Recent Posts

ಹಾರಿದ ಹಕ್ಕಿಗಳು - Class 8th Second Language Kannada Textbook Solutions

ಹಾರಿದ ಹಕ್ಕಿಗಳು

ಕವಿ/ಲೇಖಕರ ಪರಿಚಯ 
 
*  ಆರ್. ವಿ. ಭಂಡಾರಿಪೂರ್ಣ ಹೆಸರುರೋಹಿದಾಸ ವಿಶ್ವಲ ಭಂಡಾರಿ 1936 ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಕೆರೆಕೋಣ ಎಂಬಲ್ಲಿ ಜನಿಸಿದರು.
* ಇವರು ಹದ್ದುಗಳು, ಕಣ್ಣೀಕಟ್ಟೆ ಕಾಡೇಗೂಡೆ, ಕೊಲೆಗಾರ ಪತ್ತೆಯಾಗಲಿಲ್ಲ. ಹದ್ದುಗಳು, ಬೆಂಕಿಯ ಮಧ್ಯೆ, ಬಿರುಗಾಳಿ, ತಲೆಮಾರು ಮುಂತಾದ ಕೃತಿಗಳನ್ನು ಬರೆದಿದ್ದಾರೆ.
* ಶ್ರೀಯುತರಿಗೆ 'ವಾಜಂತ್ರಿ ಶಿಕ್ಷಕ ಪ್ರಶಸ್ತಿ', 'ಜಿಲ್ಲೆ ಹಾಗೂ ರಾಜ್ಯ ಶಿಕ್ಷಕ ಪ್ರಶಸ್ತಿಗಳು''ಸಿಸು ಸಂಗಮೇಶ ದತ್ತಿ ಪ್ರಶಸ್ತಿ', ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು ದೊರೆತಿವೆ.
 * ಪ್ರಸ್ತುತ 'ಹಾರಿದ ಹಕ್ಕಿಗಳು ಕವನವನ್ನು ಅವರ 'ಹದ್ದುಗಳು' ಕವನ ಸಂಕಲನದಿಂದ ಆಯ್ದುಕೊಳ್ಳಲಾಗಿದೆ.
                                             ಪದಗಳ ಅರ್ಥ 
 
ಅಲೆದು - ತೂಗಿ: ಬಳುಕಿ  ಆಲುಗಾಡು: ಒಯ್ಯಾರ, 
ಚಿಟಬಿಲ್ಲು - ಹಕ್ಕಿಗೆ ಗುರಿಯಿಟ್ಟು ಕಲ್ಲು ಬೀರುವ ಸಾಧನ 
ಮಾತೃಸ್ಥಾನ – ಮೂಲ ನೆಲೆ
 
 * ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ. 

1. ಉದ್ಯಾನದ ಗಿಡಗಳು ಹೇಗೆ ಬೆಳೆದುನಿಂತಿದ್ದವು?

ಉತ್ತರ:- ಉದ್ಯಾನದ ಗಿಡಗಳು ಹೂವು ಅರಳುವ ರೀತಿಯಲ್ಲಿ ತೂಗುತ್ತಾ ಬೆಳೆದು ನಿಂತಿದ್ದವು.

2. ಬಣ್ಣ ಬಣ್ಣದ ಹಕ್ಕಿಗಳು ಏಕೆ ಉಲಿಯುತ್ತಿದ್ದವು?
ಉತ್ತರ:- ಬಣ್ಣ ಬಣ್ಣದ ಹಕ್ಕಿಗಳು ಉದ್ಯಾನವನದಲ್ಲಿ ಅರಳಿ ನಿಂತ ಗಿಡಗಳ ಹೂವಿನಿಂದಾಗಿ ಉಲಿಯುತ್ತಿದ್ದವು.

3. ಬಣ್ಣ ಬಣ್ಣದ ಹಕ್ಕಿಗಳಿಗೆ ಚಿಟಬಿಲ್ಲು ಹೊಡೆದದ್ದು ಏಕೆ?
ಉತ್ತರ:- ಬಣ್ಣ ಬಣ್ಣದ ಹಕ್ಕಿಗಳ ಮಾಂಸಕ್ಕಾಗಿ ಚಿಟಬಿಲ್ಲು ಹೊಡೆದರು.

