ಆದರ್ಶ ಶಿಕ್ಷಕ ಸರ್ವೇಪಲ್ಲಿ ರಾಧಾಕೃಷ್ಣನ್
ಅ ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ ,
1.ರಾಧಾಕೃಷ್ಣನ್ ಅವರ ತಂದೆತಾಯಿಯರ ಜಸರೇನು ?
ಉತ್ತರ : ರಾಧಾಕೃಷ್ಣನ್ ಅವರ ತಂದೆ ವೀರಸ್ವಾಮಿ , ತಾಯಿ ಸೀತಮ್ಮ .
2 , ರಾಧಾಕೃಷ್ಣನ್ ಅವರ ತಂದೆಯ ಅಪೇಕ್ಷೆ ಏನಾಗಿತ್ತು ?
ಉತ್ತರ : ರಾಧಾಕೃಷ್ಣನ್ ಅವರ ತಂದೆಗೆ ತನ್ನ ಮಗನು ದೇಶೀ ಭಾಷೆಯಾಗಿದ್ದ ಸಂಸ್ಕೃತವನ್ನು ಕಲಿಯಲಿ ಎಂಬ ಅಪೇಕ್ಷೆಯಾಗಿತ್ತು ,
3 , ರಾಷ್ಟ್ರಪತಿಗಳಾಗಿ ಪಡೆಯುತ್ತಿದ್ದ ವೇತನವನ್ನು ರಾಧಾಕೃಷ್ಣನ್ ಅವರು ಹೇಗೆ ಸದುಪಯೋಗ ಪಡಿಸಿಕೊಂಡರು ?
ಉತ್ತರ : ಹತ್ತು ಸಾವಿರ ರೂಪಾಯಿಗಳ ವೇತನದಲ್ಲಿ ಎರಡು ಸಾವಿರದ ಐನೂರು ರುಪಾಯಿಗಳನ್ನು ಮಾತ್ರ ಪಡೆದು , ಉಳಿದ ಹಣವನ್ನು ಪ್ರಧಾನಮಂತ್ರಿಗಳ ಪರಿಹಾರನಿಧಿಗೆ ವಂತಿಗೆಯಾಗಿ ನೀಡುತ್ತಿದ್ದರು.
4. ರಾಧಾಕೃಷ್ಣನ್ ಅವರ ಜನ್ಮ ದಿನವನ್ನು ಯಾವ ಹೆಸರಿನಿಂದ ಆಚರಿಸಲಾಗುತ್ತಿದೆ ?
ಉತ್ತರ : ರಾಧಾಕೃಷ್ಣನ್ ಅವರ ಜನ್ಮ ದಿನವನ್ನು ‘ ರಾಷ್ಟ್ರೀಯ ಶಿಕ್ಷಕರ ದಿನ ‘ ಎಂಬ ಹೆಸರಿನಿಂದ ಆಚರಿಸಲಾಗುತ್ತಿದೆ .
ಆ ) ಕೊಟ್ಟಿರುವ ಪ್ರಶ್ನೆಗಳಿಗೆ ಮೂರು – ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ ,
1 , ಸ್ಟಾಲಿನ್ ಅವರು ರಾಧಾಕೃಷ್ಣನ್ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಏನು ಹೇಳಿದರು ?
ಉತ್ತರ : “ ನೀವೊಬ್ಬರೇ ನನ್ನನ್ನು ಒಬ್ಬ ಮನುಷ್ಯನಂತೆ ಕಂಡು ವರ್ತಿಸಿದವರು . ನೀವು ನಮ್ಮನ್ನು ಬಿಟ್ಟು ಹೋಗುತ್ತಿರುವಿರಿ . ನನಗೆ ಇದು ದುಃಖ ನೀಡಿದೆ . ನೀವು ಹೆಚ್ಚು ಕಾಲ ಬಾಳಬೇಕೆಂಬುದೇ ನನ್ನಾಸೆ . ನಾನು ಹೆಚ್ಚು ಕಾಲ ಬಾಳುವುದಿಲ್ಲ
” ರಷ್ಯಾ ದೇಶದ ಅಧ್ಯಕ್ಷ ಸ್ಟಾಲಿನ್ ಅವರು ರಾಧಾಕೃಷ್ಣನ್ ಅವರಿಗೆ ಮಾಸ್ಕೋದಲ್ಲಿ ನೀಡಿದ ಬೀಳ್ಕೊಡುಗೆ ಸಮಾರಂಭದಲ್ಲಿ ಹೀಗೆ ಹೇಳಿದರು .
2. ರಾಧಾಕೃಷ್ಣನ್ ಅವರ ವಿದ್ಯಾಭ್ಯಾಸ ಎಲ್ಲೆಲ್ಲಿ ನಡೆಯಿತು ?
ಉತ್ತರ : ರಾಧಾಕೃಷ್ಣನ್ ಅವರ ವಿದ್ಯಾಭ್ಯಾಸವು ತಿರುಪತಿಯ ಹರ್ಮನ್ಸ್ ಬರ್ಗ್ ಮಿಷನರಿ ಶಾಲೆಯಲ್ಲಿ ಪ್ರೌಢಶಾಲಾ ಶಿಕ್ಷಣವನ್ನು ಮುಗಿಸಿದರು , ವೆಲ್ಲೂರಿನ ಮೂರ್ ಕಾಲೇಜಿಗೆ ಬಿ . ಎ . ಪೂರ್ವದ ಎರಡು ವಷಗಳ ಕಲಾ ಪದವಿಗೆ ಸೇರಿದರು .
