಸಾಮಾನ್ಯ ಕುಟುಂಬದಲ್ಲಿ ಜನಿಸಿ, ಗೆಳೆಯರಿಂದ ಪುಸ್ತಕಗಳನ್ನು ಎರವಲಾಗಿ ಪಡೆದು, ಬೀದಿ ದೀಪದ ಬೆಳಕಿನಲ್ಲಿ ಓದಿದವರು. ಇವರು ಅಮೇರಿಕಾದ ರಿಪಬ್ಲಿಕನ್ ಚಳುವಳಿಯಲ್ಲಿ ಧುಮುಕಿ ಅಮೇರಿಕಾದ ಅಧ್ಯಕ್ಷರಾಗಿ ಆಯ್ಕೆಯಾದರು. ಗುಲಾಮಗಿರಿಯನ್ನು ಕಿತ್ತೊಗೆದ ಇವರನ್ನು ಹತ್ಯೆ ಮಾಡಲಾಯಿತು. ಖಲೀಫ ಉಮರ್- ಪೈಗಂಬರ್ ಬಳಿಕ ನೇಮಕಗೊಂಡ ಅರಬ್ಬರ ಆಧ್ಯಾತ್ಮಿಕ ಮತ್ತು ರಾಜಕೀಯ ನಾಯಕ. ಈತನನ್ನು ಖಲೀಫ ಎಂದೂ ಕರೆಯಲಾಗುತ್ತದೆ.
ಅಭ್ಯಾಸ
1. ಪದಗಳ ಅರ್ಥ ತಿಳಿಯಿರಿ :
ಆಘಾತ - ಪೆಟ್ಟು; ಕೇಡು.
ಆರಾಧಿಸು - ಪೂಜಿಸು; ಸ್ಮರಿಸು.
ಆಹುತಿ - ಬಲಿ
ಉದ್ಯುಕ್ತ - ಪ್ರಯತ್ನಿಸು; ಸಿದ್ಧವಾಗು.
ಕುಬ್ಜ - ಕುಳ್ಳ; ಸಣ್ಣವ.
ಕೃತಜ್ಞತೆ - ಉಪಕಾರ ಸ್ಮರಣೆ
ಕೃತ್ಯ - ಕೆಲಸ
ದಿಗಂತ - ಕ್ಷಿತಿಜ
ದಿರಿಸು - ಉಡುಪು
ದಿಗ್ವಿಜಯ - ರಾಜ್ಯಗಳನ್ನು ಜಯಿಸುವುದು.
ಧರಣಿ - ಭೂಮಿ
ನಿರ್ದಯಿ - ಕ್ರೂರಿ; ದಯೆ ಇಲ್ಲದವ.
ನೀರವತೆ - ಮೌನ; ನಿಶ್ಯಬ್ದ.
ಪವಾಡಸದೃಶ - ಆಶ್ಚರ್ಯಕರ ರೀತಿಯಲ್ಲಿ
ಬೀಭತ್ಸ - ಜುಗುಪ್ಸೆ; ಅಸಹ್ಯ.
ಭಾಸವಾಗು - ಕಾಣು; ತೋರು.
ಮರುಭೂಮಿ - ಮರಳು ತುಂಬಿದ ಭೂಮಿ.
ಮೇಧಾವಿ - ಬುದ್ಧಿವಂತ.
ವಿಭಜಿತ - ಬೇರೆಯಾದ; ವಿಂಗಡಿಸಿದ.
ಪ್ರಶ್ನೆಗಳು :
ಅ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.
1. ಕಲಾಂ ಅವರು ಸಾಮಾನ್ಯವಾಗಿ ನಿತ್ಯ ಎಷ್ಟು ಗಂಟೆಗೆ ಮಲಗಿ, ಎಷ್ಟು ಗಂಟೆಗೆ ಏಳುತ್ತಿದ್ದರು?
ಕಲಾಂ ಅವರು ಸಾಮಾನ್ಯವಾಗಿ ನಿತ್ಯ ರಾತ್ರಿ ಒಂದು ಗಂಟೆಗೆ ಮಲಗಿ, ಬೆಳಗ್ಗೆ ಆರು ಗಂಟೆಗೆ ಏಳುತ್ತಿದ್ದರು.
2. ಕಲಾಂ ಅವರು ಕನಸಿನಲ್ಲಿ ಕಂಡ ಪ್ರದೇಶ ಯಾವುದು?
ಕಲಾಂ ಅವರು ಕನಸಿನಲ್ಲಿ ಕಂಡ ಪ್ರದೇಶ ಮರುಭೂಮಿ.
3. ಕಲಾಂ ಅವರು ಕನಸಿನಲ್ಲಿ ಕಂಡ ಐವರು ಮಹಾಪುರುಷರು ಯಾರು?
