Recent Posts

ಬೆಡಗಿನ ತಾಣ ಜಯಪುರ - ೦೯ ನೇ ತರಗತಿ ಸಿರಿ ಕನ್ನಡ ಪುಸ್ತಕದ ಪ್ರಶ್ನೋತ್ತರಗಳು


ಬೆಡಗಿನ ತಾಣ ಜಯಪುರ

ಅ ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ ,

1 , ರೈಗಳ ಮನೆ ಎಂಥ ಪ್ರದೇಶದಲ್ಲಿತ್ತು ?
ಉತ್ತರ : ರೈಗಳ ಮನೆಯು ಸುತ್ತಲೂ ಉಸುಬು ಹರಡಿದ್ದ ಮರುಭೂಮಿಯ ಪ್ರದೇಶದಲ್ಲಿತ್ತು .

2 , ಲೇಖಕರಿಗೆ ಜಯಚುರದ ಮನೆಗಳ ಮೇಲೆ ಮೋಹವೇಕೆ ?
ಉತ್ತರ : ಜಯಪುರದ ಮನೆಗಳು ಒಂದೊಂದು ಮನೆಯೂ ಒಂದೊಂದು ಶೈಲಿಯದೂ ಒಂದೊಂದು ದೇಶದ್ದೂ ಆಗಿ ಕಾಣಿಸುವುದಿಲ್ಲ . ಆದುದರಿಂದಲೇ ಲೇಖಕರಿಗೆ ಅವುಗಳ ಮೇಲೆ ಮೋಹ .

3. ಜಯಪುರದ ಜನರಿಗೆ ಯಾವ ಯಾವ ಬಣ್ಣಗಳು ಇಷ್ಟ ?
ಉತ್ತರ : ಜಯಪುರದ ಜನರಿಗೆ ಕೆಂಪು , ಕಿತ್ತಳೆ , ಹಳದಿ ಎಂದರೆ ಇಷ್ಟ .

4 , ಜಯಪುರದ ಪೂರ್ವದ ರಾಜಧಾನಿ ಯಾವುದು ?
ಉತ್ತರ : ಅಂಬೇರ ಜಯಪುರದ ಪೂರ್ವಕಾಲದ ರಾಜಧಾನಿ .

5 , ಲೇಖಕರಿಂದ ಹಂಬಲವೇನು ?
ಉತ್ತರ : ಜಯಪುರದ ಜಾನಪದ ನೃತ್ಯಗಳನ್ನು ನೋಡಬೇಕೆಂಬ ಹಂಬಲ ಲೇಖಕರದ್ದಾಗಿತ್ತು .

ಆ ) ಕೊಟ್ಟಿರುವ ಪ್ರಶ್ನೆಗಳಿಗೆ ಎರಡು ಮೂರು ವಾಕ್ಯಗಳಲ್ಲಿ ಉತ್ತರಿಸಿ ,

1 , ಜಯಪುರದ ಬೀದಿ ಹಾಗೂ ಮನೆಗಳ ಸೌಂದರ್ಯವನ್ನು ವರ್ಣಿಸಿ ,
ಉತ್ತರ : ಜಯಪುರದ ಮುಖ್ಯಬೀದಿಗಳು ಲೇಖಕರ ಮನಸ್ಸಿನ ಮೇಲೆ ತುಂಬಾ ಪರಿಣಾಮ ಬೀರಿದವು . ನಗರದ ಬೀದಿಗಳು ಒಂದು ಶತಮಾನದ ಹಿಂದೆ ನಿರ್ಮಾಣವಾಗಿದ್ದರೂ ಬಹಳ ಅಗಲವಾದ ಬೀದಿಗಳವು : ನೇರವಾದವುಗಳು ಬಹುದೂರದಿಂದ ಕಾಣಿಸುವ ಅಂಗಡಿ – ಮನೆಗಳ ದೇಶೀ ವಾಸ್ತುರಚನೆ ಚೆನ್ನಾಗಿ ಶೋಭಿಸುತ್ತದೆ .
ಇಲ್ಲಿನ ಒಂದೊಂದು ಮನೆಯೂ ಒಂದೊಂದು ಶೈಲಿಯದೂ ಒಂದೊಂದು ದೇಶದ್ದೂ ಆಗಿ ಕಾಣಿಸುವುದಿಲ್ಲ . ಆದುದರಿಂದಲೇ ಲೇಖಕರಿಗೆ ಅವುಗಳ ಮೇಲೆ ಮೋಹ . ಇಲ್ಲಿನ ಮುಖ್ಯ ಬೀದಿಗಳು ಸಂಧಿಸುವಲ್ಲಿ ಸುಂದರವಾದ ಚೌಕಗಳಿವೆ . ಕೆಲವೊಂದು ಕಡೆಗಳಲ್ಲಿ : ಮಹಾದ್ವಾರಗಳಿವೆ . ಎಂದು ಲೇಖಕರು ಹೇಳಿದ್ದಾರೆ .

2. ಲೇಖಕರ ಮೊದಲ ಅಂಬೇರ ಭೇಟಿಗೂ ಇತ್ತೀಚಿನ ಭೇಟಿಗೂ ಯಾವ ವ್ಯತ್ಯಾಸವಿತ್ತು ?
ಉತ್ತರ : ಜಯಪುರ ಲೇಖಕರ ಪಾಲಿಗೆ ಹೊಸತಾಗಿರಲಿಲ್ಲ . ಹದಿನೈದು ವರ್ಷಗಳ ಹಿಂದೊಮ್ಮೆ ಹೋಗಿದ್ದರು . ಆಗ ಅಂಬೇರ ಬೆಟ್ಟದಲ್ಲಿ ಜನವಸತಿ ಇದ್ದಿರಲಿಲ್ಲ . ಹಲವಾರು ಪ್ರಾಚೀನ ಗುಡಿಗೋಪುರಗಳು ಗೂಬೆಯ ಮನೆಗಳಾಗಿದ್ದವು .
ಈಗ ಹಾಗಿಲ್ಲ ; ನೂರಾರು ಸಿಂಧೀ ಕುಟುಂಬಗಳು ಅಲ್ಲಿ ಮನೆ ಮಾಡಿಕೊಂಡಿ ವಾಸ ಮಾಡುತ್ತಿವೆ . ದೇವಾಲಯದಲ್ಲಿ ಪೂಜೆ ನಡೆಯುತ್ತಿದೆ . ಎಂದು ಮೊದಲ ಭೇಟಿಗೂ ಇತ್ತೀಚಿನ ಭೇಟಿಗೂ ಇರುವ ವ್ಯತ್ಯಾಸವನ್ನು ಲೇಖಕರು ತಿಳಿಸಿದ್ದಾರೆ .

3 , ಮೀರಾಬಾಯಿ ದೇವಾಲಯದ ಸೌಂದರ್ಯವನ್ನು ವಿವರಿಸಿ .
ಉತ್ತರ : ಅಂಬೇರ ಬೆಟ್ಟದಲ್ಲಿ ಮೂರು ಅಂತಸ್ತಿನ ಅರಮನೆ ಇದೆ . ಈ ಅರಮನೆಯ ಆವರಣದ ಹಿಂದುಗಡೆ ಇರುವ ತಗ್ಗಿನ ಕಣಿವೆಯ ತಳದಲ್ಲೇ ಕಾಣಿಸುತ್ತದೆ ಮೀರಾಬಾಯಿಯ ದೇವಾಲಯ . ಆಕೆ ಗಿರಿಧರನಾಗರನನ್ನು ಪೂಜಿಸಿದ ಸ್ಥಳವಿದು .
ಕೆಳಗಿಳಿದು ಹೋಗಿ ಗುಡಿಯನ್ನು ನೋಡಿದರೆ ಅದರ ಸೊಬಗು ಚೆನ್ನಾಗಿ ಕಾಣುತ್ತದೆ . ನಕ್ಷತ್ರಾಕೃತಿಯನ್ನು ತುಂಬಿಕೊಂಡ ಗರ್ಭಗೃಹ , ನವರಂಗಗಳಿವೆ .