ಮಿಷನರಿ ಶಾಲೆಯ ಶಿಸ್ತಿನ ತರಬೇತಿಯಿಂದ ರಾಧಾಕೃಷ್ಣನ್ ಅವರ ಮನಸ್ಸು ನಿಧಾನವಾಗಿ ಅಧ್ಯಯನದತ್ತ ವಾಲಿತು . ಮದ್ರಾಸಿನ ಕ್ರಿಶ್ಚಿಯನ್ ಕಾಲೇಜಿನಲ್ಲಿ ಬಿ . ಎ . ಪದವಿಗೆ ಸೇರಿದರಲ್ಲದೆ ತತ್ತ್ವಶಾಸ್ತ್ರದ ಉತ್ತಮ ವಿದ್ಯಾರ್ಥಿ ಎನಿಸಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದರು .
ತಮ್ಮ ಆಸಕ್ತಿಯ ವಿಷಯವಾದ ತತ್ತ್ವಶಾಸ್ತ್ರದಲ್ಲಿ ಎಂ.ಎ. ಪದವಿಯನ್ನು ಪಡೆದರು . ಹೀಗೆ ರಾಧಾಕೃಷ್ಣನವರು ವಿದ್ಯಾಭ್ಯಾಸ ನಡೆಯಿತು ,
3 , ರಾಧಾಕೃಷ್ಣನ್ ಅವರ ವೇಷಭೂಷಣಗಳ ಬಗ್ಗೆ ಬರೆಯಿರಿ .
ಉತ್ತರ : ರಾಧಾಕೃಷ್ಣನ್ ಅವರ ಬಾಹ್ಯರೂಪ ಎತ್ತರವಾದ ನಿಲುವು , ಬಿಸ್ಕೆಟ್ ಬಣ್ಣದ ರೇಷ್ಮೆಯ ನಿಲುವಂಗಿ , ಶುಭ್ರವೂ ನಿರಾಡಂಬರವೂ ಆದ ಬಿಳಿಯ ಪಂಚೆ ಮತ್ತು ರುಮಾಲು , ಕೋಪಸೂಚಕವಲ್ಲದ ಹುಬ್ಬು ,
ಯಾವುದೋ ಸಮಸ್ಯೆಯ ಒಳಹೋಗುವಂತಿರುವ ಕಣ್ಣನೋಟ , ಮುಗುಳುನಗೆಯ ಸುಳಿವು ಇವು ಭಾರತೀಯರೆಲ್ಲರಿಗೂ ಪರಿಚಿತ . ಪ್ರಪಂಚದ ಫ್ಯಾಷನ್ ಎಷ್ಟೇ ಬದಲಾದರೂ ರಾಧಾಕೃಷ್ಣನ್ ತಮ್ಮ ವೇಷಭೂಷಣಗಳನ್ನು ಕೊನೆಯವರೆಗೂ ಜತನವಾಗಿ ಉಳಿಸಿಕೊಂಡಿದ್ದರು .
4. ಶಿಕ್ಷಣದ ಮಹತ್ವವನ್ನು ಕುರಿತು ರಾಧಾಕೃಷ್ಣನ್ ಅವರು ಏನು ಹೇಳಿದ್ದಾರೆ ?
ಉತ್ತರ : ಶಿಕ್ಷಣದ ಮಹತ್ವವನ್ನು ಮನಗಂಡ ರಾಧಾಕೃಷ್ಣನ್ ಅವರು “ ಶಿಕ್ಷಣವು ಜೀವನದ ಅವಿಭಾಜ್ಯ ಅಂಗ , ಅದು ಮಾನವನನ್ನು ಪರಿಪೂರ್ಣತೆ ಹಾಗೂ ಸುಸಂಸ್ಕೃತಿಯತ್ತ ಒಯ್ಯುವ ಸಾಧನ ಮಾರ್ಗ ” ಎಂದಿದ್ದಾರೆ . ಮನುಷ್ಯನಿಗೆ ಕಣ್ಣು , ಕಿವಿ , ಬಾಯಿ , ಮುಂತಾದ ಅಂಗಗಳು ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಶಿಕ್ಷಣ ಎಂದಿದ್ದಾರೆ .
5. ರಾಧಾಕೃಷ್ಣನ್ ಅವರಿಗೆ ಸಂದ ಪ್ರಶಸ್ತಿ ಪುರಸ್ಕಾರಗಳು ಯಾವುವು ?
ಉತ್ತರ : ರಾಧಾಕೃಷ್ಣನ್ ಅವರ ಸ್ಮರಣೀಯ ಸೇವೆಯನ್ನು ಗುರುತಿಸಿ ಭಾರತ ಸರ್ಕಾರದ ಅತ್ಯುನ್ನತ ಪ್ರಶಸ್ತಿಯಾದ ‘ ಭಾರತರತ್ನ’ವನ್ನು ನೀಡಿ ಗೌರವಿಸಲಾಯಿತು . ಬ್ರಸೆಲ್ಸ್ನ ಮೈ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿಯನ್ನು ಪ್ರದಾನ ಮಾಡಿತು .
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ , ಭಾರತೀಯ ವಿದ್ಯಾಭವನದ ‘ ಬ್ರಹ್ಮವಿದ್ಯಾಭಾಸ್ಕರ ‘ ಬಿರುದಿಗೂ ಪಾತ್ರರಾದರು ಹೀಗೆ ಇವರಿಗೆ ದೇಶ ವಿದೇಶಗಳ ಹಲವಾರು ಗೌರವ ಪದವಿಗಳು , ಮರಸ್ಕಾರಗಳು ದೊರಕಿದವು .