ಕಲಾಂ ಅವರು ಕನಸಿನಲ್ಲಿ ಕಂಡ ಐವರು ಮಹಾಪುರುಷರು ಮಹಾತ್ಮಾ ಗಾಂಧಿ, ಆಲ್ಬರ್ಟ್ ಐನ್ಸ್ಟೀನ್, ಚಕ್ರವರ್ತಿ ಅಶೋಕ, ಅಬ್ರಹಾಂ ಲಿಂಕನ್ ಮತ್ತು ಖಲೀಫ ಉಮರ್
4. ಅಶೋಕನು ಪ್ರತಿಪಾದಿಸಿದ ಧರ್ಮ ಯಾವುದು?
ಅಶೋಕನು ಪ್ರತಿಪಾದಿಸಿದ ಧರ್ಮ ಅಹಿಂಸಾ ಧರ್ಮ.
5. ಅಶೋಕನ ಪ್ರಕಾರ ನಿಜವಾದ ಗೆಲುವು ಯಾವುದು?
ಅಶೋಕನ ಪ್ರಕಾರ ಶಾಂತಿ ನೆಮ್ಮದಿಯ ಸಾಮ್ರಾಜ್ಯ ನಿರ್ಮಾಣವೇ ನಿಜವಾದ ಗೆಲುವು.
ಆ) ಕೆಳಗಿನ ಪ್ರಶ್ನೆಗಳಿಗೆ ಮೂರು-ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ.
1. ಕಲಾಂ ಅವರು ರಾಂಚಿಯಿಂದ ಬೊಕಾರೋಗೆ ವಿಮಾನದಲ್ಲಿ ತೆರಳುವಾಗ ಯಾವ ದುರ್ಘಟನೆ ನಡೆಯಿತು?
ಕಲಾಂ ಅವರು ರಾಂಚಿಯಿಂದ ಬೊಕಾರೋಗೆ ವಿಮಾನದಲ್ಲಿ ತೆರಳುವಾಗ ಅವರನ್ನು ಕರೆದೊಯ್ಯುತ್ತಿದ್ದ ಹೆಲಿಕಾಪ್ಟರ್ ಇನ್ನೇನು ಭೂಸ್ಪರ್ಶ ಮಾಡಬೇಕೆನ್ನುವಷ್ಟರಲ್ಲಿ ಭಾರೀ ಸದ್ದಿನೊಂದಿಗೆ ನೆಲಕ್ಕಪ್ಪಳಿಸಿತು. ಅದರ ಎಂಜಿನ್ನಲ್ಲಿ ಏನೋ ದೋಷ ಕಾಣಿಸಿಕೊಂಡಿತ್ತು.
2. ಕಲಾಂ ಅವರಿಗೆ ನಿದ್ದೆಯಲ್ಲಿ ಯಾವ ಯಾವ ಯೋಚನೆಗಳು ಸುಳಿದಾಡಿದವು?
ಕಲಾಂ ಅವರಿಗೆ ನಿದ್ದೆಯಲ್ಲಿ ಆ ದೇವರ ಸೃಷ್ಟಿಯಲ್ಲಿ ಅತ್ಯಂತ ಶ್ರೇಷ್ಠವಾದುದೆನ್ನಲಾದ ಮಾನವ ಕುಲ ಏಕೆ ಇಷ್ಟೊಂದು ವಿಭಜಿತವಾಗಿದೆ? ಇಷ್ಟೊಂದು ಹಿಂಸಾಚಾರಗಳಲ್ಲಿ ಏಕೆ ತೊಡಗಿಸಿಕೊಳ್ಳುತ್ತಿದೆ?.....ಹೀಗೆ ಏನೇನೋ ಯೋಚನೆಗಳು ಸುಳಿದಾಡಿದವು.
3. ಕಲಾಂ ಅವರು ಕನಸಿನಲ್ಲಿ ಕಂಡ ಪ್ರದೇಶ ಯಾವ ರೀತಿ ಇತ್ತು?
ಕಲಾಂ ಅವರು ಕನಸಿನಲ್ಲಿ ಮರುಭೂಮಿಯನ್ನು ಕಂಡರು. ಅವರ ಸುತ್ತ ಎತ್ತ ನೋಡಿದರೂ ಬರೀ ಮರಳು! ಮೈಲಿ ಮೈಲಿಗಟ್ಟಲೆ ಮರಳು. ದೂರ ದಿಗಂತದವರೆಗೂ! ಆಗಸದಲ್ಲಿ ಪೂರ್ಣಚಂದ್ರ, ಮರಳುಗಾಡಿನುದ್ದಕ್ಕೂ ಹಾಲು ಬೆಳದಿಂಗಳು.
4. ಅಶೋಕನು ನಡೆಸಿದ ಎರಡು ಬಗೆಯ ಬದುಕು ಯಾವುವು?
ಅಶೋಕನು ಎರಡು ಬಗೆಯ ಬದುಕು ನಡೆಸಿದ. ಒಂದು ನಿರ್ದಯಿ ಆಕ್ರಮಣಕಾರನಾಗಿ ಹಾಗೂ ಇನ್ನೊಂದು ದಯಾಮಯಿ ಆಡಳಿತಗಾರನಾಗಿ.
5. ಕಳಿಂಗ ಯುದ್ಧದ ಪರಿಣಾಮವೇನು?
