Recent Posts

 ಬಸವಣ್ಣನವರ ವಚನಗಳು - ೧೦ ನೇ ತರಗತಿ ನುಡಿ ಕನ್ನಡ ಪುಸ್ತಕದ ಪ್ರಶ್ನೋತ್ತರಗಳು

 ಬಸವಣ್ಣನವರ ವಚನಗಳು

ಕೃತಿಕಾರರ ಪರಿಚಯ

 
 
-:ಬಸವಣ್ಣ;-                                                                                                       
ಕಾಲ:- 12ನೇ ಶತಮಾನ                                                                             
ಜನ್ಮ ಸ್ಥಳ:- ವಿಜಯಪುರಜಿಲ್ಲೆಯ ಬಾಗೇವಾಡಿ.                                                                      
ಕೃತಿ:- ವಚನಗಳು                                                                                                            
ಅಂಕಿತನಾಮ:- ಕೂಡಲಸಂಗಮದೇವ

ಅ) ಈ ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರವನ್ನು ಬರೆಯಿರಿ.

1) ಬಸವಣ್ಣನವರು ಹೇಳಿರುವಂತೆ ದೇವರನ್ನು ಒಲಿಸುವ ಪರಿಯಾವುದು?
-ಬಸವಣ್ಣನವರು ತಮ್ಮ ವಚನಗಳಲ್ಲಿ ಮಾನವರಾದ ನಾವು ಕಳ್ಳತನ ಕೊಲೆ ಮಾಡಬಾರದು, ಸುಳ್ಳು ಹೇಳಬಾರದು, ಬೇರೆಯವರ ಮೇಲೆ ಕೋಪ ಮಾಡಿಕೊಳ್ಳಬಾರದು, ಇತರರನ್ನು ಕಂಡು ಅಸಹ್ಯಪಡಬಾರದು, ಈ ಎಲ್ಲ ಅಂಶಗಳನ್ನು ಪಾಲಿಸುತ್ತ ಜೀವನ ನಡೆಸಬೇಕು. ಈ ರೀತಿಯಾಗಿ ಜೀವನ ನಡೆಸಿದರೆ ಮಾತ್ರ ಅಂತರಂಗ, ಬಹಿರಂಗ ಶುದ್ಧಿಯಾಗಿ ಕೂಡಲಸಂಗಮನಾದ ದೇವರನ್ನು ಒಲಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಬಸವಣ್ಣನವರು ಹೇಳಿದ್ದಾರೆ.

2) ದೇವಲೋಕ, ಮತ್ರ್ಯಲೋಕವೆಂಬುದು ಬೇರೆ ಎಲ್ಲೂ ಇಲ್ಲವೆಂಬುದನ್ನು ಬಸವಣ್ಣನವರು ಹೇಗೆ ನಿರೂಪಿಸಿದ್ದಾರೆ?
- ಬಸವಣ್ಣನವರು ದೇವಲೋಕ, ಮತ್ರ್ಯಲೋಕವೆಂಬುದು ಬೇರೆ ಇಲ್ಲವೆಂದು ಹೇಳುತ್ತಾರೆ. ಸತ್ಯವನ್ನು ನುಡಿಯುವುದೇ ದೇವಲೋಕ, ಮಿಥ್ಯವ ಅಂದರೆ ಸುಳ್ಳು ನುಡಿಯುವುದೇ ಮತ್ರ್ಯಲೋಕ. ಆಚಾರ ಎಂದರೆ ಒಳ್ಳೆಯ ನಡವಳಿಕೆಯನ್ನು ಪಾಲಿಸುವುದೇ ಸ್ವರ್ಗ, ಅನಾಚಾರ ಎಂದರೆ ಕೆಟ್ಟ ನಡವಳಿಕೆಯನ್ನು ಹೊಂದಿ ಜೀವನವನ್ನು ನಡೆಸುವುದೇ ನರಕ. ಇದಕ್ಕೆ ಕೂಡಲಸಂಗಮದೇವನೇ ಸಾಕ್ಷಿ ಎಂದು ಬಸವಣ್ಣನವರು ಹೇಳುತ್ತಾರೆ.