ಆ ) ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು – ಹತ್ತು ವಾಕ್ಯಗಳಲ್ಲಿ ಉತ್ತರಿಸಿ ,
1 ) ರಾಧಾಕೃಷ್ಣನ್ ಅವರು ಅಧ್ಯಾಪಕರಾಗಿ ಸಲ್ಲಿಸಿದ ಸೇವೆಯನ್ನು ಕುರಿತು ವಿವರಿಸಿ .
ಉತ್ತರ : ರಾಧಾಕೃಷ್ಣನ್ ಅವರು ಮದ್ರಾಸಿನ ಪ್ರೆಸಿಡೆನ್ಸಿ ಕಾಲೇಜು , ಸಯ್ಯದ್ ಪೇಟೆಯ ಟೀಚರ್ ಟ್ರೈನಿಂಗ್ ಕಾಲೇಜು , ಆಂಧ್ರದ ಅನಂತಪುರ ಹಾಗೂ ರಾಜಮಂಡ್ರಿಯ ಸರ್ಕಾರಿ ಕಲಾ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿದರು .
ಮೈಸೂರು ವಿಶ್ವವಿದ್ಯಾನಿಲಯದಲ್ಲಿ ತತ್ತ್ವಶಾಸ್ತ್ರದ ಉಪಪ್ರಾಧ್ಯಾಪಕರಾಗಿ ಹಾಗೂ ಕೋಡ್ಕೊತಾದಲ್ಲಿ ( ಹಿಂದಿನ ಕಲ್ಕತ್ತಾ ) ಪ್ರಾಧ್ಯಾಪಕರಾಗಿ ಸಲ್ಲಿಸಿದ ಸೇವೆ ಸ್ಮರಣೀಯ . ಇದಲ್ಲದೆ ಆಂಧ್ರ , ದೆಹಲಿ , ಬನಾರಸ್ ವಿಶ್ವವಿದ್ಯಾಲಯಗಳಲ್ಲಿ ಕುಲಪತಿಯಾಗಿ ಸೇವೆ ಸಲ್ಲಿಸಿ , ಅವುಗಳ ಪುರೋಭಿವೃದ್ಧಿಗೆ ಶ್ರಮಿಸಿದರು .
ಆಕ್ಸ್ಫರ್ಡ್ ವಿಶ್ವವಿದ್ಯಾಲಯದಲ್ಲೂ ಸಂದರ್ಶಕ ಪ್ರಧ್ಯಾಪಕರಾಗಿ ಕಾರ್ಯ ನಿರ್ವಹಿಸಿದರು . ರಾಧಾಕೃಷ್ಣನ್ ಅವರ ಬೋಧನಾ ಶೈಲಿ , ನಿರರ್ಗಳತೆ , ವಿಷಯದ ಮೇಲಿನ ಪ್ರಭುತ್ವ ವಿದ್ಯಾರ್ಥಿಗಳನ್ನು ಬಹುಬೇಗ ಆಕರ್ಷಿಸಿತು ,
ತಮ್ಮ ಪಾದ್ಯಾಪಕತ್ವವನ್ನು ಯಾವಾಗಲೆಂದರೆ ಆವಾಗ ಕಳಚಿ ಏರು ಜವ್ವನದ ಯುವಕರಂತೆ ಹಾಸ್ಯ ವಿನೋದಗಳಲ್ಲಿ ತೊಡಗುತ್ತಿದ್ದರು,
2 ) ರಾಧಾಕೃಷ್ಣನ್ ಅವರಿಗೆ ಮೈಸೂರಿನಲ್ಲಿ ನೀಡಿದ ಬೀಳ್ಕೊಡುಗೆಯ ವಿಶೇಷತೆಯನ್ನು ಕುರಿತು ವಿವರಿಸಿ ,
ಉತ್ತರ : ಕೋಲ್ಗೊತ ವಿಶ್ವವಿದ್ಯಾಲಯದ ತತ್ತ್ವಶಾಸ್ತ್ರ ಪ್ರಾಧ್ಯಾಪಕರಾಗಿ ನೇಮಕಗೊಂಡಾಗ ಮೈಸೂರಿನಿಂದ ಹೊರಟ ದಿನ ಅವರಿಗೆ ಕೊಟ್ಟಂತಹ ವೈಭವದ ಬೀಳ್ಕೊಡುಗೆ ಯಾವ ಚಕ್ರವರ್ತಿಗೂ ದೊರೆತಿರಲಾರದು .
ಅಂದಿನ ವಾತಾವರಣದಲ್ಲಿದ್ದುದು ವೈಭವಕ್ಕಿಂತ ಹೆಚ್ಚಾಗಿ ಹೃದಯದಿಂದ ನೇರವಾಗಿ ಹೊರಹೊಮ್ಮಿದ ಗುರುಪ್ರೇಮ , ವಿದ್ಯಾರ್ಥಿಗಳೆಲ್ಲರಲ್ಲೂ ಭಕ್ತಿಪ್ರೇಮದ ಚಿಲುಮೆ ಉಕ್ಕಿಬಂತು .
ರಾಧಾಕೃಷ್ಣನ್ ಅವರನ್ನು ಮಹಾರಾಜ ಕಾಲೇಜಿನಿಂದ ರೈಲು ನಿಲ್ದಾಣಕ್ಕೆ ಕರೆದೊಯ್ಯುವಾಗ ಸಾರೋಟಿಗೆ ಕುದುರೆಯನ್ನು ಕಟ್ಟಲಿಲ್ಲ . ಸ್ವತಃ ವಿದ್ಯಾರ್ಥಿಗಳೇ ಎಳೆದೊಯ್ದರು .
