Recent Posts

ಪ್ರಾಮಾಣಿಕತೆ - ೫ ನೇ ತರಗತಿ ಸಿರಿ ಕನ್ನಡ ಪುಸ್ತಕದ ಪ್ರಶ್ನೋತ್ತರಗಳು


 ಪ್ರಾಮಾಣಿಕತೆ

ಅಭ್ಯಾಸ
 
ಅ ) ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ
 
1. ರಾಜಮ್ಮ ಎಲ್ಲಿಗೆ ಹೋಗಬೇಕಿತ್ತು ?
 
2. ರಾಜಮ್ಮ ಬಸ್ಸಿನಲ್ಲಿ ಕುಳಿತು ಏನೆಂದು ಯೋಚಿಸ ತೊಡಗಿದಳು ?
 
 3. ರಾಜಮ್ಮನ ಪ್ರಾಮಾಣಿಕತೆಗೆ ಸಹಪ್ರಯಾಣಿಕಳು ಯಾವ ಸಲಹೆ ಕೊಟ್ಟಳು ?
 
4. ‘ ಅಂಥವರಿಗೆ ಇನ್ನಾದರೂ ಬುದ್ದಿ ಬರಲಿ ‘ ಎಂದು ರಾಜಮ್ಮ ಏಕೆ ಪ್ರಾರ್ಥಿಸಿದಳು ?
 
ಮುಖ್ಯಾಂಶಗಳು
 
ಪ್ರಾಮಾಣಿಕತೆ ಎನ್ನುವ ಸದ್ಗುಣದ ಬಗ್ಗೆ ಇರುವ ಈ ಪಾಠ ನಿಜಕ್ಕೂ ಮಕ್ಕಳಿಗೆ ಆದರ್ಶವಾಗಿದೆ . ಈ ಸದ್ಗುಣವನ್ನು ಚಿಕ್ಕಂದಿನಿಂದಲೇ ಕಲಿಯಬೇಕು ಹಾಗೂ ಅಳವಡಿಸಿಕೊಳ್ಳಬೇಕು .
ರಾಜಮ್ಮ ಎಂಬ ಬಡ ಮಹಿಳೆಯೊಬ್ಬಳು ದೂರದ ಹೊಳೇಪುರಕ್ಕೆ ಹೋಗಬೇಕಿತ್ತು . ಆದರೆ ಅವಳಲ್ಲಿ ಅಷ್ಟು ದೂರ ಪಯಾಣ ಮಾಡಲು ಬೇಕಾದ ಟಿಕೆಟ್ ಹಣವಿರಲಿಲ್ಲ . ಆದ್ದರಿಂದ ಅವಳು ತನ್ನ ಹತ್ತಿರ ಇರುವ ಹಣಕ್ಕೆ ಎಷ್ಟು ದೂರ ಎಂದರೆ ಅರಸೀಪುರದವರೆಗೆ ಮಾತ್ರ ಟಿಕೆಟ್ ಕೊಂಡುಕೊಂಡಳು . ಪಕ್ಕದಲ್ಲಿ ಕುಳಿತಿದ್ದವರು ನೀವು ನಿದ್ದೆ ಮಾಡಿದಂತೆ ನಟಿಸಿ , ಹೊಳೇಪುರದವರೆಗೂ ಪಯಾಣ ಮಾಡಿ ನಂತರ ಸುಮ್ಮನೆ ಇಳಿದು ಹೋಗಿಬಿಡಿ ಎಂದು ಸಲಹೆ ಕೊಟ್ಟಳು . ಆದರೆ ರಾಜಮ್ಮ ಆ ರೀತಿ ಮಾಡದೆ ಅರಸೀಪುರದಲ್ಲೇ ಇಳಿದು , ಉಳಿದ ಹಾದಿಯನ್ನು ನಡೆದುಕೊಂಡು ಹೋಗಲು ನಿರ್ಧರಿಸಿದಳು . ರಾಜಮ್ಮನ ಮನಸ್ಸನ್ನು ಅರ್ಥಮಾಡಿಕೊಳ್ಳುವ ಶಕ್ತಿ ಆ ಸಹ ಪ್ರಯಾಣಿಕಳಿಗೆ ಇರಲಿಲ್ಲ . ರಾಜಮ್ಮ ಸಹ ಪ್ರಯಾಣಿಕಳಂತಹ ಜನರಿಗೆ ಇನ್ನು ಮುಂದಾದರೂ ಪ್ರಾಮಾಣಿಕತೆಯ ಬುದ್ದಿ ಬರಲಿ ಎಂದು ಮನಸಾರೆ ಪ್ರಾರ್ಥಿಸಿದಳು . ಯಾರು ಏನು ತಿಳಿದುಕೊಳ್ಳುತ್ತಾರೋ, ಏನೆಂದುಕೊಳ್ಳುತ್ತಾರೋ ಎಂಬ ಭಾವನೆಯನ್ನು ಇಟ್ಟುಕೊಳ್ಳದೆ ಪ್ರತಿಯೊಬ್ಬರು ಪ್ರಾಮಾಣಿಕರಾಗಿರಬೇಕು ಎಂಬುದೇ ಈ ಗದ್ಯದ ಆಶಯ.

You Might Like

Post a Comment

0 Comments