3) ಅಂತಃಶುದ್ಧಿಯನ್ನು ಕಾಪಾಡಿಕೊಳ್ಳುವುದು ಹೇಗೆ ಎಂದು ಬಸವಣ್ಣನವರು ತಿಳಿಸಿದ್ದಾರೆ?
- ನಾವು ನಮ್ಮ ಜೀವನದಲ್ಲಿ ಒಳ್ಳೆಯ ನಡತೆಯಿಂದ ಅಂತರಂಗ ಶುದ್ಧಿಯನ್ನು ಕಾಪಾಡಿಕೊಳ್ಳಬಹುದು ಎಂದು ಬಸವಣ್ಣನವರು ಹೇಳುತ್ತಾರೆ. ನಮ್ಮ ಜೀವನ ಉನ್ನತ ಮೌಲ್ಯಗಳಿಂದ ಕೂಡಿರಬೇಕು. ಕಳ್ಳತನ, ಕೊಲೆ, ಸುಳ್ಳು ಹೇಳುವುದು, ಇತರರನ್ನು ನಿಂದಿಸುವುದು ಸರಿಯಲ್ಲ. ನಮ್ಮ ಜೀವನದಲ್ಲಿ ಉತ್ತಮವಾದ ಮೌಲ್ಯಗಳನ್ನು ಅಳವಡಿಸಿಕೊಂಡಾಗ ಮಾತ್ರ ಅಂತರಂಗ ಶುದ್ಧಿಯನ್ನು ಕಾಪಾಡಿಕೊಳ್ಳಬಹುದೆಂದು ಬಸವಣ್ಣನವರು ತಿಳಿಸುತ್ತಾರೆ.

4) ಸ್ವರ್ಗ-ನರಕಗಳ ಬಗೆಗೆ ಬಸವಣ್ಣನವರು ಕೊಟ್ಟಂತಹ ಹೊಸ ಸೂತ್ರಯಾವುದು?
- ಬಸವಣ್ಣನವರು ದೇವಲೋಕ, ಮತ್ರ್ಯಲೋಕವೆಂಬುದು ಬೇರೆ ಎಲ್ಲೂ ಇಲ್ಲ. ಈ ಲೋಕದಲ್ಲಿಯೇ ಈ ಎರಡೂ ಲೋಕಗಳಿವೆ ಎಂದು ಹೇಳುತ್ತಾರೆ. ಸತ್ಯ ಮಾರ್ಗ ಅನುಸರಿಸಿದರೆ ಈ ಲೋಕ ಸ್ವರ್ಗವೆನಿಸುವುದು. ಮಿಥ್ಯ ಮಾರ್ಗ ಅನುಸರಿಸಿದರೆ ಈ ಲೋಕ ಮತ್ರ್ಯಲೋಕವೆನಿಸುವುದು. ಆಚಾರ ಎಂದರೆ ಒಳ್ಳೆಯ ನಡತೆಯಿಂದ ಜೀವನ ನಡೆಸಿದರೆ ಈ ಲೋಕವೇ ಸ್ವರ್ಗಲೋಕವೆನಿಸುವುದು. ಅನಾಚಾರ ಎಂದರೆ ದುರಾಚಾರ, ಹೀನಕೃತ್ಯ, ಅನೈತಿಕತೆಯಿಂದ ಜೀವನ ನಡೆಸಿದರೆ ಈ ಲೋಕವೇ ನರಕಲೋಕವಾಗುವುದು ಎಂದು ಬಸವಣ್ಣನವರು ಸ್ವರ್ಗ, ನರಕಗಳ ಬಗೆಗೆ ಹೊಸ ಸೂತ್ರವನ್ನೇ ನೀಡಿದ್ದಾರೆ.

ಆ) ಕೆಳಗಿನ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರ ಬರೆಯಿರಿ.
 