ಧಾಕೃಷ್ಣನ್ ಅವರಿಗಾಗಿ ಕಾದಿರಿಸಿದ್ದ ಕಂಪಾರ್ಟ್ಮೆಂಟ್ನ್ನು ಒರಗು ದಿಂಬು ಹಾಗೂ ರತ್ನಗಂಬಳಿಯನ್ನು ಹಾಸಿ ಮಲಗುವ ಸೀಟನ್ನು ನೆಲವನ್ನು ಹೂವಿನಿಂದ ಸುಪ್ಪತ್ತಿಗೆಯಂತೆ ಮಾಡಿ ದೈವಮಂದಿರವನ್ನು ಭಕ್ತರು ಅಲಂಕಾರ ಮಾಡುವಂತೆ ಮಾಡಿದ್ದರು .
“ ರಾಧಾಕೃಷ್ಣನ್ ಅವರಿಗೆ ಜಯವಾಗಲಿ ” ಎಂಬ ಕೂಗು ರೈಲ್ವೆ ಸ್ಟೇಷನ್ನಿನ ಆವರಣದಲ್ಲೆಲ್ಲ ಮೊಳಗುತ್ತಿತ್ತು . ಆ ದಿನ ಭಾವೋದ್ರೇಕದಿಂದ ಆದಷ್ಟು ಜನ ಅತ್ತರೋ , ವಿದ್ಯಾರ್ಥಿಗಳು ತೋರಿದ ವಿಶ್ವಾಸ ಅವರ ಕಣ್ಣಿನಲ್ಲೂ ನೀರು ತಂದಿತು .
3) . ಹಿಂದೂ ಧರ್ಮ ಮತ್ತು ತತ್ತ್ವಶಾಸ್ತ್ರದ ಬಗ್ಗೆ ರಾಧಾಕೃಷ್ಣನ್ ಅಭಿಪ್ರಾಯವೇನು ? ವಿವರಿಸಿ.
ಉತ್ತರ : ರಾಧಾಕೃಷ್ಣನ್ ಅವರು ಹಿಂದೂ ಧರ್ಮದ ತತ್ವಶಾಸ್ತ್ರ ಮತ್ತು ಸಾಹಿತ್ಯವನ್ನೆಲ್ಲ ಅಧ್ಯಯನ ಮಾಡಿದರು . ಯೂರೋಪಿಯನ್ ತತ್ತ್ವಶಾಸ್ತ್ರ ಮತ್ತು ಸಾಹಿತ್ಯದ ಅಭಿವ್ಯಕ್ತಿ ವಿಚಾರಗಳಿಂದ ಅವರ ವಿಶ್ವದೃಷ್ಟಿ ಮತ್ತು ತಾತ್ವಿಕ ದೃಷ್ಟಿಕೋನ ಪ್ರಭಾವಿತವಾಯಿತು .
ಸ್ವಾಮಿ ವಿವೇಕಾನಂದರ ವಿಚಾರಧಾರೆ ಅವರ ಮನವನ್ನು ಆಕರ್ಷಿಸಿತು . ಅವರು “ ಹಿಂದೂ ಧರ್ಮವು ಒಂದು ವೈಚಾರಿಕ ಜೀವನ ಮಾರ್ಗವೆಂದೂ , ನೈತಿಕ ಗುಣಾತ್ಮಕ ವಿಷಯಗಳಿಂದ ಕೂಡಿದ್ದು , ಮಾನವನ ಆಂತರಿಕ ಜೀವನದ ಬಗ್ಗೆ ಪ್ರಾಮುಖ್ಯತೆವುಳ್ಳದ್ದಾಗಿದೆ . ಹಿಂದೂಧರ್ಮವಾಗಲಿ , ವೇದಾಂತವಾಗಲಿ ಅಸತ್ಯವನ್ನು ಹೇಳುವುದಿಲ್ಲ .
ಭಾರತೀಯ ಚಿಂತನೆಗಳು ಯಾವುದೇ ವಿಚಿತ್ರ ಮತ್ತು ನಿಗೂಢ ಪರಿಕಲ್ಪನೆಗಳಾಗಿಲ್ಲ ಜೀವನದ ನಾಡಿಮಿಡಿತಗಳನ್ನು ಸೂಕ್ಷ್ಮ ಮನಸ್ಸಿನ ಚಿಂತನೆಗಳನ್ನು ತಿಳಿಯಪಡಿಸುವುದಾಗಿದೆ ” ಎಂದು ಸರಳವಾಗಿ ಹೇಳಿದರು .
ಈ ) ಕೊಟ್ಟಿರುವ ವಾಕ್ಯಗಳ ಸಂದರ್ಭ ಸಹಿತ ಸ್ವಾರಸ್ಯವನ್ನು ವಿವರಿಸಿ ,
1 , ನೀವೊಬ್ಬರೆ ನನ್ನನ್ನು ಒಬ್ಬ ಮನುಷ್ಯನಂತೆ ಕಂಡು ವರ್ತಿಸಿದವರು.
ಆಯ್ಕೆ : ಈ ವಾಕ್ಯವನ್ನು ಕೆ . ಎಸ್ . ರತ್ನಮ್ಮ ಡಾ . ಎಸ್ . ರಾಧಾಕೃಷ್ಣನ್ – ಜೀವನ ಸಾಧನೆ ಮತ್ತು ಎ.ಎನ್ . ಮೂರ್ತಿರಾವ್ ಅವರ ಚಿತ್ರಗಳು – ಪತ್ರಗಳು ಕೃತಿಗಳ ಆಧಾರದಿಂದ ಪಠ್ಯಪುಸ್ತಕ ರಚನಾ ಸಮಿತಿ ಸಿದ್ಧಪಡಿಸಿರುವ ‘ ಆದರ್ಶ ಶಿಕ್ಷಕ ಸರ್ವೇಪಲ್ಲಿ ರಾಧಾಕೃಷ್ಣನ್ ‘ ವ್ಯಕ್ತಿಚಿತ್ರ ಗದ್ಯ ಭಾಗದಿಂದ ಆರಿಸಲಾಗಿದೆ .