ಆ ಕಳಿಂಗ ಸಮರವು ಕಡಿಮೆಯೆಂದರೂ ಮೂರು ಲಕ್ಷ ಜನರ ಬಲಿ ತೆಗೆದುಕೊಂಡಿತ್ತು. ಅಷ್ಟೇ ಸಂಖ್ಯೆಯ ಜನ ತಮ್ಮ ಅಂಗಾಂಗಗಳನ್ನು ಕಳೆದುಕೊಂಡಿದ್ದರು. ಎಲ್ಲೆಲ್ಲೂ ರಕ್ತದ ಕೋಡಿ! ತನ್ನ ಕೃತ್ಯವನ್ನು ನೆನೆನೆನೆದು ಚಕ್ರವರ್ತಿ ಅಶೋಕ ಅಸಾಧ್ಯ ಯಾತನೆಪಟ್ಟ. ಇನ್ನು ಮುಂದೆ ಯುದ್ಧ ಮಾಡುವುದಿಲ್ಲ ಎಂದು ಪಣ ತೊಟ್ಟ. ಅಂದಿನಿಂದ ಅಹಿಂಸಾ ಧರ್ಮ ಉದಯವಾಯಿತು. ಮಾನವ ಮಾನವನ ನಡುವೆ ಪ್ರೀತಿಯ ಮಹತ್ವವನ್ನು ಸಾರಲು ಮುಂದಾದನು.
6. ಕಲಾಂ ಅವರಿಗೆ ಕನಸಿನಲ್ಲಿ ಅಶೋಕನು ಕಂಡದ್ದು ಹೇಗೆ?
ಘನಗಾಂಭೀರ್ಯದ ಸಾಕಾರಮೂರ್ತಿ ಚಕ್ರವರ್ತಿ ಅಶೋಕನ ಪಕ್ಕದಲ್ಲೇ ಕಲಾಂ ಅವರು ನಿಂತಿದ್ದರು. ಅವನೆದುರು ಕಲಾಂ ತೀರಾ ಕುಬ್ಜನಾದಂತೆ ಅನ್ನಿಸಿತು.
7. ಯುದ್ಧ ಹಾಗೂ ಹತ್ಯೆಯ ಬಗೆಗೆ ಕಲಾಂ ಅವರನ್ನು ಕಾಡಿದ ಪ್ರಶ್ನೆಗಳಾವುವು?
ಕಲಾಂ ಅವರು ನಿಂತಲ್ಲೇ ಒಂದು ಕ್ಷಣ ಗಂಭೀರವಾಗಿ ಯೋಚಿಸಿದರು. ಆ ಕಳಿಂಗ ಯುದ್ಧವಾದರೂ ಯಾಕಾಯಿತು? ಮಹಾತ್ಮಾ ಗಾಂಧಿ, ಅಬ್ರಹಾಂ ಲಿಂಕನ್ ಮತ್ತು ಅವರಂಥ ಅನೇಕ ಮಹಾಪುರುಷರ ಹತ್ಯೆಯಾದರೂ ಯಾಕಾಯಿತು? ಆ ದೇವರು ತನ್ನ ಸೃಷ್ಠಿಯಲ್ಲಿ ಏನಾದರೂ ತಪ್ಪೆಸಗಿರುವನೇ? ಅಥವಾ ಎರಡನೇ ಸೃಷ್ಟಿಗಾಗಿ ಈ ಮಾನವ ಕುಲದ ನಾಶ ಅನಿವಾರ್ಯವೇ? ಇವು ಕಲಾಂ ಅವರಿಗೆ ಯುದ್ಧ ಹಾಗೂ ಹತ್ಯೆಯ ಬಗೆಗೆ ಕಾಡಿದ ಪ್ರಶ್ನೆಗಳು.
8. ಕಲಾಂ ಅವರ ಕನಸಿನಲ್ಲಿ ಅಶೋಕನು ಯಾವ ಸಂದೇಶ ನೀಡಿದನು?
ಕಲಾಂ ಅವರ ಕನಸ್ಸಿನಲ್ಲಿ ಅಶೋಕನು ಗೆಳೆಯರೇ, ಒಂದು ವಿಷಯವನ್ನಂತೂ ನಾನೀಗ ಚೆನ್ನಾಗಿ ಅರ್ಥ ಮಾಡಿಕೊಂಡಿರುವೆ. ಜಯ ಎಂಬುದು ಸಾವುನೋವು ಉಂಟುಮಾಡುವುದರಲ್ಲಿಲ್ಲ. ಶಾಂತಿ ನೆಮ್ಮದಿಯ ಸಾಮ್ರಾಜ್ಯ ನಿರ್ಮಾಣವೇ ನಿಜವಾದ ಗೆಲುವು ಎಂದು ಹೇಳುತ್ತಾನೆ.
9. ಕನಸಿನ ಬಗ್ಗೆ ಕಲಾಂ ಅವರ ಸಂದೇಶವೇನು?