4 ಲೇಖಕರು ನೋಡಿದ ಜನಪದ ನೃತ್ಯದ ಸೊಬಗನ್ನು ಚಿತ್ರಿಸಿ ,
ಉತ್ತರ : ಲೇಖಕರಿಗೆ ಜಯಪುರದ ಜನಪದ ನೃತ್ಯ ನೋಡಬೇಕೆಂಬ ಹಂಬಲ ಇತ್ತು , ಊರಿನ ಜನಸಾಮಾನ್ಯರ ನೃತ್ಯವದು , ಇಬ್ಬರು ಯೌವನಸ್ಥರು ಸ್ತ್ರೀಯರ ಉಡುಗೆ ಉಟ್ಟಿದ್ದರು . ಮಾರವಾಡಿ ಸ್ತ್ರೀಯರಂತೆ ತಲೆಗೆ ಸೆರಗು ಹಾಕಿಕೊಂಡು ಮುಖತೋರಿಸದೆ ಕುಣಿಯತೊಡಗಿದರು .
ಹಿಮ್ಮೇಳಕ್ಕೆ ಡೋಳು ತಮಟೆಗಳಿದ್ದವು . ಮುಂಭಾಗದಲ್ಲಿ ಸ್ತ್ರೀವೇಷದ ನರ್ತಕರು ಲಾಸ್ಯವೆಸಗಿದರು . ಅವರ ಕಾಲಿನ ನಡಿಗೆಯಲ್ಲೂ ಕೈಗಳ ಚಲನೆಯಲ್ಲೂ ಜಾಣ್ಣೆ ಚೆಲುವುಗಳೆರಡೂ ಇದ್ದವು . ಅವರ ಜತೆಗೆ ಮೂರು , ನಾಲ್ಕು ಹುಡುಗರು ನಿತ್ಯದ ಉಡುಗೆಯಲ್ಲಿ ಕುಣಿದಾಡಿದರು , ಆ ನೋಟವನ್ನು ನೋಡುವುದಕ್ಕೆ ಮರವಣಿಗರೂ ಬಂದು ಕಲೆತರು . ಇದೇ ಜಯಪುರದ ಜನಪದ ನೃತ್ಯದ ಸೊಬಗು .
 
ಇ ) ಕೊಟ್ಟಿರುವ ಪ್ರಶ್ನೆಗಳಿಗೆ ಐದು – ಆರು ವಾಕ್ಯಗಳಲ್ಲಿ ಉತ್ತರಿಸಿ ,

1 ಜಯಪುರದ ಜನರಿಗೆ ಬಣ್ಣಗಳ ಬಗೆಗೆ ಇರುವ ಮೋಹವನ್ನು ತಿಳಿಸಿ .
ಉತ್ತರ : ಜಯಪುರ ಬಣ್ಣಗಾರರ ತವರೂರು . ಬಣ್ಣ ಹಾಕುವ ಕುಶಲಿಗರು ಈ ಊರಿನಲ್ಲಿ ಬಹಳ ಮಂದಿ ಇದ್ದಾರೆ . ಬಣ್ಣದ ಮೋಹವಿರುವ ಜನರೂ ಬಹಳ ಇದ್ದಾರೆ .
ಗಿಡಮರಗಳಿಲ್ಲದ ಸ್ಥಳದಲ್ಲಿ ವಾಸಿಸುವ ಜನರಿಗೆ , ಕಣ್ಣಿನ ತಣಿವು ಹೇಗೆ ಬರಬೇಕು ? ಆದ್ದರಿಂದಲೇ ಇಲ್ಲಿನ ಜನರು ಅದರಲ್ಲೂ ಹೆಂಗಸರೂ ರಂಗುರಂಗಿನ ಲಂಗ , ಪಾಯಿಜಾಮಾ , ಸೀರೆ , ರವಿಕೆ , ಮೇಲುದೆ ತೊಡುವ ಅಭ್ಯಾಸದವರು . ಅದರಲ್ಲೂ ಕೆಂಪು , ಕಿತ್ತಳೆ , ಹಳದಿ ಎಂದರೆ ಪ್ರಾಣ . ನಿತ್ಯವೂ ಹೋಳಿ ಹುಣ್ಣಿಮೆ ಮಾಡುವವರಂತೆ ಬಣ್ಣದ ಚಲ್ಲಾಟ ಅವರ ಬಟ್ಟೆಗಳಲ್ಲಿ , ಗಂಡಸರೂ ರಂಗುರಾಯರೇ .
ಅವರ ಪಂಚೆ , ಅಂಗಿಗಳಲ್ಲಿ ರಂಗು ಕಾಣಿಸದಿದ್ದರೂ ಮುಂಡಾಸಿನ ಮೂವತ್ತು ಮೊಳಗಳಲ್ಲಿ ಮುನ್ನೂರು ಬಣ್ಣಗಳನ್ನು ಮೆರೆಯಿಸುವುದುಂಟು . ಆದ್ದರಿಂದ ಜಯಪುರದ ಜನರಿಗೆ ಬಣ್ಣಗಳ ಬಗೆಗೆ ಬಹಳ ಮೋಹವೆಂದೇ ಹೇಳಬಹುದು