ಸಂದರ್ಭ:- ನೆಹರೂ ಅವರು ರಾಧಾಕೃಷ್ಣನ್ ಅವರನ್ನು ಮಾಸ್ಕೋದಲ್ಲಿ ಭಾರತದ ರಾಯಭಾರಿಯಾಗಿ ನೇಮಿಸಿ ಕಳುಹಿಸಿದರು , ರಷ್ಯಾದ ಅಧ್ಯಕ್ಷರಾಗಿದ್ದ ಸ್ಟಾಲಿನ್
ಅವರ ಸ್ನೇಹ ಸೌಹಾರ್ದಗಳ ಭೇಟಿ ಫಲಪ್ರದವಾಗಿ ಮತ್ತೆ ಭಾರತಕ್ಕೆ ಹಿಂತಿರುಗುವ ಸಂದರ್ಭದಲ್ಲಿ ರಷ್ಯಾ ದೇಶದ ಅಧ್ಯಕ್ಷ ಸ್ಟಾಲಿನ್ ಅವರು ರಾಧಾಕೃಷ್ಣನ್ ಅವರಿಗೆ ಮಾಸ್ಕೋದಲ್ಲಿ ನೀಡಿದ ಬೀಳ್ಕೊಡುಗೆ ಸಮಾರಂಭದಲ್ಲಿ ಹೀಗೆ ಹೇಳಿದರು .
ಸ್ವಾರಸ್ಯ : ರಷ್ಯಾದ ಅಧ್ಯಕ್ಷರಾಗಿದ್ದ ಸ್ಟಾಲಿನ್ ಅವರನ್ನು ಇಡೀ ರಷ್ಯಾ ದೇಶವೇ ಒಂದು ರೀತಿ ನೋಡಿದರೆ ರಾಧಾಕೃಷ್ಣನ್ ಅವರು ಬೇರೆ ರೀತಿ ನೋಡಿದ್ದಾರೆ . ಇವರ ಸ್ನೇಹಪರತೆ , ಸನ್ನಡತೆಗಳು ಸ್ವಾರಸ್ಯಕರವಾಗಿದೆ
2. “ ಆರ್ಥಿಕ ಪರಿಸ್ಥಿತಿ ತಮ್ಮ ಸಾಧನೆಯಲ್ಲಿ ನಿವಾರಿಸಲಾಗದ ತೊಡಕೆಂದು ಭಾವಿಸಲಿಲ್ಲ ”
ಆಯ್ಕೆ : ಈ ವಾಕ್ಯವನ್ನು ಕೆ . ಎಸ್ . ರತ್ನಮ್ಮ ಅವರ ಡಾ . ಎಸ್ . ರಾಧಾಕೃಷ್ಣನ್ – ಜೀವನ ಸಾಧನೆ ಮತ್ತು ಎ.ಎನ್ . ಮೂರ್ತಿರಾವ್ ಅವರ ಚಿತ್ರಗಳು – ಪತ್ರಗಳು ಕೃತಿಗಳ ಆಧಾರದಿಂದ ಪಠ್ಯಪುಸ್ತಕ ರಚನಾ ಸಮಿತಿ ಸಿದ್ಧಪಡಿಸಿರುವ ‘ ಆದರ್ಶ ಶಿಕ್ಷಕ ಸರ್ವೇಪಲ್ಲಿ ರಾಧಾಕೃಷ್ಣನ್ ‘ ವ್ಯಕ್ತಿಚಿತ್ರ ಗದ್ಯ ಭಾಗದಿಂದ ಆರಿಸಲಾಗಿದೆ
ಸಂದರ್ಭ ; ರಾಧಾಕೃಷ್ಣನ್ ಅವರು ವಿದ್ಯಾರ್ಥಿಯಾಗಿದ್ದಾಗ ಮನೆಯ ಜವಾಬ್ದಾರಿ ಹೊತ್ತ ಇವರು ಕಿರಿಯ ಸಹಪಾಠಿಗಳಿಗೆ ಮನೆಯ ಪಾಠ ಹೇಳಿ ಹಣಗಳಿಸುತ್ತಿದ್ದರು , ಆರ್ಥಿಕ ಪರಿಸ್ಥಿತಿ ತಮ್ಮ ಸಾಧನೆಯಲ್ಲಿ ನಿವಾರಿಸಲಾಗದ ತೊಡಕೆಂದು ಭಾವಿಸಲಿಲ್ಲ .
ಬಡತನದ ಬೇಗೆಯಲ್ಲೇ ತಮ್ಮ ಆಸಕ್ತಿಯ ವಿಷಯವಾದ ತತ್ತ್ವಶಾಸ್ತ್ರದಲ್ಲಿ ಎಂ.ಎ. ಪದವಿಯನ್ನು ಪಡೆದರು . ಆ ಸಂದರ್ಭದಲ್ಲಿ ಈ ಮಾತು ಬಂದಿದೆ .
ಸ್ವಾರಸ್ಯ : ಸಾಧನೆ ಮಾಡುವ ಮನಸೊಂದು ಇದ್ದರೆ ಸಾಕು ಏನಾದರೂ ಒಂದು ಸಾಧನೆ ಮಾಡಬಹುದು , ರಾಧಾಕೃಷ್ಣನ್ ಅವರು ವಿದ್ಯಾಭ್ಯಾಸ ಮಾಡುವಾಗ ಅವರ ಮನೆಯ ಪರಿಸ್ಥಿತಿ ಅಷ್ಟು ಚನ್ನಾಗಿ ಇರಲಿಲ್ಲ ಆದರೂ ಮನೆ ಪಾಠ ಹೇಳಿ ತತ್ವಶಾಸ್ತ್ರದಲ್ಲಿ ಎಂ.ಎ ಪದವಿ ಪಡೆದಿರುವುದನ್ನು ಸ್ವಾರಸ್ಯಕರವಾಗಿ ವರ್ಣಿಸಲಾಗಿದೆ.