ಕನಸುಗಳನ್ನು ಕಾಣಿರಿ, ಕನಸುಗಳು ಭೂತ, ಭವಿಷ್ಯ ಹಾಗೂ ವರ್ತಮಾನದ ಅನುಭವಗಳನ್ನು ಕಟ್ಟಿಕೊಡುತ್ತವೆ. ಜೊತೆಗೆ ನಮ್ಮ ಬದುಕಿಗೆ ಸ್ಫೂರ್ತಿಯ ಸಂದೇಶಗಳಾಗಿರುತ್ತವೆ ಎಂದು ಕನಸ್ಸಿನ ಬಗ್ಗೆ ಕಲಾಂ ಅವರು ನೀಡುವ ಸಂದೇಶವಾಗಿದೆ.
ಇ) ಕೆಳಗಿನ ಪ್ರಶ್ನೆಗಳಿಗೆ ಏಳು-ಎಂಟು ವಾಕ್ಯಗಳಲ್ಲಿ ಉತ್ತರಿಸಿರಿ.
1. ಅಶೋಕನಲ್ಲಿ ಅಹಿಂಸಾ ಧರ್ಮ ಹೇಗೆ ಉದಯಿಸಿತು?
ಅಶೋಕ ಕಳಿಂಗ ಯುದ್ಧದಲ್ಲಿ ಉಂಟಾದ ಸಾವು ನೋವುಗಳಿಂದ ಆತ ಚಿಂತಿತನಾಗಿದ್ದನು. ಆ ಕಳಿಂಗ ಸಮರವು ಕಡಿಮೆಯೆಂದರೂ ಮೂರು ಲಕ್ಷ ಜನರ ಬಲಿ ತೆಗೆದುಕೊಂಡಿತ್ತು. ಅಷ್ಟೇ ಸಂಖ್ಯೆಯ ಜನ ತಮ್ಮ ಅಂಗಾಂಗಗಳನ್ನು ಕಳೆದುಕೊಂಡಿದ್ದರು. ಚಕ್ರವರ್ತಿ ಅಶೋಕ ಹಾಗೆಯೇ ಕುಳಿತು ಆಗಸದತ್ತ ನೋಟ ಬೀರಿದ. ಮಂದಪ್ರಕಾಶ ಬೀರುತ್ತಿದ್ದ ಪ್ರಶಾಂತ ಪೂರ್ಣಚಂದ್ರನನ್ನು ಕಂಡ. ತಾಯಿ ಧರಣಿಯ ಮೇಲೆ ದೇವರ ಕೃಪಾದೃಷ್ಟಿ ಹರಿಯುತ್ತಿದ್ದುದನ್ನು ಕಂಡ. ಕೆಳಗೆ ನೋಡಿದರೆ, ತಾನು ಸೃಷ್ಠಿಸಿದ ಬೀಭತ್ಸ ದೃಶ್ಯ! ಎಲ್ಲೆಲ್ಲೂ ರಕ್ತದ ಕೋಡಿ! ತನ್ನ ಕೃತ್ಯವನ್ನು ನೆನೆನೆನೆದು ಚಕ್ರವರ್ತಿ ಅಶೋಕ ಅಸಾಧ್ಯ ಯಾತನೆಪಟ್ಟ. ರಮ್ಯ ಮನೋಹರ ಮತ್ತು ಬೀಭತ್ಸ ದೃಶ್ಯಗಳ ಸಮಾಗಮದ ಆ ಕ್ಷಣದಲ್ಲಿ ಅಶೋಕನ ಕೃತ್ಯದ ಬಗ್ಗೆ ಸ್ವತಃ ನಿಸರ್ಗವೇ ಅಸಹನೆ ವ್ಯಕ್ತಪಡಿಸುತ್ತಿರುವಂತೆ ಕಂಡುಬಂದ ಆ ಕ್ಷಣದಲ್ಲಿ ಅಹಿಂಸಾ ಧರ್ಮದ ಉದಯವಾಯಿತು. ಚಕ್ರವರ್ತಿ ಅಶೋಕ ದೇವರ ಆದೇಶವನ್ನು ಶಿರಸಾವಹಿಸಿದ, ಅಹಿಂಸಾ ಪರಮೋ ಧರ್ಮಃ ಸಿದ್ಧಾಂತದ ಮೂಲಕ ಮಾನವ-ಮಾನವ ನಡುವಣ ಪ್ರೀತಿಯ ಮಹತ್ವವನ್ನು ಸಾರಲು ಉದ್ಯುಕ್ತನಾದನು. ಈ ರೀತಿ ಅಶೋಕನಲ್ಲಿ ಅಹಿಂಸಾ ಧರ್ಮ ಉದಯವಯಿತು.
2. ಕಲಾಂ ಅವರ ಕನಸಿನಲ್ಲಿ ಮಹಾತ್ಮಾ ಗಾಂಧೀಜಿ ಏನೆಂದು ಮಾತನಾಡಿದರು?