1) ಆತ್ಮಶುದ್ಧಿಗೆ ಬಸವಣ್ಣನವರು ತಿಳಿಸಿರುವ ಸರಳ ಮಾರ್ಗಗಳಾವುವು? ವಿವರಿಸಿರಿ.
- ಬಸವಣ್ಣನವರು ನಾವು ನಮ್ಮ ಅಂತರಂಗ ಎಂದರೆ ಮನಸ್ಸಿನ ಒಳಗೆ ಹಾಗೂ ಬಹಿರಂಗ ಎಂದರೆ ಮನಸ್ಸಿನೂರಗಡೆ ಬಾಹ್ಯ ನಡವಳಿಕೆಗಳನ್ನು ಶುದ್ಧವಾಗಿರಿಸಿಕೊಂಡರೆ ಆತ್ಮಶುದ್ಧಿ ಹೊಂದಲು ಸಾಧ್ಯ ಎಂದು ಹೇಳುತ್ತಾರೆ. ಅಂತರಂಗ ಹಾಗೂ ಬಹಿರಂಗ ಶುದ್ಧಿಗಾಗಿ ಕೆಲವು ಸರಳ ಮಾರ್ಗಗಳನ್ನು ತಿಳಿಸುತ್ತಾರೆ. ನಾವು ಕಳ್ಳತನ, ಕೊಲೆ ಮಾಡಬಾರದು. ಯಾರ ಮೇಲೂ ಕೋಪಿಸಿಕೊಳ್ಳಬಾರದು. ಇತರರನ್ನು ಕಂಡು ಅಸಹ್ಯಪಡಬಾರದು. ತನ್ನನ್ನು ತಾನು ಸ್ತುತಿಸಿಕೊಳ್ಳಬಾರದು. ಯಾರನ್ನೂ ಕೂಡಾ ನಿಂದಿಸಬಾರದು. ಈ ಎಲ್ಲ ಅಂಶಗಳನ್ನು ಮನಸ್ಸಿನಿಂದ ಪಾಲಿಸಿದರೆ ಅಂತರಂಗ ಹಾಗೂ ಬಹಿರಂಗ ಈ ಎರಡು ವಲಯಗಳು ಶುದ್ಧವಾಗಿ ಆತ್ಮಶುದ್ಧಿಯುಂಟಾಗುವುದೆಂದು ಬಸವಣ್ಣನವರು ಹೇಳಿದ್ದಾರೆ.

2) ಅಂತರಂಗ ಮತ್ತು ಬಹಿರಂಗವನ್ನು ಶುದ್ಧಿಯಾಗಿಡುವುದು ಹೇಗೆ ಎಂದು ಬಸವಣ್ಣನವರು ಹೇಳಿದ್ದಾರೆ? ವಿವರಿಸಿ.
- ನಾವು ನಮ್ಮ ಜೀವಮಾನದಲ್ಲಿ ಉತ್ತಮ ನಡವಳಿಕೆ ಹಾಗೂ ಉನ್ನತ ಮೌಲ್ಯಗಳಿಂದ ಅಂತರಂಗ ಹಾಗೂ ಬಹಿರಂಗವನ್ನು ಶುದ್ಧವಾಗಿಟ್ಟುಕೊಳ್ಳಬಹುದೆಂದು ಬಸವಣ್ಣನವರು ಹೇಳಿದ್ದಾರೆ. ಕಳ್ಳತನ ಮಾಡಬಾರದು, ಕೊಲೆಮಾಡಬಾರದು, ಸುಳ್ಳು ಮಾತನಾಡಬಾರದು, ಕೋಪಿಸಿಕೊಳ್ಳಬಾರದು, ಇತರರ ಬಗೆಗೆ ಅಸಹ್ಯ ಪಡಬಾರದು, ತನ್ನನ್ನು ಬಣ್ಣಿಸಬಾರದು, ಇತರರನ್ನು ನಿಂದಿಸಬಾರದು ಈ ಎಲ್ಲ ಅಂಶಗಳನ್ನು ನಾವು ಪಾಲಿಸಿದರೆ ಅಂತರಂಗ, ಬಹಿರಂಗ ಶುದ್ಧವಾಗಿಟ್ಟುಕೊಳ್ಳಲು ಸಾದ್ಯ ವಾಗುತ್ತದೆ ಎಂದು ಬಸವಣ್ಣನವರು ಹೇಳಿದ್ದಾರೆ.