3 “ ಏರು ಜವ್ವನದ ಯುವಕರಂತೆ ಹಾಸ್ಯ ವಿನೋದಗಳಲ್ಲಿ ತೊಡಗುತ್ತಿದ್ದರು ”
ಆಯ್ಕೆ : ಈ ವಾಕ್ಯವನ್ನು ಕೆ . ಎಸ್ , ರತ್ನಮ್ಮ ಅವರ ಡಾ . ಎಸ್ . ರಾಧಾಕೃಷ್ಣನ್ – ಜೀವನ ಸಾಧನೆ ಮತ್ತು ಎ.ಎನ್ . ಮೂರ್ತಿರಾವ್ ಅವರ ಚಿತ್ರಗಳು – ಪತ್ರಗಳು ಕೃತಿಗಳ ಆಧಾರದಿಂದ ಪಠ್ಯಪುಸ್ತಕ ರಚನಾ ಸಮಿತಿ ಸಿದ್ಧಪಡಿಸಿರುವ ‘ ಆದರ್ಶ ಶಿಕ್ಷಕ ಸರ್ವೇಪಲ್ಲಿ ರಾಧಾಕೃಷ್ಣನ್ ‘ ವ್ಯಕ್ತಿಚಿತ್ರ ಗದ್ಯ ಭಾಗದಿಂದ ಆರಿಸಲಾಗಿದೆ .
ಸಂದರ್ಭ : ರಾಧಾಕೃಷ್ಣನ್ ಅವರ ಬೋಧನಾ ಶೈಲಿ , ನಿರರ್ಗಳತೆ , ವಿಷಯದ ಮೇಲಿನ ಪ್ರಭುತ್ವ ವಿದ್ಯಾರ್ಥಿಗಳನ್ನು ಬಹುಬೇಗ ಆಕರ್ಷಿಸಿತು . ತಮ್ಮ ಪ್ರಾಧ್ಯಾಪಕತ್ವವನ್ನು ಯಾವಾಗಲೆಂದರೆ ಆವಾಗ ಕಳಚಿ ಏರು ಜವ್ವನದ ಯುವಕರಂತೆ ಹಾಸ್ಯ ವಿನೋದಗಳಲ್ಲಿ ತೊಡಗುತ್ತಿದ್ದರು . ಆ ಸಂದರ್ಭದಲ್ಲಿ ಈ ಮಾತು ಬಂದಿದೆ .
ಸ್ವಾರಸ್ಯ : ಶಿಕ್ಷಕನೊಬ್ಬನ ಗೌರವವು ಬೋಧನೆಯಿಂದಲೇ ವೃದ್ಧಿಸುತ್ತದೆ . ಜತೆಗೆ ವ್ಯಕ್ತಿತ್ವದ ಸೌಜನ್ಯ , ಸ್ನೇಹಶೀಲತೆ ಎಲ್ಲರ ಗಮನವನ್ನೂ ಸೆಳೆಯುತ್ತದೆ . ಎಂಬುದು ಸ್ವಾರಸ್ಯಕರವಾಗಿದೆ .
4. “ ಆಶೋಕನು ಕಳಿಂಗ ಯುದ್ಧದ ಅನಂತರ ಶ್ರೇಷ್ಠ ಮನುಷ್ಯನಾದಂತೆ ನೀವೂ ಆಗುವಿರಿ ”
ಆಯ್ಕೆ : ಈ ವಾಕ್ಯವನ್ನು ಕೆ , ಎಸ್ , ರತ್ನಮ್ಮ ಅವರ ಡಾ . ಎಸ್ . ರಾಧಾಕೃಷ್ಣನ್ – ಜೀವನ ಸಾಧನೆ ಮತ್ತು ಎ.ಎನ್ . ಮೂರ್ತಿರಾವ್ ಅವರ ಚಿತ್ರಗಳು – ಪತ್ರಗಳು ಕೃತಿಗಳ ಆಧಾರದಿಂದ ಪಠ್ಯಪುಸ್ತಕ ರಚನಾ ಸಮಿತಿ ಸಿದ್ಧಪಡಿಸಿರುವ ‘ ಆದರ್ಶ ಶಿಕ್ಷಕ ಸರ್ವೇಪಲ್ಲಿ ರಾಧಾಕೃಷ್ಣನ್ ‘ ವ್ಯಕ್ತಿಚಿತ್ರ ಗದ್ಯ ಭಾಗದಿಂದ ಆರಿಸಲಾಗಿದೆ .
ಸಂದರ್ಭ : ರಷ್ಯಾ ದೇಶದ ಅಧ್ಯಕ್ಷ ಸ್ಟಾಲಿನ್ ಅವರು ರಾಧಾಕೃಷ್ಣನ್ ಅವರಿಗೆ ಮಾಸ್ಕೋದಲ್ಲಿ ನೀಡಿದ ಬೀಳ್ಕೊಡುಗೆ ಸಮಾರಂಭದಲ್ಲಿ ಸ್ಟಾಲಿನ್ ಅವರು ಭಾಷಣ ಮಾಡುವ ಸಂದರ್ಭದಲ್ಲಿ ರಾಧಾಕೃಷ್ಣನ್ ಅವರ ಪ್ರಥಮ ಭೇಟಿಯ ಮಾತುಗಳನ್ನು ಸ್ಮರಿಸಿಕೊಂಡರು .