ಕಲಾಂ ಅವರ ಕನಸಿನಲ್ಲಿ ಮಹಾತ್ಮಾ ಗಾಂಧೀಜಿಯವರು ಈ ರೀತಿ ಮಾತನಾಡತೊಡಗಿದರು ಸ್ನೇಹಿತರೆ, ನಮಗೆ ಕೇಳಿಬರುತ್ತಿರುವ ದಿವ್ಯ ಸಂದೇಶವು ಆ ಸೃಷ್ಠಿಕರ್ತನದು. ಇಲ್ಲಿ ನೆರೆದ ನಾವೆಲ್ಲರೂ ಭೂಗ್ರಹಕ್ಕೆ ಸೇರಿದವರಾಗಿರುವುದರಿಂದ ಇಡೀ ಮಾನವ ಕುಲಕ್ಕೆ ನಾವು ಆ ಸಂದೇಶವನ್ನು ತಲುಪಿಸಬೇಕಾಗಿದೆ. ನಾನಾ ಜಾತಿ-ಜನಾಂಗ, ಮತ-ಧರ್ಮ ಹಾಗೂ ಭಾಷೆಗಳ ಜನರು ಶಾಂತಿ ನೆಮ್ಮದಿಯಿಂದ, ಏಳಿಗೆ ಸಾಧಿಸುತ್ತಾ ಹೇಗೆ ಬಾಳಬಹುದು ಎಂಬುದನ್ನು ನಾವು ತಿಳಿಸಿಕೊಡಬೇಕಾಗಿದೆ. ಆ ದೇವರು ನಮ್ಮೆಲ್ಲರಿಗೂ ವಿಶಿಷ್ಟವಾದುದೇನನ್ನೋ ದಯಪಾಲಿಸಿದ್ದಾನೆ. ಅದನ್ನು ನಾವು ನಮ್ಮ ಸತ್ಕಾರ್ಯಗಳು ಹಾಗೂ ಶ್ರಮದ ಮೂಲಕ ಮಾನವಕುಲಕ್ಕೆ ತಲುಪಿಸಿದ್ದೂ ಆಗಿದೆ. ಆದರೆ, ಅದು ಪರಿಣಾಮ ಬೀರಿದೆಯೇ? ಅದಕ್ಕಾಗಿ ಯಾವುದಾದರೂ ದಿವ್ಯ ಸಂದೇಶ ಅಥವಾ ತತ್ವ ಇದೆಯೇ? ದೈವಿಕ ಸೌಂದರ್ಯವು ಮಾನವನ ಹೃದಯವನ್ನು ಪ್ರವೇಶಿಸುವಂತಾಗಬೇಕು. ಇದು ಸಾಧ್ಯವೇ? ಎಂದು ಮಹಾತ್ಮ ಗಾಂಧೀಜಿಯವರು ಹೇಳಿದರು.
3. ಮಾನವನ ತನುಮನಗಳಲ್ಲಿ ಸುಖ ಸಂತೋಷ ಅರಳಲು ಏನು ಮಾಡಬೇಕು?
ಮಾನವನ ತನುಮನಗಳಲ್ಲಿ ಸುಖ ಸಂತೋಷ ಅರಳಲು ಉತ್ತಮ ಆಲೋಚನೆ ಮತ್ತು ಉತ್ತಮ ಕಾರ್ಯಗಳನ್ನು ನಡೆಸಬೇಕು. ಬದುಕಿಗೊಂದು ಗುರಿ, ಉದ್ದೇಶವಿರಬೇಕು. ಉತ್ತಮ ಕನಸುಗಳನ್ನು ಸಾಕಾರಗೊಳಿಸಬೇಕು. ಮೇಲಾಗಿ ಮಾನವ ಮಾನವ ನಡುವಣ ಪ್ರೀತಿ ಬೆಳೆಸಬೇಕು. ಜಾತಿ, ಮತ, ಧರ್ಮ, ಭಾಷೆಗಳ ಕಲಾಂ ಅವರ ಕನಸಿನಲ್ಲಿ ಮಹಾತ್ಮಾ ಗಾಂಧೀಜಿಯವರು ಈ ರೀತಿ ಮಾತನಾಡತೊಡಗಿದರು ಸ್ನೇಹಿತರೆ, ನಮಗೆ ಕೇಳಿಬರುತ್ತಿರುವ ದಿವ್ಯ ಸಂದೇಶವು ಆ ಸೃಷ್ಠಿಕರ್ತನದು. ಇಲ್ಲಿ ನೆರೆದ ನಾವೆಲ್ಲರೂ ಭೂಗ್ರಹಕ್ಕೆ ಸೇರಿದವರಾಗಿರುವುದರಿಂದ ಇಡೀ ಮಾನವ ಕುಲಕ್ಕೆ ನಾವು ಆ ಸಂದೇಶವನ್ನು ತಲುಪಿಸಬೇಕಾಗಿದೆ. ನಾನಾ ಜಾತಿ-ಜನಾಂಗ, ಮತ-ಧರ್ಮ ಹಾಗೂ ಭಾಷೆಗಳ ಜನರು ಶಾಂತಿ ನೆಮ್ಮದಿಯಿಂದ, ಏಳಿಗೆ ಸಾಧಿಸುತ್ತಾ ಹೇಗೆ ಬಾಳಬಹುದು ಎಂಬುದನ್ನು ನಾವು ತಿಳಿಸಿಕೊಡಬೇಕಾಗಿದೆ. ಆ ದೇವರು ನಮ್ಮೆಲ್ಲರಿಗೂ ವಿಶಿಷ್ಟವಾದುದೇನನ್ನೋ ದ ಸಂಕುಚಿತ ಮನೋಭಾವನೆಯಿಂದ ಹೊರಬಂದು ನಾವೆಲ್ಲ ಒಂದು ಎಂಬ ಭಾವನೆ ಹೊಂದಬೇಕು. ಆ ದೇವರ ದಿವ್ಯ ಸಂದೇಶವನ್ನು ಮಾನವನ ಹೃದಯದಲ್ಲಿ ನೆಲೆಸುವಂತಾದರೆ ಮಾನವನ ತನುಮನಗಳಲ್ಲಿ ಸುಖ ಸಂತೋಷ ಅರಳುತ್ತದೆ.