3) ನುಡಿ-ನಡೆಗಳು ಎಲ್ಲಕ್ಕಿಂತ ಮುಖ್ಯವಾದುದೆಂದು ಬಸವಣ್ಣನವರು ಹೇಗೆ ನಿರೂಪಿಸಿದ್ದಾರೆ?
- ಬಸವಣ್ಣನವರು ನಾವು ನಡೆ-ನುಡಿಗಳ ಮೂಲಕ ಇಹಲೋಕವನ್ನು ದೇವಲೋಕವನ್ನಾಗಿ ಪರಿವರ್ತಿಸಿಕೊಳ್ಳಬಹುದೆಂದು ಹೇಳಿದ್ದಾರೆ. ಸತ್ಯವನ್ನು ನುಡಿಯುವುದೇ ದೇವಲೋಕ ಎಂದರೆ ನೀತಿಯುತವಾದ ಜೀವನನ್ನು ನಡೆಸಿದರೆ ಸಮಾಜದಲ್ಲಿ ಒಳ್ಳೆಯ ಹೆಸರು, ಗೌರವ ಸಿಗುತ್ತದೆ. ನಾವಿರುವ ಸ್ಥಳವೇ ನಮಗೆ ಸ್ವರ್ಗದಂತೆ ಅನಿಸುತ್ತದೆ. ಮಿಥ್ಯವನ್ನು ನುಡಿದರೆ ಇದೆ ಮತ್ರ್ಯಲೋಕ ವಾಗುತ್ತದೆ. ಸುಳ್ಳು, ಮೋಸ, ವಂಚನೆಯಿಂದ ಜೀವನ ನಡೆಸಿದರೆ ಜನರ ತಿರಸ್ಕಾರಕ್ಕೆ ನಾವು ಒಳಗಾಗಬೇಕಾಗುತ್ತದೆ. ಸಮಾಜದಿಂದ ಅವಮಾನಿತರಾಗಿ ನರಕಯಾತನೆಯ ಜೀವನ ನಡೆಸಬೇಕಾಗುತ್ತದೆ. ಆದ್ದರಿಂದ ನಮ್ಮ ಜೀವನದಲ್ಲಿ ನುಡಿ ನಡೆಗಳನ್ನು ಶುದ್ಧವಾಗಿಟ್ಟುಕೊಂಡು ಇಹಲೋಕವನ್ನು ದೇವಲೋಕದ ಸ್ವರ್ಗವನ್ನಾಗಿ ಪರಿವತರ್ಿಸಿಕೊಳ್ಳಲು ನಮ್ಮ ನಡೆ-ನುಡಿಗಳು ತುಂಬಾ ಮಹತ್ವದ್ದಾದವು ಎಂದು ಬಸವಣ್ಣನವರು ಹೇಳಿದ್ದಾರೆ.

4) ಬಸವಣ್ಣನವರ ವಚನಗಳಲ್ಲಿ ಕಂಡು ಬರುವ ಮಾನವೀಯ ಮೌಲ್ಯಗಳಾವುವು? ವಿವರಿಸಿ.
- ಬಸವಣ್ಣನವರು ತಮ್ಮ ವಚನಗಳ ಮೂಲಕ ನಾವು ನಮ್ಮ ಜೀವನದಲ್ಲಿ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಎಲ್ಲರೂ ಮೆಚ್ಚುವ ರೀತಿಯಲ್ಲಿ ಜೀವನ ನಡೆಸಬೇಕು ಎಂದು ಆಶಿಸುತ್ತಾರೆ. ನಾವು ನಮ್ಮ ಮಾತಿನಿಂದಾಗಲಿ ಅಥವಾ ಕಾರ್ಯಗಳಿಂದಾಗಲಿ ಯಾರಿಗೂ ತೊಂದರೆಯನ್ನುಂಟು ಮಾಡಬಾರದು. ಜೀವನದಲ್ಲಿ ನಾವು ಸತ್ಯ, ಪ್ರಾಮಾಣಿಕತೆ, ಅಹಿಂಸೆ, ಶಾಂತಿ, ಆಚಾರ ಮುಂತಾದ ಮೌಲ್ಯಯುತ ಗುಣಗಳನ್ನು ಅಳವಡಿಸಿಕೊಳ್ಳಬೇಕು ಎಂದು ಬಸವಣ್ಣನವರು ಹೇಳುತ್ತಾರೆ. ಕಳ್ಳತನ, ಕೊಲೆ ಮಾಡದೇ ಅಹಿಂಸೆಯ ಮೌಲ್ಯವನ್ನು ಎತ್ತಿಹಿಡಿದಿದ್ದಾರೆ. ಕೋಪ, ಅಸಹ್ಯ, ನಿಂದಿಸುವುದನ್ನು ಮಾಡಬಾರದೆಂದು ಹೇಳುತ್ತ, ಶಾಂತಿಯ ಮೂಲ-ಮಂತ್ರವನ್ನು ತಿಳಿಸಿದ್ದಾರೆ. ಹೀಗೆ ನಾವು ನಮ್ಮ ಜೀವನದಲ್ಲಿ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಬಾಳಬೇಕೆಂದು ಬಸವಣ್ಣನವರು ಹೇಳಿದ್ದಾರೆ.

