Recent Posts

ಗ್ರಂಥಾಲಯದಲ್ಲಿ - ೧೦ ನೇ ತರಗತಿ ನುಡಿ ಕನ್ನಡ ಪುಸ್ತಕದ ಪ್ರಶ್ನೋತ್ತರಗಳು

 
ಗ್ರಂಥಾಲಯದಲ್ಲಿ
ಕವಿ ಪರಿಚಯ

 
 
*ಸಿ. ಪಿ. ಕೃಷ್ಣಕುಮಾರ್*
ಜನ್ಮ ವರ್ಷ: 1939
ಜನ್ಮ ಸ್ಥಳ: ಚಿಕ್ಕನಾಯಕನ ಹಳ್ಳಿ ( ಮೈಸೂರು ಜಿಲ್ಲೆ )
ಕೃತಿಗಳು: 1) ಅನಂತ ಪೃಥ್ವಿ, 2) ತಾರಾಸಖ, 3) ಸಾಹಿತ್ಯ ಪ್ರವೇಶ, 4) ಕನ್ನಡನಾಗಾನಂದ,   5) ಕಾವ್ಯಾರಾಧನೆ.

ಅ) ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೂ ಒಂದು ವಾಕ್ಯದಲ್ಲಿ ಉತ್ತರ ಬರೆಯಿರಿ.
 
1) ಸಿ.ಪಿ.ಕೆ.ಯವರು ಯಾವುದರ ಅಡಿಯಲ್ಲಿ ತಾನು ಧೂಳು ಕಣವಾಗಿ ಬಿಡುತ್ತೇನೆಂದು ಹೇಳಿದ್ದಾರೆ?
ಉತ್ತರ: ಸಿ.ಪಿ.ಕೆಯವರು ಗ್ರಂಥಾಲಯದಲ್ಲಿ ಜೋಡಿಸಿಟ್ಟಿರುವ ಗ್ರಂಥಗಿರಿ ಪಂಕ್ತಿಗಳ ಅಡಿಯಲ್ಲಿ ತಾನು ದೂಳು ಕಣವಾಗಿ ಬಿಡುತ್ತೇನೆಂದು ಹೇಳಿದ್ದಾರೆ.     

2) ಕವಿಯು ತನ್ನ ಮತಿ ಎಲ್ಲಿ ಮುದುಡಿ ಹೋಗುತ್ತದೆ ಎಂದಿದ್ದಾರೆ?
ಉತ್ತರ: ಕವಿಯು ತನ್ನ ಮತಿ ಗ್ರಂಥಾಲಯದಲ್ಲಿ ಮುದುಡಿ ಹೋಗುತ್ತದೆ ಎಂದಿದ್ದಾರೆ.                

3) ಅಹಂಕಾರವನ್ನು ನುಚ್ಚು ನೂರಾಗಿಸುವ ತಾಣ ಯಾವುದೆಂದು ಸಿ.ಪಿ.ಕೆಯವರು ಹೇಳಿದ್ದಾರೆ?
ಉತ್ತರ: ಗ್ರಂಥಾಲಯವು ತನ್ನ ಅಹಂಕಾರವನ್ನು ನುಚ್ಚು ನೂರಾಗಿಸುವ ತಾಣವೆಂದು ಸಿ.ಪಿ.ಕೆಯವರು ಹೇಳಿದ್ದಾರೆ.      

4) ಸಿ.ಪಿ.ಕೆಯವರು ಗ್ರಂಥಗಳನ್ನು ಯಾವುದರ ಪಳೆಯುಳಿಕೆ ಎಂದಿದ್ದಾರೆ?
ಉತ್ತರ: ಸಿ.ಪಿ.ಕೆಯವರು ಗ್ರಂಥಗಳನ್ನು ಅನೇಕಾನೇಕ ಹಿರಿಬಾಳುಗಳ ಪಳೆಯುಳಿಕೆ ಎಂದಿದ್ದಾರೆ.         