ಸ್ವಾರಸ್ಯ : ರಷ್ಯಾ ದೇಶದ ಅಧ್ಯಕ್ಷರಾದ ಸ್ಟಾಲಿನ್ ಅವರನ್ನು ಬೇರೆಯವರು ನೋಡಿ ಮಾತನಾಡಿಸಿದ ರೀತಿಯೇ ಬೇರೆ ರಾಧಾಕೃಷ್ಣನ್ ಅವರು ನೋಡಿದ ರೀತಿಯೇ ಬೇರೆ ಎಂಬುದು ಸ್ವಾರಸ್ಯಕರವಾಗಿದೆ .
5 , “ ಮಾನವತೆಯೇ ವಿಶ್ವ ಅನುಸರಿಸಬೇಕಾದ ಮಾರ್ಗ ”
ಆಯ್ಕೆ : ಈ ವಾಕ್ಯವನ್ನು ಕೆ . ಎಸ್ . ರತ್ನಮ್ಮ ಅವರ ಡಾ . ಎಸ್ . ರಾಧಾಕೃಷ್ಣನ್ – ಜೀವನ ಸಾಧನೆ ಮತ್ತು ಎ.ಎನ್ . ಮೂರ್ತಿರಾವ್ ಅವರ ಚಿತ್ರಗಳು – ಪತ್ರಗಳು ಕೃತಿಗಳ ಆಧಾರದಿಂದ ಪಠ್ಯಪುಸ್ತಕ ರಚನಾ ಸಮಿತಿ ಸಿದ್ಧಪಡಿಸಿರುವ ‘ ಆದರ್ಶ ಶಿಕ್ಷಕ ಸರ್ವೇಪಲ್ಲಿ ರಾಧಾಕೃಷ್ಣನ್ ‘ ವ್ಯಕ್ತಿಚಿತ್ರ ಗದ್ಯ ಭಾಗದಿಂದ ಆರಿಸಲಾಗಿದೆ ,
ಸಂದರ್ಭ : ಕೆನಡಾ ದೇಶದ ರೇಡಿಯೋ ಪ್ರಸಾರ ಭಾಷಣದಲ್ಲಿ “ ಮಾನವತೆಯೇ ವಿಶ್ವ ಅನುಸರಿಸಬೇಕಾದ ಮಾರ್ಗ ” ಎಂದು ತಮ್ಮ ನಿಲುವನ್ನು ಅಭಿವ್ಯಕ್ತಿಸಿದ ಸಂದರ್ಭದಲ್ಲಿ ರಾಧಾಕೃಷ್ಣನ್ ಅವರು ಈ ಮಾತನ್ನು ಹೇಳಿದ್ದಾರೆ ,
ಸ್ವಾರಸ್ಯ : ಪ್ರತಿಯೊಂದು ಧರ್ಮದ ಅಂತಿಮ ಸತ್ಯ ಒಂದೇ . ಪ್ರತಿ ಧರ್ಮವೂ ಅದರ ಶ್ರೇಷ್ಟ ಗುಣವನ್ನು ತೋರುತ್ತದೆ . ಅದು ಮಾನವತೆಯೇ ಎಂಬ ರಾಧಾಕೃಷ್ಣನ್ ಅವರ ಮಾತಿನಲ್ಲಿ ಸ್ವಾರಸ್ಯಕರವಾಗಿದೆ .
ಉ ) ಕೊಟ್ಟಿರುವ ಪ್ರತಿಯೊಂದು ಪ್ರಶ್ನೆಗೂ ನೀಡಿರುವ ನಾಲ್ಕು ಆಯ್ಕೆಗಳಲ್ಲಿ ಸೂಕ್ತ ಉತ್ತರವನ್ನು ಆರಿಸಿ ಬರೆಯಿರಿ .
1. ರಾಧಾಕೃಷ್ಣನ್ ಅವರ ಸಾಧನೆಯಲ್ಲಿ ವಿಶೇಷ ಸಹಕಾರ ನೀಡಿದವರು…………………………….
( ತಂದೆ , ತಾಯಿ , ಪತ್ನಿ , ಸಹೋದರಿ )
2. ಮದಾಸ್ತಿನ ಕಿಶ್ಚಿಯನ್ ಶಾಲೆಯಲ್ಲಿ ರಾಧಾಕೃಷ್ಣನ್ ಅವರು ಉತ್ತಮ ವಿದ್ಯಾರ್ಥಿ ಎಂದು ಪರಿಗಣಿಸಲ್ಪಟ್ಟ ವಿಷಯ………………………
( ಸಮಾಜಶಾಸ್ತ್ರ , ರಾಜ್ಯಶಾಸ್ತ್ರ , ಧರ್ಮಶಾಸ್ತ್ರ , ತತ್ತ್ವಶಾಸ್ತ್ರ )
3. ರಾಧಾಕೃಷ್ಣನ್ ಅವರು ಸಂದರ್ಶಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ ವಿಶ್ವವಿದ್ಯಾನಿಲಯ…………….
( ಬನಾರಸ್ , ಕೇಂಬ್ರಿಡ್ , ಆಕ್ಸ್ಫರ್ಡ್ , ಉಸ್ಮಾನಿಯ )
4 , “ ಮಾನವತೆಯೇ ವಿಶ್ವ ಅನುಸರಿಸಬೇಕಾದ ಮಾರ್ಗ ” ಎಂದು ರಾಧಾಕೃಷ್ಣನ್ ಅವರು ರೇಡಿಯೋ ಪ್ರಸಾರ ಭಾಷಣ ಮಾಡಿದ ದೇ………………………
( ಇಂಗ್ಲೆಂಡ್ , ಕೆನಡಾ , ಆಮೇರಿಕ , ರಷ್ಯಾ )
5. ಭಾರತ ಮತ್ತು ರಷ್ಯಾದ ಬಾಂಧವ್ಯವನ್ನು ವೃದ್ಧಿಗೊಳಿಸಿದ ರಾಧಾಕೃಷ್ಣನ್ ಅವರನ್ನು ಪ್ರಶಂಸಿಸಿದವರು…………….