ಈ) ಸಂದರ್ಭದೊಡನೆ ವಿವರಿಸಿರಿ.
1. ನಾವು ನಿಜಕ್ಕೂ ಅದೃಷ್ಟ ಮಾಡಿರಬೇಕು!
ಈ ವಾಕ್ಯವನ್ನು ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಬರೆದಿರುವ ಪ್ರಜ್ವಲಿತ ದೀಪಗಳು ಎಂಬ ಕೃತಿಯಿಂದ ಆಯ್ದ. ಕನಸು ಮತ್ತು ಸಂದೇಶ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.
ಈ ಮಾತನ್ನು ಎ.ಪಿ.ಜೆ. ಅಬ್ದುಲ್ ಕಲಾಂರವರು ಹೇಳಿದ್ದಾರೆ. ಕಲಾಂ ಅವರು ರಾಂಚಿಯಿಂದ ಬೊಕಾರೋಗೆ ವಿಮಾನದಲ್ಲಿ ತೆರಳುವಾಗ ಅವರನ್ನು ಕರೆದೊಯ್ಯುತ್ತಿದ್ದ ಹೆಲಿಕಾಪ್ಟರ್ ಇನ್ನೇನು ಭೂಸ್ಪರ್ಶ ಮಾಡಬೇಕೆನ್ನುವಷ್ಟರಲ್ಲಿ ಭಾರೀ ಸದ್ದಿನೊಂದಿಗೆ ನೆಲಕ್ಕಪ್ಪಳಿಸಿತು. ಪವಾಡ ಸದೃಶ ನಾವೆಲ್ಲಾ ಬದುಕಿ ಉಳಿದೆವು ಎಂದು ತಿಳಿಸುವ ಸಮಯದಲ್ಲಿ ಈ ಮೇಲಿನ ಮಾತು ಬಂದಿದೆ.
2. ನನ್ನ ಅತ್ಯಂತ ಮೆಚ್ಚಿನ ಮಹಾ ಪುರುಷರು ಅವರು, ನಾನು ಆರಾಧಿಸುವಂಥವರು.
ಈ ವಾಕ್ಯವನ್ನು ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಬರೆದಿರುವ ಪ್ರಜ್ವಲಿತ ದೀಪಗಳು ಎಂಬ ಕೃತಿಯಿಂದ ಆಯ್ದ. ಕನಸು ಮತ್ತು ಸಂದೇಶ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.
ಈ ಮಾತನ್ನು ಎ.ಪಿ.ಜೆ. ಅಬ್ದುಲ್ ಕಲಾಂರವರು ಹೇಳಿದ್ದಾರೆ. ಅಬ್ದುಲ್ ಕಲಾಂರವರು ಕನಸಿನಲ್ಲಿ ಈ ರೀತಿ ಚಿಂತಿಸುತ್ತಿದ್ದರು. ಆ ದೇವರ ಸೃಷ್ಟಿಯಲ್ಲಿ ಅತ್ಯಂತ ಶ್ರೇಷ್ಠವಾದುದೆನ್ನಲಾದ ಮಾನವ ಕುಲ ಏಕೆ ಇಷ್ಟೊಂದು ವಿಭಜಿತವಾಗಿದೆ? ಇಷ್ಟೊಂದು ಹಿಂಸಾಚಾರಗಳಲ್ಲಿ ಏಕೆ ತೊಡಗಿಸಿಕೊಳ್ಳುತ್ತಿದ್ದಾನೆ ಎಂಬ ಆಲೋಚನೆ ಸುಳಿಯುವಾಗ ಅಷ್ಟರಲ್ಲಿ, ಕಲಾಂ ಅವರ ಅತ್ಯಂತ ಮೆಚ್ಚಿನ ಮಹಾಪುರುಷರು, ಆರಾಧಿಸುವಂಥವರು ಕಂಡರು ಎಂದು ತಿಳಿಸುವ ಸಂದರ್ಭದಲ್ಲಿ ಈ ಮೇಲಿನ ಮಾತು ಬಂದಿದೆ.
3. ಅಹಿಂಸಾ ಧರ್ಮದ ಉದಯವಾಯಿತು.