5) ಸಿ.ಪಿ.ಕೆ.ಯವರು ಯಾವುದನ್ನು ವಿಶ್ವರೂಪಾವಲೋಕನ ಎಂದಿದ್ದಾರೆ?
ಉತ್ತರ: ಸಿ.ಪಿ.ಕೆ.ಯವರು ಹಲವಾರು ಹಿರಿಬಾಳ ಪಳೆಯುಳಿಕೆಯಾದ ಗ್ರಂಥಗಳ ಮೂಲವನ್ನು ವಿಶ್ವರೂಪಾವಲೋಕನ ಎಂದಿದ್ದಾರೆ.

6) ಭೀತ ವಿಸ್ಮಿತರಾದ ಕವಿ ಯಾರ ಹಾಗೆ ತತ್ತರಿಸಿದರು? 
ಉತ್ತರ: ಭೀತ ವಿಸ್ಮಿತರಾದ ಕವಿ ಪಾರ್ಥನಂತೆ ತತ್ತರಿಸಿದರು.      

ಆ) ಕೆಳಗಿನ ಪ್ರಶ್ನೆಗಳಿಗೆ ಎರಡು/ಮೂರು ವಾಕ್ಯಗಳಲ್ಲಿ ಉತ್ತರ ಬರೆಯಿರಿ. 
 
1) ಗ್ರಂಥಾಲಯವನ್ನು ಹೊಕ್ಕಾಗ ಕವಿಗೆ ಆದ ಅನುಭವವನ್ನು ತಿಳಿಸಿ.
ಉತ್ತರ: ಕವಿ ಸಿ. ಪಿ. ಕೆಯವರುಗ್ರಂಥಾಲಯವನ್ನು ಪ್ರವೇಶಿಸಿ ಕಣ್ಣಿನದೃಷ್ಟಿ ಹರಿಸಿದ ಎಲ್ಲ ಕಡೆ ಅವರಿಗೆ ಗ್ರಂಥಗಿರಿ ಪಂಕ್ತಿಗಳು ಇರುವುದು ಕಂಡುಬಂದಿತು. ಆ ಪಂಕ್ತಿಗಳ ಕೆಳಗೆ ತಾನು ದೂ ಳು ಕಣವಾಗಿ ನಿಂತಂತೆ ಭಾಸವಾಯಿತು. ಗ್ರಂಥಾಲಯದಲ್ಲಿ ತನ್ನ ಮತಿ ಮುದುಡಿ ಹೋಗಿ, ಅಹಂಕಾರವು ನುಚ್ಚುನೂರಾದಂತೆ ಕವಿಗಳಿಗೆ ಅನುಭವವಾಯಿತು.

2) ಕವಿ ಸಿ. ಪಿ. ಕೆಯವರು ಗ್ರಂಥಾಲಯದಲ್ಲಿ ಭೀತ ವಿಸ್ಮಿತರಾಗಿ ನಿಂತದ್ದು ಏಕೆ?
ಉತ್ತರ: ಕವಿ ಸಿ. ಪಿ. ಕೆಯವರು ಗ್ರಂಥಾಲಯದಲ್ಲಿರುವ ಗ್ರಂಥಗಿರಿಗಳ ಪಂಕ್ತಿಗಳನ್ನು ನೋಡಿ ಆಶ್ಚರ್ಯಚಕಿತರಾಗುತ್ತಾರೆ. ಹಲವಾರು ಕವಿಗಳ, ಲೇಖಕರ ಕೃತಿಗಳನ್ನು ನೋಡಿ ಅವರಿಗೆ ತನ್ನ ಮತಿ ಮುದುಡಿದಂತೆ, ಅಹಂಕಾರ ನುಚ್ಚುನೂರಾದಂತೆ ಭಾಸವಾಗುತ್ತದೆ. ಹಲವಾರು ಹಿರಿಬಾಳುಗಳ ಪಳೆಯುಳಿಕೆಗಳ ಮೇಳ ಅಲ್ಲಿ ನೆರೆದಂತೆ ಬಾ ಸವಾಗುತ್ತದೆ. ಆ ಗ್ರಂಥಗಳ ಮೂಲವನ್ನು ಚಿತ್ರಿಸಲು ಪ್ರಯತ್ನಿಸಿದಾಗ ಮಹಾಭಾರತ ಯುದ್ಧದ ಮುನ್ನ ಶ್ರೀಕೃಷ್ಣನ ವಿಶ್ವರೂಪದರ್ಶನವನ್ನು ಕಂಡು ಭೀತ ವಿಸ್ಮಿತನಾದ ಅರ್ಜುನನಂತಹ ಅವಸ್ಥೆ ಸಿ.ಪಿ.ಕೆಯವರದ್ದಾಗಿದೆ.