2. ಅಂಬೇರ ಬೆಟ್ಟದ ಮೂರು ಅಂತಸ್ತಿನ ಅರಮನೆಯ ಒಳಾಂಗಣ ಚೆಲುವನ್ನು ತಿಳಿಸಿ ,
ಉತ್ತರ : ಅಂಬೇರ ಬೆಟ್ಟದಲ್ಲಿ ಮೂರು ಅಂತಸ್ತಿನ ಅರಮನೆ ಇದೆ . ಈ ಅರಮನೆಯ ಮೊದಲ ಅಂತಸ್ತಿನಲ್ಲಿ ಪುಟ್ಟ ದೇವಾಲಯವಿದೆ . ಈ ಪುಟ್ಟ ಮಂದಿರವು ಚಿತ್ರ ಕೆಲಸಗಳಿಂದ ಕೂಡಿದ ಹಾಲುಗಲ್ಲಿನ ರಚನೆಯಾಗಿದೆ , ಗೊಡೆಗಳೆಲ್ಲವೂ ಹಾಲುಗಲ್ಲಿನವೇ ; ನೆಲವೂ ಅದರದ್ದೇ . ಸ್ತಂಭಗಳೂ ಅವುಗಳದ್ದೇ .
ಗುಡಿ ಚಿಕ್ಕದಾಗಿದ್ದರೂ ಶಾಂತವಾಗಿ ಕಾಣಿಸುವ ಮಂದಿರ , ಗುಡಿಯ ವಿಗ್ರಹ ಮಾತ್ರ ಆಕಾರ ಹಾಗೂ ಅಲಂಕಾರಗಳಿಂದ ಅಷ್ಟೊಂದು ಶೋಭಿಸದು . ಎರಡನೆಯ ಅಂತಸ್ತಿನಲ್ಲಿ ದೊಡ್ಡದೊಂದು ಸಭಾಂಗಣ ಇದೆ ಇದು ವಿಶಾಲವಾದ ಹಾಲುಗಲ್ಲಿನ ರಚನೆ ,
ಅದರ ಚಾವಣಿ , ರಜಪುತಾನದ ಶೈಲಿಯ ಕಮಾನು ಮತ್ತು ಕಂಬಗಳು ತುಂಬ ಲಲಿತವಾಗಿದ್ದು , ಪರಸ್ಪರ ಹೊಂದಿಕೊಂಡು , ಈ ರಚನೆಗೆ ಚಲುವನ್ನು ನೀಡಿವೆ . ಮೂರನೆಯ ಅಂತಸ್ತಿನಲ್ಲಿ ರಾಜರ ಅಂತಃಪುರ ಇದೆ .
ಇಲ್ಲಿನ ಕೆಲವು ಭಾಗಗಳಲ್ಲಿ ಚಂದ್ರಕಾಂತ ಶಿಲೆಯ ಸುಂದರ ಮಂಟಪಗಳವ . ಶಿಲೆಯನ್ನು ಕೆತ್ತಿ ಬಣ್ಣದ ಕಲ್ಲುಗಳಿಂದ ಕೊರೆದು ತುಂಬಿಸಿದೆ ಲತಾಮುಷ್ಪಗಳ ಚಿತ್ತಾವಳಿಗಳೂ ಇವೆ .
ಇನ್ನೊಂದೆರಡು ಚಾವಡಿಗಳು ಕನ್ನಡಿಯ ಚೂರುಗಳನ್ನು ಸುಣ್ಣದ ಗಾರೆಯಲ್ಲಿ ಅಂಟಿಸಿ , ಚಿತ್ರವಿಚಿತ್ರ ಪ್ರತಿರೂಪಗಳನ್ನು ನಿರ್ಮಿಸಿ ಅಲಂಕರಿಸಿದಂತಹ ಕಂಬ , ಮುಚ್ಚಿಕಗಳುಳ್ಳ ರಚನೆ .
ಕತ್ತಲಿನಲ್ಲಿ ದೀವಿಗೆ ಹೊತ್ತಿಸಿದಾಗ , ಲಕ್ಷೇಪಲಕ್ಷ ಈ ಗಾಜಿನ ತುಣುಕುಗಳು , ಚಾವಡಿಗೆ ನಕ್ಷತ್ರಲೋಕದ ಸೊಬಗನ್ನು ಕೊಡುತ್ತವೆ .

3. ಜಂತ್ರ ಮಂತ್ರದ ವಿಶೇಷತೆಯನ್ನು ಪರಿಚಯ ಮಾಡಿಕೊಡಿ .
ಉತ್ತರ : ‘ ಜಂತ್ರ ಮಂತ್ರ ‘ ಹಳೆಯ ಏಗೋಳವಿಜ್ಞಾನದ ಪರಿಶೀಲನಾಲಯ , 400-500 ರ್F ದಲ್ಲಿ , ಖಗೋಳಶಾಸ್ತ್ರಜ್ಞರು ಗ್ರಹ , ಸೂರ್ಯ ಚಂದ್ರ , ತಾರಾಮಂಡಲಗಳನ್ನು ಅಳೆದು , ಪರಿಶೀಲಿಸಿ ನೋಡುವ ಸಲುವಾಗಿ , ಇಲ್ಲಿ ವಿಚಿತ್ರವಾದ ಸಾಧನಗಳನ್ನು ನೆಟ್ಟಿದ್ದಾರೆ .
ಇಂಥ ಹತ್ತೆಂಟು ವಿಧದ ಸಾಧನಗಳ ವಿಚಿತ್ರ ರಚನೆಗಳಿವೆ . ಗಳಿಗೆ ಅಳೆಯವುದಕ್ಕೆ , ಪ್ರತಿಯೊಂದು ತಿಂಗಳಿನಲ್ಲೂ ಸೂರ್ಯ , ನಕ್ಷತ್ರಗಳ ಗತಿ ಪರಿಶೀಲಿಸುವುದಕ್ಕೆ ಏನೇನೋ ಏರ್ಪಾಟುಗಳಿವೆ . ಪ್ರತಿಯೊಂದು ಸಾಧನದ ಮೇಲೂ ಅವುಗಳ ಉಪಯೋಗ ಮತ್ತು ಕಾಲವನ್ನು ಅಳೆಯುವ ರೀತಿ ಮೊದಲಾದುವನ್ನು ನಮೂದಿಸಿದೆ .
ದೂರದರ್ಶಿಯ ಸಹಾಯವಿಲ್ಲದೆ , ಬರಿಗಣ್ಣಿನಿಂದಲೇ ಖಗೋಳದ ಗ್ರಹಗಳ ಗತಿಯನ್ನು ಅಳೆಯಲು ಮಾಡಿದ ಈ ಸಾಧನಗಳು , ಗಣಿತಕ್ಕೂ ಸೂಕ್ಷ್ಮ ಪರಿಶೀಲನೆಗೂ ಹಿರಿಯರು ಸಲ್ಲಿಸಿದ ಕಾಣಿಕೆ .

ಈ ) ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ ,

1. “ ಅಲ್ಲಿ ಮಧ್ಯಾಹ್ನ ವೇಳ ಸ್ನಾನಕ್ಕೆ ನೀರು ಕಾಯಿಸುವ ಅಗತ್ಯವಿಲ್ಲ .
ಆಯ್ಕೆ : ಈ ವಾಕ್ಯವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಹೊರತಂದಿರುವ ಶಿವರಾಮಕಾರಂತರ ಸಾಹಿತ್ಯ ಶ್ರೇಣಿಯ ಸಂಪುಟ ಭಾಗ – 2 ಗ್ರಂಥದ ‘ ಅಬುವಿನಿಂದ ಬರಾಮಕ್ಕೆ ‘ ಭಾಗದಿಂದ ಆಯ್ದ ` ಬೆಡಗಿನತಾಣ ಜಯಪುರ ‘ ಎಂಬ ಗದ್ಯಭಾಗದಿಂದ ಆರಿಸಲಾಗಿದೆ .
ಸಂದರ್ಭ : ಲೇಖಕರು ಜಯಪುರಕ್ಕೆ ಪ್ರವಾಸ ಹೋಗಿದ್ದರು . ಜಯಪುರದಲ್ಲಿ ಇವರ ಸ್ನೇಹಿತರಾದ ರೈಗಳ ಮನೆಯು ಸುತ್ತಲೂ ಉಸುಬು ಹರಡಿದ್ದ ಮರುಭೂಮಿಯ ಪ್ರದೇಶದಲ್ಲಿತ್ತು . ಇಲ್ಲಿ ಮಧ್ಯಾಹ್ನ ವೇಳೆ ಸ್ನಾನಕ್ಕೆ ನೀರು ಕಾಯಿಸುವ ಅಗತ್ಯವಿಲ್ಲ , ಉಸುಬಿನ ಕಾವಿನಿಂದ ನಲ್ಲಿಯ ನೀರು ಕಾದೇ ಬರುತ್ತಿತ್ತು . ಆ ಸಂದರ್ಭದಲ್ಲಿ ಲೇಖಕರು ಈ ಮಾತನ್ನು ಹೇಳಿದ್ದಾರೆ .
ಸ್ವಾರಸ್ಯ : ರೈಗಳ ಮನೆಯು ಮರುಭೂಮಿಯಲ್ಲಿ ಇದ್ದಿದ್ದರಿಂದ ಸೂರ್ಯನ ಬಿಸಿಲಿಗೆ ಮರಳು ಕಾದು , ಮರಳಿನಲ್ಲಿರುವ ನೀರಿನ ಪೈಪುಗಳು ಕಾದು ಆದರಿಂದ ನೀರು ಬಿಸಿಯಾಗಿ ಬರುವುದು ಸ್ವಾರಸ್ಯಕರವಾಗಿದೆ .