ಈ ವಾಕ್ಯವನ್ನು ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಬರೆದಿರುವ ಪ್ರಜ್ವಲಿತ ದೀಪಗಳು ಎಂಬ ಕೃತಿಯಿಂದ ಆಯ್ದ. ಕನಸು ಮತ್ತು ಸಂದೇಶ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ. ಕುರಿತು ಹೇಳಿದ ಮಾತಾಗಿದೆ. ಕಳಿಂಗ ಸಮರದಲ್ಲಿ ಕಂಡ ಅಸಂಖ್ಯ ಜನರ ಸಾವು ನೋವುಗಳು, ಅಲ್ಲಿ ಭೀಬತ್ಸ ದೃಶ್ಯ ಕಂಡು ಅಶೋಕ ಯುದ್ಧ ಮಾಡುವುದಿಲ್ಲ ಎಂದು ಪಣತೊಟ್ಟು ಅಹಿಂಸಾ ಧರ್ಮ ಸ್ವೀಕರಿಸಿದನು ಎಂದು ತಿಳಿಸುವ ಸಂದರ್ಭದಲ್ಲಿ ಈ ಮೇಲಿನ ಮಾತು ಬಂದಿದೆ.
4. ಶಾಂತಿ ನೆಮ್ಮದಿಯ ಸಾಮ್ರಾಜ್ಯ ನಿರ್ಮಾಣವೇ ನಿಜವಾದ ಗೆಲುವು.
ಈ ವಾಕ್ಯವನ್ನು ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಬರೆದಿರುವ ಪ್ರಜ್ವಲಿತ ದೀಪಗಳು ಎಂಬ ಕೃತಿಯಿಂದ ಆಯ್ದ. ಕನಸು ಮತ್ತು ಸಂದೇಶ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ. ಈ ಮಾತನ್ನು ಅಶೋಕನು ಹೇಳಿದ್ದಾನೆ. ಅಶೋಕನ ಪ್ರಕಾರ ಜಯ ಎಂಬುದು ಸಾವು ನೋವು ಉಂಟು ಮಾಡುವುದರಲ್ಲಿ ಇಲ್ಲ. ಶಾಂತಿ ನೆಮ್ಮದಿಯ ಸಾಮ್ರಾಜ್ಯ ನಿರ್ಮಾಣವೇ ನಿಜವಾದ ಗೆಲುವು ಎಂದು ತಿಳಿಸುವ ಸಂದರ್ಭದಲ್ಲಿ ಈ ಮೇಲಿನ ಮಾತು ಬಂದಿದೆ.
ಭಾಷಾಭ್ಯಾಸ :
ಅ) ಕೆಳಗಿನ ಪದಗಳನ್ನು ಸ್ವಂತ ವಾಕ್ಯದಲ್ಲಿ ಬರೆಯಿರಿ.
1. ದಿಟ್ಟಿಸು : ಹುಲಿ ಜಿಂಕೆಯನ್ನು ದಿಟ್ಟಿಸಿ ನೋಡಿತು.
2. ಪವಾಡಸದೃಶ : ನಾನು ಬಸ್ಸಿನಲ್ಲಿ ಪ್ರಯಾಣಿಸುವಾಗ ಒಂದು ಪವಾಡಸದೃಶ ನಡೆಯಿತು.
3. ಕೃಪಾದೃಷ್ಟಿ : ನನ್ನ ಗುರುಗಳ ಕೃಪಾದೃಷ್ಟಿ ನನ್ನ ಮೇಲಿದೆ.
4. ಸವಿನಿದ್ದೆ : ಸವಿನಿದ್ದೆಯಲ್ಲಿ ಕನಸುಗಳು ಬೀಳುತ್ತವೆ.
4. ಅಹಿಂಸೆ : ನಾನು ಅಹಿಂಸಾವಾದಿಯಾಗಿದ್ದೇನೆ.
5. ಶಿರಸಾವಹಿಸಿ : ಹಿರಿಯರು ಹೇಳಿದ ಕೆಲಸಗಳನ್ನು ಶಿರಸಾವಹಿಸಿ ಮಾಡುತ್ತೇನೆ.
6. ಸತ್ಕಾರ್ಯ : ನಾವು ಪ್ರತಿದಿನ ಸತ್ಕಾರ್ಯ ಮಾಡುತ್ತೇವೆ.
ಆ) ಕೆಳಗಿನ ಪದಗಳಿಗೆ ತತ್ಸಮ-ತದ್ಭವಗಳನ್ನು ಬರೆಯಿರಿ.
ಸಹಸ್ರ - ಸಾವಿರ,
ದಿಟ್ಟಿ- ದೃಷ್ಟಿ,
ಕ್ಷಣ - ಚಣ,
ಧರ್ಮ- ದರುಮ,
ಪಯಣ-ಪ್ರಯಾಣ,
ಆಗಸ- ಆಕಾಶ,
ಯುದ- ಜುದ್ದ.
ಇ) ಕೆಳಗಿನ ಪದಗಳಿಗೆ ವಿರುದ್ಧಾರ್ಥಕ ಪದ ಬರೆಯಿರಿ.