3) ಸಿ.ಪಿ.ಕೆಯವರು ಹಿರಿಬಾಳು ಪಳೆಯುಳಿಕೆ ಎಂದು ಯಾವುದನ್ನು ಕರೆದಿದ್ದಾರೆ, ಏಕೆ?
ಉತ್ತರ: ಸಿ.ಪಿ.ಕೆಯವರು ಗ್ರಂಥಾಲಯದಲ್ಲಿ ಅಸಂಖ್ಯ ಕವಿ, ಲೇಖಕರು ಬರೆದಿರುವ ಸಹಸ್ರಾರು ಪುಸ್ತಕಗಳನ್ನು ನೋಡಿ ಬೆರಗಾಗುತ್ತಾರೆ. ಆ ಪುಸ್ತಕಗಳನ್ನು ನೋಡುತ್ತಿದ್ದಂತೆಯೇ ಕವಿಗಳ ಅಹಂಕಾರ ನುಚ್ಚುನೂರಾಗಿ ಅಲ್ಲಿ ಹಲವಾರು ಹಿರಿಬಾಳು ಪಳೆಯುಳಿಕೆ ಇರುವಂತೆ ಭಾಸವಾಗುತ್ತದೆ. ಆ ಹಿರಿಯ ಕವಿಗಳ ಸಾಧನೆ ಮತ್ತು ಕೃತಿಗಳನ್ನು ಕಂಡು ಕವಿ ಸಿ.ಪಿ.ಕೆಯವರು ಹಳೆಯ ಗ್ರಂಥಗಳನ್ನು ಹಿರಿಬಾಳುಗಳ ಪಳೆಯುಳಿಕೆ ಎಂದು ಕರೆದಿದ್ದಾರೆ.

ಇ) ಕೆಳಗಿನ ಹೇಳಿಕೆಗಳ ಸಂದರ್ಭವನ್ನು ಸ್ವಾರಸ್ಯ ಸಹಿತ ವಿವರಿಸಿ.
 
1) ಕಣ್ದಿಟ್ಟಿ ಹರಿದತ್ತ ಗ್ರಂಥಗಿರಿ ಪಂಕ್ತಿಗಳು
- ಪದ್ಯದ ಹೆಸರು : ಗ್ರಂಥಾಲಯದಲ್ಲಿ.                                                                                             
ಕವಿಗಳ ಹೆಸರು: ಸಿ. ಪಿ. ಕೃಷ್ಣಕುಮಾರ್.                                                                           
ಸಂದರ್ಭ: ಕವಿಗಳು ಈ ಮಾತನ್ನು ನಮಗೆ ನುಡಿದಿದ್ದಾರೆ.                                                               
ವಿವರಣೆ: ಕವಿ ಸಿ. ಪಿ. ಕೆಯವರು ಗ್ರಂಥಾಲಯವನ್ನು ಪ್ರವೇಶಿಸಿದಾಗ ಅವರು ಕಣ್ಣಿನದೃಷ್ಟಿ ಹರಿಸಿದಲ್ಲೆಲ್ಲಾ ಗ್ರಂಥಗಳ ಗಿರಿ ಪಂಕ್ತಿಗಳನ್ನೇ ಕಾಣುತ್ತಾರೆ. ಸರಿಯಾಗಿ ಜೋಡಿಸಿಟ್ಟಿರುವ ಗ್ರಂಥಗಳನ್ನು ನೋಡಿ ಬೆರಗಾದ ಕವಿಗಳು ಈ ಮೇಲಿನ ಮಾತನ್ನು ನಮಗೆ ನುಡಿಯುತ್ತಾರೆ.