2 “ ಗಂಡಸರೂ ರಂಗರಾಯರೇ “
ಆಯ್ಕೆ : ಈ ವಾಕ್ಯವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಹೊರತಂದಿರುವ ಶಿವರಾಮಕಾರಂತರ ಸಾಹಿತ್ಯ ಶ್ರೇಣಿಯ ಸಂಪುಟ ಭಾಗ – 2 ಗ್ರಂಥದ ‘ ಅಬುವಿನಿಂದ ಬರಾಮಕ್ಕೆ ಭಾಗದಿಂದ ಆಯ್ದ “ ಬೆಡಗಿನತಾಣ ಜಯಪುರ ‘ ಎಂಬ ಗದ್ಯಭಾಗದಿಂದ . ಆರಿಸಲಾಗಿದೆ .
ಸಂದರ್ಭ : ಜಯಪುರದ ಜನರಿಗೆ ಬಣ್ಣಗಳ ಮೇಲೆ ಅಪಾರವಾದ ಮೋಹ , ಇವರಿಗೆ ಕೆಂಪು , ಕಿತ್ತಳೆ , ಹಳದಿ ಎಂದರೆ ಪ್ರಾಣ . ಇಲ್ಲಿನ ಹೆಣ್ಣು ಮಕ್ಕಳು ಬಣ್ಣಬಣ್ಣದ ಲಂಗ , ಪಾಯಿಜಾಮಾ , ಸೀರೆ , ರವಿಕೆ , ಮೇಲುದೆ ತೊಡುತ್ತಾರೆ . ಗಂಡು ಮಕ್ಕಳು ಸಹ ಬಣ್ಣಬಣ್ಣದ ಅಂಗಿ , ಮಂಚಿ , ಮುಂಡಾಸನ್ನು ಧರಿಸಿ ರಂಗು ರಂಗಾಗಿ ಕಾಣುತ್ತಾರೆ . ಆ ಸಂದರ್ಭದಲ್ಲಿ ಲೇಖಕರು ಈ ಮಾತನ್ನು ಹೇಳಿದ್ದಾರೆ .
ಸ್ವಾರಸ್ಯ : ಜಯಪುರವು ಗಿಡಮರಗಳಿಲ್ಲದ ಊರು . ಇಲ್ಲಿ ವಾಸಿಸುವ ಜನರಿಗೆ , ಕಣ್ಣಿನ ತಣಿವು ಹೇಗೆ ಬರಬೇಕು , ಆದ್ದರಿಂದ ಇಲ್ಲಿನ ಜನರು ಬಟ್ಟೆಗಳಲ್ಲಿ ಬಣ್ಣಗಳನ್ನು ಕಾಣುವುದನ್ನು ಸ್ವಾರಸ್ಯಕರವಾಗಿ ಲೇಖಕರು ಹೇಳಿದ್ದಾರೆ .

3 , “ ಪ್ರಾಚೀನ ಗುಡಿಗೋಪುರಗಳು ಗೂಬೆಯ ಮನೆಗಳಾಗಿದ್ದವು ”
ಆಯ್ಕೆ : ಈ ವಾಕ್ಯವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಹೊರತಂದಿರುವ ಶಿವರಾಮಕಾರಂತರ ಸಾಹಿತ್ಯ ಶ್ರೇಣಿಯ ಸಂಪುಟ 2 ಗ್ರಂಥದ ‘ ಅಬುವಿನಿಂದ ಬರಾಮಕ್ಕೆ ‘ ಭಾಗದಿಂದ ಆಯ್ದ ‘ ಬೆಡಗಿನತಾಣ ಜಯಪುರ ‘ ಎಂಬ ಗದ್ಯಭಾಗದಿಂದ ಆರಿಸಲಾಗಿದೆ .
ಸಂದರ್ಭ : ಲೇಖಕರು ಹದಿನೈದು ವರ್ಷಗಳ ಹಿಂದೊಮ್ಮೆ ಜಯಪುರಕ್ಕೆ ಹೋಗಿದ್ದರು . ಆಗ ಅಂಬೇರ ಬೆಟ್ಟದಲ್ಲಿ ಜನವಸತಿ ಇದ್ದಿರಲಿಲ್ಲ . ಹಲವಾರು ಪ್ರಾಚೀನ ಗುಡಿಗೋಪುರಗಳು ಗೂಬೆಯ ಮನೆಗಳಾಗಿದ್ದವು . ಇದನ್ನು ನೋಡಿದ ಸಂದರ್ಭದಲ್ಲಿ ಈ ಮಾತನ್ನು ಲೇಖಕರು ಹೇಳಿದ್ದಾರೆ .
ಸ್ವಾರಸ್ಯ : ಜಯಪುರವು ದಿನದಿಂದಕ್ಕೆ ಯಾವ ರೀತಿ ಅಭಿವೃದ್ಧಿಯಾಗಿದೆ . ಈಗ ಜಯಪುರದ ಅಂಬೇರ ಬೆಟ್ಟದಲ್ಲಿ ಗುಡಿಗೋಪುರದಲ್ಲಿ ದೇವರಿಗೆ ಪೂಜೆ ಸಲ್ಲಿಸುತ್ತಿರುವ ಅಂಶ , ಜನರು ಅಲ್ಲಿ ವಾಸಿಸುವ ಅಂಶ ಸ್ವಾರಸ್ಯಕರವಾಗಿದೆ .

4 “ ಚಾವಡಿಗೆ ನಕ್ಷತ್ರಲೋಕದ ಸೊಬಗನ್ನು ಕೊಡುತ್ತದೆ ”
ಆಯ್ಕೆ : ಈ ವಾಕ್ಯವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಹೊರತಂದಿರುವ ಶಿವರಾಮಕಾರಂತರ ಸಾಹಿತ್ಯ ಶ್ರೇಣಿಯ ಸಂಪುಟ ಭಾಗ 2 ಗ್ರಂಥದ ‘ ಅಬುವಿನಿಂದ ಬರಾಮಕ್ಕೆ ಭಾಗದಿಂದ ಆಯ್ದ ‘ ಬೆಡಗಿನತಾಣ ಜಯಮರ ‘ ಎಂಬ ಗದ್ಯಭಾಗದಿಂದ ಆರಿಸಲಾಗಿದೆ .
ಸಂದರ್ಭ : ಮೂರನೆಯ ಅಂತಸ್ತಿನಲ್ಲಿ ರಾಜರ ಅಂತಃಮರ ಇದೆ . ಈ ಅರಮನೆಯ ಚಾವಡಿಗಳಿಗೆ ಕನ್ನಡಿಯ ಚೂರುಗಳನ್ನು ಸುಣ್ಣದ ಗಾರೆಯಲ್ಲಿ ಅಂಟಿಸಿ , ಚಿತ್ರವಿಚಿತ್ರ ಪ್ರತಿರೂಪಗಳನ್ನು ನಿರ್ಮಿಸಿ ಅಲಂಕರಿಸಿದಂತಹ ಕಂಬ , ಮುಚ್ಚಿಕೆಗಳುಳ್ಳ ರಚನೆ .
ಕತ್ತಲಿನಲ್ಲಿ ದೀವಿಗೆ ಹೊತ್ತಿಸಿದಾಗ , ಲಕೋಪಲಕ್ಷ ಈ ಗಾಜಿನ ತುಣುಕುಗಳು , ಚಾವಡಿಗೆ ನಕ್ಷತ್ರಲೋಕದ ಸೊಬಗನ್ನು ಕೊಡುತ್ತವೆ , ಆ ಸಂದರ್ಭದಲ್ಲಿ ಈ ಮಾತನ್ನು ಲೇಖಕರು ಹೇಳಿದ್ದಾರೆ .
ಸ್ವಾರಸ್ಯ : ರಜಪೂತ ಅರಸರುಗಳು ತಮ್ಮ ಅಂತಃಮರದಲ್ಲಿಯೇ ನಕ್ಷತ್ರಲೋಕವನ್ನು ಸೃಷ್ಟಿಸಿರುವುದು . ಅವರ ರಸಿಕ ಜೀವನದ ದ್ಯೋತಕವಾಗಿರುವುದನ್ನು ಲೇಖಕರು ಸ್ವಾರಸ್ಯಕರವಾಗಿ ವರ್ಣಿಸಿದ್ದಾರೆ .