5) ಸ್ವಸ್ಥಸಮಾಜ ನಿರ್ಮಾಣಕ್ಕೆ ಬಸವಣ್ಣನವರ ವಚನಗಳು ಪದ್ಯದಲ್ಲಿರುವ ಸಂದೇಶಗಳಾವುವು? ವಿವರಿಸಿರಿ.
- ಸ್ವಸ್ಥಸಮಾಜ ನಿರ್ಮಾಣಕ್ಕಾಗಿ ಬಸವಣ್ಣನವರು ಕೆಲವು ಮಹತ್ವದ ಸಂದೇಶಗಳನ್ನು ಹೇಳಿರುತ್ತಾರೆ. ಅವು ಈ ರೀತಿಯಾಗಿವೆ. ನಾವು ಕಳ್ಳತನ, ಕೊಲೆ ಮುಂತಾದ ಹೀನ ಕೃತ್ಯಗಳನ್ನು ಮಾಡಬಾರದು, ಸುಳ್ಳು ಹೇಳಬಾರದು, ಬೇರೆಯವರ ಮೇಲೆ ಕೋಪಿಸಿಕೊಳ್ಳಬಾರದು, ಅಸಹ್ಯಪಡಬಾರದು, ಸ್ವಪ್ರಶಂಸೆ ಮಾಡಿಕೊಳ್ಳಬಾರದು, ಬೇರೆಯವರನ್ನು ನಿಂದಿಸಬಾರದು, ಆಚಾರವಂತರಾಗಿ ನಾವು ಜೀವನ ನಡೆಸಬೇಕು. ಅನಾಚಾರದ ಕೆಲಸಗಳಲ್ಲಿ ನಾವು ಭಾಗಿಯಾಬಾರದು. ಹೀಗೆ ಬಸವಣ್ಣನವರ ಮೌಲ್ಯಯುತ ಸಂದೇಶಗಳನ್ನು ನಾವು ಪಾಲಿಸುವ ಮೂಲಕ ಮತ್ರ್ಯಲೋಕವನ್ನೇ ದೇವಲೋಕವನ್ನಾಗಿ ಪರಿವರ್ತಿಸಬಹುದು. ಶಾಂತಿ, ನೆಮ್ಮದಿಯ ಬದುಕನ್ನು ಬದುಕಬಹುದೆಂದು ಬಸವಣ್ಣನವರು ಹೇಳುತ್ತಾರೆ.

ಇ) ಕೆಳಗಿನ ಸಾಲುಗಳ ಸಂದರ್ಭವನ್ನು ಸ್ವಾರಸ್ಯ ಸಹಿತ ವಿವರಿಸಿ.
 
1) ಇದೇ ಅಂತರಂಗ ಶುದ್ಧಿ
- ಪದ್ಯದ ಹೆಸರು: ಬಸವಣ್ಣನವರ ವಚನಗಳು.                                                                     
ಕವಿಗಳ ಹೆಸರು: ಬಸವಣ್ಣ.                                                                                    
ಸಂದರ್ಭ: ಬಸವಣ್ಣನವರು ನಮ್ಮನ್ನು ಉದ್ದೇಶಿಸಿ ಈ ಮಾತನ್ನು ನುಡಿದಿದ್ದಾರೆ.                                             
ವಿವರಣೆ: ನಾವು ಕಳ್ಳತನ, ಕೊಲೆ ಮಾಡಬಾರದು, ಸುಳ್ಳು ಮಾತಾಡಬಾರದು, ಕೋಪಿಸಿಕೊಳ್ಳಬಾರದು, ಇತರರನ್ನು ಕಂಡು ಅಸಹ್ಯಪಡಬಾರದು. ತನ್ನನ್ನು ತಾನು ಹೊಗಳಿಕೊಳ್ಳಬಾರದು. ಯಾರನ್ನು ಕೂಡ ನಿಂದಿಸಬಾರದು, ಈ ಎಲ್ಲ ಅಂಶಗಳನ್ನು ನಾವು ಮನಸ್ಸಿನಿಂದ ಪಾಲಿಸಿದರೆ ಅದರಿಂದ ಅಂತರಂಗ ಶುದ್ಧಿ ಹಾಗೂ ಬಹಿರಂಗ ಶುದ್ಧಿಯುಂಟಾಗಿ ಕೂಡಲಸಂಗಮದೇವರನ್ನು ಒಲಿಸಿಕೊಳ್ಳಲು ದಾರಿಯಾಗುವುದೆಂದು ಬಸವಣ್ಣನವರು ಹೇಳಿದ್ದಾರೆ.