2) ಮುದುಡಿ ಹೋಗುವುದಿಲ್ಲಿ: ನನ್ನಅಹಂಕಾರ
- ಪದ್ಯದ ಹೆಸರು: ಗ್ರಂಥಾಲಯದಲ್ಲಿ  
ಕವಿಗಳ ಹೆಸರು: ಸಿ. ಪಿ. ಕೃಷ್ಣಕುಮಾರ್.                                                             
ಸಂದರ್ಭ: ಗ್ರಂಥಾಲಯದೊಳಗಿನ ಅನುಭವ ಹೇಳುತ್ತಾ ಕವಿ ಈ ಮಾತನ್ನು ನುಡಿದಿದ್ದಾವಿವರಣೆ: ಗ್ರಂಥಾಲಯದೊಳಗೆ ಗ್ರಂಥಗಿರಿ ಪಂಕ್ತಿಗಳ ಕೆಳಗೆ ಕವಿಗಳು ನಿಂತಾಗ ತಾನೊಂದು ದೂಳಿನ ಕಣವೆಂಬಂತೆ ಕವಿಗಳಿಗೆ ಅನಿಸಿ, ಒಂದು ಕ್ಷಣ ಗ್ರಂಥಾಲಯದಲ್ಲಿ ಬಂದು ನಿಂತರೆ ಸಾಕು ತನ್ನ ಮತಿ ಮುದುಡಿ ಹೋಗಿ ತನ್ನ ಅಹಂಕಾರವೆಲ್ಲಾ ಈ ಗ್ರಂಥಾಲಯದಲ್ಲಿ ಅಪ್ಪಳಿಸಿ ನುಚ್ಚುನೂರಾಗಿ ಬಿಡುತ್ತದೆ ಎಂಬ ಭಾವನೆ ಕವಿಗಳಲ್ಲಿ ಮೂಡಿದೆ.                                                                              

3) ಪಾರ್ಥನೊಲು ತತ್ತರಿಸಿ ವಿಸ್ಮಿತನಾಗಿ
- ಪದ್ಯದ ಹೆಸರು: ಗ್ರಂಥಾಲಯದಲ್ಲಿ                                                                               
ಕವಿಗಳ ಹೆಸರು: ಸಿ. ಪಿ. ಕೃಷ್ಣಕುಮಾರ್.                                                                           
ಸಂದರ್ಭ: ಕವಿಗಳು ತನ್ನಲ್ಲಿ ಉಂಟಾದ ಭಯ ಹಾಗೂ ಆಶ್ಚರ್ಯದ ಬಗೆಗೆ ಹೇಳುವಾಗ ಈ ಮೇಲಿನ ಮಾತನ್ನು ಹೇಳಿದ್ದಾರೆ.              
ವಿವರಣೆ: ಕವಿ ಸಿ. ಪಿ. ಕೆಯವರು ಗ್ರಂಥಾಲಯದಲ್ಲಿ ಅನೇಕ ಹಿರಿಯ ಕವಿ ಹಾಗೂ ಲೇಖಕರು ಬರೆದಿರುವ ಪುಸ್ತಕಗಳನ್ನು ಕಾಣುತ್ತಾರೆ. ಆ ಪುಸ್ತಕಗಳ ಮೂಲ ಹುಡುಕಲು ಪ್ರಯತ್ನಿಸಿದಾಗ ಅವರಿಗೆ ವಿಶ್ವರೂಪದ ಅವಲೋಕನವೇ ಆಯಿತು. ಶ್ರೀಕೃಷ್ಣನ ವಿಶ್ವರೂಪದರ್ಶನವನ್ನು ಕಂಡ ಪಾರ್ಥ ಹೇಗೆ ಭಯಭೀತ ವಿಸ್ಮಿತನಾದನೋ ಅದೇರೀತಿಯ ಬಾ ಸ ಕವಿಗಳಿಗೆ ಗ್ರಂಥಾಲಯದಲ್ಲಿ ಆಯಿತು ಎಂದು ಹೇಳುವ ಸಂದರ್ಭದಲ್ಲಿ ಈ ಮೇಲಿನ ಮಾತು ಬಂದಿದೆ.

ಈ) ಕೆಳಗಿನ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರ ಬರೆಯಿರಿ.
 