ಉ ) ಬಿಟ್ಟ ಜಾಗಗಳನ್ನು ಸೂಕ್ತ ಪದಗಳಿಂದ ತುಂಬಲ ,

I ಜಯಪುರ ಬಣ್ಣಗಾರರ…………………………

2 , ಚಿತ್ರಕೊರೆದು ಮಾಡಿದ……………………… ನೀರ ಕಾಲುವೆಗಳು ,

3 , ರಾಜರ ಅಂತಃಪುರದ ಕೆಲವು ಭಾಗಗಳಲ್ಲಿ……………………….. ಸುಂದರ ಮಂಟಪಗಳಿವೆ .

4. ಹಿಮ್ಮೇಳಕ್ಕೆ……………… ತಮಟೆಗಳಿದ್ದವು .

ಸರಿ ಉತ್ತರಗಳು
L , ತವರೂರು ,
2 , ಹಾಲುಗಲ್ಲಿನ
3 , ಚಂದ್ರಕಾಂತ ಶಿಲೆಯ
4 ,ಡೋಲು
5 , ಸತ್ಕಾರಕ್ಕೆ

ಊ) ಹೊಂದಿಸಿ ಬರೆಯಿರಿ


ಅ ಪಟ್ಟಿ                                      ಆ ಪಟ್ಟಿ                                                      ಸರಿ ಉತ್ತರಗಳು .
 
1 , ಅಂಬೇರ                               ಸುವರ್ಣ ದೀರ್ಘಸಂದಿ                                ಪೂರ್ವದ ರಾಜಧಾನಿ
2 , ಲಕ್ಷೇಪಲಕ್ಷ                           ತತ್ಸಮ                                                         ಗುಣಸಂಧಿ
3. ಬಣ್ಣಬಣ್ಣ                             ಪೂರ್ವದ ರಾಜಧಾನಿ                                  ದ್ವಿರುಕ್ತಿ
4 ಜಂತ್ರ ಮಂತ್ರ                          ದ್ವಿರುಕ್ತಿ                                                        ಖಗೋಳ ವೀಕ್ಷಣಾಲಯ
5. ಶೃಂಗಾರ                                ಖಗೋಳ ವೀಕ್ಷಣಾಲಯ                              ತತ್ಸಮ
ಮಂತ್ರವಾದಿ
ಗುಣಸಂಧಿ

ಭಾಷಾ ಚಟುವಟಿಕೆ

ಅ, ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿ ,

1 ಸಂಸ್ಕೃತ ಸಂಧಿ ಎಂದರೇನು ? ಅದರ ವಿಧಗಳಾವುವು ?
ಉತ್ತರ : ಸಂಸ್ಕೃತ ಪದಗಳೇ ಸೇರಿ ಸಂಧಿಯಾದರೆ ಅವುಗಳನ್ನು ಸಂಸ್ಕೃತಸಂಧಿ ಎಂದು ಕರೆಯಲಾಗುತ್ತದೆ . ಎರಡು ಸ್ವರಗಳ ನಡುವೆ ಸಂಧಿಯಾದರೆ ಅದು ಸ್ವರಸಂಧಿ , ಸ್ವರಕ್ಕೆ ವ್ಯಂಜನ ಆಥವಾ ವ್ಯಂಜನಕ್ಕೆ ವ್ಯಂಜನ ಸೇರಿ ಸಂಧಿಯಾದರೆ ಅದು ವ್ಯಂಜನಸಂಧಿ .

2 , ಸವರ್ಣದೀರ್ಘಸಂಧಿ ಎಂದರೇನು ?
ಉತ್ತರ : ಸವರ್ಣಸ್ವರಗಳು ಒಂದರ ಮುಂದೆ ಒಂದು ಸೇರಿ ಸಂಧಿಯಾದಾಗ ಅವೆರಡರ ಸ್ಥಾನದಲ್ಲಿ ಅದೇ ಜಾತಿಯ ದೀರ್ಘಸ್ವರ ಆದೇಶವಾಗಿ ಬಂದರೆ ಅದನ್ನು ಸವರ್ಣ ದೀರ್ಘಸಂಧಿ ಎಂದು ಕರೆಯುವರು .

3 , ಗುಣಸಂಧಿ ಎಂದರೇನು ? ಉದಾಹರಣೆ ಕೊಡಿ .
ಉತ್ತರ : ಆ ಆ ಕಾರಗಳಿಗೆ ಆ ಈ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ ‘ ಐ ‘ ಕಾರವೂ ಈ ಊ ಕಾರಗಳು ಪರವಾದರೆ ‘ ಓ ‘ ಕಾರವೂ ‘ ಇ ‘ ಕಾರ ಪರವಾದರ ‘ ಆರ್ ‘ ಕಾರವೂ ಆದೇಶವಾಗಿ ಬಂದರೆ ಅದು ಗುಣಸಂಧಿ ,

4 ಸಮಾಸ ಎಂದರೇನು ? ಅದರ ವಿಧಗಳಾವುವು ?
ಉತ್ತರ : ಎರಡು ಅಥವಾ ಅನೇಕ ಪದಗಳು ಅರ್ಥಕ್ಕನುಸಾರವಾಗಿ ಸೇರಿ , ಮಧ್ಯದಲ್ಲಿರುವ ವಿಭಕ್ತಿಪ್ರತ್ಯಯವನ್ನು ಲೋಪ ಮಾಡಿಕೊಂಡು ಒಂದು ಪದವಾಗುವುದಕ್ಕೆ ಸಮಾಸ ಎಂದು ಕರೆಯುವರು . ಇದರಲ್ಲಿ ತತ್ಪುರುಷ , ಕರ್ಮಧಾರಯ , ದ್ವಿಗು , ಅಂತಿ , ದ್ವಂದ್ವ , ಬಹುವ್ರಹಿ , ಕ್ರಿಯಾ , ಗಮಕ ಸಮಾಸ ಎಂಬ ವಿಧಗಳಿವೆ .