4. ಬಣ್ಣ ಬಣ್ಣದ ಹಕ್ಕಿಗಳು ಉದ್ಯಾನದಿಂದ ಹಾರಿ ಹೋದದ್ದು ಎಲ್ಲಿಗೆ? ಏಕೆ?
ಉತ್ತರ:- ಬಣ್ಣ ಬಣ್ಣದ ಹಕ್ಕಿಗಳು ಉದ್ಯಾನದಿಂದ ಹಾರಿ ಹೋದದ್ದು ಬೇರೆ ಕಡೆಗೆ, ಏಕೆಂದರೆ ತಮ್ಮ ಪ್ರಾಣ ರಕ್ಷಣೆಗಾಗಿ,

5 ಹಾರಿ ಹೋದ ಹಕ್ಕಿಗಳು ಸಮಯ ಬಂದರೆ ಏನು ಮಾಡಬಹುದು?
ಉತ್ತರ:- ಹಾರಿ ಹೋದ ಹಕ್ಕಿಗಳು ಸಮಯ ಬಂದರೆ ತಿರುಗಿ ಬೀಳಬಹುದು.
 
 * ಕೆಳಗಿನ ಪ್ರಶ್ನೆಗಳಿಗೆ ಮೂರು-ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ.

1. ಕವಿ ಆರ್.ವಿ. ಭಂಡಾರಿಯವರು 'ಹಾರಿದ ಹಕ್ಕಿಗಳು ಕವಿತೆಯ ಮೂಲಕ ಯಾವ ಸಂದೇಶ ನೀಡಿದ್ದಾರೆ?

ಉತ್ತರ:- ಸಮೃದ್ಧ ನಾಡಿನಲ್ಲಿ ಸುಖ ಸಂತೋಷದಿಂದ ಸ್ವಚ್ಛಂದವಾಗಿ ದುಡಿಯುವವರಿಗೆ ತೊಂದರೆಗಳಾದರೆ ಅವರು ಸುಖದ ನೆಲೆಯನ್ನು ಹುಡುಕಿಕೊಂಡು ಬೇರೆಡೆ ಹೋಗುತ್ತಾರೆ. ಇದರಿಂದ ಸಮೃದ್ಧ ನಾಡನ್ನು ಕಟ್ಟಲು ಸಾಧ್ಯವಿಲ್ಲ. ಆದ್ದರಿಂದ ವ್ಯವಸ್ಥೆಗಳು, ಸಂಪನ್ಮೂಲಗಳು ಸರ್ವರ ಹಿತವನ್ನು ಕಾಪಾಡುವಂತಿರಬೇಕು ಎಂಬ ಸಂದೇಶವನ್ನು ಕವಿ ಈ ಪದ್ಯದ ಮೂಲಕ ನೀಡಿದ್ದಾರೆ.

2. ಉದ್ಯಾನದ ಹಕ್ಕಿಗಳು ತೊಂದರೆಗೆ ಒಳಗಾದದ್ದು ಏಕೆ? ಅದರ ಪರಿಣಾಮವೇನಾಯಿತು?
ಉತ್ತರ:- ಉದ್ಯಾನದ ಹಕ್ಕಿಗಳು ತೊಂದರೆಗೆ ಒಳಗಾದದ್ದು ಜನರಿಂದ, ಏಕೆಂದರೆ ಅವರೆಲ್ಲ ತಪಸ್ಸಿಗೆ ಕುಳಿತವರಂತೆ ಹಕ್ಕಿಗಳ ಮಾಂಸಕ್ಕಾಗಿ ಚಿಟಬಿಲ್ಲು ತೆಗೆದುಕೊಂಡು ಗುರಿಯಿಟ್ಟು ಹೊಡೆಯತೊಡಗಿದರು. ಇದರ ಪರಿಣಾಮವಾಗಿ ಹಕ್ಕಿಗಳು ಉದ್ಯಾನವನವನ್ನು ಬಿಟ್ಟು ಪ್ರಾಣರಕ್ಷಣೆಗಾಗಿ ಬೇರೆ ಕಡೆಗೆ ಹಾರಿಹೋದವು. ಈಗ ಉದ್ಯಾನವನದಲ್ಲಿ ಬರುವವರಿಗೆ ಹಕ್ಕಿಗಳ ಕಲರವೇ ಇಲ್ಲದಂತೆ ಆಗಿದೆ.

            * ಸಂದರ್ಭದೊಡನೆ ವಿಸಿರಿ.

1. ಬಣ್ಣ ಬಣ್ಣದ ಹಕ್ಕಿಗಳು ಉಲಿಯುತ್ತಿದ್ದವು.
ಆಯ್ಕೆ
:- ಈ ವಾಕ್ಯವನ್ನು ಆರ್. ವಿ. ಭಂಡಾರಿ ಅವರು ಬರೆದಿರುವ 'ಹದ್ದುಗಳು'ಎಂಬ ಕೃತಿಯಿಂದ ಆಯ್ದ"ಹಾರಿದ ಹಕ್ಕಿಗಳು" ಎಂಬಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ:- ಈ ಮಾತನ್ನು ಕವಿ ಹೇಳಿದ್ದಾರೆ ಉದ್ಯಾನವನದಲ್ಲಿ ಬೆಳೆದು ನಿಂತು ತೂಗಾಡುತ್ತಿದ್ದ ಗಿಡಗಳಲ್ಲಿ ಅರಳಿ ನಿಂತ ಹೂವುಗಳನ್ನು ನೋಡಿ ಬಣ್ಣ ಬಣ್ಣದ ಹಕ್ಕಿಗಳು ಉಲಿಯುತ್ತಿದ್ದವು ಎಂದು ತಿಳಿಸುವ ಸಂದರ್ಭದಲ್ಲಿ ಈ ಮೇಲಿನ ಮಾತು ಬಂದಿದೆ. 