2) ತನ್ನ ಬಣ್ಣಿಸಬೇಡ.
- ಪದ್ಯದ ಹೆಸರು: ಬಸವಣ್ಣನವರ ವಚನಗಳು.                                                             
ಕವಿಗಳ ಹೆಸರು: ಬಸವಣ್ಣ.                                                                           
ಸಂದರ್ಭ: ಬಸವಣ್ಣನವರು ಈ ಮಾತನ್ನು ನಮ್ಮನ್ನು ಉದ್ದೇಶಿಸಿ ನುಡಿದಿದ್ದಾರೆ.
ವಿವರಣೆ: ಮಾನವರಾದ ನಾವು ಒಳ್ಳೆಯ ಮೌಲ್ಯಗಳನ್ನು ಅನುಸರಿಸಬೇಕು. ಕಳ್ಳತ ಕೊಲ್ಲುವುದು, ಸುಳ್ಳು ಹೇಳುವುದು, ಸಿಟ್ಟಾಗುವುದು, ಅಸಹ್ಯ ಪಡುವುದು, ಈ ಎಲ್ಲ ಕೆಟ್ಟ ಅಂಶಗಳನ್ನು ಬಿಡಬೇಕು. ಆಡಂಭರದ ಬದುಕು ಬದುಕುತ್ತ ತನ್ನನ್ನು ತಾನು ಸ್ತುತಿಸಿಕೊಳ್ಳುವುದನ್ನು ಮಾಡದೇ ಅಂತರಂಗ ಹಾಗೂ ಬಹಿರಂಗ ಶುದ್ಧಿ ಮಾಡಿಕೊಳ್ಳಲು ಆಚಾರದ ಬದುಕು ಬದುಕಬೇಕೆಂದು ಬಸವಣ್ಣನವರು ಹೇಳಿದ್ದಾರೆ.

3) ಆಚಾರವೇ ಸ್ವರ್ಗ, ಅನಾಚಾರವೇ ನರಕ.
- ಪದ್ಯದ ಹೆಸರು: ಬಸವಣ್ಣನವರ ವಚನಗಳು.                                                                      
ಕವಿಗಳ ಹೆಸರು: ಬಸವಣ್ಣ.                                                                                 
ಸಂದರ್ಭ: ಬಸವಣ್ಣನವರು ಸ್ವರ್ಗ, ನರಕಗಳ ಪರಿಕಲ್ಪನೆ ಹೇಳುತ್ತ ಈ ಮಾತನ್ನು ನಮಗೆ ನುಡಿದಿದ್ದಾರೆ. 
ವಿವರಣೆ: ಮಾನವರಾದ ನಾವು ಒಳ್ಳೆಯ ನಡತೆಯಿಂದ ನಮ್ಮ ಬದುಕನ್ನು ಸ್ವರ್ಗವನ್ನಾಗಿ ಮಾಡಿಕೊಳ್ಳಲು ಪ್ರಯತ್ನಿಸಬೇಕು. ಅನಾಚಾರದಿಂದ ದುರಾಚಾರದ ಬದುಕು ಬದುಕಿ ಜೀವನವನ್ನು ಹಾಳುಮಾಡಿಕೊಂಡು ನರಕಯಾತನೆ ಅನುಭವಿಸಬಾರದೆಂದು ಬಸವಣ್ಣ ನಮಗೆ ವಚನಗಳ ಮೂಲಕ ಸಂದೇಶ ನೀಡಿದ್ದಾರೆ.