5 ಅಂಶಿ ಸಮಾಸ ಎಂದರೇನು ? ಎರಡು ಉದಾಹರಣೆಗಳನ್ನು ಬರೆಯಿರಿ .
ಉತ್ತರ : ಪೂರ್ವೋತ್ತರ ಪದಗಳು ಆಂಶಾಂತಿ ಭಾವ ಸಂಬಂಧದಿಂದ ಸೇರಿ ಸಮಾಸವಾಗುವಾಗ ಪೂರ್ವಪದದ ಅರ್ಥವು ಪ್ರಧಾನವಾಗಿದ್ದರೆ ಅದು ಅಂಶಿಸಮಾಸ
ಉದಾ :
ತಲೆಯ+ಹಿಂದು=ಹಿಂದಲೆ
ಮನೆಯ+ನಡು =ನಡುಮನೆ
ಹುಬ್ಬಿನ+ಕೊನೆ =ಕೊನೆಹುಬ್ಬು
ನಾಲಿಗೆಯ+ತುದಿ=ತುದಿನಾಲಗೆ

6. ದ್ವಂದ್ವ ಸಮಾಸ ಎಂದರೇನು ? ಎರಡು ಉದಾಹರಣೆಗಳನ್ನು ಬರೆಯಿರಿ .
ಉತ್ತರ : ಎರಡು ಅಥವಾ ಅನೇಕ ನಾಮಪದಗಳು ಸಹಯೋಗ ತೋರುವಂತೆ ಸೇರಿ ಎಲ್ಲಾ ಪದಗಳ ಅರ್ಥವೂ ಪ್ರಧಾನವಾಗಿ ಇರುವ ಸಮಾಸವೇ ದ್ವಂದ್ವ ಸಮಾಸ ,
ಉದಾ :
ರಾಮನೂ + ಲಕ್ಷ್ಮಣನೂ = ರಾಮಲಕ್ಷ್ಮಣರು
ಕೆರೆಯೂ + ಕಟ್ಟೆಯೂ + ಬಾವಿಯ = ಕೆಲೆಕಟ್ಟೆಬಾವಿಗಳು ,
ಆನೆಯೂ +ಕುದುರೆಯೂ + ಒಂಟೆಯ = ಆನೆಕುದುರೇಒಂಟೆಗಳು .
ಗಿಡವೂ+ಮರವೂ + ಬಳ್ಳಿಯೂ = ಗಿಡಮರಬಳ್ಳಿಗಳು .
ಹೊಲವೂ + ಮನೆಯ = ಹೊಲಮನಗಳು.
ಮಠವೂ +  ಮನೆಯೂ =ಮನೆಮಠಗಳು.
ಗುಡುಗು+ಸಿಡಿಲು+ ಮಿಂಚೂ = ಗುಡುಗುಸಿಡಿಲುಮಿಂಚುಗಳು ,
ಸೂರ್ಯನೂ+ ಚಂದ್ರನೂ+ ನಕ್ಷತ್ರವೂ = ಸೂರ್ಯಚಂದ್ರನಕ್ಷತ್ರಗಳು ,
ಕುರಿಯೂ +ತುರಗವೂ+ ರಥವೂ = . ಕರಿತುರಗರಥಗಳು .
ಗಿರಿಯೂ + ದುರ್ಗ ವೂ + ವನವೂ = ಗಿರಿವನದುರ್ಗಗಳು .

ಆ , ಕೊಟ್ಟಿರುವ ಪದಗಳಲ್ಲಿ ಅನುಸ್ವಾರ – ವಿಸರ್ಗ ಸಹಿತ ಅಕ್ಷರಗಳನ್ನು ಗುರುತಿಸಿ ಬರೆಯಿರಿ ,
ಸ್ವತಃ   ( ತಃ )                       ಸುಂದರ ( ಸುಂ ) . ರಂಗುರಂಗಿನ ( ರಂ , ರಂ )
ಕೆಂಪು( ಕೆಂ )                       ದುಃಖ ( ದುಃ ) ಹಿಂದೊಮ್ಮೆ ( ಹಿಂ)
ಗಂಡಸರು (ಗಂ)                  ಆಂತಃಕರಣ( ಅಂ,ತಃ , ) ಪಂಚೆ ( ಪಂ )
ಅಂಗಿ ( ಅಂ)                       ಮುಂಡಾಸು ( ಮುಂ ) ಆಂಬೇರ ( ಅಂ )
ಸಭಾಂಗಣ ( ಭಾಂ )            ಅಂತಃಪುರ ( ಅಂ , ತಃ )ಪುನಃ  (ನಃ)
ಜಂತ್ರಮಂತ್ರ( ಜಂ,ಮಂ)     ಅಂತಸ್ತು ಅಂ )

ಇ , ಕೊಟ್ಟಿರುವ ಪದಗಳಲ್ಲಿ ಅನುನಾಸಿಕ ಅಕ್ಷರಗಳನ್ನು ಗುರುತಿಸಿ ಬರೆಯಿರಿ

ನಗರ ( ನ )    -     ಮಧ್ಯ (ಮ)      -     ಪರಿಣಾಮ(ಣಾ)  -  ಬಣ್ಣ(ಣ್ಣ)
ನಿತ್ಯ ( ನಿ )     -      ಜನ ( ನ )       -       ಮನೆ (ಮ,ನೆ)   -    ಕಣಿವೆ (ಣಿ)
ಮಂದಿರ (ಮ)  -   ವಿಜ್ಞಾನ ( ಜ್ಞಾ)

ಈ, ಕೊಟ್ಟಿರುವ ವಿಷಯಗಳನ್ನು ಕುರಿತು ಒಂದು ಪುಟಕ್ಕೆ ಮೀರದಂತೆ ಪ್ರಬಂಧ ಬರೆಯಿರಿ .
 