( ಮಹಾತ್ಮಗಾಂಧೀಜಿ , ಜವಾಹರಲಾಲ್ ನೆಹರು ಸ್ಟಾಲಿನ್ , ಸಿಇ.ಎಂ , ಜೋಡ್ )
ಸರಿಯುತ್ತರಗಳು ,
I , ಪತ್ನಿ
2. ತತ್ವಶಾಸ್ತ್ರ
3 , ಆಕ್ಸ್ ಫರ್ಡ್
4 ಕಿನಂಶ
5 , ಜವಾಹರಲಾಲ್ ನೆಹರು
ಊ) ಹೊಂದಿಸಿ ಬರೆಯಿರಿ ,
“ಅ” ಪಟ್ಟಿ “ಆ” ಪಟ್ಟಿ
1 , ಸ್ಟಾಲಿನ್ ರಾಷ್ಟ್ರೀಯ ಶಿಕ್ಷಕರ ದಿನಾಚರಣೆ
2 , ಹರ್ಮನ್ಸ್ ಬರ್ಗ್ ಮಿಷನರಿ ಶಾಲೆ
3 , ಭಾರತೀಯ ವಿದ್ಯಾಭವನ ಮಾಸ್ಕೊ
4 , ಆಕ್ಸ್ಫರ್ಡ್ ವಿಶ್ವವಿದ್ಯಾಲಯ ಬ್ರಹ್ಮವಿದ್ಯಾಭಾಸ್ಕರ
5, ಸೆಪ್ಟೆಂಬರ್ 05 ಬ್ರಹ್ಮವಿದ್ಯಾಭಾಸ್ಕರ
ಸ್ವಾತಂತ್ರ್ಯ ದಿನಾಚರಣೆ ,
ಸರಿಯುತ್ತದಗಳು .
1 ಮಾಸ್ಕೋ
2 ಮಿಷನರಿ ಶಾಲಿ
3 ಬ್ರಹ್ಮವಿದ್ಯಾಭಾಸ್ಕರ
4. ವಿಶ್ವವಿದ್ಯಾಲಯ
5. ರಾಷ್ಟ್ರೀಯ ಶಿಕ್ಷಕರ ದಿನಾಚರಣೆ
ಭಾಷಾ ಚಟುವಟಿಕೆ
ಋ) ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರ ಬರೆಯಿರಿ
1 , ಜಶ್ತ್ವ ಸಂಧಿಯ ಸೂತ್ರವೇನು ?
ಉತ್ತರ : ಪೂರ್ವಪದದ ಕೊನೆಯಲ್ಲಿರುವ ವರ್ಗ ಪ್ರಥಮಾಕ್ಷರಕ್ಕೆ ಅಂದರೆ ಕ್ ಚ್ ಟ್ ತ್ ಪ್ ಗಳಿಗೆ ಅದೇ ವರ್ಗದ ತೃತೀಯಾಕ್ಷರಗಳು ಅಂದರೆ ಗ್ ಜ್ ಡ್ ದ್ ಬ್ ” ಗಳು ಅಂದರೆ ಜಶ್ ಅಕ್ಷರಗಳು ಆದೇಶವಾಗಿ ಬಂದರೆ ಅದೇ ಜಶ್ತ್ವ ಸಂಧಿ .
2. ಶ್ಚುತ್ವ ಸಂಧಿಯನ್ನು ನಿದರ್ಶನದೊಂದಿಗೆ ವಿವರಿಸಿ.
ಉತ್ತರ : ಸ ಕಾರ ತ ವರ್ಗಗಳಿಗೆ ಈ ಕಾರ ಚ ವರ್ಗಗಳು ಅಂದರೆ ಶ್ಚು ಅಕ್ಷರಗಳು ಆದೇಶವಾಗಿ ಬರುವುದಕ್ಕೆ ಶ್ಚುತ್ವ ಸಂದಿ ಎನ್ನುವರು
ಮನಸ್ + ಶಾಂತಿ = ಮನಶ್ಯಾಂತಿ
ಶರತ್ + ಚಂದ್ರ = ಶರಚ್ಚಂದ್ರ
ಜಗತ್ + ಜ್ಯೋತಿ = ಜಗಜ್ಯೋತಿ
ಆ ) ಕೊಟ್ಟಿರುವ ಪದಗಳ ಸಮಾಸ ಹೆಸರಿಸಿ.
ಮುಕ್ಕಣ್ಣ , ಹಣೆಗಣ್ಣ
– ಮೂರು ಕಣ್ಣು ಉಳ್ಳವನು = ಮುಕ್ಕಣ್ಣ = ಶಿವ
– ಹಣೆಯಲ್ಲಿ ಕಣ್ಣುಳ್ಳವನು = ಹಣೆಗಣ್ಣ = ಶಿವ
ಇ ) ಕೊಟ್ಟಿರುವ ಪದಗಳ ಸಂಧಿ ಹೆಸರಿಸಿ.
ವಾಗ್ಗೇವಿ ಚಿದಾನಂದ
ವಾಕ್ + ದೇವಿ = ವಾಗ್ರೇವಿ .
________________________________________
ಚಿತ್ + ಆನಂದ = ಚಿದಾನಂದ
0 Comments