ಈ) ಕೆಳಗಿನ ವಾಕ್ಯಗಳಲ್ಲಿ ಖಾಲಿ ಬಿಟ್ಟಿರುವ ಸ್ಥಳಗಳನ್ನು ಸೂಕ್ತ ಪದಗಳಿಂದ ತುಂಬಿರಿ.
1) ಬಸವಣ್ಣನವರ ವಚನದಲ್ಲಿ ಹೇಳಿರುವಂತೆ, ದೇವಲೋಕ ಸತ್ಯವನ್ನು ನುಡಿಯುವುದು.
2) ಬಸವಣ್ಣನವರ ಪ್ರಕಾರ ಮತ್ರ್ಯಲೋಕವೆಂಬುದು ಮಿಥ್ಯವನ್ನು ನುಡಿಯುವುದು.
3) ಬಸವಣ್ಣನವರ ವಚನಗಳ ಅಂಕಿತ ಕೂಡಲಸಂಗಮದೇವಾ.                                                             
4) ಆಚಾರ ಸ್ವರ್ಗವಾದರೆ, ಅನಾಚಾರ ನರಕ.                                                                           
5) ಅನ್ಯರಿಗೆ ಅಸಹ್ಯ ಪಡಬಾರದು, ತನ್ನನ್ನು ಬಣ್ಣಿಸಬಾರದು.

*ಭಾಷಾಭ್ಯಾಸ*

ಅ) ಕೆಳಗಿನ ಪದಗಳಿಗೆ ವಿರುದ್ಧಾರ್ಥಕ ಪದ ಬರೆಯಿರಿ.
ಬೇಡು - ಬೇಕು   
ಅಂತರಂಗ - ಬಹಿರಂಗ   
ಆಚಾರ - ಅನಾಚಾರ   
ಸತ್ಯ - ಅಸತ್ಯ, ಮಿಥ್ಯ    
ಸಹ್ಯ - ಅಸಹ್ಯ

ಆ) ಕೆಳಗಿನ ಪದಗಳನ್ನು ಸ್ವಂತ ವಾಕ್ಯದಲ್ಲಿ ಬರೆಯಿರಿ.
* ಬಣ್ಣಿಸು: ಬಾಲಕೃಷ್ಣನ ತುಂಟಾಟ ಎಷ್ಟು ಬಣ್ಣಿಸಿದರೂ ಸಾಲದು.
* ಹಳ್ಳಿ: ಮನೆಯಲ್ಲಿ ನಾವು ಯಾರನ್ನೂ ಹಳಿಯಬಾರದು.                                                                 
* ಮುನಿ: ಕಾರಣವಿಲ್ಲದೆ ನಾವು ಯಾರ ಮೇಲೆ ಮುನಿಯಬಾರದು. 
* ಹುಸಿ: ನ್ಯಾಯಾಲಯದಲ್ಲಿ ಹುಸಿ ಮಾತನಾಡಬಾರದೆಂದು ಪ್ರಮಾಣ ಮಾಡಿಕೊಳ್ಳುತ್ತಾರೆ.

ಇ) ಕೆಳಗಿನ ತತ್ಸಮಗಳಿಗೆ ತದ್ಭವಗಳನ್ನು ಬರೆಯಿರಿ.
* ವರ್ಣಿಸು - ಬಣ್ಣಿಸು.   
* ಲೋಕ - ಲೋಗ    
* ಸ್ವರ್ಗ - ಸಗ್ಗ

ಈ) ಈ ಕೆಳಗಿನ ಪದ್ಯ ಭಾಗಗಳನ್ನು ಕಂಠಪಾಠ ಮಾಡಿರಿ.
 
ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ                                                         
ಮುನಿಯ ಬೇಡ, ಅನ್ಯರಿಗೆ ಅಸಹ್ಯ ಪಡಬೇಡ                                                          
ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ                                                                          
ಇದೇ ಅಂತರಂಗ ಶುದ್ಧಿ, ಇದೇ ಬಹಿರಂಗ ಶುದ್ಧಿ                                                          
ಇದೇ ಕೂಡಲ ಸಂಗಮದೇವರನೊಲಿಸುವ ಪರಿ.                  

ದೇವಲೋಕ, ಮತ್ರ್ಯಲೋಕವೆಂಬುದು ಬೇರಿಲ್ಲ, ಕಾಣಿರೋ !                       
ಸತ್ಯವ ನುಡಿವುದೇ ದೇವ ಲೋಕ, ಮಿಥ್ಯವ ನುಡಿವುದೇ ಮತ್ರ್ಯಲೋಕ !              
ಆಚಾರವೇ ಸ್ವರ್ಗ, ಅನಾಚಾರವೇ ನರಕ             
ಕೊಡಲಸಂಗಮದೇವಾ ನೀವೇ ಪ್ರಮಾಣು.















 
You Might Like

Post a Comment

0 Comments