 1 , ಜನಸಂಖ್ಯೆ
   ಪೀಠಿಕೆ: ಇಂದು ವಿಶ್ವದಲ್ಲಿ ತಲೆದೋರಿರುವ ಅನೇಕ ಜಟಿಲ ಸಮಸ್ಯೆಗಳಲ್ಲಿ ಮಿತಿಮೀರಿ ಬೆಳೆಯುತ್ತಿರುವ ಜನಸಂಖ್ಯೆಯೂ ಒಂದು ಪ್ರಮುಖ ಸಮಸ್ಯೆಯಾಗಿದೆ . ಒಂದು ದೇಶದ ಮಿತಿಮೀರಿದ ಜನಸಂಖ್ಯಾ ಬೆಳೆವಣಿಗೆಯನ್ನು ಜನಸಂಖ್ಯಾ ಸ್ಫೋಟ ಎನ್ನುವರು .
ಜನಸಂಖ್ಯೆಯು ಜನರ ಬದುಕಿನ ಮೇಲೆ ದುಷ್ಪರಿಣಾಮವನ್ನು ಬೀರುತ್ತದೆ . ದೇಶದ ಪ್ರಗತಿಗೆ ಮಾರಕವಾಗುತ್ತದೆ . ಭಾರತ ದೇಶದಲ್ಲಂತೂ ಜನಸಂಖ್ಯೆ ಮಿತಿಮೀರಿ ಬೆಳೆದು ದೇಶದ ಅಭಿವೃದ್ಧಿಯು ಕುಂಠಿತವಾಗಿದೆ .
ವಿಷಯ ನಿರೂಪಣೆ : – ಜನಸಂಖ್ಯಾ ಬೆಳವಣಿಗೆಗೆ ಕಾರಣವೇನೆಂದರೆ ಹವಾಮಾನ , ಭೌಗೋಳಿಕ ಪರಿಸರ , ಅಜ್ಞಾನ , ಬಡತನ ಅನಕ್ಷರತೆ ವೈದ್ಯಕೀಯ ಕ್ಷೇತ್ರದ ಪ್ರಗತಿಯಿಂದ ಜನನದಲ್ಲಿ ಏರಿಕೆ – ಮರಣದಲ್ಲಿ ಇಳಿಕೆ ಅವಿಭಕ್ತ ಕುಟುಂಬ ಪದ್ಧತಿ , ಬಾಲ್ಯವಿವಾಹ , ವಲಸೆ , ಗಂಡು ಮಗುವಿನ ವ್ಯಾಮೋಹ , ಮೂಢನಂಬಿಕೆ ,
ಕುಟುಂಬ ಯೋಜನೆಯ ವಿಫಲತೆ ಇತ್ಯಾದಿ . ಮಿತಿಮೀರಿದ ಜನಸಂಖ್ಯಾ ಬೆಳೆವಣಿಗೆಯಿಂದ ದೇಶದಲ್ಲಿ ಅನಾರೋಗ್ಯ ಸಮಸ್ಯೆ , ನಿರುದ್ಯೋಗ ಸಮಸ್ಯೆ , ಆಹಾರ ಸಮಸ್ಯೆ , ವಸತಿ ಸಮಸ್ಯೆ , ಶೈಕ್ಷಣಿಕ ಸಮಸ್ಯೆ ಉಂಟಾಗುತ್ತದೆ , ಈ ಸಮಸ್ಯೆಯನ್ನು ನಾವು ತಡೆಗಟ್ಟಬೇಕು ಇಲ್ಲದೇ ಹೋದರೆ ದೇಶದ ಪ್ರಗತಿಗೆ ಮಾರಕವಾಗಿ ಪರಿಣಮಿಸುತ್ತದೆ .
ಮನುಷ್ಯನಲ್ಲಿ ಚಿಕ್ಕ ಸಂಸಾರ ಚೊಕ್ಕ ಸಂಸಾರ ಅನ್ನೋ ಕಲ್ಪನೆ ಬರಬೇಕಿದೆ ಮಾನವ ಸಂಪತ್ತು ದೇಶದ ಆಸ್ತಿ ಆದರೆ ಇದೆ ಮಾನವ ಸಂಪತ್ತು ರಾಷ್ಟ್ರದ ಅಭಿವೃದ್ಧಿಗೆ ಅಡ್ಡಿಪಡಿಸುತ್ತಿದೆ .
ಉಪಸಂಹಾರ : – ಭಾರತ ದೇಶದ ಬೆಳವಣಿಗೆಗೆ ಮಾರಕವಾದ ಈ ಜನಸಂಖ್ಯೆಯು ದಿನದಿಂದ ದಿನಕ್ಕೆ ಬೆಳೆಯುವ ಪರಿ ನೋಡಿದರೆ ಇದು ಎಲ್ಲಿಗೆ ಹೋಗಿ ನಿಲ್ಲುತ್ತದೆ . ಎಂಬುದೆ ಯಕ್ಷ ಪ್ರಶ್ನೆ ,
ಇರುವ ಮಾನವ ಸಂಪನ್ಮೂಲಕ್ಕೆ ಕೆಲಸ ಕೊಟ್ಟರೆ ಅಷ್ಟು ಸಮಸ್ಯೆಯಾಗುವುದಿಲ್ಲ . ಪ್ರತಿಯೊಬ್ಬ ನಾಗರಿಕನು ಶಿಕ್ಷಣವಂತನಾದರೆ ಈ ಜನಸಂಖ್ಯಾ ಸಮಸ್ಯೆಗೆ ಒಂದು ಸೂಕ್ತ ಪರಿಹಾರ ದೊರಕಬಹುದು ಎಂಬುದೆ ನನ್ನ ಅಭಿಪ್ರಾಯ .
 