ಕೃತಜ್ಞತೆ - ಕೃತಘ್ನತೆ,
ದಯೆ - ನಿರ್ದಯೆ,
ಸತ್ಕಾರ್ಯ - ದುಸ್ಕಾರ್ಯ,
ಅನಿರೀಕ್ಷಿತ - ನಿರೀಕ್ಷಿತ,
ಅದೃಷ್ಟ - ದುರಾದೃಷ್ಟ,
ಹಿಂಸೆ - ಅಹಿಂಸೆ,
ಅಸಹನೆ - ಸಹನೆ.
ಈ) ಕೆಳಗಿನ ಪದಗಳನ್ನು ಬಿಡಿಸಿ ಬರೆಯಿರಿ.
1. ನೆಲಕ್ಕಪ್ಪಳಿಸು = ನೆಲಕ್ಕೆ + ಅಪ್ಪಳಿಸು - ಲೋಪಸಂಧಿ
2. ಅಂಗಾಂಗ = ಅಂಗ + ಅಂಗ - ಸವರ್ಣದೀರ್ಘಸಂಧಿ
3. ದಿಗಂತ = ದಿಕ್ + ಅಂತ - ಜಶ್ತ್ವಸಂಧಿ
4. ಅತ್ಯಂತ = ಅತಿ + ಅಂತ - ಯಣ್ಸಂಧಿ
5. ದಿಗ್ವಿಜಯ = ದಿಕ್ + ವಿಜಯ - ಜಶ್ತ್ವಸಂಧಿ
6. ಕಳೆಗುಂದು = ಕಳೆ + ಕುಂದು - ಆದೇಶಸಂಧಿ
ಉ) ಕೆಳಗಿನ ಪದಗಳಿಗೆ ಸಮನಾರ್ಥಕ ಪದಗಳನ್ನು ಬರೆಯಿರಿ.
ಯುದ್ಧ - ಸಮರ; ಕಾಳಗ,
ಭೂಮಿ - ವಸುಧೆ; ಪೊಡವಿ,
ಆರಾಧಿಸು - ಪ್ರಾರ್ಥಿಸು,
ಯಾತನೆ - ನೋವು.
ಸೈದ್ಧಾಂತಿಕ ವ್ಯಾಕರಣ :
1. ಗುಣಿತಾಕ್ಷರಗಳು : ವ್ಯಂಜನಗಳಿಗೆ ಸ್ವರಾಕ್ಷರಗಳು ಸೇರಿ ಆಗುವ ಅಕ್ಷರಗಳೆ ಗುಣಿತಾಕ್ಷರಗಳು.
ಉದಾ : ವ್ಯಂಜನ + ಸ್ವರ = ಗುಣಿತಾಕ್ಷರ
ಕ್ + ಅ = ಕ
ಚ್ + ಆ = ಚಾ
ಟ್ + ಇ = ಟಿ
ತ್ + ಈ = ತೀ
2. ಸಂಯುಕ್ತಾಕ್ಷರಗಳು : ಎರಡು ಅಥವಾ ಎರಡಕ್ಕಿಂತ ಹೆಚ್ಚು ವ್ಯಂಜನಗಳಿಗೆ ಒಂದು ಸ್ವರ ಸೇರಿ ಆಗುವ ಅಕ್ಷರವನ್ನು ಸಂಯುಕ್ತಾಕ್ಷರ ಅಥವಾ ಒತ್ತಕ್ಷರ ಎಂದು ಕರೆಯಲಾಗುತ್ತದೆ.
1. ಸಜಾತಿಯ ಸಂಯುಕ್ತಾಕ್ಷರ : ಒಂದೇ ಜಾತಿಯ (ಮೂಲದ) ಎರಡು ವ್ಯಂಜನಗಳೊಂದಿಗೆ ಒಂದು ಸ್ವರ ಸೇರಿದಾಗ ಸಜಾತಿಯ ಸಂಯುಕ್ತಾಕ್ಷರ ಉಂಟಾಗುತ್ತದೆ.
ಉದಾ : ಅಮ್ಮ, ಅಣ್ಣ, ಕಲ್ಲು, ಮಣ್ಣು, ಕನ್ನಡ, ಸದ್ದು.
2. ವಿಜಾತಿಯ ಸಂಯುಕ್ತಾಕ್ಷರ : ಬೇರೆ ಜಾತಿಯ ಎರಡು ಅಥವಾ ಎರಡಕ್ಕಿಂತ ಹೆಚ್ಚು ವ್ಯಂಜನಗಳ ಜತೆಯಲ್ಲಿ ಒಂದು ಸ್ವರ ಸೇರಿದಾಗ ವಿಜಾತಿಯ ಸಂಯುಕ್ತಾಕ್ಷರ ಉಂಟಾಗುತ್ತದೆ.
ಉದಾ : ಶಾಸ್ತ್ರ, ಸ್ತ್ರೀ, ಅಕ್ಷರ, ವಿದ್ಯೆ, ಕಷ್ಟ, ತ್ರಿಶೂಲ.

0 Comments