1) ಗ್ರಂಥಾಲಯದ ಬಗ್ಗೆ ಕವಿ ವ್ಯಕ್ತಪಡಿಸಿರುವ ಭಾವನೆಗಳನ್ನು ನಿಮ್ಮ ಮಾತುಗಳಲ್ಲಿ ಬರೆಯಿರಿ. 
ಗ್ರಂಥರಾಶಿಯ ಮುಂದೆ ಮನುಷ್ಯನ ಅಹಂಕಾರ ನುಚ್ಚು ನೂರಾಗುತ್ತದೆ ಎಂಬ ಭಾವನೆ ಗ್ರಂಥಾಲಯದಲ್ಲಿ ಕವನದಲ್ಲಿ ಹೇಗೆ ವ್ಯಕ್ತವಾಗಿದೆ? ವಿವರಿಸಿ. (ಇವೆರಡೂ ಪ್ರಶ್ನೆಗಳಿಗೆ ಒಂದೇ ಈ ಕೆಳಗಿನ ಉತ್ತರ)                            
ಉತ್ತರ: ಕವಿಗಳು ಗ್ರಂಥಾಲಯವನ್ನು ಪ್ರವೇಶಿಸಿದಾಗ ಅಲ್ಲಿರುವ ಪುಸ್ತಕಗಳ ಭಂಡಾರವನ್ನು ಕಂಡು ತಾನು ಆ ಗ್ರಂಥಗಳೆಂಬ ಗಿರಿ ಪಂಕ್ತಿಗಳ ಕೆಳಗೆ ನಿಂತು ಧೂಳಿನ ಕಣಕ್ಕೆ ಸಮನಾಗಿದ್ದೇನೆ ಎನಿಸುತ್ತದೆ. ಗ್ರಂಥಾಲಯದೊಳಗೆ ಬಂದು ಒಂದು ಕ್ಷಣಕಾಲ ನಿಂತರೂ ಸಾಕು ಅವರ ಮತಿ ಮದುಡಿ ಹೋಗುತ್ತದೆ. ಗ್ರಂಥಾಲಯ ಕವಿಗಳ ಅಹಂಕಾರವನ್ನು ಅಪ್ಪಳಿಸಿ ನುಚ್ಚುನೂರು ಮಾಡುತ್ತದೆ. ಕವಿಗಳಿಗೆ ಗ್ರಂಥಾಲಯದಲ್ಲಿ ಭಯ ಉಂಟಾಗಿ ಆದಷ್ಟೂ ಬೇಗ ಹೊರಗೆ ಓಡಿ ಹೋಗಬೇಕೆಂದೆನಿಸುತ್ತದೆ. ಇಂತಹ ಶಿಕ್ಷೆ ನನಗೆ ಬೇಡ, ಆದಷ್ಟೂ ಗ್ರಂಥಾಲಯ ನನ್ನಿಂದ ದೂರದಲ್ಲಿಯೇಇರಲಿ ಎನಿಸುತ್ತದೆ.ಗ್ರಂಥಾಲಯದಲ್ಲಿ ಹಲವಾರು ಕವಿ, ಲೇಖಕರು ಬರೆದ ಗ್ರಂಥಗಳನ್ನು ಕಂಡು ಲೇಖಕರಿಗೆ ಆ ಗ್ರಂಥಾಲಯ ಹಿರಿಬಾಳುಗಳ ಪಳೆಯುಳಿಕೆಯಂತೆ ಭಾಸವಾಗುತ್ತದೆ. ಕವಿಗಳು ಇದರ ಮೂಲವನ್ನು ಚಿತ್ರಿಸಲು ಪ್ರಯತ್ನಿಸಿದಾಗ ವಿಶ್ವರೂಪದ ಅವಲೋಕನವನ್ನೇ ಕವಿಗಳಿಗೆ ಮಾಡಿದಂತಾಗುತ್ತದೆ. ಶ್ರೀಕೃಷ್ಣನ ವಿಶ್ವರೂಪದರ್ಶನವನ್ನು ಕಂಡು ಅರ್ಜುನ ತತ್ತರಿಸಿ ಭೀತ ವಿಸ್ಮಿತನಾದಂತೆ ಕವಿಗಳೂ ಗ್ರಂಥಾಲಯದಲ್ಲಿ ಭೀತ ವಿಸ್ಮಿತರಾಗುತ್ತಾರೆ.