2. ನಿರುದ್ಯೋಗ
ಪೀಠಿಕೆ:– ನಿರುದ್ಯೋಗ ಆಧುನಿಕ ಸಮಾಜಕ್ಕಂಟಿದ ಶಾಪವಾಗಿದೆ . ನಿರುದ್ಯೋಗದಿಂದ ಹಸಿವು , ಬಡತನ ದರಿದ್ಯ ಅನಾಚಾರಗಳು , ಅಪರಾಧ , ಶೋಷಣೆ ಸುಲಿಗೆಗಳಂತಹ ಕೃತ್ಯಗಳು ಜನ್ಮತಾಳುತ್ತವೆ .
ಮನಷ್ಯನು ತನ್ನ ಜವಬ್ದಾರಿಗಳನ್ನು ನಿಭಾಯಿಸಲಾಗದೆ ಅವಮಾನಿತನಾಗುತ್ತಾನೆ , ಅಸಹಾಯಕ ಸ್ಥಿತಿ ಅವನನ್ನು ಕಾಡುತ್ತದೆ . ದಿನದಿಂದ ದಿನಕ್ಕೆ ಅವನ ಬದುಕು ನರಕವಾಗಿ ಹೋಗುತ್ತದೆ .
ಈ ಸಮಸ್ಯೆ ಇಂದು ನಿನ್ನೆಯದಲ್ಲ . ತಲತಲಾಂತರದಿಂದ ಸಮಾಜಕ್ಕೆ ಕಂಟಕವಾಗಿದೆ . ಮುಂದಿನ ಎಲ್ಲಾ ಸಮಾಜಗಳು , ಅಭಿವೃದ್ಧಿ ಹೊದುತ್ತಿರುವ ರಾಷ್ಟಗಳು ಎದುರಿಸುತ್ತಿರುವ ಭೀಕರ ಸಮಸ್ಯೆಯಾಗಿದೆ .
ವಿಷಯ ನಿರೂಪಣೆ : – ಮನುಷ್ಯನಿಗೆ ಕೆಲಸ ಮಾಡಲು ಶಕ್ತಿ ಸಾಮರ್ಥ್ಯಗಳಿದ್ದು ಮತ್ತು ಇಚ್ಚಾ ಶಕ್ತಿಗಳಿದ್ದು , ಕೆಲಸ ಮಾಡಲು ಯಾವುದೇ ಅವಕಾಶ ಸಿಗದಿರುವ ಸ್ಥಿತಿಗೆ ನಾವು ನಿರುದ್ಯೋಗ ಎನ್ನಬಹುದು .
ದಿನವಿಡೀ ದುಡಿದರೂ ಹೊಟ್ಟೆ ಬಟ್ಟೆಗೆ ಸಾಲದೆ ರಸ್ತೆ , ಮೋರಿ , ಪೈಪುಗಳ ಸಂದುಗೊಂದುಗಳಲ್ಲಿ , ಕೊಳೆಗೇರಿಗಳಲ್ಲಿ ಜೀವನ ತಳ್ಳುವ ಜನರು ಒಂದು ಕಡೆ , ಪದವಿ ಡಬ್ಬಲ್ ಬಾಗ್ರಿಗಳನ್ನ ಪಡೆದು , ಕಸಲಕ್ಕಾಗಿ ಬೀದಿ  ಅಲೆಯುವ ಯುವ ಶಕ್ತಿ ಒಂದು ಕಡೆ , ಇವರಿಗೆ ಕೆಲಸ ಮಾಡುವ ಸಾಮರ್ಥ್ಯ , ಇಚ್ಚೆ , ನಿರಂತರ ಪ್ರಯತ್ನಗಳಿದ್ದರು ಸಹ ಕೆಲಸ ಸಿಗುವುದಿಲ್ಲ ,
ದೇಶದಲ್ಲಿ ಶಕ್ತಿ ಸಾಮರ್ಥ್ಯ ಮತ್ತು ಅರ್ಹತೆಗೆ ತಕ್ಕಂತೆ ಬೇಗನೆ ಕೆಲಸ ಸಿಗುವ ವಾತಾವರಣ ನಿರ್ಮಾವಾಗಬೇಕು , ಯುವ ಜನತೆಗೆ ವಿಧ್ಯಾಭ್ಯಾಸ ಮುಗಿದ ತಕ್ಷಣವೇ ಕೆಲಸ ಸಿಗುತ್ತದೆ ಎಂಬ ಭರವಸೆ ಮೂಡಿಸಬೇಕು . ಹೆಚ್ಚು ಹೆಚ್ಚು ಉದ್ಯೋಗಾವಕಾಶಗಳನ್ನು ಸೃಷ್ಟಿ ಮಾಡಬೇಕು ಕೆಲಸಕ್ಕೆ ಸರಿಸಮಾನವಾದ ವೇತನ ಸಿಗುವಂತಾಗಬೇಕು .
ಇಂತಹ ಸಮಾಜವನ್ನು ನಿರುದ್ಯೋಗ ರಹಿತ ಸಮಾಜವೆನ್ನಬಹುದು . ನಿರುದ್ಯೋಗಿಯ ಮನಸು ದೆವ್ವಗಳು ವಾಸಿಸುವ ಸ್ಮಶಾನವಾಗಿರುತ್ತದೆ . ಇಂತಹ ಮನಸ್ಥಿತಿಯಿಂದ ಸಮಾಜ ಬಾಹಿರ ಚಟುವಟಿಕೆಯು ಜರುಗುವುದೇ ಹೆಚ್ಚು ದೇಶದ್ರೋಹಿ ಕೆಲಸ , ಭಯೋತ್ಪದನಾ ಕೃತ್ಯಗಳು , ಕೊಲೆ ಸುಲಿಗೆ ಅಪರಾಧಗಳಂತಹ ಅಕ್ರಮ ಚಟುವಟಿಕೆಗಳಿಂದ ಸಮಾಜ ತಲೆತಗ್ಗಿಸಬೇಕಾಗುತ್ತದೆ .
ಇದು ವ್ಯಕ್ತಿ ಕುಟುಂಬ ಮತ್ತು ಸಮಾಜದ ಮೇಲೆ ದುಷ್ಪರಿಣಾಮ ಬೀರುತ್ತದೆ . ನಿರುದ್ಯೋಗದಿಂದ ಮನುಷ್ಯನು ಅವಮಾನ , ನೋವು , ನಿಂದನೆ , ಆತ್ಮನಿಂದನೆ ಮಾನಸಿಕ ಹಿಂಸೆಗಳನ್ನು ಅನುಭವಿಸುತ್ತಾನೆ .
ದೇಶದ ಅಭಿವೃದ್ಧಿಗೆ ಮಾರಕವಾಗಿ ಪರಿಣಮಿಸುತ್ತದೆ . ಈ ನಿರುದ್ಯೋಗಕ್ಕೆ ಕಾರಣಗಳನ್ನು ಗುರುತಿಸಿ ಸೂಕ್ತ ಪರಿಹಾರಗಳನ್ನು ಕಂಡುಕೊಳ್ಳಬೇಕು ,
ಬೀದಿ ಅಲೆಯುವ ಯುವ ಶಕ್ತಿ ಒಂದು ಕಡೆ , ಇವರಿಗೆ ಕೆಲಸ ಮಾಡುವ ಸಾಮರ್ಥ್ಯ , ಇಚ್ಛೆ , ನಿರಂತರ ಪ್ರಯತ್ನಗಳಿದ್ದರು ಸಹ ಕೆಲಸ ಸಿಗುವುದಿಲ್ಲ . ದೇಶದಲ್ಲಿ ಶಕ್ತಿ ಸಾಮರ್ಥ್ಯ ಮತ್ತು ಅರ್ಹತೆಗೆ ತಕ್ಕಂತೆ ಬೇಗನೆ ಕೆಲಸ ಸಿಗುವ ವಾತಾವರಣ ನಿರ್ಮಾವಾಗಬೇಕು ,
ಯುವ ಜನತೆಗೆ ವಿಧ್ಯಾಭ್ಯಾಸ ಮುಗಿದ ತಕ್ಷಣವೇ ಕೆಲಸ ಸಿಗುತ್ತದೆ ಎಂಬ ಭರವಸೆ ಮೂಡಿಸಬೇಕು . ಹೆಚ್ಚು ಹೆಚ್ಚು ಉದ್ಯೋಗಾವಕಾಶಗಳನ್ನು ಸೃಷ್ಟಿ ಮಾಡಬೇಕು ಕೆಲಸಕ್ಕೆ ಸರಿಸಮಾನವಾದ ವೇತನ ಸಿಗುವಂತಾಗಬೇಕು .
ಇಂತಹ ಸಮಾಜವನ್ನು ನಿರುದ್ಯೋಗ ರಹಿತ ಸಮಾಜವೆನ್ನಬಹುದು . ನಿರುದ್ಯೋಗಿಯ ಮನಸು ದೆವ್ವಗಳು ವಾಸಿಸುವ ಸ್ಮಶಾನವಾಗಿರುತ್ತದೆ .
ಇಂತಹ ಮನಸ್ಥಿತಿಯಿಂದ ಸಮಾಜ ಬಾಹಿರ ಚಟುವಟಿಕೆಳು ಜರುಗುವುದೇ ಹೆಚ್ಚು ದೇಶದ್ರೋಹಿ ಕೆಲಸ , ಭಯೋತ್ಪದನಾ ಕೃತ್ಯಗಳು , ಕೊಲೆ ಸುಲಿಗೆ ಅಪರಾಧಗಳಂತಹ ಅಕ್ರಮ ಚಟುವಟಿಕೆಗಳಿಂದ ಸಮಾಜ ತಲೆತಗ್ಗಿಸಬೇಕಾಗುತ್ತದೆ .
ಇದು ವ್ಯಕ್ತಿ ಕುಟುಂಬ ಮತ್ತು ಸಮಾಜದ ಮೇಲೆ ದುಷ್ಪರಿಣಾಮ ಬೀರುತ್ತದೆ . ನಿರುದ್ಯೋಗದಿಂದ ಮನುಷ್ಯನು ಅವಮಾನನೋವು , ನಿಂದನೆ , ಆತ್ಮನಿಂದನೆ ಮಾನಸಿಕ ಹಿಂಸೆಗಳನ್ನು ಅನುಭವಿಸುತ್ತಾನೆ . ದೇಶದ ಅಭಿವೃದ್ಧಿಗೆ ಮಾರಕವಾಗಿ ಪರಿಣಮಿಸುತ್ತದೆ ,
ಈ ನಿರುದ್ಯೋಗಕ್ಕೆ ಕಾರಣಗಳನ್ನು ಗುರುತಿಸಿ ಸೂಕ್ತ ಪರಿಹಾರಗಳನ್ನು ಕಂಡುಕೊಳ್ಳಬೇಕು ,
ಉಪಸಂಹಾರ : – ಮನುಷ್ಯನು ಯಾವುದೇ ಕೆಲಸ ಮಾಡಿದರು ಅವಮಾನವಿಲ್ಲ.ತನ್ನ ಸಾಮರ್ಥ್ಯ ಅರ್ಹತೆಗೆ ತಕ್ಕ ಉದ್ಯೋಗ ಸಿಗಬೇಕು ಎಂದು ಕಾಯುತ್ತಾ ಕುಳಿತುಕೊಳ್ಳಬಾರದು ,
ಸಿಕ್ಕ ಕೆಲಸದಲ್ಲೇ ತೃಪ್ತಿ ಪಡಬೇಕು.ನಿರಂತರ ಹೆಚ್ಚುತ್ತಿರುವ ಜನಸಂಖ್ಯೆ , ದೋಷಪೂರಿತ ಶಿಕ್ಷಣ ವ್ಯವಸ್ಥೆ , ತಾಂತ್ರಿಕ ಕೊರತೆ , ಆವಶ್ಯಕತೆಗಿಂತ ಕಡಿಮೆ ಉದ್ಯೋಗ ಸೃಷ್ಟಿ ಮುಂತಾದ ಕಾರಣಗಳು ನಿರುದ್ಯೋಗ ಸಮಸ್ಯೆಗೆ ಕಾರಣವಾಗುತ್ತವೆ


You Might Like

Post a Comment

0 Comments