2.ಗುರಿಯಿಟ್ಟು ಹೊಡೆದು ಮಾಂಸ ತಪಸ್ಸಿಗೆ ಕುಳಿತಿರಿ.
ಆಯ್ಕೆ
:- ಈ ವಾಕ್ಯವನ್ನು ಆರ್. ವಿ. ಭಂಡಾರಿ ಅವರು ಬರೆದಿರುವ'ಹದ್ದುಗಳು'ಎಂಬ ಕೃತಿಯಿಂದ ಆಯ್ದ"ಹಾರಿದ ಹಕ್ಕಿಗಳು" ಎಂಬಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ:- ಈ ಮಾತನ್ನು ಕವಿ ಹೇಳಿದ್ದಾರೆ ಹಕ್ಕಿಗಳು ಕಲರವ ಮಾಡುತ್ತಾ ಉದ್ಯಾನವನದಲ್ಲಿ ಹಾರುತ್ತಾ ಇರುವಾಗ ಮಾ೦ಸದ ತಪಸ್ಸಿಗೆ ಚಿಟಬಿಲ್ಲುಗಳಿಂದ ಅವುಗಳನ್ನು ಕೊಲ್ಲಲು ಮುಂದಾಗುತ್ತಾರೆ ಎಂದು ತಿಳಿಸುವ ಸಂದರ್ಭದಲ್ಲಿ ಈ ಮೇಲಿನ ಮಾತು ಬ೦ದಿದೆ.

3.ಸಮಯ ಬ೦ದರೆ ತಿರುಗಿಬೀಳುತ್ತವೆ.
ಆಯ್ಕೆ:-
ಈ ವಾಕ್ಯವನ್ನು ಆರ್. ವಿ. ಭಂಡಾರಿ ಅವರು ಬರೆದಿರುವ'ಹದ್ದುಗಳು'ಎಂಬ ಕೃತಿಯಿಂದ ಆಯ್ದ"ಹಾರಿದ ಹಕ್ಕಿಗಳು" ಎಂಬಪದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ:- ಈ ಮಾತನ್ನು ಕವಿ ಹೇಳಿದ್ದಾರೆ ಹಾರುವ ಹಕ್ಕಿಗಳನ್ನು ಮಾಂಸದ ಆಸೆಗಾಗಿ ಕೊಲ್ಲಲು ಮುಂದಾದಾಗ ಹಕ್ಕಿಗಳು ಹಾರಿಹೋದವು. ಉದ್ಯಾನದಲ್ಲಿ ಹಕ್ಕಿಗಳ ಕಲರವ ದೂರವಾಯಿತು. ಹೀಗೆ ಹಾರಿಹೋದ ಹಕ್ಕಿಗಳು ತಿರುಗಿ ಬಿದ್ದರೆ ಅವ್ಯವಸ್ಥೆ ಉಂಟಾಗುತ್ತದೆ ಎಂದು ಹೇಳುವಾಗ ಈ ಮೇಲಿನ ಮಾತು ಬ೦ದಿದೆ.

                          ಭಾಷಾಭ್ಯಾಸ :

ಆ) ಈ ಕೆಳಗಿನ ಪದಗಳಿಗೆ ತತ್ಸಮ-ತದ್ಭವ ರೂಪಗಳನ್ನು ಬರೆಯಿರಿ.

ಸ್ಥಾನ – ತಾಣ,  
ಬಣ್ಣ – ವರ್ಣ  
ಹಕ್ಕಿ – ಪಕ್ಷಿ  
 
ಇ) ಕೆಳಗಿನ ಪದಗಳ ಕಾಗುಣಿತ ದೋಷಗಳನ್ನು ಸರಿಪಡಿಸಿ ಬರೆಯಿರಿ.
 
ಉದ್ದಾನ – ಉದ್ಯಾನ, 
ಗುರಿಹಿಟ್ಟು - ಗುರಿಯಿಟ್ಟು, 
ಅಕ್ಕಿ – ಹಕ್ಕಿ 
ಹುಲಿಯುತ್ತಿದ್ದವು = ಉಲಿಯುತ್ತಿದ್ದವು. 
ಹಾವು- ಹೂವು
ಅಣ್ಣು -ಹಣ್ಣು.

You Might Like

Post a Comment

0 Comments