ಭಾಷಾಭ್ಯಾಸ

ಅ) ಕೆಳಗೆ ಕೊಟ್ಟಿರುವ ಪದಗಳನ್ನು ಬಿಡಿಸಿ ಬರೆದು, ಸಂಧಿಗಳನ್ನು ಹೆಸರಿಸಿರಿ.
ಪುಸ್ತಕ + ಆಲಯ = ಪುಸ್ತಕಾಲಯ (ಸ. ದೀ. ಸಂ.)     
ನನಗೆ + ಇಲ್ಲ = ನನಗಿಲ್ಲ (ಲೋಪ ಸಂಧಿ)                   
ರೂಪ + ಅವಲೋಕನ = ರೂಪಾವಲೋಕನ (ಸ.ದೀ.ಸಂ.)  
ಪಾರ್ಥನ + ಒಲು = ಪಾರ್ಥನೊಲು (ಲೋಪ ಸಂಧಿ)

ಆ) ತತ್ಸಮ-ತದ್ಭವಗಳನ್ನು ಬರೆಯಿರಿ.
ದಿಟ್ಟಿ - ದೃಷ್ಟಿ    
ಪುಸ್ತಕ - ಹೊತ್ತಿಗೆ    
ಚಣ - ಕ್ಷಣ    
ತಾಣ - ಸ್ಥಾನ

ಇ) ಕೆಳಗಿನ ಪದಗಳನ್ನು ಸ್ವಂತ ವಾಕ್ಯಗಳಲ್ಲಿ ಬಳಸಿರಿ.
1) ಗ್ರಂಥಾಲಯ: ಜ್ಞಾನ ವೃದ್ಧಿಸಿಕೊಳ್ಳುವ ತಾಣವೇ ಗ್ರಂಥಾಲಯ.                           
2) ಮೇಳ: ಅನೇಕ ವಿದ್ಯಾವಂತರಿಗಾಗಿ ಸರ್ಕಾರವು ಉದ್ಯೋಗ ಮೇಳವನ್ನು ಆಯೋಜಿಸುತ್ತದೆ.   
3) ಪಳೆಯುಳಿಕೆ: ಸಿಂಧೂ ನದಿ ನಾಗರಿಕತೆಯ ಅನೇಕ ಪಳಿಯುಳಿಕೆಗಳು ಹರಪ್ಪ, ಮಹೊಂಜೊದಾರೋ ನಗರಗಳಲ್ಲಿ ಕಂಡುಬರುತ್ತವೆ.
4) ಭೀತ ವಿಸ್ಮಿತ: ಧಾರಾಕಾರವಾಗಿ ಬೀಳುವ ಮಳೆಯು ಎಲ್ಲರನ್ನು ಭೀತ ವಿಸ್ಮಿತರನ್ನಾಗಿ ಮಾಡುತ್ತದೆ.

ಈ) ಈ ಕೆಳಗಿನ ಪದ್ಯ ಭಾಗಗಳನ್ನು ಕಂಠಪಾಠ ಮಾಡಿರಿ.
 
ಕಣ್ದಿಟ್ಟಿ ಹರಿದತ್ತ ಗ್ರಂಥಗಿರಿ ಪಂಕಿಗಳು                                                
ನಿಂತು ಬೆರಗೀಯುತಿವೆ ಪುಸ್ತಕಾಲಯದಲ್ಲಿ                                                          
ಇವುಗಳಡಿ ನಾಧೂಳ ಕಣವಾಗಿ ನಿಲ್ಲುವೆನು -                                             
ಚಣಕಾಲ ಬಂದು ನಿಂತರೆ ಸಾಕು,            

ನನ್ನ ಮತಿ ಮುದುಡಿ ಹೋಗುವುದಿಲ್ಲಿ ನನ್ನ ಅಹಂಕಾರವನು               
ನುಚ್ಚು ನೂರಾಗಿಸುವುದೀ ತಾಣ ಅಪ್ಪಳಿಸಿ!                        
ಒಳಗೆ ಬಂದೆನೊ ಬೇಗ ಹೊರಗೆ ಓಡುವತವಕ-                         
ಏಕೆನಲು ಬೆದರುವೆನು ನನಗಿಲ್ಲಿ ಬಹ ಲಯಕೆ!                                



 
You Might Like

Post a Comment

0 Comments